ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ | |
ಚಿತ್ರ:KSCA logo.jpg KSCA ಲಾಂಛನ | |
ದೇಶ: | ಭಾರತ |
---|---|
ಸಂಸ್ಥಾಪನೆಯಾಗಿದ್ದು: | 1933 |
ಸಂಪರ್ಕ: | |
ಮೊದಲ ಅಧ್ಯಕ್ಷ: | J.C. ರೋಲೋ |
ಅಧ್ಯಕ್ಷ: | ಸಂಜಯ್ ಎಮ್ ದೇಸಾಯಿ |
ಕಾರ್ಯದರ್ಶಿ: | ಸುಧಾಕರ ರಾವ್ |
http://www.ksca.cricket/home.html Archived 2018-02-04 ವೇಬ್ಯಾಕ್ ಮೆಷಿನ್ ನಲ್ಲಿ. |
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಯು (KSCA) ಭಾರತದ ಕರ್ನಾಟಕ ರಾಜ್ಯದಲ್ಲಿನ ಕ್ರಿಕೆಟ್‌ನ ಆಡಳಿತ ಮಂಡಳಿಯಾಗಿದೆ. ಈ ಸಂಸ್ಥೆಯು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಅಂಗೀಭೂತವಾಗಿದ್ದು, ಕರ್ನಾಟಕ ಕ್ರಿಕೆಟ್ ತಂಡವನ್ನು ನಿಯಂತ್ರಿಸುತ್ತದೆ. 1933ರ ವರ್ಷದಲ್ಲಿ ಈ ಸಂಸ್ಥೆಯು ಸಂಸ್ಥಾಪಿಸಲ್ಪಟ್ಟಿತು ಮತ್ತು ಅಂದಿನಿಂದಲೂ ಇದು BCCIಗೆ ಅಂಗೀಭೂತವಾಗಿದೆ. ಈ ಸಂಸ್ಥೆಯು M.ಚಿನ್ನಸ್ವಾಮಿ ಕ್ರೀಡಾಂಗಣದ ಸ್ವಾಮ್ಯತ್ವವನ್ನು ಹೊಂದಿದ್ದು, ಇದು ಭಾರತದಲ್ಲಿನ ಪ್ರಮುಖ ಟೆಸ್ಟ್ ಪಂದ್ಯಗಳ ಕೇಂದ್ರಗಳಲ್ಲಿ ಒಂದೆನಿಸಿದೆ ಹಾಗೂ ಹಲವಾರು ಟೆಸ್ಟ್ ಪಂದ್ಯಗಳು ಮತ್ತು ODI ಪಂದ್ಯಗಳನ್ನು ಆಯೋಜಿಸಿದೆ.
ಇತಿಹಾಸ
[ಬದಲಾಯಿಸಿ]ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಹಿಂದೆ ಮೈಸೂರು ಕ್ರಿಕೆಟ್ ಸಂಸ್ಥೆ ಎಂಬ ಹೆಸರಿನಿಂದ ಚಿರಪರಿಚಿತವಾಗಿತ್ತು. 1933ರ ವರ್ಷದಲ್ಲಿ ಈ ಸಂಸ್ಥೆಯು ಸ್ಥಾಪಿಸಲ್ಪಟ್ಟಿತು ಮತ್ತು 1934ರ ವರ್ಷದಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಅಂಗದ ಸದಸ್ಯತ್ವವನ್ನು ಗಳಿಸಿತು. KSCA ಸಂಸ್ಥೆಯು BCCIಗೆ ಅಂಗೀಭೂತವಾಗುವಲ್ಲಿ ಪ್ರೊಫೆಸರ್ J.C.ರೋಲೋ, ನ್ಯಾಯಮೂರ್ತಿ ಶ್ರೀ. P. ಮೇದಪ್ಪ, ಕ್ಯಾಪ್ಟನ್ T.ಮುರಾರಿ, ಮೇಜರ್ YVK ಮೂರ್ತಿ ಮತ್ತು ಕ್ಯಾಪ್ಟನ್ M.G.ವಿಜಯಸಾರಥಿ ಮೊದಲಾದವರು ಕಾರಣಕರ್ತರಾಗಿದ್ದರು. JC ರೋಲೋ ಎಂಬ ಓರ್ವ ಇಂಗ್ಲಿಷ್‌ನವ ಸಂಸ್ಥೆಯ ಮೊದಲ ಅಧ್ಯಕ್ಷನಾಗಿದ್ದ. ಆರಂಭದಲ್ಲಿ, ಸೆಂಟ್ರಲ್ ಕಾಲೇಜಿನ ಪೆವಿಲಿಯನ್‌ನಲ್ಲಿರುವ ಸಣ್ಣ ಕೋಣೆಯೊಂದರಲ್ಲಿ ಸಂಸ್ಥೆಯು ನೆಲೆಗೊಂಡಿತ್ತು. 1950ರ ದಶಕ ಮತ್ತು 1960ರ ದಶಕಗಳಲ್ಲಿ, ಸಂಸ್ಥೆಯ ನೇತೃತ್ವವನ್ನು S.A.ಶ್ರೀನಿವಾಸನ್ ಮತ್ತು M.ಚಿನ್ನಸ್ವಾಮಿ ವಹಿಸಿದ್ದರು. ಬೆಂಗಳೂರಿನಲ್ಲಿರುವ ಕ್ರಿಕೆಟ್ ಕ್ರೀಡಾಂಗಣಕ್ಕೆ M. ಚಿನ್ನಸ್ವಾಮಿಯವರ ಹೆಸರನ್ನು ಇಡಲಾಗಿದೆ. ಇವರು 1953ರಿಂದ 1978ರವರೆಗೆ ಸಂಸ್ಥೆಯ ಗೌರವ ಕಾರ್ಯದರ್ಶಿಯಾಗಿದ್ದರು ಮತ್ತು 1990ರವರೆಗೂ ಅಧ್ಯಕ್ಷ ಸ್ಥಾನದಲ್ಲಿಯೇ ಉಳಿದುಕೊಂಡಿದ್ದರು.
