ವಿಷಯಕ್ಕೆ ಹೋಗು

ತಂದೆಯ ದಿನಾಚರಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Father's Day
ಆಚರಿಸಲಾಗುತ್ತದೆMany countries
ರೀತಿHistorical
ದಿನಾಂಕVaries regionally
Related toMother's Day, Parents' Day, Children's Day

ಜಗತ್ತಿನ 52 ರಾಷ್ಟ್ರಗಳಲ್ಲಿ, ಪ್ರತಿ ವರ್ಷದ ಜೂನ್ ತಿಂಗಳ ಮೂರನೆ ಭಾನುವಾರದಂದು ಮತ್ತು ಇತರ ಕಡೆಗಳಲ್ಲಿ ಇನ್ನಿತರ ದಿನಗಳಂದು ತಂದೆಯ ದಿನಾಚರಣೆ ಎಂದು ಆಚರಿಸಲಾಗುತ್ತದೆ. ತಂದೆಗೆ ಗೌರವ ಸಲ್ಲಿಸಲು ಈ ದಿನ ಮೀಸಲು. ತಾಯಿಯನ್ನು ಗೌರವಿಸಲು ಆಚರಿಸುವ ಮಾತೃ ದಿನಕ್ಕೆ ಇದು ಪೂರಕವಾಗಿದೆ.

ಇತಿಹಾಸ[ಬದಲಾಯಿಸಿ]

ತಾಯಿ ದಿನದ ಆಚರಣೆಗೆ ಪೂರಕವಾಗಿ ಪಿತೃತ್ವ ದಿನಾಚರಣೆಯನ್ನು,ಪುರುಷ ಪೋಷಕರನ್ನು ಮತ್ತು ತಂದೆ ತಾತಂದಿರನ್ನು ಗೌರವಿಸುವ ಸಲುವಾಗಿ ಇಪ್ಪತ್ತನೆಯ ಶತಮಾನದ ಆರಂಭದಲ್ಲಿ ತಂದೆಯ ದಿನಾಚರಣೆಯು ಉದ್ಘಾಟಿಸಲ್ಪಟ್ಟಿತು. ಪ್ರಪಂಚದಾದ್ಯಂತ ವಿವಿಧ ದಿನಗಳಲ್ಲಿ ತಂದೆಯ ದಿನಾಚರಣೆ ಆಚರಿಸಲ್ಪಡುತ್ತದೆ. ಉಡುಗೊರೆಗಳ ವಿನಿಮಯ,ತಂದೆಗಾಗಿ ವಿಶೇಷ ಭೋಜನ ಮತ್ತು ಕುಟುಂಬ ಸಹಿತವಾದ ಕಾರ್ಯಕ್ರಮಗಳ ಏರ್ಪಡಿಸುವುದು ಈ ದಿದ ವಿಶೇಷ. ಸ್ಪೋಕೇನ್‌ನ ಸೊನೋರಾ ದೋಡ್ಸ್ ಅವರ ಶ್ರಮದಿಂದ 1910, ಜೂನ್ 19ರಂದು ತಂದೆಯ ದಿನಾಚರಣೆಯನ್ನು ಮೊದಲ ಬಾರಿಗೆ ಆಚರಿಸಿರುವುದಾಗಿ ಭಾವಿಸಲಾಗಿದೆ. [೧] 1909ರಲ್ಲಿ ಸ್ಪೋಕೇನ್‌ನ ಸೆಂಟ್ರಲ್ ಮೆತೊಡಿಸ್ಟ್ ಎಪಿಸ್ಕೊಪಲ್ ಚರ್ಚಿನ ಒಂದು ಭಾನುವಾರ ಮಾತೃ ದಿನದಾಚರಣೆಯ ಧರ್ಮೋಪದೇಶವನ್ನು ಆಲೈಸುತ್ತಾ ವಾಷಿಂಗ್ಟನ್‌ಸೊನೋರಾ ಸ್ಮಾರ್ಟ್ ದೋಡ್‌ ತಂದೆಯನ್ನು ಗೌರವಿಸಲು ತಾನೇ ತಾನಾಗಿ ಯೋಚಿಸಿದಳು ಮತ್ತು 1910ರ ಜೂನ್ 19ರಂದು ತಂದೆಗೆ ಗೌರವವನ್ನು ಅರ್ಪಿಸಿದಳು. ಪಿತೃ ಸಮಾನರೆಲ್ಲರನ್ನೂ ಗೌರವಿಸುವ ಆಚರಣೆಗೆ ಅಧಿಕೃತವಾಗಿ ಚಾಲನೆ ಕೊಟ್ಟ ಮೊದಲಿಗಳಾದಳು ಈಕೆ.

ಇದನ್ನು ಅಧಿಕೃತ ರಜಾ ದಿನವೆಂದು ಪರಿಗಣಿಸಲು ಅನೇಕ ವರ್ಷಗಳೇ ಹಿಡಿದವು. YWCA, YMCA ಮತ್ತು ಚರ್ಚುಗಳ ಬೆಂಬಲವಿದ್ದರೂ ಕೂಡಾ ಕ್ಯಾಲೆಂಡರ್‍ನಲ್ಲಿ ಇದು ತಪ್ಪಿ ಹೋಗಿ ಬಿಡುತ್ತಿತ್ತು.[೨] ಮಾತೃ ದಿನಾಚರಣೆಯನ್ನು ಹುಮ್ಮಸ್ಸಿನಿಂದ ಆಚರಿಸಿದರೆ ತಂದೆಯ ದಿನಾಚರಣೆಯು ನಗೆಪಾಟಲಿಗೆ ಈಡಾಯಿತು.[೨] ಬಿಡುವು ದೊರೆಯುವ ಸಂಗತಿಯತ್ತ ನಿಧಾನವಾಗಿ ಗಂಭೀರ ಚಿಂತನೆ ಶುರುವಾಯಿತು, ಅದರೆ ಅದು ಸದುದ್ದೇಶದಿಂದ ಕೂಡಿರಲಿಲ್ಲ. ಪತ್ರಿಕೆಗಳಲ್ಲಿ ಹಾಸ್ಯಕ್ಕೀಡಾದ ಇದು ಕುಚೋದ್ಯಕ್ಕೆ,ವಿಕೃತ ಅಣಕ ಬರಹಕ್ಕೆ ಮತ್ತು ಸ್ಥಳೀಯ ಪತ್ರಿಕೆ ಸ್ಪೋಕ್ಸ್ಮನ್-ರಿವ್ಯೂ ನ ಹಾಸ್ಯಕ್ಕೆ ಗುರಿಯಾಯಿತು.[೨] ಮುಂದೊಂದು ದಿನ "ತಾತಂದಿರ ದಿನ", "ವೃತ್ತಿಪರ ಕಾರ್ಯದರ್ಶಿಗಳ ದಿನ" ಎಂದು ಕ್ಯಾಲೆಂಡರ್ ತುಂಬುವದಕ್ಕೆ ದಾರಿಯಾಗುತ್ತಾ ಕೊನೆಗೆ [೨]"ಮೇಜನ್ನು [೨] ಸ್ವಚ್ಚಗೊಳ್ಳಿಸುವ ರಾಷ್ಟೀಯ ದಿನ" ಅನ್ನುವ ಮಟ್ಟಕ್ಕೂ ಇದು ಇಳಿದು ಬಿಡುತ್ತದೆ ಎಂದು ಅನೇಕರು ಹುಬ್ಬೇರಿಸಿದರು.

1913[೩] ರಲ್ಲಿ ಇದಕ್ಕೊಂದು ಮಸೂದೆಯನ್ನು ಮಂಡಿಸಲಾಯಿತು. USನ ಅಧ್ಯಕ್ಷ ಕಾಲ್ವಿನ್ ಕೂಲಿಡ್ಜ್ 1924[ಸೂಕ್ತ ಉಲ್ಲೇಖನ ಬೇಕು]ರಲ್ಲಿ ಇದನ್ನು ಬೆಂಬಲಿಸಿದರು ಮತ್ತು 1930ರಲ್ಲಿ ರಜೆಯನ್ನು ಅಧಿಕೃತಗೊಳಿಸಬೇಕೆ ಎಂಬುದನ್ನು ಪರಿಶೀಲಿಸಲು ವರ್ತಕರನ್ನೊಳಗೊಂಡ ರಾಷ್ಟೀಯ ಸಮಿತಿಯನ್ನು ರಚಿಸಲಾಯಿತು.[೪] ಅಧ್ಯಕ್ಷ ಲಿಂಡನ್ ಜಾನ್‌ಸನ್ 1966ರಲ್ಲಿ ಹೊರಡಿಸಿದ ಆಜ್ಞೆಯಿಂದಾಗಿ ಅದು ಸಾರ್ವತ್ರಿಕ ರಜಾ ದಿನವಾತಿತು. ತಂದೆಯ ದಿನಾಚರಣೆಯ ಜೊತೆಗೆ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆ ಎಂದೂ ಅನೇಕ ದೇಶಗಳಲ್ಲಿ ನವಂಬರ್ 19ರಂದು ಆಚರಿಸುವುದುಂಟು.

