ತವಿಲ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

Compositions

ವರ್ಣಂಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಖಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ತವಿಲ್ ವಾದನ

ತವಿಲ್ (ಕನ್ನಡದಲ್ಲಿ ಡೋಲು)ಇದು ನಾಗಸ್ವರ ಮೇಳದಲ್ಲಿ ಉಪಯೋಗಿಸುವ ತಾಳವಾದ್ಯ.ಇದು ಒಂದು ಜಾನಪದ ವಾದ್ಯವಾದರೂ ಈಗ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಗಳಲ್ಲಿ ನುಡಿಸಲ್ಪಡುತ್ತದೆ.

ರಚನೆ[ಬದಲಾಯಿಸಿ]

ಇದು ಆಕಾರದಲ್ಲಿ ಮೃದಂಗವನ್ನು ಹೋಲುತ್ತದೆಯಾದರೂ ಅದಕ್ಕಿಂತ ದೊಡ್ಡದಿರುತ್ತದೆ. ಇದನ್ನು ಹಲಸು ಮರದ ಒಂದೇ ತುಂಡನ್ನು ಕೊರೆದು ಮಾಡಿರುತ್ತಾರೆ.ಎರಡೂ ಕಡೆಗಳಲ್ಲಿ ಹಾಕಿರುವ ವೃತ್ತಾಕಾರದ ಹದಮಾಡಿದ ಚರ್ಮಗಳನ್ನು ಚರ್ಮದ ಪಟ್ಟಿಗಳಿಂದ ಎಳೆದು ಕಟ್ಟಿರುತ್ತಾರೆ.ಮಧ್ಯಭಾಗದಲ್ಲಿ ವಾದ್ಯದ ಸುತ್ತಲೂ ಮತ್ತೊಂದು ಚರ್ಮದ ಪಟ್ಟಿಯನ್ನು ಕಟ್ಟಿರುತ್ತಾರೆ. ಇದನ್ನು ಬಿಗಿ ಅಥವಾ ಸಡಿಲ ಮಾಡುವುದರಿಂದ ಬೇಕಾದ ಶ್ರುತಿಯನ್ನು ಪಡೆಯಬಹುದಾಗಿದೆ.

ನುಡಿಸುವಿಕೆ[ಬದಲಾಯಿಸಿ]

ಇದರ ಎಡ ಭಾಗವನ್ನು ಸಣ್ಣ ಕೋಲಿನಿಂದಲೂ ಬಲ ಭಾಗವನ್ನು ಬೆರಳುಗಳಿಂದಲೂ ನುಡಿಸುತ್ತಾರೆ.ಬೆರಳುಗಳಿಗೆ ಟೊಪ್ಪಿಗೆಗಳನ್ನು ಧರಿಸುತ್ತಾರೆ.ಹೆಚ್ಚಾಗಿ ಕುಳಿತುಕೊಂಡು ನುಡಿಸುವುದಾದರೂ ಉತ್ಸವ ಮುಂತಾದ ಸಂದರ್ಭಗಳಲ್ಲಿ ಕೊರಳಿಗೆ ಬಟ್ಟೆಯಿಂದ ಇಳಿಬಿಟ್ಟು ನುಡಿಸುತ್ತಾರೆ.

ಪ್ರಸಿದ್ಧ ಕಲಾಕಾರರು[ಬದಲಾಯಿಸಿ]

೧.ಎ.ಕೆ.ಪಳನಿವೇಲ್

"https://kn.wikipedia.org/w/index.php?title=ತವಿಲ್&oldid=1047313" ಇಂದ ಪಡೆಯಲ್ಪಟ್ಟಿದೆ