ಮೈಸೂರು ರಾಜ್ಯವು (ಇದು 1973ರಲ್ಲಿ ಕರ್ನಾಟಕ ಎಂಬುದಾಗಿ ಮರುನಾಮಕರಣಗೊಂಡಿತು) ತನ್ನ ಮೊದಲ ರಣಜಿ ಟ್ರೋಫಿ ಪಂದ್ಯವನ್ನು 1934ರ ನವೆಂಬರ್ 4ರಂದು ಮದ್ರಾಸ್ ರಾಜ್ಯದ (ಈಗ ತಮಿಳುನಾಡು) ವಿರುದ್ಧ ಆಡಿತು. ಇದು ಮೊಟ್ಟಮೊದಲ ರಣಜಿ ಟ್ರೋಫಿ ಆಟ ಎನಿಸಿಕೊಂಡಿತು ಮತ್ತು ಇದುವರೆಗೂ ಒಂದೇ ದಿನದಲ್ಲಿ ಸಂಪೂರ್ಣಗೊಳಿಸಲ್ಪಟ್ಟ ಏಕೈಕ ರಣಜಿ ಟ್ರೋಫಿ ಆಟ ಎಂದು ಇದು ಕರೆಸಿಕೊಂಡಿದೆ. ಈ ಆಟದಲ್ಲಿ ಮೈಸೂರು ರಾಜ್ಯವು ಸೋತಿತು.[೧]
ಚಿನ್ನಸ್ವಾಮಿ ಕ್ರೀಡಾಂಗಣ
[ಬದಲಾಯಿಸಿ]ಬೆಂಗಳೂರಿನಲ್ಲಿರುವ M. ಚಿನ್ನಸ್ವಾಮಿ ಕ್ರೀಡಾಂಗಣದ ಸ್ವಾಮ್ಯತ್ವವನ್ನು KSCA ಹೊಂದಿದೆ. ಈ ಕ್ರೀಡಾಂಗಣವನ್ನು ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ (KSCA ಕ್ರೀಡಾಂಗಣ)[೨] ಎಂದು ಕರೆಯಲಾಗುತ್ತಿತ್ತು. ಕಾಲಾನಂತರದಲ್ಲಿ ಶ್ರೀ.M. ಚಿನ್ನಸ್ವಾಮಿಯವರ ಗೌರವಾರ್ಥವಾಗಿ ಅವರ ಹೆಸರಿನಲ್ಲಿ ಪುನರ್ನಾಮಕರಣಗೊಂಡಿತು. M. ಚಿನ್ನಸ್ವಾಮಿಯವರು ನಾಲ್ಕು ದಶಕಗಳವರೆಗೆ KSCAಗೆ ಸೇವೆ ಸಲ್ಲಿಸಿದ್ದರು ಮತ್ತು 1977-1980ರ ಅವಧಿಯಲ್ಲಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಅಧ್ಯಕ್ಷರಾಗಿದ್ದರು ಎಂಬುದಿಲ್ಲಿ ಗಮನಾರ್ಹ ಅಂಶವಾಗಿದೆ. ಈ ಕ್ರೀಡಾಂಗಣವು ಭಾರತದ ಪ್ರಧಾನ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಒಂದೆನಿಸಿಕೊಂಡಿದೆ. ಇದರ ಪಕ್ಕದಲ್ಲಿ ಚಿತ್ರಸದೃಶವಾದ ಕಬ್ಬನ್ ಉದ್ಯಾನವನವಿದೆ ಮತ್ತು MG ರಸ್ತೆಯಿದೆ; ಮೂರು-ದಶಕದಷ್ಟು-ಹಳೆಯದಾದ ಈ ಕ್ರೀಡಾಂಗಣವು ಬೆಂಗಳೂರು ನಗರದ ಹೃದಯಭಾಗದಲ್ಲಿ ನೆಲೆಗೊಂಡಿದೆ. 