ವಿಷಯಕ್ಕೆ ಹೋಗು

ಅಂಬೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಂಬೆ, ಜಾವಾದ ಗೊಂಬೆಯಾಟದ ಗೊಂಬೆ.

ಅಂಬೆ ಎಂಬುದು ಮಹಾಭಾರತದಲ್ಲಿ ಬರುವ ಪಾತ್ರ. ಅಂಬೆ, ಅಂಬಾಲಿಕ, ಅಂಬಿಕಾ ಎಂಬ ಮೂವರು ಕಾಶಿರಾಜನ ರಾಜಕುವರಿಯರು. ಈ ಪೈಕಿ ಇವಳೂ ಒಬ್ಬಳು. ಅಂಬೆ ತನಗಾದ ಅವಮಾನದಿಂದಾಗಿ ತನ್ನ ಮುಂದಿನ ಜನ್ಮದಲ್ಲಿ ಭೀಷ್ಮನ ಸಾವಿಗೆ ಕಾರಣವಾಗುತ್ತೇನೆಂದು ಪ್ರತಿಜ್ಞೆ ಕೈಗೊಳ್ಳುವ ಸನ್ನಿವೇಶವನ್ನು ಮಹಾಭಾರತದಲ್ಲಿ ಕಾಣಬಹುದಾಗಿದೆ.ಅದನ್ನು ಶಿಖಂಡಿಯ ಜನ್ಮ ವೃತ್ತಾಂತದಲ್ಲಿ ನೋಡಬಹುದಾಗಿದೆ.

ಅಂಬೆಯ ವಿವಾಹ

[ಬದಲಾಯಿಸಿ]
ಚಿತ್ರ:Bhisma fight in Swayamvara.jpg
ಕಾಶಿರಾಜನ ಮಗಳ ಸ್ವಯಂವರದಲ್ಲಿ ಭೀಷ್ಮನ ಯುದ್ಧ; ಭೀಷ್ಮನು ಗೆದ್ದ ನಂತರ ಮೂರು ಕಾಶ್ಮೀರದ ರಾಜಕುಮಾರಿಯರನ್ನು ಕರೆದೊಯ್ಯುತ್ತಾನೆ
ಚಿತ್ರ:The sage Narada and the gods stop Bhishma's battle with Parashurama.jpg
ಪರಶುರಾಮನೊಂದಿಗೆ ಭೀಷ್ಮರ ಯುದ್ಧವನ್ನು ನಾರದ ಮುನಿ ಮತ್ತು ದೇವತೆಗಳು ನಿಲ್ಲಿಸುತ್ತಾರೆ. ವ್ಯಾಸ ಭಾರತದ ಕಥೆಯಂತೆ ಚಿತ್ರ

