ನಾಗಸ್ವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಾದಸ್ವರ ಇಂದ ಪುನರ್ನಿರ್ದೇಶಿತ)
ನಾದಸ್ವರ
ಕರ್ನಾಟಕ ಸಂಗೀತ
ಪರಿಕಲ್ಪನೆಗಳು

ಶ್ರುತಿಸ್ವರರಾಗತಾಳ ಮೇಳಕರ್ತಅಸಂಪೂರ್ಣ ಮೇಳಕರ್ತ

ಸಂಗೀತ ರಚನೆಗಳು

ವರ್ಣಮ್ಕೃತಿಗೀತಂಸ್ವರಜತಿರಾಗಂ ತಾನಂ ಪಲ್ಲವಿತಿಲ್ಲಾನ

ಸಂಗೀತೋಪಕರಣಗಳು

ಮಾಧುರ್ಯ: ಸರಸ್ವತಿ ವೀಣೆವೇಣು ಪಿಟೀಲುಚಿತ್ರ ವೀಣನಾದಸ್ವರಮ್ಯಾಂಡೊಲಿನ್

ತಾಳ: ಮೃದಂಗಘಟಂಮೋರ್ಸಿಂಗ್ಕಂಜೀರತವಿಲ್

ಝೇಂಕಾರ: ತಂಬೂರಶ್ರುತಿ ಪಟ್ಟಿಗೆ

ಸಂಗೀತಕಾರರು

ಟೆಂಪ್ಲೇಟು:ಕರ್ನಾಟಕ ಸಂಗೀತ - ಪ್ರಸಿದ್ಧ ಸಂಗೀತಗಾರರು

ನಾಗಸ್ವರ ವಾದ್ಯವೃಂದ

ನಾಗಸ್ವರ ಇದು ದಕ್ಷಿಣ ಭಾರತದ ಒಂದು ಪ್ರಮುಖ ಮಂಗಳ ವಾದ್ಯ. ಈ ವಾದ್ಯವು ನುಡಿಸಲು ಬಹಳ ಕಷ್ಟಕರವಾದುದು.ಮದುವೆ,ಉತ್ಸವಗಳು,ಮೆರವಣಿಗೆಗಳು ಮುಂತಾದ ಮಂಗಳಕರವಾದ ಸಂದರ್ಭಗಳಲ್ಲಿ ಅತ್ಯವಶ್ಯಕವಾದುದು.ಇದು ಪ್ರಪಂಚದ ಅತ್ಯಂತ ಗಟ್ಟಿಯಾದ ಧ್ವನಿ ಉಳ್ಳ ಅಲೋಹ ವಾದ್ಯವಾಗಿದೆ.

ರಚನೆ[ಬದಲಾಯಿಸಿ]

ಇದು ಮೇಲ್ಬಾಗದಲ್ಲಿ ಸಣ್ಣ ಆಕಾರವಿದ್ದು ಕೆಳಭಾಗಕ್ಕೆ ದೊಡ್ಡದಾಗಿರುವ ಮರದ ಕೊಳವೆಯಾಗಿದೆ.ಇದರ ಉದ್ದವು ಸುಮಾರು ಎರಡರಿಂದ ಎರಡೂವರೆ ಅಡಿಗಳಿರುತ್ತದೆ.ವಾದ್ಯದ ಮೇಲ್ಬಾಗದಲ್ಲಿ ಲೋಹದ ಮುಖವಿರುತ್ತದೆ.ಇದಕ್ಕೆ ಪೀಪಿಯನ್ನು ಸಿಕ್ಕಿಸಿರುತ್ತಾರೆ.ಕೆಳಭಾಗದಲ್ಲಿ ಗಂಟೆಯ ಆಕಾರದ ಲೋಹದ ಭಾಗವನ್ನು ಸೇರಿಸಿರುತ್ತಾರೆ. ಇದರೊಂದಿಗೆ ಹಲವು ಪೀಪಿಗಳೂ,ಪೀಪಿಯನ್ನು ಸರಿಪಡಿಸಲು ದಂತದ ಸಣ್ಣ ಕಡ್ಡಿಯೂ ಇರುತ್ತದೆ.ಇದರ ಮೇಲ್ಬಾಗದಲ್ಲಿ ಏಳು ರಂಧ್ರಗಳೂ,ಕೆಳಭಾಗದಲ್ಲಿ ಐದು ರಂಧ್ರಗಳೂ ಇರುತ್ತದೆ.

ಪ್ರಭೇದಗಳು[ಬದಲಾಯಿಸಿ]

ನಾಗಸ್ವರದಲ್ಲಿ ಎರಡು ವಿಧಗಳಿವೆ. ದೊಡ್ಡದಾಗಿರುವ 'ಬಾರಿ' ಎಂಬ ವಾದ್ಯ. ಎರಡನೆಯದು ಸ್ವಲ್ಪ ಚಿಕ್ಕದಾಗಿರುವ 'ತಿಮಿರಿ' ಎಂಬ ವಾದ್ಯ. ಉತ್ತರ ಭಾರತದಲ್ಲಿ ಪ್ರಚಲಿತವಿರುವ ಶೆಹೆನಾಯ್ ನಾಗಸ್ವರದಂತೆಯೇ ಗಾಳಿವಾದ್ಯವಾದರೂ ಸಾಕಷ್ಟು ವ್ಯತ್ಯಾಸಗಳಿವೆ.

ಪ್ರಸಿದ್ಧ ಕಲಾಕಾರರು[ಬದಲಾಯಿಸಿ]

೧.ಶೇಕ್ ಚಿನ್ನ ಮೌಲಾನಾ ಸಾಹೇಬ್

"https://kn.wikipedia.org/w/index.php?title=ನಾಗಸ್ವರ&oldid=1047295" ಇಂದ ಪಡೆಯಲ್ಪಟ್ಟಿದೆ