ಶಲ್ಯ ರಾಜ
ಶಲ್ಯ ರಾಜ | |
---|---|
ಮಾಹಿತಿ | |
ಕುಟುಂಬ | (ಮಾದರಿಯ - ತಂಗಿ) |
ಮಕ್ಕಳು | ರುಕುಮಾಂಗದ, ರುಕುಮಾರತ ಮತ್ತು ಮಾದ್ರಂಜಯ. |
ಸಂಬಂಧಿಕರು | ನಕುಲ ಮತ್ತು ಸಹದೇವ (ತಂಗಿಯ ಮಕ್ಕಳು), ಪಾಂಡು (ಭಾವ) |
ಶಲ್ಯ ರಾಜ[ಬದಲಾಯಿಸಿ]
ಶಲ್ಯ ರಾಜನು ಮಾದ್ರ ರಾಜ್ಯದ ರಾಜ ಮತ್ತು ಮಾದ್ರಿಯ ಅಣ್ಣ. ಶಲ್ಯನು ಗಧಾ ಯುದ್ಧದಲ್ಲಿ ದೃಢ ಎದುರಾಳಿಯಾಗಿರುತ್ತಾನೆ. ಶಲ್ಯನು ದುರ್ಯೋಧನನ ಕುತಂತ್ರಕ್ಕೆ ವಶವಾಗಿ ಕೌರವ ಪಕ್ಷಸೇರಿ ಪಾಂಡವರ ವಿರುದ್ಧ ಯುದ್ಧಮಾಡುವಂತಾಗುತ್ತದೆ.
ಪಾಂಡುರಾಜನು ಅಳಿಯಾನಾದ ರೀತಿ[ಬದಲಾಯಿಸಿ]
ಒಂದು ದಿನ ಶಲ್ಯ ರಾಜ ತನ್ನ ಸೈನ್ಯದೊಂದಿಗೆ ಹಸ್ತಿನಾಪುರಕ್ಕೆ ಹೋಗುವಾಗ, ಪಾಂಡು ರಾಜ ನೋಡಿ ಅವರನ್ನು ಮಾತನಾಡಿಸುತ್ತಾನೆ. ಶಲ್ಯ ರಾಜನ ಸಾಮಾನ್ಯ ಮಾತುಗಳಿಂದ ಪ್ರೇರಣೆಗೊಂಡ ಪಾಂಡು ರಾಜ ಶಲ್ಯನೊಡನೆ ಸ್ನೇಹ ಬೆಳಸಿ ತನ್ನ ಆಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾನೆ. ಭೀಷ್ಮ ರಾಜರಿಗೆ ಶಲ್ಯ ಮತ್ತು ಅವನ ಸುಂದರ ಸಹೋದರಿಯಾದ ಮಾದ್ರಿಯ ಬಗ್ಗೆ ಗೊತ್ತಿದ್ದ ಕಾರಣ, ಪಾಂಡುರಾಜನ ಜೊತೆ ಮದುವೆ ಮಾಡಿಸಲು ನಿರ್ಧರಿಸಿ, ಶಲ್ಯನ ಜೊತೆ ಮಾತನಾಡುತ್ತಾನೆ. ಶಲ್ಯನು ಇದಕ್ಕೆ ಒಪ್ಪಿದ ಕಾರಣ ಚಿನ್ನ ಮತ್ತು ರತ್ನಗಳನ್ನು ಉಡುಗೊರೆಯಾಗಿ ಕೊಟ್ಟು ಕಳುಹಿಸುತ್ತಾನೆ.
