ವಿಷಯಕ್ಕೆ ಹೋಗು

ಎನ್‌ಐಐಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
NIIT
ಸಂಸ್ಥೆಯ ಪ್ರಕಾರPublic
(ಬಿಎಸ್‌ಇ: 500304)
(ಬಿಎಸ್‌ಇ: 532541)
ಸ್ಥಾಪನೆ1981
ಸಂಸ್ಥಾಪಕ(ರು)Rajendra S. Pawar
Vijay K. Thadani
ಮುಖ್ಯ ಕಾರ್ಯಾಲಯ85, Sector 32, Institutional Area, Gurgaon, India
NIIT Technologies in ನವ ದೆಹಲಿ, India
ಪ್ರಮುಖ ವ್ಯಕ್ತಿ(ಗಳು)Rajendra S. Pawar
(Chairman)
Vijay K. Thadani
(CEO NIIT Limited)
P. Rajendran
(Director & COO NIIT Limited)
Ashok Kumar Arora
(CFO NIIT Limited & NIIT Technologies)
Arvind Thakur
(President & CEO NIIT Technologies)
ಉದ್ಯಮTraining & Education in Information Technology
IT services
ಉತ್ಪನ್ನBanking & Financial Services,
Channel and Customer Interface Solutions in Insurance,
e-Business, e-Procurement, SAP Retail for Retail & Distribution,
Travel & Transportation[]
ಸೇವೆಗಳುBPO,
Application Development Management,
Managed Service,
Package Implementation,
Platform Based Services[]
ಆದಾಯ INR 9,799 million (FY 2009)[]
ಉದ್ಯೋಗಿಗಳು4,900 (As on 31 December 2008)
ಉಪಸಂಸ್ಥೆಗಳುNIIT SofTec
NIIT ROOM Solutions
Element K
Evolv
ಜಾಲತಾಣNIIT.com
Niit-Tech.com
Evolv

NIIT ಎಂಬುದು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಜಾಗತಿಕ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಒಂದು ಕಂಪನಿಯಾಗಿದ್ದು, ಭಾರತದ ಗುರ್‌ಗಾಂವ್‌‌ನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ. ಇದು ಮಾಹಿತಿ ತಂತ್ರಜ್ಞಾನ ತರಬೇತಿ ಮತ್ತು ಶಿಕ್ಷಣದ ವಲಯದಲ್ಲಿನ ಪ್ರಪಂಚದ ಅತಿದೊಡ್ಡ ಕಂಪನಿಯಾಗಿದ್ದು, 40 ದೇಶಗಳಾದ್ಯಂತ 5 ದಶಲಕ್ಷ ವಿದ್ಯಾರ್ಥಿಗಳನ್ನು ಹೊಂದಿದೆ.[] ಈ ಕಂಪನಿಯು ಭಾರತದ ರಾಷ್ಟ್ರೀಯ ಸ್ಟಾಕ್‌ ವಿನಿಮಯ ಕೇಂದ್ರ ಮತ್ತು ಬಾಂಬೆ ಸ್ಟಾಕ್‌ ವಿನಿಮಯ ಕೇಂದ್ರಗಳಲ್ಲಿ ಪಟ್ಟೀಕರಣಕ್ಕೆ ಒಳಗಾಗಿದೆ. 2004ರಲ್ಲಿ, NIITಗೆ ಹೊಸರೂಪ ಕೊಡಲ್ಪಟ್ಟು ಎರಡು ಗುಂಪುಗಳು ಸೃಷ್ಟಿಸಲ್ಪಟ್ಟವು; ಮೊದಲನೆಯ ಗುಂಪಾದ NIIT ಲಿಮಿಟೆಡ್‌ IT ವಲಯದಲ್ಲಿನ ತರಬೇತಿ ಮತ್ತು ಶಿಕ್ಷಣದ ಮೇಲೆ ಗಮನಹರಿಸಿದರೆ, ಎರಡನೆಯ ಗುಂಪಾದ NIIT ಟೆಕ್ನಾಲಜೀಸ್‌ IT ಸೇವೆಗಳ ಕಂಪನಿಯ ಕುರಿತಾಗಿ ಲಕ್ಷ್ಯ ಹರಿಸುತ್ತದೆ.[]

ಇತಿಹಾಸ

[ಬದಲಾಯಿಸಿ]

ಯುವ ಉದ್ಯಮಶೀಲರಾದ ರಾಜೇಂದ್ರ S. ಪವಾರ್‌‌ ಮತ್ತು ವಿಜಯ್‌ K. ಥಡಾನಿ ಎಂಬಿಬ್ಬರಿಂದ 1981ರ ವರ್ಷದಲ್ಲಿ NIIT ಸ್ಥಾಪಿಸಲ್ಪಟ್ಟಿತು. 1981ರ ಆರಂಭದಲ್ಲಿ, ಭಾರತದ ದೆಹಲಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಆವರಣದಲ್ಲಿ, ಒಂದೇ ಮಲಗುವ ಪಡಸಾಲೆಯನ್ನು ವಿದ್ಯಾರ್ಥಿಗಳಾದ ರಾಜೇಂದ್ರ S. ಪವಾರ್‌‌ ಮತ್ತು ವಿಜಯ್‌ K. ಥಡಾನಿ ಹಂಚಿಕೊಂಡಿದ್ದರು. IITಯಿಂದ ಉತ್ತೀರ್ಣರಾದ ಬಳಿಕ, ಪವಾರ್‌‌ ಮತ್ತು ಥಡಾನಿ NIITಯನ್ನು ಅಭಿವೃದ್ಧಿಪಡಿಸಿದರು.[] 1982ರ ಅವಧಿಯಲ್ಲಿ ಇದು ಮುಂಬಯಿ, ದೆಹಲಿಗಳಲ್ಲಿ ಶೈಕ್ಷಣಿಕ ಕೇಂದ್ರಗಳನ್ನು ಸ್ಥಾಪಿಸಿತು; ನಂತರ ಇದು ಭಾರತದ ದಕ್ಷಿಣದ ಭಾಗಕ್ಕೆ, ವಿಶೇಷವಾಗಿ ಬೆಂಗಳೂರಿಗೆ ಹಬ್ಬಿಕೊಂಡಿತು. ನಂತರದ ವರ್ಷಗಳಲ್ಲಿ ಇದು ಸಾಂಸ್ಥಿಕ ತರಬೇತಿ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು. ಇದು IT ತರಬೇತಿಯನ್ನು ನೀಡುವ 20 ಅಗ್ರಗಣ್ಯ ಸಂಸ್ಥೆಗಳ ಪೈಕಿ ಸ್ಥಾನವನ್ನು ಪಡೆದಿದೆ ಮತ್ತು ಭಾರತದ ಅತ್ಯಂತ ವಿಶ್ವಾಸಾರ್ಹ ಸೇವಾ ಬ್ರಾಂಡ್‌ಗಳ ಪೈಕಿಯ ದರ್ಜೆಗಳಲ್ಲಿ ಇದು ವರ್ಗೀಕರಿಸಲ್ಪಟ್ಟಿದೆ.[]

NIIT ಲಿಮಿಟೆಡ್‌

[ಬದಲಾಯಿಸಿ]

NIIT ಲಿಮಿಟೆಡ್‌ನ (ಬಿಎಸ್‌ಇ: 500304) ಶಿಕ್ಷಣ ಕೇಂದ್ರಗಳು 40ಕ್ಕೂ ಹೆಚ್ಚಿನ ದೇಶಗಳಲ್ಲಿ ಕಂಡುಬರುತ್ತವೆ ಮತ್ತು ಅವು ತರಗತಿಯ ಹಾಗೂ ಆನ್‌ಲೈನ್‌ ಸ್ವರೂಪದ ಕಲಿಕಾ ಪರಿಹಾರೋಪಾಯಗಳೆರಡನ್ನೂ ಒದಗಿಸುತ್ತವೆ. NIIT ಲಿಮಿಟೆಡ್‌, ಏಷ್ಯಾದ ಅತಿದೊಡ್ಡ IT ತರಬೇತಿ ಸಂಸ್ಥೆಗಳ ಪೈಕಿ ಒಂದೆನಿಸಿದ್ದು, ಇದು ಚೀನಾದಲ್ಲಿ ಹಾಗೂ ಏಷ್ಯಾ-ಪೆಸಿಫಿಕ್‌ ವಲಯದ ಇತರ ಭಾಗಗಳಲ್ಲಿ 100ಕ್ಕೂ ಹೆಚ್ಚಿನ ಶೈಕ್ಷಣಿಕ ಕೇಂದ್ರಗಳನ್ನು ಸ್ಥಾಪಿಸಿದೆ.[] 2009ರ ವೇಳೆಗೆ ಇದ್ದಂತೆ, NIIT ಮತ್ತು ಇದರ ಅಂಗಸಂಸ್ಥೆಗಳ ವಾರ್ಷಿಕ ಆದಾಯವು 11,486 ದಶಲಕ್ಷ INRನಷ್ಟಿತ್ತು.[]

NIIT ಟೆಕ್ನಾಲಜೀಸ್‌

[ಬದಲಾಯಿಸಿ]

NIIT ಟೆಕ್ನಾಲಜೀಸ್‌ (ಬಿಎಸ್‌ಇ: 532541) ಎಂಬುದು ಜಾಗತಿಕ IT ಪರಿಹಾರೋಪಾಯಗಳ[clarification needed] ಒಂದು ಸಂಘಟನೆಯಾಗಿದ್ದು, ಭಾರತನವದೆಹಲಿಯಲ್ಲಿ ಇದು ತನ್ನ ಕೇಂದ್ರ ಕಚೇರಿಯನ್ನು ಹೊಂದಿದೆ. NIIT ಲಿಮಿಟೆಡ್‌ನಿಂದ ಇದು ಪ್ರತ್ಯೇಕಗೊಂಡ ಸಂದರ್ಭದಲ್ಲಿ 2004ರಲ್ಲಿ ಇದು ಸ್ಥಾಪಿಸಲ್ಪಟ್ಟಿತು. NASSCOM ಅನುಸಾರ, ಭಾರತದ 20 ಅಗ್ರಗಣ್ಯ IT ತಂತ್ರಾಂಶ ಸೇವಾ ರಫ್ತುದಾರರ ಪೈಕಿ NIIT ಟೆಕ್ನಾಲಜೀಸ್‌ ಸ್ಥಾನಪಡೆದಿದೆ. ಇದು ಜಾಗತಿಕ ಅಭಿವರ್ಧನಾ ಮಾನದಂಡಗಳನ್ನು ಅನುಸರಿಸುತ್ತದೆ; ಇದರಲ್ಲಿ ISO 9001:2000 ಪ್ರಮಾಣೀಕರಣ, SEI-CMMi ಆವೃತ್ತಿ 1.2 ಮತ್ತು ಪೀಪಲ್‌-CMM ಚೌಕಟ್ಟುಗಳು ಈ ಎರಡರ ಮಟ್ಟ 5ರಲ್ಲಿನ ಮೌಲ್ಯಮಾಪನ ಹಾಗೂ ISO 27001 ಮಾಹಿತಿ ಭದ್ರತಾ ನಿರ್ವಹಣಾ ಪ್ರಮಾಣೀಕರಣಗಳು ಸೇರಿವೆ. ಇದರ ದತ್ತಾಂಶ ಕೇಂದ್ರದ ಕಾರ್ಯಾಚರಣೆಗಳ ಮೌಲ್ಯ ನಿರ್ಣಯವನ್ನು ಅಂತರರಾಷ್ಟ್ರೀಯ ISO 20000 IT ನಿರ್ವಹಣಾ ಮಾನದಂಡಗಳಲ್ಲಿ ಕೈಗೊಳ್ಳಲಾಗಿದೆ.[೧೦] ಹಲವಾರು ಜಾಗತಿಕ IT ಕಂಪನಿಗಳೊಂದಿಗೆ NIIT ಟೆಕ್ನಾಲಜೀಸ್‌ ಬಾಂಧವ್ಯವನ್ನು ಹೊಂದಿದ್ದು, ಅವುಗಳಲ್ಲಿ ಕಂಪ್ಯೂಟರ್‌ ಅಸೋಸಿಯೇಟ್ಸ್‌, IBM, ಮೈಕ್ರೋಸಾಫ್ಟ್‌, ಮೆಟಲಾಜಿಕ್‌, SAP AG, ಸಿಸ್ಕೋ ಸಿಸ್ಟಮ್ಸ್‌, ಒರಾಕಲ್‌ ಕಾರ್ಪೊರೇಷನ್‌ ಮತ್ತು ಸೀಕ್‌ ಸೇರಿವೆ. NIIT ಟೆಕ್ನಾಲಜೀಸ್‌ ಸದ್ಯಕ್ಕೆ ನಾಲ್ಕು ವಲಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಅವುಗಳೆಂದರೆ: ಪೂರ್ವಾರ್ಜಿತ ಸ್ವತ್ತು ಆಧುನಿಕೀಕರಣ ಮತ್ತು ನಿರ್ವಹಣೆ, ಜ್ಞಾನ ನಿರ್ವಹಣಾ ಪರಿಹಾರೋಪಾಯ, ಗ್ರಾಹಕರ ಅಗತ್ಯಾನುಸಾರದ SW ಪರಿಹಾರೋಪಾಯ ಮತ್ತು ಉದ್ಯಮ ಸಂಘಟನೆ. ಈ ಮುಂದೆ ನಮೂದಿಸಲಾಗಿರುವಂಥ ಆಯ್ದ ಉದ್ಯಮಗಳಿಗೆ ಈ ಕಂಪನಿಯು ಸೌಲಭ್ಯ ಒದಗಿಸುತ್ತಾ ಬಂದಿದೆ:

  • ಬ್ಯಾಂಕಿಂಗ್‌
  • ಹಣಕಾಸಿನ ಸೇವೆಗಳು ಮತ್ತು ವಿಮೆ (BFSI)
  • ಸಾರಿಗೆ ಮತ್ತು ವ್ಯವಸ್ಥಾಪನಾ ತಂತ್ರಗಳು (TTL)
  • ಪ್ರಯಾಣ ಮತ್ತು ಸಾರಿಗೆ
  • ಚಿಲ್ಲರೆ ವ್ಯಾಪಾರ ಮತ್ತು ವ್ಯವಸ್ಥಾಪನೆ
ಸ್ವಾಧೀನ ಕಾರ್ಯಗಳು
  • ಸಣ್ಣ ಮತ್ತು ಮಧ್ಯಮ ಮಟ್ಟದ ವಾಯುಯಾನ ಸಂಸ್ಥೆಯ ಕಾರ್ಯಾಚರಣೆಗಳಿಗೆ ಸೇವೆ ಸಲ್ಲಿಸುವ ಸಾಫ್ಟೆಕ್‌ ಎಂಬ ಜರ್ಮನ್‌ ಮೂಲದ ಕಂಪನಿಯನ್ನು ಇದು ಸ್ವಾಧೀನ ಪಡಿಸಿಕೊಂಡಿದೆ.
  • 2006-2007ರ ಅಂತ್ಯದಲ್ಲಿ, ROOM ಸಲ್ಯೂಷನ್‌ ಎಂಬ UK-ಮೂಲದ ಕಂಪನಿಯನ್ನೂ ಸಹ NIIT ಟೆಕ್ನಾಲಜೀಸ್‌ ಸ್ವಾಧೀನ ಪಡಿಸಿಕೊಂಡಿತು.[೧೧]
  • 2006ರಲ್ಲಿ, ಎಲಿಮೆಂಟ್‌ K ಎಂಬ ಹೆಸರಿನ US-ಮೂಲದ ಕಲಿಕಾ ಪರಿಹಾರೋಪಾಯ ಸೇವಾದಾರ ಕಂಪನಿಯನ್ನು ಇದು ಸ್ವಾಧೀನ ಪಡಿಸಿಕೊಂಡಿತು.[೧೨]

ಇದು NIIT ಸ್ಮಾಟ್‌ಸರ್ವೀಸ್‌ ಲಿಮಿಟೆಡ್‌ ಮತ್ತು NIIT GIS ಲಿಮಿಟೆಡ್‌ ಎಂಬ ಎರಡು ಅಂಗಸಂಸ್ಥೆಗಳನ್ನು ಹೊಂದಿದ್ದು, ಅವು ಕ್ರಮವಾಗಿ ವ್ಯವಹಾರ ಪ್ರಕ್ರಿಯೆಯ ಹೊರಗುತ್ತಿಗೆ ಮತ್ತು GIS ಪರಿಹಾರೋಪಾಯಗಳನ್ನು ಒದಗಿಸುತ್ತವೆ. 2009ರ ವೇಳೆಗೆ ಇದ್ದಂತೆ, NIIT ಟೆಕ್ನಾಲಜೀಸ್‌ನ ವಾರ್ಷಿಕ ಆದಾಯವು 9,799 ದಶಲಕ್ಷ INRನಷ್ಟಿತ್ತು.[]

