ಕೊಂಡ

ವಿಕಿಪೀಡಿಯ ಇಂದ
Jump to navigation Jump to search
ಕೊಂಡ ಭಾಷೆ
ಬಳಕೆಯಲ್ಲಿರುವ 
ಪ್ರದೇಶಗಳು:
ಭಾರತ
ಒಟ್ಟು 
ಮಾತನಾಡುವವರು:
೨೦,೦೦೦
ಭಾಷಾ ಕುಟುಂಬ:
 ಕೊಂಡ ಭಾಷೆ
 
ಅಧಿಕೃತ ಸ್ಥಾನಮಾನ
ಅಧಿಕೃತ ಭಾಷೆ: ಭಾರತ
ನಿಯಂತ್ರಿಸುವ
ಪ್ರಾಧಿಕಾರ:
no official regulation
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3: kfc

ಮಧ್ಯ ದ್ರಾವಿಡ ಭಾಷೆಗಳಲ್ಲೊಂದು. ಕೂಬಿ ಎಂದೂ ಇದನ್ನು ಕರೆವುದಿದೆ. ಇದು ಆಂಧ್ರ ಪ್ರದೇಶದ ವಿಶಾಖಪಟ್ಟಣ ಜಿಲ್ಲೆಯಿಂದ 70 ಮೈಲಿ ವಾಯವ್ಯಕ್ಕಿರುವ ಅರಕು ಕಣಿವೆಯ ನಿವಾಸಿಗಳ ವ್ಯವಹಾರದಲ್ಲಿದೆ. ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ಸುಮಾರು 20,000 ಈ ಜನರನ್ನು ಕೊಂಡ ದೊರಲು, ಕೊಂಡಕಾಪುಲು, ಓಜಲು ಮತ್ತು ಪಾಂಡವರೈತುಲು ಎಂಬುದಾಗಿ ಕರೆಯುತ್ತಾರೆ. ಈ ಭಾಷೆಯಲ್ಲಿರುವ ವರ್ಣಗಳು ಇವು:

 • ಸ್ವರಗಳು 10 : ಅ, ಆ, ಇ, ಈ, ಉ, ಊ, ಎ, ಏ, ಒ, ಓ,
 • ವ್ಯಂಜನಗಳು 23[೧]:ಕ, ?, ಗ, ಙ, ಸ, ಜ(Z), ಟ, ಡ, ಣ,

ತ, ದ, ನ, ಪ, ಬ, ಮ, ಯ, ರ, ¾, ¾್ಹ (ಖ), ಲ, ಢ, ವ, ಹ. ಈ ಭಾಷೆಯಲ್ಲಿರುವ ವಿಶಿಷ್ಟ ವರ್ಣಗಳು ಕಂಠಮೂಲೀಯ ಸ್ಪಶ್ರ್ಯ=/?/, ಪರುಷ, ಸರಳ ¾=/ಖ/(¾ ್ಹ,/ಡಿ/¾); ಈಷತ್ ಸ್ಪøಷ್ಟ ಢಕಾರ=/ಡಿ/. ಇತರ ಎಲ್ಲ ದ್ರಾವಿಡ ಭಾಷೆಗಳಲ್ಲಿ ನಷ್ಟವಾಗಿ ಹೋದ ರ ¾ ಭೇದ ಈ ಭಾಷೆಯಲ್ಲಿ ಇನ್ನೂ ಉಳಿದುಕೊಂಡಿದೆ. ಈ ಭಾಷೆಯಲ್ಲಿ ಲಿಂಗ ಎರಡು ವಿಧ : ಮಹತ್ ಮತ್ತು ಅಮಹತ್. ಅಮಹತ್ ಬಹುವಚನ-ಕ್/-ಕು-ಅಥವಾ-/ಙï-ಙು ಪ್ರತ್ಯಯ ಸೇರಿಸುವುದರಿಂದ ಏರ್ಪಡುತ್ತವೆ. ಪಂಡು (ಏಕವಚನ), ಪಟ್ಕು (ಬಹುವಚನ) ಕುಪ್ಪ ( " ), ಕುಪ್ಪೆಙï ( " ) ಮಹತ್ ಬಹುವಚನ-ರ್ ಪ್ರತ್ಯಯ ಸೇರಿಸುವುದರಿಂದ ಏರ್ಪಡುತ್ತದೆ. ಅನ=ಅಣ್ಣ, ಅನಾರ್=ಅಣ್ಣಂದಿರು

ಸರ್ವನಾಮಗಳು[ಬದಲಾಯಿಸಿ]

ಉತ್ತಮಪುರುಷ[ಬದಲಾಯಿಸಿ]

 • (ಏಕವಚನ)-ನಾನ್
 • (ಬಹುವಚನ)-ಮಾಪ್
 • (ಬಹುವಚನ)-ಮಾಟ್

ಮಧ್ಯಮಪುರುಷ[ಬದಲಾಯಿಸಿ]

 • (ಏಕವಚನ) - ನೀನ್

(*ಬ.ವ.) -ಮೀರ್

ಪ್ರಥಮಪುರುಷ[ಬದಲಾಯಿಸಿ]

 • ಮಹತ್ ಏ.ವ.)-ವಾನುù=ಅವನು
 • (ಮಹತ್ ಬ.ವ.)-ವಾರ್=ಅವರು
 • (ಅಮಹತ್ ಏ.ವ.)-ಅದಿ=ಅವಳು, ಅದು.
 • (ಅಮಹತ್ ಬ.ವ.)-ಅವಿ=ಅವು.

