ಮನಿಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನಿಲ ನಗರ
Lungsod ng Maynila
ಮನಿಲ
Official seal of ಮನಿಲ ನಗರ
Nickname(s): 
"Pearl of the Orient"
"Queen of the Orient"
"The City of Our Affections"
"City by the Bay"
"Distinguished and Ever Loyal City"
Motto(s): 
Linisin at Ikarangal ang Maynila
Map of Metro Manila showing the location of the City of Manila
Map of Metro Manila showing the location of the City of Manila
ದೇಶಫಿಲಿಪೀನ್ಸ್
ಪ್ರದೇಶರಾಷ್ಟ್ರೀಯ ರಾಜಧಾನಿ ಪ್ರದೇಶ
ಜಿಲ್ಲೆಗಳು1st to 6th districts of Manila
Barangays897
SettledJune 10, 1574
ಸರ್ಕಾರ
 • MayorAlfredo Lim (2007–2010; LP)
 • Vice MayorIsko Moreno (2007–2010; NP)
 • RepresentativesBenjamin Asilo
1st District
Jaime Lopez
2nd District
Zenaida Angping
3rd District
Trisha Bonoan - David
4th District
Amado Bagatsing
5th District
Bienvenido Abante
District 6
Area
 • City೩೮.೫೫ km (೧೪.೯ sq mi)
 • ಮೆಟ್ರೋ
೬೩೮.೫೫ km (೨೪೬.೫ sq mi)
Elevation
೧೬.೦ m (೫೨ ft)
Population
 (2007[೧])
 • City೧೬,೬೦,೭೧೪
 • ಸಾಂದ್ರತೆ೪೩,೦೭೯/km (೧,೧೧,೫೭೫/sq mi)
 • Urban
೨,೧೪,೧೯,೭೮೫
 • ನಗರ ಸಾಂದ್ರತೆ೧೨,೫೫೦/km (೩೨,೫೦೪/sq mi)
 • Metro
೧,೧೫,೫೩,೪೨೭
 • Metro density೧೮,೦೯೩/km (೪೬,೮೬೧/sq mi)
 • Demonym
Manilans
ಸಮಯ ವಲಯಯುಟಿಸಿ+8 (PST)
ZIP code
0900 to 1096
Area code(s)2
ಜಾಲತಾಣwww.manila.gov.ph/

ಮನಿಲಾ (ಎಂದು ಉಚ್ಚರಿಸಲಾಗುವ /məˈnɪlə/ mə-NIL; Filipino: [Maynila] Error: {{Lang}}: text has italic markup (help)), ಮನಿಲಾ ನಗರವು ಫಿಲಿಫೈನ್ಸ್‌ನ ಅಧಿಕೃತ ರಾಜಧಾನಿಯಾಗಿದೆ. ಇದು ಪೆಟೆರೋಸ್ ಮುನಿಸಿಪಾಲಿಟಿಯೊಂದಿಗೆ ಸೇರಿ ಮನಿಲಾ ಮಹಾನಗರ ಪಾಲಿಕೆಯಾಗಿದ್ದು, ೧೬ ನಗರಗಳಲ್ಲಿ ಒಂದಾದ ಇದು ಪ್ರಪಂಚದ ಅತಿ ಜನಸಾಂದ್ರತೆ ನಗರ ಪ್ರದೇಶಗಳಲ್ಲೊಂದಾಗಿದೆ. ಲುಜಾನ್ ದ್ವೀಪದ ಪಶ್ಚಿಮ ಭಾಗದಲ್ಲಿರುವ ಇದು ಮನಿಲಾ ಕೊಲ್ಲಿಯ ಪೂರ್ವ ತೀರಗಳಲ್ಲಿದೆ. ೧,೬೬೦,೭೧೪ ಜನಸಂಖ್ಯೆ ಹೊಂದಿರುವ ಮನಿಲಾ ಫಿಲಿಫೈನಿನ ಎರಡನೇ ಅತಿ ದೊಡ್ಡ ಜನಸಾಂದ್ರಿತ ನಗರವಾಗಿದ್ದು, ಪಕ್ಕದಲ್ಲೇ ಇರುವ ಕ್ವಿಜಾನ್ ನಗರ ಮೊದಲನೆಯದಾಗಿದೆ. ಆದರೆ ಈ ನಗರದ ನಾಗರೀಕರು ಕೇವಲ ೩೮.೫೫ ಚದರ ಕಿಲೋಮೀಟರ್ ಕ್ಷೇತ್ರದಲ್ಲಿ ವಾಸವಾಗಿರುವುದರಿಂದ ಮನಿಲಾವು ಫಿಲಿಪೈನಿನ ಅತಿ ಜನದಟ್ಟಣೆಯ ನಗರವಷ್ಟೇ ಅಲ್ಲದೆ ಪ್ರಪಂಚದಲ್ಲೇ ಅತ್ಯಂತ ಗಟ್ಟಿ ಜನಸಂದಣಿಯಾಗಿದೆ.[೨]

ಈ ನಗರವು ಆರು ಶಾಸಕ ಜಿಲ್ಲೆಗಳು ಮತ್ತು ಹದಿನಾರು ಜಿಯೋಗ್ರಾಫಿಕಲ್ ಜಿಲ್ಲೆಗಳನ್ನು ಹೊಂದಿದೆ ಅವೆಂದರೆ: ಬಿನೊಂಡೋ, ಎರ್ಮಿತಾ, ಇಂಟ್ರಾಮುರೊಸ್, ಮಲಾಟೆ, ಪಾಕೊ, ಪ್ಯಾಂಡಕನ್, ಪೋರ್ಟ್ ಏರಿಯಾ, ಕ್ವಿಯಾಪೊ, ಸಂಪಾಲೊಕ್, ಸ್ಯಾನ್ ಆಂಡ್ರೆಸ್, ಸ್ಯಾನ್ ಮಿಗುಯೆಲ್, ಸ್ಯಾನ್ ನಿಕೊಲಸ್, ಸಾಂತಾ ಅನಾ, ಸಾಂತಾ ಕ್ರೂಜ್, ಸಾಂತಾ ಮೆಸಾ ಮತ್ತು ಟೊಂಡೊ. ಇವುಗಳ ಆವರಣದಲ್ಲಿ, ಗಿಜುಗುಟ್ಟುವ ವಾಣಿಜ್ಯ ಚಟುವಟಿಕೆಗಳು, ಮತ್ತು ದೇಶದ ಕೆಲವೊಂದು ಐತಿಹಾಸಿಕ, ಸಾಂಸ್ಕೃತಿಕ ಮಹತ್ವವಿರುವ ಸಾಂಪ್ರದಾಯಿಕ ಹೆಗ್ಗುರುತುಗಳು ಮತ್ತು ಸರ್ಕಾರದ ಕಾರ್ಯಾಂಗದ ಸ್ಥಾನವಾಗಿದೆ. ಇದು ಬಹಳಷ್ಟು ವೈಜ್ಞಾನಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಾ ಮತ್ತು ಅಸಂಖ್ಯ ಕ್ರೀಡಾ ಸೌಕರ್ಯಗಳ ಕೇಂದ್ರ ಸ್ಥಾನವಾಗಿದೆ. ಮನಿಲಾವು ಫಿಲಿಫೈನಿನ ಪ್ರಮುಖ ರಾಜಕೀಯ, ವಾಣಿಜ್ಯ, ಬಹುರಾಷ್ಟ್ರೀಯ ಪ್ರಜೆಗಳಿರುವ ಸಾಂಸ್ಕೃತಿಕ, ಶೈಕ್ಷಣಿಕ ಧಾರ್ಮಿಕ ಹಾಗೂ ಸಾರಿಗೆ ಕೇಂದ್ರವಾಗಿದೆ.

ಮನಿಲಾ ನಗರದ ಸುತ್ತಲೂ ಕೆಲವು ಮನಿಲಾ ಮಹಾ ನಗರ ಪಾಲಿಕೆಯ ನಗರಗಳ ಅಂಚುಗಳು ಸೇರಿವೆ; ಉತ್ತರದಲ್ಲಿ ನವೋಟಾಸ್ ಮತ್ತು ಕಲೂಕನ್ ನಗರಗಳು, ಈಶಾನ್ಯದಲ್ಲಿ ಕ್ವೆಜಾನ್ ನಗರ, ಪೂರ್ವದಲ್ಲಿ ಸ್ಯಾನ್ ಜುವಾನ್ ಮತ್ತು ಮಂಡಲುಯೋಂಗ್ ನಗರಗಳು, ಆಗ್ನೇಯದಲ್ಲಿ ಮಕಾಟಿ ನಗರ, ಮತ್ತು ದಕ್ಷಿಣಕ್ಕೆ ಪಾಸೇ ನಗರ.

ನಗರದ ಅತಿ ಪ್ರಾಚೀನ ಲಿಖಿತ ಉಲ್ಲೇಖಗಳು ಸ್ಫ್ಯಾನಿಷ್ ಎರಾಕ್ಕೆ ಕರೆದೊಯ್ಯುತ್ತವೆ, ಸ್ಪ್ಯಾನಿಶರು ಮೊತ್ತ ಮೊದಲ ಬಾರಿ ಬಂದಾಗ ಆಗಲೇ ಕ್ಷೇತ್ರದಲ್ಲಿ ಮೂಲನಿವಾಸಿಗಳ ಆವಾಸ ಸ್ಥಾನವಿತ್ತು. ಕಾಲಕ್ರಮೇಣ ಮನಿಲಾ ಸ್ಪ್ಯಾನಿಷರ ದೂರ ಪ್ರಾಚ್ಯದ ಚಟುವಟಿಕೆಗಳಾ ಕೇಂದ್ರವಾಯಿತು ಮತ್ತು ಮನಿಲಾ–ಅಕ್ಯಾಪುಲ್ಕೊ ಗೇಲಿಯನ್ ವ್ಯಾಪಾರ ಮಾರ್ಗದ ಒಂದು ತುದಿಯಾಗಿದ್ದು, ಇದನ್ನು ಕ್ರಮೇಣ "ಪರ್ಲ್ ಆಫ್ ದಿ ಓರಿಯಂಟ್" ಎಂದು ಕರೆಯಲಾಯಿತು. ನಂತರ ನಗರವು ಅಮೇರಿಕನ್ನರ ಆಗಮನವನ್ನು ಕಂಡಿತು, ಅವರು ಮಾಡಿದ ನಗರ ಯೋಜನೆ ಮತ್ತು ಅಭಿವೃದ್ಧಿಯ ಬಹುಭಾಗದ ಸುಧಾರಣೆಗಳು ವಿಶ್ವದ ಎರಡನೇ ಮಹಾಯುದ್ಧದಲ್ಲಿ ಸರ್ವನಾಶವಾಗಿ ತದನಂತರ ನಗರವನ್ನು ಪುನರ್ನಿರ್ಮಾಣ ಮಾಡಲಾಯಿತು.

ಇತಿಹಾಸ[ಬದಲಾಯಿಸಿ]

ಮೊಟ್ಟ ಮೊದಲಿಗೆ ಗಿಂಟು (ಬಂಗಾರದ ನಾಡು) ಅಥವಾ ಸುವರ್ಣದ್ವೀಪ ಎಂದು ಅಕ್ಕಪಕ್ಕದ ರಾಜ್ಯಗಳಿಂದ ಇದನ್ನು ಗುರುತಿಸಲಾಗಿತ್ತು. ನಂತರ ರಾಜ್ಯವು ಚೀನಾದೊಂದಿಗೆ ತನ್ನ ವ್ಯಾಪಾರ ಸಂಬಂಧದಿಂದ ಮಿಂಗ್ ವಂಶಸ್ಥರ ಎರಡನೇ ಅರ್ಧ ಕಾಲದಲ್ಲಿ ಸಂಪನ್ನವಾಗಿ ಬೆಳೆಯಿತು. ಪ್ರಾಚೀನ ಟೊಂಡೊ ಯಾವಾಗಲೂ ಸಾಮ್ರಾಜ್ಯದ ಪಾರಂಪರಿಕ ರಾಜಧಾನಿಯಾಗಿತ್ತು. ಈ ನಗರವನ್ನು ಆಳುವವರನ್ನು ಕೇವಲ ಮುಖ್ಯಸ್ಥರಲ್ಲ, ಅವರು ರಾಜರಿಗೆ ಸಮಾನರಾಗಿದ್ದರು ಮತ್ತು ಅವರನ್ನು ಪ್ಯಾಂಗಿನುಯನ್ ಅಥವಾ ಪಾಂಗಿನೂನ್ ("ರಾಜರು"), ಅನಕ್ ಬಾನ್ವಾ ("ಸ್ವರ್ಗದ ಪುತ್ರ") ಅಥವಾ ಲಕಂಡುಲ ("ಅರಮನೆಯ ಪ್ರಭು") ಎಂದು ಸಂಭೋದಿಸಲಾಗುತ್ತಿತ್ತು. ಹದಿಮೂರನೆಯ ಶತಮಾನದಲ್ಲಿ ಹಿಂದೆ ಇದ್ದ ಹಳೆಯ ಪಟ್ಟಣಗಳ ಪಳೆಯುಳಿಕೆಯ ಮೇಲೆ ಮತ್ತು ಪಾಸಿಗ್ ನದಿಯ ದಂಡೆಗಳಾ ಮೇಲೆ ಕೋಟೆಗಳಿಂದ ಭದ್ರವಾಗಿದ್ದ ಜನಾವಾಸಗಳು ಮತ್ತು ವ್ಯಾಪಾರಿ ತಾಣಗಳಾನ್ನು ಈ ನಗರವು ಹೊಂದಿತ್ತು. ಭಾರತೀಯರಾದ ಮಜಾಪಹಿತ್ ಸಾಮ್ರಾಜ್ಯದ ಆಕ್ರಮಣಕ್ಕೆ ಮನಿಲಾ ನಗರ ತುತ್ತಾಗಿದ್ದಕ್ಕೆ ಪ್ರಾಚೀನ ಸಾಕ್ಷಿಗಳಿವೆ, ನಗರಕ್ರೇತಗಾಮ ಎಂಬ ಪ್ರಶಂಸಾ ಮಹಾ ಕಾವ್ಯದಲ್ಲಿ ಮಹಾರಾಜ ಹಯಮ್ ವರುಕ್ ಈ ನಗರವನ್ನು ಗೆದ್ದಿರುವುದಾಗಿ ಬರೆಯಲಾಗಿದೆ.[೩] ಸಾಲುಡಂಗ್ ಅಥವಾ ಸೆಲುರಾಂಗ್ ಎನ್ನುವುದು ಈಗಿನ ಲುಜಾನ್ ದ್ವೀಪದ ಐತಿಹಾಸಿಕ ಹೆಸರಾಗಿದ್ದು ಇದನ್ನು ಅಧ್ಯಾಯ ೧೪ ರಲ್ಲಿ ಸುಲೋಟ್ ಜೊತೆಗೆ ಪಟ್ಟಿ ಮಾಡಲಾಗಿದೆ ಈಗ ಇದರ ಹೆಸರು ಸುಲು, ಮತ್ತು ಕಲ್ಕಾ.[೩]

ಬ್ರೂನಿ ಸುಲ್ತಾನಿ ವಂಶಕ್ಕೆ ಸೇರಿದ ಸುಲ್ತಾನ್ ಬೋಲ್‌ಕಾಯ್‌ನ ಆಳ್ವಿಕೆಯು ೧೪೮೫ ರಿಂದ ೧೫೨೧ರಲ್ಲಿ ಚೀನಾ ದೇಶದೊಂದಿಗಿನ ವ್ಯಾಪಾರದ ಮೇಲೆ ಟೊಂಡೊ ವಂಶಸ್ಥರ ಏಕಸ್ವಾಮ್ಯವನ್ನು ತಪ್ಪಿಸಲು ತೀರ್ಮಾನಿಸಿ ಅದರ ಮೇಲೆ ಆಕ್ರಮಣ ನಡೆಸಿತು ಮತ್ತು ಸೆಲುರಾಂಗ್ ರಾಜ್ಯ (ಈಗ ಮನಿಲಾ) ಬ್ರೂನಿವಂಶಜರ ಸಾಮಂತ ರಾಜ್ಯವಾಯಿತು.[೪] ರಾಜ ಸಲಾಲಿಲಾ ಅಧೀನದ ಒಂದು ಹೊಸ ಇಸ್ಲಾಮಿ ವಂಶವನ್ನು ಟೊಂಡೊದಲ್ಲಿನ ಲಕಂಡುಲಾ ಮನೆತನವನ್ನು ಎದುರಿಸಲು ಸ್ಥಾಪಿಸಲಾಯಿತು. ಮಲೇಶಿಯಾ ಮತ್ತು ಇಂಡೋನೇಶಿಯಾದಿಂದ ಫಿಲಿಫ್ಹೈನಿಗೆ ವ್ಯಾಪಾರಿಗಳು ಮತ್ತು ಧರ್ಮಪ್ರಸಾರಕರ ಆಗಮನದಿಂದ ಇಸ್ಲಾಂ ಧರ್ಮ ಮತ್ತಷ್ಟು ಸುಭದ್ರವಾಯಿತು.[೫] ದ್ವೀಪದ ಜನಗಳು ಮತ್ತು ಬಹುರಾಜ್ಯಗಳು ಪ್ರದೇಶದ ಸ್ವಾಮ್ಯದ ಮೇಲೆ ಸ್ಪರ್ಧಿಸಿದ್ದರಿಂದ ಬಡಿ ಮತ್ತು ಗೆಲ್ಲು ನಿಯಮವನ್ನು ಪ್ರಯೋಗಿಸಿ ಸ್ಪೇಯಿನಿಗರು ನೆಲೆ ಪಾಳಯ ಸ್ಥಾಪಿಸಲು ಸುಲಭವಾಯಿತು.

೧೫೬೫ ರಿಂದ ೧೮೯೮ವರೆಗೆ ಮೂರು ಶತಮಾನಗಳ ಕಾಲ ಫಿಲಿಪ್ಪೈನ್ ದ್ವೀಪಗಳ ಅಧಿಕೃತವಾಗಿ ವಲಸಿಗ ಸ್ಪೇಯಿನ್ ಸರಕಾರದಿಮ್ದ ನಿಯಂತ್ರಣಕ್ಕೂ ಮೊದಲು ತಾತ್ಕಾಲಿಕವಾಗಿ ಮನಿಲಾ ಚೀನೀ ಹಡಗುಗಳ್ಳ ಯುದ್ಧಕೋರ ಲಮ್ಹಾಂಗ್‌ನ ಆಕ್ರಮಣದ ಭೀತಿಯನ್ನು ಎದುರಿಸಿತ್ತು. ಏಳು ವರ್ಷಗಳ ಯುದ್ಧದ ಭಾಗವಾಗಿ ೧೭೬೨–೧೭೬೪ ವರೆಗೆ ಫಿಲಿಪ್ಪೈನ್ಸ್ ಅನ್ನು ಬ್ರಿಟಿಷರು ಆಕ್ರಮಿಸಿದಾಗ ಮನಿಲಾ ನಗರವನ್ನು ಗ್ರೇಟ್ ಬ್ರಿಟನ್ ಆಕ್ರಮಿಸಿಕೊಂಡಿತ್ತು.[೬] ಮನಿಲಾ ನಗರವು ತಾತ್ಕಾಲಿಕ ಬ್ರಿಟಿಷ್ ಗವರ್ನರ್‌ನಿಂದ ಆರ್ಚ್‌ಬಿಷಪ್ ಮತ್ತು ಸತ್ ಸಭಾಸದರ ಮೂಲಕ ಫಿಲಿಪ್ಪೈನಿನ ರಾಜಧಾನಿಯಾಗಿ ಉಳಿಯಿತು.[೭] ಬ್ರಿಟಿಷರ ವಿರುದ್ಧ ಶಸ್ತ್ರ ಸಜ್ಜಿತ ಹೋರಾಟದ ಕೇಂದ್ರ ಪಂಪಾಂಗಾದಲ್ಲಿತ್ತು.[೭]

ಮನಿಲಾದಲ್ಲಿ ಜಪಾನೀಯರ ಮತ್ತು ಅಮೆರಿಕನ್ ಪಡೆಗಳಿಂದಾದ ನಾಶ

left|thumb|250px|ಫಿಲಿಪೈನ್‌ನ ಹಿಂದಿನ ಪ್ರಧಾನಿ ಕೊರೊಜಾನ್ ಅಕ್ವಿನೊ ನಿಧನ ಹೊಂದಿದಾಗ ಬೊನಿಪೇಶಿಯೊ ಶ್ರೈನ್‌ನ ಮೇಲೆ ಅರ್ಧ ಕ್ಕಿಳಿಸಿದ ಬಾವುಟಗಳು.