ಕುರುವಂಶದ ಮೂಲ ಪುರುಷ ಶಂತನುವೂ ಸತ್ಯವತಿಯೂ ವಿವಾಹವಾದ ನಂತರ ಅವರಿಗೆ ಚಿತ್ರಾಂಗದ ವಿಚ್ತಿತ್ರವೀರ್ಯರೆಂಬ ಮಕ್ಕಳು ಹುಟ್ಟಿ ಮಹಾಪ್ರಚಂಡರೂ, ಪ್ರತಾಪಿಗಳೂ ಆಗಿ ಬಳೆಯುತ್ತಿದ್ದ ಸಮಯದಲ್ಲಿ, ಶಂತನು ಪರಲೋಕ ವಾಸಿಯಾದನು. ಗಾಂಗೇಯನು(ಭೀಷ್ಮನು) ಮುಂಚೆ ತಾನು ನುಡಿದ ಪ್ರತಿಜ್ಞೆ ಯಂತೆ ಚಿತ್ರಾಂಗದನಿಗೆ ಪಟ್ಟವನ್ನು ಕಟ್ಟಿ ರಾಜ್ಯಭಾರವನ್ನು ಮಾಡಿಸುತ್ತಿದ್ದನು. ಹಾಗೆ ಇದ್ದ ಸಮಯದಲ್ಲಿ ಒಬ್ಬ ಗಂಧರ್ವನ ಜೊತೆ ಚಿತ್ರಾಂಗದನು ದ್ವಂದ್ವಯುದ್ಧವನ್ನು ಮಾಡಿ ಕದನ ಮಾಡಿದಾಗ ಚಿತ್ರಾಂಗಧನು ಸತ್ತನು. ಆಗ ವಿಚಿತ್ರವೀರ್ಯನನ್ನು ಗಾಂಗೇಯನು ರಾಜ್ಯಭಾರ ಧುರಂಧರನನ್ನಾಗಿ ಮಾಡಿದನು (ರಾಜ್ಯದ ಪಟ್ಟಕಟ್ಟಿದನು). ಎಲ್ಲಾ ಕ್ಷತ್ರಿಯರಿಗೂ ಇರುವ ಸಹಜವಾದ ಆಸೆಯಿಂದ, ತನ್ನ ಭುಜಬಲ ಪರಾಕ್ರಮದಿಂದ ಕಾಶೀರಾಜ್ಯಕ್ಕೆ ಹೋಗಿ, ಯುದ್ಧಮಾಡಿ ಕಾಶೀರಾಜನ ಮಕ್ಕಳಾದ ಅಂಬೆ ಅಂಬಿಕೆ ಅಂಬಾಲಿಕೆಯರೆಂಬ ಕಾಶಿರಾಜನ ಹೆಣ್ಣುಮಕ್ಕಳನ್ನು ವಿಚಿತ್ರವೀರ್ಯನಿಗೆ ವಿವಾಹಮಾಡಲು ಅಪಹರಿಸಿಕೊಂಡು ತಂದನು. ಸಾಲ್ವ ಮಹಾರಾಜನೊಂದಿಗೆ ಪ್ರೇಮ ಸಂಬಂಧದಲ್ಲಿದ್ದ ಅಂಬೆಗೆ ಈ ಮದುವೆ ಇಷ್ಟವಿರುವುದಿಲ್ಲ. ವಿಚಿತ್ರವೀರ್ಯನನ್ನು ವಿವಾಹವಾfದ ಅಂಬೆಯು ಆಕೆಯನ್ನು ಗೆದ್ದು ತಂದ ಬೀಷ್ಮನನ್ನೇ ಮದುವೆಯಾಗುವಂತೆ ಕೇಳಿಕೊಳ್ಳುತ್ತಾಳೆ. ಆದರೆ ಭೀಷ್ಮ ಮದುವೆಯಾಗುವುದಿಲ್ಲವೆಂದು ಪ್ರತಿಜ್ಞೆ ಮಾಡಿದ ಕಾರಣ ಆಕೆಯನ್ನು ಮದುವೆಯಾಗಲು ನಿರಾಕರಿಸುತ್ತಾನೆ.

ಸಾಲ್ವನ ಬಳಿಗೆ ಅಂಬೆ

[ಬದಲಾಯಿಸಿ]

ಭೀಷ್ಮನ ಮಾತಿನಲ್ಲಿ ಅಂಬೆಯು ಯಾವ ಇಷ್ಟಾರ್ಥವನ್ನು ಪಡೆಯಲಾರದೆ ತನ್ನ ಬಾಲ್ಯದಲ್ಲಿ ಮದುವೆಯಾಗುತ್ತೇನೆಂದು ಉಂಗುರವನ್ನು ತೊಡಿಸಿದ್ದ ಸಾಲ್ವಲನೆಂಬ ರಾಜನಲ್ಲಿಗೆ ಹೋಗಿ ನೀನು ನನ್ನನ್ನು ಅಂಗೀಕಾರ ಮಾಡಬೇಕು ಎನ್ನಲು ಆತನು ಹೀಗೆಂದು ಹೇಳಿದನು. ಯುದ್ಧದಲ್ಲಿ ಆ ಗಂಗೆಯ ಮಗ ಭೀಷ್ಮನು, "ನನ್ನನ್ನು ಸೋಲಸಿ ಓಡಿಸಿ, ನಿನ್ನನ್ನು ಅಪಹರಿಸಿಕೊಂಡು ಹೋದನು. ಹಾಗಾಗಿ ನಾನೂ ಹೆಂಗಸಾದೆನು. ಅದರಿಂದ ಹೆಂಗಸರು ಹೆಂಗಸರನ್ನು ಅದು ಹೇಗೆ ಮದುವೆಯಾಗುವರು ಅಬಲೇ? ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ, ಎಂದನು ಸಾಲ್ವ.

ಪರಶುರಾಮನ ಬಳಿಗೆ ಅಂಬೆ

[ಬದಲಾಯಿಸಿ]

