ಲತಾಂಗಿ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಲತಾಂಗಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೬೩ ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ಗೀತಪ್ರಿಯ ಎಂದು ಹೆಸರಿಸಿದ್ದಾರೆ.[೧][೨] .ಇದು ಹಿಂದೂಸ್ತಾನಿ ಪದ್ಧತಿಯಲ್ಲಿ ಹೆಚ್ಚು ಬಳಕೆಯಲ್ಲಿದೆ.
ರಾಗ ಸ್ವರೂಪ ಮತ್ತು ಲಕ್ಷಣ
[ಬದಲಾಯಿಸಿ]ಇದು ಹನ್ನೊಂದನೆಯ ರುದ್ರ ಚಕ್ರದ ಮೂರನೆಯ ರಾಗ.ಇದರ ನೆನೆಪಿನ ಹೆಸರು ರುದ್ರ-ಗೊ ನೆನಪಿನ ನುಡಿಕಟ್ಟು:ಸ ರಿ ಗು ಮಿ ಪ ಧ ನು [೧] ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.
ಆರೋಹಣ ಸ ರಿ೨ ಗ೩ ಮ೨ ಪ ದ೧ ನಿ೩ ಸ
ಅವರೋಹಣ ಸ ನಿ೩ ದ೧ ಪ ಮ೨ ಗ೩ ರಿ೨ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಅಂತರ ಗಾಂಧಾರ,ಪ್ರತಿಮಧ್ಯಮ,ಪಂಚಮ,ಶುದ್ಧ ಧೈವತಮತ್ತು ಕಾಕಲಿ ನಿಷಾಧ.ಇದು 27ನೆಯ ಮೇಳಕರ್ತ ರಾಗವಾದ ಸರಸಾಂಗಿಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ.
ಜನ್ಯ ರಾಗಗಳು
[ಬದಲಾಯಿಸಿ]ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.
ಜನಪ್ರಿಯ ರಚನೆಗಳು
[ಬದಲಾಯಿಸಿ]ಲತಾಂಗಿ ರಾಗದಲ್ಲಿ ಹಲವಾರು ಜನಪ್ರಿಯ ರಚನೆಗಳಿದ್ದು, ಕೆಲವು
- ದಿನಮೆ ಸುದಿನಮು-ತ್ಯಾಗರಾಜ
- ಅಪರಾಧಮುಲ- ತ್ಯಾಗರಾಜ
- ಮರಿವೆರೆ - ಪಟ್ನಂ ಸುಬ್ರಹ್ಮಣ್ಯ ಅಯ್ಯರ್
- ಪಿರವ ವರಮ್ ತಾರುಮ್- ಪಾಪನಾಶಮ್ ಶಿವನ್
- ವೆಂಕಟರಮನ- ಪಾಪನಾಶಮ್ ಶಿವನ್
- ಶ್ರಿಲಲಿತೆ ಶ್ರಿಕಾಂತಸಹಿತೆ- ಜಯಚಾಮರಾಜೇಂದ್ರ ವೊಡೆಯರ್
- ತಾಮ್ರಲೋಚನಿ ಲತಾಂಗಿ- ಎಂ. ಬಾಲಮುರಳಿ ಕೃಷ್ಣ
- ಕೊಂಜುಮ್ ಸಾಲಂಗೈ ತಿಜಗುಮ್-ವರ್ಣ- ಮದುರೈ ಆರ್.ಮುರಳೀದರನ್
ಸಂಬಂಧಿತ ರಾಗಗಳು
[ಬದಲಾಯಿಸಿ]ಗ್ರಹಭೇದಮ್ ಸೂತ್ರವನ್ನು ಲತಾಂಗಿ ರಾಗಕ್ಕೆ ಅನ್ವಯಿಸಿದಾಗ ಎರಡು ರಾಗಗಳು ದೊರೆಯುತ್ತದೆ.ಸೂರ್ಯಕಾಂತಮತ್ತು ಸೇನಾವತಿ.