ಹೀರೋ ಹೋಂಡ
ಗೋಚರ
ಪ್ರಕಾರ: | ಸಾರ್ವಜನಿಕ ಸಂಸ್ಥೆ ಮುಂಬಯಿ ಸ್ಟಾಕ್ ಎಕ್ಸ್‌ಚೇಂಜ್:HEROHONDA M |
---|---|
ಸ್ಥಾಪನೆ: | {{{ ಸ್ಥಾಪನೆ }}} |
ಕೇಂದ್ರ ಸ್ಥಳ: | ಗುರಗಾಂವ್, ಹರಿಯಾಣ, ಭಾರತ |
ಮುಖ್ಯವಾದ ಸಿಬ್ಬಂದಿ: | ಬ್ರಿಜ್‍ಮೋಹನ್ ಲಾಲ್ ಮುಂಜಲ್ (ಚೇರ್ಮನ್ ಮತ್ತು ನಿರ್ವಾಹಕ ನಿರ್ದೇಶಕ) |
ಕೈಗಾರಿಕೆ: | ಆಟೋಮೊಟಿವ್ |
ಉತ್ಪನ್ನಗಳು : | ದ್ವಿಚಕ್ರವಾಹನಗಳು |
ವಹಿವಾಟು : | ೭,೩೫೬ ಕೋಟಿ ರೂಪಾಯಿಗಳು ೨೦೦೪-೨೦೦೫ |
ಅಂತರಜಾಲ: | www.herohonda.com |
ಹೀರೋ ಹೋಂಡ - ಭಾರತದ ದ್ವಿಚಕ್ರ ಮಾದರಿಗಳಲ್ಲೊಂದು. ಹೀರೋ ಮತ್ತು ಹೋಂಡ ಕಂಪನಿಗಳ ಸಹಯೋಗದಿಂದ ಮಾರುಕಟ್ಟೆಗೆ ಬಿಡುಗಡೆಗೊಂಡ ಈ ವಾಹನವು, ಎರಡೂ ಕಂಪನಿಗಳ ಹೆಸರುಗಳನ್ನೊಳಗೊಂಡಂತೆ ಹೀರೋ ಹೋಂಡ ಎಂದು ನಾಮಕರಣ ಮಾಡಲ್ಪಟ್ಟಿತು.
ಹೀರೋ ಹೋಂಡ ಮೋಟರ್ ಸೈಕಲ್ಸ್ ಲಿಮಿಟೆಡ್
[ಬದಲಾಯಿಸಿ]ಹೀರೋ ಹೋಂಡ ಮೋಟರ್ ಸೈಕಲ್ಸ್ ಲಿಮಿಟೆಡ್ ಎಂಬುದು ಭಾರತದ ಪ್ರಮುಖ ದ್ವಿಚಕ್ರವಾಹನ ತಯಾರಿಕೆಯ ಸಂಸ್ಥೆ. ಹೀರೋ ಹೋಂಡ ಜಂಟಿ ಸಹಯೋಗವು ೧೯೮೪ರಲ್ಲಿ ಹೀರೋ ಗ್ರೂಪ್ ಮತ್ತು ಜಪಾನ್ ದೇಶದ ಹೋಂಡ ಸಂಸ್ಥೆಯೊಂದಿಗೆ ಪ್ರಾರಂಭವಾಯಿತು.
ಈ ಸಂಸ್ಥೆಯು ಪ್ರಪಂಚದ ಅತ್ಯಂತ ದೊಡ್ಡ ದ್ವಿಚಕ್ರ ತಯಾರಿಕೆಯ ಸಂಸ್ಥೆ ಎಂದು ೨೦೦೧ರಿಂದ ಪ್ರಖ್ಯಾತಿ ಪಡೆಯಿತು. ಆ ಒಂದು ವರ್ಷದಲ್ಲಿ ಇದು ೧.೩ ದಶಲಕ್ಷ ಮೋಟಾರ್ ಬೈಕ್‍ಗಳನ್ನು ಬಿಡುಗಡೆ ಮಾಡಿತ್ತು.
ಹೀರೋ ಹೋಂಡ ಸ್ಪ್ಲೆಂಡರ್
[ಬದಲಾಯಿಸಿ]ಹೀರೋ ಹೋಂಡ ಸ್ಪ್ಲೆಂಡರ್ ಪ್ರಪಂಚದ ಅತ್ಯಂತ ಹೆಚ್ಚು ಮಾರಾಟವಾಗಿರುವ ಮೋಟಾರ್ ಬೈಕ್. ಇದರ ಎರಡು ಸ್ಥಾವರಗಳು ಭಾರತದ ರಾಜ್ಯ ಹರಿಯಾಣದಲ್ಲಿನ ಧರುಹೆರ ಮತ್ತು ಗುರಗಾಂವ್ ನಗರಗಳಲ್ಲಿವೆ.