ಕನ್ನಡ ಸಾಹಿತ್ಯ ಸಮ್ಮೇಳನ
ಕನ್ನಡ ಸಾಹಿತ್ಯ ಸಮ್ಮೇಳನ | |
---|---|
ಪ್ರಕಾರ | ಕನ್ನಡ ಸಾಹಿತ್ಯ |
ಆವರ್ತನ | 1 ವರ್ಷಕೊಮ್ಮೆ |
ಸ್ಥಳ (ಗಳು) | ವಿವಿಧ |
ಸಕ್ರಿಯ ವರ್ಷಗಳು | 109 |
ಉದ್ಘಾಟನೆ | 1915 (ಬೆಂಗಳೂರು) |
ಇತ್ತೀಚಿನ | 2023 (ಹಾವೇರಿ) |
ಮುಂದಿನ | 2024 (ಮಂಡ್ಯ) |
ಪೋಷಕ (ರು) | ಕರ್ನಾಟಕ ಸರಕಾರ |
ವೆಬ್ಸೈಟ್ | |
Kannada Sahitya Sammelana |
ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಿಂದ ೧೯೧೫ರಿಂದ ನಡೆಸಿಕೊಂಡು ಬರುತ್ತಿರುವ ದೊಡ್ಡ ಪ್ರಮಾಣದ ಕನ್ನಡ ಸಮ್ಮೇಳನ. ಕರ್ನಾಟಕದ ಏಕೀಕರಣವನ್ನು ಸಾಧಿಸುವುದು ಮತ್ತು ಕನ್ನಡನಾಡಿನ ಬದುಕಿನಲ್ಲಿ ಕನ್ನಡವು ಸಾರ್ವಭೌಮ ಸ್ಥಾನವನ್ನು ಪಡೆದುಕೊಳ್ಳಲಗತ್ಯವಾದ ಜನಜಾಗೃತಿಯನ್ನೂ ಸಂಕಲ್ಪವನ್ನೂ ಹುಟ್ಟಿಸುವುದು ಈ ಸಮ್ಮೇಳನಗಳ ಉದ್ದೇಶ ಕನ್ನಡ ಸಾಹಿತ್ಯಕ್ಕೆ ಅವಿರತ ದುಡಿದ ಸಾಹಿತಿಗಳನ್ನು ಇದರ ಅಧ್ಯಕ್ಷತೆ ವಹಿಸಲು ಕೋರಿ ಗೌರವಿಸಲಾಗುತ್ತದೆ. ಈ ಹಿಂದೆ ಕನ್ನಡ ಸಾಹಿತ್ಯದ ಅನೇಕ ಗಣ್ಯರು, ಮಹಾಪುರುಷರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದಾರೆ.[೧]
ಹಿನ್ನಲೆ
[ಬದಲಾಯಿಸಿ]೧೯೧೪ರ ದಿ ಮೈಸೂರು ಎಕಾನಾಮಿಕ್ ಕಾನ್ಫೆರೆನ್ಸ್ (ಮೈಸೂರು ಸಂಪದಭ್ಯುದಯ ಸಮಾಜ) ಸಮ್ಮೆಳನದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾದ ಪರಿಷತ್ತನ್ನು ಸ್ಥಾಪಿಸುವ ವಿಚಾರದಲ್ಲಿ ರಾವ್ ಬಹದ್ದೂರ್ ಎಂ. ಶಾಮರಾವ್, ಕರ್ಪೂರ ಶ್ರೀನಿವಾಸರಾವ್ ಮತ್ತು ಪಿ. ಎಸ್. ಅಚ್ಯುತರಾವ್ ಅವರುಗಳನ್ನೊಳಗೊಂಡ ಉಪಸಮಿತಿಯನ್ನು ರಚಿಸಲಾಯಿತು. ಈ ಉಪಸಮಿತಿಯು ಅಂದಿನ ವಿವಿಧ ಕನ್ನಡ ನಾಡುಗಳ ಪ್ರಾಜ್ಞರೊಡನೆ ಸಮಾಲೋಚಿಸಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ, ಆ ಸಮ್ಮೇಳನಗಳಲ್ಲಿ ಕೆಲವು ಉದ್ದೇಶ ಸಾಧನಕ್ರಮಗಳನ್ನು ಚಿಂತಿಸುವ ಕುರಿತಾದ ಮಾರ್ಗದರ್ಶನ ಸೂತ್ರಗಳನ್ನು ರೂಪಿಸಿತು.
- ಕನ್ನಡ ಭಾಷೆಯಲ್ಲಿ ವ್ಯಾಕರಣ, ಚರಿತ್ರೆ, ನಿಘಂಟು ಬರೆಯಿಸುವುದು,
- ನವೀನಶಾಸ್ತ್ರಗಳಿಗೆ ಸಂಬಂಧಪಟ್ಟ ಕನ್ನಡ ಗ್ರಂಥಗಳಲ್ಲಿ ಪ್ರಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
- ತತ್ವಶಾಸ್ತ್ರ, ಪ್ರಕೃತಿವಿಜ್ಞಾನ, ಚರಿತ್ರೆ, ಸಾಹಿತ್ಯ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
- ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
- ಬೆರೆ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
- ಉತ್ಕೃಷ್ಟವಾದ ಪ್ರಾಚೀನ ಗ್ರಂಥಗಳನ್ನೂ, ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡುವುದಕ್ಕಾಗಿ ಪ್ರಾಚೀನ ವಸ್ತುಸಂಗ್ರಹಾಲಯವನ್ನೇರ್ಪಡಿಸುವುದು.
- ಕರ್ನಾಟಕ ಭಾಷಾಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತಯೋಗ್ಯವಾದ ಲೇಖನಗಳನ್ನೊಳಕೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
- ಗ್ರಂಥಕರ್ತರಿಗೆ ಬಿರುದು ಸಂಭಾವನೆ ಕೊಡುವುದು.
- ಕರ್ನಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತವೇತನಗಳನ್ನು ಕೊಡುವುದು.
- ಕರ್ನಾಟಕ ಭಾಷೋನ್ನತಿಗೂ, ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಡುಗಳನ್ನು ಮಾಡುವುದು.
- ಕನ್ನಡ ಮಾತನ್ನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕಭಂಡಾರಗಳನ್ನೂ ಸ್ಥಾಪಿಸುವುದು.
- ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಸಭೆಗಳನ್ನೇರ್ಪಡಿಸುವುದು, ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.[೨]
ಈವರೆಗಿನ ಸಮ್ಮೇಳನಗಳ ಪಟ್ಟಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ ಕನ್ನಡ ಸಾಹಿತ್ಯ ಸಮ್ಮೇಳನ ೧೯೧೫ ರಿಂದ ಆಚರಣೆ
- ↑ http://kannadasahithyaparishattu.in/?page_id=702 ಸಾಹಿತ್ಯ ಸಮ್ಮೇಳನಗಳ ಉದ್ದೇಶ
ಹೊರ ಕೊಂಡಿಗಳು
[ಬದಲಾಯಿಸಿ]- ಸಚಿತ್ರ ಸಮ್ಮೇಳನ Archived 2011-02-04 ವೇಬ್ಯಾಕ್ ಮೆಷಿನ್ ನಲ್ಲಿ.
