ಅನ್ನಮಾಚಾರ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Annamacharya.jpg

ಅನ್ನಮಾಚಾರ್ಯ (ಮೇ ೯, ೧೪೦೮ – ಫೆಬ್ರುವರಿ ೨೩, ೧೫೦೩) ೧೫ನೇ ಶತಮಾನದ ಒಬ್ಬ ಹಿಂದೂ ಸಂತ ಮತ್ತು ವೆಂಕಟೇಶ್ವರನನ್ನು ಸ್ತುತಿಸುವ ಸಂಕೀರ್ತನೆಗಳು ಎಂದು ಕರೆಯಲಾಗುವ ಹಾಡುಗಳನ್ನು ರಚಿಸಿದ ಅತ್ಯಂತ ಮುಂಚಿನ ಭಾರತೀಯ ಸಂಗೀತಗಾರ. ಕರ್ನಾಟಕ ಸಂಗೀತದ ಕಲಾವಿದರಲ್ಲಿ ಈಗಲೂ ಜನಪ್ರಿಯವಾಗಿರುವ ಅವನು ರಚಿಸಿದ ಕೀರ್ತನ ಹಾಡುಗಳ ಸಂಗೀತ ರೂಪವು ಕರ್ನಾಟಕ ಸಂಗೀತ ರಚನೆಗಳ ವಿನ್ಯಾಸದ ಮೇಲೆ ಬಲವಾದ ಪ್ರಭಾವಬೀರಿದೆ. ಅನ್ನಮಾಚಾರ್ಯನನ್ನು ಅವನ ಸಂತನಂಥ ಜೀವನಕ್ಕಾಗಿ ಸ್ಮರಿಸಲಾಗುತ್ತದೆ, ಮತ್ತು ಭಕ್ತರು ಹಾಗು ಸಂತ ಗಾಯಕರು ಅವನನ್ನು ಗೋವಿಂದನ ದೊಡ್ಡ ಭಕ್ತನೆಂದು ಗೌರವಿಸುತ್ತಾರೆ.