ವ್ಯಾಪಾರೀಕರಣ[ಬದಲಾಯಿಸಿ]

ನ್ಯೂಯಾರ್ಕ್ ಸಿಟಿಯಲ್ಲಿ ಅಸೋಸಿಯೇಟಡ್ ಮೆನ್ಸ್ ವೇರ್ ರೀಟೇಲರ್ಸ್‌ನವರು 2014ರಲ್ಲಿ ರಾಷ್ಟ್ರೀಯ ತಂದೆಯ ದಿನಾಚರಣೆಯ ಸಮಿತಿ ಎಂದು ರಚಿಸಿ ಆನಂತರ ಇನ್ನಷ್ಟು ವ್ಯಾಪಾರಿಗಳ ಬೇರೆ ಬೇರೆ ಗುಂಪನ್ನು ಸೇರಿಸಿಕೊಂಡು 2038ರಲ್ಲಿ ನ್ಯಾಷನಲ್ ಕೌನ್ಸಿಲ್ ಫಾರ್ ದಿ ಪ್ರಮೋಷನ್ ಆಫ್ ಫಾದರ್ಸ್ ಡೇ ಎಂದು ಅದಕ್ಕೆ ಮರುನಾಮಕರ ಮಾಡಲಾಗುವುದು[೪]. ಈ ದಿನ ಅಧಿಕೃತ ರೆಜೆ ಎಂದು ಜನ ಮನದಲ್ಲಿ ಬಿಂಬಿಸಿ ಈ ರಜೆಯ ಅವಧಿಯಲ್ಲಿ ವ್ಯಾಪಾರೋದ್ಯಮದ ಚಟುವಟಿಕೆಯನ್ನು ಹೆಚ್ಚು ವ್ಯವಸ್ಥಿತವಾಗಿಸಿ ಮಾರಾಟ ವರ್ಧಿಸುವುದು ಈ ಪರಿಷತ್ತಿನ ಗುರಿಯಾಗಿ, ಭಾರತದಲ್ಲಿಯೂ ಸಾರ್ವತ್ರಿಕೆ ರಜೆ ಘೋಷಣೆ ಮಾಡಲಾಗುತ್ತದೆ.[೪] ಈ ಪರಿಷತ್ತಿಗೆ ದಾಡ್‌ರವರ ಬೆಂಬಲ ಯಾವತ್ತೂ ಇತ್ತು.ರಜೆಯನ್ನು ವ್ಯಾಪಾರೀಕರಣಗೊಳಿಸಿವುದಕ್ಕೆ ಮತ್ತು ಉಡುಗೊರೆಗಳು ಅತ್ಯಂತ ಅಧಿಕ ಮಟ್ಟದಲ್ಲಿ ಮಾರಾಟವಾಗುವಂತೆ ವರ್ತಕರು ಯೋಜಿಸುವಲ್ಲಿ ದಾಡ್ ಅವರ ತಕರಾರು ಇರಲಿಲ್ಲ.[೫] ಮಾತೃ ದಿನಾಚರಣೆ ಸಂದರ್ಭದಲ್ಲಿನ ಎಲ್ಲ ಬಗೆಯ ವ್ಯಾಪಾರೀಕರಣವನ್ನೂ ಸಕ್ರಿಯವಾಗಿ ಪಾಲ್ಗೊಂಡು ವಿರೋಧಿಸಿದ ಅನ್ನಾ ಜಾರ್ವಿಸ್ ಈ ಪ್ರಕಾರ ದಾಡ್‌ ಅವರಿಗಿಂತ ಭಿನ್ನರಾಗಿ ನಿಲ್ಲುತ್ತಾರೆ.[೫]

ರಜೆಯು ಅಣಕ-ಕುಚೋದ್ಯಕ್ಕೆ ಎಡೆಯಾಗುತ್ತಿರುವುದನ್ನೇ ಗಮನಿಸಿದ ವರ್ತಕರು ಅದನ್ನು ತಮ್ಮ ಜಾಹೀರಾತಿನಲ್ಲಿ ಬಳಸಿಕೊಂಡು ತಂದೆಗೆ ಕೊಡಬಹುದಾದ ಉಡುಗೊರೆಗಳ ಮಾರಾಟದ ಭರಾಟೆಯಲ್ಲಿ ಮುಳುಗಿ ಲಾಭ ಮಾಡಿಕೊಳ್ಳತೊಡಗಿದರು.[೬] ಇದು ವ್ಯಾಪಾರೀಕರಣದ ಹೆಬ್ಬಾಗಿಲೆಂಬುದು ಗೊತ್ತಿದ್ದರೂ ಜನ ಉಡುಗೊರೆಗಳನ್ನು ಖರೀದಿಸುವ ಬಲವಂತಕ್ಕೊಳಗಾದರು.ಆ ದಿನದಂದು ಉಡುಗೊರೆ ನೀಡುವುದೊಂದು ಅಂಗೀಕೃತ ಸಂಪ್ರದಾಯ ಎನ್ನುವ ಮಟ್ಟಕ್ಕೆ ಇದು ಬೆಳೆಯಿತು.[೬] ಆರು ಜನ ತಂದೆಯರಲ್ಲಿ ಒಬ್ಬ ತಂದೆಗೆ ಮಾತ್ರ ಉಡುಗೊರೆ ಸಿಕ್ಕಿದೆ ಎಂದು ತಂದೆಯ ದಿನಾಚರಣೆಯ ಪರಿಷತ್ತು 1937ರಲ್ಲಿ ಲೆಕ್ಕ ಹಾಕಿತು.[೬] 1980ರಲ್ಲಿ ತನ್ನ ಗುರಿ ಸಾಧಿಸಿರುವುದಾಗಿ ಪರಿಷತ್ತು ಘೋಷಿಸಿತು:ಒಂದು ದಿನಕ್ಕೆ ಸೀಮಿತವಾಗಿದ್ದ ಆಚರಣೆಯನ್ನು ಮೂರು ವಾರದ ವಾಣಿಜ್ಯೋತ್ಸವವನ್ನಾಗಿ ಎಳೆಯಿತು,ಅಷ್ಟೇ ಅಲ್ಲ "ಎರಡನೇ ಕ್ರಿಸ್‌ಮಸ್‌" ಎಂದು ಕರೆಸಿಕೊಳ್ಳುವ ಹಂತ ತಲಪಿತು.[೬] ಪರಿಷತ್ತು ಮತ್ತು ಅದನ್ನು ಬೆಂಬಲಿಸುವ ಇನ್ನಿತ್ತರ ಗುಂಪುಗಳ ಸಹಕಾರವಿಲ್ಲದಿದ್ದರೆ ರಜೆಯೆನ್ನುವುದು ಮಾಯವಾಗಿ ಬಿಡುತ್ತಿತ್ತು ಎಂದು 1949ರಲ್ಲಿ ಅದರ ಕಾರ್ಯಕಾರಿ ನಿರ್ದೇಶಕರು ವಿವರಿಸಿದರು.[೬]

ಏಕ ವಚನವೋ ಬಹು ವಚನವೋ..[ಬದಲಾಯಿಸಿ]

"Fathers' Day" ಮತ್ತು "Father's Day"-ಸೂಕ್ಷ್ಮವಾಗಿ ಗಮನಿಸಿ, ಎರಡು ಬಗೆಯ ಬರಹದಲ್ಲೂ ಪದಗಳ ಸ್ವಾಮ್ಯ ಸಂಬಂಧವನ್ನು ಸೂಚಿಸುತ್ತವೆ. ವಾಕ್ಯರಚನೆಯಲ್ಲಿ ಬಳಸಬಹುದಾದ ಚಿಹ್ನೆಇಲ್ಲಿ ಗಮನಿಸಬಹುದಾದ ಮತ್ತೊಂದು ಅಂಶ("Fathers' Day" ಮತ್ತು "Father's Day"). ಮೊದಲನೆಯದು ಬಹುವಚನವಾದರೆ ಎರಡನೆ ರೀತಿಯಲ್ಲಿ ಬರೆಯುವುದು ಏಕವಚನ.ಇಂಗ್ಲಿಷ್‌ ಭಾಷೆಯಲ್ಲಿರುವ Fathers'Day ಎಂಬುದನ್ನು ಉಚ್ಚರಿಸಿದಾಗ ಸಾಮಾನ್ಯವಾಗಿ ಬಹುವಚನದಲ್ಲಿ ಅರ್ಥ ಮಾಡಿಕೊಳ್ಳಲಾಗುತ್ತದೆ; ಅಪ್ಪಂದಿರ ದಿನ ಎಂಬ ಅರ್ಥ ಒದಗಿ ಬಂದು ಅದು ಅಪ್ಪಂದಿರ ಸಮೂಹಕ್ಕೇ ಅನ್ವಯವಾಗುತ್ತದೆ. Father's Day-ಹೀಗೆ ಬರೆದಾಗ ಅಪ್ಪನ ದಿನ ಎಂಬ ಏಕವಚನವಾಗುತ್ತದೆ.ಅರ್ಥೈಸಿಕೊಳ್ಳುವುದು ಬಹುವಚನದಲ್ಲಾದರೆ ಏಕವಚನದ ರೂಪದಲ್ಲೇ ಬರೆಯುವುದು ಸರ್ವೇಸಾಮಾನ್ಯವಾಗಿದೆ. ದಾಡ್ "Fathers' Day" ಎಂದೇ ತಮ್ಮ ಮೂಲ ಲಿಖಿತ ಮನವಿಯಲ್ಲಿ ರಜೆಗಾಗಿ ಬಳಸಿದರು,[೧] ಆದರದು "Father's Day" ಎಂದೇ 1913ರಲ್ಲಿ US ಕಾಂಗ್ರೆಸ್‌ನಲ್ಲಿ [೩] ರಜೆಗಾಗಿ ಮೊದಲ ಬಾರಿಗೆ ಮಂಡಿಸಲಾದ ಮಸೂದೆಯಲ್ಲಿ ಬಳಸಿಯಾಗಿತ್ತು ಮತ್ತು ಅದರ ಕರ್ತೃವನ್ನು 2008ರಲ್ಲಿ ಶ್ಲಾಘಿಸಿದಾಗಲೂ U.S. ಕಾಂಗ್ರೆಸ್ ಕೂಡ ಅದೇ ರೀತಿ ಬಳಕೆಮಾಡಿತ್ತು.[೭]

ವಿಶ್ವಾದ್ಯಂತ ದಿನಾಂಕಗಳು[ಬದಲಾಯಿಸಿ]

ತಂದೆಯ ದಿನಾಚರಣೆ ಎಂದು ಅಧಿಕೃತವಾಗಿ ಪರಿಗಣಿಸಲ್ಪಟ್ಟ ದಿನಾಂಕಗಳು ದೇಶದಿಂದ ದೇಶಕ್ಕೆ ಭಿನ್ನವಾಗಿದೆ. ಆಚರಣೆಗೆ ಸಂಬಂಧಿಸಿದ ದಿನಾಂಕವನ್ನು ಈ ವಿಭಾಗದಲ್ಲಿ ಕೆಲವು ಮಹತ್ವದದ ಉದಾಹರಣೆಗಳನ್ನು ಪಟ್ಟಿ ಮಾಡಲಾಗಿದೆ.