- ಬರಗೂರರ ಅಧ್ಯಕ್ಷ ಭಾಷಣ:2 Dec, 2016:[[೧]]
ಸಮ್ಮೇಳನದ ಸಂಖ್ಯೆ | ಸಮ್ಮೇಳನ ನಡೆದ ದಿನಾಂಕ, ತಿಂಗಳು ಮತ್ತು ವರ್ಷ | ಸ್ಥಳ | ಅಧ್ಯಕ್ಷತೆ |
---|---|---|---|
೧ | ೩, ೪, ೫, ೬ ಮೇ ೧೯೧೫ | ಬೆಂಗಳೂರು | ಎಚ್. ವಿ. ನಂಜುಂಡಯ್ಯ |
೨ | ೬, ೭, ೮ ಮೇ ೧೯೧೬ | ಬೆಂಗಳೂರು | ಎಚ್. ವಿ. ನಂಜುಂಡಯ್ಯ |
೩ | ೮, ೯, ೧೦ ಜೂನ್ ೧೯೧೭ | ಮೈಸೂರು | ಎಚ್. ವಿ. ನಂಜುಂಡಯ್ಯ |
೪ | ೧೧, ೧೨, ೧೩ ಮೇ ೧೯೧೮ | ಧಾರವಾಡ | ಆರ್. ನರಸಿಂಹಾಚಾರ್ |
೫ | ೬, ೭, ೮ ಮೇ ೧೯೧೯ | ಹಾಸನ | ಕರ್ಪೂರ ಶ್ರೀನಿವಾಸರಾವ್ |
೬ | ೨೦, ೨೧ ಜೂನ್ ೧೯೨೦ | ಹೊಸಪೇಟೆ | ರೊದ್ದ ಶ್ರೀನಿವಾಸರಾವ್ |
೭ | ೧೯, ೨೦, ೨೧ ಮೇ ೧೯೨೧ | ಚಿಕ್ಕಮಗಳೂರು | ಕೆ. ಪಿ. ಪುಟ್ಟಣ್ಣ ಚೆಟ್ಟಿ |
೮ | ೧೨, ೧೩ ಮೇ ೧೯೨೨ | ದಾವಣಗೆರೆ | ಎಂ. ವೆಂಕಟಕೃಷ್ಣಯ್ಯ |
೯ | ೨೧, ೨೨, ೨೩ ಮೇ ೧೯೨೩ | ಬಿಜಾಪುರ | ಸಿದ್ಧಾಂತಿ ಶಿವಶಂಕರ ಶಾಸ್ತ್ರಿ |
೧೦ | ೧೬, ೧೭, ೧೮ ಮೇ ೧೯೨೪ | ಕೋಲಾರ | ಹೊಸಕೋಟೆ ಕೃಷ್ಣಶಾಸ್ತ್ರಿ |
೧೧ | ೯, ೧೦, ೧೧ ಮೇ ೧೯೨೫ | ಬೆಳಗಾವಿ | ಬೆನಗಲ್ ರಾಮರಾವ್ |
೧೨ | ೨೨, ೨೩, ೨೪ ಮೇ ೧೯೨೬ | ಬಳ್ಳಾರಿ | ಫ. ಗು. ಹಳಕಟ್ಟಿ |
೧೩ | ೧೯, ೨೦, ೨೧ ಮೇ ೧೯೨೭ | ಮಂಗಳೂರು | ಆರ್. ತಾತಾಚಾರ್ಯ |
೧೪ | ೧, ೨, ೩ ಜೂನ್ ೧೯೨೮ | ಕಲಬುರಗಿ | ಬಿ. ಎಂ. ಶ್ರೀಕಂಠಯ್ಯ |
೧೫ | ೧೨, ೧೩, ೧೪ ಮೇ ೧೯೨೯ | ಬೆಳಗಾವಿ | ಮಾಸ್ತಿ ವೆಂಕಟೇಶ ಅಯ್ಯಂಗಾರ್ |
೧೬ | ೫, ೬, ೭ ಅಕ್ಟೋಬರ್ ೧೯೩೦ | ಮೈಸೂರು | ಆಲೂರು ವೆಂಕಟರಾವ್ |
