ಮಾಯಮಾಳವಗೌಳ
ಕರ್ನಾಟಕ ಸಂಗೀತ | |
---|---|
ಪರಿಕಲ್ಪನೆಗಳು | |
Compositions | |
ಸಂಗೀತೋಪಕರಣಗಳು | |
ಮಾಧುರ್ಯ: ಸರಸ್ವತಿ ವೀಣ • ವೇಣು • ಪಿಟೀಲು • ಚಿತ್ರ ವೀಣ • ನಾದಸ್ವರ • ಮ್ಯಾಂಡೊಲಿನ್ ತಾಳ: ಮೃದಂಗ • ಘಟಂ • ಮೋರ್ಸಿಂಗ್ • ಖಂಜೀರ • ತವಿಲ್ ಝೇಂಕಾರ: ತಂಬೂರ • ಶ್ರುತಿ ಪಟ್ಟಿಗೆ | |
ಸಂಗೀತಕಾರರು | |
ಮಾಯಾಮಾಳವಗೌಳ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ಹದಿನೈದನೆಯದು.ಮುತ್ತುಸ್ವಾಮಿ ದೀಕ್ಷಿತರೂ ಇದನ್ನು ಇದೇ ಹೆಸರಿನಿಂದ ಕರೆದಿದ್ದಾರೆ.[೧][೨] ಈ ರಾಗವನ್ನು ಹೆಚ್ಚಾಗಿ ಸಂಗೀತ ಅಭ್ಯಾಸದ ಪ್ರಾರಂಭದಲ್ಲಿ ಕಲಿಸುತ್ತಾರೆ.
ರಾಗ ಲಕ್ಷಣ ಮತ್ತು ಸ್ವರೂಪ[ಬದಲಾಯಿಸಿ]
ಮಾಳವಗೌಳ ಎಂಬ ಹೆಸರಿನಲ್ಲಿ ಪ್ರಚಾರದಲ್ಲಿದ್ದ ಈ ರಾಗಕ್ಕೆ ಕಟಪಯಾದಿ ಸೂತ್ರಕ್ಕೆ ಹೊಂದಿಕೊಳ್ಳುವಂತೆ 'ಮಾಯಾ' ಎಂಬ ಮುಂಪ್ರತ್ಯಯವನ್ನು ಸೇರಿಸಲಾಗಿದೆ. ಸರ್ವಕಾಲಿಕ ರಾಗ. ಕರುಣಾ, ಭಕ್ತಿ ರಸಪ್ರಧಾನ ರಾಗ. ಇದು ತೃತೀಯ "ಅಗ್ನಿ" ಚಕ್ರದ ಮೂರನೆಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ.
ಆರೋಹಣ ಸ ರಿ೧ ಗ೩ ಮ೦ ಪ ದ೧ ನಿ೩ ಸ'
ಅವರೋಹಣ ಸ' ನಿ೩ ದ೧ ಪ ಮ೧ ಗ೩ ರಿ೧ ಸ
ಇದು ಒಂದು ಸಂಪೂರ್ಣ ರಾಗವಾಗಿದೆ. ಇದು ಬೆಳಗಿನ ಜಾವ ಹಾಡುವ ರಾಗವಾಗಿದ್ದು,ಕೇಳುಗರಲ್ಲಿ ರಸ-ಭಾವ ಸ್ಪುರಿಸುವಂತೆ ಮಾಡುತ್ತದೆ.ಇದು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧಿತಿಯಲ್ಲಿ ಭೈರವಿ ಥಾಟ್‍ಗೆ ಸಮಾನವಾಗಿದೆ.
ಜನ್ಯ ರಾಗಗಳು[ಬದಲಾಯಿಸಿ]
ಈ ರಾಗಕ್ಕೆ ಅತ್ಯಂತ ಹೆಚ್ಚು ಜನ್ಯ ರಾಗಗಳಿದ್ದು ಪ್ರಚಲಿತವಿರುವ ರಾಗಗಳು, ಮಲಹರಿ, ಪೂರ್ವಿ, ರಾಮಕಲಿ,ಸಾವೇರಿ ಮುಂತಾದವುಗಳು. ಇದರಲ್ಲಿ ಸಾವೇರಿ ಮತ್ತು ಮಲಹರಿ ಹೆಚ್ಚು ಜನಪ್ರಿಯವಾಗಿದೆ.
ಜನಪ್ರಿಯ ರಚನೆಗಳು[ಬದಲಾಯಿಸಿ]
ಈ ರಾಗದಲ್ಲಿ ಜನಪ್ರಿಯ ರಚನೆಗಳು
ವಿಧ | ಕೃತಿ | ವಾಗ್ಗೇಯಕಾರ | ತಾಳ | |
---|---|---|---|---|
ಕೃತಿ | ದೇವ ದೇವ | ಸ್ವಾತಿ ತಿರುನಾಳ್ | ||
ಕೃತಿ | ಶ್ಯಾಮಲಾಂಬಿಕೇ ಪಾಹಿಮಾ | ಬಾಲಮುರಳಿ ಕೃಷ್ಣ | ||
ಕೃತಿ | ತುಳಸೀ ದಳಮುಲಚೇ | ತ್ಯಾಗರಾಜರು |
ಈ ರಾಗವು ಬಹಳ ಜನಪ್ರಿಯವಾಗಿದ್ದು,ಹಲವಾರು ಚಲನಚಿತ್ರ ಗೀತೆಗಳಿವೆ.
ಉಲ್ಲೇಖಗಳು[ಬದಲಾಯಿಸಿ]
ಕರ್ನಾಟಕ ಸಂಗೀತ : ಮಾಧ್ಯಮಿಕ ಹಂತ - ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ.