ಕೊಡವ ತಕ್ಕ್
ಕೊಡವ ತಕ್ಕ್ | ||
---|---|---|
ಬಳಕೆಯಲ್ಲಿರುವ ಪ್ರದೇಶಗಳು: |
ಕರ್ನಾಟಕ, ಭಾರತ | |
ಪ್ರದೇಶ: | ಕೊಡಗು | |
ಒಟ್ಟು ಮಾತನಾಡುವವರು: |
೧,೨೨,೦೦೦ (೧೯೯೭) | |
ಭಾಷಾ ಕುಟುಂಬ: | ದಕ್ಷಿಣ ದ್ರಾವಿಡ ತಮಿಳು-ಕನ್ನಡ ತಮಿಳು-ಕೊಡಗು ಕೊಡವ ತಕ್ಕ್ | |
ಬರವಣಿಗೆ: | ಕೊಡವ ತಿರಿಕೆ ಲಿಪಿ, ಜೋಡ್ ಲಿಪಿ, ಕನ್ನಡ ಲಿಪಿ, ಲ್ಯಾಟಿನ್ ಲಿಪಿ | |
ಅಧಿಕೃತ ಸ್ಥಾನಮಾನ | ||
ಅಧಿಕೃತ ಭಾಷೆ: | ಕರ್ನಾಟಕ, ಭಾರತ | |
ನಿಯಂತ್ರಿಸುವ ಪ್ರಾಧಿಕಾರ: |
no official regulation | |
ಭಾಷೆಯ ಸಂಕೇತಗಳು | ||
ISO 639-1: | ಯಾವುದೂ ಇಲ್ಲ | |
ISO 639-2: |
| |
ISO/FDIS 639-3: | kfa
| |
ಟಿಪ್ಪಣಿ: ಈ ಪುಟದಲ್ಲಿ IPA ಧ್ವನಿ ಸಂಕೇತಗಳು ಯುನಿಕೋಡ್ನಲ್ಲಿ ಇರಬಹುದು. |
ಕೊಡವ ತಕ್ಕ್ ಎನ್ನುವದು ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಮಾತನಾಡುವ ಭಾಷೆ. ಇದು ಕೊಡವರ ತಾಯ್ನುಡಿ. ಇದನ್ನು ಸುಮಾರು ೨,೦೦,೦೦೦ ಜನರು ಮಾತನಾಡುವರು. ಇದನ್ನು ಕೊಡವರಲ್ಲದೆ ಕೊಡಗಿನಲ್ಲಿರುವ ಅಥವಾ ಕೊಡಗಿನಲ್ಲಿ ತಮ್ಮ ಮೂಲವನ್ನು ಹೊಂದಿರುವ ಜನಾಂಗದವರೂ ಬಳಸುವರು. ಮುಖ್ಯವಾಗಿ ಈ ಕೊಡವೇತರರು ಕೆಂಬಟಿಯರು, ಗೊಲ್ಲರು, ಐರಿಗಳು, ತಟ್ಟರು, ಕೊಡವ ಮಾಪಿಳ್ಳೆಯರು, ಮೊದಲಾದವರು.
ಭಾಷಾ ಸ್ವರೂಪ[ಬದಲಾಯಿಸಿ]
ಇದರ ಸ್ವರೂಪ ಇತರ ದ್ರಾವಿಡ ಭಾಷೆಯಂತಿದೆ. ತನ್ನದೇ ಆದ ವಿಶಿಷ್ಟ ಪದಗಳ ಜತೆ ಕನ್ನಡ, ತಮಿಳು, ಮಲೆಯಾಳಮ್ ಅಲ್ಲದೆ ಸಂಸ್ಕೃತವೂ ಗಣನೀಯ ಪ್ರಮಾಣದಲ್ಲಿ ಸೇರಿವೆ.
ಕೊಡವ ಭಾಷೆಯನ್ನು ತಿರಿಕೆ ಲಿಪಿ, ಜೋಡ್ ಲಿಪಿ ಮತ್ತು ಕನ್ನಡ ಲಿಪಿಯಲ್ಲಿ ಬರೆಯಲಾಗುತ್ತದೆ, ತೀರಿಕೆ ಲಿಪಿಗೆ ಸುಮಾರು 1370AD ಯಿಂದ ಇತಿಹಾಸ ಇದೆ ಎಂದು ಹೇಳಲಾಗುತ್ತದೆ ಕೆಲವು ಉಚ್ಚಾರಣೆಗಳು ಕೊಡವ ತಕ್ಕ್‌ಗೇ ವಿಶೇಷವಾಗಿದ್ದು ಅವನ್ನು ಪರಿಣಾಮಕಾರಿಯಾಗಿ ಕನ್ನಡದ ಲಿಪಿಯಲ್ಲಿ ನಿರೂಪಿಸಲಾಗದು. ಜತೆಗೆ ಬಹುತೇಕ ಪದಗಳು ಅರ್ಧಾಕ್ಷರದಲ್ಲಿ ಕೊನೆಗೊಳ್ಳುತ್ತವೆ. ಈ ಕಾರಣಗಳಿಂದ ಉಚ್ಚಾರಣೆಯನ್ನು ಕೇಳಿಸಿಕೊಳ್ಳದೆ ಬರೆದಂತೆ ಓದುವದು ಸಮಂಜಸವಾಗಿರುವದಿಲ್ಲ.