೧೭ | ೨೮, ೨೯, ೩೦ ಡಿಸೆಂಬರ್ ೧೯೩೧ | ಕಾರವಾರ | ಮುಳಿಯ ತಿಮ್ಮಪ್ಪಯ್ಯ |
೧೮ | ೨೮, ೨೯, ೩೦ ಡಿಸೆಂಬರ್ ೧೯೩೨ | ಮಡಿಕೇರಿ | ಡಿ. ವಿ. ಗುಂಡಪ್ಪ |
೧೯ | ೨೯, ೩೦, ೩೧ ಡಿಸೆಂಬರ್ ೧೯೩೩ | ಹುಬ್ಬಳ್ಳಿ | ವೈ. ನಾಗೇಶ ಶಾಸ್ತ್ರಿ |
೨೦ | ೨೮, ೨೯, ೩೦ ಡಿಸೆಂಬರ್ ೧೯೩೪ | ರಾಯಚೂರು | ಪಂಜೆ ಮಂಗೇಶರಾವ್ |
೨೧ | ೨೬, ೨೭, ೨೮ ಡಿಸೆಂಬರ್ ೧೯೩೫ | ಮುಂಬೈ | ಎನ್. ಎಸ್. ಸುಬ್ಬರಾವ್ |
೨೨ | ೨೯, ೩೦, ೩೧ ಡಿಸೆಂಬರ್ ೧೯೩೭ | ಜಮಖಂಡಿ | ಬೆಳ್ಳಾವೆ ವೆಂಕಟನಾರಣಪ್ಪ |
೨೩ | ೨೯, ೩೦, ೩೧ ಡಿಸೆಂಬರ್ ೧೯೩೮ | ಬಳ್ಳಾರಿ | ರಂಗನಾಥ ದಿವಾಕರ |
೨೪ | ೨೫, ೨೬, ೨೭, ೨೮ ಡಿಸೆಂಬರ್ ೧೯೩೯ | ಬೆಳಗಾವಿ | ಮುದವೀಡು ಕೃಷ್ಣರಾವ್ |
೨೫ | ೨೭, ೨೮, ೨೯ ಡಿಸೆಂಬರ್ ೧೯೪೦ | ಧಾರವಾಡ | ವೈ. ಚಂದ್ರಶೇಖರ ಶಾಸ್ತ್ರಿ |
೨೬ | ೨೭, ೨೮, ೨೯ ಡಿಸೆಂಬರ್ ೧೯೪೧ | ಹೈದರಾಬಾದ್ | ಎ. ಆರ್. ಕೃಷ್ಣಶಾಸ್ತ್ರಿ |
೨೭ | ೨೬, ೨೭, ೨೮ ಜನವರಿ ೧೯೪೩ | ಶಿವಮೊಗ್ಗ | ದ. ರಾ. ಬೇಂದ್ರೆ |
೨೮ | ೨೮, ೨೯, ೩೦ ಡಿಸೆಂಬರ್ ೧೯೪೪ | ರಬಕವಿ | ಶಿ. ಶಿ. ಬಸವನಾಳ |
೨೯ | ೨೬, ೨೭, ೨೮ ಡಿಸೆಂಬರ್ ೧೯೪೫ | ಮದರಾಸು | ಟಿ. ಪಿ. ಕೈಲಾಸಂ |
೩೦ | ೭, ೮, ೯ ಮೇ ೧೯೪೭ | ಹರಪನಹಳ್ಳಿ | ಸಿ. ಕೆ. ವೆಂಕಟರಾಮಯ್ಯ |
೩೧ | ೨೯, ೩೦, ೩೧ ಡಿಸೆಂಬರ್ ೧೯೪೮ | ಕಾಸರಗೋಡು | ತಿ. ತಾ. ಶರ್ಮ |
೩೨ | ೫, ೬, ೭ ಮಾರ್ಚ್ ೧೯೪೯ | ಕಲಬುರಗಿ | ಉತ್ತಂಗಿ ಚನ್ನಪ್ಪ |
೩೩ | ೨೪, ೨೫, ೨೬ ಮೇ ೧೯೫೦ | ಸೊಲ್ಲಾಪುರ | ಎಂ. ಆರ್. ಶ್ರೀನಿವಾಸಮೂರ್ತಿ |
೩೪ | ೨೬, ೨೭, ೨೮ ಡಿಸೆಂಬರ್ ೧೯೫೧ | ಮುಂಬೈ | ಗೋವಿಂದ ಪೈ |
