ವಿದ್ಯುನ್ಮಾನ ನಗರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲ್ಲೂಕಿನಲ್ಲಿರುವ ಮಾಹಿತಿ ತಂತ್ರಜ್ಞಾನ ಹಾಗು ವಿದ್ಯುನ್ಮಾನ ಸಂಸ್ಥೆಗಳ ಬೃಹತ್ ತಾಣವಾಗಿರುವ ವಿದ್ಯುನ್ಮಾನ ನಗರ (Electronics City) ಬೆಂಗಳೂರು ನಗರದಿಂದ ನಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ದೇಶದ ಪ್ರಮುಖ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ, ಇನ್ಫೋಸಿಸ್ , ವಿಪ್ರೋ , ಎಚ್.ಸಿ.ಎಲ್ ಹಾಗೂ ಇನ್ನು ಇತರ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಇಲ್ಲಿ ತಮ್ಮ ಕಛೇರಿಗಳನ್ನು ಹೊಂದಿವೆ. ಇದಲ್ಲದೆ, ವಿದ್ಯುನ್ಮಾನ ಸಂಸ್ಥೆಗಳಾದ, ಬಿ.ಹೆಚ್.ಇ.ಎಲ್ ಹಾಗು ಐ.ಟಿ.ಐ, ಮಾಹಿತಿ ತಂತ್ರಜ್ಞಾನ ಶಿಕ್ಷಣದ ರಾಷ್ಟ್ರೀಯ ಸಂಸ್ಥೆ ಐ.ಐ.ಐ.ಟಿ.ಬಿ (Indian Institute of Information Technology, Bangalore) ಸಹ ವಿದ್ಯುನ್ಮಾನ ನಗರದಲ್ಲಿವೆ.