ಸೌಗಂಧಿಕಾ ಪುಷ್ಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸೌಗಂಧಿಕಾ ಪುಷ್ಪ - ಸುಗಂಧಿ ಪುಷ್ಪ ಒಂದು ಪರಿಮಳ ಭರಿತವಾದ ಹೂವು. ಮಹಾಭಾರತದಲ್ಲಿ ಈ ಹೂವನ್ನು ಭೀಮನು ತನ್ನ ಪತ್ನಿಯಾದ ದ್ರೌಪದಿಗೆ ತಂದುಕೊಟ್ಟನೆಂಬ ಕಥೆ ಇದೆ.

ವಿವರಗಳು[ಬದಲಾಯಿಸಿ]

ಸುಗಂಧಿ ಪುಷ್ಪ ತನ್ನದೇ ಆದ ವಿಶಿಷ್ಟ ಸುಗಂದವನ್ನು ಹೊಂದಿರುವ ಈ ಹೂವು ತನ್ನ ಪರಿಮಳದಿಂದ ಹಾಗೂ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತದೆ.ಗಂಗಾನದಿಯ ಬಯಲಿನಲ್ಲಿ ಹಾಗೂ ಅಸ್ಸಾಂನ ಕಡೆ ಹೆಚ್ಚಾಗಿ ಕಾಣಸಿಗುವ ಇದನ್ನು ದಕ್ಷಿಣ ಭಾರತದ ಎಲ್ಲಾ ಕಡೆಗಳಲ್ಲಿಯೂ ಕಾಣಬಹುದು.ಕನ್ನಡದಲ್ಲಿ "ಸುಗಂದಿ ಹೂ" ಎನ್ನುವ ಇದಕ್ಕೆ ಸ್ತಳೀಯವಾಗಿ "ಸುರುಳಿ" ಹಾಗೂ ಸಂಸ್ಕೃತದಲ್ಲಿ "ಅನಂಥ",ಗೋಪಕನ್ಯ,ಗೋಪಸುತ ಮುಂತಾದ ಹೆಸರುಗಳಿವೆ.ಆಂಗ್ಲ ಭಾಷೆಯಲ್ಲಿ "Butterfly ginger"ಎಂದು. ಸಸ್ಯಶಾಸ್ತ್ರೀಯ ಹೆಸರು Hedychium coronarium ಎಂದು. ನೀರಿನ ಆಸರೆ ಇರುವಲ್ಲಿ ಕೆರೆಯ ಬದಿಯಲ್ಲಿ ತಂಪಾದ ಜಾಗದಲ್ಲಿ ಸೊಂಪಾಗಿ ಬೆಳೆಯುವ ಇದು ನೋಡಲು ಅರಶಿನದ ಗಿಡವನ್ನೇ ಹೋಲುತ್ತದೆ.ಗೆಡ್ಡೆಯಿಂದ ಸಸ್ಯಾಭಿವೃದ್ಧಿಗೊಳಿಸಬಹುದಾದ ಈ ಸಸ್ಯದ ಬುಡದಲ್ಲಿ ಬಾಳೆ ಗಿಡದಂತೆ ಸಣ್ಣ ಸಣ್ಣ ಪಿಳ್ಳೆಗಳು ಹುಟ್ಟಿಕೊಂಡು ಗುಂಪು ಗುಂಪಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹೂಬಿಡುವ ಈ ಸಸ್ಯವನ್ನು ಕುಂದಿಕೆಯಾಕಾರದ ಮೊತೆ ಬಂದು ಅದರಲ್ಲಿ ಸುಂದರ ಮೊಗ್ಗುಗಳನ್ನು ಕಾಣಬಹುದು.