ಮೂರು ಶತಮಾನಗಳ ಕಾಲ ನಡೆದ ಮನಿಲಾ-ಅಕ್ಯಾಪುಲ್ಕೊ ವ್ಯಾಪಾರ ಕಾಲದಲ್ಲಿ ಮನಿಲಾ ಹೆಸರುವಾಸಿಯಾಗಿತ್ತು, ದೂರದ ಮೆಕ್ಸಿಕೊ ಮತ್ತು ಪೆರುದೇಶಗಳಿಂದ ಸರಕುಗಳನ್ನು ಆಗ್ನೇಯ ಏಷಿಯಾದ ವರೆಗೆ ತರಲಾಗುತ್ತಿತ್ತು. ೧೮೯೯ರಲ್ಲಿ, ಸಂಯುಕ್ತ ಸಂಸ್ಥಾನವು ಫಿಲಿಪ್ಪೈನ್ ಅನ್ನು ಸ್ಪೆಯಿನ್‌ನಿಂದ ಖರೀದಿಸಿ ಪೂರ್ತಿ ಫಿಲಿಪ್ಪೈನ್ ದ್ವೀಪ ಸಮೂಹಗಳಲ್ಲಿ ತನ್ನ ನೆಲೆಗೆಳನ್ನು ೧೯೪೬ರ ತನಕ ಸ್ಥಾಪಿಸಿತು.[೮] ಅದಾದ ನಂತರ ಫಿಲಿಪ್ಪೈನ್-ಅಮೇರಿಕನ್ ಯುದ್ಧ ಆರಂಭವಾಯಿತು. ಯುದ್ಧವು ಮನಿಲಾವನ್ನು ನಾಶಗೊಳಿಸಿತು ಆದರೆ ಅಮೇರಿಕನ್ನರು ನಗರೀಕರಣ ಮತ್ತು ಯೋಜನೆಗೆ ಸಹಾಯ ಮಾಡಿತು ಇದೂ ಸಹ ಎರಡನೇ ವಿಶ್ವಯುದ್ಧದಲ್ಲಿ ನಶಿಸಿ ಹೋಯಿತು, ಶಾಂತಸಾಗರದ ಪ್ರದೇಶದಲ್ಲಿ ಅತಿ ಘೋರಯುದ್ಧದ ಪ್ರದೇಶ ಮನಿಲಾ ನಗರವಾಗಿತ್ತು. ಈ ಯುದ್ಧದಲ್ಲಿ 100,000 ನಾಗರೀಕರು ಕೊಲೆಯಾದರು ಆಗ ಏಷಿಯಾದ ರಕ್ತಸ್ನಾನದ ಸ್ಥಾನ ಮನಿಲಾವಾಗಿತ್ತು.[೯] ಎರಡನೆಯ ವಿಶ್ವಯುದ್ಧ ಸಮಯದಲ್ಲಿ ವಿಶ್ವದಲ್ಲಿ ವಾರ್ಸಾದ ನಂತರ ಎರಡನೆಯ ಅತಿ ಸರ್ವನಾಶ ಕಂಡ ನಗರ ಮನಿಲಾ ಆಗಿತ್ತು. ಅಂದಿನಿಂದ ನಗರವನ್ನು ಪುನರ್ನಿರ್ಮಾಣ ಮಾಡಲಾಯಿತು.

೧೯೭೫ರ ಮಾರ್ಕೋಸನ ಸರ್ವಾಧಿಕಾರತ್ವ ಕಾಲದಲ್ಲಿ, ಮನಿಲಾ ಮಹಾನಗರ ಕ್ಷೇತ್ರದ ಪ್ರದೇಶಗಳು ಉಳಿದ ಸುತ್ತುವರೆದ ನಗರಗಳು, ಪಟ್ಟಣಗಳೊಂದಿಗೆ ಸ್ವಾತಂತ್ರ್ಯ ಅಸ್ತಿತ್ವವನ್ನು ಸಾಧಿಸಿದವು. ಸ್ವರ್ಣಯುಗ ವೆಂದು ಕರೆಯಲಾಗುವ ಲಾಕ್ಸನ್‌ನ ಕಾಲದಲ್ಲಿ ಮನಿಲಾ ಮರಳಿ ಸಶಕ್ತವಾಗಿ ಮತ್ತೊಮ್ಮೆ ಎರಡನೇ ವಿಶ್ವಯುದ್ಧಕ್ಕೂ ಮೊದಲು ಗಳಿಸಿದ, ಏಶಿಯಾದ ಮುತ್ತು ಆಯಿತು,[೧೦] ೧೯೯೫ರಲ್ಲಿ ಅಪರಾಧಗಳ ವಿರುದ್ಧ ದಾಳಿಗಳಿಗೆ ಹೆಸರಾದ ಆಲ್ಫ್ರೆಡೊ ಲಿಮ್ ನಗರದ ಪ್ರಥಮ ಪ್ರಜೆಯಾಗಿದ್ದನು. 1998ರ ಸಾರ್ವಜನಿಕ ಚುನಾವಣೆಗಳ ನಂತರ ಲಿಮ್ ರಾಷ್ಟ್ರಾಧ್ಯಕ್ಷನಾಗಿ ಪದವಿ ವಹಿಸಿಕೊಂಡಾಗ, ಆಟಿಯೆಂಜಾ ನಗರದ ಮೇಯರ್ ಆಗಿ ಮನಿಲಾ ನಗರವನ್ನು ಮರು ಸಶಕ್ತಗೊಳಿಸಿದನು, ಮತ್ತು ಆಸ್ಪತ್ರೆ ಮತ್ತು ಶೈಕ್ಷಣಿಕ ಸೌಕರ್ಯಗಳನ್ನು ಕಟ್ಟಿದನು. ಲಿಟೊ ಆಟಿಯೆಂಜಾ ನಗರದ ಬಹಳಷ್ಟು ಚೌಕಗಳ ನವೀಕರಿಸಿದ ಮತ್ತು ನಗರದ ಹಿರಿಯ ನಾಗರೀಕರಿಗೋಸ್ಕರ ಮಹಾಲ್ ಕೊ ಸಿ ಲೊಲೊ, ಮಹಾಲ್ ಕೊ ಸಿ ಲೊಲಾ ಯೋಜನೆ ಜಾರಿ ಮಾಡಿದ.[೧೧] ಈಗಿನ ಮನಿಲಾ ನಗರದ ಮೇಯರ್ ಆದ ಆಲ್ಫೆಡೊ ಲಿಮ್ ತಾನು ಮೇಯರ್ ಆದ ಕೂಡಲೇ ಅಟಿಯೆಂಜಾ ಯೋಜನೆಗಳನ್ನು [೧೨] ಇವು ನಗರದ ಸುಧಾರಣೆಗಳಿಗೆ ಯಾವ ಮಹತ್ವದ ಕಾಣಿಕೆಯನ್ನು ನೀಡುವುದಿಲ್ಲ ಎಂದು ಕಾರಣ ನೀಡಿ ತಡೆಹಿಡಿದನು. ಜುಲೈ ೧೭, ೨೦೦೮ ರಂದು ಮಹಾನಗರ ಪಾಲಿಕೆ ಸದಸ್ಯನಾದ ಡೆನಿಸ್ ಆಲ್ಕೊರೆಜಾ ಮಾನವ ಹಕ್ಕುಗಳ ಆಯೋಗಕ್ಕೆ, ಮಾನವ ಹಕ್ಕುಗಳ ದೂರನ್ನು ಲಿಮ್ ಮತ್ತು ಇತರೆ ಮನಿಲ ಅಧಿಕಾರಿಗಳ ವಿರುದ್ಧ ದೂರು ನೀಡಿದನು.[೧೩] ಲಿಮ್‌ನ ಪೋಲೀಸ್ ದಳಗಳ ದುರ್ವತನೆಯಿಂದಾಗಿ ಇಪ್ಪತ್ತ ನಾಲ್ಕು ಜನ ಮನಿಲಾದ ಅಧಿಕಾರಿಗಳು ರಾಜೀನಾಮೆ ನೀಡಿದರು.

ಭೂಗೋಳ[ಬದಲಾಯಿಸಿ]

ಭೂಪಟಗಳು ಮತ್ತು ಟೇಬಲ್‌ಗಳು
ಮನಿಲಾದ ಇತಿಹಾಸ
ಹವಾಮಾನ ಸರಾಸರಿಗಳು
ಜಿಲ್ಲೆಗಳು
ಆರ್ಥಿಕ ವ್ಯವಸ್ಥೆ/ಆರ್ಥಿಕತೆ
ಐತಿಹಾಸಿಕ ಜನಸಂಖ್ಯೆಗಳು
ಅಂತರಾಷ್ಟ್ರೀಯ ಸಂಬಂಧಗಳು
ಮನಿಲಾ ಕೊಲ್ಲಿ ಮತ್ತು ಮನಿಲಾ ಮೆಟ್ರೋಪಾಲಿಟನ್ ಪ್ರದೇಶದ ಲ್ಯಾಂಡ್‌ಸ್ಯಾಟ್ ಸ್ಯಾಟೆಲೈಟ್ ಫಾಲ್ಸ್ ಕಲರ್ ಚಿತ್ರ.

ಮನಿಲಾ ಕೊಲ್ಲಿಯ ಪೂರ್ವದ ತಟಗಳ ಮೇಲೆ ಮನಿಲಾ ನಗರವಿದೆ. ಪಾಸಿಗ್ ನದಿಯು ಮಧ್ಯದಲ್ಲಿ ಹರಿದು ನಗರವನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. ಬಹುತೇಕ ನಗರವು ಶತಮಾನಗಳ ಪೂರ್ವ ಚರಿತ್ರೆಯ ಕಾಲದ ಪಾಸಿಗ್ ನದಿ ಹೊತ್ತು ತಂದ ನೆರೆಮಣ್ಣಿನ ನಿಕ್ಷೇಪ ಮತ್ತು ಮನಿಲಾ ಕೊಲ್ಲಿ ಪಡೆದ ಜಾಗದ ಮೇಲೆ ನಿಂತಿದೆ. ಅಮೇರಿಕಾದ ನೆಲೆಪಡೆಗಳ ಕಾಲದಿಂದಲೂ ನಗರದ ನೆಲ ಸಾಕಷ್ಟು ಬದಲಾವಣೆಯನ್ನು ಮಾನವ ಹಸ್ತಕ್ಷೇಪದಿಂದ ಕಂಡಿದೆ, ಸಾಕಷ್ಟು ಜಮೀನನ್ನು ಸಮುದ್ರ ತೀರವನ್ನು ಮಣ್ಣಿನಿಂದ ತುಂಬಿಸಿ ಪಡೆಯಲಾಗಿದೆ. ಭೂ ಮೇಲ್ಮೈಯ ನೈಸರ್ಗಿಕ ಏರುಪೇರುಗಳನ್ನು ಮಹಾನಗರದ ನಗರೀಕರಣದಿಂದ ಸಮಗೊಳಿಸಲಾಗಿದೆ. ಮನಿಲಾ ಏಷಿಯಾದ ಮುಖ್ಯಭೂಮಿಯಿಂದ ೮೦೦ ಮೈಲುಗಳಷ್ಟು (೧,೩೦೦ km) ದೂರ ಪ್ರದೇಶದಲ್ಲಿದೆ.[೧೪] ನಗರವು ೩೮.೫೫ ಚದರ ಕಿಲೋಮೀಟರ್‌ನಷ್ಟು ವಿಸ್ತೀರ್ಣವನ್ನು ಆಕ್ರಮಿಸಿದೆ ಮತ್ತು ೮೯೭ ಬ್ಯಾರಂಗಿಗಳೆಂಬ ಫಿಲಿಪ್ಪೈನಿನ ಅತಿ ಚಿಕ್ಕ ಸ್ಥಳೀಯ ಸರ್ಕಾರಿ ಘಟಕಗಳನ್ನಾಗಿ ವಿಂಗಡಿಸಲಾಗಿತ್ತು. ಪ್ರತಿ ಬ್ಯಾರಂಗೆ ತನ್ನದೇ ಆದ ಅಧ್ಯಕ್ಷ ಹಾಗೂ ಸಲಹೆಗಾರರನ್ನು ಹೊಂದಿದೆ. ಆಡಳಿತಾತ್ಮಕ ಉಪಯೋಗಕ್ಕಾಗಿ ಎಲ್ಲಾ ಮನಿಲಾದ ಬ್ಯಾರಂಗೆಗಳನ್ನು ೧೦೦ ವಲಯಗಳನ್ನಾಗಿ ಗುಂಪುಗೂಡಿಸಿದೆ. ಅವುಗಳನ್ನು ಪುನಃ ೧೬ ಭೌಗೋಳಿಕ ಜಿಲ್ಲೆಗಳನ್ನಾಗಿ ಒಗ್ಗೂಡಿಸಿದೆ. ಈ ವಲಯ ಮತ್ತು ಜಿಲ್ಲೆಗಳಲ್ಲಿ ಸ್ಥಳೀಯ ಸರಕಾರಗಳಿಲ್ಲ. ಈ ೧೬ ಭೌಗೋಳಿಕ ಜಿಲ್ಲೆಗಳನ್ನು ಪುನಃ ಮನಿಲಾದ ಆರು ಶಾಸನಾತ್ಮಕ ಜಿಲ್ಲೆಗಳಾಗಿ ಗುಂಪುಗೂಡಿಸಿದೆ.

ಹವಾಮಾನ[ಬದಲಾಯಿಸಿ]

ಕೊಪ್ಪನ್ ಹವಾಮಾನ ವರ್ಗೀಕರಣ ವ್ಯವಸ್ಥೆಯಡಿ, ಮನಿಲಾವು ಉಷ್ಣವಲಯದ ತೇವಪೂರಿತ ಮತ್ತು ಒಣ ಹವಾಮಾನ ಹೊಂದಿದ್ದು, ಉಷ್ಣವಲಯದ ಮಾನ್‌ಸೂನ್ ಹವಾಮಾನದ ಅಂಚುಗಳಲ್ಲಿದೆ. ಫಿಲಿಪ್ಪೈನ್ಸ್‌ನ ಉಳಿದ ಭಾಗಗಳೂ ಸೇರಿದಂತೆ ಮನಿಲಾ ಪೂರ್ತಿಯಾಗಿ ಉಷ್ಣವಲಯದಲ್ಲಿದೆ. ಭೂಮಧ್ಯ ರೇಖೆಯ ಸನಿಹ ಇರುವುದರಿಂದ, ತಾಪಮಾನದ ವ್ಯತ್ಯಾಸ ಮಾನ ತುಂಬಾ ಕಡಿಮೆ ಇದೆ, ಅಪರೂಪಕ್ಕೆ ೨೦ °Cಗಿಂತಲೂ ಕಡಿಮೆ ಮತ್ತು ೩೮ °Cಗಿಂತ ಮೇಲೆ ಇರುತ್ತದೆ. ಆದರೆ ತೇವಾಂಶದ ಮಟ್ಟ ಸಾಮಾನ್ಯವಾಗಿ ತುಂಬಾ ಹೆಚ್ಚಾಗಿದ್ದು, ಹೆಚ್ಚು ಉಷ್ಣವಿರುವಂತೆ ಮಾಡುತ್ತದೆ. ಅದು ಸುನಿಶ್ಚಿತವಾದರೂ ಹೋಲಿಕೆಯಲ್ಲಿ ಅಲ್ಪ ಸಮಯದ ಶುಷ್ಕ ಹವಾಮಾನವನ್ನು ಜನವರಿಯಿಂದ ಏಪ್ರಿಲ್‌ವರೆಗೆ, ಸುಧೀರ್ಘ ತೇವಪೂರಿತ ಋತುಮಾನ ಮೇಯಿಂದ ಡಿಸೆಂಬರ್ ವರೆಗೆ ಹೊಂದಿದೆ.


Manila, Philippinesದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
Source: http://www.bbc.co.uk/weather/world/city_guides/results.shtml?tt=TT002730

ಪರಿಸರ ಸಮಸ್ಯೆಗಳು[ಬದಲಾಯಿಸಿ]

ಚಿತ್ರ:Manila Smog.jpg
ಮನಿಲಾದ ಮುಂಜಾವಿನ ಮಂಜು

ಭೌಗೋಳಿಕ ಕಾರಣಗಳಿಂದಾಗಿ, ಸ್ವಯಂ ಚಾಲಿತ ವಾಹನಗಳ ಮೇಲೆ ಹೆಚ್ಚು ನೆಚ್ಚಿಕೊಂಡಿರುವ ಕಾರಣ ಮನಿಲಾ ಹೊಗೆ ಮಂಜಿನಂತಹ ವಾಯುಮಾಲಿನ್ಯ[೮][೧೫] ಪೀಡಿತವಾಗಿದೆ.[೧೬] ಇದು ೯೮% ನಗರ ನಿವಾಸಿಗಳ ಮೇಲೆ ಪರಿಣಾಮ ಬೀರುತ್ತದೆ.[೧೭] ತರದ ಜಾಗದಲ್ಲಿ ಕಸ ಹಾಕುವುದು, ಮತ್ತು ಕೈಗಾರಿಕಾ ತ್ಯಾಜ್ಯಗಳು ನಗರದೊಳಗೆ ಮಲಿನತೆ ಹೆಚ್ಚಗುವಂತೆ ಮಾಡಿವೆ.[೧೮] ನದಿಗಳು ಹಾಗೂ ಸಮುದ್ರ ತಟಗಳನ್ನು ಜೀವ ಶಾಸ್ತ್ರದನುಸಾರ ಸತ್ತೇ ಹೋಗಿವೆ. ಮನಿಲಾದ ಉತ್ತರಕ್ಕಿರುವ ಟಿನೊಜಿರೋಸ್- ತುಲ್ಹಹಾನ್ ನದಿ ಅತಿ ಹೆಚ್ಚು ಮಲಿನವಾದ ನದಿಯೆಂದು ಪರಿಗಣಿಸಲಾಗಿದೆ. ಮೂಲ ಸೌಕರ್ಯಗಳ ಕೊರತೆಯು ನಗರದ ಮಾಲಿನ್ಯತೆಗೆ ಕಾರಣಗಳಲ್ಲೊಂದು. ಎರ್ಮಿಟಾ ಜಿಲ್ಲೆಯು ಅತ್ಯಂತ ಹೆಚ್ಚು ವಾಯುಮಾಲಿನ್ಯ ಹೊಂದಿದ ಜಿಲ್ಲೆಯಾಗಿತ್ತು.[೧೮] ಮನಿಲಾ ಮತ್ತು ಅದರ ಮಹಾನಗರ ಪಾಲಿಕೆ ಪ್ರದೇಶಗಳು ಪ್ರಪಂಚದ ನಾಲ್ಕನೆಯ ಅತಿ ಹೆಚ್ಚು ಮಾಲಿನ್ಯ ಹೊಂದಿದ ನಗರವಾಗಿದೆ[೧೯], ಇದರ ವಾಯುಮಾಲಿನ್ಯ ತಾಳಬಲ್ಲ ಮಾಲಿನ್ಯಕ್ಕಿಂತ ೩೦೦% ಹೆಚ್ಚಾಗಿದೆ.[೧೮]

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

ಜನಸಂಖ್ಯಾ ಸಾಂದ್ರತೆ[ಬದಲಾಯಿಸಿ]