ಗ್ರಿಗೋರಿಯನ್ ಕ್ಯಾಲೆಂಡರ್
ವ್ಯಾಖ್ಯಾನ ಮಾದರಿ ದಿನಾಂಕ ದೇಶ
ಜನವರಿ ೬ ಸೆರ್ಬಿಯ ಸರ್ಬಿಯಾ ("Paterice")*
ಫೆಬ್ರವರಿ ೨೩ ರಷ್ಯಾ ರಷ್ಯ (ಡಿಫೆಂಡರ್ ಆಫ್ ದಿ ಫಾದರ್ ಲ್ಯಾಂಡ್ ಡೇ Day)*
ಮಾರ್ಚ್ ೧೯ ಅಂಡೋರ ಆಂಡೊರ್ರ (ಡೈಯಾ ಡೆಲ್ ಪೇರ್)
ಬೊಲಿವಿಯ ಬೋಲಿವಿಯಾ
ಹೊಂಡುರಾಸ್ ಹೊಂಡೂರಾಸ್[೮]
ಇಟಲಿ ಇಟಲಿ (ಫಿಸ್ಟಾ ಡೆಲ್ ಪಾಪ)
Liechtenstein ಲೈಕೆನ್ಸ್ಟೀಯನ್
Macau ಮಕಾವೊ (ಡೈ ಡೋ ಪೈ)
ಪೋರ್ಚುಗಲ್ ಪೋರ್ಚುಗಲ್ (ಡೈಯಾ ಡೋ ಪೈ)
Spain ಸ್ಪೈನ್ (ಡೈ ಡೆಲ್ ಪಾಡ್ರೆ, ಡೈಯಾ ಡೆಲ್ ಪಾರೆ, ಡೈಯಾ ಡೋ ಪೈ)
ಮೇ ಎರಡನೇ ಭಾನುವಾರ ಮೇ 9, 2010
ಮೇ 14, 2011
Romania ರೊಮಾನಿಯಾ (ಝೀಯಾ ಟಾಟಾಲುಯಿ)
ಮೇ 8 ದಕ್ಷಿಣ ಕೊರಿಯಾ ದಕ್ಷಿಣ ಕೊರಿಯಾ (ಮಾತಾ-ಪಿತರ ದಿನ)
ಮೇ ಮೂರನೆ ಭಾನುವಾರ ಮೇ 17,2009
ಮೇ 16, 2010
ಟೋಂಗಾ ಟೊಂಗಾ
ಆರೋಹಣ ದಿನ ಮೇ 21, 2009
ಮೇ 13, 2010
Germany ಜರ್ಮನಿ
ಜೂನ್ ಮೊದಲ ಭಾನುವಾರ ಜೂನ್‌ 7, 2006.
ಜೂನ್‌ 6, 2007
Lithuania ಲುಫ್ತಾನಿಯಾ
ಜೂನ್ 5 (ಸಂವಿಧಾನದ ದಿನ) ಡೆನ್ಮಾರ್ಕ್ಡೆನ್ಮಾರ್ಕ್‌
ಜೂನ್ ಎರಡನೆಯ ಭಾನುವಾರ ಜೂನ್‍ 14, 2009
ಜೂನ್ 13, 2010
Austria ಆಸ್ಟ್ರಿಯಾ
Belgiumಬೆಲ್ಜಿಯಂ
ಜೂನ್ ಮೂರನೆ ಭಾನುವಾರ ಜೂನ್ 21, 2009
ಜೂನ್‌20, 2010.
ಜೂನ್ 19, 2011
ಜೂನ್‌ 17, 2012.
ಟೆಂಪ್ಲೇಟು:Country data Antiguaಆಂಟಿಗುವಾ
ಅರ್ಜೆಂಟೀನಆರ್ಜೆಂಟೈನಾ[೯]
ಬಹಾಮಾಸ್ಬಹಮಾಸ್
ಬಾಂಗ್ಲಾದೇಶಬಾಂಗ್ಲಾದೇಶ
ಟೆಂಪ್ಲೇಟು:Country data barbadosಬರ್ಬಾಡೋಸ್
ಬೆಲೀಜ್ಬೆಲೈಜ್
Bulgariaಬಲ್ಗೇರಿಯಾ
ಕೆನಡಾಕೆನಡಾ
ಚಿಲಿಚಿಲಿ
ಚೀನಾಚೈನಾದ ಜನರ ಗಣತಂತ್ರ**
ಕೊಲಂಬಿಯಾ
ಕೋಸ್ಟಾ ರೈಸಾ[೧೦]
ಕ್ಯೂಬಾ[೧೧]
ಸಿಪ್ರಸ್
ಜೆಕ್‌ ರಿಪಬ್ಲಿಕ್‌
ಈಕ್ವೆಡಾರ್
ಇಥಿಯೋಪಿಯಾ
ಫ್ರಾನ್ಸ್‌
ಘಾನಾ
Greeceಗ್ರೀಸ್
ಗಯಾನ ಗುಯಾನಾ
ಹಾಂಗ್ ಕಾಂಗ್ಹಾಂಗ್‌ ಕಾಂಗ್‌
Hungary ಹಂಗೇರಿ
ಭಾರತಭಾರತ
ಐರ್ಲೆಂಡ್‌
Jamaica ಜಮೈಕಾ
ಜಪಾನ್‌
ಮಲೇಷಿಯಾ
Malta ಮಾಳ್ಟಾ
ಮಾರಿಷಸ್ ಮಾರೀಷಿಯಸ್
ಮೆಕ್ಸಿಕೋ ಮೆಕ್ಸಿಕೋ[೧೨] ಮೆಕ್ಸಿಕೊ[೧೨]
Myanmar ಮೈಯನ್ಮಾರ್
ನೆದರ್ಲೆಂಡ್ಸ್‌ನೆದರ್ಲ್ಯಾಂಡ್ಸ್
ಪಾಕಿಸ್ತಾನಪಾಕಿಸ್ತಾನ
ಪನಾಮಾ ಪನಾಮಾ[೧೩][೧೪]
ಪೆರಗ್ವೆ ಪರಾಗುವಾ
ಪೆರು ಪೆರು[೧೫]
ಫಿಲಿಪ್ಪೀನ್ಸ್ ಫಿಲಿಪೈನ್ಸ್[೧೬]
ಪೋರ್ಟೊ ರಿಕೊ ಪ್ಯುರ್ಟೋ ರೈಕೊ
ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್ ಸೈಂಟ್ ವಿನ್ಸೆಂಟ್ ಆಂಡ್ ದಿ ಗ್ರಿನೇದೈನ್ಸ್
ಸಿಂಗಾಪುರಸಿಂಗಾಪುರ್‌
Slovakia ಸ್ಲೊವೇಕಿಯಾ
ದಕ್ಷಿಣ ಆಫ್ರಿಕಾದಕ್ಷಿಣ ಆಫ್ರಿಕಾ
ಶ್ರೀಲಂಕಾಶ್ರೀಲಂಕಾ
ಸ್ವಿಟ್ಜರ್ಲ್ಯಾಂಡ್ ಸ್ವಿಝರ್ ಲ್ಯಾಂಡ್
ಟ್ರಿನಿಡಾಡ್ ಮತ್ತು ಟೊಬೆಗೊ ಟ್ರಿನಿಡಾಡ್ ಮತ್ತು ಟೊಬಾಗೊ
ಟರ್ಕಿಟರ್ಕಿ
ಉಕ್ರೇನ್ ಉಕ್ರೇನ್
ಯುನೈಟೆಡ್‌ ಕಿಂಗ್‌ಡಮ್‌ಯುನೈಟೆಡ್ ಕಿಂಗ್ಡಂ
ಯುನೈಟೆಡ್‌ ಸ್ಟೇಟ್ಸ್‌ಅಮೇರಿಕ ಸಂಯುಕ್ತ ಸಂಸ್ಥಾನ
ವೆನೆಜುವೆಲಾ ವೆನೆಝ್ಯುಲ್ಲಾವೆನೆಜುವೆಲಾ
ಜಿಂಬಾಬ್ವೆ [[ಜಿಂಬಾಬ್ವೆ|ಜಿಂಬಾಬ್ವೆಜಿಂಬಾಬ್ವೆ]]
ಜೂನ್ 17 ಎಲ್ ಸಾಲ್ವಡಾರ್ El Salvador[೧೭]ಗ್ವಾಟೆಮಾಲ ಗ್ವಾಟೇ ಮಾಲಾ[೧೮]
ಜೂನ್ 21 ಈಜಿಪ್ಟ್ ಈಜಿಪ್ತ್ಲೆಬನನ್ ಲೆಬನಾನ್ಜಾರ್ಡನ್ ಜೊರ್ಡಾನ್ಸಿರಿಯಾ ಸಿರಿಯಾಉಗಾಂಡ ಉಗಾಂಡಾ
ಜೂನ್ 23 ನಿಕರಾಗುವ ನಿಕಾರಾಗುವಾPoland ಪೋಲಾಂಡ್ಪೋ
ಜೂನ್ ಕೊನೆ ಭಾನುವಾರ ಜೂನ್ 28, 2009
ಜೂನ್ 27, 2010
ಹೈತಿ ಹೈಟಿ[೧೯]
ಜುಲೈ ಎರಡನೆಯ ಭಾನುವಾರ ಜುಲೈ 12, 2009.
ಜುಲೈ 11, 2010
ಉರುಗ್ವೆ ಉರುಗುವಾ
ಜುಲೈ ಕೊನೆ ಭಾನುವಾರ ಜುಲೈ 26, 2009
ಜುಲೈ 25, 2010
ಡೊಮಿನಿಕ ಗಣರಾಜ್ಯಡೊಮಿನಿಕನ್‌ ರಿಪಬ್ಲಿಕ್‌
ಆಗಸ್ಟ್ ಎರಡನೆಯ ಭಾನುವಾರ ಆಗಸ್ಟ್ 9, 2009
ಆಗಸ್ಟ್ 8, 2010
Brazilಬ್ರೆಜಿಲ್‌
ಸಮೋಅ ಸಮಾವೊ
ಆಗಸ್ಟ್‌ 8 ತೈವಾನ್ತೈವಾನ್‌
ಸೆಪ್ಟೆಂಬರ್ ಮೊದಲ ಭಾನುವಾರ ಸೆಪ್ಟೆಂಬರ್‌ 6, 2009.
ಸಪ್ಟೆಂಬರ್ 5, 2010
ಆಸ್ಟ್ರೇಲಿಯಾಆಸ್ಟ್ರೇಲಿಯಾ
ಫಿಜಿ ಫಿಜಿ
ನ್ಯೂ ಜೀಲ್ಯಾಂಡ್ನ್ಯೂ ಜೀಲೆಂಡ್‌
ಪಪುವಾ ನ್ಯೂಗಿನಿ Papua New Guinea
Kushe Aunshi – Bwaako Mukh Herne Din बुवाको मुख हेर्ने दिन (कुशे औंशी) ಆಗಸ್ಟ್ 20, 2009 ನೇಪಾಳ Nepal
First Sunday of October ಅಕ್ಟೋಬರ್ 4, 2009
ಅಕ್ಟೋಬರ್‌ 3, 2010
Luxembourg Luxembourg
Second Sunday of November November 8, 2009
November 14, 2010
Estonia Estonia
Finlandಫಿನ್ಲೆಂಡ್‌
ಐಸ್ಲೆಂಡ್ ಐಸ್ಲೆಂಡ್‌
ನಾರ್ವೇನಾರ್ವೆ
Sweden ಸ್ವೀಡನ್‌
ಡಿಸೆಂಬರ್ ೫ ಥೈಲ್ಯಾಂಡ್ ಥೈಲೆಂಡ್‌
ಡಿಸೆಂಬರ್ ೨೬ Bulgaria ಬಲ್ಗೇರಿಯಾ
ಇಸ್ಲಾಂ ಕ್ಯಾಲೆಂಡರ್
ವ್ಯಾಖ್ಯಾನ ಮಾದರಿ ದಿನಾಂಕಗಳು ದೇಶ
13 ರಜಾಬ್ ಜೂನ್‍ 18, 2007 ಇರಾನ್ ಇರಾನ್[೨೦][೨೧]ಪಾಕಿಸ್ತಾನ ಪಾಕಿಸ್ತಾನ

