ಸತ್ಯವ್ರತ ಶಾಸ್ತ್ರಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸತ್ಯವ್ರತ ಶಾಸ್ತ್ರಿ ಸಂಸ್ಕೃತದ ಒಬ್ಬ ವಿದ್ವಾಂಸರು. ಅವರು ನವದೆಹಲಿಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿನ ಸಂಸ್ಕೃತ ಅಧ್ಯಯನದ ವಿಶೇಷ ಕೇಂದ್ರದಲ್ಲಿ ಗೌರವ ಪ್ರಾಧ್ಯಾಪಕರು. ಅವರು ಸಂಸ್ಕೃತದಲ್ಲಿ ಅನೇಕ ಕಾವ್ಯಕೃತಿಗಳನ್ನು ರಚಿಸಿದ್ದಾರೆ. ಥಾಯ್ಲೆಂಡ್ ನಲ್ಲಿನ ಹಿಂದೂ ದೇವಾಲಯಗಳು ಮತ್ತು ಸಂಸ್ಕೃತ ಶಾಸನಗಳು, ಕಾಳಿದಾಸ ಅಧ್ಯಯನ , ಯೋಗವಾಸಿಷ್ಠ ದ ವಿಮರ್ಶಾತ್ಮಕ ಕೃತಿ , ಆಗ್ನೇಯ ಏಷ್ಯಾದ ಸಂಸ್ಕೃತದ ಶಬ್ದಕೋಶ ಮತ್ತು ಆಗ್ನೇಯ ಏಷ್ಯಾದಲ್ಲಿ ರಾಮನ ಕಥೆ - ಇವು ಅವರ ಸದ್ಯದ ಸಂಶೋಧನೆಯ ಯೋಜನೆಗಳು . ಅವರು ೨೦೦೬ ನೇ ಸಾಲಿನ ಜ್ಞಾನಪೀಠ ಪ್ರಶಸ್ತಿ ಯನ್ನು ಪಡೆದಿದ್ದಾರೆ.