೧,೬೬೦,೭೧೪ ಜನಸಂಖ್ಯೆ ಹೊಂದಿದೆ (೨೦೦೦ರ ಜನಗಣತಿಯ ದತ್ತಾಂಶಗಳ ಆಧಾರದ ಮೇಲೆ[೧]) ಮತ್ತು ಪ್ರದೇಶದ ವಿಸ್ತೀರ್ಣ ೩೮.೫೫ km2, ಮನಿಲಾವು ವಿಶ್ವದಲ್ಲೇ ಹೆಚ್ಚು ಅಂದರೆ ಪ್ರತಿ ಕಿಮೀಗೆ ೪೩,೦೭೯ ಜನರನ್ನು ಹೊಂದಿದ್ದು ಅತಿ ಹೆಚ್ಚು ದಟ್ಟ ಜನಸಂಖ್ಯೆ ಹೊಂದಿದ ನಗರ 2[೨] ಪ್ರತಿ ಕಿಲೋಮೀಟರ್‌ಗೆ ೬೮,೨೬೬ ಜನರನ್ನು ಹೊಂದಿರುವ ೬ ಜಿಲ್ಲೆಗಳನ್ನು ಪಟ್ಟಿ ಮಾಡಲಾಗಿದೆ2, ಮೊದಲ ಎರಡು ಜಿಲ್ಲೆಗಳಲ್ಲಿ ಕ್ರಮವಾಗಿ ೬೪,೯೩೬ ಮತ್ತು ೬೪,೭೧೦ನಷ್ಟಿದೆ, ಮತ್ತು ೫ ಜಿಲ್ಲೆಗಳಲ್ಲಿ ಕನಿಷ್ಟ ೧೯,೨೩೫ನಷ್ಟಿದೆ.[೨೦] ೨೦೦೭ ರ ಜನಗಣತಿಯ ಸಂಖ್ಯೆಗಳು ತೋರಿಸುವಂತೆ ಜನಸಂಖ್ಯೆಯು ೧,೬೬೦,೭೧೪ನಷ್ಟಿತ್ತು, ಪ್ರತಿ ಕಿಲೋಮೀಟರ್‌ಗೆ ೪೩,೦೭೯ನಷ್ಟು ಜನರು2.[೧] ಮನಿಲಾದ ಜನಸಂಖ್ಯೆಯಲ್ಲಿ ೯೧.೫% ಕ್ರಿಶ್ಚಿಯನ್ನರು, ೪% ಮುಸ್ಲಿಮ್, ೧.೫% ಚೀನೀಯರು ಮತ್ತು ೩% ಇತರೆ ಸಂಪ್ರದಾಯದವರು ಇದ್ದಾರೆ.[೨೧]

ಮನಿಲಾದ ಜನಸಂಖ್ಯೆಯ ಸಾಂದ್ರತೆಯು ಹೆಚ್ಚಾಗಿದೆ, ಪ್ಯಾರಿಸ್ (ಪ್ರತಿ kmಗೆ ಇರುವ ನಿವಾಸಿಗಳ ಸಂಖ್ಯೆ ೨೦,೧೬೪ 2), ಬುಯೆನಸ್ ಏರೆಸ್ (ಪ್ರತಿ kmಗೆ ಇರುವ ನಿವಾಸಿಗಳ ಸಂಖ್ಯೆ ೧೫,೦೨೮ 2), ಮೆಕ್ಸಿಕೊ ನಗರ (ಪ್ರತಿ kmಗೆ ಇರುವ ನಿವಾಸಿಗಳ ಸಂಖ್ಯೆ ೧೧,೭೦೦ 2), ಇಸ್ತಾನ್‌ಬುಲ್ (ಪ್ರತಿ kmಗೆ ಇರುವ ನಿವಾಸಿಗಳ ಸಂಖ್ಯೆ ೧,೮೭೮ 2), ಇದರ ಫತೀಹ್ ಜಿಲ್ಲೆಯಲ್ಲಿ ಹೆಚ್ಚಿನ ಸಾಂದ್ರತೆ ಇದೆ ೪೮,೧೭೩, ಶಾಂಘಾಯ್ (ಪ್ರತಿ kmಗೆ ಇರುವ ನಿವಾಸಿಗಳ ಸಂಖ್ಯೆ ೧೬,೩೬೪ 2), ಇದರ ಜಿಲ್ಲೆ ನಂಶಿಯ ಸಾಂದ್ರತೆ ೫೬,೭೮೫ ), ಮತ್ತು ಟೋಕಿಯೊ (ಪ್ರತಿ kmಗೆ ಇರುವ ನಿವಾಸಿಗಳ ಸಂಖ್ಯೆ ೧೦,೦೮೭ 2).[೨೨]

ಆದರೆ ಎಲ್ಲಾ ನಗರ ಪ್ರದೇಶವನ್ನು ಲೆಕ್ಕಾಚಾರ ಮಾಡಿದರೆ, ಮೆಟ್ರೋ ಮನಿಲಾವು ಪ್ರತಿ kmಗೆ ೧೨,೫೫೦ ಜನರನ್ನು ಹೊಂದಿ ೮೫ನೆಯ ಸ್ಥಾನದಲ್ಲಿದೆ2 ಪ್ರದೇಶದ ವಿಸ್ತೀರ್ಣ ೧,೩೩೪ km2, ಇದರಲ್ಲಿ ಗ್ರೇಟರ್ ಮನಿಲಾ ಏರಿಯಾ ಸೇರಿದೆ, ಸೆಬಿ ನಗರವು ೮೦ನೆಯ ಸ್ಥಾನದಲ್ಲಿದೆ.[೨೨][೨೩]

ಫಿಲಿಪೈನ್ಸ್‌ನಲ್ಲಿ ಮನಿಲಾವು ಎರಡನೆಯ ಹೆಚ್ಚು ಜನಸಂಖ್ಯೆ ಹೊಂದಿದ ನಗರವಾಗಿತ್ತು, ಹಾಗೂ ನಗರವು "Beta+" ಗ್ಲೋಬಲ್ ಸಿಟಿ ಎಂದು ಗ್ಲೋಬಲೈಸೇಶನ್ ಮತ್ತು ವಿಶ್ವ ನಗರಗಳ ಅಧ್ಯಯನ ತಂಡ ಮತ್ತು ೨೦೦೮ರ ನೆಟ್‍ವರ್ಕ್‌ನಿಂದ ವರ್ಗೀಕೃತಗೊಂಡಿದೆ.[೨೪]

ಭಾಷೆಗಳು[ಬದಲಾಯಿಸಿ]

ಫಿಲಿಪಿನೊ ದೇಶೀ ಭಾಷೆಯಾಗಿದೆ, ಇದು ಸುತ್ತಮುತ್ತಲ ಪ್ರದೇಶಗಳ ಆಡು ಮಾತಿನಿಂದ ಆಧಾರಿತವಾಗಿದ್ದು, ಇದರ ಮನಿಲಾ ಜನ ಮಾತಾಡುವ ಆಡುಭಾಷೆಯು ಅವ್ಯಕವಾದ ಫಿಲಿಪೈನಿನ ಸಂಪರ್ಕ ಭಾಷೆಯಾಗಿದೆ, ಇದೇಗ ಸಮೂಹ ಮಾಧ್ಯಮಗಳು ಹಾಗೂ ಮನರಂಜನೆಗಳಿಂದಾಗಿ ದ್ವೀಪ ಸಮೂಹದಲ್ಲೆಲ್ಲಾ ವ್ಯಾಪಕವಾಗಿ ಹರಡಿದೆ. ಈ ಮಧ್ಯೆ, ಇಂಗ್ಲಿಷ್ ಭಾಷೆಯನ್ನು ವಿದ್ಯಾಭ್ಯಾಸ ಮತ್ತು ವ್ಯಾಪಾರದಲ್ಲಿ ಮೆಟ್ರೋ-ಮನಿಲಾ ವಲಯದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಹೆಚ್ಚು ಸಂಖ್ಯೆಯ ಹಿರಿಯ ನಿವಾಸಿಗಳು ಈಗಲೂ ಸ್ಪ್ಯಾನಿಷ್ ಭಾಷೆ ಮಾತನಾಡುತ್ತಾರೆ. ಇದು ಫಿಲಿಪ್ಪೈನ್‌ನ ವಿಶ್ವ ವಿದ್ಯಾಲಯಗಳಲ್ಲಿ ಮತ್ತು ಕಾಲೇಜುಗಳಲ್ಲಿ ಬೋಧನಾ ವಿಷಯಗಳಲ್ಲಿ ಕಡ್ಡಾಯವಾಗಿತ್ತು. ಯೂರೋಪು, ಅರಬ್. ಭಾರತೀಯ, ಲ್ಯಾಟಿನ್ ಅಥವಾ ಇತರೆ ವಲಸೆಗಾರರು ಮತ್ತು ತಮ್ಮ ದೇಶದ ನಾಗರೀಕತೆ ತೊರೆದವರ ಉಪಯೋಗಕ್ಕೆ ಇಂಗ್ಲಿಷ್ ಫಿಲಿಪೊನೊ ಬಳಸುತ್ತಾರೆ. ಮಿನ್ನನ್ ಚೈನೀಸ್ (ಲನ್ನಂಗ್-ಒಯೆ ಎಂದು ಕರೆಯಲಾಗುವ)ಯನ್ನು ನಗರದ ಚೀನಿ-ಫಿಲಿನೊ ಸಮುದಾಯದವರು ಬಳಸುತ್ತಾರೆ.

ಆರ್ಥಿಕ ವ್ಯವಸ್ಥೆ/ಆರ್ಥಿಕತೆ[ಬದಲಾಯಿಸಿ]

ಪೊಬ್ಲಾಸಿಯನ್‌ನಲ್ಲಿ ರೊಕ್ಸಾಸ್ ಬೊಲೆವರ್ಡ್‌ನ ದೃಶ್ಯ, ಇದು ಮನಿಲಾದ ನಗರ ಪ್ರದೇಶದ ಕೇಂದ್ರವಾಗಿದೆ.

ಮನಿಲಾದ ಅರ್ಥ ವ್ಯವಸ್ಥೆ ಬಹು ಮುಖೀಯ ಮತ್ತು ಅನೇಕ ವೈವಿದ್ಯವುಳ್ಳದ್ದಾಗಿದೆ. ಅತ್ಯುತ್ತಮವಾದದ್ದು, ಸುರಕ್ಷಿತ ಬಂದರುಕಟ್ಟೆ ಹೊಂದಿರುವ ಮನಿಲಾ ರಾಷ್ಟ್ರದ ಪ್ರಮುಖ ಬಂದರಾಗಿ ಸೇವೆ ಸಲ್ಲಿಸುತ್ತಾ ಇದೆ. ಇದಲ್ಲದೆ, ಮನಿಲಾ ಫಿಲಿಪ್ಪೈನ್ಸ್ ದೇಶದ ಪ್ರಮುಖ ಪ್ರಕಾಶನ ಕೇಂದ್ರವೂ ಆಗಿದೆ.[೨೫]

ಬಗೆ ಬಗೆಯ ಉತ್ಪಾದಕರು, ಕೈಗಾರಿಕೆ ಸಂಬಂಧಿತ ರಸಾಯನಿಕಗಳು, ಬಟ್ಟೆಗಳು, ಉಡುಪುಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಉತ್ಪಾದಿಸುತ್ತಾರೆ. ಆಹಾರ ಮತ್ತು ಪಾನೀಯಗಳು ಹಾಗೂ ತಂಬಾಕು ಉತ್ಪಾದನೆಗಳು ಹೆಚ್ಚಿನ ಸಂಖ್ಯೆಯ ನಾಗರೀಕರಿಗೆ ಕೆಲಸ ಒದಗಿಸುತ್ತವೆ. ಇದಕ್ಕೆ ಜೊತೆಯಾಗಿ, ಸ್ಥಳೀಯ ಉದ್ಯಮಿಗಳು ಮೂಲ ಸಾಮಗ್ರಿಗಳನ್ನು ಸಂಸ್ಕರಿಸಿ ರಫ್ತು ಮಾಡುತ್ತಾರೆ, ಹಗ್ಗ, ಪ್ಲೈವುಡ್, ಸುಧಾರಿಸಿದ ಸಕ್ಕರೆ , ಕೊಬ್ಬರಿ, ಮತ್ತು ಕೊಬ್ಬರಿ ಎಣ್ಣೆ.[೨೫] ನಗರದ ಆಹಾರ ಸಂಸ್ಕರಣಾ ಉದ್ಯಮವು ಸ್ಥಿರವಾದ ಪ್ರಮುಖ ಉತ್ಪಾದನಾ ಕ್ಷೇತ್ರವಾಗಿದೆ.

ಪ್ರವಾಸೋದ್ಯಮ ಕೂಡಾ ಒಂದು ವೇಗವಾಗಿ ಬೆಳೆಯುತ್ತಿರುವ ಉದ್ಯಮವಾಗಿದೆ. ದೇಶದ ಪ್ರಮುಖ ಪ್ರವಾಸ ತಾಣವಾಗಿರುವ ನಗರವು ಒಂದು ಮಿಲಿಯನ್[೨೫] ಪ್ರವಾಸಿಗರನ್ನು ಪ್ರಪಂಚದಾದ್ಯಂತ ವಾರ್ಷಿಕವಾಗಿ ಆಕರ್ಷಿಸುತ್ತದೆ. ಬಹಳಷ್ಟು ಪ್ರವಾಸಿ ತಾಣಗಳು ಬಿನಂಡೊ, ಎರ್ಮಿಟಾ, ಮಾಲೇಟ್ ಮತ್ತು ಹಳೆಯ ಹೊರಗೋಡೆಯಾವೃತ ನಗರ, ಇಂಟ್ರಾಮುರೊಸ್ ಜಿಲ್ಲೆಗಳಲ್ಲಿವೆ.

ಆಧುನಿಕ ಖರೀದಿ ಮಾಲ್‌ಗಳು ನಗರದಲ್ಲಿ ಅಲ್ಲಲ್ಲಿವೆ. ವಿಶೇಷವಾಗಿ ಮಲೇಟ್ ಮತ್ತು ಎರ್ಮಿಟಾ ಕ್ಷೇತ್ರಗಳಲ್ಲಿವೆ. ಮನಿಲಾ ನಗರ ಕೇಂದ್ರದ ಹಿಂದೆ SM ಸಿಟಿ ಮನಿಲಾ ಎಂಬ ದೇಶದ ಅತಿ ದೊಡ್ಡ ಮಾಲ್‌ಗಳ ಜಾಲದ ಒಂದು ಭಾಗ ಎದ್ದು ನಿಂತಿದೆ. SM ಸಿಟಿ ಮನಿಲಾದ, ಜೊತೆ ಇನ್ನೂ ಎರಡು SM ಸೂಪರ್‌ಮಾಲ್‌ಗಳನ್ನು ನಗರದಲ್ಲಿ ಸ್ಥಾಪಿಸಲಾಗಿದೆ, SM ಸಿಟಿ ಸಾಂತಾ ಮೆಸಾ ಮತ್ತು SM ಸಿಟಿ ಸ್ಯಾನ್ ಲಜಾರೊ, ಇವು ಬಹು ಅಮೂಲ್ಯವಾದ ಮುಂಚೂಣಿಯಲ್ಲಿರುವ ನಗರದ ಮಾಲ್‌ಗಳಾಗಿವೆ. ಮನಿಲಾದ ಇನ್ನೂ ಕೆಲವು ಹೆಸರಾಂತ ಮುಂಚೂಣಿ ಮಳಿಗೆಗಳೆಂದರೆ ರಾಬಿನ್ಸನ್ಸ್ ಪ್ಲೇಸ್ ಮನಿಲಾ, ಇದು ನಗರದ ಅತಿ ದೊಡ್ಡ ಮಾಲ್, ಮತ್ತು ಹ್ಯಾರಿಸನ್ ಪ್ಲಾಜಾ ನಗರದ ಅತಿ ಹಳೆಯ ವ್ಯಾಪಾರಿ ಮಳಿಗೆಗಳಲ್ಲಿ ಒಂದಾಗಿದೆ.

ಪೋರ್ಟ್ ಏರಿಯಾ ಬಿಟ್ಟು ಪ್ರತಿಯೊಂದು ಸಿಟಿಯ ಜಿಲ್ಲೆಯು ತಮ್ಮದೇ ಆದ ಸಾರ್ವಜನಿಕ ಮಾರುಕಟ್ಟೆಗಳನ್ನು ಹೊಂದಿವೆ, ಸ್ಥಳೀಯವಾಗಿ ಇವನ್ನು ಪಮಿಲಿಹ್ಯಾಂಗ್ ಬಯಾನ್ ಅಥವಾ ಪಾಲೆಂಗ್ಕೆ ಎಂದು ಕರೆಯುತ್ತಾರೆ. ಸಾರ್ವಜನಿಕ ಮಾರುಕಟ್ಟೆಗಳನ್ನು ಎರಡು ವಿಭಾಗಗಳನ್ನಾಗಿ ಭಾಗಿಸಲಾಗಿದೆ. ಅವೆಂದರೆ ಒಣ ವಸ್ತುಗಳ ವಿಭಾಗ ಮತ್ತು ಒದ್ದೆ ವಸ್ತುಗಳ ವಿಭಾಗ. ಈ ಸಾರ್ವಜನಿಕ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜನನಿಬಿಡವಾಗಿದ್ದು ವಿಶೇಷವಾಗಿ ಮುಂಜಾವಿನಲ್ಲಿ ಚಟುವಟಿಕೆ ಹೆಚ್ಚು. ಆಟಿಯಂಜಾ ಆಡಳಿತದ ನಗರ ಪುನರ್ನಿರ್ಮಾಣ ಕಾರ್ಯಕ್ರಮದಡಿ ಕೆಲವು ಸಾರ್ವಜನಿಕ ಮಾರುಕಟ್ಟೆಗಳಾನ್ನು ಸುಧಾರಿಸಿ ಹೊಸ ರೂಪವನ್ನು ನೀಡಲಾಗಿದೆ. ಅತ್ಯಂತ ಆಧುನಿಕ ನಗರವಾಗಿದ್ದರೂ, ಡಿವಿಸೋರಿಯಾ ಮತ್ತು ಕ್ವಿಯಾಪೊ ಕ್ಷೇತ್ರಗಳಲ್ಲಿ ಅಲ್ಪಬೆಲೆಯ ಮಾರುಕಟ್ಟೆಗಳಿವೆ. ಇಲ್ಲಿ ಕಡಿಮೆ ಬೆಲೆಯ ಅಥವಾ ಅತ್ಯಂತ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಲಾಗುತ್ತದೆ.

ಸಂಸ್ಕೃತಿ ಮತ್ತು ಸಮಕಾಲೀನ ಜೀವನ[ಬದಲಾಯಿಸಿ]

ಹಬ್ಬಗಳು[ಬದಲಾಯಿಸಿ]

ನಗರದಲ್ಲಿ ಹಲವಾರು ಕಾರ್ಯಕ್ರಮಗಳು ನಡೆಯುತ್ತವೆ. ಮನಿಲಾ ದಿವಸವನ್ನು ಪ್ರತಿವರ್ಷ ಜೂನ್ ೨೪ರಂದು ಆಚರಿಸಲಾಗುತ್ತದೆ. ಇಂದೂ ವಾರ್ಷಿಕ ರಜಾದಿನವಾಗಿದ್ದು ಜಾನ್ ದಿ ಬ್ಯಾಪ್ಟಿಸ್ಟ್ ಪ್ರೋತ್ಸಾಹದಿಂದ ಆಚರಿಸಲಾಗುತ್ತದೆ. ಫೀಸ್ಟ್ ಆಫ್ ಬ್ಲಾಕ್ ನಜರಿನ್ ಪ್ರತಿ ವರ್ಷದ ಜನವರಿ ೯ರಂದು ನಡೆದು ಸಾವಿರಾರು ಭಕ್ತರನ್ನು ಆಕರ್ಷಿಸುತ್ತಿತ್ತು. ಪ್ರತಿಯೊಂದು ಜಿಲ್ಲೆಯೂ ಕೂಡಾ ತನ್ನದೇ ಆದ ಫಿಯೆಸ್ಟಾ ಹಬ್ಬ , ಉತ್ಸವಗಳನ್ನು ತಮ್ಮ ಹಕ್ಕುಗಳ ಮನ್ನಣೆ ಪಡೆದ ದಿನವಾಗಿ ಆಚರಿಸುತ್ತದೆ.