*ಅಧಿಕೃತವಾಗಿ,ಈ ಶಬ್ದವೇ ಸೂಚಿಸುವಂತೆ, ರಜೆಯನ್ನು ಸಂಭ್ರಮಿಸುವವರು ರಷ್ಯದ ಸಶಸ್ತ್ರ ಸೇನೆಯಲ್ಲಿ ಇರುವವರು ಅಥವಾ ಇದ್ದವರು. ಆದರೆ ಸಾಂಪ್ರದಾಯಿಕವಾಗಿ, ರಾಷ್ಟ್ರೀಯವಾಗಿ ಎಲ್ಲಾ ಅಪ್ಪಂದಿರ ಜೊತೆಗೆ ಬೇರೆ ವಯಸ್ಕ ಪುರುಷರು ಮತ್ತು ಗಂಡು ಮಕ್ಕಳೂ ಸಹಾ ಅಭಿನಂದನೆಗಳನ್ನು ಸ್ವೀಕರಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು]
**ಚೀನಾದಲ್ಲಿ ಚೀನಾ ಗಣ ತಂತ್ರದ ಶೀರ್ಷಿಕೆಯಡಿಯಲ್ಲಿ, ಇನ್ನೂ ರಾಷ್ಟ್ರೀಯತಾವಾದಿ ಆಡಳಿತದ ಸಮಯದಲ್ಲಿ),1945ರ ಆಗಸ್ಟ 8ರಂದು ಶಾಂಘಾಯ್ ನಲ್ಲಿ ತಂದೆಯ ದಿನಾಚರಣೆ ಆಚರಿಸಲಾಯಿತು.

ಅಂತಾರಾಷ್ಟ್ರೀಯ ಇತಿಹಾಸ ಮತ್ತು ಸಂಪ್ರದಾಯಗಳು[ಬದಲಾಯಿಸಿ]

ಕೆಲವು ಕೆಥೋಲಿಕ ರಾಷ್ಟ್ರಗಳಲ್ಲಿ ಇದನ್ನು ಸಂತ ಜೋಸೆಫ್‌ರ ಹಬ್ಬದಂದು ಆಚರಿಸಲ್ಪಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಅರ್ಜೆಂಟೀನಾ[ಬದಲಾಯಿಸಿ]

ಆರ್ಜಂಟೀನಾದಲ್ಲಿ ತಂದೆಯ ದಿನಾಚರಣೆಯನ್ನು ಜೂನ್ ತಿಂಗಳ ಮೂರನೆ ಭಾನುವಾರದಂದು ಆಚರಿಸಲಾಗುತ್ತದೆ. ಆದರೆ ಈ ದಿನಾಂಕವನ್ನು ಆಗಸ್ಟ್ 24ಕ್ಕೆ ಬದಲಾಯಿಸಲು ಅನೇಕ ಸಲ ಯತ್ನಿಸಲಾಯಿತು. ರಾಷ್ಟ್ರ ಪಿತ ಜೋಸ್ ಡಿ ಸ್ಯಾನ್ ಮಾರ್ಟಿನ್ ಅವರು ತಂದೆಯಾದ ದಿನವಾದ ಆ ದಿನಕ್ಕೆ ತಂದೆಯ ದಿನಾಚರಣೆಯನ್ನು ವರ್ಗಾಯಿಸಿ ಅವರ ಸ್ಮರಣಾರ್ಹ ದಿನವನ್ನಾಗಿಸಬೇಕೆಂಬ ಯತ್ನಗಳಾದವು.[೯]

1953ರಲ್ಲಿ, ಎಲ್ಲಾ ವಿದ್ಯಾ ಸಂಸ್ಥೆಗಳು ಜೋಸ್ ಡಿ ಸ್ಯಾನ್ ಮಾರ್ಟಿನ್ ಗೌರವಾರ್ಥ ಆಗಸ್ಟ 24ರಂದು ತಂದೆಯ ದಿನಾಚರಣೆಯನ್ನು ಆಚರಿಸಬೇಕೆಂದು ಮೆಂಡೋಝ ಪ್ರಾಂತ್ಯದ ಶಾಲೆಗಳ ಸಾರ್ವಜನಿಕ ನಿರ್ದೇಶನಕ್ಕೆ ಪ್ರಸ್ತಾವವನ್ನು ಇರಿಸಲಾಯಿತು. 1958ರಲ್ಲಿ ಜೂನ್ ತಿಂಗಳ ಮೂರನೆ ಭಾನುವಾರದಂದು ಮೊದಲ ಬಾರಿಗೆ ಇದನ್ನು ಆಚರಿಸಲಾಯಿತು. ಆದರೆ ವಿವಿಧ ಸಮೂಹಗಳ ಒತ್ತಾಯದ ಕಾರಣ ಅದನ್ನು ಶಾಲೆಯ ಕ್ಯಾಲೆಂಡರಿನಲ್ಲಿ ಸೇರಿಸಲಿಲ್ಲ.[೨೨]

’ತಂದೆಯ ದಿನಾಚರಣೆಯನ್ನು’ಶಾಲೆಗಳಲ್ಲಿ ಆಗಸ್ಟ್ 24ರಂದು ಆಚರಿಸುವುದು ಪ್ರಾರಂಭವಾಯಿತು. ಪ್ರಾಂತೀಯ ಗವರ್ನರ್ ಅವರು ಅಂದೇ ’ತಂದೆಯ ದಿನಾಚರಣೆಯನ್ನು’ಆಚರಿಸಬೇಕೆಂದು 1982ರಲ್ಲಿ ಶಾಸನ ಬದ್ಧಗೊಳಿಸಿದರು.[೨೨]

ಯೋಜನೆಯಾಗಿ ಆಗಸ್ಟ್ 24ಕ್ಕೆ ಬದಲಾಯಿಸಿ ಏಕರೂಪತೆ ತರಬೇಕೆಂದು 2004ರಲ್ಲಿ ಹಲವಾರು ಪ್ರಸ್ತಾವನೆಗಳು ಆರ್ಜಂಟೀನ್ಕೆಮರಾ ಡಿ ಡಿಪ್ಯುಟಾಡೋಸ್‌ ಮುಂದಿಡಲಾಯಿತು.[೨೨] ಅನುಮೋದನೆಗೊಂಡ ಮೇಲೆ ಆ ಯೋಜನೆಯನ್ನು ಅರ್ಜಂಟೀನಾದ ಸೆನೇಟ್‌ಗೆ ಅಂತಿಮ ಪರಿಶೀಲನೆಗೆ ಮತ್ತು ಅನುಮತಿಗೆ ಕಳುಹಿಸಲಾಯಿತು. ಪ್ರಸ್ತಾವನೆಯಲ್ಲಿನ ದಿನಾಂಕವನ್ನು ಬದಲಿಸಿದ ಸೆನೇಟ್‌ ಆಗಸ್ಟ್ ಮೂರನೆ ಭಾನುವಾರದ ಹೊಸ ದಿನಾಂಕವನ್ನು ನಿಗದಿ ಮಾಡಿ ಅನುಮೋದನೆಗೆ ಇಟ್ಟಿತು. ಸೆನೇಟ್‌ನ ಉದ್ದೇಶಿತ ಆಧಿವೇಶನದಲ್ಲಿ ಈ ಯೋಜನೆ ಚರ್ಚೆಗೇ ಬಾರದೇ ಅಂತಿಮವಾಗಿ ಸೋಲುಂಡಿತು.[೨೩]

