ಷಣ್ಮುಖಪ್ರಿಯ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಷಣ್ಮುಖಪ್ರಿಯ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೫೬ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಚಾಮರಮ್ ಎಂದು ಹೆಸರಿಸಿದ್ದಾರೆ.[೧][೨] ಷಣ್ಮುಖ ಮತ್ತು ಶಿವನನ್ನು ಸ್ತುತಿಸುವ ಹಲವಾರು ಕೃತಿಗಳು ಈ ರಾಗದಲ್ಲಿದೆ.
ರಾಗ ಸ್ವರೂಪ ಮತ್ತು ಲಕ್ಷಣ
[ಬದಲಾಯಿಸಿ]ಇದು ಹತ್ತನೆಯ ದಿಸಿ ಚಕ್ರದ ಎರಡನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಶ್ರಿ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧ ನಿ [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೨ ಮ೨ ಪ ದ೧ ನಿ೨ ಸ
ಅವರೋಹಣ ಸ ನಿ೨ ದ೧ ಪ ಮ೨ ಗ೨ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕೈಶಿಕಿ ನಿಷಾಧ.ಇದು ೨೦ನೆಯ ಮೇಳಕರ್ತ ರಾಗವಾದ ನಟಭೈರವಿ
ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
[ಬದಲಾಯಿಸಿ]ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.
ಜನಪ್ರಿಯ ರಚನೆಗಳು
[ಬದಲಾಯಿಸಿ]ಷಣ್ಮುಖಪ್ರಿಯ ರಾಗದಲ್ಲಿ ಕೆಲವು ಜನಪ್ರಿಯ ಕೃತಿಗಳು ಈ ಕೆಳಗಿನಂತಿವೆ.
- ವದ್ದನೆ ವಾರು- ತ್ಯಾಗರಾಜ
- ಮರಿವೆರೆ ದಿಕ್ಕೇವರಯ್ಯಾ- ಪಟ್ನಂ ಸುಬ್ರಹ್ಮಣ್ಯ ಅಯ್ಯರ್
- ಪಾರ್ವತಿ ನಾಯಕನೆ, ಸರವಣಭವ ಎನ್ನುಮ್, ಅಂದಾವನೆ ಉನ್ನೈ- ಪಾಪನಾಶಮ್ ಸಿವನ್
- ಅಭಿಮಾನಮುತೊ ನನ್ನುಬ್ರೊವರಾಧ- ಮೈಸೂರು ವಾಸುದೇವಾಚಾರ್ಯ
- ವಲ್ಲಿ ನಾಯಕನೆ - ಮುತ್ತಯ್ಯ ಭಾಗವತರು
- ವಿಲಾಯದ ಇದು ನೇರಮ- ಟಿ.ಎನ್.ಬಾಲ
- ಸದಾ ತವ ಪಾದ ಸನ್ನಿಧಿಮ್- ಎಂ. ಬಾಲಮುರಳಿ ಕೃಷ್ಣ
- ಓಂಕಾರ ಪ್ರಣವ, ಪದ ವರ್ಣ- ಎಂ. ಬಾಲಮುರಳಿ ಕೃಷ್ಣ
- ಸಿದ್ಧಿ ವಿನಾಯಕಮ್,- ಮುತ್ತುಸ್ವಾಮಿ ದೀಕ್ಷಿತರು
ಸಂಬಂಧಿತ ರಾಗಗಳು
[ಬದಲಾಯಿಸಿ]ಗ್ರಹಭೇದಮ್ ಸೂತ್ರವನ್ನು ಷಣ್ಮುಖಪ್ರಿಯ ರಾಗಕ್ಕೆ ಅನ್ವಯಿಸಿದಾಗ ಮೂರು ರಾಗಗಳು ದೊರೆಯುತ್ತದೆ.ಅವುಗಳು ಶೂಲಿನಿ. ಧೇನುಕ ಮತ್ತು ಚಿತ್ರಾಂಬರಿ