ವಿಷಯಕ್ಕೆ ಹೋಗು

ಗೋರಕ್ ಕಲ್ಯಾಣ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಗ ಗೋರಕ್ ಕಲ್ಯಾಣ್ ಇದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಒಂದು ರಾಗವಾಗಿದೆ. ಇದು ಉತ್ತರ ಪ್ರದೇಶದ ಗೋರಕ್ ಪುರ ಪ್ರದೇಶದಲ್ಲಿ ಪ್ರಚಲಿತಲಿದ್ದ ರಾಗವಾದುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇದು ಖಮಾಜ್ ಥಾಟ್ ಗೆ ಸೇರಿದ ರಾಗ.ಇದು ಕಲ್ಯಾಣ್ ರಾಗವನ್ನು ಯಾವುದೇ ರೀತಿಯಲ್ಲಿ ಹೋಲುವುದಿಲ್ಲವಾದುದರಿಂದ ಕೆಲವರು ಇದನ್ನು ಗೋರಖ್ ಎಂದಷ್ಟೇ ಕರೆಯುತ್ತಾರೆ.[]

ಇದು ಔಡವ್ ಔಡವ್ ಜಾತಿಗೆ ಸೇರಿದ ರಾಗ

ಇದನ್ನು ರಾತ್ರಿಯ ದ್ವಿತೀಯ ಪ್ರಹರ ಅಂದರೆ ರಾತ್ರಿ ೯ ಗಂಟೆಯಿಂದ ೧೨ ಗಂಟೆಯವರೆಗೆ ಪ್ರಸ್ತುತ ಪಡಿಸಲಾಗುತ್ತದೆ ಇದು ಬಹಳ ಮಧುರವಾದ ರಾಗವಾಗಿದ್ದು ಬಹಳ ಪ್ರಭಾವಶಾಲಿಯಾಗಿದೆ.ಈ ರಾಗದಲ್ಲಿ ಮಧ್ಯಮವು ಶಕ್ತಿಶಾಲಿಯಾಗಿದ್ದು,ವಾದಿ ಹಾಗೂ ವಿಶ್ರಾಂತಿ ಸ್ವರವಾಗಿ ಉಪಯೋಗವಾಗುತ್ತದೆ. ಈ ಅಂಶವು ಇದನ್ನು ರಾಗ ನಾರಾಯಣಿಯಿಂದ ಪ್ರತ್ಯೇಕಿಸುತ್ತದೆ. ಅಲ್ಲಿ ಪಂಚಮವು ಈ ಕೆಲಸವನ್ನು ಮಾಡುತ್ತದೆ.ರಾಗ ಗೋರಕ್ ಕಲ್ಯಾಣದಲ್ಲಿ ಮಂದ್ರ ಸಪ್ತಕದ ಕೋಮಲ ನಿಷಾಧವು ನ್ಯಾಸ ಸ್ವರವಾಗಿದ್ದು ಇದು ಈ ರಾಗವನ್ನು ಗುರುತಿಸಲು ಸಹಾಯವಾಗುತ್ತದೆ.

ಆರೋಹಣ

[ಬದಲಾಯಿಸಿ]

ಸ ರಿ ಮ ಧ ಸ

ಅವರೋಹಣ

[ಬದಲಾಯಿಸಿ]

ಸ ನಿ ಧ ಮ ರಿ ಸ

ವಾದಿ - ಸಂವಾದಿ

[ಬದಲಾಯಿಸಿ]

ಮಧ್ಯಮ ಮತ್ತು ಷಡ್ಜಗಳು ವಾದಿ ಮತ್ತು ಸಂವಾದಿ

ಉಲ್ಲೇಖಗಳು

[ಬದಲಾಯಿಸಿ]
  1. Bor, Joep; Rao, Suvarnalata (1999). The Raga Guide: A Survey of 74 Hindustani Ragas (in ಇಂಗ್ಲಿಷ್). Nimbus Records with Rotterdam Conservatory of Music. p. 72. ISBN 9780954397609.