ವಿಷಯಕ್ಕೆ ಹೋಗು

ರಂ.ಶ್ರೀ.ಮುಗಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಂ.ಶ್ರೀ.ಮುಗಳಿ

ರಂ. ಶ್ರೀ. ಮುಗಳಿ - ಕನ್ನಡದ ಖ್ಯಾತ ವಿದ್ವಾಂಸ ಮತ್ತು ಸಾಹಿತಿ. ಕವಿ, ಕಾದಂಬರಿಕಾರ, ಕಥಾಗಾರ, ನಾಟಕಕಾರ, ಪ್ರಬಂಧಕಾರ ಹಾಗೂ ವಿಮರ್ಶಕ. ಹೀಗೆ ಇವರು ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ಬರೆದಿದ್ದಾರೆ. ಇವರ "ಕನ್ನಡ ಸಾಹಿತ್ಯ ಚರಿತ್ರೆ" ಸಾಹಿತ್ಯಲೋಕದ ಮೈಲುಗಲ್ಲು.

ಜನನ/ಜೀವನ[ಬದಲಾಯಿಸಿ]

ರಂ.ಶ್ರೀ. ಮುಗಳಿಯವರು ೧೯೦೬ ಜುಲೈ ೧೫ ರಂದು ರೋಣ ತಾಲೂಕಿನ ಹೊಳೆಆಲೂರಿನಲ್ಲಿ ಜನಿಸಿದರು. ೧೯೩೩ರಲ್ಲಿ ಸಾಂಗಲಿಯ ವಿಲಿಂಗ್ಡನ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿಕೊಂಡು ೧೯೬೧ರಲ್ಲಿ ಅದೇ ಕಾಲೇಜಿನ ಪ್ರಾಂಶುಪಾಲರಾಗಿ ೧೯೬೬ರಲ್ಲಿ ನಿವೃತ್ತರಾದರು. ೧೯೬೭ರಿಂದ ೧೯೭೦ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿದ್ದರು. ರಸಿಕ ರಂಗ ಇದು ಮುಗಳಿಯವರ ಕಾವ್ಯನಾಮ.

ಕವನ ಸಂಕಲನಗಳು[ಬದಲಾಯಿಸಿ]

 1. ಬಾಸಿಗ.
 2. ಅಪಾರ ಕರುಣೆ.
 3. ಓಂ ಅಶಾಂತಿ.
 4. ನವಮಾನವ.,

ಕಾದಂಬರಿಗಳು[ಬದಲಾಯಿಸಿ]

 1. ಅನ್ನ.
 2. ಬಾಳುರಿ.
 3. ಕಾರಣಪುರುಷ.

ಸಣ್ಣ ಕತೆಗಳ ಸಂಕಲನ[ಬದಲಾಯಿಸಿ]

 1. ಕನಸಿನ ಕೆಳದಿ

ನಾಟಕಗಳು[ಬದಲಾಯಿಸಿ]

 1. ಎತ್ತಿದ ಕೈ.
 2. ಸೇನಾಪ್ರದೀಪ.
 3. ನಾಮಧಾರಿ.
 4. ಮನೋರಾಜ್ಯ.
 5. ಧನಂಜಯ.

ವಿಮರ್ಶಾ ಕೃತಿಗಳು[ಬದಲಾಯಿಸಿ]

 1. ಕನ್ನಡ ಸಾಹಿತ್ಯ ಚರಿತ್ರೆ
 2. ಕನ್ನಡ ಸಾಹಿತ್ಯದ ಇತಿಹಾಸ.
 3. ಸಾಹಿತ್ಯೋಪಾಸನೆ.
 4. ರನ್ನನ ಕೃತಿರತ್ನ.
 5. ತವನಿಧಿ.
 6. ಸಾಹಿತ್ಯವಿಮರ್ಶೆಯ ಮಾರ್ಗದರ್ಶಕ ಸೂತ್ರಗಳು.
 7. ಕನ್ನಡ ಸಾಹಿತ್ಯದಲ್ಲಿ ಸರಸ್ವತಿಯ ದರ್ಶನ.
 8. ವಿಮರ್ಶೆಯ ವ್ರತ.

ಪ್ರಬಂಧ ಕೃತಿಗಳು[ಬದಲಾಯಿಸಿ]

 1. ಕನ್ನಡನುಡಿ ತನ್ನ ಕಾಲಮೇಲೆ ತಾನಿಲ್ಲಬಹುದೇ?
 2. ನವೀನ ಪ್ರಜ್ಞೆಯ ಸೂತ್ರಗಳು.
 3. ಕನ್ನಡದವೆಂಬಾ ಮಂತ್ರ.
 4. ಕನ್ನಡದ ಕರೆ.

ಆತ್ಮ ಕಥನ[ಬದಲಾಯಿಸಿ]

 1. ಜೀವನ ರಸಿಕ.

ಪ್ರಶಸ್ತಿ/ಗೌರವಗಳು[ಬದಲಾಯಿಸಿ]

 1. "ಕನ್ನಡ ಸಾಹಿತ್ಯ ಚರಿತ್ರೆ" ಎಂಬ ಕೃತಿಗೆ ೧೯೫೬ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.
 2. ೧೯೬೩ರಲ್ಲಿ ತುಮಕೂರು ಜಿಲ್ಲೆಯ ಸಿದ್ಧಗಂಗಾದಲ್ಲಿ ಜರುಗಿದ ೪೪ನೆಯ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷರಾಗಿದ್ದರು.
 3. ೧೯೬೪ರಲ್ಲಿ ಇಂಕ್ಲಾ ಸಂಸ್ಥೆಯ ಪರವಾಗಿ ಫ್ರಿಬುವಿನಲ್ಲಿ ನಡೆದ ಜಾಗತಿಕ ಸಾಹಿತ್ಯಸಮ್ಮೇಳನದಲ್ಲಿ ಕನ್ನಡದ ಪ್ರತಿನಿಧಿಯಾಗಿದ್ದರು.
 4. ಪಿಇ ಎನ್ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ೧೯೯೩ ಫೆಬ್ರುವರಿ ೨೦ರಂದು ಬೆಂಗಳೂರಿನಲ್ಲಿ ನಿಧನರಾದರು.