ವಸ್ತು ಸಂಗ್ರಹಾಲಯಗಳು[ಬದಲಾಯಿಸಿ]

thumb|right|250px|ಫಿಲಿಪೈನ್ಸ್‌ನ ರಾಷ್ಟ್ರೀಯ ವಸ್ತುಸಂಗ್ರಹಾಲಯ

ಫಿಲಿಪ್ಪೈನ್ಸ್‌ನ ಸಾಂಸ್ಕೃತಿಕ ತಾಣವಾದ ಮನಿಲದಲ್ಲಿ ಗಮನೀಯವಾದ ವಸ್ತು ಸಂಗ್ರಹಾಲಯಗಳಿವೆ. ಬಹಾಯ್ ಸಿನೋಯ್ ಒಂದು ಮನಿಲಾದ ಪ್ರಮುಖ ವಸ್ತು ಸಂಗ್ರಹಾಲಯವಾಗಿದ್ದು ಚೀನೀಯರ ಜೀವನ ಮತ್ತು ಫಿಲಿಪೈನ ಐತಿಹಾಸಕ್ಕೆ ಅವರು ನೀಡಿದ ಕೊಡುಗೆಗಳನ್ನು ದಾಖಲಿಸುತ್ತದೆ. ದಿ ಇಂಟ್ರಾಮರಸ್ ಬೆಳಕು ಮತ್ತು ಶಬ್ಧದ ವಸ್ತು ಭಂಡಾರ ಫಿಲಿಪೈನರ ಸ್ವಾತಂತ್ರದ ಆಸೆ ರಿಸಾಲ್‍ನ ನೇತೃತ್ವದಲ್ಲಿನ ಕ್ರಾಂತಿ ಮತ್ತು ಇತರೆ ಕ್ರಾಂತಿಕಾರಿ ನಾಯಕರ ಕಾಲಾನುಕ್ರಮಣಿಕೆ ಹೊಂದಿದೆ. ಮನಿಲಾದ ಮೆಟ್ರೋಪಾಲಿಟನ್ ವಸ್ತು ಸಂಗ್ರಹಾಲಯವು ಫಿಲಿಪಿನೋ ಕಲೆ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ. ದೇಶದ ಇತರೆ ಗಮನೀಯ ವಸ್ತು ಸಂಗ್ರಹಾಲಯಗಳನ್ನು ಮನಿಲಾ ಹೊಂದಿದೆ, ಅವೆಂದರೆ.

ಮ್ಯೂಸಿಯಂ ಪಂಬಾಟ, ಒಂದು ಮಕ್ಕಳ ವಸ್ತುಸಂಗ್ರಹಾಲಯ, ರಾಜಕೀಯ ಇತಿಹಾಸದ ವಸ್ತು ಸಂಗ್ರಹಾಲಯ ಇದು ದೇಶದ ಗಮನೀಯ ರಾಜಕೀಯ ಸಂದರ್ಭಗಳನ್ನು ಪ್ರದರ್ಶಿಸುತ್ತದೆ, ಫಿಲಿಪಿನೊ ಜನರ ರಾಷ್ಟ್ರೀಯ ವಸ್ತುಸಂಗ್ರಹಾಲಯ ಮತ್ತು ಫಿಲಿಪ್ಪೈನರ ರಾಷ್ಟ್ರೀಯ ವಸ್ತುಸಂಗ್ರಹಾಲಯ ಇವೆರಡೂ ಸಹ ದೇಶದ ಜೀವನ, ಸಂಸ್ಕೃತಿ ಮತ್ತು ಇತಿಹಾಸವನ್ನು ಪ್ರದರ್ಶಿಸುತ್ತವೆ, ದಿ ಪ್ಯಾರಿಶ್ ಆಫ್ ದಿ ಅವರ್ ಲೇಡಿ ಆಫ್ ಅಬಂಡನ್ಡ್ ಮತ್ತು ಸ್ಯಾನ್ ಅಗಸ್ಟನ್ ಚರ್ಚ್ ವಸ್ತು ಸಂಗ್ರಹಾಲಯಗಳು ಧಾರ್ಮಿಕ ಕುಶಲ ವಸ್ತುಗಳನ್ನು ಪ್ರದರ್ಶಿಸುತ್ತವೆ, ಪ್ಲಾಝಾ ಸ್ಯಾನ್ ಲೂಯಿಸ್, ಇದೊಂದು ಸಾರ್ವಜನಿಕ ವಸ್ತು ಸಂಗ್ರಹಾಲಯ UST ಕಲೆ ಮತ್ತು ವಿಜ್ಞಾನಗಳ ವಸ್ತು ಸಂಗ್ರಹಾಲಯ ಮತ್ತು DLS-CSB ಸಮಕಾಲೀನ ಕಲೆ ಮತ್ತು ವಿನ್ಯಾಸದ ವಸ್ತು ಸಂಗ್ರಹಾಲಯ (mcad), ಇವೆರಡೂ ವಿಶ್ವವಿದ್ಯಾಲಯದ ವಸ್ತು ಬಂಡಾರಗಳಾಗಿದ್ದು ವಿಜ್ಞಾನ, ತಂತ್ರಜ್ಞಾನ ಮತ್ತು ಸಮಕಾಲೀನ ಕಲೆಗಳಿಗೆ ಕ್ರಮವಾಗಿ ಸಮರ್ಪಿತವಾಗಿದೆ.

ಧರ್ಮ[ಬದಲಾಯಿಸಿ]

ಮನಿಲಾದ ಬಹುದೇಶೀಯ ಪರಿಸರ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳು ಅಸಂಖ್ಯಾತ ನಗರದ ತುಂಬಾ ಇರುವ ಆರಾಧನಾ ಸ್ಥಾನಗಳಲ್ಲಿ ಪ್ರತಿಬಿಂಬಿಸಿದೆ. ಗಣರಾಜ್ಯದ ಸ್ಥಾಪನೆಯಿಂದ ದೊರೆತ ಫಿಲಿಪ್ಪೈನಿನ ಆರಾಧನಾ ಸ್ವಾತಂತ್ರ್ಯವು, ವಿವಿಧ ಜನಸಮುದಾಯಗಳು ತಮ್ಮ ಪವಿತ್ರ ಸ್ಥಾನಗಳನ್ನು ಶಿಕ್ಷೆಯ ಭಯವಿಲ್ಲದೇ ಕಟ್ಟಿಕೊಳ್ಳಲು ಅನುಮತಿಸುತ್ತದೆ. ವಿವಿಧ ಧರ್ಮೀಯ ಜನರು ಇಲ್ಲಿ ಇವುಗಳ ಇರುವಿಕೆಯಿಂದ ಪ್ರತಿನಿಧಿಸುವರು, ಕ್ರೈಸ್ತರ ಚರ್ಚುಗಳು, ಬೌದ್ಧ ಮಂದಿರಗಳು, ಯಹೂದಿ ಸೀನಗಾಗ್‌ಗಳು ಮತ್ತು ಇಸ್ಲಾಮಿನ ಮಸೀದಿಗಳು.

ಬೆಸಿಲಿಕಾ ಮಿನೊರ್ ಡೆ ಸ್ಯಾನ್ ಸೆಬಾಸ್ಟಿಯನ್, ಏಷಿಯಾದ ಏಕೈಕ ಸ್ಟೀಲ್ ಚರ್ಚ್.

ರೋಮನ್ ಕ್ಯಾಥೊಲಿಕ್ ಧರ್ಮವು ನಗರದ ಪ್ರಧಾನ ಧರ್ಮವಾಗಿದೆ. ನಗರದ ಎಲ್ಲಾ ಸಮುದಾಯದ ಜನರು ರೋಮನ್ ಕ್ಯಾಥೊಲಿಕರಾಗಿದ್ದಾರೆ. ಮನಿಲಾ ನಗರ ಮನಿಲಾ ಧರ್ಮ ಪ್ರದೇಶದ ಸ್ಥಾನವಾಗಿದೆ, ದೇಶದ ಅತಿ ಪುರಾತನ ಧರ್ಮ ಪ್ರದೇಶವಾಗಿದೆ, ಫಿಲಿಪ್ಪೈನ್‌ನ ಅಗ್ರಗಣ್ಯ ಧರ್ಮಪ್ರದೇಶವಾಗಿದೆ.[೨೬] ಆರ್ಕಡಿಯೊಸಿಸ್‌ನ ಕಚೇರಿಗಳು ಇಂಟ್ರಾಮುರೊನ ಮೈನರ್ ಬೆಸಿಲಿಕಾ ಆಫ್ ದಿ ಇಮ್ಯಾಕ್ಯುಲೇಟ್ ಕಾನ್ಸೆಪ್ಷನ್ ಕ್ರೈಸ್ತ ದೇವಾಲಯದಲ್ಲಿದೆ.

ಮನಿಲಾ ಕ್ಯಾಥೆಡ್ರಿಲ್ ಅಲ್ಲದೆ ಮನಿಲಾ ಇನ್ನೂ ಮೂರು ಬೆಸಲಿಕಾ ಕ್ರೈಸ್ತ ದೇವಾಲಯಗಳ ತಾಣವಾಗಿದೆ, ಮೇಲೆ ತಿಳಿಸಿದ ಇದರ ಹೆಸರು ಮೈನರ್ ಬೆಸಿಲಿಕಾ ಆಫ್ ಬ್ಲಾಕ್ ನಜರೀನ್, ಮೈನರ್ ಬೆಸಿಲಿಕಾ ಆಫ್ ಸೇಂಟ್ ಲೊರೆಂಜೋ ರೂಜ್ ಮತ್ತು ಬೆಸಿಲಿಕಾ ಮೈನರ್ ಡೆ ಸ್ಯಾನ್ ಸೆಬಾಸ್ಟಿಯನ್.

ಕಳೆದ ಶತಮಾನಗಳಲ್ಲಿ ಸ್ಪೆಯಿನಿಗರ ನೆಲೆಪಾಳಯ ಸರ್ಕಾರದ ಸ್ಥಾನವಾಗಿದ್ದರಿಂದ ಫಿಲಿಪ್ಪೈನ್ ದೇಶವನ್ನು ಅನೇಕ ರೋಮನ್ ಕ್ಯಾಥೊಲಿಕ್ ಮತ್ತು ಪ್ರಸಾರಕರು ಒಂದು ಆಧಾರ ಕೇಂದ್ರವನ್ನಾಗಿ ಮಾಡಿಕೊಂಡರು. ಫಿಲಿಪೈನ್ಸ್‌ನ ಧಾರ್ಮಿಕ ಶ್ರೇಣಿಯಲ್ಲಿ ಡೊಮಿನಿಕನ್ನರು, ಜೆಸುಟರು, ಫ್ರಾನ್ಸಿಕನ್ನರು, ಆಗಸ್ಟಿನಿಯನ್ನರು, ಆಗಸ್ಟಿನಿಯನ್ ರಿಕಲೆಕ್ಟ್ಸ್, ಬೆನೆಡಿಕ್ಟಿನ್ನರು, ಸೇಂಟ್ ಪಾಲ್ ಆಫ್ ಚಾರ್ಟೆಸ್‌ನ ಸಹೋದರಿಯರು, ವಿನ್ಸೆಂಟಿಯನ್ ಫಾದರ್ಸ್, ಇಮ್ಯಾಕುಲೇಟಿ ಕಾರ್ಡಿಸ್ ಮ್ಯಾರಿಯೆದ ಕಾಂಗ್ರೆಗೇಶಿಯೊ, ಮತ್ತು ಡಿ ಲಾ ಸಲ್ಲೆ ಕ್ರಿಶ್ಚಿಯನ್ ಸಹೋದರರು ಒಳಗೊಂಡಿದ್ದಾರೆ.

ಮನಿಲಾ ಕ್ಯಾಥೆಡ್ರಲ್‌ನ ಹೊರಭಾಗ, ಮನಿಲಾ ನಗರದಲ್ಲಿರುವ ಬೆಸಿಲಿಕಾಸ್‌ಗಳಲ್ಲೊಂದು.

ನಗರದ ಇತರೆ ಗಮನೀಯ ಚರ್ಚುಗಳೆಂದರೆ ಇಂಟ್ರಾಮುರೊನಲ್ಲಿರುವ ಸ್ಯಾನ್ ಆಗಸ್ಟಿನ್ ಚರ್ಚ್,UNESCO ವಿಶ್ವ ಪರಂಪರೆಯ ತಾಣವಾಗಿರುವ ವಿಧಿಬದ್ಧವಾಗಿ ಕಿರೀಟಧಾರಣೆ ಮಾಡಿದ ನ್ಯೂಸ್ಟ್ರಾ ಸೆನೊಂರೊ ಡಿ ಕನ್ಸೂಲೇಶನ್ y ಕೊರೆಯಾ ಪುಣ್ಯಸ್ಥಾನ ಮತ್ತು ಗಣ್ಯವ್ಯಕ್ತಿಗಳು ಮದುವೆಯಾಗಲು ಬಯಸುವ ಪೂರ್ತಿ ಹವಾ ನಿಯಂತ್ರಿತ ಎರಡು ಚರ್ಚುಗಳು, ಬೆಸಲಿಕಾ ಮೈನೂರೆ ಡಿ ಸ್ಯಾನ್ ಲೊರೆಂಜೊ ರೂಯಿಜ್ ಎಂದು ಕರೆಯಲಾಗುವ ಬಿನೊಂಡೊ ಚರ್ಚ್,[೨೬] ಮಲಾಟೆ ಚರ್ಚ್ ದಿ ಶ್ರೈನ್ ಆಫ್ ನ್ಯೂಸ್ಟ್ರಾಸಿನೊ ರಾ ಡಿ ರೆಮೆಡಿಯೋಸ್ ಎರ್ಮಿಟಾದಲ್ಲಿರುವ ದೇಶದಲ್ಲೇ ಅತಿ ಪ್ರಾಚೀನ ಮರಿಯನ್ ವಿಗ್ರಹವಿರುವ ನ್ಯೂಸ್ಟ್ರಾ ಸೆನೊರಾ ಡಿ ಗಯಾ ಚರ್ಚ್, ಟೊಡೋದಲ್ಲಿರುವ ಶತಮಾನದಷ್ಟು ಹಳೆಯದಾದ Sto. ಪ್ರತಿಮೆ ಇರುವ ಚರ್ಚ್. ನಿನೊ (ಬಾಲ ಏಸು); ಮತ್ತು Sta. ಅನಾ ಚರ್ಚ್, ವಿಧಿ ಬದ್ಧವಾಗಿ ಕಿರೀಟವಿರಿಸಿದ ನ್ಯೂಸ್ಟ್ರಾ ಸಿನೊರಾ ಡಿ ಲಾಸ್ ಡೆಸಂಪರಡೊಸ್.

ಪ್ರೊಟೆಸ್ಟ್ಯಾಂಟಿಸಮ್ ನಗರದ ಎರಡನೆಯ ದೊಡ್ಡ ಧರ್ಮವಾಗಿದೆ. ಮನಿಲಾ ಕೆಲವು ಅತಿ ಪ್ರಾಚೀನ ಮತ್ತು ದೊಡ್ಡವಾದ ಫಿಲಿಪೈನ್‌ನ ಪ್ರೊಟೆಸ್ಟೆಂಟ್ ಚರ್ಚ್‌ಗಳ ತಾಣವಾಗಿವೆ. ಅಮೆರಿಕನ್ ಧರ್ಮಪ್ರಸಾರಕರು ಸ್ಥಾಪಿಸಿದ ಬಹುಪಾಲು ಹಳೆಯ ಚರ್ಚುಗಳು ನಗರದ ಎಲ್ಲೆಯ ಮಿತಿಯಲ್ಲಿದ್ದರೆ, ಹೆಚ್ಚು ಸಂಖ್ಯೆಯ ದೊಡ್ಡ ಚರ್ಚುಗಳು ಉಪನಗರ ಸಹನಗರ ಪ್ರದೇಶಗಳಲ್ಲಿವೆ.

ಎರಡನೇ ವಿಶ್ವಯುದ್ಧವಾದ ನಂತರ, ಭಾರೀ ಸಂಖ್ಯೆಯ ಪ್ರಾಟೆಸ್ಟಂಟ್ ಧರ್ಮ ಪ್ರಸಾರಕರ ದಂಡು ದ್ವೀಪಗಳಿಗೆ ಬಂದಿತು, ಇವರುಗಳೆಂದರೆ ಬ್ಯಾಪ್ಟಿಸ್ಟ್‌ಗಳು, ನಝರೀನರು, ಪೆಂಟಾಕೋಸ್ಟಲರು, ಮತ್ತು ಕ್ರಿಶ್ಚಿಯನ್ ಮತ್ತು ಮಿಷನರಿ ಅಲಯನ್ಸ್. ಅವರು ಮನಿಲಾವನ್ನು ಕೇಂದ್ರ ಸ್ಥಾನ ಮಾಡಿಕೊಂಡು ದ್ವೀಪಗಳಾದ್ಯಂತ ಶಾಲೆಗಳು ಮತ್ತು ಚರ್ಚುಗಳನ್ನು ಸ್ಥಾಪಿಸಿದರು. ಬೈಬಲ್ ಬ್ಯಾಪ್ಟಿಸ್ಟರು ಪ್ರಾರ್ಥನಾ ಮಂದಿರಗಳನ್ನು ನಗರದಾದ್ಯಂತ ಸ್ಥಾಪಿಸಿದ್ದರು.

ಎವಾಂಜೆಲಿಕಲ್ ಕ್ರಿಶ್ಚಿಯನ್‌ರ ಜೊತೆಗೆ ದೇಶದ ಇತರೆ ಮನಿಲೈನ್ ಪ್ರಾಟೆಸ್ಟೆಂಟ್ ಮುಖ್ಯವಾಹಿನಿಗಳಿಗೆ ಮನಿಲಾ ಮುಖ್ಯ ಕೇಂದ್ರವಾಗಿದೆ. ಮನಿಲಾದಲ್ಲಿ ಸಂತ ಸ್ಟೀಫನ್‌ರ ಪ್ರೊ-ಕ್ಯಾಥೆಡ್ರಲ್ ಇದೆ, ಇದು ಫಿಲಿಪ್ಪೈನಿನ ಎಪಿಸ್ಕಾಪಲ್ ಚರ್ಚಿನ ಫಿಲಿಪ್ಪೈನಿನ ಎಪಿಸ್ಕಾಪಲರ ಚರ್ಚ್ ಕೇಂದ್ರವೂ ಆಗಿದೆ. ಮುಖ್ಯವಾಗಿ ಇಲೊಕ್ಯಾನೊ ಕ್ರಾಂತಿಕಾರಿ ಚರ್ಚ್ ಇಗ್ಲೇಶಿಯಾ ಫಿಲಿಪೈನಾ ಇಂಡಿಪೆಂಡಿಯೆಂಟೆ ಪ್ರಧಾನ ಕೇಂದ್ರವು ನಗರದಲ್ಲಿದೆ. ಫಿಲಿಪ್ಪೈನ್ಸ್‌ನ ಎಪಿಸ್ಕಾಪಲ್ ಚರ್ಚ್ ಮತ್ತು ಇಗ್ಲೇಸಿಯಾ ಫಿಲಿಪೈನಾ ಇಂಡಿಪೆಂಡಿಯಂಟೆ ಇವೆರಡು ಆಂಗ್ಲಿಕನ್ ಕಮ್ಯೂನಿಯನ್‌ ಪಂಗಡಕ್ಕೆ ಸೇರಿವೆ.

ಇಗ್ಲೀಸಿಯ ನಿ ಕ್ರಿಸ್ಟೊ ಎಂಬುದು ಅತಿದೊಡ್ಡ ಸ್ವದೇಶಿ ಫಿಲಿಪ್ಪೈನಿನ ಕ್ರಿಶ್ಚಿಯನ್ ಚರ್ಚ್ ಆಗಿದ್ದು ಏಷಿಯಾದ ದೊಡ್ಡ ಸ್ವತಂತ್ರ ಚರ್ಚ್ ಆಗಿರುವುದಷ್ಟೇ ಅಲ್ಲದೇ ವೇಗವಾಗಿ ನಗರದಲ್ಲಿ ವೃದ್ಧಿಸುತ್ತಿದೆ. ಇಗ್ಲೇಸಿಯಾದಲ್ಲಿ ಹಲವಾರು ದೂರದ ಊರಿನವರ ಉಪಯೋಗಕ್ಕಾಗಿ, ಅಷ್ಟು ಮಹತ್ವವಲ್ಲದ ಛಾಪೆಲ್‌ಗಳು ಮತ್ತು ಚರ್ಚ್‌ಗಳ ನಗರದ ಉದ್ದಗಲದಲ್ಲಿ ಇವೆ. ಇದು ಕಿರಿದು, ಮೊನಚಾದ, ತಿರುವುಗಳಿಂದ ಕೂಡಿದ ಗೋಪುರಗಳಿಗಾಗಿ ಹೆಸರುವಾಸಿಯಾಗಿವೆ.

