ವಿಷಯಕ್ಕೆ ಹೋಗು

ಯಮನ್ ಕಲ್ಯಾಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಮನ್ ಕಲ್ಯಾಣ್ ಹಿಂದೂಸ್ತಾನಿ ಶಾಸ್ತ್ರೀಯ ರಾಗ, ಯಮನ್ ಗೆ ಸಂಬಂಧಿಸಿದೆ . ಈ ರಾಗದ ಚಲನೆಯು ಯಮನ್ ನಂತಿದೆ, ಆದರೆ ಅವರೋಹಣದಲ್ಲಿ, ಇದು ಸಾಂದರ್ಭಿಕವಾಗಿ ಗ ಮ ಗ ಮಾದರಿಯನ್ನು ಬಳಸಿಕೊಂಡು ಫ್ಲಾಟ್ ಮಧ್ಯಮವನ್ನು ನಿಧಾನವಾಗಿ ಸ್ಪರ್ಶಿಸುತ್ತದೆ.ಇದು ಸಂಪೂರ್ಣ ಸಂಪೂರ್ಣ ರಾಗವಾಗಿದೆ.ಇದರಲ್ಲಿ ಮಧ್ಯಮವು ತೀವ್ರವಾಗಿದ್ದು ಉಳಿದೆಲ್ಲ ಶುದ್ಧ ಸ್ವರಗಳಾಗಿವೆ.

ಇದು ಕಲ್ಯಾಣ್ ಥಾಟ್ ಗೆ ಸೇರಿದೆ.

ಆರೋಹ ಆವರೋಹ

[ಬದಲಾಯಿಸಿ]

ಆರೋಹ: ,ನಿ ರಿ ಗ-ನಿ ರಿ ಗ ಮ ಪ ದ ನಿ ಸ' ಅವರೋಹ: ಸ' ನಿ ದ ಪ ಮ ಗ ರಿ ಸ, ನಿ ರಿ ಸ

ವಾದಿ-ಸಂವಾದಿ

[ಬದಲಾಯಿಸಿ]

ಈ ರಾಗದ ವಾದಿ:ಗಂಧಾರ, ಸಂವಾದಿ: ನಿಷಾಧವಾಗಿದೆ.

ಇದು ರಾತ್ರಿಯ ಪ್ರಥಮ ಪ್ರಹರದ ರಾಗ. ಇದನ್ನು ಸಾಮಾನ್ಯವಾಗಿ ರಾತ್ರಿ ೬ ಗಂಟೆಯಿಂದ ೯ ಗಂಟೆಯವರೆಗೆ ಪ್ರಸ್ತುತಪಡಿಸಲಾಗುತ್ತದೆ.

ವಿವರಣೆ

[ಬದಲಾಯಿಸಿ]

ಉಸ್ತಾದ್ ಧ್ಯಾನೇಶ್ ಖಾನ್ ಅವರು ಯಮನ್ ಕಲ್ಯಾಣದಲ್ಲಿ ಫ್ಲಾಟ್ ಮಧ್ಯಮ ವು ಮುಸುಕು ಧರಿಸಿದ ಮಹಿಳೆಯ ಸುಂದರ ಮುಖದಂತಿದೆ ಎಂದು ಹೇಳುತ್ತಿದ್ದರು, ಅದು ಕೆಲವೊಮ್ಮೆ ಮುಸುಕಿನಿಂದ ಹೊರಬರುತ್ತದೆ ಆದರೆ ತಕ್ಷಣವೇ ಕಣ್ಮರೆಯಾಗುತ್ತದೆ.

ಇದು ಯಮನ್ ಗೆ ಸಂಬಂಧಿಸಿರುವುದರಿಂದ, ಇದು ಕಲ್ಯಾಣ ಥಾಟ್‌ನ ಒಂದು ಭಾಗವಾಗಿದೆ.

ಸಂಯೋಜನೆಗಳು

[ಬದಲಾಯಿಸಿ]



ಬಾಹ್ಯ ಕೊಂಡಿಗಳು

[ಬದಲಾಯಿಸಿ]