ವಿಷಯಕ್ಕೆ ಹೋಗು

ಮೃಗವನಿ ರಾಷ್ಟ್ರೀಯ ಉದ್ಯಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೃಗವನಿ ರಾಷ್ಟ್ರೀಯ ಉದ್ಯಾನವನವು ಭಾರತದ ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿರುವ ರಾಷ್ಟ್ರೀಯ ಉದ್ಯಾನವನವಾಗಿದೆ. ಇದು ಎಮ್‌ಜಿಬಿಎಸ್(ಮಹಾತ್ಮ ಗಾಂಧಿ ಬಸ್ ನಿಲ್ದಾಣ) ದಿಂದ ೨೦ ಕಿಮೀ ದೂರದಲ್ಲಿರುವ ಮೊಯಿನಾಬಾದ್ ಮಂಡಲದ ಚಿಲ್ಕೂರ್‌ನಲ್ಲಿದೆ. ಇದು ಸುಮಾರು ೩.೬ ಚದರ ಕಿಲೋಮೀಟರ್ (೧.೪ ಚದರ ಮೈಲಿ) ಅಥವಾ ೧೨೧೧ ಎಕರೆ ವಿಸ್ತೀರ್ಣವನ್ನು ಹೊಂದಿದೆ. ಸುಮಾರು ೬೦೦ ಸಸ್ಯ ಪ್ರಬೇಧಗಳಿವೆ. ಸುಮಾರು ೩೫೦ ಚಿತಾಲ್(ಮಚ್ಚೆಯುಳ್ಳ ಜಿಂಕೆ) ಗಳಿಗೆ ನೆಲೆಯಾಗಿದೆ. ಭಾರತೀಯ ಮೊಲ, ಅರಣ್ಯ ಬೆಕ್ಕು, ಸಿವೆಟ್, ಭಾರತೀಯ ಇಲಿ, ಹಾವು, ಮಂಡಲ ಹಾವು, ಚಿಟಾಲ್ ಮತ್ತು ಹೂಕುಟಿಗ ಹಕ್ಕಿಗಳು ಸಹ ಮೃಗವನಿ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಸಿಗುತ್ತದೆ.[][]

ಇತಿಹಾಸ

[ಬದಲಾಯಿಸಿ]

ಮೃಗವನಿ ರಾಷ್ಟ್ರೀಯ ಉದ್ಯಾನವನವನ್ನು ೧೯೯೪ ರಲ್ಲಿ ರಾಷ್ಟ್ರೀಯ ಉದ್ಯಾನವನ ಎಂದು ಘೋಷಿಸಲಾಯಿತು.

ಸಸ್ಯಗಳು ಮತ್ತು ಪ್ರಾಣಿಗಳು

[ಬದಲಾಯಿಸಿ]

ತೇಗದ ಮರ, ಬಿದಿರು, ಶ್ರೀಗಂಧದ ಮರ, ಪಿಕಸ್, ಪಲಾಸ್, ರೇಲಾ. ಸಸ್ಯ ಪ್ರಭೇದಗಳಲ್ಲಿ ಬ್ರಯೋಫೈಟ್ಸ್, ಟೆರಿಡೋಫೈಟ್ಸ್, ಗಿಡಮೂಲಿಕೆಗಳು, ಪೊದೆಗಳು, ಬಳ್ಳಿಗಳು ಮತ್ತು ಮರಗಳನ್ನು ಕಾಣಬಹುದು. ಚೀತಾಲ್, ಕಡವೆ(ಸಾಂಬಾರ್ ಜಿಂಕೆ), ಕಾಡುಹಂದಿ, ಕಾಡು ಬೆಕ್ಕು, ಪುನುಗು ಬೆಕ್ಕು, ಮುಂಗುಸಿ, ಉಡ, ಹೆಬ್ಬಾವು, ಮಂಡಲ ಹಾವು, ಕಿಂಗ್ ಕೋಬ್ರಾ‌ಗಳಂತಹ ಹಾವುಗಳು ಮತ್ತು ಪ್ರಾಣಿಗಳು ಕಂಡುಬರುತ್ತವೆ. ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿಗಳ ಹೊರತಾಗಿ ಮೃಗವನಿ ರಾಷ್ಟ್ರೀಯ ಉದ್ಯಾನವನವು ಟುವ್ವಿ ಹಕ್ಕಿ(ವಾರ್ಬ್ಲರ್‌) ಗಳು, ನವಿಲುಗಳು, ಟಿಟ್ಟಿಭ( ಲ್ಯಾಪ್‌ವಿಂಗ್‌) ಗಳು ಮತ್ತು ಹೂಕುಟಿಗ ಹಕ್ಕಿ ಸೇರಿದಂತೆ ೧೦೦ ಕ್ಕೂ ಹೆಚ್ಚು ಜಾತಿಯ ಪಕ್ಷಿಗಳನ್ನು ಹೊಂದಿದೆ.[]

ಉದ್ಯಾನವನದಲ್ಲಿ ಎತ್ತರದ ನೋಟಕ್ಕಾಗಿ ಎತ್ತರದಲ್ಲಿರುವ ಒಂದು ಬಿಂದುವಿದೆ ಮತ್ತು ಪ್ರಾಣಿಗಳನ್ನು ಹತ್ತಿರದಿಂದ ವೀಕ್ಷಿಸಲು ವಾಚ್ ಟವರ್ ಕೂಡ ಇದೆ.

