ಹನುಮತೋಡಿ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
Compositions | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಖಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಹನುಮತೋಡಿ ಅಥವಾ ತೋಡಿ ಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಎಂಟನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ಜನತೋಡಿ ಎಂದು ಹೆಸರಿಸಿದ್ದಾರೆ.[೧][೨] ಇದು ಒಂದು ಕ್ಲಿಷ್ಟಕರವಾದ ರಾಗವಾಗಿದ್ದು,ಕಛೇರಿಗಳಲ್ಲಿ ಹೆಚ್ಚಾಗಿ ಹಾಡಲ್ಪಡುತ್ತದೆ.
ಕರ್ನಾಟಕ ಸಂಗೀತ ಪದ್ಧತಿಯ ತೋಡಿ ರಾಗವು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ತೋಡಿ (ಥಾಟ್)ಗಿಂತ ಭಿನ್ನವಾಗಿದೆ.ಇದರ ಸಮಾನವಾದ ಹಿಂದುಸ್ತಾನಿ ರಾಗವೆಂದರೆ ಭೈರವಿ ಥಾಟ್.[೧] ಹಿಂದುಸ್ತಾನಿ ಪದ್ಧತಿಯ ತೋಡಿ ರಾಗದ ಸಮಾನ ಕರ್ನಾಟಕ ಸಂಗೀತ ಪದ್ಧತಿಯ ರಾಗ ಶುಭಪಂತುರಾವಳಿ ಆಗಿರುತ್ತದೆ.[೧][೨]
ರಾಗ ಲಕ್ಷಣ ಮತ್ತು ಸ್ವರೂಪ[ಬದಲಾಯಿಸಿ]
ಇದು ದ್ವಿತೀಯ "ನೇತ್ರ" ಚಕ್ರದ ಎರಡನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೨ ಮ೦ ಪ ದ೧ ನಿ೨ ಸ
ಅವರೋಹಣ ಸ ನಿ೨ ದ೧ ಪ ಮ೧ ಗ೨ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.
ಜನ್ಯ ರಾಗಗಳು[ಬದಲಾಯಿಸಿ]
ಈ ರಾಗಕ್ಕೆ ಹಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ಕೆಲವು ಅಸಾವರಿ,ಭೂಪಾಲಂ,ಧನ್ಯಾಸಿ ಮತ್ತು ಪುನ್ನಗವರಾಳಿ ಹೆಚ್ಚು ಜನಪ್ರಿಯವಾಗಿವೆ.
ಜನಪ್ರಿಯ ರಚನೆಗಳು[ಬದಲಾಯಿಸಿ]
ಈ ರಾಗದಲ್ಲಿ ಹಲವಾರು ಜನಪ್ರಿಯ ರಚನೆಗಳಿದ್ದು ಕಛೇರಿಗಳಲ್ಲಿ ಹಾಗೂ ಇತೆರೆಡೆ ಹಾಡಲ್ಪಡುತ್ತವೆ. ತಮಿಳು ಭಾಷೆಯ ತಾಯೇ ಯಶೋದಾ, ಪುರಂದರದಾಸ ಏನು ಧನ್ಯಳೋ ಲಕುಮಿ, ಮುತ್ತುಸ್ವಾಮಿ ದೀಕ್ಷಿತರ ಶ್ರೀ ಕೃಷ್ಣ ಭಜ ಮಾನಸ ತ್ಯಾಗರಾಜರ ನೀ ವಂಟಿ ಧೈವಮು ಹೆಚ್ಚು ಜನಪ್ರಿಯ ರಚನೆಗಳು. ಹೆಚ್ಚಿನ ಎಲ್ಲಾ ವಾಗ್ಗೇಯಕಾರರು ಈ ರಾಗದಲ್ಲಿ ಕೃತಿ ರಚನೆ ಮಾಡಿದ್ದಾರೆ.