ಬೆಳಿಗ್ಗೆ ಕಂಡ ಮೊಗ್ಗುಗಳು ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತಿಗೆ ಮೆಲ್ಲನೆ ಅರಳಲು ಶುರುವಾಗಿ ಸಂಜೆ ಆಗುತಿದ್ದಂತೆ ಪೂರ್ತಿ ಅರಳಿ ತನ್ನ ಸುಗಂಧದಿಂದ ಎಲ್ಲರ ಗಮನ ಸೆಳೆಯುತ್ತದೆ. ಇವುಗಳಲ್ಲಿ ಹಲವಾರು ಬಣ್ಣಗಳಿವೆಯಾದರೂ ಸಾಮಾನ್ಯವಾಗಿ ಶುಭ್ರ ಬಿಳಿ, ಹಳದಿ, ಬಿಳಿ ಬಣ್ಣದ ಮಧ್ಯ ದಲ್ಲಿ ಹಳದಿ ನಾಮದ ಹೂವುಗಳನ್ನು ಕಾಣಬಹುದು.ಒಂದು ಮೋತೆಯಲ್ಲಿ ಹಲವಾರು ಮೊಗ್ಗುಗಳಿದ್ದು ಅವೆಲ್ಲ ಒಮ್ಮೆಲೇ ಅರಳುವಾಗ ನೋಡುವುದೇ ಕಣ್ಣಿಗೆ ಹಬ್ಬ. ಭಾರತೀಯ ಔಷಧೀಯ ಸಸ್ಯ ಎಂದು ಕರೆಯುವ ಇದರ ಹೂವು ಹಾಗೂ ಬೇರನ್ನು ಆಯುರ್ವೇದದ ಹಲವಾರು ಚಿಕಿತ್ಸೆಗಳಲ್ಲಿ ಔಷಧಿಯಾಗಿ ಉಪಯೋಗಿಸುತ್ತಾರೆ. ಇದರ ಬೇರಿನ ಕಷಾಯವನ್ನು ಉರಿಮೂತ್ರ, ಕಟ್ಟುಮೂತ್ರದ ತೊಂದರೆಗಳ ಪರಿಹಾರಕ್ಕಾಗಿ, ರಕ್ತ ಶುದ್ಧಿಗಾಗಿ, ಜ್ವರ ಮತ್ತು ವಾಂತಿಯ ಶಮನಕ್ಕಾಗಿ ಹಾಗೂ ಆನೇಕಾಲು ರೋಗದ ಔಷಧಿಗಳಲ್ಲಿ ಉಪಯೋಗಿಸುವ ಉಲ್ಲೇಖವಿದೆ.

ಚರ್ಮದ ತುರಿಕೆಯ ಶಮನಕ್ಕಾಗಿ ಇದರ ಬೇರನ್ನು ನುಣ್ಣಗೆ ಅರೆದು ಹಚ್ಚುತ್ತಾರೆ. ವಿಪರೀತ ಜ್ವರದಿಂದ ಬಳಲುತ್ತಿರುವಾಗ ಜ್ವರ ತಗ್ಗಿಸಲು ಈ ಸಸ್ಯದ ಬೇರನ್ನು ಅರೆದು ಹಣೆಗೆ ಹಚ್ಚುತ್ತಾರೆ. ತಂಪು ಗುಣವನ್ನು ಹೊಂದಿರುವ ಇದರ ಹೂವನ್ನು ಉಷ್ಣದಿಂದ ಕಣ್ಣು ಉರಿಯುತ್ತಿದ್ದರೆ ಕಣ್ಣಿನ ಮೇಲೆ ಇಡಿಯಾಗಿ ಅಥವಾ ಅರೆದು ಇಡುತ್ತಾರೆ. ಇದರ ಬೇರಿನ ಕಷಾಯವನ್ನು ಹೆಂಗಸರ ಮುಟ್ಟಿನ ಸಮಯದ ಅಧಿಕ ಸ್ರಾವದ ಪರಿಹಾರಕ್ಕಾಗಿ ಹಾಗೂ ಚಿಕ್ಕ ಮಕ್ಕಳಿಗೆ ಭೇದಿ ಯಾದಾಗ ಇದರ ಬೇರನ್ನು ತಾಯಿಯ ಎದೆ ಹಾಲಿನ ಜೊತೆಗೆ ಅರೆದು ಕುಡಿಸುತ್ತಾರೆ. ಇದರ ಬೇರನ್ನು ಒಣಗಿಸಿ ಪುಡಿ ಮಾಡಿ ಕಫದ ಪರಿಹಾರಕ್ಕಾಗಿಯೂ ಔಷಧಿಯಾಗಿ ಉಪಯೋಗಿಸುತ್ತಾರೆ.

