ಶ್ರುತಿ (ಸಂಗೀತ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರುತಿ ಎನ್ನುವುದು ಒಂದು ಸಂಸ್ಕೃತ ಶಬ್ದವಾಗಿದ್ದು ಹಿಂದೂ ಧರ್ಮದ ವೈದಿಕ ಪಠ್ಯಗಳಲ್ಲಿ ಕಂಡುಬರುತ್ತದೆ. ಇದರರ್ಥ ಸಾಹಿತ್ಯ ಅಥವಾ ಸಾಮಾನ್ಯವಾಗಿ ಕೇಳಿಸಿಕೊಂಡದ್ದು ಎಂದು.[೧][೨][೩] ಇದು ಭಾರತೀಯ ಸಂಗೀತದಲ್ಲೂ ಒಂದು ಮುಖ್ಯವಾದ ಪರಿಕಲ್ಪನೆಯಾಗಿದೆ. ಸಂಗೀತದಲ್ಲಿ ಇದರರ್ಥ ಕಿವಿಯು ಪತ್ತೆಹಚ್ಚಬಲ್ಲ ಮತ್ತು ಒಬ್ಬ ಗಾಯಕ ಅಥವಾ ಸಂಗೀತ ವಾದ್ಯವು ಉತ್ಪಾದಿಸಬಲ್ಲ ಸ್ವರದ ಮಟ್ಟದ ಅತ್ಯಂತ ಚಿಕ್ಕ ಅಂತರ.[೪][೫] ಸಂಗೀತದ ಶ್ರುತಿ ಪರಿಕಲ್ಪನೆಯು ನಾಟ್ಯ ಶಾಸ್ತ್ರ, ದತ್ತಿಲಂ, ಬೃಹದ್ದೇಶಿ, ಮತ್ತು ಸಂಗೀತ ರತ್ನಾಕರದಂತಹ ಪ್ರಾಚೀನ ಮತ್ತು ಮಧ್ಯಯುಗದ ಸಂಸ್ಕೃತ ಪಠ್ಯಗಳಲ್ಲಿ ಕಂಡುಬರುತ್ತದೆ.[೬] ಛಾಂದೋಗ್ಯೋಪನಿಷತ್ ಅಷ್ಟಮವನ್ನು ೨೨ ಭಾಗಗಳಾಗಿ ವಿಭಜಿಸುವ ಬಗ್ಗೆ ಹೇಳುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Rowell 2015.
  2. Emmie te Nijenhuis (1970). Dattilam: A Compendium of Ancient Indian Music. Brill Archive. pp. 93–96.
  3. Bakshi, Haresh. 101 Raga-s for the 21st Century and Beyond: A Music Lover's Guide to Hindustani Music.
  4. Ellen Koskoff (2013). The Concise Garland Encyclopedia of World Music, Volume 2. Routledge. p. 936. ISBN 978-1-136-09602-0.
  5. N Ramanathan (1992). Jonathan Katz (ed.). The Traditional Indian Theory and Practice of Music and Dance. BRILL Academic. pp. 75–89, 143–144. ISBN 90-04-09715-5.
  6. José Luiz Martinez (2001). Semiosis in Hindustani Music. Motilal Banarsidass. pp. 85–89. ISBN 978-81-208-1801-9.