55,000 ಆಸನಗಳ ಸಾಮರ್ಥ್ಯವನ್ನು ಹೊಂದಿರುವ ಈ ಕ್ರೀಡಾಂಗಣವು ಟೆಸ್ಟ್ ಪಂದ್ಯಗಳು, ಏಕದಿನದ ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಇತರ ಮೊದಲ ದರ್ಜೆ ಪಂದ್ಯಗಳನ್ನು ನಿಯತವಾಗಿ ಆಯೋಜಿಸುವುದು ಮಾತ್ರವಲ್ಲದೇ, ಇತರ ಸಾಂಗೀತಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅವಕಾಶ ಕಲ್ಪಿಸುತ್ತದೆ. ಈ ಕ್ರೀಡಾಂಗಣವು ಕರ್ನಾಟಕ ರಾಜ್ಯ ಕ್ರಿಕೆಟ್ ತಂಡ ಹಾಗು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತವರು ಮೈದಾನವಾಗಿದೆ.
ಸಾಂಸ್ಥಿಕ ಸದಸ್ಯರು
[ಬದಲಾಯಿಸಿ]ಈ ಕೆಳಗೆ ನಮೂದಿಸಲಾಗಿರುವ ಕ್ರೀಡಾ ಕ್ಲಬ್ಬುಗಳು KSCAಯ ಸಾಂಸ್ಥಿಕ ಸದಸ್ಯರಾಗಿ ಚುನಾಯಿಸಲ್ಪಟ್ಟಿವೆ:[೩]
- ವಲಯ - ಜವಾಹರ್ ಸ್ಪೋರ್ಟ್ಸ್ ಕ್ಲಬ್, ಸೆಲೆಕ್ಟ್ ಕ್ರಿಕೆಟ್ ಕ್ಲಬ್, ಬೆಂಗಳೂರ್ ಕ್ರಿಕೆಟರ್ಸ್, ಮಲ್ಲೇಶ್ವರಂ ಯುನೈಟೆಡ್ ಕ್ರಿಕೆಟ್ ಕ್ಲಬ್, ಸ್ವಸ್ತಿಕ ಯೂನಿಯನ್ CC ಮತ್ತು ಮೌಂಟ್ ಜಾಯ್ CC.
- ಮೈಸೂರು ವಲಯ - ನ್ಯಾಷನಲ್ CC.
- ಶಿವಮೊಗ್ಗ ವಲಯ - ದುರ್ಗಿಗುಡಿ SC.
- ತುಮಕೂರು ವಲಯ - ತುಮಕೂರು ಅಕೇಷನಲ್ಸ್.
- ಮಂಗಳೂರು ವಲಯ - ಮಂಗಳೂರ್ ಸ್ಪೋರ್ಟ್ಸ್ ಕ್ಲಬ್.
- ಧಾರವಾಡ ವಲಯ - ಹುಬ್ಬಳ್ಳಿ SC.
- ರಾಯಚೂರು ವಲಯ - ಪರ್ಫೆಕ್ಟ್ SC.
ಈಗಿನ ಪದಾಧಿಕಾರಿಗಳು
[ಬದಲಾಯಿಸಿ]ಅಧ್ಯಕ್ಷ: ಸಂಜಯ್ ಎಮ್ ದೇಸಾಯಿ [೧] Archived 2017-01-13 ವೇಬ್ಯಾಕ್ ಮೆಷಿನ್ ನಲ್ಲಿ.
ಕಾರ್ಯದರ್ಶಿ: ಸುಧಾಕರ ರಾವ್
ಉಪಾಧ್ಯಕ್ಷರು:
- ಸತೀಶ್ ಮೆನನ್
- ಮಲ್ಲಿಖಾರ್ಜುನ ಸ್ವಾಮಿ
ಖಜಾಂಚಿ: ಶ್ರೀನಿವಾಸ ಮೂರ್ತಿ
ಆಡಳಿತ ಸಮಿತಿ
ಟಿಪ್ಪಣಿಗಳು
[ಬದಲಾಯಿಸಿ]ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವೆಬ್ಸೈಟ್ Archived 2010-12-18 ವೇಬ್ಯಾಕ್ ಮೆಷಿನ್ ನಲ್ಲಿ.