ಕಾಲಾನುಕ್ರಮಣಿಕೆ

[ಬದಲಾಯಿಸಿ]
  • 1981: ಭಾರತದಲ್ಲಿ IT ಶಿಕ್ಷಣ ಮತ್ತು ತರಬೇತಿಯನ್ನು ಒದಗಿಸುವ ಉದ್ದೇಶದೊಂದಿಗೆ ರಾಜೇಂದ್ರ S. ಪವಾರ್‌‌ ಮತ್ತು ವಿಜಯ್‌ K. ಥಡಾನಿ ಎಂಬಿಬ್ಬರಿಂದ NIIT ಸ್ಥಾಪಿಸಲ್ಪಟ್ಟಿತು[೧೩]
  • 1982: ಮುಂಬಯಿ ಮತ್ತು ಚೆನ್ನೈಗಳಲ್ಲಿ ಶೈಕ್ಷಣಿಕ ಕೇಂದ್ರಗಳು ಸ್ಥಾಪಿಸಲ್ಪಟ್ಟವು[೧೪]
  • 1982: ಶಿಕ್ಷಣದಲ್ಲಿ ಮಲ್ಟಿಮೀಡಿಯಾ ತಂತ್ರಜ್ಞಾನವನ್ನು ಪರಿಚಯಿಸಿತು
  • 1983: ಸಾಂಸ್ಥಿಕ ತರಬೇತಿ ಕಾರ್ಯಕ್ರಮವನ್ನು ಪರಿಚಯಿಸಿತು
  • 1983: ಬೆಂಗಳೂರಿನಲ್ಲಿ ಇದು ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿತು
  • 1984: IT ಸಮಾಲೋಚನಾ ಸೇವೆಯನ್ನು ನಿರೂಪಿಸಿತು
  • 1985: ನವದೆಹಲಿಯಲ್ಲಿ ಪ್ರಧಾನ ಕಚೇರಿಯು ಸಂಘಟಿಸಲ್ಪಟ್ಟಿತು
  • 1986: "ಇನ್‌ಸಾಫ್ಟ್‌" ಬ್ರಾಂಡ್‌ ಅಡಿಯಲ್ಲಿ ತಂತ್ರಾಂಶ ಉತ್ಪನ್ನದ ವಿತರಣೆಯು ಆರಂಭವಾಯಿತು
  • 1987: ಕೋಲ್ಕತಾ ಮತ್ತು ಹೈದರಾಬಾದ್‌‌ಗಳಲ್ಲಿ ಶಿಕ್ಷಣ ಕೇಂದ್ರಗಳು ಸ್ಥಾಪಿಸಲ್ಪಟ್ಟವು
  • 1987: ಶಿಕ್ಷಣದ ನಿರ್ವಹಣಾ ಅಧಿಕಾರ ನೀಡುವ ಮಾದರಿಯನ್ನು ನಿರೂಪಿಸಿತು
  • 1989: MITಯ ಓರ್ವ ಹಳೆಯ ವಿದ್ಯಾರ್ಥಿಯಾದ ಡಾ. C.R. ಮಿತ್ರಾರವರು ಶಿಕ್ಷಣ ಸಲಹೆಗಾರರಾಗಿ NIITಯನ್ನು ಸೇರಿಕೊಂಡರು ಹಾಗೂ "GNIIT" ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಸೃಷ್ಟಿಸಿದರು[೧೫]
  • 1989: ಪುಣೆಯಲ್ಲಿ ಶಿಕ್ಷಣ ಕೇಂದ್ರವು ಪ್ರಾರಂಭವಾಯಿತು
  • 1991: USನಲ್ಲಿ ಮೊದಲ ಸಾಗರೋತ್ತರ ಕಚೇರಿಯನ್ನು ಸ್ಥಾಪಿಸಿತು
  • 1991: ಮಾನ್ಯತೆಗೆ ಅರ್ಹರಾದ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗಾಗಿ "ಭವಿಷ್ಯ ಜ್ಯೋತಿ ವಿದ್ಯಾರ್ಥಿ ವೇತನಗಳು" ಪ್ರಾರಂಭಿಸಲ್ಪಟ್ಟವು
  • 1992: ವೃತ್ತಿಪರ ಪರಿಪಾಠದೊಂದಿಗೆ GNIIT ಕಾರ್ಯಕ್ರಮವು ಆರಂಭವಾಯಿತು[೧೬]
  • 1993: ತಂತ್ರಾಂಶ ರಫ್ತಿಗೆ ಸಂಬಂಧಿಸಿದಂತೆ ISO 9001 ಪ್ರಮಾಣೀಕರಣವನ್ನು ಸ್ವೀಕರಿಸಿತು[೧೭]
  • 1993: ಅಂತರರಾಷ್ಟ್ರೀಯ ಆದಾಯದ ಪ್ರಮಾಣವು 50 ದಶಲಕ್ಷ ರೂಪಾಯಿಗಳನ್ನು ಮುಟ್ಟಿತು
  • 1993: ಪಟ್ಟೀಕರಣಕ್ಕೆ ಒಳಗಾದ ಕಂಪನಿ ಎಂಬ ಮಾನ್ಯತೆ ಇದಕ್ಕೆ ದೊರಕಿತು ಹಾಗೂ ಒಂದು ಯಶಸ್ವೀ IPOನ್ನು ಪ್ರಾರಂಭಿಸಿತು
  • 1995: ಮೈಕ್ರೋಸಾಫ್ಟ್‌ ತಂತ್ರಜ್ಞಾನಗಳ ಶಿಕ್ಷಣವನ್ನು ಒದಗಿಸುವ ಸಲುವಾಗಿ NIITಯೊಂದಿಗೆ ಮೈಕ್ರೋಸಾಫ್ಟ್‌ ಪಾಲುದಾರನಾಯಿತು
  • 1995: ಆದಾಯವು 1 ಶತಕೋಟಿ ರೂಪಾಯಿಗಳ ಗುರಿಯನ್ನು ದಾಟಿತು
  • 1996: ಮೊದಲ ಸಾಗರೋತ್ತರ ಶಿಕ್ಷಣ ಕೇಂದ್ರವು ಪ್ರಾರಂಭಿಸಲ್ಪಟ್ಟಿತು
  • 1996: "ನೆಟ್‌ವಾರ್ಸಿಟಿ" ಎಂಬ ಹೆಸರಿನ ವಾಸ್ತವಾಭಾಸದ ವಿಶ್ವವಿದ್ಯಾಲಯವು ಪ್ರಾರಂಭಿಸಲ್ಪಟ್ಟಿತು
  • 1996: ಕಂಪ್ಯೂಟರ್‌ ಶಿಕ್ಷಣಕ್ಕೆ ಸಂಬಂಧಿಸಿದಂತೆ ಇದಕ್ಕೆ ISO 9001 ಪ್ರಮಾಣೀಕರಣವನ್ನು ಪ್ರದಾನ ಮಾಡಲಾಯಿತು
  • 1997: ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಬೆಳವಣಿಗೆ ಕಂಪನಿಯ ಸ್ಥಾನಮಾನ ಇದಕ್ಕೆ ದಕ್ಕಿತು
  • 1997: ಚೀನಾದಲ್ಲಿ IT ಶಿಕ್ಷಣವನ್ನು ಒದಗಿಸುವ ಸಲುವಾಗಿ ಚೀನಾದ ಸರ್ಕಾರದೊಂದಿಗೆ NIIT ಕೈಜೋಡಿಸಿತು[೧೮]
  • 1997: ಮಲೇಷಿಯಾ ಮಲ್ಟಿಮೀಡಿಯಾ ಸೂಪರ್‌ ಕಾರಿಡಾರ್‌ನಲ್ಲಿ ವಿಶೇಷ ಸ್ಥಾನಮಾನವನ್ನು ನೀಡಲ್ಪಟ್ಟ ಭಾರತೀಯ ಕಂಪನಿಗಳ ಪೈಕಿ ಇದು HCL ಟೆಕ್ನಾಲಜೀಸ್‌ ನಂತರದ ಎರಡನೇ ಭಾರತೀಯ ಕಂಪನಿಯಾಗಿದೆ[೧೯]
  • 1997: ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗಾಗಿ NIITಯು ವಿದ್ಯಾರ್ಥಿ ವೇತನವನ್ನು ನಿರೂಪಿಸಿತು[೨೦]
  • 1997: ತನ್ನ ಅನನ್ಯ ಹಿರಿಮೆಯಿಂದಾಗಿ 21ನೇ ಜಾಗತಿಕ ಕಂಪನಿಗಳ ಮೊದಲ ಪಟ್ಟಿಯಲ್ಲಿ NIIT ಸ್ಥಾನಗಿಟ್ಟಿಸಿತು[೨೧]
  • 1997: ಶಿಕ್ಷಣ ಕೇಂದ್ರಗಳ ಸಂಖ್ಯೆಯು 500ರ ಗುರಿಯನ್ನು ದಾಟಿತು
  • 1997: ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಬೆಳವಣಿಗೆ ಕಂಪನಿಯ ಸ್ಥಾನಮಾನ NIITಗೆ ದಕ್ಕಿತು
  • 1998: ಕಂಪನಿಯ ಮಾರುಕಟ್ಟೆ ಬಂಡವಾಳೀಕರಣವು 1 ಶತಕೋಟಿ US$ ಗುರಿಯನ್ನು ದಾಟಿತು
  • 1999: ಏಷ್ಯಾದಲ್ಲಿನ ಮೈಕ್ರೋಸಾಫ್ಟ್‌ನ ಅತ್ಯುತ್ತಮ ತರಬೇತಿ ಪಾಲುದಾರ ಎಂಬ ಸ್ಥಾನಮಾನವನ್ನು ಸಾಧಿಸಿತು
  • 1999: NIIT ಮತ್ತು ಅದರ ಅಂಗಸಂಸ್ಥೆಗಳ ಜಾಗತಿಕ ಆದಾಯವು 8.8 ಶತಕೋಟಿ ರೂಪಾಯಿಗಳನ್ನು ತಲುಪಿತು[೨೨]
  • 2000: ಶಿಕ್ಷಣ ಕೇಂದ್ರಗಳ ಸಂಖ್ಯೆಯು 2000ರ ಗುರಿಯನ್ನು ದಾಟಿತು
  • 2000: ಒರಾಕಲ್‌ ತಂತ್ರಜ್ಞಾನಗಳ ಕುರಿತಾಗಿ, ಅದರಲ್ಲೂ ವಿಶೇಷವಾಗಿ ಒರಾಕಲ್‌ ದತ್ತಾಂಶ ಸಂಗ್ರಹದ ಕುರಿತಾಗಿ ಶಿಕ್ಷಣವನ್ನು ಒದಗಿಸುವ ದೃಷ್ಟಿಯಿಂದ ಒರಾಕಲ್‌ ಕಾರ್ಪೊರೇಷನ್‌ NIIT ಲಿಮಿಟೆಡ್‌ ಜೊತೆಗಿನ ಏಕಮಾತ್ರ ಪಾಲುದಾರ ಎನಿಸಿಕೊಂಡಿತು[೨೩]
  • 2000: ಒನ್‌ವೆಬ್‌ ಸಿಸ್ಟಮ್‌ ಎಂಬ ಹೆಸರಿನ US ಮೂಲದ ಒಂದು ಕಂಪನಿಯ ಮೇಲೆ NIIT ಹೂಡಿಕೆ ಮಾಡಿತು
