ಕಾಶೀನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು r2.6.4) (robot Modifying: en:Kashinath (actor)
ಚು Bot: Migrating 1 interwiki links, now provided by Wikidata on d:q6374328 (translate me)
೧೯ ನೇ ಸಾಲು: ೧೯ ನೇ ಸಾಲು:
[[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]]
[[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]]
[[ವರ್ಗ:ಕನ್ನಡ ಚಿತ್ರರಂಗದ ನಟರು]]
[[ವರ್ಗ:ಕನ್ನಡ ಚಿತ್ರರಂಗದ ನಟರು]]

[[en:Kashinath (actor)]]

೨೩:೦೯, ೮ ಮಾರ್ಚ್ ೨೦೧೩ ನಂತೆ ಪರಿಷ್ಕರಣೆ

ಕಾಶೀನಾಥ್

ಕಾಶೀನಾಥ್ ಅವರು ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ. ಇವರು ಕುಂದಾಪುರ ಸಮೀಪದ ಕೋಟೇಶ್ವರದ ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಇವರು ಉಪೇಂದ್ರ, ಮನೋಹರ್, ಸುನೀಲ್‍ಕುಮಾರ್ ದೇಸಾಯಿ ಮುಂತಾದ ಹೆಸರಾಂತ ನಿರ್ದೇಶಕರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು. ಕಾಶೀನಾಥ್ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೆಬ್ಬಿಸಿದವರು. ಅವರು ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಅವರ ವಿಭಿನ್ನ ಶೈಲಿಯ ಚಿತ್ರಗಳು ಯಶಸ್ಸಿನ ಉತ್ತುಂಗಕ್ಕೇರಿ ಗಲ್ಲಾಪೆಟ್ಟಿಗೆಯನ್ನು ಸೂರೆ ಹೊಡೆದವು. ಅವರ ಗರಡಿಯಲ್ಲಿ ಪಳಗಿದ ಅನೇಕ ಯುವಕರು ಇಂದು ಚಿತ್ರರಂಗದಲ್ಲಿ ಬಹಳ ಯಶಸ್ವಿಯಾಗಿದ್ದಾರೆ. ಅವರ ಚಿತ್ರಗಳಲ್ಲಿ ಪ್ರಮುಖವಾದವು ಅನಂತನ ಅವಾಂತರ, ಅನುಭವ, ಹೆಂಡತಿ ಎಂದರೆ ಹೇಗಿರಬೇಕು ಇತ್ಯಾದಿ, ಅವರ ಮಂಗಳೂರು ಮಂಜುನಾಥ ಚಿತ್ರದ ಸಂಭಾಷಣೆಗಳು ಬಹಳ ಜನಪ್ರಿಯವಾಗಿವೆ. ಇವರ ಅಜಗಜಾಂತರ(೧೯೯೧) ಎಂಬ ಚಿತ್ರವನ್ನು ಹಿಂದಿಯಲ್ಲಿ ಜುದಾಯಿ (೧೯೯೭) ಎಂದು ರೀಮೇಕ್ ಮಾಡಲಾಗಿದೆ. ಇದರಲ್ಲಿ ಅನಿಲ್ ಕಪೂರ್, ಶ್ರೀದೇವಿ ಹಾಗೂ ಊರ್ಮಿಳಾ ಮಾತೋಂಡ್ಕರ್ ಅಭಿನಯಿಸಿದ್ದಾರೆ.ಇವರು ಕಡಿಮೆ ವೆಚ್ಛದಲ್ಲಿ ಉತ್ತಮ ಚಿತ್ರಗಳನ್ನು ನಿರ್ಮಿಸುವಲ್ಲಿ ಸಿದ್ಧಹಸ್ತರು.

ಚಿತ್ರರಂಗದ ಸಾಧನೆಗಳು

  • ಇವರು ನಿರ್ಮಿಸಿದ ಚಿತ್ರಗಳು : ೧೧- ಕನ್ನಡ, ೧- ಹಿಂದಿ, ೧- ತೆಲುಗು
  • ಚಿತ್ರಕಥೆ ಮತ್ತು ನಿರ್ದೇಶನ : ೧೩- ಕನ್ನಡ, ೨- ಹಿಂದಿ, ೧- ತೆಲುಗು
  • ಸಂಭಾಷಣೆ ಬರೆದದ್ದು : ೭- ಕನ್ನಡ
  • ಚಿತ್ರಗೀತೆ : ೩- ಕನ್ನಡ
  • ಸಂಗೀತ ನಿರ್ದೇಶನ : ೧- ಕನ್ನಡ, ೧- ತೆಲುಗು
  • ನಟನೆ : ೩೬- ಕನ್ನಡ, ೧- ತೆಲುಗು