ಬಜಾಜ್ ಆಟೊ
ಸಂಸ್ಥೆಯ ಪ್ರಕಾರ | Public company |
---|---|
ಸಂಸ್ಥಾಪಕ(ರು) | Jamnalal Bajaj |
ಮುಖ್ಯ ಕಾರ್ಯಾಲಯ | Pune, India |
ಪ್ರಮುಖ ವ್ಯಕ್ತಿ(ಗಳು) | Rahul Bajaj (Chairman) Rajiv Bajaj (MD) |
ಉದ್ಯಮ | Automotive |
ಉತ್ಪನ್ನ | Motorcycles, three-wheeler vehicles and cars |
ಆದಾಯ | ₹ ೨೦೮ ಶತಕೋಟಿ (ಯುಎಸ್$೪.೬೨ ಶತಕೋಟಿ) (2012-13)[೧] |
ನಿವ್ವಳ ಆದಾಯ | ₹42.77 ಶತಕೋಟಿ (US$೯೪೯.೪೯ ದಶಲಕ್ಷ) (2012-13)[೧] |
ಉದ್ಯೋಗಿಗಳು | 8,036 (March 2013)[೧] |
ಪೋಷಕ ಸಂಸ್ಥೆ | Bajaj Group |
ಉಪಸಂಸ್ಥೆಗಳು | Bajaj Auto Indonesia |
ಜಾಲತಾಣ | www |
ಬಜಾಜ್ ಆಟೋ ಲಿಮಿಟೆಡ್ ಭಾರತೀಯ ದ್ವಿಚಕ್ರ ವಾಹನ ಮತ್ತು ಮೂರು ದ್ವಿಚಕ್ರ ತಯಾರಿಕಾ ಕಂಪನಿಯಾಗಿದೆ. ಬಜಾಜ್, ಸೈಕಲ್, ಸ್ಕೂಟರ್ ಮತ್ತು ಆಟೋ ರಿಕ್ಷಾಗಳನ್ನು ತಯಾರಿಸುತ್ತದೆ ಮತ್ತು ಮಾರುತ್ತದೆ. ಬಜಾಜ್ ಆಟೋ ಬಜಾಜ್ ಸಮೂಹದ ಒಂದು ಭಾಗವಾಗಿದೆ . ಈ ಕಂಪನಿಯನ್ನು ೧೯೩೦ ರಲ್ಲಿ ಜಮ್ನಲಾಲ್ ಬಜಾಜ್ ರವರು ರಾಜಸ್ಥಾನದಲ್ಲಿ ಸ್ಥಾಪಿಸಿದರು . ಇದರ ಮುಖ್ಯ ಕಛೇರಿ ಪುಣೆ,ಮುಂಬಯಿ ನಲ್ಲಿದೆ, ಇದು ಉತ್ತರಾಖಂಡದ ಪಟ್ನಾಗರ್, ಚಕನ್(ಪುಣೆ), ವಾಲಜ್(ಔರಂಗಾಬಾದ್ ಬಳಿ)ಗಳಲ್ಲಿ ತನ್ನ ತಯಾರಿಕಾ ಘಟಕವನ್ನು ಹೊಂದಿದೆ. ಅಕುರ್ಡಿ(ಪುಣೆ)ಯಲ್ಲಿನ ಹಳೆಯ ಘಟಕ ಈಗ ಕ೦ಪನಿಯ ಆರ್ & ಡಿ ಕೇಂದ್ರವಾಗಿದೆ.
ಬಜಾಜ್ ವಿಶ್ವದ ಮೂರನೇ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಮತ್ತು ಭಾರತದ ಎರಡನೇ ಅತಿದೊಡ್ಡ ತಯಾರಕ ಕ೦ಪನಿ . ಇದು ವಿಶ್ವದ ಅತಿದೊಡ್ಡ ತ್ರಿಚಕ್ರ ವಾಹನ ಉತ್ಪಾದಕ ಕ೦ಪನಿಯಾಗಿದೆ.