  • 2000: "ಐಫೋರ್ಸ್‌ ಇನಿಷಿಯೆಟಿವ್ಸ್‌ ಆನ್‌ ಕಂಪ್ಯೂಟಿಂಗ್‌ ಜೈಂಟ್‌" ಎಂಬ ಉಪಕ್ರಮದ ಕುರಿತಾಗಿ ಸನ್‌ ಮೈಕ್ರೋಸಿಸ್ಟಮ್ಸ್‌ ಜೊತೆಗೆ NIIT ಲಿಮಿಟೆಡ್‌ ಕೈಜೋಡಿಸಿತು[೨೪]
  • 2000: 10.6 ದಶಲಕ್ಷ US$ ಮೌಲ್ಯದ ಜ್ಞಾನಸಂಬಂಧಿ ಉತ್ಪನ್ನಗಳನ್ನು ಮ್ಯಾಕ್‌ಮಿಲನ್‌ ಸಂಸ್ಥೆಗಾಗಿ NIIT ರೂಪಿಸಿತು[೨೫]
  • 2001: ಮಧ್ಯಮವರ್ಗ ಮತ್ತು ಕೆಳ ಮಧ್ಯಮವರ್ಗದ ಕುಟುಂಬಗಳಿಗಾಗಿ ವಿದ್ಯಾರ್ಥಿ ಸಾಲಗಳನ್ನು ಒದಗಿಸುವ ದೃಷ್ಟಿಯಿಂದ, ಸಿಟಿಬ್ಯಾಂಕ್‌ ಮತ್ತು ಇಂಟರ್‌‌ನ್ಯಾಷನಲ್‌ ಫೈನಾನ್ಸ್‌ ಕಾರ್ಪೊರೇಷನ್‌ ಜೊತೆಗೆ NIIT ಕೈಜೋಡಿಸಿತು[೨೬]
  • 2001: NIITಗೆ "ಅತ್ಯುತ್ತಮ ತರಬೇತಿ ಕಂಪನಿ ಪ್ರಶಸ್ತಿ"ಯನ್ನು ಮೈಕ್ರೋಸಾಫ್ಟ್‌ ಪ್ರದಾನಮಾಡಿತು[೨೭]
  • 2001: NIIT ಮತ್ತು ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್‌ ಕಂಪನಿಗಳು ಬಾಂಬೆ ಸ್ಟಾಕ್‌ ವಿನಿಮಯ ಕೇಂದ್ರದಿಂದ ಆಚೆಬಂದವು; ಇವುಗಳ ಬದಲಿಗೆ ಹೀರೋ ಹೋಂಡಾ ಮತ್ತು HCL ಟೆಕ್ನಾಲಜೀಸ್‌ ಕಂಪನಿಗಳು ಒಲಬಂದವು[೨೮]
  • 2002: ಭಾರತೀಯ ವಿದ್ಯಾರ್ಥಿಗಳಿಗೆ ನಾಲ್ಕು ವರ್ಷಗಳ ಅವಧಿಯ ಸ್ನಾತಕ ಪದವಿಯನ್ನು ನೀಡುವ ಸಲುವಾಗಿ, US ಮೂಲದ ITT ಎಜುಕೇಷನಲ್‌ ಸರ್ವೀಸ್‌ ಕಂಪನಿಯೊಂದಿಗೆ NIIT ಲಿಮಿಟೆಡ್‌ ಕೈಜೋಡಿಸಿತು[೨೯]
  • 2002: ಉನ್ನತ-ಮಟ್ಟದ ತರಬೇತಿಯನ್ನು ಒದಗಿಸುವ 15 ಹೊಸ ಮಾಹಿತಿ ತಂತ್ರಜ್ಞಾನ ತರಬೇತಿ ಕೇಂದ್ರಗಳನ್ನು ಇದು ಚೀನಾದಲ್ಲಿ ಪ್ರಾರಂಭಿಸಿತು[೩೦]
  • 2004: ತನ್ನ ಗಿರಾಕಿಗಳಿಗೆಂದು ಭೌಗೋಳಿಕ ಮಾಹಿತಿ ವ್ಯವಸ್ಥೆಗಳ (ಜಿಯಾಗ್ರಫಿಕ್‌ ಇನ್ಫರ್ಮೇಷನ್‌ ಸಿಸ್ಟಮ್ಸ್‌-GIS) ನೀಡಿಕೆಯನ್ನು NIIT ಟೆಕ್ನಾಲಜೀಸ್‌ ಆರಂಭಿಸಿತು[೩೧]
  • 2004: ಶಾಲೆಯಲ್ಲಿ ತಂತ್ರಜ್ಞಾನ-ನೆರವಿನ ಕಲಿಕೆಯನ್ನು ಬಳಕೆ ಮಾಡುವ ವ್ಯವಹಾರವೊಂದಕ್ಕೆ NIIT ಮತ್ತು ವಿಶ್ವದ ಅತಿದೊಡ್ಡ ಚಿಪ್‌ ತಯಾರಕ ಕಂಪನಿಯಾದ ಇಂಟೆಲ್‌ ಸಹಿಹಾಕಿದವು[೩೨]
  • 2005: ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಕಂಪನಿಗಳಿಗಾಗಿ ತಂತ್ರಾಂಶ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಲುವಾಗಿ ಜರ್ಮನ್‌ ಮೂಲದ ತಂತ್ರಾಂಶ ಕಂಪನಿಯಾದ SAP AG ಮತ್ತು NIIT ಟೆಕ್ನಾಲಜೀಸ್‌ ಕೈಜೋಡಿಸಿದವು[೩೩]
  • 2005: ಇಂಟೆಲ್‌ ರಚನಾ ವಿನ್ಯಾಸದ ಮೇಲೆ ತಂತ್ರಾಂಶದ ವೃತ್ತಿಪರರಿಗೆ ತರಬೇತಿ ನೀಡುವ ಸಲುವಾಗಿ ಇಂಟೆಲ್‌ ಮತ್ತು NIIT ಲಿಮಿಟೆಡ್‌ ಒಟ್ಟಾಗಿ ಸೇರಿಕೊಂಡವು[೩೪]
  • 2006: ಜಾವಾ ಮತ್ತು ಸೊಲಾರಿಸ್‌‌ನಂಥ ಕಾರ್ಯಸೂಚಿ ರಚನೆಯ ವೇದಿಕೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷಜ್ಞತೆಯ ತರಬೇತಿಯನ್ನು ಒದಗಿಸುವ ಸಲುವಾಗಿ NIITಯೊಂದಿಗೆ ಸನ್‌ ಮೈಕ್ರೋಸಿಸ್ಟಮ್ಸ್‌ ಕೈಜೋಡಿಸಿತು[೩೫]
  • 2006: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ವತಿಯಿಂದ ಮೂರು ಪ್ರಮಾಣಪತ್ರದ ಕಾರ್ಯಕ್ರಮಗಳನ್ನು ಒದಗಿಸುವ NIIT ಇಂಪೀರಿಯಾ ಎಂದು ಕರೆಯಲ್ಪಟ್ಟ ಹೊಸ ಸಂಸ್ಥೆಯು ಪ್ರಾರಂಭಿಸಲ್ಪಟ್ಟಿತು[೩೬]
  • 2006: ಸಿಂಗಪೂರ್‌ ಸರ್ಕಾರಕ್ಕೆ ಹೊರಗುತ್ತಿಗೆ ಸೇವೆಯ ಅಭಿವರ್ಧನೆಯನ್ನು ಒದಗಿಸುವ ಸಲುವಾಗಿ, ಸಿಂಗಪೂರ್‌ನ ಡಿಫೆನ್ಸ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ಏಜೆನ್ಸಿಯೊಂದಿಗೆ (DSTA) ಪಾಲುದಾರಿಕೆ ಮಾಡಿಕೊಳ್ಳುವ ಮೂಲಕ, ಇದು ಬಹು-ದಶಲಕ್ಷ ಡಾಲರ್‌‌ ಮೌಲ್ಯದ ಯೋಜನೆಯನ್ನು ದಕ್ಕಿಸಿಕೊಂಡಿತು [೩೭]
  • 2008: ತನ್ನ ಶಾಲಾ ಕಲಿಕಾ ಪರಿಹಾರೋಪಾಯದೊಂದಿಗೆ ಶಿಕ್ಷಣ ಸಂಶೋಧನೆ ಮತ್ತು ಯೋಜನೆಯ (ಎಜುಕೇಷನ್‌, ರಿಸರ್ಚ್‌ ಅಂಡ್‌ ಪ್ಲಾನಿಂಗ್‌-ERP) ಪರಿಹಾರೋಪಾಯ ಸಾಧನಗಳನ್ನು ಒದಗಿಸುವ ಸಲುವಾಗಿ ಇನ್ಫೋಸ್ಪೆಕ್ಟ್ರಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಜೊತೆಗಿನ ಬಾಂಧವ್ಯಕ್ಕೆ NIIT ಲಿಮಿಟೆಡ್‌ ಪ್ರವೇಶಿಸಿತು[೩೮]
  • 2008: ಇಂಗ್ಲಿಷ್‌ ಸಂವಹನೆ, ಸೌಮ್ಯವಾದ ಪರಿಣತಿಗಳು, ತರಬೇತಿ ಮತ್ತು ಮೌಲ್ಯಮಾಪನದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಭಾರತದಲ್ಲಿನ ಒಂದು ಅಗ್ರಗಣ್ಯ ಕಂಪನಿಯಾದ ಎವಾಲ್ವ್‌ ಸರ್ವೀಸಸ್‌ ಲಿಮಿಟೆಡ್‌ನಲ್ಲಿನ ಪಾಲನ್ನು NIIT ಸ್ವಾಧೀನ ಪಡಿಸಿಕೊಂಡಿತು.[೩೯]
  • 2009: ಹೆಚ್ಚಿನ ಸ್ನಾತಕೋತ್ತರ ಮಟ್ಟದ ಶಿಕ್ಷಣಕ್ರಮಗಳನ್ನು ನೀಡುವ ಸಲುವಾಗಿ ರಾಜಾಸ್ಥಾನದ ನೀಮ್ರಾಣಾದಲ್ಲಿ ಹೊಸ "NIIT ವಿಶ್ವವಿದ್ಯಾಲಯ" ಆವರಣವನ್ನು (http://www.niituniversity.in/) 2009ರಲ್ಲಿ NIIT ಆರಂಭಿಸಿತು.[೪೦]
  • 2009: ಚೀನಾದಲ್ಲಿನ IT ತರಬೇತಿ ಬ್ರಾಂಡ್‌ಗೆ ಸಂಬಂಧಿಸಿದಂತೆ ಚೈನೀಸ್ ಸೊಸೈಟಿ ಆಫ್‌ ಎಜುಕೇಷನಲ್‌ ಡೆವಲಪ್‌ಮೆಂಟ್‌ ಸ್ಟ್ರಾಟಜಿ (CSEDS) ಸಂಸ್ಥೆಯು NIIT ಲಿಮಿಟೆಡ್‌ಗೆ ಪ್ರಶಸ್ತಿ ನೀಡಿ ಪುರಸ್ಕರಿಸಿತು[೪೧]