ಆಸ್ಟ್ರೇಲಿಯಾ[ಬದಲಾಯಿಸಿ]

ಆಸ್ಟ್ರೇಲಿಯಾದಲ್ಲಿ ಸೆಪ್ಟೆಂಬರ್‌‌‌ನ ಮೊದಲ ಭಾನುವಾರದಂದು ತಂದೆಯ ದಿನಾಚರಣೆ ಆಚರಿಸುತ್ತಾರೆ ಆದರೆ ಅಂದು ಸಾರ್ವತ್ರಿಕ ರಜೆ ಇಲ್ಲ.

ಕೋಸ್ಟ ರಿಕಾ[ಬದಲಾಯಿಸಿ]

ಕೋಸ್ಟ ರಿಕಾದಲ್ಲಿ ಯುನಿದಾಡ್ ಸೋಶಿಯಲ್ ಕ್ರಿಸ್ಟೈನಾ ಪಕ್ಷವು ಜೂನ್ ಮೂರನೆ ಭಾನುವಾರಕ್ಕೆ ಬದಲಾಗಿ ಸಂತ ಜೋಸಫ್‌ರ ದಿನವಾದ ಮಾರ್ಚಿ 19ಕ್ಕೆ ಬದಲಾಯಿಸಬೇಕೆಂದು ಮಸೂದೆಯನ್ನು ಮಂಡಿಸಿ ಸೂಚಿಸಿತು.[೨೪] ಸಂತರು ದೇಶದ ರಾಜಧಾನಿ ಸ್ಯಾನ್ ಜೋಸ್, ಕೋಸ್ಟ ರಿಕಾ ಎಂದು ಹೆಸರನ್ನು ಸೂಚಿಸಿದ್ದರಿಂದ ಅವರಿಗೆ ಇದು ಗೌರವ ಸಂದಾಯವಾಗುತ್ತದೆ ಮತ್ತು ಕುಟುಂಬದ ಮುಖ್ಯಸ್ಥರು, ಸಂತ ಕಾರ್ಯಕರ್ತರಾದ ಜೋಸಫ್‌ರ ಹಬ್ಬ ದಂದು ತಂದೆಯ ದಿನಾಚರಣೆ ಎಂದು ಆ ಸಮಯದಲ್ಲಿ ಆಚರಿಸ ಬಹುದಾಗಿದೆ.[೧೦] ಜೂನ್ ತಿಂಗಳ ಮೂರನೆ ಭಾನುವಾರವೇ ಅಧಿಕೃತ ದಿನಾಂಕವಾಗಿ ಮುಂದುವರಿದಿದೆ.

ಜರ್ಮನಿ[ಬದಲಾಯಿಸಿ]

ಹೆರೆನ್‌ಟ್ಯಾಗಿನ ಮೇಲೆ ಹೈಕಿಂಗ್/ಕುಡಿತ

ವಿಶ್ವದ ಇತರ ಭಾಗಕ್ಕಿಂತ ಜರ್ಮನಿಯಲ್ಲಿ ತಂದೆಯ ದಿನಾಚರಣೆಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ.[೨೫][೨೬] ಪೂರ್ವಜರು ಕೂಡಾ ಇದೇ ಹೆಸರಿನ ಆಚರಣೆಯೊಂದನ್ನು ಪಾಲಿಸುತ್ತಿದ್ದರಾದರೂ ಅರ್ಥ ಮಾತ್ರ ಸಂಪೂರ್ಣ ವಿಭಿನ್ನ. ಈಸ್ಟರ್ ಹಬ್ಬದ ನಲವತ್ತು ದಿನಗಳ ನಂತರ ಬರುವ ಗುರುವಾರ ಅಸೆನ್ಶನ್ ಡೇ ಆಗಿದ್ದು ಅಂದು ವಾಟರ್‌ಟ್ಯಾಗ್ ಆಚರಿಸಲಾಗುತ್ತದೆ ಆ ದಿನ ಸಾಮೂಹಿಕ ರಜೆಯಾಗಿರುತ್ತದೆ.‌ ಪ್ರಾದೇಶಿಕವಾಗಿ ಅದನ್ನು ಪುರುಷರ ದಿನ, ಮಾನ್ನರ್ ಟ್ಯಾಗ್ ಅಥವಾ ಜಂಟಲ್ ಮೆನ್ಸ್ ಡೇ, ಹೆರೆನ್‌ಟ್ಯಾಗ್ ಎಂದು ಕರೆಯುತ್ತಾರೆ, ಪುರುಷರನ್ನು ಮಾತ್ರ ಎಳೆದೊಯ್ಯುವ ಪ್ರವಾಸದ ಸಂಪ್ರದಾಯವಿದೆ. ಇದರಲ್ಲಿ ಒಂದು ಅಥವಾ ಇನ್ನು ಹೆಚ್ಚು ಚಿಕ್ಕ ವ್ಯಾಗನ್‌ಗಳನ್ನು ಬೋಲರ್ ವ್ಯಾಗನ್ ಅನ್ನು ಮಾನವ ಬಲದಿಂದ ಎಳೆದೊಯ್ಯಲಾಗುತ್ತದೆ.

ವ್ಯಾಗನ್‌ಗಳಲ್ಲಿ ಆಯಾ ಪ್ರದೇಶಕ್ಕೆ ತಕ್ಕಂತೆ ವೈನ್ ಅಥವಾ ಬೀರ್ ಮತ್ತು ಸಾಂಪ್ರದಾಯಿಕವಾದ ಪ್ರಾದೇಶಿಕ ಊಟ, ಸೌಮಾಗನ್ , ಲಿಬರ್‌ವರ್ಸ್ಟ್ , ಲಿವರ್‌ವರ್ಸ್ಟ್, ಬ್ಲಟ್‌ವರ್ಸ್ಟ್ ‌,ಬ್ಲಡ್ ಸಾಸೇಜ್ ಆಗಬಹುದಾದ ಹಾಸ್ಮನ್‌ಕೋಸ್ಟ್ , ತರಕಾರಿಗಳು,ಮೊಟ್ಟೆಗಳು ಇತ್ಯಾದಿ ಇರುತ್ತದೆ. ಹೆಚ್ಚಿನ ಪುರುಷರು ಈ ರಜೆಯನ್ನು ಕುಡಿಯಲಿಕ್ಕಾಗಿಯೇ ಉಪಯೋಗಿಸಿಕೊಂಡು ರಸ್ತೆ ಉದ್ದಕ್ಕೂ ಗುಂಪು-ಗುಂಪುಗಳಾಗಿ ಅಲೆಯುತ್ತ ಇದರಲ್ಲಿ ಭಾಗಿಗಳಾಗದ ಸಾಂಪ್ರದಾಯಿಕ ಜರ್ಮನಿಯರಿಗೆ ಇರುಸುಮುರುಸನ್ನು ಉಂಟು ಮಾಡುತ್ತಾರೆ.[೨೬][೨೭] ಪೊಲೀಸ್ ಮತ್ತು ತುರ್ತು ಸೇವಾ ಸಿಬ್ಬಂದಿ ಕಟ್ಟೆಚ್ಚರದಿಂದ ಇರುತ್ತಾರೆ.ಮತ್ತು ಕೆಲವು ಎಡ-ಪಂಕ್ತೀಯರು ಹಾಗೂ ಸ್ತ್ರೀಪರ ಸಂಘಟನೆಯವರು ಈ ರಜೆಯನ್ನು ನಿಷೇಧಿಸಲು ಒತ್ತಾಯಿಸುತ್ತಾರೆ.[೨೭]

ಜರ್ಮನಿಯ ಭಾಗಗಳಾದ ಬವಾರಿಯಾ ಮತ್ತು ಉತ್ತರ ಭಾಗಗಳಲ್ಲಿ ಈ ನಿರ್ದಿಷ್ಟ ದಿನವನ್ನು 'ವಾಟರ್‌ಟ್ಯಾಗ್' ಎಂದು ಕರೆಯುತ್ತಾರೆ, ಅದು ತಂದೆಯ ದಿನಾಚರಣೆ ಎಂಬುದಕ್ಕೆ ಸಮಾನಾಂತರ ಪದವಾಗಿರುತ್ತದೆ.

ನ್ಯೂಜಿಲೆಂಡ್‌[ಬದಲಾಯಿಸಿ]

ನ್ಯೂಜಿಲೆಂಡ್‌ನಲ್ಲಿ ತಂದೆಯ ದಿನಾಚರಣೆಯನ್ನು ಸೆಪ್ಟೆಂಬ‌ರ್‌‍ ತಿಂಗಳಿನ ಮೊದಲ ಭಾನುವಾರದಂದು ಆಚರಿಸುತ್ತಾರೆ ಆದರೆ ಅಂದು ಸಾರ್ವತ್ರಿಕ ರಜೆ ಇಲ್ಲ.