ಕೊಡವತಕ್ಕ್‌ಗೆ ಲಿಪಿಯೊಂದು ಬೇಕೆಂದು ೧೯೦೨ರಲ್ಲೇ ಡಾ ಕೊರವಂಡ ಅಪ್ಪಯ್ಯನವರು ಪ್ರಯತ್ನಿಸಿ ಅದು ಮನ್ನಣೆಯನ್ನು ಪಡೆಯಲಿಲ್ಲ. ನಂತರ ಕಿರಣ್ ಸುಬ್ಬಯ್ಯ Archived 2022-09-20 ವೇಬ್ಯಾಕ್ ಮೆಷಿನ್ ನಲ್ಲಿ. ಅವರು ೧೯೮೦ ರಲ್ಲಿ ಜೋಡ್ ಲಿಪಿಯನ್ನು Archived 2022-09-20 ವೇಬ್ಯಾಕ್ ಮೆಷಿನ್ ನಲ್ಲಿ. ತಯಾರಿಸಿದರು.
ಸಾಹಿತ್ಯ ಸೃಷ್ಟಿ[ಬದಲಾಯಿಸಿ]
ಕೊಡವ ತಕ್ಕ್‌ನಲ್ಲಿ ಮೊತ್ತ ಮೊದಲಿಗೆ ಸಾಹಿತ್ಯ ಸೃಷ್ಟಿಯಾದದ್ದು ಜಾನಪದ ಹಾಡುಗಳಲ್ಲಿ. ಕಾವೇರಿ, ಇಗ್ಗುತಪ್ಪ, ಮೊದಲಾದ ದೇವಿ-ದೇವತೆಯರನ್ನು ಸ್ತುತಿಸುವ ಹಾಡುಗಳಲ್ಲದೆ, ಕೊಡಗಿನ ಭೂಸ್ವರೂಪ ಮತ್ತು ಎಲ್ಲೆಕಟ್ಟುಗಳನ್ನು ವರ್ಣಿಸುವ ‘ದೇಶಕಟ್ಟ್ ಪಾಟ್ಟ್’ಗಳಿವೆ. ಕೊಡವ ಸಂಪ್ರದಾಯದ ಎಲ್ಲಾ ಆಚರಣೆಗಳಿಗೆ ಸಂಬಂಧಿಸಿದ ಹಾಡುಗಳಿವೆ. ಇವು ಉದಾಹರಣೆಗಾಗಿ, ಪುತ್ತರಿ ಪಾಟ್ಟ್, ಮಂಗಲ ಪಾಟ್ಟ್ (ಮದುವೆ ಹಾಡು), ಚಾವು ಪಾಟ್ಟ್ (ಮರಣದ ಸಂದರ್ಭದಲ್ಲಿನ ಹಾಡು), ಇತ್ಯಾದಿ. ಕೋಲಾಟದ ಹಾಡುಗಳೂ, ನಾಡೆ ಕರೆಯುವ ಸಂಭಾಷಣೆಗಳೂ ಇವೆ.
ಇವಲ್ಲದೆ ಜಾಣ್ನುಡಿಗಳು, ನಾಣ್ನುಡಿಗಳು, ಒಗಟುಗಳು, ಮುಂತಾದವು ಯಥೇಚ್ಛವಾಗಿವೆ.