NIIT (USA) ಇಂಕ್‌.

[ಬದಲಾಯಿಸಿ]

GAಯ ಅಟ್ಲಾಂಟಾದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ NIIT ಎಂಟರ್‌ಪ್ರೈಸ್‌ ಲರ್ನಿಂಗ್‌ ಸಲ್ಯೂಷನ್ಸ್‌ ಬಿಸಿನೆಸ್‌, ವಿನೂತನ ಕಾರ್ಯತಂತ್ರಗಳನ್ನು ವಿತರಿಸುವುದಕ್ಕೆ ಸಂಬಂಧಿಸಿದಂತೆ ಕಂಪನಿಯ ಪ್ರಧಾನ ಮೂಲವಾಗಿ ಕಾರ್ಯನಿರ್ವಹಿಸುತ್ತದೆ; ಸದರಿ ವಿನೂತನ ಕಾರ್ಯತಂತ್ರಗಳು ವ್ಯವಹಾರ ಪ್ರಭಾವದ ವೇಗವರ್ಧಿಸುವಲ್ಲಿ ಕಂಪನಿಯ ಗಿರಾಕಿ ಸರದಿಪಟ್ಟಿಗೆ ನೆರವಾಗುತ್ತವೆ. 1981ರಲ್ಲಿ ಸಂಸ್ಥಾಪಿಸಲ್ಪಟ್ಟ NIIT ELS ಬಿಸಿನೆಸ್‌, ಸಲಹಾ ಮತ್ತು ಕಲಿಕಾ ಸೇವೆಗಳು, ತಂತ್ರಜ್ಞಾನ ಸಾಧನಗಳು, ಮತ್ತು ಗಿರಾಕಿಯ ಇಷ್ಟಾನುಸಾರದ ವಿಷಯಕ್ಕೆ ಸಂಬಂಧಿಸಿದ ಹಲವಾರು ವಲಯಗಳಾದ್ಯಂತ ತನ್ನ ವ್ಯವಸ್ಥಿತ ತರಬೇತಿ ಸೇವೆಗಳನ್ನು ಅನುಷ್ಠಾನಗೊಳಿಸುತ್ತದೆ; ಗಿರಾಕಿಯ ಕಲಿಕಾ ಸಂಸ್ಥೆಗಳನ್ನು ಅತ್ಯುತ್ತಮವಾಗಿಸುವುದು ಹಾಗೂ ಉದ್ಯೋಗಿಗಳು, ಗ್ರಾಹಕರು ಮತ್ತು ಪಾಲುದಾರರಿಗೆ ಸಂಬಂಧಿಸಿದಂತೆ ಕಾರ್ಯಕ್ಷಮತೆಗಿರುವ ಸಮಯವನ್ನು ಸುಧಾರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಪ್ರಶಸ್ತಿ-ವಿಜೇತ ಪರಿಹಾರೋಪಾಯಗಳು, ತಂತ್ರಜ್ಞಾನ ಮತ್ತು ಸೇವೆಗಳನ್ನು ನೀಡುವ ಸಲುವಾಗಿ ತನ್ನ ತಪ್ಪು ವಿಶ್ಲೇಷಣಾ ನಿರ್ಣಾಯಕ ವಿಧಾನವನ್ನು ಬಳಸುವುದರ ಜೊತೆಗೆ ಸಾಂಸ್ಥಿಕ ವಿನ್ಯಾಸವನ್ನು NIITಯ ELS ಬಿಸಿನೆಸ್‌ ಬಳಸಿಕೊಳ್ಳುತ್ತದೆ. ಇಂದಿನ ಮಾರುಕಟ್ಟೆಗಳಲ್ಲಿ ಉತ್ತಮ ರೀತಿಯಲ್ಲಿ ಸ್ಪರ್ಧಿಸುವುದಕ್ಕೆ ಅಗತ್ಯವಾಗಿರುವ ವಾಸ್ತವಿಕ-ಪ್ರಪಂಚ ಪರಿಣತಿಗಳನ್ನು ಗಿರಾಕಿಗಳು ಸಾಧಿಸುವಲ್ಲಿ, ಕಂಪನಿಯ ಜಾಗತಿಕ ಪ್ರತಿಭಾಶಕ್ತಿ ಅಭಿವರ್ಧನಾ ಕಾರ್ಯಕ್ರಮಗಳು ಅವರಿಗೆ ನೆರವಾಗುತ್ತವೆ.

ವ್ಯವಸ್ಥಿತ ತರಬೇತಿ ಸೇವೆಗಳು

NIIT (USA) ಇಂಕ್‌ ಕಂಪನಿಯು ತನ್ನ ವ್ಯವಸ್ಥಿತ ತರಬೇತಿ ಸೇವೆಗಳು (ಮ್ಯಾನೇಜ್ಡ್‌ ಟ್ರೈನಿಂಗ್‌ ಸರ್ವೀಸಸ್‌-MTS) ಎಂಬ ಒಂದು ವಿನೂತನ ಹೊರಗುತ್ತಿಗೆ ಪ್ರಸ್ತಾವವನ್ನು ಅಭಿವೃದ್ಧಿಪಡಿಸಿಸಿದೆ ಹಾಗೂ ಅನುಷ್ಠಾನಗೊಳಿಸಿದೆ. ಗರಿಷ್ಟ ಪ್ರಮಾಣದ ಮತ್ತು ವಿಸ್ಪಷ್ಟವಾದ ಮೌಲ್ಯವನ್ನು ಹೊರತೆಗೆಯುವ ಸಲುವಾಗಿ ತರಬೇತಿ ಮತ್ತು ಅಭಿವರ್ಧನೆಯಲ್ಲಿನ ಹೂಡಿಕೆಗಳನ್ನು ಅತ್ಯುತ್ತಮವಾಗಿಸುವಲ್ಲಿ ಇದು ಸಂಸ್ಥೆಗಳಿಗೆ ಅವಕಾಶ ಕಲ್ಪಿಸುತ್ತದೆ. ವಿಶ್ವಾದ್ಯಂತ ಹಬ್ಬಿರುವ ವ್ಯವಸ್ಥಿತ ತರಬೇತಿಯ ಸೇವೆಯ ಹುಚ್ಚಿನ ಐದು ಅಗ್ರಗಣ್ಯ ಕಂಪನಿಗಳ ಪೈಕಿ ಒಂದಾಗಿರುವ ಈ ಕಂಪನಿಯು, ಸದರಿ ವರ್ಗದಲ್ಲಿನ ಅತ್ಯುತ್ತಮ-ಸೇವೆಗಳ ಒಂದು ಮಾಲಿಕೆಯನ್ನು ನೀಡುತ್ತದೆ; ತನ್ನ ಗ್ರಾಹಕರು ತಮ್ಮ ವೆಚ್ಚಗಳನ್ನು ತಗ್ಗಿಸುವಲ್ಲಿ, ತಮ್ಮ ವ್ಯವಹಾರಗಳನ್ನು ಮಾರ್ಪಡಿಸುವಲ್ಲಿ ಮತ್ತು ವಾಸ್ತವಿಕವಾದ, ಅಳೆಯಬಹುದಾದ ವ್ಯವಹಾರ ಪ್ರಭಾವಕ್ಕೆ ಚಾಲನೆ ನೀಡುವಲ್ಲಿ ಈ ಸೇವೆಗಳು ಅವರನ್ನು ಸಮರ್ಥರನ್ನಾಗಿಸುತ್ತವೆ. NIIT ತರಬೇತಿಯ ಪರಿಹಾರೋಪಾಯಗಳಲ್ಲಿ ಇವು ಸೇರಿವೆ: ಗಿರಾಕಿಯ ಇಷ್ಟಾನುಸಾರದ ವಿಷಯ ಮತ್ತು ಪಠ್ಯಕ್ರಮದ ಅಭಿವರ್ಧನೆ, ಆಡಳಿತ ಮತ್ತು ಕಾರ್ಯಾಚರಣೆಗಳಿಗೆ ತರಬೇತಿ ನೀಡುವುದು, ನಿರ್ವಹಣಾ ವ್ಯವಸ್ಥೆಗಳ ಅಭಿವರ್ಧನೆ ಮತ್ತು ಆಡಳಿತವನ್ನು ಕಲಿಯುವುದು, ಮತ್ತು ಪಠ್ಯಕ್ರಮದ ವಿತರಣಾ ನಿರ್ವಹಣೆ.