ದಿ ಫಿಲಿಪೈನ್ಸ್[ಬದಲಾಯಿಸಿ]

ಫಿಲಿಪೈನ್ಸ್‌ನಲ್ಲಿ ತಂದೆಯ ದಿನಾಚರಣೆಯಂದು ಅಧಿಕೃತ ರಜೆಯಿಲ್ಲ, ಆದರೆ ಜೂನ್ 3ನೇ ಭಾನುವಾರ ಅದನ್ನು ವ್ಯಾಪಕವಾಗಿ ಆಚರಿಸಲಾಗುತ್ತದೆ. 1960 ಮತ್ತು 1970ರಲ್ಲಿ ಜನಿಸಿದ ಬಹುತೇಕ ಫಿಲಿಪೈನ್ಸ್ ಜನರು ತಂದೆಯ ದಿನಾಚರಣೆಯನ್ನು ಆಚರಿಸಿಲ್ಲ ಆದರೆ ಯುನೈಟೆಡ್ ಸ್ಟೇಟ್ಸ್‌ನ ಪ್ರಭಾವವನ್ನು ದೂರದರ್ಶನದಿಂದ ಪಡೆದು ಎಷ್ಟೋ ಸಂಪ್ರದಾಯಗಳನ್ನು ಮತ್ತು ಅಮೇರಿಕಾದ ರಜಾ ದಿನಗಳನ್ನು ಅನುಸರಿಸಿಸುತ್ತಾರೆ. ಇಂಟರ್‌ನೆಟ್ ಆಗಮನವು ಕೂಡ ಫಿಲಿಪೈನ್ಸ್‌ನವರು ಈ ರಜೆಯ ಪ್ರಚಾರಕ್ಕೆ ಸಹಾಯವಾಯಿತು.

ರೋಮನ್ ಕ್ಯಾಥೊಲಿಕ್ ಸಂಪ್ರದಾಯ[ಬದಲಾಯಿಸಿ]

ರೋಮನ್ ಕ್ಯಾಥೊಲಿಕ್ ಸಂಪ್ರದಾಯದಲ್ಲಿ ತಂದೆಯನ್ನು,ಸಂತ ಜೋಸೆಫ್‌ರ ಹಬ್ಬ ಎಂದು ಸಾಮಾನ್ಯವಾಗಿ ಕರೆಯುವ, ಸಂತ ಜೋಸಫ್‌ರ ದಿನ ಮಾರ್ಚ್ 19ರಂದು ಆಚರಿಸುತ್ತಾರೆ, ಕೆಲವು ರಾಷ್ಟ್ರಗಳಲ್ಲಿ ಇದು ಜ್ಯಾತ್ಯತೀತ ಆಚರಣೆ ಕೂಡ ಆಗಿದೆ.[೨೮]

ಸಿಂಗಾಪುರ[ಬದಲಾಯಿಸಿ]

ಸಿಂಗಾಪುರದಲ್ಲಿ ಜೂನ್ ತಿಂಗಳ ಮೂರನೆ ಭಾನುವಾರದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ ಆದರೆ ಆ ದಿನ ಸಾರ್ವತ್ರಿ ರಜೆ ಇಲ್ಲ.

ತೈವಾನ್‌[ಬದಲಾಯಿಸಿ]

ತೈವಾನ್‌‌ನಲ್ಲಿ ತಂದೆಯ ದಿನಾಚರಣೆದಂದು ಅಧಿಕೃತ ರಜೆ ಇಲ್ಲ ಆದರೆ ಅದನ್ನುಆಗಸ್ಟ್ 8, ಅಂದರೆ ವರ್ಷದ ಎಂಟನೇ ತಿಂಗಳ ಎಂಟನೇ ತಾರೀಖು,ವ್ಯಾಪಕವಾಗಿ ಆಚರಿಸಲಾಗುತ್ತದೆ. ಚೀನಾದ ಆಡು ನುಡಿಯಲ್ಲಿ ಸಂಖ್ಯೆ 8 ಅನ್ನು ಎಂದು ಉಚ್ಚರಿಸುತ್ತಾರೆ. ಈ ಉಚ್ಚಾರಣೆ "爸" "bà" ಗೆ ಸಮಾನವಾಗಿದೆ ಮತ್ತು ಇದರರ್ಥ "ಪಾಪಾ" ಅಥವಾ "ತಂದೆ". ಆದುದರಿಂದ ತೈವಾನಿಗಳು ಸಾಮಾನ್ಯವಾಗಿ ಆಗಸ್ಟ್ 8 ಅನ್ನು "ಬಾಬಾ ದಿನ"(爸爸節) ಎಂಬ ಉಪನಾಮದಿಂದ ಕರೆಯುತ್ತಾರೆ.

ಥೈಲ್ಯಾಂಡ್[ಬದಲಾಯಿಸಿ]

ಥೈಲ್ಯಾಂಡ್‌ನಲ್ಲಿ ರಾಜನ ಹುಟ್ಟು ಹಬ್ಬದಂದು ತಂದೆಯ ದಿನಾಚರಣೆಯನ್ನು ಆಚರಿಸುತ್ತಾರೆ. ಪ್ರಚಲಿತ ರಾಜ ಭೂಮಿಬೋಲ್ ಅಡ್ಯುಲಾದೇಜ್‌(Rama IX)ನ ಹುಟ್ಟು ಹಬ್ಬ ಡಿಸೆಂಬರ್ 5 ಆಗಿದೆ. ತಂದೆ ಅಥವಾ ತಾತಂದಿರಿಗೆ ಪುಲ್ಲಿಂಗದ ಹೂವು ಎಂದು ಪರಿಗಣಿಸಲಾದ ಚರೆಗುಂಡಿನ ಹೂವು( (Canna flower) ನ್ನು (Dok put ta ruk sa)ಕೊಡುವ ಮೂಲಕ ಥಾಯೀಗಳು ಈ ದಿನದಂದು ಸಂಭ್ರಮಿಸುತ್ತಾರೆ. ರಾಜನಿಗೆ ಗೌರವ ತೋರುವುದಕ್ಕಾಗಿ ಥಾಯೀಗಳು ಈ ದಿನ ಹಳದಿ ಬಟ್ಟೆಯನ್ನು ಧರಿಸುತ್ತಾರೆ. ರಾಜನಾದ ಭೂಮಿಬೋಲ್ ಅಡುಲ್ಯಾದೇಜ್ ಜನಿಸಿದ ಸೋಮವಾರದ ಬಣ್ಣ,ಹಳದಿ ಬಣ್ಣ ಎಂದು ಪರಿಗಣಿಸಲಾಗಿರುವುದೇ ಇದಕ್ಕೆ ಕಾರಣ.

1980ರ ಆಸುಪಾಸಿನಲ್ಲಿ,ಈ ಆಚರಣೆ ಥಾಯ್‌ಲೆಂಡಿನ ಪ್ರಧಾನ ಮಂತ್ರಿ ಪ್ರೇಮ್ ಟಿನ್ಸುಲಾನೊಂಡ ಕೈಗೊಂಡ ರಾಜ ಮನೆತನದ ಅಭಿಯಾನದಲ್ಲಿ ಆರಂಭವಾಯಿತು. ಮಾತೃ ದಿನವನ್ನು ರಾಣಿ ಸಿರಿಕೀತ್ ಹುಟ್ಟು ಹಬ್ಬದಂದು ಆಚರಿಸಲಾಗುತ್ತದೆ.[೨೯]

ಅಮೆರಿಕ ಸಂಯುಕ್ತ ಸಂಸ್ಥಾನ[ಬದಲಾಯಿಸಿ]

USನಲ್ಲಿ ತಂದೆಯ ದಿನಾಚರಣೆಯನ್ನು ಜೂನ್ ಮೂರನೆ ಭಾನುವಾರದಂದು ಆಚರಿಸಲಾಗುತ್ತದೆ. ವಾಷಿಂಗ್ಟ್‌ನ ಸ್ಪೊಕೇನ್‌ನಲ್ಲಿ 1910ರ ಜೂನ್ 19ರಲ್ಲಿ ಮೊದಲ ಬಾರಿಗೆ ಇದನ್ನು ಆಚರಿಸಲಾಯಿತು.[೩೦] ತಂದೆಯನ್ನು ಗೌರವಿಸುವ ಬೇರೆ ಹಬ್ಬಗಳನ್ನು ಫೇರ್‌ಮಾಂಟ್ ಮತ್ತು ಕ್ರೆಸ್ಟ್‌ನ್‌ನಲ್ಲಿ ಇಡಲಾಯಿತು ಆದರೆ ಇದರಿಂದ ಹೊಸ ರಜೆಯೇನೂ ದೊರೆಯಲಿಲ್ಲ.