ಸಾಲ್ವನು ಅಂಬೆಯನ್ನು ವಿವಾಹವಾಗಲಾರೆ ಎಂದು ತನಗೆ ಸೋಲಿನಲ್ಲಿ ಉಂಟಾದ ನಾಚಿಕೆಯನ್ನು ಪ್ರದರ್ಶಿಸಲು. ಅವನನ್ನು ಒಪ್ಪಿಸಲಾರದೆ ಅಂಬೆ ಪರಶುರಾಮನ ಹತ್ತಿರಕ್ಕೆ ಹೋಗಿ ಭೀಷ್ಮನು ಸ್ವಯಂವರದಲ್ಲಿ ಸೇರಿದ್ದ ರಾಜಕುಮಾರರೆಲ್ಲರನ್ನೂ ಓಡಿಸಿ ತನ್ನನ್ನು ಅಪಹರಿಸಿಕೊಂಡು ಬಂದು ನನ್ನನ್ನು ಮದುವೆ ಮಾಡಿಕೊಳ್ಳದೆ ಓಡಿಸಿದನು. ನನ್ನ ಯೌವನವು ಕಾಡಿನಲ್ಲಿ ಬಿಟ್ಟ ಹೂವಿನಂತೆ ವ್ಯರ್ಥವಾಗದ ಹಾಗೆ ಆತನು ನನ್ನ ಕಯ್ಯನ್ನು ಹಿಡಿಯುವ ಹಾಗೆ ಮಾಡು; ಹಾಗೆ ಮಾಡಲು ಸಾಧ್ಯವಿಲ್ಲದಿದ್ದರೆ (ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ), ಬೆಂಕಿಯನ್ನು ದಯಪಾಲಿಸು, ಎಂಬುದಾಗಿ ಅಂಬೆಯು ಕಣ್ಣಿನಲ್ಲಿ ನೀರುತುಂಬಿ ಹೇಳಿದಳು. ಅದಕ್ಕೆ ಪರಶುರಾಮನು, 'ಭೀಷ್ಮನು ತನ್ನನ್ನು ಗುರು ಎಂದು, ವಿನಯವನ್ನು ಆಶ್ರಯಿಸುವುದಾದರೆ ನಾನು ಹೇಳಿದ ಹೆಣ್ಣನ್ನು ಮದುವೆಯಾಗುತ್ತಾನೆ. ಹಾಗಲ್ಲದೆ ಅವಿನಯವನ್ನೇ ನಂಬುವುದಾದರೆ ನನ್ನನ್ನು ಮೀರಿ ಭಯಂಕರವಾದ ಯುದ್ಧದಲ್ಲಿ ಪ್ರತಿಭಟಿಸುವವನಾಗುತ್ತಾನೆ. ವಿಚಾರ ಮಾಡಿದರೆ (ಭೀಷ್ಮನಿಗೆ) ಬೇರೆ ಕಾರ್ಯ- ಮಾರ್ಗ ಇಲ್ಲ. ಶಂತನು ಮಗನಿಗೆ ನನ್ನನ್ನು ಬಹಳ ನಂಬಿದ ಅಂಬೆಯಲ್ಲಿ ಅವನ ಮದುವೆಯನ್ನು ಮಾಡಿಸುತ್ತೇನೆ; ಅವನು ಒಪ್ಪದಿದ್ದರೆ ನನ್ನ ಬಾಣದ ಮೂಲಕ ಮಾಡುವೆನು ಎನ್ನತ್ತಾನೆ.

ಭೀಷ್ಮ - ಪರಷುರಾಮರ ಯುದ್ಧ

[ಬದಲಾಯಿಸಿ]