ವ್ಯಾಪಾರ ಘಟಕಗಳು

[ಬದಲಾಯಿಸಿ]

ಮುಂದೆ ನಮೂದಿಸಲಾಗಿರುವ ಮೂರು ವ್ಯವಹಾರ ಸೂತ್ರಗಳ ಮೇಲ್ಪಂಕ್ತಿಯಲ್ಲಿ NIITಯು ಸ್ವತಃ ತನ್ನನ್ನು ಸಂಘಟಿಸಿಕೊಂಡಿದೆ:

  1. ಏಕೋದ್ದಿಷ್ಟ ಕಲಿಕಾ ಪರಿಹಾರೋಪಾಯಗಳು - 16–25 ವರ್ಷಗಳ ವಯೋಮಾನದಲ್ಲಿರುವ ಜನರಿಗೆ ನೇಮಕಯೋಗ್ಯತೆಯ ಪರಿಣತಿಗಳನ್ನು ಒದಗಿಸುವುದರ ಕುರಿತಾಗಿ ಇದು ಗಮನಹರಿಸುತ್ತದೆ. IT ತರಬೇತಿಯು ಈ ವಲಯದ ದೊಡ್ಡಭಾಗವೆನಿಸಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ತರಬೇತಿ ನೀಡುವುದಕ್ಕೆ ಸಂಬಂಧಿಸಿದ ಹೊಸ ಪ್ರಸ್ತಾವಗಳನ್ನು ಇದು ಪ್ರಾರಂಭಿಸಿದೆ; ಬ್ಯಾಂಕಿಂಗ್‌, ವಿಮೆ ಮತ್ತು ಹಣಕಾಸಿನ ಸೇವೆಗಳಲ್ಲಿನ ತರಬೇತಿಯನ್ನು IFBI ಮೂಲಕ, NIIT IMPERIA ಕಾರ್ಯಕಾರಿ ನಿರ್ವಹಣಾ ಕಾರ್ಯಕ್ರಮಗಳಲ್ಲಿನ ತರಬೇತಿಯನ್ನು NIIT ಇಂಪೀರಿಯಾ ಮೂಲಕ ಮತ್ತು BPO/KPO ವಲಯಗಳಿಗೆ ಸಂಬಂಧಿಸಿರುವ ಪರಿಣತಿಗಳಲ್ಲಿನ ತರಬೇತಿಯನ್ನು NIIT ಯುನಿಕಾ ಮೂಲಕ ನೀಡುವುದು ಇದರ ವೈಶಿಷ್ಟ್ಯ.
  2. ಶಾಲಾ ಕಲಿಕಾ ಪರಿಹಾರೋಪಾಯಗಳು - ಸರ್ಕಾರಿ ಶಾಲೆಗಳು ಮತ್ತು ಖಾಸಗಿ ಶಾಲೆಗಳಿಗೆ ತರಬೇತಿ ಮತ್ತು ಕಲಿಕಾ ಪರಿಹಾರೋಪಾಯಗಳನ್ನು ಇದು ಒದಗಿಸುತ್ತದೆ.
  3. ಸಾಂಸ್ಥಿಕ ಕಲಿಕಾ ಪರಿಹಾರೋಪಾಯಗಳು- ಆದೇಶಕ್ಕನುಗುಣವಾಗಿ ರಚಿಸಿರದ ಕಲಿಕಾ ಗ್ರಂಥಾಲಯ, ಗಿರಾಕಿಯ ಇಷ್ಟಾನುಸಾರದ ವಿಷಯದ ಅಭಿವರ್ಧನೆ, ಗ್ರಾಹಕರ ಅಗತ್ಯಾನುಸಾರದ ಬೋಧಕ ನೇತೃತ್ವದ ತರಬೇತಿ ಮತ್ತು ಆಡಳಿತ ಸೇವೆಗಳ ತರಬೇತಿಯಂಥ ತರಬೇತಿ ಸೇವೆಗಳನ್ನು ಈ ವಿಭಾಗವು ಒದಗಿಸುತ್ತದೆ. 2006ರಲ್ಲಿ NIITಯಿಂದ ಸ್ವಾಧೀನಕ್ಕೊಳಗಾದ ಎಲಿಮೆಂಟ್‌ K ಎಂಬ ಹೆಸರಿನ ಒಂದು US ಕಂಪನಿಯು, ಈ ವಿಭಾಗದಿಂದ ನಡೆಯುವ ಮಾರಾಟಗಳ ಪೈಕಿ ಸುಮಾರು ಮೂರನೇ ಎರಡು ಭಾಗಗಳಷ್ಟನ್ನು ನೀಡುತ್ತದೆ.

ಆಯಕಟ್ಟಿನ ಉದ್ಯಮಗಳು

[ಬದಲಾಯಿಸಿ]

ಚೆನ್ನಾಗಿ-ವಿಶದೀಕರಿಸಲ್ಪಟ್ಟ ಉದ್ಯಮದ ಆಯಕಟ್ಟಿನ ವಲಯಗಳ ಮೇಲೆ NIIT ಟೆಕ್ನಾಲಜೀಸ್‌ ಮುಖ್ಯವಾಗಿ ಗಮನಹರಿಸುತ್ತದೆ:

  • ಬ್ಯಾಂಕಿಂಗ್‌ ಮತ್ತು ಹಣಕಾಸಿನ ಸೇವೆಗಳು
    • ಚಿಲ್ಲರೆ ವ್ಯವಹಾರದ ಬ್ಯಾಂಕಿಂಗ್
    • ಸಾರಾಸಗಟಿನ ಬ್ಯಾಂಕಿಂಗ್‌
    • ಹೂಡಿಕೆ ನಿರ್ವಹಣೆ
    • ಅಪಾಯ ಮತ್ತು ಅನುಸರಣೆಯ ಕೊಡುಗೆಗಳು
    • ವ್ಯವಹಾರ ಪರೀಕ್ಷಾ ಚೌಕಟ್ಟುಗಳು[]
  • ವಿಮೆ
    • ಸಂಪರ್ಕ ಮಾಧ್ಯಮ ಮತ್ತು ಗ್ರಾಹಕ ಇಂಟರ್‌ಫೇಸ್‌ ಪರಿಹಾರೋಪಾಯಗಳು
    • ವಿಮಾ ವ್ಯವಹಾರದ ಪ್ರಧಾನ ಪ್ರಕ್ರಿಯೆಗಳು
    • ವಿಮೆ ವ್ಯವಹಾರ ಪ್ರಕ್ರಿಯೆಗಳನ್ನು ಸಮರ್ಥವಾಗಿಸುವುದು
    • ನಿಯಂತ್ರಕ ಅನುಸರಣೆ ಮತ್ತು ತೆರಿಗೆ ಪರಿಸರಗಳು
    • ಬೌದ್ಧಿಕ ಸ್ವತ್ತಿನ-ಪರಿಹಾರೋಪಾಯಗಳು ಮತ್ತು ಪರಿಹಾರೋಪಾಯದ ವೇಗವರ್ಧಕಗಳು
    • ಮೌಲ್ಯ ವರ್ಧಿತ ಸೇವೆಗಳು[]
  • ಪ್ರಯಾಣ ಸಾರಿಗೆ ಮತ್ತು ವ್ಯವಸ್ಥಾಪನಾ ತಂತ್ರಗಳು
    • ವಾಯುಯಾನ ಸಂಸ್ಥೆ ಮತ್ತು ಪ್ರಯಾಣ ವಿತರಣೆ
    • ವಿಮಾನ ನಿಲ್ದಾಣಗಳು
    • ಮೇಲ್ಮೈ ಸಾರಿಗೆ
    • BPO
    • ಸಂಘಟಿಸಲ್ಪಟ್ಟ BPO[]
  • ಚಿಲ್ಲರೆ ವ್ಯಾಪಾರ ವಿತರಣೆ
    • e-ವ್ಯವಹಾರ
    • e-ಸಂಗ್ರಹಣೆ
    • SAP ಚಿಲ್ಲರೆ ವ್ಯಾಪಾರ[]

NIITಯ ಆಯಕಟ್ಟಿನ ಉಪಕ್ರಮಗಳು

[ಬದಲಾಯಿಸಿ]