ಹೀಗೆ ಔಷಧಿಯಾಗಿ ಹಲವು ಉಪಯೋಗವಿರುವ ಈ ಸಸ್ಯದ ಹೂವುಗಳನ್ನು ದೇವಿ ಪೂಜೆಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದರ ಸುವಾಸನೆಗೆ ಹಾಗೂ ಸೌಂದರ್ಯಕ್ಕೆ ಮಾರು ಹೋಗಿ ಎಷ್ಟೋ ಹೆಂಗಳೆಯರು ಇದನ್ನು ಇಷ್ಟಪಟ್ಟು ತಮ್ಮ ಮುಡಿಗೂ ಏರಿಸುತ್ತಾರೆ. ಹೆಚ್ಚು ಆರೈಕೆಯನ್ನು ಬೇಡದ ಇದನ್ನು ನಮ್ಮ ಹಿತ್ತಲಲ್ಲಿ, ತೋಟದಲ್ಲಿ, ಆವರಣ ಗೋಡೆಯ ಪಕ್ಕದಲ್ಲಿ, ತಂಪು ಇರುವ ಕಡೆ, ನೀರಿನ ಆಸರೆ ಇರುವಲ್ಲಿ ಹಾಗೂ ಕೆರೆಯ ಬದಿಗಳಲ್ಲಿ ಬಹಳ ಸುಲಭವಾಗಿ ಬೆಳೆಸಬಹುದು. ಇದರ ಗಿಡವನ್ನು ಹೂ ತೋಟದ ಯಜಮಾನರಲ್ಲಿ ಕೇಳದೆ ಕದ್ದು ತರಬೇಕು ಎಂಬುದು ತುಳುನಾಡಿನಲ್ಲಿರುವ ವಿಶೇಷ ನಂಬಿಕೆ."ನಮನ".


ಪುರಾಣದಲ್ಲಿ ಸೌಗಂಧಿಕಾ ಪುಷ್ಪ[ಬದಲಾಯಿಸಿ]

ಇದು ಮಹಾಭಾರತದ ಅರಣ್ಯ ಪರ್ವದಲ್ಲಿ ಬರುವ ಒಂದು ಪ್ರಸಂಗ. ಗಾಳಿಯಲ್ಲಿ ತೇಲಿ ಬಂದ ಸೌಗಂಧಿಕಾ ಪುಷ್ಪದ ಪರಿಮಳಕ್ಕೆ ಮನಸೋತು ದ್ರೌಪದಿ ಅದನ್ನು ತಂದುಕೊಡುವಂತೆಭೀಮನನ್ನು ಕೇಳುತ್ತಾಳೆ. ಆಗ ಭೀಮ ಹೂವನ್ನು ತರಲು ಹೋದಾಗ ದಾರಿಯಲ್ಲಿ ಒಂದು ವಯಸ್ಸಾದ ಕಪಿಯು ಮಲಗಿರುತ್ತದೆ. ಅದರ ಬಾಲವನ್ನು ದಾಟದೆ, ಬಾಲವನ್ನು ತೆಗೆದು ದಾರಿಬಿಡುವಂತೆ ಕೇಳಿಕೊಳ್ಳುತ್ತಾನೆ. ಆಗ ಭೀಮ ಬಾಲವನ್ನು ಎತ್ತಲು ಪ್ರಯತ್ನಿಸುತ್ತಾನೆ. ಭೀಮ ಬಹಳ ಪ್ರಯತ್ನಿಸಿದರೂ ಬಾಲವನ್ನು ಸ್ವಲ್ಪವೂ ಸರಿಸಲು ಸಾಧ್ಯವಾಗುವುದಿಲ್ಲ. ಅದು ಭೀಮನಂತಹ ಶಕ್ತಿಶಾಲಿಗೂ ಅಲುಗಾಡಿಸಲಾಗದಷ್ಟು ಭಾರವಾಗಿರುತ್ತದೆ.

ಆಗ ಭೀಮನಿಗೆ ತಾನು ಮಹಾನ್ ಶಕ್ತಿವಂತನೆಂಬ ಇದ್ದ ಗರ್ವ ಭಂಗವಾಗುತ್ತದೆ. ಹೀಗೆ ಸೋತ ಭೀಮನಿಗೆ ತಾನು ಯಾರೆಂದು ಕಪಿಯು ತಿಳಿಸುತ್ತದೆ. ಆ ಕಪಿಯೇ ತ್ರೇತಾಯುಗದಲ್ಲಿ ರಾಮನ ಬಂಟನಾಗಿದ್ದ ಹನುಮಂತನೆಂದು ಭೀಮನಿಗೆ ತಿಳಿದು ಬರುತ್ತದೆ.