ವಿಷಯಕ್ಕೆ ಹೋಗು

ಜೈಜೈವಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಪರಿಕಲ್ಪನೆಗಳು
ಶೃತಿ · ಸ್ವರ · ಅಲಂಕಾರ · ರಾಗ
ತಾಳ · ಘರಾನಾ · ಥಾಟ್
ಸಂಗೀತೋಪಕರಣಗಳು
ಭಾರತೀಯ ಸಂಗೀತೋಪಕರಣಗಳು
ಶೈಲಿಗಳು
ದ್ರುಪದ್ · ಧಮಾರ್ · ಖಯಾಲ್ · ತರಾನ
ಠುಮ್ರಿ · ದಾದ್ರ · ಖವ್ವಾಲಿ · ಘಝಲ್
ವಿದಾನಗಳು (ಥಾಟ್‌ಗಳು)
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ

ರಾಗ ಜೈಜೈವಂತಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಖಮಾಜ್ ಥಾಟ್‍ನಲ್ಲಿ ಬಳಕೆಯಲ್ಲಿರುವ ಒಂದು ರಾಗ.  ಗುರು ಗ್ರಂಥ ಸಾಹಿಬ್,  ಪ್ರಕಾರ ಈ ರಾಗವು ಬಿಲಾವಲ್ ಮತ್ತು ಸೋರಥ್ ಎಂಬ ಎರಡು ರಾಗಗಳ ಮಿಶ್ರಣ.ಯಾವುದೇ ಪ್ರಾಚೀನ ಭಾರತೀಯ ಶಾಸ್ತ್ರೀಯ ಗ್ರಂಥಗಳು ಈ ರಾಗವನ್ನು ಪ್ರಸ್ಥಾಪಿಸಿಲ್ಲ ಹಾಗೂ ಗ್ರಂಥ ಸಾಹಿಬ್‍ನಲ್ಲಿ ಉಲ್ಲೇಖಿತವಾಗಿರುವ ರಾಗಮಾಲೆಯಲ್ಲಿ ಕೂಡಾ ಇದರ ಹೆಸರಿಲ್ಲ.[೧]

ವೈಶಿಷ್ಟ್ಯಗಳು[ಬದಲಾಯಿಸಿ]

ರಾಗ ಜೈಜೈವಂತಿ ರಾತ್ರಿವೇಳೆಯ ಪ್ರಥಮ ಪ್ರಹರದ ರಾಗ ಮತ್ತು ಇದನ್ನು ಸಂಜೆ ಆರರಿಂದ ಒಂಭತ್ತು ಗಂಟೆಯ ಅವಧಿಯಲ್ಲಿ ಹಾಡುತ್ತಾರೆ. ಇದು ಗ್ರೀಷ್ಮ ಋತು ಅಥವಾ  ಬೇಸಿಗೆಯಲ್ಲಿ  ಹಾಡಲ್ಪಡುವ ರಾಗ. ಈ ರಾಗವನ್ನು ಗುರು ತೇಜ್ ಬಹಾದೂರ್ ರಚಿಸಿದರೆಂದು ಹೇಳಲಾಗಿದೆ.

ಸಂಯೋಜನೆ[ಬದಲಾಯಿಸಿ]

ಆರೋಹ: ರಿ ಗ(ಕೋಮಲ್) ರಿ ಸ, ರಿ ಗ(ಶುದ್ಧ), ಮ, ಪ ಧ ಪ, ನಿ ಸ ಅವರೋಹ: ಸ ನಿ(ಕೋವಲ್) ಧ ಪ, ಧ ಮಾ ಗ ರಿ, ರಿ ಗ(ಕೋಮಲ್) ರಿ ಸ

"ಸಾಧ್ಯ ಸಂಯೋಜನೆಗಳು"

ನಿ ಸ ಧ ನಿ(ಕೋಮಲ್) ರಿ,ರಿ ಗ(ಕೋಮಲ್)ರಿ ಸ,
ಪ ರಿ ಗ(ಕೋಮಲ್)ರಿ ಸ, ಮ ಪ ನಿ(ಶುದ್ಧ) ರಿ (ತಾರ ಸಪ್ತಕ) ನಿ(ಕೋಮಲ್) ಧ ಪ, ಧ ಮ ಗ ರಿ,ರಿ ಗ(ಕೋಮಲ್)ರಿ ಸ

ಜನಪ್ರಿಯ ಹಾಡುಗಳು[ಬದಲಾಯಿಸಿ]

ಕರ್ನಾಟಕ ಸಂಗೀತದಲ್ಲಿ ಇದನ್ನು ದ್ವಜವಂತಿ ಎಂದು ಕರೆಯುತ್ತಾರೆ.

ಉರ್ದು[ಬದಲಾಯಿಸಿ]

ದಿಲ್ ಕಾ ದಿಯಾ ಜಲಾಯ (ಚಿತ್ರ: ಕೋಯಲ್ (1959), ಗಾಯಕ: ನೂರ್ ಜಹಾನ್ (ದಿವಂಗರ), ಸಂಯೋಜಕ: ಖ್ವಾಜಾ ಖುರ್ಷಿದ್ ಅನ್ವರ್)

ಹಿಂದಿ[ಬದಲಾಯಿಸಿ]

ಮನ್ ಮೋಹನ ಬರೇ ಝೂಟೆ (ಚಿತ್ರ: ಸೀಮಾ (1955), ಗಾಯಕಿ: ಲತಾ ಮಂಗೇಶ್ಕರ್)

ತಮಿಳು[ಬದಲಾಯಿಸಿ]

ಅಂಬೇ ಸುಗಮಾ (ಸಂಗೀತ: ಎ. ಆರ್. ರಹಮಾನ್ , ಸಾಹಿತಿ:ವೈರಮುತ್ತು ,ಗಾಯಕರು: ಶ್ರೀನಿವಾಸ್, ಸಾಧನಾ ಸರ್ಗಂ)

ಮಲಯಾಳಂ[ಬದಲಾಯಿಸಿ]

ಒರು ನೇರಂ ಎಂಕಿಲಮ್ (ಗಾಯಕರು:ಯೇಸುದಾಸ್,ಚಿತ್ರಾ)

References[ಬದಲಾಯಿಸಿ]

  1. 1, Sukhbir Singh Kapoor & Mohinder Kaur Kapoor. Vol. (2002). Guru Granth Sahib : an advance study. New Delhi: Hemkunt Press. ISBN 9788170103172. {{cite book}}: |last= has numeric name (help)