ನಕುಲ ಮತ್ತು ಸಹದೇವರನ್ನು ಉತ್ತರಾಧಿಕಾರಿಯಾಗಿಸಲು ಪ್ರಯತ್ನ[ಬದಲಾಯಿಸಿ]
ವರ್ಷಗಳು ಕಳೆದಂತೆ ಮಾದ್ರಿಯು ತನ್ನ ಪತಿಯ ಸಾವಿಗೆ ತಾನೇ ಕಾರಣವೆಂಬ ನೋವಿನಿಂದ ಸಹಗಮನ ಮಾಡಿಕೊಂಡಳು. ಆಗ ಶಲ್ಯರಾಜ, ನಕುಲ ಮತ್ತು ಸಹದೇವರನ್ನು ಕರೆದು ಉತ್ತರಾಧಿಕಾರಿಯಾಗುವಂತೆ ಆಶಿಸುತ್ತಾನೆ . ನಕುಲ ಮತ್ತು ಸಹದೇವರ ೧೮ನೇ ಜನ್ಮದಿನದಂದು, ಶಲ್ಯ ರಾಜ “ನಕುಲ ಮತ್ತು ಸಹದೇವರು ಹಸ್ತಿನಾಪುರದ ಸಿಂಹಾಸನಕ್ಕೆ ಕಾಯುವ ಬದಲಿಗೆ ಮಾದ್ರದ ರಾಜರಾಗುತ್ತಾರೆ” ಎಂದು ಹೇಳುತ್ತಾನೆ. ಶಲ್ಯ ರಾಜನಿಗೆ ಸ್ವಂತ ಮಕ್ಕಳಿದ್ದರು ಕೂಡ, ನಕುಲ ಮತ್ತು ಸಹದೇವರು ದೇವತೆಯರ ಮಕ್ಕಳೆಂದು ತನ್ನ ರಾಜ್ಯದ ಉತ್ತರಾಧಿಕಾರಿಯಾಗಿಸಲು ಇಷ್ಟಪಡುತ್ತಾನೆ.ಆದರೆ ನಕುಲ ಮತ್ತು ಸಹದೇವರನ್ನು ಕುಂತಿ ಮಾತೆ ತನ್ನ ಸ್ವಂತ ಮಕ್ಕಳಂತೆಯೂ ಮತ್ತು ಧರ್ಮರಾಯ,ಭೀಮ,ಅರ್ಜುನರು ಸ್ವಂತ ತಮ್ಮಂದಿರಂತೆಯೂ ನೋಡಿಕೊಳ್ಳುತ್ತಿದ್ದ ಕಾರಣ,ಉತ್ತರಾಧಿಕಾರಿಯಾಗಲು ಒಪ್ಪದೆ,ಶಲ್ಯ ರಾಜನಿಗೆ ನಿನ್ನ “ಮಕ್ಕಳನ್ನೆ ಉತ್ತರಾಧಿಕಾರಿಯಾಗಿ ಮಾಡು” ಎಂದು ಹೇಳುತ್ತಾರೆ. ಶಲ್ಯ ರಾಜ ಅದಕ್ಕೆ ಒಪ್ಪದೇ ಇದ್ದಾಗ , ನಕುಲ ಮತ್ತು ಸಹದೇವರು ನಾವು ರಾಜ್ಯಾಡಳಿತವನ್ನು ಸ್ವೀಕರಿಸಿದರು ಕೂಡ ಪಾಂಡವರ ಜೊತೆ ಇದ್ದುಕೊಂಡು ರಾಜ್ಯಾಡಳಿತ ಮಾಡಲು ಅನುಮತಿ ಇದ್ದಾರೆ ಮಾತ್ರ ಉತ್ತರಾಧಿಕಾರಿಯಾಗುತ್ತೇವೆ ಎಂದು ಹೇಳುತ್ತಾರೆ.
ಕುರುಕ್ಷೇತ್ರದಲ್ಲಿ ಶಲ್ಯನ ಪಾತ್ರ[ಬದಲಾಯಿಸಿ]
ಶಲ್ಯ ರಾಜನು ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರಿಗೆ ನೆರವಾಗಲು ತನ್ನ ಸೈನ್ಯವನ್ನು ಕರೆದುಕೊಂಡು ಬರುತ್ತಿರುತ್ತಾನೆ. ಸಂಚರಿಸುವಾಗ ಸೈನ್ಯವು ಹಸಿವು ಮತ್ತು ದಣಿವಿಗೆ ಒಳಗಾಗುತ್ತದೆ, ಇದನ್ನು ತಿಳಿದ ದುರ್ಯೋದನನು ಶಲ್ಯನ ಸೈನ್ಯವನ್ನು ತನ್ನ ಕಡೆಗೆ ಪಡೆಯಲು ಕಪಟದಿಂದ, ತಾನು ಆಹಾರ ಮತ್ತು ವಿರಾಮದ ನೆರವಿಗೆ ಬರುತ್ತಿದ್ದೇನೆ ಎಂದು ತಿಳಿಯಗೊಡದೆ ತನ್ನ ಅಧಿಕಾರಿಗಳನ್ನು ಮುಂದಿಟ್ಟುಕೊಂಡು,ಧರ್ಮರಾಯನು ಆಹಾರ ಮತ್ತು ವಿರಾಮಕ್ಕೆ ನೆರವನ್ನು ಒದಗಿಸುತಿದ್ದಾನೆ ಎಂಬಂತೆ ವರ್ತಿಸುತ್ತಾನೆ. ಕೊನೆಗೆ ತನ್ನ ಅಧಿಕಾರಿಯಿಂದ ಇಂತಹ ಉಪಕಾರ ಮಾಡಿದವರಿಗೆ ನಿನ್ನ ಉಡುಗೊರೆ ಏನು ಎಂದು ಕೇಳಿಸುತ್ತಾನೆ. ಶಲ್ಯ ರಾಜ ಈ ರೀತಿಯ ಉಪಚಾರ ಮಾಡುವ ಭಾವನೆ ಇರುವುದು ಯುಧಿಷ್ಠಿರನಿಗೆ ಮಾತ್ರ , ಅವನೇ ಈ ಎಲ್ಲಾ ಉಪಚಾರ ಮಾಡಿರುವುದು ಎಂದು ಭಾವಿಸಿ,ಇಂತಹ ಆತಿಥ್ಯಕ್ಕೆ ಕಾರಣರಾದ ಧರ್ಮಾತ್ಮರು ಯಾರೋ ಅವರಿಗೆ ಯುದ್ಧದಲ್ಲಿ ನೆರವಾಗುತ್ತೇನೆ ಎಂದು ಮಾತುಕೊಡುತ್ತಾನೆ.ನಂತರ ದುರ್ಯೋದನ ಶಲ್ಯನ ಮುಂದೆ ಬಂದು ತಾನೇ ಈ ಆತಿಥ್ಯಕ್ಕೆ ಕಾರಣ ಎಂದು ಹೇಳುತ್ತಾನೆ. ಮನನೊಂದ ಶಲ್ಯ, ಬೇರೆ ದಾರಿ ಇಲ್ಲದೆ ಕೌರವರ ಕಡೆ ಯುದ್ಧ ಮಾಡಬೇಕಾಗುತ್ತದೆ.
ವಿಷಯವನ್ನು ತಿಳಿದ ನಕುಲ ಮತ್ತು ಸಹದೇವರು ಶಲ್ಯರಾಜನನ್ನು ನಿಂದಿಸಲು ಮುಂದಾದಾಗ ಯುಧಿಷ್ಠಿರ ಸಮಾಧಾನ ಪಡಿಸಿ,ಶಲ್ಯ ರಾಜನಿಗೆ “ನೀನು ನಿಷ್ಠೆಯಿಂದ ಕೌರವರ ಕಡೆ ಯುದ್ಧಮಾಡು” ಎಂದು ಹೇಳುತ್ತಾನೆ.
ಕರ್ಣನು ಯುದ್ಧದಲ್ಲಿ ಶಲ್ಯರಾಜನ ಸೂಚನೆಗಳನ್ನು ತಿರಸ್ಕರಿಸಿದ ಸನ್ನಿವೇಶಗಳು[ಬದಲಾಯಿಸಿ]
- ಘಟೋದ್ಗಜನ ವಿರುದ್ಧ ಯುದ್ಧಮಾಡುವಾಗ ಕರ್ಣ ಘಟೋದ್ಗಜನನ್ನು ಸೋಲಿಸಲು ವಾಸವಿ ಶಕ್ತಿ ಅಸ್ತ್ರ ವನ್ನು ಬಳಸಲು ಮುಂದಾದಾಗ, ಶಲ್ಯನು ಕರ್ಣನಿಗೆ ಬೇಡ ಕರ್ಣ ವಾಸವಿ ಶಕ್ತಿ ಅಸ್ತ್ರ ವನ್ನು ಅರ್ಜುನನ ಮೇಲೆ ಪ್ರಯೋಗಿಸಲು ಉಳಿಸಿಕೋ ಎಂದು ಹೇಳಿದರೂ ಕೇಳದೆ ಬ್ರಹ್ಮಾಸ್ತ್ರವನ್ನು ಬಳಸಿ ಘಟೋದ್ಗಜನನ್ನು ಕೊಲ್ಲುತ್ತಾನೆ.
