ವಿದ್ಯುನ್ಮಾನ ನಗರ
ಎಲೆಟ್ರಾನಿಕ್ ಸಿಟಿ
Electronic City | |
---|---|
Suburb | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ಬೆಂಗಳೂರು ನಗರ ಜಿಲ್ಲೆ |
ಸ್ಥಾಪಿಸಿದವರು | Rama Krishna Baliga |
Area | |
• Total | ೧೩೪ ha (೩೩೨ acres) |
Languages | |
• Official | ಕನ್ನಡ |
ಸಮಯ ವಲಯ | ಯುಟಿಸಿ+5:30 |
ISO 3166 code | IN-KA |
ವಾಹನ ನೋಂದಣಿ | KA-51 |
ಜಾಲತಾಣ | www |
ಸ್ಥಾಪನೆ | 1978 |
---|---|
ಸ್ಥಳ | Hosur Road, ಬೆಂಗಳೂರು |
ಪ್ರದೇಶ | 332 acres (134 ha) |
ಕೈಗಾರಿಕೆಗಳು | ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ,Avionics |
ಪ್ರಮುಖ ಕಂಪನಿಗಳು | BHEL, ವಿಪ್ರೊ, ಟೆಕ್ ಮಹೀಂದ್ರಾ, ಹೆವ್ಲೆಟ್-ಪ್ಯಾಕರ್ಡ್, ಇನ್ಫೋಸಿಸ್, Patni Computer Systems, C-DOT, CGI, ಸೀಮೆನ್ಸ್ ಎಜಿ,Amphenol,IIITB |
ಉದ್ಯೋಗಿಗಳು | 100,000 [೧] |
ಬಂಡವಾಳ | US$ 2,000,000 |
ಎಲೆಕ್ಟ್ರಾನಿಕ್ ಸಿಟಿ ಭಾರತ ದೇಶದ ಕರ್ನಾಟಕ ರಾಜ್ಯದಲ್ಲಿರುವ ಮಾಹಿತಿ ತಂತ್ರಜ್ಞಾನ ಹಾಗು ವಿದ್ಯುನ್ಮಾನ ಸಂಸ್ಥೆಗಳ ಬೃಹತ್ ತಾಣವಾಗಿದೆ. ಇದು ಭಾರತದ ಅತಿದೊಡ್ಡ ವಿದ್ಯುನ್ಮಾನ ಕೈಗಾರಿಕಾ ಪಾರ್ಕುಗಳಲ್ಲಿ ಒಂದಾಗಿದೆ. ಇದನ್ನು ೩ ಹಂತಗಳಾಗಿ ನಿರ್ಮಾಣ ಮಾಡಲಾಗಿದೆ. ಹಂತ I, ಹಂತ II ಮತ್ತು ಹಂತ III. ಎಲೆಕ್ಟ್ರಾನಿಕ್ ಸಿಟಿಯನ್ನು ಮಾಹಿತಿ ತಂತ್ರಜ್ಞಾನ ಮೂಲಸೌಕರ್ಯ ಅಭಿವೃದ್ಧಿ ಪ್ರವರ್ತಕ ಕಿಯೋನಿಕ್ಸ್[೨] ಕರ್ನಾಟಕ ಸಂಸ್ಥೆಯಿಂದ ಸ್ಥಾಪಿಸಲ್ಪಟ್ಟಿತು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ೨೦೦ಕ್ಕೂ ಹೆಚ್ಚು ಪ್ರಮುಖ ಐಟಿ ಐಟಿಇಎಸ್, ಏವಿಯಾನಿಕ್ಸ್ ಕಂಪನಿಗಳಿವೆ. ಬೆಂಗಳೂರು ನಗರದಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳು ಇಲ್ಲಿ ತಮ್ಮ ಕಛೇರಿಗಳನ್ನು ಹೊಂದಿವೆ.