ಆಧುನಿಕ ತಂದೆಯ ದಿನಾಚರಣೆಯನ್ನು ಕಲ್ಪಿಸಿದವರು ಮತ್ತು ಅದರ ಹಿಂದಿನ ಸ್ಥಾಪಕ ಶಕ್ತಿ, ವಾಷಿಂಗಟನ್‌ಕ್ರೆಸ್ಟನ್‌ನಲ್ಲಿ ಜನಿಸಿದ ಶ್ರೀಮತಿ ಸೊನೋರಾ ಸ್ಮಾರ್ಟ್ ದೋಡ್‌. ಅಕೆಯ ತಂದೆ ವಾಷಿಂಗಟನ್ನಿನ ಸ್ಪೊಕೇನ್‌‌ನ ನಾಗರಿಕ ಯುದ್ಧಸೇವಾ ನಿಪುಣ ವಿಲಿಯಂ ಜಾಕ್ಸನ್‌ ಸ್ಮಾರ್ಟ್. ಇವರು ಆರು ಮಕ್ಕಳಿಗೆ ಒಂಟಿ ಪೋಷಕರಾಗಿದ್ದವರು.[೧] ಮಾತೃ ದಿನವನ್ನು ಸ್ಥಾಪಿಸಿದ ಅನ್ನಾ ಜಾರ್ವಿಸಳ ಪರಿಶ್ರಮವೇ ದೋಡ್‌ಗೆ ಸ್ಫೂರ್ತಿ ಆರಂಭದಲ್ಲಿ ಆಕೆ ತನ್ನ ತಂದೆಯ ಜನ್ಮ ದಿನವಾದ ಜೂನ್ 5 ಅನ್ನು ಸಲಹೆ ಮಾಡಿದರೂ ಆಕೆ ಸಂಘಟಕರಿಗೆ ವ್ಯವಸ್ಥೆಗಾಗಿ ಸಾಕಷ್ಟು ಸಮಯವನ್ನು ಕೊಡದ ಕಾರಣ ಆಚರಣೆಯು ಜೂನ್ ತಿಂಗಳ ಮೂರನೆ ಭಾನುವಾರಕ್ಕೆ ಮುಂದೂಡಲ್ಪಟ್ಟಿತು. ಸ್ಪೊಕೇನ್ YMCA,ಸ್ಪೊಕೇನ್ WAದಲ್ಲಿ 1910ರ ಜೂನ್ 19ರಂದು ತಂದೆಯ ದಿನಾಚರಣೆಾಚರಣೆದ ಮೊದಲ ಆಚರಣೆ ಜರುಗಿತು.

ವಿಲ್ಲಿಯಂ ಜೆನ್ನಿಂಗ್ಸ್ ಬ್ರೈಯಾನ್‌ನಂಥ ಪ್ರಖ್ಯಾತರಿಂದ ಅನಧಿಕೃತ ಬೆಂಬಲವು ಬಹು ಬೇಗನೆಯೂ ಮತ್ತು ವ್ಯಾಪಕವಾಗಿಯೂ ಲಭ್ಯವಾಯಿತು. 1916ರಲ್ಲಿ ಅಧ್ಯಕ್ಷರಾದ ವುಡ್‌ರೋ ವಿಲ್ಸನ್ ಅವರನ್ನು ಅವರ ಕುಟುಂಬವು ವೈಯಕ್ತಿಕವಾಗಿ ಸನ್ಮಾನಿಸಿತು. 1924ರಲ್ಲಿ ಅಧ್ಯಕ್ಷರಾದ ಕಾಲ್ವಿನ್ ಕೂಲಿಡ್ಜ್ ಅವರು ಈ ದಿನವನ್ನು ರಾಷ್ಟ್ರೀಯ ರಜೆ ಎಂದು ಪರಿಗಣಿಸಲು ಸಲಹೆ ಮಾಡಿದರು. ಜೂನ್ ತಿಂಗಳ ಮೂರನೆ ಭಾನುವಾರ ತಂದೆ ದಿನಾಚರಣೆಯೆಂದೂ ಮತ್ತು ಅದು ರಜಾ ದಿನ ಎಂದೂ ಅಧ್ಯಕ್ಷರಾದ ಲಿಂಡನ್ ಜಾನ್‌ಸನ್1966ರಲ್ಲಿ ಮಾಡಿದರು. ರಿಚರ್ಡ್ ನಿಕ್ಸನ್1972ರಲ್ಲಿ ಅಧ್ಯಕ್ಷರಾಗುವವರೆಗೂ ಇದಕ್ಕೆ ಅಧಿಕೃತ ರಜೆ ಎಂಬ ಮಾನ್ಯತೆ ಸಿಕ್ಕಿರಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ವರ್ತಕರು ಗ್ರೀಟಿಂಗ್ ಕಾರ್ಡುಗಳನ್ನು ಮತ್ತು ಪುರುಷರಿಗೆ ಪ್ರಶಸ್ತವಾದ ಎಲೆಕ್ಟಾನಿಕ್ಸ್ ಹಾಗೂ ಕೆಲವು ಉಪಕರಣಗಳ ಉಡುಗೊರೆ ಮಾರಾಟದಲ್ಲಿ ತೊಡಗಿ ತಮ್ಮ ವ್ಯಾಪಾರಾಭಿವೃದ್ಧಿಯನ್ನು ರಜೆಯೊಂದಿಗೆ ಹೊಂದಿಸಿಕೊಂಡಿದ್ದಾರೆ. ಸಾಮಾನ್ಯವಾಗಿ, ಶಾಲೆಗಳಲ್ಲಿ ಮತ್ತು ಮಕ್ಕಳ ಬೇರೆ ಕಾರ್ಯಕ್ರಮಗಳಲ್ಲಿ ತಂದೆಯ ದಿನಾಚರಣೆಯನ್ನು ಉಡುಗೊರೆಗಳನ್ನು ರೂಪಿಸುವ ಚಟುವಟಿಕೆಗಳಿರುತ್ತವೆ.

ಹಿನ್ನೋಟ[ಬದಲಾಯಿಸಿ]

ಮೊದಲ ಆಧುನಿಕ "ತಂದೆಯ ದಿನಾಚರಣೆ"ಯು 1908ರ ಜುಲೈ 5ರಂದು ಪಶ್ಚಿಮ ವರ್ಜಿನಿಯಾದ ಫೇರ್‌ಮಾಂಟ್‌ನಲ್ಲಿರುವ ವಿಲಿಯಂಸ್ ಮೆಮೋರಿಯಲ್ ಮೆಥಾಡಿಸ್ಟ್ ಎಪಿಸ್ಕೊಪಲ್ ಚರ್ಚ್ ಸೌತ್ ಅಥವಾ ಈಗಿನ ಸೆಂಟ್ರಲ್ ಯುನೈಟೆಡ್ ಮಥಾಡಿಸ್ಟ್ ಚರ್ಚ್‌ನಲ್ಲಿ ನೆರವೇರಿತು.

ಮೆಥಾಡಿಸ್ಟ್‌ನ ಸಚಿವರಾದ ಫ್ಲೆಚರ್ ಗೋಳ್ಡನ್‌ನ ಪುತ್ರಿ ಗ್ರೇಸ್ ಗೋಳ್ಡನ್ ಕ್ಲೇಯ್ಟನ್ ತಮ್ಮ ತಂದೆಯ ಹುಟ್ಟು ಹಬ್ಬದ ದಿನದ ಸನಿಹದ ಭಾನುವಾರವನ್ನು ಆಯ್ಕೆ ಮಾಡಿದಳು. ನಗರದಲ್ಲಿ ಬೇರೆ-ಬೇರೆ ಸಮಾರಂಭಗಳು ಜರುಗಿದ್ದರಿಂದಾಗಿ ಈ ಆಚರಣೆ ನಗರವನ್ನು ದಾಟಿ ಹೋಗಲಿಲ್ಲ ಮತ್ತು ಪುರ ಸಭೆಯಲ್ಲಿ ಇದರ ಪ್ರಕಟಣೆಯೂ ಆಗಲಿಲ್ಲ. ಈ ಅಚರಣೆಯನ್ನು ಎರಡು ಸಂಗತಿಗಳು ಕಳಾಹೀನವಾಗಿಸಿದವು: 12,000 ಜನ ಭಾಗವಹಿಸಿದ ಜುಲೈ 4ರಂದು ಬಿಸಿಯುಸಿರ ಬಲೂನ್‌ ಹಾರಾಟವನ್ನೂ ಒಳಗೊಂಡ ಹಲವಾರು ಪ್ರದರ್ಶನಗಳಿಂದ ಜರುಗಿದ ಸ್ವಾತಂತ್ರೋತ್ಸವ ಒಂದಾದರೆ,16 ವರ್ಷದ ತರುಣಿಯೊಬ್ಬಳು ಜುಲೈ 4ರಂದೇ ಸತ್ತ ಸುದ್ದಿ ಜುಲೈ 5ರಂದು ಬೆಳಕಿಗೆ ಬಂದದ್ದು ಇನ್ನೊಂದು.ಮೊದಲಿನದು ಮರು ದಿನದ ಪತ್ರಿಕೆಯಲ್ಲಿ ಢಾಳಾಗಿ ಪ್ರಕಟಗೊಂಡ ಸುದ್ದಿಯಾಗಿತ್ತು. ಈ ಘಟನೆಯು ಸ್ಥಳೀಯ ಚರ್ಚ್ ಹಾಗೂ ಪರಿಷತ್ತನ್ನು ಆವರಿಸಿಕೊಂಡು ಬಿಟ್ಟಿತು ಮತ್ತು ಅವರು ತಂದೆಯ ದಿನಾಚರಣೆಯನ್ನು ಪ್ರಚುರ ಪಡಿಸುವ ಗೋಜಿಗೂ ಹೋದಲಿಲ್ಲ ಮತ್ತು ಎಷ್ಟೋ ವರ್ಷಗಳು ಅದನ್ನು ಆಚರಿಸಲೂ ಇಲ್ಲ. ಧರ್ಮೋಪದೇಶದ ಪ್ರತಿ ಅಚ್ಚಾಗುವುದಕ್ಕೂ ಮೊದಲೇ ಕಳೆದುಹೋಯಿತು ಕೂಡ. ಮೇಲಾಗಿ, ಕ್ಲೇಯ್ಟನ್ ಸೌಮ್ಯ ವ್ಯಕ್ತಿ, ಈ ಸಂಗತಿಯ ಬಗ್ಗೆ ಮಾತನಾಡಿದವರೂ ಅಲ್ಲ ಅದನ್ನು ಆಭಿವೃದ್ಧಿ ಪಡಿಸಿದವರೂ ಅಲ್ಲ.[೩೧][೩೨][೩೩]

