ಎಲ್. ಬಸವರಾಜು
ಗೋಚರ
ಡಾ| ಎಲ್.ಬಸವರಾಜು ಇವರು ೧೯೧೯ ಅಕ್ಟೋಬರ ೫ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ವೀರಮ್ಮ ; ತಂದೆ ಲಿಂಗಪ್ಪ.ಗುರು ಕುವೆಂಪು.ವೃತ್ತಿಯಿಂದ ಪ್ರಾಧ್ಯಾಪಕರಾದರೂ,ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ,ವೀರಶೈವಸಾಹಿತ್ಯಸಿದ್ಧಾಂತಗಳಶೋಧನೆ,ಅಧ್ಯಯನ,ವ್ಯಾಖ್ಯಾನ,ಸಂಪಾದನೆಗಳಲ್ಲಿ ಕಳೆದಿದ್ದಾರೆ.ಸತತವಾಗಿ ೪೦ ವರ್ಷಗಳ ಕಾಲ ಇವರು ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ.
ಪ್ರಮುಖ ಕೃತಿಗಳು
[ಬದಲಾಯಿಸಿ]- ಸೌಂದರನಂದ.
- ಶೂನ್ಯ ಸಂಪಾದನೆ.
- ಕನ್ನಡ ಛಂದಸ್ಸು ಸಂಪುಟ
- ಶಿವದಾಸ ಗೀತಾಂಜಲಿ
- ಭಾಸನ ಭಾರತ ರೂಪಕ
- ನಾಟಕಾಮೃತ ಬಿಂದುಗಳು
- ಅಲ್ಲಮನ ವಚನಚಂದ್ರಿಕೆ.
- ದೇವರ ದಾಸೀಮಯ್ಯನ ವಚನಗಳು * ರಾಮಾಯಣ ನಾಟಕ ತ್ರಿವೇಣಿ.
ಪ್ರಶಸ್ತಿಗಳು
[ಬದಲಾಯಿಸಿ]'ಪಂಪ ಪ್ರಶಸ್ತಿ' 'ಬಸವ ಪುರಸ್ಕಾರ' ೧೯೯೪ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೦೬ರ 'ಭಾಷಾ ಸಮ್ಮಾನ್'