ಹಸ್ತಿನಾಪುರಕ್ಕೆ ಬರುತ್ತಿರುವ ಪರಶುರಾಮನ ಆಗಮನವನ್ನು ಭೀಷ್ಮನು ಕೇಳಿ ಎದುರಾಗಿ ಬಂದು ಚಿನ್ನ ಮತ್ತು ಬೆಳ್ಳಿಯ ಪಾತ್ರೆಗಳಲ್ಲಿ ಅರ್ಘ್ಯವನ್ನು ಕೊಟ್ಟು ನಮಸ್ಕಾರಮಾಡಿ- "ಕೆಲಸ ಏನು, ಅಪ್ಪಣೆ ಏನು? ಎಂದು ಭೀಷ್ಮನು ಕೇಳಿದರೆ, ಅದಕ್ಕೆ ಪರಶುರಾಮನು, "ನನ್ನ ಆಜ್ಞೆಯನ್ನು ನೀನು ಅಂಗೀಕಾರಮಾಡಬೇಕು. ಹಸುರುವಾಣಿ ಚಪ್ಪರ ಮತ್ತು ಹಸೆಮಣೆಗಳನ್ನು ಸಿದ್ಧಪಡಿಸಿ ಈ ಕನ್ಯೆಯನ್ನು ಸ್ವೀಕರಿಸು, ಸ್ವೀಕರಿಸಕೂಡದೆಂಬ ಕಾರ್ಯ (ವಿಚಾರ) ಮನಸ್ಸಿನಲ್ಲಿರುವಾದದರೆ ಈಗಲೇ ಇವರು ನಮ್ಮ ಗುರುಗಳು ಎಂಬ ಭಕ್ತಿಪ್ರದರ್ಶನ ಮಾಡದೆ ಯುದ್ಧೋದ್ಯೋಗವನ್ನು ಕೈಕೊಂಡು ಶಸ್ತ್ರಧಾರಣೆ ಮಾಡು. ಎರಡರಲ್ಲಿ ಇಷ್ಟಪಟ್ಟಿದ್ದನ್ನು ಕೊಟ್ಟಿದ್ದೇನೆ, ಏನು ಹೇಳುವೆ?" ಎಂದನು. ಹೀಗೆ ಹೇಳಿದ ಪರಶುರಾಮನ ಮಾತನ್ನು ಭೀಷ್ಮನು ಕೇಳಿ "ನನಗೆ ವೀರಲಕ್ಷ್ಮಿ ಮತ್ತು ಯಶೋಲಕ್ಷ್ಮಿಯರಲ್ಲದೆ ಉಳಿದ ಹೆಂಗಸರಲ್ಲಿ ಸಂಬಂಧವಿಲ್ಲ. ಏಕೆ ಕೋಪಿಸಿ ಕೊಳ್ಳುತ್ತೀರಿ, ಹೀಗಾದರೆ ನಮ್ಮೊಡನೆ ಯುದ್ಧಮಾಡುವುದು" ಎಂದನು ಪರಷುರಾಮ. ಆಗ ಇಬ್ಬರೂ ಭಯಂಕರವಾದ ಯುದ್ಧಮಾಡಬೇಕೆಂಬ ಅಪೇಕ್ಷೆಯಿಂದ ಕುರುಕ್ಷೇತ್ರವನ್ನೇ ಯುದ್ಧಭೂಮಿಯನ್ನಾಗಿ ಮಾಡಿಕೊಂಡು ಐಂದ್ರಾಸ್ತ್ರ ವಾರುಣಾಸ್ತ್ರ ವಾಯವ್ಯಾಸ್ತ್ರಗಳ ಸಮೂಹದಿಂದ ಒಬ್ಬರನ್ನೊಬ್ಬರು, ಬಾಣಪ್ರಯೋಗಮಾಡಿ ಘಾತಿಸಿ, ಬ್ರಹ್ಮನು ತನ್ನ ಕಮಲಾಸನದಿಂದ ಮೇಲಕ್ಕೆ ಹಾರಿಹೋಗುವಂತೆ ಮಾಡಿ, ಮೂರುಲೋಕಗಳಲ್ಲಿಯೂ ಹಿರಿದಾದ ಸಂಕಟವನ್ನುಂಟುಮಾಡಿದರು. ಈ ಭೀಷ್ಮನದು ತರ್ಕಕ್ಕೆ ಮೀರಿದ ಭುಜಬಲ ಮತ್ತ ಅಸಮಾನ್ಯ ಪರಾಕ್ರಮ, ಈತನಿಗೆ ದೇವತೆಗಳು ಸಾಟಿಯೇ? ಆಕಾಶದಲ್ಲಿ ಭೀಷ್ಮನ ಹರಿತವಾದ ಬಾಣಗಳು ಪರಷುರಾಮನ ಗರ್ವವನ್ನು ಕೆಡಿಸಲು, ಭಾರ್ಗವನು ಹೆದರಿದನು, ಇದೇನು ಪ್ರತಿಜ್ಞಾಬದ್ಧ ಗಾಂಗೇಯನಿಗೆ ಹೆದರದೆ ಎದಿರು ನಿಲ್ಲುವವರು ಇದ್ದಾರೆಯೇ? ಪರಷುರಾಮನು ಸೋತುಹೋದನು.

ಅಂಬೆಯ ಅಗ್ನಿ ಪ್ರವೇಶ

[ಬದಲಾಯಿಸಿ]

ಯುದ್ಧದಲ್ಲಿ ಪರಶುರಾಮನು ಮೂರ್ಛೆ ಹೋದ ಕಾರಣ ತನಗಾದ ಅವಮಾನಕ್ಕಾಗಿ ಅಂಬೆಯು ದುಃಖದಿಂದ ಅಗ್ನಿ ಪ್ರವೇಶ ಮಾಡುತ್ತಾಳೆ. ತನಗಾದ ಗತಿಯೇ ಮುಂದೆ ಹಸ್ತಿನಾವತಿಯ ಹೆಣ್ಣು ಮಗಳಿಗೆ ಬರಲಿ ಎಂಬ ಶಾಪವನ್ನು ನೀಡಿ ಅಗ್ನಿಗೆ ಆಹುತಿಯಾಗುತ್ತಾಳೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
"https://kn.wikipedia.org/w/index.php?title=ಅಂಬೆ&oldid=1052675" ಇಂದ ಪಡೆಯಲ್ಪಟ್ಟಿದೆ