೩೫ | ೧೬, ೧೭, ೧೮ ಮೇ ೧೯೫೨ | ಬೇಲೂರು | ಶಿ. ಚ. ನಂದೀಮಠ |
೩೬ | ೨೬, ೨೭, ೨೮ ಡಿಸೆಂಬರ್ ೧೯೫೪ | ಕುಮಟಾ | ವಿ. ಸೀತಾರಾಮಯ್ಯ |
೩೭ | ೧೦, ೧೧, ೧೨ ಜೂನ್ ೧೯೫೫ | ಮೈಸೂರು | ಶಿವರಾಮ ಕಾರಂತ |
೩೮ | ೨೫, ೨೬, ೨೭ ಡಿಸೆಂಬರ್ ೧೯೫೬ | ರಾಯಚೂರು | ಆದ್ಯ ರಂಗಾಚಾರ್ಯ |
೩೯ | ೭, ೮, ೯ ಮೇ ೧೯೫೭ | ಧಾರವಾಡ | ಕುವೆಂಪು |
೪೦ | ೧೮, ೧೯, ೨೦ ಜನವರಿ ೧೯೫೮ | ಬಳ್ಳಾರಿ | ವಿ. ಕೃ. ಗೋಕಾಕ |
೪೧ | ೧೧, ೧೨, ೧೩ ಫೆಬ್ರವರಿ ೧೯೬೦ | ಬೀದರ್ | ಡಿ. ಎಲ್. ನರಸಿಂಹಾಚಾರ್ |
೪೨ | ೨೭, ೨೮, ೨೯ ಡಿಸೆಂಬರ್ ೧೯೬೦ | ಮಣಿಪಾಲ | ಅ. ನ. ಕೃಷ್ಣರಾಯ |
೪೩ | ೨೭, ೨೮, ೨೯ ಡಿಸೆಂಬರ್ ೧೯೬೧ | ಗದಗ | ಕೆ. ಜಿ. ಕುಂದಣಗಾರ |
೪೪ | ೨೮, ೨೯, ೩೦ ಡಿಸೆಂಬರ್ ೧೯೬೩ | ಸಿದ್ದಗಂಗಾ | ರಂ. ಶ್ರೀ. ಮುಗಳಿ |
೪೫ | ೧೦, ೧೧, ೧೨ ಮೇ ೧೯೬೫ | ಕಾರವಾರ | ಕಡೆಂಗೋಡ್ಲು ಶಂಕರಭಟ್ಟ |
೪೬ | ೨೬, ೨೭, ೨೮ ಮೇ ೧೯೬೭ | ಶ್ರವಣಬೆಳಗೊಳ | ಆ. ನೇ. ಉಪಾಧ್ಯೆ |
೪೭ | ೨೭, ೨೮, ೨೯ ಡಿಸೆಂಬರ್ ೧೯೭೦ | ಬೆಂಗಳೂರು | ದೇ. ಜವರೇಗೌಡ |
೪೮ | ೩೧ ಮೇ, ೧, ೨ ಜೂನ್ ೧೯೭೪ | ಮಂಡ್ಯ | ಜಯದೇವಿತಾಯಿ ಲಿಗಾಡೆ |
೪೯ | ೧೧, ೧೨, ೧೩ ಡಿಸೆಂಬರ್ ೧೯೭೬ | ಶಿವಮೊಗ್ಗ | ಎಸ್. ವಿ. ರಂಗಣ್ಣ |
೫೦ | ೨೩, ೨೪, ೨೫ ಏಪ್ರಿಲ್ ೧೯೭೮ | ದೆಹಲಿ | ಜಿ. ಪಿ. ರಾಜರತ್ನಂ |
೫೧ | ೦೯, ೧೦, ೧೧ ಮಾರ್ಚ್ ೧೯೭೯ | ಧರ್ಮಸ್ಥಳ | ಗೋಪಾಲಕೃಷ್ಣ ಅಡಿಗ |
೫೨ | ೭, ೮, ೯, ೧೦ ಫೆಬ್ರವರಿ ೧೯೮೦ | ಬೆಳಗಾವಿ | ಬಸವರಾಜ ಕಟ್ಟೀಮನಿ |