ICICI ಬ್ಯಾಂಕ್‌ ಜೊತೆಗಿನ ಸರಿಸಮಾನತೆಯ ಸಹಯೋಗದೊಂದಿಗೆ ರೂಪಿಸಲ್ಪಟ್ಟ NIIT ಇನ್‌‌ಸ್ಟಿಟ್ಯೂಟ್‌ ಆಫ್‌ ಫೈನಾನ್ಷಿಯಲ್‌ ಬ್ಯಾಂಕಿಂಗ್‌ (IFBI), ಬ್ಯಾಂಕಿಂಗ್‌ ಉದ್ಯಮದಲ್ಲಿನ ಪ್ರತಿಭಾಶಕ್ತಿಯನ್ನು ಅಭಿವೃದ್ಧಿಪಡಿಸುವುದಕ್ಕಿರುವ ಕಾರ್ಯಕ್ರಮಗಳನ್ನು ಒದಗಿಸುತ್ತದೆ.[೪೨] ಅಷ್ಟೇ ಅಲ್ಲ, ಶಾಲೆಗಳಿಗಾಗಿ ಟರ್ಕಿ ಸಂಘಟನೆ ಕಾರ್ಯಕ್ರಮವನ್ನು NIIT ನೀಡುತ್ತದೆ ಹಾಗೂ 5000ಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳಿಗಾಗಿ ಮೂಲಭೂತ ಕಂಪ್ಯೂಟರ್‌ ತರಬೇತಿಯನ್ನು ಒದಗಿಸುತ್ತದೆ. ಫಾರ್ಚೂನ್‌ 500 ಕಂಪನಿಗಳು, ವಿಶ್ವವಿದ್ಯಾಲಯಗಳು, ತಂತ್ರಜ್ಞಾನದ ಕಂಪನಿಗಳು, ತರಬೇತಿ ನಿಗಮ ಮತ್ತು ಪ್ರಕಟಣಾ ಕಂಪನಿಗಳಿಗೆ ಸಾಂಸ್ಥಿಕ ಕಲಿಕಾ ಪರಿಹಾರೋಪಾಯವನ್ನು NIITಯ ಸಾಂಸ್ಥಿಕ ಕಲಿಕಾ ಪರಿಹಾರೋಪಾಯಗಳು ನೀಡುತ್ತವೆ. ಅನುಕ್ರಮಣಿಕೆಯ ಕಲಿಕಾ ಉತ್ಪನ್ನಗಳು, ತಂತ್ರಜ್ಞಾನ ಮತ್ತು ಸೇವೆಗಳ ಮೂಲಕ ರೂಪಿಸಲಾದ ಒಂದು ವಿಶೇಷ ಉದ್ದೇಶಕ್ಕಾಗಿ ರಚಿಸಿದ ಪರಿಹಾರೋಪಾಯದ ಮೂಲಕ, ಗ್ರಾಹಕರು ಮತ್ತು ಪಾಲುದಾರರಿಗಾಗಿ ಕಲಿಕಾ ಪರಿಹಾರೋಪಾಯಗಳನ್ನು ಎಲಿಮೆಂಟ್‌ K ನೀಡುತ್ತದೆ. ವಾಸ್ತವಾಭಾಸದ ಪ್ರಯೋಗಾಲಯ (ವಹಿಸಿಕೊಟ್ಟ-ಪ್ರಯೋಗಾಲಯಗಳು), ಬೋಧಕ ನೇತೃತ್ವದ ಪಠ್ಯಕ್ರಮ ಸಾಧನ, ವ್ಯಾಪಕ ನಿಯತಕಾಲಿಕಗಳು ಮತ್ತು ಇ-ಗ್ರಂಥಾಲಯಗಳನ್ನು ಇದು ನೀಡುತ್ತದೆ.[೪೩] ಅಂತರರಾಷ್ಟ್ರೀಯ ಹಣಕಾಸಿನ ವರದಿಗಾರಿಕೆಯ ಮಾನದಂಡಗಳ (ಇಂಟರ್‌ನ್ಯಾಷನಲ್‌ ಫೈನಾನ್ಷಿಯಲ್‌ ರಿಪೋರ್ಟಿಂಗ್‌ ಸ್ಟಾಂಡರ್ಡ್ಸ್‌-IFRS) ಕುರಿತಾದ ಮುಂದುವರಿದ ಪ್ರಮಾಣಿತ ಕಾರ್ಯಕ್ರಮವನ್ನು ಒದಗಿಸುವ ಸಲುವಾಗಿ KPMG ಇಂಡಿಯಾದ ಜೊತೆಗೆ NIIT ಇಂಪೀರಿಯಾ ಕೈಜೋಡಿಸಿದೆ. ಸಾಮಾನ್ಯವಾಗಿ ಆರು ವಾರಗಳ ಒಳಗಾಗಿ ಈ ಕಾರ್ಯಕ್ರಮವನ್ನು ಪಡೆಯಲಾಗುತ್ತದೆ. ಸಾರ್ವತ್ರಿಕ ಮಾನ್ಯತೆಪಡೆದ ಭಾರತೀಯ ಲೆಕ್ಕಪತ್ರಗಾರಿಕೆ ತತ್ತ್ವಗಳ ಕಂಪನಿಗಳಿಂದ ಮೊದಲ್ಗೊಂಡು IFRSವರೆಗಿನ ಕಂಪನಿಗಳಿಗೆ ನೆರವಾಗಲು ಈ ಕಾರ್ಯಕ್ರಮವು ಮೀಸಲಾಗಿದೆ.[೪೪]

ಜಾಗತಿಕ ತರಬೇತಿ ಕೇಂದ್ರಗಳು

[ಬದಲಾಯಿಸಿ]

ಭಾರತದ ತರಬೇತಿ ಕೇಂದ್ರಗಳು

[ಬದಲಾಯಿಸಿ]

ಭಾರತದ ಈ ಮುಂದೆ ಉಲ್ಲೇಖಿಸಿರುವ ರಾಜ್ಯಗಳಲ್ಲಿ NIITಯು ತರಬೇತಿ ಮತ್ತು ಶೈಕ್ಷಣಿಕ ಕೇಂದ್ರಗಳನ್ನು ಹೊಂದಿದೆ: ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಚಂಡೀಗಢ, ಛತ್ತೀಸ್‌ಗಢ ದೆಹಲಿ, ಗೋವಾ, ಗುಜರಾತ್‌, ಹರಿಯಾಣಾ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ನಾಗಾಲ್ಯಾಂಡ್‌, ಒಡಿಶಾ, ಪಾಂಡಿಚೆರಿ, ಪಂಜಾಬ್‌, ರಾಜಾಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ.[೪೫]

ಜಾಗತಿಕ ಘಟಕಗಳು

[ಬದಲಾಯಿಸಿ]

ಪ್ರತಿಸ್ಪರ್ಧಿಗಳು

[ಬದಲಾಯಿಸಿ]

ಇ-ಕಲಿಕಾ ಮಾರುಕಟ್ಟೆಯಲ್ಲಿ ಸಕ್ರಿಯರಾಗಿರುವ ಹಲವಾರು ಸ್ಥಳೀಯ ವೃತ್ತಿಪರರೊಂದಿಗೆ ಶಾಲಾ ಕಲಿಕಾ ಪರಿಹಾರೋಪಾಯಗಳು ಸ್ಪರ್ಧಿಸಬೇಕಾಗಿ ಬಂದಿದ್ದು, ಅಂಥ ಪ್ರತಿಸ್ಪರ್ಧಿಗಳಲ್ಲಿ ಎವೆರಾನ್‌ ಎಜುಕೇಷನ್‌, ಮಣಿಪಾಲ್‌ K12 ಎಜುಕೇಷನ್‌, ಮತ್ತು ಎಡುಕಾಂಪ್‌ ಸೇರಿವೆ; ಅಷ್ಟೇ ಅಲ್ಲ, ಟ್ರೈಜಿತ್‌, S.ಚಾಂದ್‌ ಜೊತೆಗಿನ ಒಂದು ಜಂಟಿ-ಉದ್ಯಮವಾದ HMSC ಲರ್ನಿಂಗ್‌, 5}ಹೌಟನ್‌ ಮಿಫಿನ್‌ ಹಾಕೋರ್ಟ್‌‌‌ನ ಅಂತರರಾಷ್ಟ್ರೀಯ ಅಂಗವಾದ EMPGI, ಮತ್ತು MIT ಕ್ಯಾಂಪಸ್‌‌ನಂಥ ಇತರ ವೃತ್ತಿಪರರ ಜೊತೆಯಲ್ಲಿಯೂ ಅವು ಸ್ಪರ್ಧಿಸಬೇಕಾಗಿ ಬಂದಿದೆ.

ಇವನ್ನೂ ನೋಡಿ

[ಬದಲಾಯಿಸಿ]

ಟೆಂಪ್ಲೇಟು:Portal box

  • ಕಲ್ಕತ್ತಾದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಜೊತೆಗಿನ NIIT ಇಂಪೀರಿಯಾ ಸಹಯೋಗ
  • ವೃತ್ತಿಪರ ಪ್ರಮಾಣೀಕರಣ
  • ವೃತ್ತಿಪರ ಪ್ರಮಾಣೀಕರಣ (ಕಂಪ್ಯೂಟರ್‌ ತಂತ್ರಜ್ಞಾನ)
  • ಭಾರತದ ತಂತ್ರಾಂಶ ಕಂಪನಿಗಳು
  • ಭಾರತದಲ್ಲಿನ ಮಾಹಿತಿ ತಂತ್ರಜ್ಞಾನ
  • ಭಾರತದಲ್ಲಿನ ಶಿಕ್ಷಣ