ಮಾರ್ಚ್ ೨೦೧೩ ೩೧ ರಲ್ಲಿ, ಇದರ ಮಾರುಕಟ್ಟೆ ಬಂಡವಾಳವು ರೂಪಾಯಿ ೫೨೦ ಶತಕೋಟಿ (US $೯.೫೭ ಶತಕೋಟಿ )ಯಾಯಿತು, ಇದರಿ೦ದ ಬಜಾಜ್ ಮಾರುಕಟ್ಟೆ ಮೌಲ್ಯದಿಂದ ವ್ಯವಾಹಾರ ಮಾಡುವ ಭಾರತದ ೨೩ ದೊಡ್ಡ ಸಾರ್ವಜನಿಕ ಉದ್ದಿಮೆ ಕಂಪೆನಿಯಾಯಿತು. ೨೦೧೨ರಲ್ಲಿ ಫೋರ್ಬ್ಸ್ ಗ್ಲೋಬಲ್ ೨೦೦೦ ಪಟ್ಟಿಯಲ್ಲಿ ಬಜಾಜ್ ೧,೪೧೪ ಸ್ಥಾನ ಪಡೆಯಿತು .
ಬಜಾಜ್ ಎಂ/ಎಸ್ ಬಚರಾಜ್ ಟ್ರೇಡಿಂಗ್ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ೨೯ ನವೆಂಬರ್ ೧೯೪೫ ರಂದು ಅಸ್ತಿತ್ವಕ್ಕೆ ಬಂದಿತು. ಇದು ಭಾರತದಲ್ಲಿ ಆಮದು ಮಾಡಿಕೊ೦ಡ ಎರಡು ಮತ್ತು ಮೂರು ಚಕ್ರದ ವಾಹನಗಳ ಮಾರಾಟದ ಮೂಲಕ ಪ್ರಾರಂಭವಾಯಿತು. ೧೯೫೯ ರಲ್ಲಿ, ಇದು ಭಾರತ ಸರ್ಕಾರದಿ೦ದ ದ್ವಿಚಕ್ರ ಮತ್ತು ಮೂರು ಚಕ್ರಗಳ ವಾಹನಗಳನ್ನು ತಯಾರಿಸಲು ಪರವಾನಗಿ ಪಡೆಯಿತು, ಮತ್ತು ಇದು ೧೯೬೦ರಲ್ಲಿ ಸಾರ್ವಜನಿಕ ನಿಯಮಿತ ಕಂಪೆನಿ ಆಯಿತು. ೧೯೭೦ರಲ್ಲಿ ತನ್ನ ೧೦೦,೦೦೦ ವಾಹನಗಳನ್ನ್ಜು ತಯಾರಿಸಿತು. ೧೯೭೭ ರಲ್ಲಿ, ಇದು ಒ೦ದೆ ಹಣಕಾಸು ವರ್ಷದಲ್ಲಿ ೧೦೦,೦೦೦ ವಾಹನಗಳ ಮಾರಾಟ ಮಾಡಿತು. ೧೯೮೫ ರಲ್ಲಿ ಔರಂಗಾಬಾದ್ ಬಳಿಯಿರುವ ವಾಲಜ್ ನಲ್ಲಿ ಉತ್ಪಾದನೆಯನ್ನು ಆರಂಭಿಸಿದತು. ೧೯೮೬ರಲ್ಲಿ ಇದು ಒಂದೆ ಹಣಕಾಸು ವರ್ಷದಲ್ಲಿ ೫೦೦,೦೦೦ ವಾಹನಗಳನ್ನು ಮಾರಾಟಮಾಡಿತು. 1995 ರಲ್ಲಿ, ಇದು ೧೦ದಶಲಕ್ಷದ ವಾಹನಗಳನ್ನು ತಯಾರಿಸಿ, ವರ್ಷದಲ್ಲಿ ದಶಲಕ್ಷ ವಾಹನಗಳನ್ನು ಮಾರಾಟ ಮಾಡಿತು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Official website
- History of Bajaj Auto Archived 2014-09-01 ವೇಬ್ಯಾಕ್ ಮೆಷಿನ್ ನಲ್ಲಿ.
- News on Bajaj Auto at ಟೈಮ್ಸ್ ಆಫ್ ಇಂಡಿಯ
- ↑ ೧.೦ ೧.೧ ೧.೨ "Annual Report 2012-13" (PDF). Bajaj Auto Limited. 19 July 2013. Retrieved 27 October 2013.