ನಗರದಲ್ಲಿ ಇತರೆ ಧರ್ಮಗಳೂ ಇವೆ. ಮನಿಲಾದಲ್ಲಿ ಚೀನಿ ಸಮುದಾಯದವರಿಂದ ನಿರ್ಮಿಸಲ್ಪಟ್ಟ ಹಲವಾರುಬೌದ್ಧ ಮತ್ತು ಟಾವೋ ಧರ್ಮದ ಮಂದಿರಗಳಿವೆ. ಕ್ವಿಯಾಪೊ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಮುಸ್ಲಿಂ ಸಮುದಾಯ ಮನಿಲಾದಲ್ಲಿದೆ, ಅಲ್ಲಿ ಮಸ್ಜಿದ್ ಅಲ್-ದಹಬ್ ಎಂಬ ಮಸೀದಿ ಇದೆ. ಅಲ್ಲೊಂದು ಭಾರತೀಯ ಮೂಲದ ಜನಸಮುದಾಯಕ್ಕಾಗಿ ದೊಡ್ಡ ಹಿಂದು ದೇವಾಲಯ ಮತ್ತು ಸಿಖ್ಖರ ಗುರುದ್ವಾರ ಸಹ ಕಟ್ಟಲಾಗಿದೆ. ದಿ ಚರ್ಚ್ ಆಫ್ ಜೀಸಸ್ ಕ್ರೈಸ್ಟ್ ಲೇಟರ್ ಡೇ ಸೇಂಟ್ಸ್ ಸಹ ನಗರದೊಳಗೆ ಒಂದು ಮಂದಿರವನ್ನು ಕಟ್ಟಿದೆ. ಹಿಂದೊಮ್ಮೆ ಮಲಾಟೆ ಜಿಲ್ಲೆಯಲ್ಲಿ ಫಿಲಿಪ್ಪೈನಿನ ಸಣ್ಣ ಯಹೂದಿ ಸಮುದಾಯಕ್ಕಾಗಿ ಸೀನಗಾಗ್ ನಿರ್ಮಿಸಲಾಗಿತ್ತು. ಈಗ ಮಕಾಟಿಯ ಟೋರ್ಡೆಸಿಲಾಸ್ ರಸ್ತೆಯಲ್ಲಿ, ಮನಿಲಾದ ಅಕ್ಕಪಕ್ಕದಲ್ಲಿ ಒಂದು ಹೊಸ ಸಿನಗಾಗ್ ಅನ್ನು ನಿರ್ಮಿಸಲಾಗಿದೆ.

ಪ್ರವಾಸೋದ್ಯಮ[ಬದಲಾಯಿಸಿ]

thumb|left|200px|1901ರಲ್ಲಿ ಆಗ್ನೇಯ ಏಷಿಯಾದಲ್ಲಿ ನಿರ್ಮಿಸಲಾದ ಮೊದಲ ಶೈಲಿ, ಮನಿಲಾ ಹೋಟೆಲ್‌ನ ಐತಿಹಾಸಿಕ ಲಾಬಿ.

ಪ್ರವಾಸೋದ್ಯಮವು ಮನಿಲಾದ ಆಧಾರವಾಗಿದೆ, ಪ್ರತಿವರ್ಷ ೧ ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ. ನಗರವು ಪೂರ್ವಭಾಗದಲ್ಲಿ ಮೊದಲ ಪ್ರವಾಸಿ ತಾಣಗಳನ್ನು ಹೊಂದಿದೆ. ಫಿಲಿಪೈನ್ಸ್‌ನ ಹಲವಾರು ಹೆಗ್ಗುರುತುಗಳು ಮನಿಲಾದಲ್ಲಿಯೇ ಇವೆ, ಹಾಗೂ ಜನಪ್ರಿಯ ಪ್ರವಾಸೀ ತಾಣಗಳೂ ಆಗಿವೆ. ಅವೆಂದರೆ 1322 ಗೋಲ್ಡನ್ ಎಂಪೈರ್ ಅಟ್ ರೊಕ್ಸಾಸ್ ಬೊಲೆವರ್ಡ್, ಅಪೊಲಿನಾರಿಯೊ ಮಾಬಿನಿ ಶ್ರೈನ್, ಬಹಾಯ್ ತ್ಸಿನೊಯ್, ಬೆಸಿಲಿಕಾ ಆಒಹ್ ಸ್ಯಾನ್ ಸೆಬಾಸ್ಟಿಯನ್, ಚೈನಾಟೌನ್, ಕೊಕೊನಟ್ ಪ್ಯಾಲೇಸ್[i], ಕಲ್ಚರಲ್ ಸೆಂಟರ್ ಆಫ್ ದಿ ಫಿಲಿಪೈನ್ಸ್[i], ಎರ್ಮಿಟಾ ಮತ್ತು ಮಲಾಟೆ ಜಿಲ್ಲೆಗಳು, DLS-CSB ಮ್ಯೂಸಿಯಂ ಆಫ್ ಕಂಟೆಪರರಿ ಆರ್ಟ್ಸ್ ಅಂಡ್ ಡಿಸೈನ್, ಎಂಬಸಿ ಆಫ್ ದಿ ಯುನೈಟೆಡ್ ಸ್ಟೇಟ್ಸ್ ಇನ್ ಮನಿಲಾ, ಫೋರ್ಟ್ ಸ್ಯಾಂಟಿಯಾಗೊ, ಇಂಟ್ರಾಮುರಸ್, ಮಲಕ್‌ನಂಗ್ ಪ್ಯಾಲೇಸ್, ಮನಿಲಾ ಬೇವಾಕ್, ಮಲಾಟೆ ಚರ್ಚ್, ಮನಿಲಾ ಬೋರ್ಡ್‌ವಾಕ್, ಮನಿಲಾ ಕ್ಯಾಥೆಡ್ರಲ್, ಮನಿಲಾ ಸಿಟಿ ಹಾಲ್, ದಿ ಮನಿಲಾ ಹೋಟೆಲ್, ಮನಿಲಾ ಓಶೀನ್ ಪಾರ್ಕ್, ಮನಿಲಾ ಸೆಂಟ್ರಲ್ ಪೋಸ್ಟ್ ಆಫೀಸ್, ಮನಿಲಾ ಯಾಚ್ಟ್ ಕ್ಲಬ್, ಮನಿಲಾ ಜುವಲಾಜಿಕಲ್ ಅಂಡ್ ಬಟಾನಿಕಲ್ ಗಾರ್ಡನ್, ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಮನಿಲಾ, ಮೆಟ್ರೋಪಾಲಿಟನ್ ಥಿಯೇಟರ್, ಮ್ಯೂಸಿಯೊ ಪಂಬಾಟ, ದಿ ಮ್ಯೂಸಿಯಂ ಆಫ್ ಮನಿಲಾ, ದಿ ಮ್ಯೂಸಿಯಂ ಆಫ್ ಫಿಲಿಪೈನ್ ಪೊಲಿಟಿಕಲ್ ಹಿಸ್ಟರಿ, ನ್ಯಾಷನಲ್ ಲೈಬ್ರರಿ ಆಫ್ ದಿ ಫಿಲಿಪೈನ್ಸ್, ನ್ಯಾಷನಲ್ ಮ್ಯೂಸಿಯಂ ಆಫ್ ದಿ ಫಿಲಿಪಿನೊ ಪೀಪಲ್, ನ್ಯಾಷನಲ್ ಮ್ಯೂಸಿಯಂ ಆಫ್ ಫಿಲಿಪೈನ್ಸ್, ಪ್ಯಾಕೊ ಪಾರ್ಕ್, ಪ್ಯಾರಿಶ್ ಆಫ್ ದಿ ಅವರ್ ಲೇಡಿ ಆಫ್ ದಿ ಅಬಂಡನ್ಡ್, ಪ್ಲಾಜಾ ಲೊರೆಂಜೊ ರುಯಿಜ್, ಪ್ಲಾಜಾ ಮಿರಾಂಡಾ, ಕ್ವಿಯಪೊ ಚರ್ಚ್, ಕ್ವಿರಿನೊ ಗ್ರ್ಯಾಂಡ್‌ಸ್ಟ್ಯಾಂಡ್, ರಾಜಾಹ್ ಸುಲೇಮಾನ್ ಪ್ಲಾಜಾ, ರೆಮೆಡಿಯೊಸ್ ಸರ್ಕಲ್, ರಿಜಾಲ್ ಪಾರ್ಕ್, ರಾಬಿನ್ಸನ್ಸ್ ಪ್ಲೇಸ್ ಮನಿಲಾ, ಸ್ಯಾನ್ ಆಗಸ್ಟಿನ್ ಚರ್ಚ್, ದಿ ಸ್ಯಾನ್ ಆಗಸ್ಟಿನ್ ಚರ್ಚ್ ಮ್ಯೂಸಿಯಂ, SM ಸಿಟಿ ಮನಿಲಾ, SM ಸಿಟಿ ಸ್ಯಾನ್ ಲಜಾರೊ, SM ಸಿಟಿ ಸಾಂಟಾ ಮೆಸಾ[ii], ದಿ ಸುಪ್ರೀಮ್ ಕೋರ್ಟ್ ಆಫ್ ದಿ ಫಿಲಿಪೈನ್ಸ್, UST ಮ್ಯೂಸಿಯಂ ಆಫ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ದಿ ವಿಕ್ಟಿಮ್ಸ್ ಆಫ್ ಮಾರ್ಷಿಯಲ್ ಲಾ ಮೆಮೊರಿಯಲ್ ವಾಲ್-ಬೊನಿಫಾಸಿಯೊ ಶ್ರೈನ್. ಮನಿಲಾವು ಹಲವಾರು ಕ್ರೀಡಾಂಗಣಗಳನ್ನೂ ಹೊಂದಿದೆ ಅವೆಂದರೆ ರಾಷ್ಟ್ರೀಯಾ ಕ್ರೀಡೆಗಳ ಸ್ಥಳ ರೈಜಲ್ ಮೆಮೊರಿಯಲ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ನಗರದಲ್ಲಿ ಸ್ಯಾನ್ ಆಂಡ್ರೆಸ್ ಜಿಮ್ ಇದೆ.

ನಗರದ ಚಿತ್ರಣ[ಬದಲಾಯಿಸಿ]

ಸ್ಥೂಲ ಅವಲೋಕನ[ಬದಲಾಯಿಸಿ]

ಮನಿಲಾದ ಮಿಶ್ರಿತ ವಾಸ್ತುಶಿಲ್ಪ ವೈವಿದ್ಯತೆಗಳು ನಗರ ಹಾಗೂ ರಾಷ್ಟ್ರದ ಇತಿಹಾಸವನ್ನು ಪ್ರತಿಫಲಿಸುತ್ತದೆ. ಮನಿಲಾದ ಬಹಳಷ್ಟು ಐತಿಹಾಸಿಕ ಕಟ್ಟಡಗಳು ಸ್ವತಂತ್ರ ಸಂಗ್ರಾಮದಲ್ಲಿ ನಾಶಗೊಂಡವು. ಯುದ್ಧದ ನಂತರ ಮನಿಲಾದ ಪುನರ್ನಿರ್ಮಾಣವಾಯಿತು ಮತ್ತು ಕೆಲವು ಐತಿಹಾಸಿಕ ಕಟ್ಟಡಗಳ ಪುನರ್ನಿರ್ಮಾಣವಾಯಿತು. ಹಲವಾರು ಹೆಗ್ಗುರುತಿನ ಮತ್ತು ಆಕರ್ಷಕ ಕಟ್ಟಡಗಳು ಭಾರಿ ಖರ್ಚಿನಿಂದ ಕಟ್ಟಲ್ಪಟ್ಟವು. ಈಗಿನ ಮನಿಲಾದ ಭೂದೃಶ್ಯವು ಒಂದು ನವೀನ ಮತ್ತು ಸಮಕಾಲೀನ ಕಟ್ಟಡಗಳ ವಿನ್ಯಾಸ ಹೊಂದಿದೆ.

ಪ್ರೇಕ್ಷಣೀಯ ಸ್ಥಳಗಳು[ಬದಲಾಯಿಸಿ]

ರಾತ್ರಿಯಲ್ಲಿ ಮನಿಲಾದ ದೃಶ್ಯ
ದಿ ಕಿಲೋಮೀಟರ್ ಝೀರೊ ಮಾರ್ಕರ್

ಮನಿಲಾವು ದೇಶದ ಹಲವಾರು ಗಮನೀಯ ಹೆಗ್ಗುರುತುಗಳ ತಾಣವಾಗಿತ್ತು, ಅವೆಂದರೆ ರಿಜಾಲ್ ಪಾರ್ಕ್, ಮತ್ತು ಐತಿಹಾಸಿಕ ಇಂಟ್ರಾಮುರಸ್. ೫೮ ಹೆಕ್ಟೇರುಗಳ (೧೪೩ ಎಕರೆಗಳು)[೨೭] ವಿಸ್ತೀರ್ಣ ಮತ್ತು ಅರ್ಧ ಚಂದ್ರಾಕಾರದ ರಿಜಾಲ್ ಪಾರ್ಕ್, ರಾಷ್ಟ್ರೀಯ ವೀರನಾದ ಜೋಸ್ ರಿಜಾಲ್ ಸ್ಮಾರಕಾರ್ಥ ಉದ್ಯಾನವು ಮನಿಲಾದ ಸಾಂಸ್ಕೃತಿಕ ಮತ್ತು ವಾಣಿಜ್ಯ ಜಿಲ್ಲೆಯ ಮಧ್ಯಭಾಗದಲ್ಲಿದೆ. ಇವನನ್ನು ಸ್ಪೈನಿಗರು ಬುಡಮೇಲು ಕೃತ್ಯ ಎಸಗಿದನೆಂಬ ಆರೋಪದ ಮೇಲೆ ಇದೇ ಜಾಗದಲ್ಲಿ ಕೊಂದಿದ್ದರು. ರಿಜಾಲ್ ಪಾರ್ಕಿನ ಆಕರ್ಷಣೆಗಳಲ್ಲಿ ಒಂದೆಂದರೆ ಚೈನೀ ಮತ್ತು ಜಪಾನೀ ಉದ್ಯಾನಗಳು, ನ್ಯಾಷನಲ್ ಮ್ಯೂಸಿಯಂ ಆಫ್ ಫಿಲಿಪೈನ್ಸ್, ನ್ಯಾಷನಲ್ ಲೈಬ್ರರಿ ಆಫ್ ದಿ ಫಿಲಿಪೈನ್ಸ್, ದಿ ಪ್ಲಾನೆಟೋರಿಯಂ, ಆರ್ಕಿಡೇರಿಯಮ್ ಮತ್ತು ಚಿಟ್ಟೆಗಳ ಪೆವಿಲಿಯನ್, ದಿ ಪಾರ್ಕ್ ಆಡಿಟೋರಿಯಂ, ಭೂವಿನ್ಯಾಸದಲ್ಲಿ ಬಿಡಿಸಿದ ಫಿಲಿಪೈನಿನ ಭೂಪಟ, ಕಾರಂಜಿ ಮಕ್ಕಳ ಹಿನ್ನೀರ ಸರೋವರ, ಚದುರಂಗದ ಚೌಕ, ಕ್ವಿರಿನೋ ಗ್ರಾಂಡ್ ಸ್ಟಾಂಡ್ ಮತ್ತು ಮನಿಲಾ ಸಮುದ್ರ ಉದ್ಯಾನ, ಇದು ಸಮುದ್ರದ ವಿವಿಧ ಪ್ರಾಣಿಗಳನ್ನು ಪ್ರದರ್ಶಿಸುತ್ತದೆ. ರಿಜಾಲ್ ಸ್ಮಾರಕ ಭವನದ ಧ್ವಜಸ್ತಂಭದ ಪಶ್ಚಿಮಕ್ಕೆ ಕಿಲೋಮೀಟರ್ ಜೀರೊ ಮಾರ್ಕರ್ ಇದ್ದು ಇದು ದೇಶದ ಇನ್ನುಳಿದ ಭಾಗಗಳಿಗೆ ಇಲ್ಲಿಂದ ದೂರವನ್ನು ಸೂಚಿಸುತ್ತದೆ.

ನಗರದ ಉತ್ತರದ ಅಂಚಿನ ಭಾಗದಲ್ಲಿ ಮೂರು ಸ್ಮಶಾನ ಭೂಮಿಗಳಿವೆ, ಲಯೋಲ, ಚೀನೀಯರ ಮತ್ತು ಮನಿಲಾ ಮಹಾನಗರ ಪ್ರದೇಶದ ಅತಿದೊಡ್ಡ ಸ್ಮಶಾನ ಭೂಮಿಯಾದ ಮನಿಲಾ ಉತ್ತರ ಹಸಿರು ಉದ್ಯಾನ. ಮನಿಲಾವು ಗಮನೀಯ ಹೆಗ್ಗುರುತುಗಳು ಹಾಗೂ ಐತಿಹಾಸಿಕ ರಚನೆಗಳನ್ನು ಹೊಂದಿರುವಂತೆಯೇ, ತುಂಬಾ ದುಬಾರಿಯಾದ ಐಶಾರಾಮಿ ಹೋಟೆಲ್ ಮತ್ತು ಎಲ್ಲರಿಗೂ ಸಾಧ್ಯವಾಗುವಂತಹ ಸಾರ್ವತ್ರಿಕ ವಸತಿ ಗೃಹಗಳೂ ಇವೆ. ಜಗತ್ಪ್ರಸಿದ್ಧ ಮನಿಲಾ ಹೋಟೆಲ್ ಸೇರಿದಂತೆ ಬಹಳಷ್ಟು ಇಂತಹ ಜಾಗಗಳು ಮನಿಲಾದ ಮಧ್ಯಭಾಗದಲ್ಲಿವೆ. ಇವು ಮನಿಲಾ ಕೊಲ್ಲಿಯ ಸುಂದರವಾದ ದೃಶ್ಯವನ್ನು ತೋರಿಸುತ್ತವೆ.

ಎರ್ಮಿಟಾ ಮತ್ತು ಮಲಾಟೆ ಜಿಲ್ಲೆಗಳು ಜನಪ್ರಿಯ ಪ್ರವಾಸಿ ತಾಣಗಳಾಗಿದ್ದು ವ್ಯಾಪಕ ವೈವಿಧ್ಯತೆಯ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸ್ನೇಹಕೂಟಗಳು, ಪಾನೀಯ ಗೃಹಗಳು, ಕಲೆ ಮತ್ತು ಪುರಾತನ ವಸ್ತುಗಳ ಅಂಗಡಿಗಳನ್ನು ಪ್ರದರ್ಶಿಸುತ್ತವೆ. ನಗರಿಗಳ ರಾತ್ರಿ ಜೀವನವು ಸಾಂಸ್ಕೃತಿಕ ಪ್ರದರ್ಶನಗಳು, ನೃತ್ಯಶಾಲೆಗಳು, ಜೂಜುಕಟ್ಟೆಗಳು, ಮನರಂಜನಾ ಆರಾಮಶಾಲೆಗಳು ಮತ್ತು ಸೊಗಸುಗಾರ ಕೆಫೆಗಳನ್ನು ಪ್ರವಾಸಿಗರಿಗೆ ನೀಡುತ್ತವೆ. ಈ ಜಿಲ್ಲೆಗಳೊಳಗೆ ಬಹುಸಂಖ್ಯೆಯ ಮಹತ್ವವಾದ ಕಟ್ಟಡ ಮತ್ತು ನೆಲೆತಾಣಗಳಿವೆ.