ಸಂಖ್ಯಾವಾಚಕಗಳು[ಬದಲಾಯಿಸಿ]

ಉನಿù, ರುಂಡಿ, ಮೂನಿù, ನಾಲ್ಗಿ, ಉಳಿದುವೆಲ್ಲ ತೆಲುಗಿನಂತೆ.

ನಾಮವಿಭಕ್ತಿಗಳು[ಬದಲಾಯಿಸಿ]

ವಿಭಕ್ತಿ ಪ್ರತ್ಯಯಗಳ ಮುಂದೆ

 • ಏಕವಚನದಲ್ಲಿ ತಿ, ದಿ, ಇ, ಪ್ರತ್ಯಯಗಳನ್ನು ಸೇರಿಸುತ್ತಾರೆ .
 • ಬಹುವಚನದಲ್ಲಿ ಇ, ಅ ಪ್ರತ್ಯಯಗಳನ್ನು ಸೇರಿಸುತ್ತಾರೆ.
 • ದ್ವಿತೀಯೆ-ಚತುರ್ಥಿ: ಙï (ಏ,ವ.) ಮರನ್-ದಿ-ಙï=ಮರವನ್ನು, ಮರಕ್ಕೆ
 • ತೃತೀಯೆ-ಪಂಚಮಿ: -ಅಂಡ್ (ಏ.ವ.) ಮರತ್-ಅಂಡ್, ಮರದಿಂದ.
 • ಷಷ್ಠಿ: ತಿ, ದಿ (ಏ,ವ.) ಮರ-ತಿ,=ಮರದ
 • ಸಪ್ತಮಿ: ಕ, ತು, ತೊ (ಏ.ವ) ಮರ-ಕ=ಮರದಲ್ಲಿ

ಬಹುವಚನದಲ್ಲಿ ಎಲ್ಲ ಕಡೆಗಳಲ್ಲಿಯೂ-ಙï ಸೇರಿಸುತ್ತಾರೆ ಮರ-ಕ-ಙï=ಮರಗಳಲ್ಲಿ. .

ಕ್ರಿಯಸ್ವರೂಪಗಳು[ಬದಲಾಯಿಸಿ]

ಈ ಭಾಷೆಯಲ್ಲಿ ಭೂತ, ವರ್ತಮಾನ ಮತ್ತು ತದ್ಧರ್ಮ (ಹ್ಯಾಬಿಚ್ಯುಯಲ್) ಕ್ರಿಯಾಸ್ವರೂಪಗಳು ಏರ್ಪಡುತ್ತವೆ. ಭೂತಕಾಲದಲ್ಲಿ ವ್ಯತಿರೇಕ ರೂಪಗಳು (ಪಾಸ್ಟ್ ನೆಗೆಟಿವ್ ಫಾರಂಸ್) ಪ್ರತ್ಯಯ ಸೇರಿಸುವುದರಿಂದ ಏರ್ಪಡುತ್ತವೆ. ತಿನ್-ಅನ್=ಅವನು ತಿನ್ನುವನು ತಿ¾್ಹನ್=ಅವನು ತಿಂದನು ತಿನ್-ಜಿóನ್-ಅನ್=ಅವನು ತಿನ್ನುತ್ತಾನೆ ತಿನ್-?-ಎನ್=ಅವನು ತಿನ್ನುವುದಿಲ್ಲ ತಿನ್-?-ಎತ್-ಅನ್=ಅವನು ತಿನ್ನಲಿಲ್ಲ ತಿನ್ಜ್=ತಿಂದು ತಿ¾õÉ್ಹಙï=ತಿಂದರೆ, ತಿನೆ¾ಙï=ತಿನ್ನುವುದು-ಇತ್ಯಾದಿ (ಬಿಎಚ್.ಕೆ.)

ಉಲ್ಲೇಖಗಳು[ಬದಲಾಯಿಸಿ]

 1. Krishnamurti, Bhadriraju (2003). The Dravidian languages (null ed.). Cambridge: Cambridge University Press. p. 70. ISBN 978-0-511-06037-3.
"https://kn.wikipedia.org/w/index.php?title=ಕೊಂಡ&oldid=924536" ಇಂದ ಪಡೆಯಲ್ಪಟ್ಟಿದೆ