ಪರಿಸರಕ್ಕೆ ಸಂಬಂಧಿಸಿದಂತೆ ಗ್ರಂಥಾಲಯ ಮತ್ತು ಶಿಕ್ಷಣ ಕೇಂದ್ರವೂ ಇದೆ. ಉದ್ಯಾನವನದಲ್ಲಿರುವ ವನ್ಯಜೀವಿಗಳನ್ನು ಹತ್ತಿರದಿಂದ ನೋಡಲು ಸಫಾರಿ ಸವಾರಿ ಸಹ ಹೋಗಬಹುದು. ಜೊತೆಗೆ ಪ್ರಕೃತಿ ಮಾರ್ಗದರ್ಶಕರೊಂದಿಗೆ ನಡಿಗೆಯ ಮೂಲಕ ಸಹ ಪ್ರಾಣಿಗಳನ್ನು ವೀಕ್ಷಿಸಬಹುದು.

ಉದ್ಯಾನವನದಲ್ಲಿ ಕಾಡುಪ್ರದೇಶಗಳು, ಹುಲ್ಲುಗಾವಲುಗಳು ಮತ್ತು ಕಲ್ಲಿನ ಪ್ರದೇಶಗಳನ್ನು ಸಹ ನೋಡಬಹುದು.

ಋತುಗಳು

[ಬದಲಾಯಿಸಿ]

ಚಳಿಗಾಲ - ನವೆಂಬರ್ ನಿಂದ ಫೆಬ್ರವರಿ ಬೇಸಿಗೆ - ಮಾರ್ಚ್ ನಿಂದ ಮೇ ಮಾನ್ಸೂನ್ - ಜೂನ್ ನಿಂದ ಅಕ್ಟೋಬರ್ ಸರಾಸರಿ ಮಳೆ: ೩೦೦ ರಿಂದ ೭೫೦ ಮಿ.ಮೀ ತಾಪಮಾನ: ಗರಿಷ್ಠ ೪೦°C, ಕನಿಷ್ಠ ೧೦°C ನಿರ್ದೇಶಾಂಕಗಳು: ೧೭° ೨೧' ೨೭.೭೯″ N, ೭೮° ೨೦' ೨೬.೯೧″ E

ಪ್ರಧಾನ ಸಸ್ಯ ಮತ್ತು ಪ್ರಾಣಿ

[ಬದಲಾಯಿಸಿ]

ತೇಗದ ಮರ, ಬಿದಿರು, ಶ್ರೀಗಂಧದ ಮರ, ಪಿಕಸ್, ಪಲಾಸ್, ರೇಲಾ ಇತ್ಯಾದಿ.

ಸಸ್ತನಿಗಳು -ಚಿರತೆ(ಪ್ಯಾಂಥರ್), ಚೀತಾಲ್, ಕಡವೆ(ಸಾಂಬಾರ್ ಜಿಂಕೆ), ಕಾಡುಹಂದಿ, ಕಾಡು ಬೆಕ್ಕು, ಪುನುಗು ಬೆಕ್ಕು, ಮುಂಗುಸಿ, ನರಿಗಳು, ಮುಳ್ಳುಹಂದಿಗಳು, ನರಿ, ಕಪ್ಪು ಮೊಲ ಇತ್ಯಾದಿ.

ಸರೀಸೃಪಗಳು - ಹಾವುಗಳು, ಕೇರೆಹಾವು, ಉಡ, ಮಂಡಲ ಹಾವು, ನಾಗರಹಾವು ಇತ್ಯಾದಿ.

ಪಕ್ಷಿಗಳು - ಕ್ವಿಲ್‌ಗಳು, ನವಿಲುಗಳು, ಟುವ್ವಿ ಹಕ್ಕಿ(ವಾರ್ಬ್ಲರ್‌) ಗಳು, ಪಾರ್ಟ್ರಿಡ್ಜ್‌ಗಳು, ಹೂಕುಟಿಗ ಹಕ್ಕಿ, ಬಾತುಕೋಳಿಗಳು, ಕ್ರೌಂಚ ಪಕ್ಷಿ, ಟಿಟ್ಟಿಭ( ಲ್ಯಾಪ್‌ವಿಂಗ್‌) ಗಳು, ಬಾಬ್ಲರ್, ಕೋಗಿಲೆ ಇತ್ಯಾದಿ.

ಮೃಗವನಿ ರಾಷ್ಟ್ರೀಯ ಉದ್ಯಾನವನವು ಚಿಲ್ಕೂರ್ ಬಾಲಾಜಿ ದೇವಸ್ಥಾನದ ಸಮೀಪದಲ್ಲಿದೆ. ಎಮ್‌ಜಿಬಿಎಸ್(ಮಹಾತ್ಮ ಗಾಂಧಿ ಬಸ್ ನಿಲ್ದಾಣ) ನಿಂದ ರಸ್ತೆಯ ಮೂಲಕ ಸುಮಾರು ೨೦ ಕಿಮೀ ದೂರದಲ್ಲಿದೆ.

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2018-04-30. Retrieved 2024-02-21.
  2. http://www.thehindu.com/life-and-style/homes-and-gardens/dear-how-about-some-deer-spotting/article22419685.ece
  3. https://www.thehansindia.com/posts/index/Hans/2015-08-27/Mrugavani-National-Park/172921


ಬಾಹ್ಯ ಕೊಂಡಿಗಳು

[ಬದಲಾಯಿಸಿ]