ಉದ್ಯಾನ ಮತ್ತು ಮನರಂಜನಾ ಕ್ಷೇತ್ರಗಳು[ಬದಲಾಯಿಸಿ]

ಕ್ವಿರಿನೊ ಗ್ರ್ಯಾಂಡ್‌ಸ್ಟ್ಯಾಂಡ್ ಅಭಿಮುಖವಾಗಿರುವ ರಿಜಾಲ್ ಮಾನ್ಯುಮೆಂಟ್

ಮನಿಲಾವು ದೇಶದ ಬಹುಮುಖ್ಯ ಉದ್ಯಾನವಾದ ರಿಜಾಲ್ ಪಾರ್ಕನ್ನು ಹೊಂದಿದೆ. ಇದನ್ನು ರಾಷ್ಟ್ರೀಯ ವೀರ ಜೋಸ್ ರಿಜಾಲ್‌ನ ನೆನಪಿಗಾಗಿ ನಿರ್ಮಿಸಿದ್ದು. ಉದ್ಯಾನವನಗಳು ಮತ್ತು ಹಸಿರು ಕ್ಷೇತ್ರಗಳಲ್ಲದೆ ಮನಿಲಾ ಹಲವು ಚೌಕಗಳ ತಾಣವಾಗಿದೆ. ಇವೆಂದರೆ ಪ್ಲಾಜಾ ಬಾಲಕ್ಟಾಸ್ ಮತ್ತು ಪ್ಲಾಜಾ ಮಿರಾಂಡಾ. ಇದು 1971ರ ರಾಜಕೀಯ ಸಂಬಂಧಿ ಬಾಂಬ್ ಸ್ಪೋಟದ ಸ್ಥಾನ. ಮನಿಲಾದ ಒಳಗೆ ಗಮನೀಯವಾದ ಉದ್ಯಾನವನಗಳು ಮತ್ತು ಹಸಿರು ಕ್ಷೇತ್ರಗಳಿದ್ದು ಅವುಗಳಲ್ಲಿ ಕೆಲವು ರಾಜಾ ಸುಲಾಯಮಾನ್ ಪಾರ್ಕ್, ಮನಿಲಾ ಬೋರ್ಡ್‌ವಾಕ್ ಲಿವಾಸಾಂಗ್ ಬಾನಿಫಾಸಿಯೋ, ಮಹಾನ್ ಗಾರ್ಡನ್, ಪ್ಯಾಕೊ ಪಾರ್ಕ್, ರೆಮಿಡಿಯೊಸ್ ಸರ್ಕಲ್, ಮನಿಲಾ ಝುವಲಾಜಿಕಲ್ ಮತ್ತು ಬಟಾನಿಕಲ್ ಗಾರ್ಡನ್, ಪಂಡಕಾನ್ ಲೀನಿಯರ್ ಪಾರ್ಕ್ ಮತ್ತು ಮಲಕನಾಂಗ್ ಗಾರ್ಡನ್. ನಗರದೊಳಗೆ, ಮನಿಲಾ ಚೈನೀಸ್ ಸಿಮೆಟರಿ, ಲಾ ಲೊಮಾ ಸಿಮೆಟರಿ[iii], ಮನಿಲಾ ಸೌತ್ ಗ್ರೀನ್ ಪಾರ್ಕ್ ಮತ್ತು ಮನಿಲಾ ನಾರ್ತ್ ಗ್ರೀನ್ ಪಾರ್ಕ್‌ನಂತಹ ಸ್ಮಶಾನ ಭೂಮಿಗಳಿಗೆ ಕಡೆಯದರಲ್ಲಿ ಹಲವು ಚಾರಿತ್ರಿಕ ವ್ಯಕ್ತಿಗಳ ಅಂತಿಮ ವಿಶ್ರಾಂತಿಧಾಮವಾಗಿದ್ದು ಮನಿಲಾ ಮಹಾನಗರ ಪಾಲಿಕೆ ಪ್ರದೇಶದ ಅತ್ಯಂತ ದೊಡ್ಡದಾದ ಸ್ಮಶಾನ ಭೂಮಿಯಾಗಿದೆ. ಮನಿಲಾ ನಾರ್ತ್ ಮತ್ತು ಮನಿಲಾ ಸೌತ್ ಗ್ರೀನ್ ಪಾರ್ಕ್‌ಗಳು ನಗರವು ಹೊದಿರುವ ಸ್ಮಶಾನಗಳು. ಬಹು ದೊಡ್ಡ ಸಂಖ್ಯೆಯ ಮನರಂಜನಾ ಕ್ಷೇತ್ರಗಳು ನಗರದಲ್ಲಿ ಚದುರಿದಂತೆ ಇವೆ.

ಜಿಲ್ಲೆಗಳು[ಬದಲಾಯಿಸಿ]

ಮನಿಲಾದ ಶಾಸಕಾಂಗ ಜಿಲ್ಲೆಗಳು.

ನಗರವು ಹದಿನಾರು ಭೌಗೋಳಿಕ ಜಿಲ್ಲೆಗಳಾಗಿ ವಿಭಾಗವಾಗಿದೆ ಅವೆಂದರೆ ಬಿನೊಂಡೊ, ಎರ್ಮಿಟಾ, ಇಂತ್ರಾಮುರೊಸ್, ಮಲಾಟೆ, ಪ್ಯಾಕೊ, ಪ್ಯಾಂಡಕನ್, ಪೋರ್ಟ್ ಏರಿಯಾ, ಕ್ವಿಯಾಪೊ, ಸ್ಯಾಂಪಲಕ್, ಸ್ಯಾನ್ ಆಂಡ್ರೆಸ್, ಸ್ಯಾನ್ ಮಿಗುಯೆಲ್, ಸ್ಯಾನ್ ನಿಕೊಲಸ್, ಸಾಂಟಾ ಅನಾ, ಸಾಂಟಾ ಕ್ರೂಜ್, ಸಾಂಟಾ ಮೆಸಾ ಮತ್ತು ಟೊಂಡೊ. ಈ ಜಿಲ್ಲೆಗಳು ಆರು ಆಡಳಿತಾತ್ಮಕ ಜಿಲ್ಲೆಗಳಾಗಿವೆ, ಮನಿಲಾದ ಶಾಸಕಾಂಗ ಜಿಲ್ಲೆಗಳು.

ಮನಿಲಾದ ಭೂಪಟ
ಜಿಲ್ಲೆಗಳು ಬ್ಯಾರಂಗೇಗಳು ಜನಸಂಖ್ಯೆ
(೨೦೦೭ ಜನಗಣತಿ)
ಪ್ರದೇಶ
(has.)
ಜನಸಂಖ್ಯೆ. ಸಾಂದ್ರತೆ
(ಪ್ರತಿ km²ಗೆ)
ಬಿನೊಂಡೊ ೧೦ ೧೨,೧೦೦ ೬೬.೧೧ ೧೮,೩೦೪.೧
ಎರ್ಮಿಟಾ ೧೩ ೬,೨೦೫ ೧೫೮.೯೧ ೩,೯೦೪.೮
ಇಂಟ್ರಾಮುರೊಸ್ ೫,೦೧೫ ೬೭.೨೬ ೭,೪೫೫.೭
ಮಲಾಟೆ ೫೭ ೭೮,೧೩೨ ೨೫೯.೫೮ ೩೦,೦೯೯.೮
ಪ್ಯಾಕೊ ೪೩ ೬೯,೩೦೦ ೨೭೮.೬೯ ೨೪,೮೬೬.೭
ಪ್ಯಾಂಡಕನ್ ೩೮ ೭೬,೧೩೪ ೧೬೬.೦೦ ೪೫,೮೬೨.೯
ಪೋರ್ಟ್ ಏರಿಯಾ ೪೮,೬೮೪ ೩೧೫.೨೮ ೧೫,೪೪೧.೪
ಕ್ವಿಯಾಪೊ ೧೬ ೨೩,೧೩೮ ೮೪.೬೯ ೨೭,೩೨೨.೦
ಸ್ಯಾಂಪಲಕ್ ೧೯೨ ೨೫೫,೬೧೩ ೫೧೩.೭೧ ೪೯,೭೫೮.೫
ಸ್ಯಾನ್ ಆಂಡ್ರೆಸ್ ೬೫ ೧೧೬,೫೮೫ ೧೬೮.೦೨ ೬೯,೩೮೬.೨
ಸ್ಯಾನ್ ಮಿಗುಯೆಲ್ ೧೨ ೧೬,೧೧೫ ೯೧.೩೭ ೧೭,೬೩೬.೯
ಸ್ಯಾನ್ ನಿಕೊಲಸ್ ೧೫ ೪೩,೨೨೫ ೧೬೩.೮೫ ೨೬,೩೮೦.೫
ಸಾಂಟಾ ಅನಾ ೩೪ ೬೨,೧೮೪ ೧೬೯.೪೨ ೩೬,೭೦೩.೫
ಸಾಂಟಾ ಕ್ರೂಜ್ ೮೨ ೧೧೮,೭೭೯ ೩೦೯.೦೧ ೩೮,೪೩೮.೧
ಸಾಂಟಾ ಮೆಸಾ ೫೧ ೯೮,೯೦೧ ೨೬೧.೦೧ ೩೭,೮೯೨.೨
ಟೊಂಡೊ ೨೫೯ ೬೩೦,೬೦೪ ೮೬೫.೧೩ ೭೨,೮೯೧.೬

ಸರಕಾರ[ಬದಲಾಯಿಸಿ]

ಈಗಿನ ೨೦೦೭–೨೦೧೦ವರ್ಷದ ಮೇಯರ್ ಆಲ್ಫ್ರೆಡೊ ಲಿಮ್ ಮೂರು ವರ್ಷಗಳ ಕಾಲ ಸೆನೆಟರ್ ಆಗಿ ಕೆಲಸ ಮಾಡಿದ ನಂತರ ಪುನರಾಯ್ಕೆಯಾಗಿದ್ದಾರೆ. ನಗರದ ಮೇಯರ್ ಕಾಲಾವಧಿ ಮೂರು ನಿರಂತರ ಅವಧಿಗಳಿಗೆ ಸೀಮಿತವಾಗಿದ್ದು ಒಟ್ಟು ಅವಧಿ ಒಂಭತ್ತು ವರ್ಷಗಳಾಗಿದೆ. ಒಂದು ಅವಧಿಯ ಕಡಿದ ಅಂತರದ ನಂತರ ಒಬ್ಬ ಮೇಯರ್ ಪುನರಾಯ್ಕೆ ಹೊಂದಬಹುದು. ಇಸ್ಕೊ ಮೊರೆನೊ ಇವರು ಪ್ರಸಕ್ತ ಉಪ ಮೇಯರ್ ಆಗಿದ್ದಾರೆ. ಒಂದು ಜಿಲ್ಲೆಗೆ ಆರು ಜನರಂತೆ ಚುನಾಯಿತರಾದ ಆರು ಕಾಂಗ್ರೆಷನಲ್ ಜಿಲ್ಲೆಗಳ ಚುನಾಯಿತರಾದ ಕೌನ್ಸಿಲರ್‍ಗಳ ಗುಂಪು ಮಹಾನಗರ ಪಾಲಿಕೆಯ ಶಾಸನಾತ್ಮಕ ಅಂಗವಾಗಿದ್ದು ಉಪಮೇಯರ್ ಇದರ ನಾಯಕನಾಗಿರುತ್ತಾನೆ. ನಗರದ ಈಗಿನ ಜಿಲ್ಲಾ ಪ್ರತಿನಿಧಿಗಳು ಈ ರೀತಿಯಾಗಿದ್ದಾರೆ, ಬೆಂಜಮಿ ಅಸಿಲೋ 1ನೆಯ ಜಿಲ್ಲೆಯನ್ನು ಪ್ರತಿನಿಧಿಸುತ್ತಾರೆ, ಜೆಯಿಮ್ C. ಲೋಪೆಜ್ 2ನೆಯ ಜಿಲ್ಲೆ, ಜೆನೆಯ್ದಾ ಅಂಗ್‌ಪಿಂಗ್ 3ನೆಯ ಜಿಲ್ಲೆ, ತ್ರಿಶಾ ಬೊನೊನ್ – ಡೇವಿಡ್ 4ನೆಯ ಜಿಲ್ಲೆ, ಅಮಾಡೊ ಬಗತ್ಸಿಂಗ್ 5ನೆಯ ಜಿಲ್ಲೆ ಮತ್ತು ಬೀನ್‌ವೆನಿಡೊ ಅಬಂಟೆಜಿಲ್ಲೆ 6.

ಚಿತ್ರ:Manilagovt.jpg
ಹಿಂದಿನ ಅಗ್ರಿಕಲ್ಚರ್ ಮತ್ತು ಫೈನಾನ್ಸ್ ಕಟ್ಟಡಗಳು ಮತ್ತು ರಿಜಾಲ್ ಪಾರ್ಕ್‌ನ ಅಗ್ರಿಫಿನಾ ಸರ್ಕಲ್, ಸರ್ಕಾರದ ಕೇಂದ್ರವಾಗಬಹುದೆಂಬ ಮುಂದಾಲೋಚನೆ ಇತ್ತು.

ಮನಿಲಾ ಫಿಲಿಪೈನಿನ ರಾಜಕೀಯ ಶಕ್ತಿ ಕೇಂದ್ರವಾಗಿದ್ದು, ಹಲವು ರಾಷ್ಟ್ರೀಯ ಸರ್ಕಾರದ ಕಚೇರಿಗಳ ಮುಖ್ಯ ಕಾರ್ಯಾಲಯಗಳು ನಗರದಲ್ಲಿವೆ. ನಗರವನ್ನು ಸರ್ಕಾರದ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಯೋಜನೆಯು ಅಮೇರಿಕಾದ ಉಪನಿವೇಶ ಸರ್ಕಾರದ ಪ್ರಾರಂಭದ ವರ್ಷಗಳಲ್ಲೇ ಆಗಿತ್ತು. ಅವರು ಇಂಟ್ರಾಮುರೋಸ್ ನಗರದ ಗೋಡೆಗಳಿಂದ ಹೊರಗೆ ಬಂದು ಒಳ್ಳೆಯ ವಿನ್ಯಾಸಿತ ನಗರವನ್ನು ಕಲ್ಪಿಸಿಕೊಂಡಿದ್ದರು. ಆಯ್ಕೆಯಾದ ಆಯಕಟ್ಟಿನ ಜಾಗ, ಹಿಂದಿನ ಒಂದು ಪಟ್ಟಣವಾದ ಬಗುಂಬಯನ್, ಈಗಿನ ರಿಜಾಲ್ ಪಾರ್ಕ್, ಸರ್ಕಾರದ ಕೇಂದ್ರವಾಗಬೇಕೆಂದು ತೀರ್ಮಾನಿಸಲಾಯ್ತು, ವಿನ್ಯಾಸ ತಯಾರು ಮಾಡಲು ಡೇನಿಯಲ್ ಬರ್ನ್‌ಹ್ಯಾಮ್‌ಗೆ ಆಯುಕ್ತನನ್ನಾಗಿ ಮಾಡಿ, ವಾಷಿಂಗ್ಟನ್‌ ಡಿ.ಸಿ. ಮಾದರಿಯಲ್ಲೇ ಒಂದು ನಗರ ಕಟ್ಟಲು ಮಾಸ್ಟರ್ ಪ್ಲ್ಯಾನ್ ತಯಾರಿಸಲು ತಿಳಿಸಲಾಯ್ತು. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಎರಡನೇ ವಿಶ್ವಯುದ್ಧದ ಕಾಲದಲ್ಲಿ ಮನಿಲಾದ ಸರ್ವನಾಶವಾಯಿತು

ಅದಾದ ನಂತರ ಮ್ಯಾನುಎಲ್ ಎಲ್. ಕ್ವಿಜಾನ್ ನೇತೃತ್ವದ ಕಾಮನ್‌ವೆಲ್ತ್ ಸರ್ಕಾರವು ಒಂದು ಸರ್ಕಾರಿ ಕೇಂದ್ರ ಸ್ಥಾನವನ್ನು ಮನಿಲಾದ ಈಶಾನ್ಯ ಗುಡ್ಡಗಳ ಮೇಲೆ ಕಟ್ಟಬೇಕೆಂದು ತೀರ್ಮಾನವಾಯಿತು, ಅದೇ ಇಂದಿನ ಕ್ವಿಜಾನ್ ನಗರ. ಹಲವು ಸರ್ಕಾರಿ ನಿಯೋಗಗಳು ತಮ್ಮ ಪ್ರಧಾನ ಕೇಂದ್ರಗಳನ್ನು ಕಿಜಾನ್ ನಗರದಲ್ಲಿ ಸ್ಥಾಪಿಸಿದವು, ಆದರೆ ಇನ್ನೂ ಕೆಲವು ಮುಖ್ಯವಾದ ಸರ್ಕಾರಿ ಕಚೇರಿಗಳು ಮನಿಲಾದಲ್ಲೇ ಇವೆ. ನಗರವು ರಾಷ್ಟ್ರಪತಿಯ ಕಚೇರಿ, ಸರ್ವೋಚ್ಛ ನ್ಯಾಯಾಲಯ, ಮೇಲ್ಮನವಿಗಳ ನ್ಯಾಯಾಲಯ, ಫಿಲಿಪೈನ್ಸ್‌ನ ಕೇಂದ್ರ ಬ್ಯಾಂಕ್, ಆಯವ್ಯಯ ಮತ್ತು ನಿರ್ವಹಣೆಯ, ಹಣಕಾಸು, ಆರೋಗ್ಯ, ನ್ಯಾಯ, ಕಾರ್ಮಿಕ & ಉದ್ಯೋಗ, ಮತ್ತು ಪ್ರವಾಸೋದ್ಯಮ ಇಲಾಖೆಗಳು, . ಮನಿಲಾದಲ್ಲಿ ರಾಷ್ಟ್ರೀಯ ಗ್ರಂಥಾಲಯ, ರಾಷ್ಟ್ರೀಯ ಕೈಬರಹದ ಹೊತ್ತಿಗೆಗಳ ಸಂಗ್ರಹಣಾಗಾರ, ರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಫಿಲಿಪೈನಿ ಸಾರ್ವಜನಿಕ ಆಸ್ಪತ್ರೆಗಳಂತಹ ಪ್ರಮುಖ ರಾಷ್ಟ್ರೀಯ ಸಂಸ್ಥೆಗಳಿಗೂ ತಾಣವಾಗಿದೆ.

ನಗರದ ಮುದ್ರೆ[ಬದಲಾಯಿಸಿ]

ಮನಿಲಾ ನಗರದ ಅಧಿಕೃತ ಮುದ್ರೆಯು ಅದರ ಸುತ್ತ ಈ ಕೆಳಕಂಡ ಶಬ್ಢಗಳನ್ನು ಹೊಂದಿದೆ Lungsod ng Maynila ಮತ್ತು ಪಿಲಿಪಿನಸ್ , ಫಿಲಿಪಿನೊ ಫಾರ್ ಸಿಟಿ ಆಫ್ ಮನಿಲಾ ಮತ್ತು ಫಿಲಿಪೈನ್ಸ್ . ಈ ವೃತ್ತವು ನಗರದ ಆರು ಕಾಂಗ್ರೆಶನಲ್ ಜಿಲ್ಲೆಗಳನ್ನು ಪ್ರತಿನಿಧಿಸುವ ಆರು ಹಳದಿ ನಕ್ಷತ್ರಗಳನ್ನು ಹೊಂದಿದೆ. ನಗರದ ಮುದ್ರೆಯು ವಿದೇಶಿ ನಿವೇಶದ ಮೊದಲ ಮೂಲಜನರ ಪಾರಿತೋಷಕವನ್ನೇ ಹೊಂದಿದ್ದು ಅದರ ಮೇಲೆ ನಗರದ ಅಡ್ಡಹೆಸರು ಪರ್ಲ್ ಆಫ್ ದಿ ಓರಿಯಂಟ್ ಅಕ್ಷರಗಳನ್ನು ಹೊಂದಿದೆ, ಮಧ್ಯದಲ್ಲೊಂದು ಸಮುದ್ರದ ಸಿಂಹ ಇದು ನಗರದಲ್ಲಿ ಸ್ಪ್ಯಾನಿಶ್ ಪ್ರಭಾವವನ್ನು ತೋರಿಸುತ್ತದೆ, ತಳಭಾಗದಲ್ಲಿ ಪಾಸಿಗ್ ನದಿ ಮತ್ತು ಮನಿಲಾ ಕೊಲ್ಲಿಯ ಅಲೆಗಳ ಚಿತ್ರ ಇದೆ. ಮುದ್ರೆಯ ಬಣ್ಣ ಫಿಲಿಫೈನ್‌ನ ದ್ವಜದ ಬಣ್ಣವನ್ನು ಬಿಂಬಿಸುತ್ತದೆ. ಮನಿಲಾದ ಮುದ್ರೆಯಲ್ಲಿನ ಸಮುದ್ರ ಸಿಂಹದ ಚಿತ್ರವನ್ನು ಸಿಂಗಾಪುರವು ತನ್ನ ಮೆರ್ಲಿಯಾನ್‌ನಲ್ಲಿ ಅನುಕರಿಸಿತು.

