ನೀತಿಮತಿ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ನೀತಿಮತಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ 60ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ನಿಶಾಧಮ್ ಎಂದು ಹೆಸರಿಸಿದ್ದಾರೆ.[೧][೨].
ರಾಗ ಸ್ವರೂಪ ಮತ್ತು ಲಕ್ಷಣ
[ಬದಲಾಯಿಸಿ]ಇದು ಹತ್ತನೆಯ ದಿಸಿ ಚಕ್ರದ ಆರನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಶಾ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧು ನು [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೨ ಮ೨ ಪ ದ೩ ನಿ೩ ಸ
ಅವರೋಹಣ ಸ ನಿ೩ ದ೩ ಪ ಮ೨ ಗ೨ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಷಟ್‍ಶೃತಿ ಧೈವತಮತ್ತು ಕಾಕಲಿ ನಿಷಾಧ.ಇದು ೨೪ನೆಯ ಮೇಳಕರ್ತ ರಾಗವಾದ ವರುಣಪ್ರಿಯಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
[ಬದಲಾಯಿಸಿ]ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.ಇವುಗಳಲ್ಲಿ ಹಂಸನಾದ ಹೆಚ್ಚು ಬಳಕೆಯಲ್ಲಿವೆ.
ಜನಪ್ರಿಯ ರಚನೆಗಳು
[ಬದಲಾಯಿಸಿ]ನೀತಿಮತಿ ರಾಗದಲ್ಲಿ ಹೆಚ್ಚು ಪ್ರಚಲಿತವಿರುವ ಕೆಲವು ಕೃತಿಗಳು
- ಅರವಿಂದ ಲೋಚನೆ- ಅಂಬುಜಮ್ ಕೃಷ್ಣ
- ವಾಚಾಮಗೋಚರ- ತ್ಯಾಗರಾಜ
- ಮೋಹನಕಾರ ಮುತ್ತು- ಕೋಟೀಶ್ವರ ಅಯ್ಯರ್
- ಸ್ಮರಣಮ್- ಎಂ. ಬಾಲಮುರಳಿ ಕೃಷ್ಣ
- ಶ್ರೀ ತುಳಸಿ ನೀತಿಮತಿ- ಕಲ್ಯಾಣಿ ವರದರಾಜನ್
ಸಂಬಂಧಿತ ರಾಗಗಳು
[ಬದಲಾಯಿಸಿ]ಗ್ರಹಭೇದಮ್ ಸೂತ್ರವನ್ನು ನೀತಿಮತಿ ರಾಗಕ್ಕೆ ಅನ್ವಯಿಸಿದಾಗ ಗಾಂಗೇಯಭೂಷಿಣಿ ಎಂಬ ಒಂದು ರಾಗ ದೊರೆಯುತ್ತದೆ.