ಚಕ್ರವಾಕ (ರಾಗ)
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
ಸಂಗೀತ ರಚನೆಗಳು | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣೆ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಕಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಚಕ್ರವಾಕ (ರಾಗ) ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನಾರನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ತೋಜವೇಗವಾಹಿನಿ ಎಂದು ಹೆಸರಿಸಿದ್ದಾರೆ.[೧][೨] ಇದು ಹಿಂದೂಸ್ತಾನಿ ಸಂಗೀತ ಪದ್ಧತಿಯ ಅಹಿರ್ ಭೈರವ್ ರಾಗಕ್ಕೆ ಸಮೀಪವಾಗಿದೆ.ಈ ರಾಗ ಕೇಳುಗರಲ್ಲಿ ಭಕ್ತಿ ಮತ್ತು ಸಹಾನುಭೂತಿ ಮೂಡಿಸುತ್ತದೆ.
ರಾಗ ಲಕ್ಷಣ ಮತ್ತು ಸ್ವರೂಪ
[ಬದಲಾಯಿಸಿ]ಇದು ತೃತೀಯ "ಅಗ್ನಿ" ಚಕ್ರದ ನಾಲ್ಕನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೩ ಮ೦ ಪ ದ೨ ನಿ೨ ಸ'
ಅವರೋಹಣ ಸ' ನಿ೨ ದ೨ ಪ ಮ೧ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ.
ಜನ್ಯ ರಾಗಗಳು
[ಬದಲಾಯಿಸಿ]ಈ ರಾಗಕ್ಕೆ ಕೆಲವು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ಬಿಂದುಮಾಲಿನಿ, ಕಲಾವತಿ (ರಾಗ), ಮಲಯಮಾರುತ,ವಾಲಜಿ ಮುಂತಾದವುಗಳು. ಇದರಲ್ಲಿ ಮಲಯಮಾರುತ,ವಾಲಜಿ ಹೆಚ್ಚು ಜನಪ್ರಿಯವಾಗಿದೆ.
ಜನಪ್ರಿಯ ರಚನೆಗಳು
[ಬದಲಾಯಿಸಿ]ಈ ರಾಗದಲ್ಲಿ ಜನಪ್ರಿಯ ರಚನೆಗಳು
ವಿಧ | ಕೃತಿ | ವಾಗ್ಗೇಯಕಾರ | ತಾಳ | |
---|---|---|---|---|
ಕೃತಿ | ಕಾನಕ್ಕನ್‍ಕೋಟಿ ವೆಂಡಮ್ | ಕೋಟೀಶ್ವರ್ ಅಯ್ಯರ್ | ||
ಕೃತಿ | ಫಿಬರೇ ರಾಮರಸಂ | ಸದಾಶಿವ ಬ್ರಹ್ಮೇಂದ್ರ | {ಅಹಿರ್ ಭೈರವ್] ಹಿಂದೂಸ್ತಾನಿ ಪದ್ಧತಿ | |
ಕೃತಿ | ಸುಗುಣಮೂಲೇ | ತ್ಯಾಗರಾಜರು |