ಶಿಕ್ಷಣ[ಬದಲಾಯಿಸಿ]

ಮನಿಲಾ ನಗರದ ಯೂನಿವರ್ಸಿಟಿ, ಸ್ಥಳೀಯ ಕಾಲೇಜುಗಳ ಮತ್ತು ಫಿಲಿಪೈನ್ಸ್ ಯೂನಿವರ್ಸಿಟಿಯ ಆದ್ಯಪ್ರವರ್ತಕ

ಮನಿಲಾವು ಬಹಳಷ್ಟು ಮೆಟ್ರೋ ಮನಿಲಾದ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ತವರಾಗಿದೆ. ಯೂನಿವರ್ಸಿಟ್ ಬೆಲ್ಟ್ ಅಥವಾ U-ಬೆಲ್ಟ್ , ಎಂಬುದು ಮಲಾಟೆ, ಎರ್ಮಿಟಾ ಇಂಟ್ರಮುರೊಸ್, ಸ್ಯಾನ್ ಮಿಗುಯೆಲ್, ಕ್ವಿಯಾಪೊ ಮತ್ತು ಸಂಪಾಲೊಕ್ ಜಿಲ್ಲೆಗಳಲ್ಲಿ ಹೆಚ್ಚು ಸಾಂದ್ರವಾಗಿರುವ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕುರಿತು ಹೇಳುವ ಆಡುನುಡಿ. ಯೂನಿವರ್ಸಿಟಿ ಬೆಲ್ಟ್‌ನಲ್ಲಿ ಹಲವಾರು ರಾಜ್ಯಸ್ವಾಮ್ಯದ ವಿಶ್ವವಿದ್ಯಾಲಯಗಳಿವೆ.ಅವೆಂದರೆ ಫಿಲಿಪೈನ್ ನಾರ್ಮಲ್ ಯೂನಿವರ್ಸಿಟಿ, ಪಾಲಿಟೆಕ್ನಿಕ್ ಯೂನಿವರ್ಸಿಟಿ ಆಫ್ ಫಿಲಿಪೈನ್ಸ್, ಟೆಕ್ನಾಲಜಿಕಲ್ ಯೂನಿವರ್ಸಿಟಿ ಆಫ್ ಫಿಲಿಪೈನ್ಸ್ ಮತ್ತು ಯೂನಿವರ್ಸಿಟಿ ಆಫ್ ದಿ ಫಿಲಿಪೈನ್ಸ್. ಕೆಲವು ಕ್ಯಾಥೊಲಿಕ್ ಶಾಲೆಗಳಾದ ಆಡಮ್ಸನ್ ಯೂನಿವರ್ಸಿಟಿ, ಕೊಲೆಜಿಯೊ ಡೆ ಸ್ಯಾನ್ ಜುವಾನ್ ಡೆ ಲೆಟ್ರನ್, ಕಾಲೇಜ್ ಆಫ್ ದಿ ಹೋಲಿ ಸ್ಪಿರಿಟ್, ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಕ್ಯಾಥೊಲಿಕ್ ಸ್ಕೂಲ್, ಸೇಂಟ್ ಪಾಲ್ ಯೂನಿವರ್ಸಿಟಿ, ಸ್ಯಾನ್ ಬೆಡ ಕಾಲೇಜ್, ಸ್ಯಾನ್ ಸೆಬಾಸ್ಟಿಯನ್ ಕಾಲೇಜ್, ಯೂನಿವರ್ಸಿಟಿ ಸ್ಯಾಂಟೊ ಟೊಮಸ್, De La Salle ಯೂನಿವರ್ಸಿಟಿ ಮತ್ತು De La Salle-ಕಾಲೇಜ್ ಆಫ್ ಸೇಂಟ್ ಬೆನಿಲ್ಡೆ ಇವುಗಳೂ ಸಹ ನಗರದಲ್ಲಿ ಸ್ಥಿತವಾಗಿವೆ. ನಗರದ ಒಳಭಾಗದಲ್ಲಿ ಹಲವಾರು ಖಾಸಗಿ ಶಾಲೆಗಳಿವೆ ಅವೆಂದರೆ ಅರೆಲ್ಲಾನೊ ಯೂನಿವರ್ಸಿಟಿ, ಸೆಂಟ್ರೋ ಎಸ್ಕೊಲರ್ ಯೂನಿವರ್ಸಿಟಿ, ಎಮಿಲಿಯೊ ಅಗಿನಾಲ್ಡೊ ಕಾಲೇಜ್, ಫಾರ್ ಈಸ್ಟರ್ನ್ ಯೂನಿವರ್ಸಿಟಿ, ಲೀಸಿಯಂ ಆಫ್ ದಿ ಫಿಲಿಪೈನ್ಸ್ ಯೂನಿವರ್ಸಿಟಿ, ಮಪುವ ಇನ್‌ಸ್ಟಿಟ್ಯೂಟ್ ಆಒಹ್ ಟೆಕ್ನಾಲಜಿ, ಫಿಲಿಪೈನ್ ಕ್ರಿಶ್ಚಿಯನ್ ಯೂನಿವರ್ಸಿಟಿ, ಫಿಲಿಪೈನ್ ವುಮೆನ್ಸ್ ಯೂನಿವರ್ಸಿಟಿ ಮತ್ತು ಯೂನಿವರ್ಸಿಟಿ ಆಫ್ ದಿ ಈಸ್ಟ್ ಮತ್ತು ನಗರದ ಸ್ವಾಮ್ಯದಲ್ಲಿರುವ ಯೂನಿವರ್ಸಿಟಿಗಳೆಂದರೆ ಯೂನಿವರ್ಸಿಟಿ ಆಫ್ ದಿ ಸಿಟಿ ಆಫ್ ಮನಿಲಾ ಮತ್ತು ಸಿಟಿ ಕಾಲೇಜ್ ಆಫ್ ಮನಿಲಾ.

ವಿದ್ಯಾ ಇಲಾಖೆಯ ಒಂದು ಶಾಖೆಯಾದ, ಮನಿಲಾದ ಡಿವಿಜನ್ ಆಫ್ ದಿ ಸಿಟಿ ಸ್ಕೂಲ್ಸ್ ನಗರದ ಸ್ಥರದ ಸಾರ್ವಜನಿಕ ಶಿಕ್ಷಣವನ್ನು ಸೂಚಿಸುತ್ತದೆ. ಅದು ೭೧ ಸಾರ್ವಜನಿಕ ಪ್ರಾಥಮಿಕ ಶಾಲೆಗಳನ್ನು, ೩೨ ಪಬ್ಲಿಕ್ ಪ್ರೌಢಶಾಲೆಗಳನ್ನು[೨೮] ಮತ್ತು ಎರಡು ನಗರ ಸ್ವಾಮ್ಯದ ವಿಶ್ವವಿದ್ಯಾಲಯಗಳಾನ್ನು ನಿರ್ವಹಿಸುತ್ತದೆ.

ಮನಿಲಾ ವಿಜ್ಞಾನ ಪ್ರೌಢಶಾಲೆಯು, ಫಿಲಿಪೈನಿನ ಪ್ರಥಮ ವಿಜ್ಞಾನ ಪ್ರೌಢಶಾಲೆ; ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿ ಯುದ್ಧದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರ ಪ್ರದರ್ಶನ ಜುವಾನ್ ಲೂನಾ ಇದೆ; ಮಹಾನಗರ ಪಾಲಿಕೆಯ ವಸ್ತುಪ್ರದರ್ಶನ ಇದೊಂಡು ಆಧುನಿಕ ಮತ್ತು ಸಮಕಾಲೀನ ದೃಕ್ ಕಲೆಗಳ ಮಂಚೂಣಿ ಮ್ಯೂಸಿಯಂ ಆಗಿದೆ; ಮ್ಯೂಸಿಯೊ ಪಂಬಾಟ (ಮಕ್ಕಳ ಮ್ಯೂಸಿಯಂ), ತಾವೇ ಸ್ವತಃ ಕಂಡುಹಿಡಿಯುವ ಮತ್ತು ಸಂತೋಷದಿಂದ ಕಲಿಯುವ ತಾಣ ಮತ್ತು ರಾಷ್ಟ್ರೀಯ ಲೈಬ್ರರಿ, ಇದು ದೇಶದ ಮುದ್ರಿತ ಮತ್ತು ಧ್ವನಿ ಮುದ್ರಣ ಮಾಡಿದ ಸಾಂಸ್ಕೃತಿಕ ಪರಂಪರೆ ಮತ್ತು ಇತರೆ ಸಾಹಿತ್ಯ ಮತ್ತು ಮಾಹಿತಿ ಸಂಪನ್ಮೂಲಗಳ ಭಂಡಾರವಾಗಿದೆ, ಇವೆಲ್ಲವೂ ಮನಿಲಾ ನಗರದ ಆಶ್ರಯದಲ್ಲಿವೆ.

ಮೂಲಭೂತ ಸೌಕರ್ಯ[ಬದಲಾಯಿಸಿ]

ಸಾರಿಗೆ ವ್ಯವಸ್ಥೆ[ಬದಲಾಯಿಸಿ]

ದೊಡ್ಡನಗರವಾದ ಮನಿಲಾ ಹಲವಾರು ಸಾರಿಗೆ ಆಯ್ಕೆಗಳನ್ನು ಹೊಂದಿದೆ. ಇವುಗಳಲ್ಲಿ ಬಹು ಜನಪ್ರಿಯವಾದ ಸಾರಿಗೆ ಎಂದರೆ ದ್ವಿತೀಯ ಮಹಾಯುದ್ದದ ನಂತರ ಬಳಸಲು ಆರಂಭವಾದ ಸಾರ್ವಜನಿಕ ಜೀಪ್ನಿ.[೨೯] ಬಸ್ಸುಗಳು, ಹವಾನಿಯಂತ್ರಿತ ಮೀಟರ್‌ಯುಕ್ತ ಟ್ಯಾಕ್ಸಿಗಳು, ಮತ್ತು ತಮಾರಾ FX ಮಿನಿ-ವ್ಯಾನುಗಳು ಸಹ ಜನಪ್ರಿಯ ಸಾರಿಗೆ ವಿಧಾನವಾಗಿವೆ. ಮೂರುಗಾಲಿಯ ವಾಹನಗಳು ಮತ್ತು ಪೆಡಲ್ ತುಳಿತದ ಕ್ಯಾಬ್‌ಗಳು ಅಲ್ಪ ದೂರದ ಸಾರಿಗೆಗೆ ಬಳಸಲಾಗುತ್ತದೆ. ಇನ್ನು ಕೆಲವು ಪ್ರದೇಶಗಳಲ್ಲಿ, ವಿಶೇಷವಾಗಿ ಡಿವಿಸೋರಿಯಾದಲ್ಲಿ, ಎರಡು ಹೊಡೆತದ ಮೋಟಾರನ್ನು ಕಾಲ್ತುಳಿತ ವಾಹನಕ್ಕೆ ಜೋಡಿಸಿ ಸರಕು ಸಾಗಾಣಿಕೆಗೆ ಬಳಸುತ್ತಾರೆ. ಆಧುನಿಕತೆಯನ್ನು ಕಡೆಗಣಿಸಿ ಕುದುರೆಗಳಿಂದ ಎಳೆಯಲ್ಪಡುವ ಕಲೇಸಗಳಾನ್ನು ಬಿನೊಂಡೊ ಮತ್ತು ಇಂಟ್ರಾಮುರೊಸ್ ರಸ್ತೆಗಳ ಮೇಲೆ ಬಳಸಲಾಗುತ್ತದೆ. ನಿನೊಯ್ ಅಕ್ವಿನೊ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಮತ್ತು ಪಾಸಿಗ್ ರಿವರ್ ಫೆರ್ರಿ ಸರ್ವಿಸ್ ಕೂಡಾ ಮನಿಲಾ ನಗರದ ಸಾರಿಗೆಗೆ ಶ್ರಮಿಸುತ್ತವೆ. ಈ ಸಾರಿಗೆ ವ್ಯವಸ್ಥೆಯ ಜೊತೆಗೆ ನಗರವು ಮನಿಲಾ ಲಘು ರೈಲು ಸಾರಿಗೆ ವ್ಯವಸ್ಥೆಯ ಸೇವೆಯನ್ನೂ ಪಡೆಯುತ್ತಿದೆ, ಇದೊಂದು ರಾಷ್ಟ್ರೀಯ ಆದ್ಯತೆಯ ಯೋಜನೆಯಾಗಿದ್ದು, ಅರೆ ನಿಬಿಡ ಜನಸಾರಿಗೆಯಿಂದ ರಾಷ್ಟ್ರೀಯ ರಾಜಧಾನಿಯನ್ನು ಇಕ್ಕಟ್ಟಿಸುವ ಸಮಸ್ಯೆಗೆ ಪರಿಹಾರವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ.[೩೦]

ರೈಲ್ವೆ ವ್ಯವಸ್ಥೆಯ್ ಅಭಿವೃದ್ಧಿಯು ೧೯೭೦ರಲ್ಲಿನ ಮಾರ್ಕೊಸ್ ಆಡಳಿತದಲ್ಲಿ ಆರಂಭವಾಗಿದ್ದು, ಇದು ಆಗ್ನೇಯ ಏಷಿಯಾದ ಮೊಟ್ಟ ಮೊದಲ ಲಘು ರೈಲು ಸಾರಿಗೆಯಾಗಿದೆ. ಇತ್ತೀಚೆಗೆ ನಗರದ ಜನಸಂಖ್ಯೆ ಏರುತ್ತಿರುವ ಪ್ರಮಾಣಕ್ಕನುಗುಣವಾಗಿ ಈ ವ್ಯವಸ್ಥೆಯು ಭಾರೀ ಬಹು-ಬಿಲಿಯನ್ ಡಾಲರ್‌ಗಳ ವಿಸ್ತರಣೆಯನ್ನು ಕಂಡಿತು, ಸದಾ ಪ್ರಯಾಣದಲ್ಲಿರುವ ಕಾರ್ಮಿಕರ ಸಮೂಹದಿಂದ ಸಾರಿಗೆಯ ಹೆಚ್ಚಾದ ಬೇಡಿಕೆ ಒಂದು ಪರ್ಯಾಯ ಸಾರಿಗೆ ಮಾದರಿಯನ್ನು ನೀಡುವುದೇ ಇದರ ಉದ್ದೇಶವಾಗಿದೆ[೩೦]. ಎರಡು ಸುದೀರ್ಘ ಮಾರ್ಗಗಳು ನಗರದ ನಾಗರೀಕರ ಸೇವೆಯಲ್ಲಿವೆ. ಒಂದು ಹಳದಿ ಮಾರ್ಗ ಇದು ಟಾಫ್ಟ್ ಅವೆನ್ಯೂ (R-೨) ಮತ್ತು ರಿಜಾನ್ ಅವೆನ್ಯೂ (R-೯) ಉದ್ದಕ್ಕೂ ಸಂಚರಿಸುತ್ತದೆ, ಮತ್ತು ಇನ್ನೊಂದು ನೇರಳೆ ಮಾರ್ಗವು ರಾಮನ್ ಮ್ಯಾಗ್ಸೆಸೆ ಬುಲೆವರ್ಡ್ ಉದ್ದಕ್ಕೂ (R-೬) ಸಾಂಟಾ ಕ್ರೂಜ್‌ನಿಂದ ಕ್ವಿಜಾನ್ ನಗರದ ಮಾರ್ಗವಾಗಿ ಪಾಸಿಗ್ ನಗರದ ಸಂಟೊಲನ್‌ವರೆಗೆ ಚಲಿಸುತ್ತದೆ.

ಜೊತೆಗೆ ನಗರವು ಲಜಾನ್‌ನಲ್ಲಿ ರೈಲ್ವೆ ವ್ಯವಸ್ಥೆಯ ಕೇಂದ್ರವಾಗಿದೆ. ಫಿಲಿಪೈನ್ ರಾಷ್ಟ್ರೀಯ ರೈಲ್ವೇಸ್‌ನ ಮುಖ್ಯ ಅಂತಿಮ ತಾಣ ನಗರದೊಳಗೇ ಇದೆ. ಈ ಅಂತಿಮ ತಾಣದಿಂದ ರೈಲ್ವೆಯು ಸ್ಯಾನ್ ಫರ್ನಾಂಡೊ ಉತ್ತರಕ್ಕೆ ವಿಸ್ತರಿಸುತ್ತದೆ, ಪಂಪಾಂಗ ಲೆಗಜ್ಪಿ ನಗರದ ದಕ್ಷಿಣಕ್ಕೆ ಅಲ್ಬೇ ಒಳಗೆ ಚಲಿಸುತ್ತದೆ, ಸಧ್ಯಕ್ಕೆ ದಕ್ಷಿಣ ರೈಲ್ವೇ ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ಅನುಮತಿ ಪಡೆದ ಖಾಸಗಿ ಸಾರಿಗೆ ನಿರ್ವಾಹಕರು ಇಲ್ಲಿ ಸಾಮಾನ್ಯವಾಗಿದ್ದಾರೆ. ಖಾಸಗಿ ಸ್ವಯಂಚಾಲಿತ ವಾಹನಗಳು ಇಲ್ಲಿ ಮಾಮೂಲಿಯಾಗಿವೆ, ನಗರದೊಳಗೆ ಸಾಮಾನ್ಯವಾಗಿ ಪ್ರತಿಯೊಂದು ಮನೆಯು ತನ್ನ ಸ್ವಂತ ಸ್ವಯಂ ಚಾಲಿತ ವಾಹನ ಹೊಂದಿದೆ.