ಟಿಪ್ಪಣಿಗಳು ಮತ್ತು ಆಕರಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ "NIIT Technologies Industry Solutions". NIIT Technologies. Archived from the original (aspx) on 23 ಅಕ್ಟೋಬರ್ 2008. Retrieved 1 October 2005.
  2. "IT Services provided by NIIT". 2009-07-18. Archived from the original on 2009-08-07. Retrieved 2009-07-18.
  3. ೩.೦ ೩.೧ "Financial Tables" (PDF). NIIT Technologies ltd Investor Relations. Archived from the original (PDF) on 2009-07-11. Retrieved 2009-01-23.
  4. "NIIT Global Learning Solution". NIIT. June 30, 2008. Archived from the original on 2008-12-07. Retrieved 2007-10-16.
  5. TOI ವೆಬ್‌ಸೈಟ್‌: [೧] (URLನ್ನು ಕೊನೆಯ ಬಾರಿಗೆ ಸಂಪರ್ಕಿಸಿದ್ದು 2009ರ ಜುಲೈ 14ರಂದು)
  6. "Management Team – Founders and Their History". NIIT. June 28, 2006. Archived from the original on 2009-02-01. Retrieved 2007-10-16. {{cite news}}: Italic or bold markup not allowed in: |publisher= (help)
  7. ಮಾಧ್ಯಮಗಳಿಗೆ ಬಿಡುಗಡೆಮಾಡಿದ್ದು ಮೇ 26, 2009 ವೆಬ್‌ಸೈಟ್‌: [೨] Archived 2010-12-16 ವೇಬ್ಯಾಕ್ ಮೆಷಿನ್ ನಲ್ಲಿ. (URLನ್ನು ಕೊನೆಯ ಬಾರಿಗೆ ಸಂಪರ್ಕಿಸಿದ್ದು 2009ರ ಜುಲೈ 18ರಂದು)
  8. ವೆಬ್‌ಸೈಟ್‌: [೩] Archived 2011-06-16 ವೇಬ್ಯಾಕ್ ಮೆಷಿನ್ ನಲ್ಲಿ. (URLನ್ನು ಕೊನೆಯ ಬಾರಿಗೆ ಸಂಪರ್ಕಿಸಿದ್ದು 2009ರ ಆಗಸ್ಟ್‌ 5ರಂದು )
  9. "NIIT Limited and its subsidiaries Fiscal Year 2009 Earnings" (PDF). NIIT Limited. 2009-07-27. Archived from the original (PDF) on 2009-12-29. Retrieved 2009-07-27.
  10. ಮಾಧ್ಯಮಗಳಿಗೆ ಬಿಡುಗಡೆಮಾಡಿದ್ದು ಮೇ 26, 2009 ವೆಬ್‌ಸೈಟ್‌: [೪] Archived 2009-08-07 ವೇಬ್ಯಾಕ್ ಮೆಷಿನ್ ನಲ್ಲಿ. (URLನ್ನು ಕೊನೆಯ ಬಾರಿಗೆ ಸಂಪರ್ಕಿಸಿದ್ದು 2009ರ ಜುಲೈ 14ರಂದು)
  11. TOI ವೆಬ್‌ಸೈಟ್‌: [೫] Archived 2010-10-06 ವೇಬ್ಯಾಕ್ ಮೆಷಿನ್ ನಲ್ಲಿ. (URLನ್ನು ಕೊನೆಯ ಬಾರಿಗೆ ಸಂಪರ್ಕಿಸಿದ್ದು 2009ರ ಜುಲೈ 14ರಂದು)
  12. "NIIT acquired US-Based company Element K". The Economic Times. June 28, 2006. Retrieved 2007-10-16. {{cite news}}: Italic or bold markup not allowed in: |publisher= (help)
  13. "Academic Alliance". MMBL Cyber skills. June 30, 2009. Archived from the original on 2008-09-14. Retrieved 2007-10-16. {{cite news}}: Italic or bold markup not allowed in: |publisher= (help)
  14. "Schooling for the millions in emerging information economies is the challenge of Rajendra Pawar's renewed NIIT". Forbes. June 30, 2007. Retrieved 2007-10-16. {{cite news}}: Italic or bold markup not allowed in: |publisher= (help)
  15. "Federation of Jain Institute". June 30, 2008. Retrieved 2007-10-16.
  16. "NIIT Campus about most popular GNIIT program". June 30, 2008. Archived from the original on 2011-05-09. Retrieved 2007-10-16.
  17. "Received ISO". NIIT. June 30, 2008. Archived from the original on 2010-03-02. Retrieved 2007-10-16. {{cite news}}: Italic or bold markup not allowed in: |publisher= (help)
  18. "NIIT ties-up with Chinese Government". Rediff on the net. June 30, 2008. Retrieved 2007-10-16. {{cite news}}: Italic or bold markup not allowed in: |publisher= (help)
  19. "NIIT enters Malaysian 'Multimedia Super Corridor'". Rediff on the Net. June 30, 2008. Retrieved 2007-10-16. {{cite news}}: Italic or bold markup not allowed in: |publisher= (help)
  20. "NIIT's scholarship offers scope for the economically challenged". The Financial Express. September 29, 1997. Archived from the original on 2012-10-12. Retrieved 2007-10-16. {{cite news}}: Italic or bold markup not allowed in: |publisher= (help)
  21. "NIIT builds defence software for Singapore". Rediff on the net. November 20, 1997. Retrieved 2007-10-16. {{cite news}}: Italic or bold markup not allowed in: |publisher= (help)
  22. "NIIT's global revenues up 36 per cent to Rs 8.8 billion". Rediff on the Net. October 16, 1998. Retrieved 2007-10-16. {{cite news}}: Italic or bold markup not allowed in: |publisher= (help)
  23. "http://www.thehindubusinessline.com/2000/03/08/stories/150839i2.htm". The Hindu Business Line. March 8, 2000. Retrieved 2007-10-16. {{cite news}}: External link in |title= (help); Italic or bold markup not allowed in: |publisher= (help)
  24. "NIIT teams up with Sun for iForce initiative". The Hindu Business Line. June 16, 2000. Archived from the original on 2012-11-09. Retrieved 2007-10-16. {{cite news}}: Italic or bold markup not allowed in: |publisher= (help)
  25. "NIIT bags order from Macmillan". Rediff.com. June 30, 2000. Retrieved 2007-10-16. {{cite news}}: Italic or bold markup not allowed in: |publisher= (help)
  26. "Citibank, IFC, NIIT team up for student loans". Indian Express Newspaper. February 24, 2001. Archived from the original on 2012-10-12. Retrieved 2007-10-16. {{cite news}}: Italic or bold markup not allowed in: |publisher= (help)
  27. "Award for NIIT". ದಿ ಹಿಂದೂ. June 6, 2001. Archived from the original on 2012-11-09. Retrieved 2007-10-16. {{cite news}}: Italic or bold markup not allowed in: |publisher= (help)
  28. "M&M, NIIT out; Hero Honda, HCL in". ದಿ ಹಿಂದೂ. November 25, 2001. Retrieved 2007-10-16. {{cite news}}: Italic or bold markup not allowed in: |publisher= (help)
  29. "NIIT, US Co. tie up for four-yr degree course". ExpressIndia.com. June 30, 2008. Archived from the original on 2012-10-12. Retrieved 2007-10-16. {{cite news}}: Italic or bold markup not allowed in: |publisher= (help)
  30. "NIIT to set up 15 centres in China". Rediff News. June 30, 2008. Retrieved 2007-10-16. {{cite news}}: Italic or bold markup not allowed in: |publisher= (help)
  31. "NIIT set for GIS global launch". techtree.com. February 5, 2004. Archived from the original on 2007-10-27. Retrieved 2007-10-16.
  32. "Intel, NIIT to boost tech learning". Rediff News. November 22, 2004. Retrieved 2007-10-16.
  33. "NIIT Tech, SAP tie up for government services". ದಿ ಟೈಮ್ಸ್ ಆಫ್‌ ಇಂಡಿಯಾ. February 9, 2005. Archived from the original on 2005-02-15. Retrieved 2007-10-16. {{cite news}}: Italic or bold markup not allowed in: |publisher= (help)
  34. "NIIT to train techies on Intel platform — Programme to be rolled out later in Asia-Pacific". Business Line. August 19, 2005. Retrieved 2007-10-16. {{cite news}}: Italic or bold markup not allowed in: |publisher= (help)
  35. "Java green: NIIT, Sun join forces for training programs". Access my Library. May 31, 2006. Archived from the original on 2013-01-16. Retrieved 2007-10-16.
  36. "NIIT enters management education". The Economic Times. September 16, 2006. Retrieved 2007-10-16. {{cite news}}: Italic or bold markup not allowed in: |publisher= (help)
  37. "NIIT partners Singapore co, bags Govt deal". Business Line. October 5, 2006. Retrieved 2007-10-16.
  38. "NIIT ties up with Infospectrum for research solutions". Sify Business. June 24, 2008. Retrieved 2007-10-16.
  39. "NIIT takes over Evolv". Business Standard. January 15, 2008. Retrieved 2007-10-16.
  40. "NIIT University Campus, a breakthrough innovation". The Economic Times. April 5, 2009. Retrieved 2007-10-16.
  41. "NIIT honoured as the most Influential IT Training Brand in China". Equity Bulls. September 30, 2009. Archived from the original on 2011-07-10. Retrieved 2007-10-16.
  42. "IFBI career". India Study Channel. March 25, 2000. Retrieved 2009-04-12.
  43. "NIIT accuals Element K". Business Publications. March 25, 2000. Archived from the original on 2011-01-07. Retrieved 2009-04-12.
  44. "[[KPMG]] and [[NIIT Imperia]] collaborate to launch Advanced Certificate Program on IFRS". Press Released. November 5, 2009. Archived from the original on 2011-07-16. Retrieved 2007-10-16. {{cite news}}: URL–wikilink conflict (help)
  45. ಸನ್‌_ಇಂಡಿಯಾ ವೆಬ್‌ಸೈಟ್‌: [೬] Archived 2006-12-18 ವೇಬ್ಯಾಕ್ ಮೆಷಿನ್ ನಲ್ಲಿ. (URLನ್ನು ಕೊನೆಯ ಬಾರಿಗೆ ಸಂಪರ್ಕಿಸಿದ್ದು 2009ರ ಜುಲೈ 14ರಂದು)
  46. TOI ವೆಬ್‌ಸೈಟ್‌: [೭] (URLನ್ನು ಕೊನೆಯ ಬಾರಿಗೆ ಸಂಪರ್ಕಿಸಿದ್ದು 2009ರ ಜುಲೈ 14ರಂದು)


ಬಾಹ್ಯ ಕೊಂಡಿಗಳು

[ಬದಲಾಯಿಸಿ]