ವಿಷಯಕ್ಕೆ ಹೋಗು

ಶಾಂತಾದೇವಿ ಮಾಳವಾಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾಂತಾದೇವಿ ಮಾಳವಾಡ ಇವರು ೧೯೨೨ ಡಿಸೆಂಬರ್ ೧೦ ರಂದು ಬೆಳಗಾವಿ ಯಲ್ಲಿ ಜನಿಸಿದರು. ತಾಯಿ ಜಯವಂತಿದೇವಿ; ತಂದೆ ಕರ್ಜಗಿ ಮುರಿಗೆಪ್ಪ ಶೆಟ್ಟರು. ತವರು ಮನೆ ಹೆಸರು ದಾನಮ್ಮ. ಎರಡು ವರ್ಷದವಳಿದ್ದಾಗ ತಂದೆಯನ್ನು ಹಾಗು ಹತ್ತು ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡ ದಾನಮ್ಮ ಅಜ್ಜಿಯ ಮಡಿಲಲ್ಲಿ ಬೆಳೆದಳು. ವನಿತಾ ವಿದ್ಯಾಲಯದಲ್ಲಿ ಹೈಸ್ಕೂಲ ಎರಡನೆಯ ತರಗತಿಯವರೆಗೆ ಕಲಿತು, ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು.

ವಿವಾಹ

[ಬದಲಾಯಿಸಿ]

೧೯೩೭ನೆಯ ಇಸವಿಯಲ್ಲಿ ಇವರ ಮದುವೆ ಪ್ರೊ. ಸ.ಸ. ಮಾಳವಾಡರ ಜೊತೆ ಆಯಿತು. ತಮ್ಮ ಪತಿಯ ಒತ್ತಾಸೆಯಿಂದಾಗಿ ಶಾಂತಾದೇವಿಯವರು ಮನೆಯಲ್ಲಿಯೆ ಇಂಗ್ಲೀಷ್,ಹಿಂದಿ, ಪ್ರಾಚೀನ ಕನ್ನಡ ಸಾಹಿತ್ಯ ಹಾಗು ವಚನ ಸಾಹಿತ್ಯದ ಅಧ್ಯಯನ ಮಾಡಿದರು. ೧೯೪೦ರಲ್ಲಿ ಕನ್ನಡ ಜಾಣ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪತಿಯ ಪ್ರೋತ್ಸಾಹದಿಂದ ೧೯೩೮ರಲ್ಲಿ ಅಕ್ಕನ ಬಳಗ ವೆಂಬ ಮಹಿಳಾ ಸಂಘಟನೆಯನ್ನು ಪ್ರಾರಂಭಿಸಿದರು.

ಸಾಮಾಜಿಕ

[ಬದಲಾಯಿಸಿ]

ಕಥಾಸಂಕಲನ

[ಬದಲಾಯಿಸಿ]
  • ಮೊಗ್ಗೆಯ ಮಾಲೆ
  • ಕುಂಕುಮ ಬಲ

ಗದ್ಯ ಸಾಹಿತ್ಯ

[ಬದಲಾಯಿಸಿ]
  • ಹಚ್ಚೇವು ಕನ್ನಡದ ದೀಪ.
  • ಕನ್ನಡದ ತಾಯಿ.
  • ಮಹಿಳೆಯರ ಅಲಂಕಾರ
  • ಸೊಬಗಿನ ಮನೆ
  • ಮಹಿಳೆಯರ ಆತ್ಮಶ್ರೀ.
  • ರಸಾಪಾಕ
  • ಸಾರ್ವಜನಿಕ ರಂಗದಲ್ಲಿ ಮಹಿಳೆ.
  • ದಾಂಪತ್ಯಯೋಗ
  • ವಧುವಿಗೆ ಉಡುಗೊರೆ.
  • ಜನನೀ ಜನ್ಮ ಭೂಮಿಶ್ಚ.
  • ಮಹಿಳಾ ಚೇತನ.
  • ಸಮುಚ್ಚಯ.

ಕಾದಂಬರಿ

[ಬದಲಾಯಿಸಿ]
  • ಬಸವ ಪ್ರಕಾಶ.

ಮಕ್ಕಳ ಸಾಹಿತ್ಯ

[ಬದಲಾಯಿಸಿ]
  • ಬೆಳವಡಿ ಮಲ್ಲಮ್ಮ.
  • ಕೆಳದಿ ಚೆನ್ನಮ್ಮ.
  • ನಾಗಲಾಂಬಿಕೆ.
  • ನೀಲಾಂಬಿಕೆ
  • ಕುಟುಂಬ.
  • ಬಸವಯುಗದ ಶಿವಶರಣೆಯರು
  • ಭಾರತದ ಮಾನಸಪುತ್ರಿಯರು
  • ಗಂಗಾಂಬಿಕೆ
  • ಶಿವಯೋಗಿಣಿ
  • ಎಣ್ಣೆ ಹೊಳೆಯ ನಂದಾದೀಪ
  • ಪುರಾತನ ಶರಣರು
  • ದಾನದಾಸೋಹಿ ದಾನಮ್ಮ.

Krutigalu==

  • ಜ.ಚ.ನಿ. ಪೀಠಾರೋಹಣ ಬೆಳ್ಳಿಹಬ್ಬ ' ಸಾಹಿತ್ಯಸುಮ ' ಬಂಗಾರದ ಪದಕ
  • ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೭೬)
  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೧೯೮೨)
  • ಸಾವಿತ್ರಮ್ಮ ದೇ.ಜ.ಗೌ. ಪ್ರಶಸ್ತಿ (೧೯೯೧)
  • ಷಷ್ಟ್ಯಬ್ದಿ ಸಮಾರಂಭ (' ಪ್ರಶಾಂತ' ಆಭಿನಂದನ ಗ್ರಂಥ ಸಮರ್ಪಣೆ:೧೯೮೨)