- ಅರ್ಜುನನ ವಿರುದ್ಧ ಯುದ್ಧ ಮಾಡುವಾಗ ನಾಗಾಸ್ತ್ರವನ್ನು ಪ್ರಯೋಗಿಸಲು ಮುಂದಾಗುತ್ತಾನೆ, ಆಗ ಶಲ್ಯ ರಾಜ,ಕರ್ಣ ಅಸ್ತ್ರವನ್ನು ಅರ್ಜುನನ ಎದೆಗೆ ಗುರಿ ಮಾಡಿ ಬಿಡು ಎಂದಾಗ, ಇಲ್ಲ ಅವನ ತಲೆ ಕತ್ತರಿಸಿ ಅದನ್ನು ನನ್ನ ಗೆಳೆಯನಿಗೆ ಕೊಟ್ಟು ಅವನ ಸಂತೋಷವನ್ನ ನೋಡಬೇಕು ಎನ್ನುತ್ತಾನೆ.ಆದರೆ ಶಲ್ಯ ಬೇಡ ಕರ್ಣ, ನಿನ್ನ ಗೆಳೆಯನ ಸಂತೋಷದ ಸಲುವಾಗಿ ಯುದ್ಧವನ್ನ ಮಾಡಬೇಡ. ಬದಲಿಗೆ ಯುದ್ಧವನ್ನ ಗೆಲ್ಲುವ ಸಲುವಾಗಿ ಯುದ್ಧ ಮಾಡು ಎಂದು ಹೇಳಿದರು ಕೂಡ ಕೇಳದೆ ಕೋಪದಿಂದ ಶಲ್ಯನಿಗೆ ನೀನು ಸಾರಥಿ ,ಸಾರಥಿಯ ಕೆಲಸ ಮಾಡು, ಮಂತ್ರಿಯ ಕೆಲಸವನ್ನಲ್ಲ ಎಂದು ಹೇಳಿ ನಾಗಾಸ್ತ್ರವನ್ನು ಅರ್ಜುನನ ತಲೆಗೆ ಗುರಿಮಾಡಿ ಪ್ರಯೋಗಿಸುತ್ತಾನೆ. ಆಗ ಕೃಷ್ಣ ತನ್ನ ಕಾಲಿನಿಂದ ರಥವನ್ನು ತುಳಿದು ಭೂಮಿಯ ಒಳಗೆ ಹೋಗುವಂತೆ ಮಾಡಿದಾಗ, ನಾಗಾಸ್ತ್ರ ಅರ್ಜುನನ ಕೀರಿಟಕ್ಕೆ ಸೋಕಿ ವಿಫಲವಾಗುತ್ತದೆ.
- ಕರ್ಣನು ಯುದ್ಧವನ್ನು ಮುಂದುವರೆಸುತ್ತ ತನ್ನ ಸಾರಥಿಯಾದ ಶಲ್ಯನಿಗೆ , ರಕ್ತದಿಂದ ತೋಯ್ದು ಕೆಸರುಗೊಂಡ ಯುದ್ಧಭೂಮಿಯ ಮುಕಾಂತರ ನಡೆಸಲು ಹೇಳುತ್ತಾನೆ. ಶಲ್ಯನು “ಬೇಡ ಕರ್ಣ ನಾವು ಬೇರೆ ಮಾರ್ಗದಿಂದ ಹೋಗೋಣ ಏಕೆಂದರೆ ಆ ಜಾಗದಲ್ಲಿ ರಕ್ತ ತುಂಬಿ ಭೂಮಿ ಕೆಸರಾಗಿದೆ. ನಾವು ಅಲ್ಲಿಗೆ ಹೋದರೆ ಚಕ್ರವು ಕೆಸರಿಗೆ ಸಿಲುಕಿಕೊಳ್ಳುತ್ತದೆ”. ಎಂದು ಹೇಳಿದರು ಕೂಡ ಕರ್ಣ ಕೇಳದೆ ರಥವನ್ನು ಅದೇ ಮಾರ್ಗದಲ್ಲಿ ನಡೆಸುವಂತೆ ಆಜ್ಞಾಪಿಸುತ್ತಾನೆ. ರಥವು ರಕ್ತ ಕೂಡಿದ ರಣ ರಂಗಕ್ಕೆ ತಲುಪಿದಾಗ ಚಕ್ರವು ಕೆಸರಿಗೆ ಸಿಲುಕಿಕೊಳ್ಳುತ್ತದೆ. ಕರ್ಣನು ಸಿಲುಕಿದ ಚಕ್ರವನ್ನು ಸರಿಪಡಿಸಿಕೊಳ್ಳುತ್ತಿರುವಾಗ ಅರ್ಜುನನು ತನ್ನ ಬಾಣವನ್ನು ಪ್ರಯೋಗಿಸಿ ಕರ್ಣನನ್ನು ಕೊಲ್ಲುತ್ತಾನೆ.