೫೩ | ೧೩, ೧೪, ೧೫ ಮಾರ್ಚ್ ೧೯೮೧ | ಚಿಕ್ಕಮಗಳೂರು | ಪು. ತಿ. ನರಸಿಂಹಾಚಾರ್ |
೫೪ | ೨೭, ೨೮, ೨೯, ೩೦ ನವೆಂಬರ್ ೧೯೮೧ | ಮಡಿಕೇರಿ | ಶಂ. ಬಾ. ಜೋಶಿ |
೫೫ | ೨೩, ೨೪, ೨೫, ೨೬ ಡಿಸೆಂಬರ್ ೧೯೮೨ | ಸಿರ್ಸಿ | ಗೊರೂರು ರಾಮಸ್ವಾಮಿ ಅಯ್ಯಂಗಾರ್ |
೫೬ | ೨೩, ೨೪, ೨೫ ಮಾರ್ಚ್ ೧೯೮೪ | ಕೈವಾರ | ಎ. ಎನ್. ಮೂರ್ತಿರಾವ್ |
೫೭ | ೫, ೬, ೭ ಏಪ್ರಿಲ್ ೧೯೮೫ | ಬೀದರ್ | ಹಾ. ಮಾ. ನಾಯಕ |
೫೮ | ೨೯, ೩೦, ೩೧ ಅಕ್ಟೋಬರ್, ೧ ನವೆಂಬರ್ ೧೯೮೭ | ಕಲಬುರಗಿ | ಸಿದ್ಧಯ್ಯ ಪುರಾಣಿಕ |
೫೯ | ೧೬, ೧೭, ೧೮ ಫೆಬ್ರವರಿ ೧೯೯೦ | ಹುಬ್ಬಳ್ಳಿ | ಆರ್. ಸಿ. ಹಿರೇಮಠ |
೬೦ | ೨೮, ೨೯, ೩೦ ನವೆಂಬರ್ ೧೯೯೦ | ಮೈಸೂರು | ಕೆ. ಎಸ್. ನರಸಿಂಹಸ್ವಾಮಿ |
೬೧ | ೯, ೧೦, ೧೧, ೧೨ ಜನವರಿ ೧೯೯೨ | ದಾವಣಗೆರೆ | ಜಿ. ಎಸ್. ಶಿವರುದ್ರಪ್ಪ |
೬೨ | ೫, ೬, ೭ ಫೆಬ್ರವರಿ ೧೯೯೩ | ಕೊಪ್ಪಳ | ಸಿಂಪಿ ಲಿಂಗಣ್ಣ |
೬೩ | ೧೧, ೧೨, ೧೩ ಫೆಬ್ರವರಿ ೧೯೯೪ | ಮಂಡ್ಯ | ಚದುರಂಗ |
೬೪ | ೩, ೪, ೫ ಜೂನ್ ೧೯೯೫ | ಮುಧೋಳ | ಎಚ್. ಎಲ್. ನಾಗೇಗೌಡ |
೬೫ | ೨೧, ೨೨, ೨೩, ೨೪ ಡಿಸೆಂಬರ್ ೧೯೯೬ | ಹಾಸನ | ಚನ್ನವೀರ ಕಣವಿ |
೬೬ | ೧೧, ೧೨, ೧೩, ೧೪ ಡಿಸೆಂಬರ್ ೧೯೯೭ | ಮಂಗಳೂರು | ಕಯ್ಯಾರ ಕಿಞ್ಞಣ್ಣ ರೈ |
೬೭ | ೧೧, ೧೨, ೧೩, ೧೪ ಫೆಬ್ರವರಿ ೧೯೯೯ | ಕನಕಪುರ | ಎಸ್. ಎಲ್. ಭೈರಪ್ಪ |
೬೮ | ೨೪, ೨೫, ೨೬ ಜೂನ್ ೨೦೦೦ | ಬಾಗಲಕೋಟೆ | ಶಾಂತಾದೇವಿ ಮಾಳವಾಡ |
೬೯ | ೧೫, ೧೬, ೧೭ ಫೆಬ್ರವರಿ ೨೦೦೨ | ತುಮಕೂರು | ಯು. ಆರ್. ಅನಂತಮೂರ್ತಿ |
೭೦ | ೭, ೮, ೯ ಮಾರ್ಚ್ ೨೦೦೩ | ಬೆಳಗಾವಿ | ಪಾಟೀಲ ಪುಟ್ಟಪ್ಪ |
