ಅಕ್ಷೋಹಿಣಿ

ವಿಕಿಪೀಡಿಯ ಇಂದ
Jump to navigation Jump to searchಅಕ್ಷೋಹಿಣಿ ಎಂಬುದು ಮಹಾಭಾರತದಲ್ಲಿ ನಡೆಯುವ ಕುರುಕ್ಷೇತ್ರದ ಮಹಾಯುದ್ಧದ ವಿವರಣೆಯಲ್ಲಿ ಬಳಸಲ್ಪಟ್ಟಿದೆ. ಅಕ್ಷೋಹಿಣಿ ಸೈನ್ಯ ಎಂಬುದು ಆಯಾ ಸೈನ್ಯದಲ್ಲಿರಬಹುದಾದ ಒಂದು ತುಕಡಿ ಅಥವಾ ಈಗಿನ ರೆಜಿಮೆಂಟ್ ಎಂದೂ ಭಾವಿಸಬಹುದಾಗಿದೆ. ನಿರ್ದಿಷ್ಟ ಸಂಖ್ಯೆಯ ಪದಾತಿದಳ,ಕುದುರೆಗಳು,ಆನೆಗಳು ಮತ್ತು ರಥಗಳು ಅಕ್ಷೋಹಿಣಿ ಸೈನ್ಯದಲ್ಲಿ ಸೇರಿಕೊಂಡಿರುತ್ತವೆ.ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸೈನ್ಯದ ತುಕಡಿಯೊಂದರಲ್ಲಿ ೨೧,೮೭೦ ರಥಗಳು,೨೧,೮೭೦ ಆನೆಗಳು,೬೫,೬೧೦ ಕುದುರೆಗಳು ಮತ್ತು ೧,೦೯,೩೫೦ ರಷ್ಟು ಸಂಖ್ಯೆಯ ಪದಾತಿದಳವನ್ನು ಹೊಂದಿರುವ ತುಕಡಿಯನ್ನು ಒಂದು ಅಕ್ಷೋಹಿಣಿ ಸೈನ್ಯ ಎಂದು ಕರೆಯಬಹುದಾಗಿದೆ.೧ ರಥ,೧ ಆನೆ,೩ ಕುದುರೆಗಳು (ಯೋಧರೊಂದಿಗೆ) ಮತ್ತು ೫ ಪದಾತಿ ಸೈನಿಕರ ಅನುಪಾತದೊಂದಿಗೆ ಇಂಥದೊಂದು ತುಕಡಿಯನ್ನು ಕಟ್ಟಿರುವದನ್ನು ಗಮನಿಸಬಹುದು.