ಕರೀಷಕ
ಗೋಚರ
ಕರೀಷಕ: ಕರೂಷ ದೇಶಕ್ಕೆ ಇನ್ನೊಂದು ಹೆಸರು. ಇಂದ್ರ ವೃತ್ತನನ್ನು ಕೊಂದು ಬ್ರಹ್ಮಹತ್ಯೆಗೆ ಗುರಿಯಾದಾಗ ಋಷಿಗಳು, ದೇವತೆಗಳು ಒಟ್ಟುಗೂಡಿ ಇಂದ್ರನ ದೇಹದಲ್ಲಿದ್ದ ಬ್ರಹ್ಮಹತ್ಯಾ ಪಾತಕವನ್ನು ಹೊರಕ್ಕೆ ತಳ್ಳಿದರು. ಆ ಪಾತಕ ಬಿದ್ದ ಭೂಮಿಗೆ ಕರೀಷಕ ಅಥವಾ ಕರೂಷ ಎಂದು ಹೆಸರಾಯಿತು. ಇದು ಈಗಿನ ಬಿಹಾರ್ ಪ್ರಾಂತ್ಯಕ್ಕೆ ಸೇರಿದ ಷಹಾಬಾದ್ ಜಿಲ್ಲೆಯ ಪುರ್ವ ಭಾಗವೆಂದು ಹೇಳಲಾಗಿದೆ. ಪಾಂಡವರ ಕಾಲದಲ್ಲಿ ದಂತವಕ್ರ ಇಲ್ಲಿ ರಾಜ್ಯಭಾರ ಮಾಡುತ್ತಿದ್ದನೆಂದು ಮಹಾಭಾರತದಿಂದ ತಿಳಿದುಬರುತ್ತದೆ.