೭೧ | ೧೮, ೧೯, ೨೦, ೨೧ ಡಿಸೆಂಬರ್ ೨೦೦೩ | ಮೂಡುಬಿದಿರೆ | ಕಮಲಾ ಹಂಪನಾ |
೭೨ | ೨೭, ೨೮, ೨೯ ಜನವರಿ ೨೦೦೬ | ಬೀದರ್ | ಶಾಂತರಸ ಹೆಂಬೆರಳು |
೭೩ | ೨೦, ೨೧, ೨೨, ೨೩ ಡಿಸೆಂಬರ್ ೨೦೦೭ | ಶಿವಮೊಗ್ಗ | ಕೆ. ಎಸ್. ನಿಸಾರ್ ಅಹಮ್ಮದ್ |
೭೪ | ೧೨, ೧೩, ೧೪, ೧೫ ಡಿಸೆಂಬರ್ ೨೦೦೭ | ಉಡುಪಿ | ಎಲ್. ಎಸ್. ಶೇಷಗಿರಿ ರಾವ್ |
೭೫ | ೪, ೫, ೬ ಫೆಬ್ರವರಿ ೨೦೦೯ | ಚಿತ್ರದುರ್ಗ | ಎಲ್. ಬಸವರಾಜು |
೭೬ | ೧೯, ೨೦, ೨೧ ಫೆಬ್ರವರಿ ೨೦೧೦ | ಗದಗ | ಗೀತಾ ನಾಗಭೂಷಣ |
೭೭ | ೪, ೫, ೬ ಫೆಬ್ರವರಿ ೨೦೧೧ | ಬೆಂಗಳೂರು | ಜಿ. ವೆಂಕಟಸುಬ್ಬಯ್ಯ |
೭೮ | ೯, ೧೦, ೧೧ ಡಿಸೆಂಬರ್ ೨೦೧೧ | ಗಂಗಾವತಿ | ಸಿ. ಪಿ. ಕೃಷ್ಣಕುಮಾರ್ |
೭೯ | ೯, ೧೦, ೧೧ ಫೆಬ್ರವರಿ ೨೦೧೩ | ಬಿಜಾಪುರ | ಕೋ. ಚೆನ್ನಬಸಪ್ಪ |
೮೦ | ೭, ೮, ೯ ಜನವರಿ ೨೦೧೪ | ಕೊಡಗು | ನಾ. ಡಿಸೋಜಾ |
೮೧ | ೩೧ ಜನವರಿ, ೧, ೨, ೩ ಫೆಬ್ರವರಿ ೨೦೧೫ | ಶ್ರವಣಬೆಳಗೊಳ | ಸಿದ್ಧಲಿಂಗಯ್ಯ |
೮೨ | ೨, ೩, ೪ ಡಿಸೆಂಬರ್ ೨೦೧೬ | ರಾಯಚೂರು | ಬರಗೂರು ರಾಮಚಂದ್ರಪ್ಪ |
೮೩ | ೨೪, ೨೫, ೨೬ ನವೆಂಬರ್ ೨೦೧೭ | ಮೈಸೂರು | ಚಂದ್ರಶೇಖರ ಪಾಟೀಲ |
೮೪ | ೪, ೫, ೬ ಜನವರಿ ೨೦೧೯ | ಧಾರವಾಡ | ಚಂದ್ರಶೇಖರ ಕಂಬಾರ |
೮೫ | ೫, ೬, ೭ ಫೆಬ್ರವರಿ ೨೦೨೦ | ಕಲಬುರಗಿ | ಎಚ್. ಎಸ್. ವೆಂಕಟೇಶಮೂರ್ತಿ |
೮೬ | ೬, ೭, ೮ ಜನವರಿ ೨೦೨೩ | ಹಾವೇರಿ | ದೊಡ್ಡರಂಗೇಗೌಡ
ಡಿಸೆಂಬರ್ 20-23, 2024 ಮಂಡ್ಯ ಗೊ ರು ಚನ್ನಬಸಪ್ಪ(ನಿಯೋಜಿತ ಅಧ್ಯಕ್ಷರು)
|
೮೭ | ನಿಗದಿಸಿಲ್ಲ | ಮಂಡ್ಯ | ನಿಯೋಜಿಸಿಲ್ಲ |