ಹಲವಾರು ಸಾಹಿತ್ಯಕ ಗ್ರಂಥಗಳು ರಚನೆಗೊಂಡಿವೆ. ಇವುಗಳಲ್ಲಿ ಕೆಲವು ಪ್ರಮುಖವಾದವು
೧. ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗಳು ೧೯೦೪-೭ರ ಅವಧಿಯಲ್ಲಿ ರಚಿಸಿದ ನಾಲ್ಕು ನಾಟಕಗಳು: ‘ಯಯಾತಿ ರಾಜಂಡ ನಾಟಕ’, ‘ಶ್ರೀ ಸುಬ್ರಹ್ಮಣ್ಯ ಮಹಾತ್ಮೆ’ ‘ಸತೀ ಸಾವಿತ್ರಿ’ ಮತ್ತು ‘ಶ್ರೀ ಕಾವೇರೀ ಮಹಾತ್ಮೆ’;
೨. ನಡಿಕೇರಿಯಂಡ ಚಿಣ್ಣಪ್ಪನವರು ಬರೆದ ಭಗವದ್ಗೀತೆಯ ರೂಪಾಂತರ, ‘ಭಗವಂತಂಡ ಪಾಟ್ಟ್’ ಮತ್ತು ಅವರೇ ಸಂಪಾದಿಸಿದ ಕೊಡವ ಪದ್ಧತಿಗಳನ್ನು ವಿವರಿಸುವ ‘ಪಟ್ಟೋಲೆ ಪಳಮೆ’;
೩. ಶ್ರೀ ಬಾ ದೇ ಗಣಪತಿಯವರು ಬರೆದ ‘ನಂಗ ಕೊಡವ’ (ನಾವು ಕೊಡವರು) ಮತ್ತು ‘ಕುತ್ತುಂಬೊಳಿಚ’.
ಪ್ರಕಾಶನ[ಬದಲಾಯಿಸಿ]
ಕೊಡವ ತಕ್ಕಿನಲ್ಲಿ ಮೊದಲಿಗೆ ಪುಸ್ತಕಗಳನ್ನು ಲೇಖಕರೇ ಪ್ರಕಟಿಸಿದರು. ನಂತರ ಕೊಡವ ಅಕಾದೆಮಿ, ಕೊಡವ ತಕ್ಕ್ ಪರಿಷತ್ ಮೊದಲಾದ ಸಂಸ್ಥೆಗಳು ಕೊಡವ ಭಾಷೆಯ ಪುಸ್ತಕಗಳನ್ನು ಪ್ರಕಾಶಿಸುತ್ತಿವೆ.
ಪತ್ರಿಕೋದ್ಯಮ[ಬದಲಾಯಿಸಿ]
ಪತ್ರಿಕೋದ್ಯಮವೂ ಗಣನೀಯವಾಗಿದೆ. ಕೊಡವ ತಕ್ಕಿನ ಪ್ರಪ್ರಥಮ ವಾರ ಪತ್ರಿಕೆ ‘ಬ್ರಹ್ಮಗಿರಿ’ ೧೯೮೦ರಲ್ಲಿ ಆರಂಭವಾಗಿದ್ದು ಇಂದೂ ಜನಪ್ರಿಯವಾಗಿದೆ. ಇನ್ನೊಂದು ಜನ ಮೆಚ್ಚಿದ ವಾರ ಪತ್ರಿಕೆ ‘ಪೂಮಾಲೆ’. ಇನ್ನೂ ಕೆಲವು ಪತ್ರಿಕೆಗಳು ಪ್ರಕಟಗೊಂಡರೂ ಬೇಗನೇ ನಿಂತುಹೋದವು.
ಚಲನಚಿತ್ರ ಮತ್ತು ಟಿ ವಿ ಧಾರಾವಾಹಿಗಳು[ಬದಲಾಯಿಸಿ]
ಕೊಡವ ತಕ್ಕಿನ ಪ್ರಪ್ರಥಮ ಚಲನಚಿತ್ರ ‘ನಾಡ ಮಣ್ಣೇ ನಾಡ ಕೂಳ್’ ಕಳೆದ ಎಪ್ಪತ್ತರ ದಶಕದ ಆದಿಯಲ್ಲಿ ಬಿಡುಗಡೆಯಾಯಿತು. ಕೃತಕ ಬೆಳಕಿನ ಸಹಾಯವಿಲ್ಲದೆ ನಿರ್ಮಾಣಗೊಂಡ ಮೊದಲ ಚಿತ್ರವಿದು. ತದನಂತರ ಕೆಲವಾರು ಚಿತ್ರಗಳು ಬಿಡುಗಡೆಯಾದವು.
ಕನ್ನಡ ಚಲನಚಿತ್ರದಲ್ಲಿ ಹೆಸರುವಾಸಿ ನಿರ್ದೇಶಕರಾದ ಎ ಟಿ ರಘು (ಇವರು ಕೊಡವರಾಗಿದ್ದು, ಆಪಾಡಂಡ ಮನೆತನಕ್ಕೆ ಸೇರಿದವರು)ನಿರ್ದೇಶಿಸಿದ ‘ಐನ್ ಮನೆ’ ಟಿ ವಿ ಧಾರವಾಹಿಯು ಜನಮನ್ನಣೆಯನ್ನು ಪಡೆದಿತ್ತು.
ಬಾಹ್ಯ ಕೊಂಡಿಗಳು[ಬದಲಾಯಿಸಿ]
- ಚಿಲುಮೆ.ಕಾಂ, ಕೊಡವ ಸಾಹಿತ್ಯ ಜಾಲ ತಾಣ