ವೈದ್ಯಕೀಯ ಸೌಲಭ್ಯಗಳು[ಬದಲಾಯಿಸಿ]

The Ospital ng Maynila Medical Center

ವಿಶ್ವ ಆರೋಗ್ಯ ಸಂಸ್ಥೆಯ ಪಶ್ಚಿಮ ಪೆಸಿಫಿಕ್ ವಲಯದ ಪ್ರಾದೇಶಿಕ ಕಚೇರಿಯು ಮನಿಲಾದಲ್ಲಿದೆ, ಜೊತೆಗೆ ಫಿಲಿಪೈನಿನ ರಾಷ್ಟ್ರೀಯ ಕಚೇರಿ, ಆರೋಗ್ಯ ಇಲಾಖೆಯ ಪ್ರಧಾನ ಕಚೇರಿ, ಮತ್ತು ಇತರೆ ಖಾಸಗಿ ಮತ್ತು ಸಾರ್ವಜನಿಕ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕೇಂದ್ರಗಳು ನಗರದಲ್ಲಿವೆ. ಪ್ರವಾಸೋದ್ಯಮ ಇಲಾಖೆಯ ಬಹಳ ಕಾರ್ಯಕ್ರಮಗಳಲ್ಲಿ ಒಂದು ಕಾರ್ಯಕ್ರಮವೆಂದರೆ, ವೈದ್ಯಕೀಯ ಪ್ರವಾಸೋದ್ಯಮವನ್ನು ಫಿಲಿಪೈನಿನಲ್ಲಿ ಫ್ರೋತ್ಸಾಹಿಸುವುದು, ಅದಕ್ಕಾಗಿ ದೊಡ್ಡ ಸಂಖ್ಯೆಯ ಆರೋಗ್ಯ ಕೇಂದ್ರಗಳನ್ನು ಹಾಗೂ ಖನಿಜ ಜಲಧಾಮ ಅನುಕೂಲತೆಗಳನ್ನು ನಡೆಸುತ್ತಿದೆ. ಮನಿಲಾ ಆರೋಗ್ಯ ಇಲಾಖೆಯ ಜವಾಬ್ಧಾರಿ ಎಂದರೆ ಸಿಟಿ ಸರ್ಕಾರದ ಆರೋಗ್ಯದ ಕಾರ್ಯಕ್ರಮಗಳನ್ನು ಯೋಜಿಸಿ ಕಾರ್ಯರೂಪಕ್ಕೆ ತರುವುದಾಗಿದೆ. ಇದು ೪೪ ಆರೋಗ್ಯ ಕೇಂದ್ರಗಳನ್ನು ಮತ್ತು ಹೆರಿಗೆ ಸೌಕರ್ಯಗಳನ್ನು ನಗರದಾದ್ಯಂತ ನಿರ್ವಹಿಸುತ್ತದೆ.[೩೧] ಮನಿಲಾ ವೈದ್ಯರ ಆಸ್ಪತ್ರೆ, ಫಿಲಿಪೈನ್ ಜನರಲ್ ಹಾಸ್ಪಿಟಲ್, ಚೈನೀಸ್ ಜನರಲ್ ಹಾಸ್ಪಿಟಲ್ ಮತ್ತು ವೈದ್ಯಕೀಯ ಕೇಂದ್ರ, Dr. ಜೋಸ್ ಆರ್. ರೆಯೆಸ್ ಮೆಮೊರಿಯಲ್ ಮೆಡಿಕಲ್ ಸೆಂಟರ್, ಅವರ್ ಲೇಡಿ ಆಫ್ ಲಾರ್ಡೆಸ್ ಹಾಸ್ಪಿಟಲ್, ಸ್ಯಾನ್ ಲಜಾರೊ ಹಾಸ್ಪಿಟಲ್, ಯೂನಿವರ್ಸಿಟಿ ಆಫ್ ಸ್ಯಾಂಟೊ ಟೊಮಸ್ ಹಾಸ್ಪಿಟಲ್ ಮತ್ತು ನಗರ ಸ್ವಾಮ್ಯದ Ospital ng Maynila Medical Center ಇವು ನಗರದ ಪ್ರಸಿದ್ಧ ಆಸ್ಪತ್ರೆಗಳಾಗಿವೆ.[೨೬]

ಅಂತರಾಷ್ಟ್ರೀಯ ಸಂಬಂಧಗಳು[ಬದಲಾಯಿಸಿ]

  ಅಂತಾರಾಷ್ಟ್ರೀಯ
ಮೆಕ್ಸಿಕೋ ಅಕ್ಯಾಪುಲ್ಕೊ , ಮೆಕ್ಸಿಕೊ[೩೨]
ಕಜಾಕಸ್ಥಾನ್ ಆಸ್ತಾನಾ , ಕಜಕ್‌ಸ್ಥಾನ್[೩೨]
ಚೀನಾ ಬೀಜಿಂಗ್ , ಚೈನಾ (೨೦೦೨)[೩೨][೩೩][೩೪]
Romania ಬುಚಾರೆಸ್ಟ್ , ರೊಮಾನಿಯಾ(೧೯೮೬)[೩೨]
ಕೊಲೊಂಬಿಯ ಕಾರ್ಟಿಜೆನಾ , ಕೊಲಂಬಿಯಾ[೩೨]
ಚೀನಾ ಗುವಾಂಗ್ಜೌ , ಚೈನಾ (೧೯೮೨)[೩೨][೩೫]
ಇಸ್ರೇಲ್ ಹೈಫಾ , ಇಸ್ರೇಲ್(೧೯೭೧)[೩೨]
ಕ್ಯೂಬಾ ಹವನ , ಕ್ಯೂಬಾ[೩೨]
ವಿಯೆಟ್ನಾಮ್ ಹೊ ಚಿ ಮಿನ್ಹ್ ನಗರ , ವಿಯೆಟ್ನಾಂ[೩೨]
ಅಮೇರಿಕ ಸಂಯುಕ್ತ ಸಂಸ್ಥಾನ ಹೊನೊಲುಲು , USA[೩೨]
ಇಂಡೋನೇಷ್ಯಾ ಜಕಾರ್ತಾ , ಇಂಡೋನೇಶಿಯಾ[೩೨]
ಅಮೇರಿಕ ಸಂಯುಕ್ತ ಸಂಸ್ಥಾನ ಜೆರ್ಸೇ ನಗರ , USA[೩೨]
ಜಪಾನ್ ಯಾಗಿ , ಜಪಾನ್[೩೨]
ಪೆರು ಲಿಮಾ , ಪೆರು[೩೨]
Spain ಮ್ಯಾಡ್ರಿಡ್ , ಸ್ಪೆಯಿನ್ (೧೯೮೭)[೩೨][೩೬]
Spain ಮಲಗ , ಸ್ಪೆಯಿನ್[೩೨]
ಅಮೇರಿಕ ಸಂಯುಕ್ತ ಸಂಸ್ಥಾನ ಮಾಯಿ ಕೌಂಟಿ , USA[೩೨]
ಕೆನಡಾ ಮಾಂಟ್ರಿಯಲ್ , ಕೆನಡಾ (೨೦೦೫)[೩೨][೩೭]
ರಷ್ಯಾ ಮಾಸ್ಕೊ , ರಷಿಯಾ[೩೨]
ಭಾರತ ನವ ದೆಹಲಿ , ಭಾರತ[೩೨]
France ನೈಸ್ , ಫ್ರಾನ್ಸ್[೩೨]
ಅಮೇರಿಕ ಸಂಯುಕ್ತ ಸಂಸ್ಥಾನ ಸ್ಯಾಕ್ರಮೆಂಟೊ , USA[೩೨]
ಅಮೇರಿಕ ಸಂಯುಕ್ತ ಸಂಸ್ಥಾನ ಸ್ಯಾನ್ ಫ್ರಾನ್ಸಿಸ್ಕೊ , USA[೩೨]
ಚಿಲಿ ಸ್ಯಾಂಟಿಯಾಗೊ , ಚಿಲಿ[೩೨]
ಮಲೇಶಿಯ ಸೆಬೆರಂಗ್ ಪೆರಾಯ್ , ಮಲೇಶಿಯಾ[೩೨]
ಆಸ್ಟ್ರೇಲಿಯಾ ಸಿಡ್ನಿ , ಆಸ್ಟ್ರೇಲಿಯಾ[೩೨]
Taiwan ತಾಯ್‌ಚುಂಗ್ , ತೈವಾನ್[೩೨]
Taiwan ತಾಯ್ಪೆಯ್ , ತೈವಾನ್ (೧೯೬೬)[೩೨][೩೮]
ಜಪಾನ್ ತಾಕತ್ಸುಕಿ , ಜಪಾನ್[೩೨]
ಇರಾನ್ ತೆಹ್ರಾನ್ , ಇರಾನ್[೩೨]
ಕೆನಡಾ ವಿನ್ನಿಪೆಗ್ , ಕೆನಡಾ (೧೯೭೯)[೩೨][೩೯]
ಜಪಾನ್ ಯೊಕೊಹಾಮ , ಜಪಾನ್[೩೨][೪೦]
  ಸ್ನೇಹಮಯಿ ಪ್ರದೇಶಗಳು
ಟೆಂಪ್ಲೇಟು:Country data ROK ಬುಸಾನ್ , ರಿಪಬ್ಲಿಕ್ ಆಫ್ ಕೊರಿಯಾ[೩೨]
ಚೀನಾ ಶಾಂಘಾಯ್ , ಚೈನಾ[೩೨]
ಚೀನಾ ಗ್ಸಿಯಾನ್ , ಚೈನಾ[೩೨]
  ಸ್ಥಳೀಯ ನಗರಗಳು
ಫಿಲಿಪ್ಪೀನ್ಸ್ ಸೆಬು ನಗರ , ಫಿಲಿಪ್ಪೈನ್ಸ್[೩೨]
ಫಿಲಿಪ್ಪೀನ್ಸ್ ದಾವಾವೊ ನಗರ , ಫಿಲಿಪ್ಪೈನ್ಸ್[೩೨]

ಅವಳಿ ನಗರಗಳು — ಸೋದರಿ ನಗರಗಳು[ಬದಲಾಯಿಸಿ]

ಮನಿಲಾವು ಹಲವಾರುಸೋದರಿ ನಗರಗಳನ್ನು ಪ್ರಪಂಚದಾದ್ಯಂತ ಹೊಂದಿದೆ, ಅವನ್ನು ನಗರದ ಸರ್ಕಾರದಿಂದ ವರ್ಗೀಕರಿಸಲಾಗಿದೆ. ಪ್ರತಿ ಸೋದರಿ ನಗರವನ್ನು ಮೂರು ಭಾಗಗಳಾಗಿ ಮಾಡಲಾಗಿದೆ ಅವೆಂದರೆ ಅಂತರರಾಷ್ಟ್ರೀಯ , ಫ್ರೆಂಡ್ಲಿ ಲೊಕೇಶನ್ ಮತ್ತು ಲೋಕಲ್ ಸಿಟಿ .[೩೨] ಮನಿಲಾವು ೩೩ ಅಂತರರಾಷ್ಟ್ರೀಯ ಸೋದರಿ ನಗರಗಳನ್ನು ಹೊಂದಿದೆ, ಮೂರು ಫ್ರೆಂಡ್ಲಿ ಲೊಕೇಶನ್ ಮತ್ತು ಎರಡು ಲೋಕಲ್ ಸೋದರಿ ಸಿಟಿಗಳು.

ಇವನ್ನೂ ಗಮನಿಸಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟಿಪ್ಪಣಿಗಳು
i.   ^ ಮನಿಲಾ ಮತ್ತು ಪಾಸೇ ನಗರವು ಹಂಚಿಕೊಂಡ ಅಂಚಿನ ಒಳಗೆ.
ii.   ^ ಕ್ವೆಜಾನ್ ನಗರದ ವಿವಾದದಲ್ಲಿ.
iii.   ^ ಮನಿಲಾ ಮತ್ತು ಕಲೂಕನ್ ನಗರವು ಹಂಚಿಕೊಂಡ ಅಂಚಿನ ಒಳಗೆ.

ಅಡಿಟಿಪ್ಪಣಿಗಳು[ಬದಲಾಯಿಸಿ]

  1. ೧.೦ ೧.೧ ೧.೨ "Population and Annual Growth Rates by Region, Province, and City/Municipality: 1995, 2000, 2007" (PDF). National Statistics Office. Archived from the original (PDF) on 2009-09-02. Retrieved 04-04-2010. {{cite web}}: Check date values in: |accessdate= (help)
  2. ೨.೦ ೨.೧ "World's Densest Cities". Forbes Magazine. Retrieved 04-05-2010. {{cite web}}: Check date values in: |accessdate= (help)
  3. ೩.೦ ೩.೧ Gerini, G. E. (1905). "The Nagarakretagama List of Countries on the Indo-Chinese Mainland (Circâ 1380 A.D.)". The Journal of the Royal Asiatic Society of Great Britain and Ireland. Royal Asiatic Society of Great Britain and Ireland (July 1905): 485–511. Retrieved 25-04-10. {{cite journal}}: Check date values in: |accessdate= (help)
  4. "Pusat Sejarah Brunei" (in Malay). Government of Brunei Darussalam. Archived from the original on 2015-04-15. Retrieved 04-03-10. {{cite web}}: Check date values in: |accessdate= (help)CS1 maint: unrecognized language (link)
  5. Agoncillo 1990, p. 22
  6. "Manila (Philippines)". Britannica. Retrieved ೨೪-೦೪-೧೦. {{cite web}}: Check date values in: |accessdate= (help)
  7. ೭.೦ ೭.೧ Tracy 1995, p. 58
  8. ೮.೦ ೮.೧ "City Profiles:Manila, Philippines". United Nations. Retrieved 04-03-10. {{cite web}}: Check date values in: |accessdate= (help)
  9. White, Matthew. "Death Tolls for the Man-made Megadeaths of the 20th Century". Retrieved 2007-08-01.
  10. Hancock 2000, p. 16
  11. "Mahal Ko Si Lolo, Mahal Ko Si Lola". Archived from the original on 2010-02-22. Retrieved 25-04-10. {{cite web}}: Check date values in: |accessdate= (help)
  12. Mundo, Sheryl (12-01-09). "It's Atienza vs. Lim Part 2 in Manila". Manila: ABS-CBN News and Current Affairs. Archived from the original on 2009-12-03. Retrieved ೨೫-೦೪-೧೦. Environment Secretary Jose 'Lito' Atienza will get to tangle again with incumbent Manila Alfredo Lim in the coming ೨೦೧೦ elections. {{cite web}}: Check date values in: |accessdate=, |date=, and |year= / |date= mismatch (help); More than one of |author= and |last= specified (help); Unknown parameter |month= ignored (help)
  13. Legaspi, Amita (೧೭-೦೭-೦೮). "Councilor files raps vs Lim, Manila execs before CHR". GMA News. Retrieved ೨೦-೦೪-೧೦. A Manila City councilor on Thursday filed human rights complaints against Mayor Alfredo Lim, other city officials and policemen over the violent takeover of the Dealco slaughterhouse in Vitas, Tondo last July ೧೧. {{cite web}}: Check date values in: |accessdate= and |date= (help); More than one of |author= and |last= specified (help)
  14. "Geography of Manila". HowStuffWorks. Archived from the original on 2014-02-02. Retrieved ೧೩-೦೪-೧೦. {{cite web}}: Check date values in: |accessdate= (help)
  15. Alave, Kristine (08-18-04). "METRO MANILA AIR POLLUTED BEYOND ACCEPTABLE LEVELS". Clean Air Initiative - Asia. Manila: Cleanairnet.org. Retrieved 05-05-10. Metro Manila air is unsafe and harmful, with its pollutants at levels higher than what is acceptable worldwide, the Department of Health said yesterday {{cite web}}: Check date values in: |accessdate=, |date=, and |year= / |date= mismatch (help); More than one of |author= and |last= specified (help); Unknown parameter |month= ignored (help)
  16. Wallerstein, Claire. "Philippines tackles air pollution". NCBI. After six years of governmental wrangling and a massive nationwide campaign to gather signatures, the Philippines—home to one of the world's most polluted cities—is on the verge of passing clean air legislation. {{cite web}}: More than one of |author= and |last= specified (help); Unknown parameter |accesssdate= ignored (|access-date= suggested) (help)
  17. "POLLUTION ADVERSELY AFFECTS 98% OF METRO MANILA RESIDENTS". Hong Kong: Cleanairnet.org. 31-01-05. Archived from the original on 2006-04-27. Retrieved ೦೬-೦೫-೧೦. {{cite web}}: Check date values in: |accessdate=, |date=, and |year= / |date= mismatch (help); Unknown parameter |month= ignored (help)
  18. ೧೮.೦ ೧೮.೧ ೧೮.೨ Fajardo, Feliciano (1995). Economics. Philippines: Rex Bookstore, Inc. p. 357. ISBN 971-23-1794-3. Retrieved 06-05-10. {{cite book}}: Check date values in: |accessdate= (help)
  19. Odronia, Cris (07-11-08). "Metro's air pollution kills 5,000 annually". The Manila Times. Archived from the original on 2010-07-29. Retrieved ೦೫-೦೫-೧೦. {{cite web}}: Check date values in: |accessdate=, |date=, and |year= / |date= mismatch (help); More than one of |author= and |last= specified (help); Unknown parameter |month= ignored (help)
  20. "Manila – The city, History, Sister cities". Cambridge Encyclopedia. Archived from the original on 2008-09-14. Retrieved 04-04-2010. {{cite web}}: Check date values in: |accessdate= (help)
  21. "Fun Facts - Manila - Real Travel". RealTravel. Archived from the original on 2010-03-23. Retrieved 20-04-10. {{cite web}}: Check date values in: |accessdate= (help)
  22. ೨೨.೦ ೨೨.೧ "Manila City Population" (PDF). Manila City Government. Archived from the original (PDF) on 2006-08-11. Retrieved 04-04-2010. {{cite web}}: Check date values in: |accessdate= (help)
  23. "World Urban Areas: Population & Density" (PDF). demographia.com. August 2008. p. 80. Retrieved 2009-05-14.
  24. "GaWC – The World According to GaWC 2008". Globalization and World Cities Study Group and Network. 06-03-2009. Retrieved 04-04-2010. {{cite web}}: Check date values in: |accessdate= and |date= (help); Unknown parameter |month= ignored (help)CS1 maint: date and year (link)
  25. ೨೫.೦ ೨೫.೧ ೨೫.೨ "MSN Encarta: Manila". MSN Encarta. Archived from the original on 2009-11-01. Retrieved 10-04-10. {{cite web}}: Check date values in: |accessdate= (help)
  26. ೨೬.೦ ೨೬.೧ ೨೬.೨ "Wow Philippines: Manila-Cosmopolitan City of the Philippines". Department of Tourism. Archived from the original on 2004-06-06. Retrieved ೦೮-೦೯-೦೮. {{cite web}}: Check date values in: |accessdate= (help)
  27. "Rizal Park". WordTravels. Archived from the original on 2009-04-20. Retrieved 13-04-2010. {{cite web}}: Check date values in: |accessdate= (help)
  28. Cabayan, Itchie (07-04-10). "Good education a right, not privilege — Lim". City Government of Manila. Archived from the original on 2010-06-06. Retrieved 24-04-10. NO one should be deprived of a sound education for being poor {{cite web}}: Check date values in: |accessdate=, |date=, and |year= / |date= mismatch (help); More than one of |author= and |last= specified (help); Unknown parameter |month= ignored (help)
  29. "Transportation in the Philippines". AsianInfo.org. Retrieved 24-04-10. {{cite web}}: Check date values in: |accessdate= (help)
  30. ೩೦.೦ ೩೦.೧ "Number of Motor Vehicles Registered: Comparative, Annual 2006; 2007; 2008". Land Transportation Office. February ೩, ೨೦೦೯. Archived from the original on 2010-03-16. Retrieved February ೧೨, ೨೦೧೦. {{cite web}}: Check date values in: |accessdate= and |date= (help)
  31. Mabasa, Roy (14-04-07). "Free hospital, health aid in Manila assured". The Manila Bulletin. Archived from the original on 2012-07-16. Retrieved ೦೪-೦೪-೧೦. {{cite web}}: Check date values in: |accessdate=, |date=, and |year= / |date= mismatch (help); More than one of |author= and |last= specified (help); Unknown parameter |month= ignored (help)
  32. ೩೨.೦೦ ೩೨.೦೧ ೩೨.೦೨ ೩೨.೦೩ ೩೨.೦೪ ೩೨.೦೫ ೩೨.೦೬ ೩೨.೦೭ ೩೨.೦೮ ೩೨.೦೯ ೩೨.೧೦ ೩೨.೧೧ ೩೨.೧೨ ೩೨.೧೩ ೩೨.೧೪ ೩೨.೧೫ ೩೨.೧೬ ೩೨.೧೭ ೩೨.೧೮ ೩೨.೧೯ ೩೨.೨೦ ೩೨.೨೧ ೩೨.೨೨ ೩೨.೨೩ ೩೨.೨೪ ೩೨.೨೫ ೩೨.೨೬ ೩೨.೨೭ ೩೨.೨೮ ೩೨.೨೯ ೩೨.೩೦ ೩೨.೩೧ ೩೨.೩೨ ೩೨.೩೩ ೩೨.೩೪ ೩೨.೩೫ ೩೨.೩೬ ೩೨.೩೭ "Sister Cities of Manila". City Government of Manila. Archived from the original on 2009-08-06. Retrieved 2009-07-02.
  33. "Sister Cities". Beijing Municipal Government. Archived from the original on 2010-01-17. Retrieved 2009-06-23.
  34. Allison Lopez (August 7, 2008), Manila mayor flies to ‘sister city’ for Beijing Olympics, Philippine Daily Inquirer, archived from the original on 2008-09-30, retrieved 2008-09-09
  35. "Sister Cities of Guangzhou". Guangzhou Foreign Affairs Office. Retrieved 2010-02-10.
  36. "Mapa Mundi de las ciudades hermanadas" (in Spanish). Madrid City Government. Retrieved 19-04-10. {{cite web}}: Check date values in: |accessdate= (help)CS1 maint: unrecognized language (link)
  37. "Manila-Montreal Sister City Agreement Holds Potential for Better Cooperation". Internet Archive. 24-06-05. Archived from the original on 2008-01-24. Retrieved ೧೯-೦೪-೧೦. {{cite web}}: Check date values in: |accessdate=, |date=, and |year= / |date= mismatch (help); Unknown parameter |month= ignored (help)CS1 maint: bot: original URL status unknown (link)
  38. The 45 Sister Cities of taipei, taipei.gov, archived from the original on 2011-07-18, retrieved 2008-09-09
  39. Sister Cities, New Winnipeg, archived from the original on 2005-12-28, retrieved 2008-09-09{{citation}}: CS1 maint: bot: original URL status unknown (link)
  40. "Eight Cities/Six Ports: Yokohama's Sister Cities/Sister Ports". Yokohama Convention & Visitiors Bureau. Archived from the original on 2009-05-05. Retrieved 2009-07-18.

ಹೆಚ್ಚಿನ ಮಾಹಿತಿಗಾಗಿ[ಬದಲಾಯಿಸಿ]

"https://kn.wikipedia.org/w/index.php?title=ಮನಿಲ&oldid=1210341" ಇಂದ ಪಡೆಯಲ್ಪಟ್ಟಿದೆ