ಕ್ಲೇಯ್ಟನ್ ಅವರು ತಮ್ಮ ತಂದೆಯ ಮರಣದ ದು:ಖದಲ್ಲಿದ್ದರು ಮತ್ತು ಆ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಮೊನಾಂಘ ಗಣಿ ದುರ್ಘಟನೆ ನಡೆದು ಮೊನಾಂಘದಲ್ಲಿ ದುರ್ಮರಣಕ್ಕೀಡಾದ ಸುಮಾರು 361 ಜನ ಪುರುಷರಲ್ಲಿ 250 ಮಂದಿ ಅಪ್ಪಂದಿರು.ಅದರಲ್ಲಿ ಹೀಗಾಗಿ ಸಾವಿರಾರು ಮಕ್ಕಳು ತಂದೆಯಿಲ್ಲದವರಾದರು. ಕ್ಲೇಯ್ಟನ್, ಸತ್ತಿರುವ ಎಲ್ಲಾ ಅಪ್ಪಂದಿರನ್ನ್ನೂ ಗೌರವಿಸಲು ಧರ್ಮಗುರು ರಾಬರ್ಟ್ ಥಾಮಸ್ ವೆಬ್‌ಗೆ ಸಲಹೆ ಮಾಡಿದರು.[೩೧][೩೨][೩೩]

ಫೇರ್ ಮಾಂಟ್ ನಿಂದ 15 ಮೈಲಿ(24 km)ಅಂತರದಲ್ಲಿರುವ ವೆಸ್ಟ್ ವರ್ಜಿನಿಯಾಗ್ರಾಫ್ಟನ್‌ನಲ್ಲಿ ಎರಡು ತಿಂಗಳ ಹಿಂದೆ ಅವರ ಮೃತ ತಾಯಿಗೆ ಸಮಾಂಭವೊಂದನ್ನು ನಡೆಸಿದ ಅನ್ನಾ ಜಾರ್ವಿಸ್ ಧರ್ಮೋಪದೇಶದಿಂದ ಕ್ಲೇಯ್ಟನ್ ಸ್ಫೂರ್ತಿ ಪಡೆದಿರಬಹುದು.[೩೧]

ಇದನ್ನೂ ನೋಡಿರಿ[ಬದಲಾಯಿಸಿ]

ಟೆಂಪ್ಲೇಟು:Portalpar

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ ೧.೨ Leigh, 1997, p. 276.
 2. ೨.೦ ೨.೧ ೨.೨ ೨.೩ ೨.೪ Leig, 1997, 246, 279-281.
 3. ೩.೦ ೩.೧ "Father to have his day". ದ ನ್ಯೂ ಯಾರ್ಕ್ ಟೈಮ್ಸ್. 1913-10-03. (...) a bill providing that "The first Sunday in June in each and every year hereafter be designated as Father's Day (...)"
 4. ೪.೦ ೪.೧ ೪.೨ Leigh, 1997, p. 246, 286, 288-289.
 5. ೫.೦ ೫.೧ Leigh, 1997, p. 289, 355 (note 111).
 6. ೬.೦ ೬.೧ ೬.೨ ೬.೩ ೬.೪ Leigh, 1997, p. 284-289.
 7. "H. RES. 1274. Commending Sonora Smart Dodd for her contribution in recognizing the importance of Father's Day and recognizing the important role fathers play in our families". Library of Congress. 2008-06-12. Archived from the original on 2016-02-04. Retrieved 2009-12-22.
 8. "Se instituye el Día del Padre, Decreto Número 13". 1960-02-09. Archived from the original on 2007-08-09. Retrieved 2008-07-19.{{cite web}}: CS1 maint: bot: original URL status unknown (link) (Spanish)
 9. ೯.೦ ೯.೧ "Argentina, el origen del Día del Padre, ayer Google en español lo tuvo en su Portal". 2008-06-16. Retrieved 2008-07-12.
 10. ೧೦.೦ ೧೦.೧ "Presentan en Costa Rica proyecto de ley para celebrar día del padre el día de San José". ACI Prensa. 2005-05-26.
 11. "Principales efemérides. Mes Junio". Unión de Periodistas de Cuba. Archived from the original on 2008-06-05. Retrieved 2008-06-07. (Spanish)
 12. ೧೨.೦ ೧೨.೧ Notimex (2008-06-14). "Preparados los capitalinos para festejar el día del padre". La Crónica de Hoy. Archived from the original on 2011-06-13. Retrieved 2008-06-23.(15 ಜೂನ್ 2008 ಜೂನ್ ತಿಂಗಳ ಮೂರನೆ ಭಾನುವಾರವಾಗಿತ್ತು)(Spanish)
 13. "Días Festivos para el mes de Junio del 2008" (in spanish). Biblioteca Nacional de Panamá. Archived from the original on 2008-12-17. Retrieved 2008-06-23.{{cite web}}: CS1 maint: unrecognized language (link) (Spanish)
 14. "Días Festivos para el mes de Junio del 2008" (in spanish). Biblioteca Nacional de Panamá. Archived from the original on 2008-12-17. Retrieved 2008-06-23.{{cite web}}: CS1 maint: unrecognized language (link) (Spanish)
 15. "Calendario Cívico Escolar" (in spanish). Dirección Regional de Educación de Lima Metropolitana. Archived from the original on 2015-09-09. Retrieved 2008-06-07.{{cite web}}: CS1 maint: unrecognized language (link) (Spanish)
 16. Jerome Aning (2008-06-14). "Daughter of missing NDF consultant believes he's still alive". Philippine Daily Inquirer. Retrieved 2008-06-23. (ಜೂನ್ 2008 ಜೂನ್ ತಿಂಗಳ ಮೂರನೆ ಭಾನುವಾರವಾಗಿತ್ತು)
 17. "17 de Junio, Día del Padre en El Salvador". Ministerio de Relaciones Exteriores de El Salvador. 1969-05-08. Archived from the original on 2008-03-27. Retrieved 2008-06-07. Asamblea Legislativa de la República de El Salvador. 08 de mayo de 1969 (Spanish)
 18. Marta Altolaguirre (2008-05-17). "Reflexiones en el Día del Padre". El Periódico. Archived from the original on 2011-07-27. Retrieved 2009-12-22.
 19. "6310.- Fêtes et Jours Fériés en Haiti" (in french). Archived from the original on 2008-04-01. Retrieved 2008-07-08.{{cite web}}: CS1 maint: unrecognized language (link) (French)
 20. "Father's Day Celebration in different countries". Retrieved 2008-07-19. In Iran it is celebrated on the Birthday of First shiite Imam (Imam Ali (as)) on 13 of Rajab islamic calendar.
 21. Zahra Akbari (Isfahan University of Medical Sciences, Isfahan, Iran). "Linguistic and Non-Linguistic Discourse Cues in Iranian Advertisements: a Critical Discourse Study". Retrieved 2008-07-19.{{cite web}}: CS1 maint: multiple names: authors list (link)
 22. ೨೨.೦ ೨೨.೧ ೨೨.೨ "Sesiones ordinarias 2004 Orden del día nº1798: Día del Padre. Institúyese como tal el día 24 de agosto de cada año". Cámara de Diputados de la Nación. 2008-11-07. Retrieved 2008-06-07. la presión de diversos grupos determinó el "olvido" de incluir esta disposición en el calendario escolar a partir de 1957, y la omisión fue aprovechada para imponer el tercer domingo de junio como el Día del Padre norteamericano, en homenaje a mister John Bruce Dodd (...) instituir el día 24 de agosto como el destinado a la celebración del Día del Padre en homenaje al general José de San Martín, padre de la patria.
 23. "Día del Padre (Estado del trámite del proyecto de ley)". Retrieved 2008-07-12.
 24. Rodolfo Delgado Valverde. "Proyecto de Ley. Celebración del 19 de Marzo como Día del Padre. Expediente 15911". Archived from the original on 2009-11-28. Retrieved 2009-12-22.
 25. "Father's Day and Vatertag". About.com. Archived from the original on 2011-06-07. Retrieved 2009-12-22.
 26. ೨೬.೦ ೨೬.೧ Agence France-Presse. "German Minister Urges Fathers Not to Get Drunk on Father's Day!".
 27. ೨೭.೦ ೨೭.೧ "Father's Day Debauchery in Deutschland". Spiegel Online.
 28. Kerry Tilby (June 2007). "Fathers Day". Kiwi Families. Archived from the original on 2010-10-08. Retrieved 2008-05-23.
 29. Paul M. Handley (2006). The King Never Smiles: a biography of Thailand's Bhumibol Adulyadej. Yale University Press. p. 288. ISBN 0300106823, 9780300106824. {{cite book}}: Check |isbn= value: invalid character (help) (online version)
 30. "Father's Day (United States)". Archived from the original on 2008-07-01. Retrieved 2008-05-30.
 31. ೩೧.೦ ೩೧.೧ ೩೧.೨ Smith, Vicki (June 15, 2003). "The first Father's Day". Martinsburg Journal (Martinsburg, West Virginia). Archived from the original on 2010-08-16. Retrieved 2006-11-07.
 32. ೩೨.೦ ೩೨.೧ Barth, Kelly (June 21, 1987). "First Father's Day service in 1908". Dominion Post (Morgantown, West Virginia). Retrieved 2006-11-07.
 33. ೩೩.೦ ೩೩.೧ ಮೊದಲ ತಂದೆಯ ದಿನಾಚರಣೆಯ ಸೇವೆ ಫೇರ್‌ಮಾಂಟ್‌ನಲ್ಲಿ ಘಟಿಸಿತು. 1908,ಜುಲೈ 5ರಂದು West Virginia,at Williams Memorial Methodist Espiscopal Church [೧] Archived 2011-05-15 ವೇಬ್ಯಾಕ್ ಮೆಷಿನ್ ನಲ್ಲಿ., firstfathersday.us

ಗ್ರಂಥಸೂಚಿ[ಬದಲಾಯಿಸಿ]

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

ಬಾಹ್ಯ ಲಿಂಕ್‌ಗಳು[ಬದಲಾಯಿಸಿ]