ಇತಿಹಾಸ
[ಬದಲಾಯಿಸಿ]೧೯೭೮ರಲ್ಲಿ ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಕೋನಪ್ಪನ ಅಗ್ರಹಾರ, ದೊಡ್ಡ ತೋಗುರು ಹಳ್ಳಿಗಳ ೩೩೨ ಎಕರೆ (೧.೩ ಚ.ಕಿ.ಮೀ) ವಿಸ್ತೀರ್ಣ ಪ್ರದೇಶದಲ್ಲಿ ಕರ್ನಾಟಕ ರಾಜ್ಯದ ಸರಕಾರಿ ಸಂಸ್ಥೆಯಾದ ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ದಿ ನಿಗಮ (ಕಿಯೋನಿಕ್ಸ್)ನಿಂದ ಸ್ಥಾಪಿಸಲಾಯಿತು. ೧೯೯೭ರಲ್ಲಿ ಕಿಯೋನಿಕ್ಸ್ ಎಲೆಕ್ಟ್ರಾನಿಕ್ ಸಿಟಿ ನಿರ್ವಹಣೆಯನ್ನು ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ (ELCIA)ಗೆ[೩] ವಹಿಸಿತು. ಇದು ಸ್ಥಳೀಯ ಇಂಡಸ್ಟ್ರಿಗಳ ಪ್ರತಿನಿಧಿಗಳನ್ನು ಹೊಂದಿದೆ. ಭದ್ರತಾ ವವ್ಯಸ್ಥೆಯನ್ನು ELCIA ಒದಗಿಸುತ್ತದೆ ಮತ್ತು ಸೂಕ್ಷ್ಮ ಸ್ಥಳಗಳನ್ನು ಗುರುತಿಸಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸಾರಿಗೆ
[ಬದಲಾಯಿಸಿ]ಎಲೆಕ್ಟ್ರಾನಿಕ್ ಸಿಟಿ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಹೆದ್ದಾರಿ ಉನ್ನತೀಕರಿಸಲಾಗಿದೆ. ನಾಲ್ಕು ಲೇನ್‍ಗಳ ಮಿಶ್ರ ಕಾರಿಡಾರ್ ಅನ್ನು ೨೨ ಜನವರಿ ೨೦೧೦ ರಂದು ತೆರೆಯಲಾಯಿತು. ೯೯೮೫ ಕಿಮೀ ಉದ್ದದ ಎಕ್ಸ್‍ಪ್ರೆಸ್ ವೇ ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಂದಾಗಿದೆ. ಈ ಎತ್ತರದ ಏರಿಕೆಯು, ಎಲೆಕ್ಟ್ರಾನಿಕ್ ಸಿಟಿಯಿಂದ ಸಿಲ್ಕ್ ಬೋರ್ಡ್ ವರೆಗು ಕಡಿಮೆಯೆಂದರೆ ೧೫ ನಿಮಿಷಗಳಲ್ಲಿ ಪ್ರಯಾಣಿಸಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ http://www.crisil.com/star-ratings/brochures/e-city-tower2-brouchure.pdf Archived 2015-10-10 ವೇಬ್ಯಾಕ್ ಮೆಷಿನ್ ನಲ್ಲಿ. INVESTMENT OPPORTUNITY IN ELECTRONIC CITY, BANGALORE
- ↑ "History Karnataka State Electronics Development Corporation Limited (KEONICS)". www.keonics.in accessdate 23 Oct 2016. Archived from the original on 21 ಆಗಸ್ಟ್ 2016. Retrieved 22 ಅಕ್ಟೋಬರ್ 2016.
- ↑ "About Electronics City Industries' Association (ELCIA)". www.elcia.in accessdate 23 Oct 2016. Archived from the original on 14 ಜನವರಿ 2017. Retrieved 22 ಅಕ್ಟೋಬರ್ 2016.
- Pages with non-numeric formatnum arguments
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using duplicate arguments in template calls
- Short description is different from Wikidata
- Pages using infobox settlement with unknown parameters
- Pages using infobox settlement with no coordinates
- ಬೆಂಗಳೂರು ನಗರ ಜಿಲ್ಲೆ
- ಕರ್ನಾಟಕ
- ಐ ಟಿ ಪಾರ್ಕ ಪ್ರದೇಶ