ಚಿತ್ರಾಂಗದೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ಚಿತ್ರಾಂಗದೆಯು ಅರ್ಜುನನ ಹೆಂಡತಿಯರ ಪೈಕಿ ಒಬ್ಬಳು. ತನ್ನ ವನವಾಸದ ಅವಧಿಯಲ್ಲಿ ಅರ್ಜುನನು ಭಾರತದ ಉದ್ದಗಲವನ್ನು ಸಂಚರಿಸಿದನು. ಅವನ ಅಲೆದಾಟಗಳು ಅವನನ್ನು ಪೂರ್ವ ಹಿಮಾಲಯದ ಬಹುಮಟ್ಟಿಗೆ ಒಂದು ರಹಸ್ಯ ರಾಜ್ಯವಾದ ಮತ್ತು ತನ್ನ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರಾಚೀನ ಮಣಿಪುರಕ್ಕೆ ಕೊಂಡೊಯ್ದವು. ಅಲ್ಲಿ, ಅವನು ಮಣಿಪುರದ ರಾಜನ ಮಗಳಾದ ಚಿತ್ರಾಂಗದೆಯನ್ನು ಭೇಟಿಯಾದನು, ಮತ್ತು ಮನಕರಗಿ ಮದುವೆಗಾಗಿ ಅವಳ ಕೈ ಕೇಳಿದನು.