ಆಶಾ ಭೋಂಸ್ಲೆ
ಆಶಾ ಭೋಂಸ್ಲೆ | |
---|---|
ಹಿನ್ನೆಲೆ ಮಾಹಿತಿ | |
ಜನ್ಮನಾಮ | ಆಶಾ ಮಂಗೇಶ್ಕರ್ |
ಸಂಗೀತ ಶೈಲಿ | ಪಾಪ್, ಜನಪದ, ಶಾಸ್ತ್ರೀಯ, ಸಿನಿಮಾ ಸಂಗೀತ |
ವೃತ್ತಿ | ಹಿನ್ನೆಲೆ ಗಾಯನ |
ಸಕ್ರಿಯ ವರ್ಷಗಳು | ೧೯೪೩–present |
ಆಶಾ ಭೋಂಸ್ಲೆ [೧] (ಸೆಪ್ಟೆಂಬರ್ ೮, ೧೯೩೩ರಂದು ಜನಿಸಿದರು) ಒಬ್ಬ ಭಾರತೀಯ ಗಾಯಕಿ. ಅವರು ಭಾರತದಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಅತ್ಯುನ್ನತ ಮನ್ನಣೆಯನ್ನು ಪಡೆದ ಹಿಂದಿ ಹಿನ್ನೆಲೆ ಗಾಯಕರಲ್ಲಿ ಒಬ್ಬರು, ಅಲ್ಲದೆ ಅವರು ಅತ್ಯಂತ ವ್ಯಾಪಕ ಸಂಗೀತ ಸಂಗ್ರಹವನ್ನು ಹೊಂದಿದ್ದಾರೆ.[೨][೩][೪] ಅವರ ವೃತ್ತಿಜೀವನ ೧೯೪೩ರಲ್ಲಿ ಆರಂಭವಾಯಿತು ಮತ್ತು ಅದು ಆರು ದಶಕಗಳವರೆಗೂ ಮುಂದುವರೆಯಿತು. ಅವರು ಸುಮಾರು ೧೦೦೦ ಬಾಲಿವುಡ್ ಚಿತ್ರಗಳಿಗೆ ಹಿನ್ನೆಲೆ ಗಾಯನವನ್ನು ನೀಡಿದ್ದಾರೆ, ಮತ್ತ್ತು ಇತರ ಚಟುವಟಿಕೆಗಳಾಗಿ ಅವರು ಅನೇಕ ಖಾಸಗಿ ಆಲ್ಬಂಗಳ ಧ್ವನಿಮುದ್ರಣವನ್ನೂ ಮಾಡಿದ್ದಾರೆ ಮತ್ತು ಭಾರತ ಮತ್ತು ಹೊರದೇಶಗಳಲ್ಲಿ ಬಹುಸಂಖ್ಯೆಯ ಗಾನಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.[೫][೬] ಭೋಂಸ್ಲೆ ಅವರು ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್‌ರ ಸಹೋದರಿ. ಅವರ ಧ್ವನಿಗಾಗಿ ಪ್ರಸಿದ್ಧಿಯಾಗಿದ್ದರು ಮತ್ತು ಆಗಾಗ್ಗೆ ಅವರ ಸರ್ವತೋಮುಖ ಶಕ್ತಿಗಾಗಿ ಮನ್ನಣೆಗೊಳಗಾಗುತ್ತಿದ್ದರು,[೨][೭][೮] ಭೋಂಸ್ಲೆರ ಗಾಯನಗಳಲ್ಲಿ ಚಲನಚಿತ್ರ ಸಂಗೀತ, ಪಾಪ್, ಘಝಲ್‌ಗಳು, ಭಜನಗಳು, ಸಾಂಪ್ರದಾಯಕ ಭಾರತೀಯ ಶಾಸ್ತ್ರೀಯ ಸಂಗೀತ, ಜಾನಪದ ಹಾಡುಗಳು, ಕವ್ವಾಲಿಗಳು, ರಬೀಂದ್ರ ಸಂಗೀತಗಳು ಮತ್ತು ನಝ್ರುಲ್ ಗೀತೆಗಳು ಸೇರಿವೆ. ಅಸ್ಸಾಮೀ, ಹಿಂದಿ, ಉರ್ದು, ತೆಲುಗು, ಕನ್ನಡ, ಮರಾಠಿ, ಬೆಂಗಾಲಿ, ಗುಜರಾತಿ, ಪಂಜಾಬಿ, ತಮಿಳು, ಇಂಗ್ಲಿಷ್, ರಷ್ಯನ್, ಛೆಕ್, ನೇಪಾಳಿ, ಮಲೈ ಮತ್ತು ಮಲಯಾಳಂ ಸೇರಿ ಅವರು ಸುಮಾರು ೧೮ ಭಾಷೆಗಳಲ್ಲಿ ಹಾಡಿದ್ದಾರೆ.[೯] ೨೦೦೬ರಲ್ಲಿ, ಆಶಾ ಭೋಂಸ್ಲೆ ತಾವು ಸುಮಾರು ೧೨,೦೦೦ ಹಾಡುಗಳನ್ನು ಹಾಡಿದ್ದಾಗಿ ಹೇಳಿಕೆಯನ್ನು ನೀಡಿದ್ದರು,[೧೦] ಅನೇಕ ಇತರ ಮೂಲಗಳು ಸಹ ಇದೇ ಸಂಖ್ಯೆಯನ್ನೇ ಪುನರಾವರ್ತಿಸಿದವು.[೯][೧೧] ಪ್ರಪಂಚದ ಉನ್ನತ ದಾಖಲೆಗಳನ್ನು ಪ್ರಮಾಣಿಸುವ, ಅಂತರರಾಷ್ಟ್ರೀಯ ಸಂಸ್ಥೆಯಾದ ವರ್ಲ್ಡ್ ರೆಕಾರ್ಡ್ಸ್ ಅಕಾಡೆಮಿಯು, ಸೆಪ್ಟೆಂಬರ್ ೨೦೦೯ರಲ್ಲಿ ಭೋಂಸ್ಲೆಯವರನ್ನು ಪ್ರಪಂಚದಲ್ಲೇ "ಅತ್ಯಂತ ಹೆಚ್ಚಿನ ಹಾಡುಗಳನ್ನು ರೆಕಾರ್ಡಿಂಗ್ ಮಾಡಿದ ಕಲಾವಿದೆ" ಎಂದು ಗುರುತಿಸಿದೆ.[೧೨]
ಜೀವನ ಚರಿತ್ರೆ
[ಬದಲಾಯಿಸಿ]ಆಶಾ ಭೋಂಸ್ಲೆಯವರು ಬಾಂಬೆ ಪ್ರಾಂತ್ಯದ (ಈಗಿನ ಮಹಾರಾಷ್ಟ್ರದಲ್ಲಿದೆ), ಸಾಂಗ್ಲಿಯಲ್ಲಿನ ಗೋರ್ ಎಂಬ ಒಂದು ಚಿಕ್ಕ ಹಳ್ಳಿಯಲ್ಲಿ, ಮಾಸ್ಟರ್ ದೀನಾನಾಥ್ ಮಂಗೇಶ್ಕರ್ ಎಂಬ ಸಂಗೀತ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯವರು ರಂಗಭೂಮಿಯ ಕಲಾವಿದರು ಮತ್ತು ಶಾಸ್ತ್ರೀಯ ಗಾಯಕರಾಗಿದ್ದರು. ಅವರು ಒಂಬತ್ತು ವರ್ಷ ವಯಸ್ಸಿನವರಾಗಿದ್ದಾಗ ಅವರ ತಂದೆಯವರು ಮರಣ ಹೊಂದಿದರು. ಅವರ ಕುಟುಂಬವು ಪೂನಾ ದಿಂದ ಕೊಲ್ಹಾಪೂರ್‌ಗೆ ಮತ್ತು ಅಲ್ಲಿಂದ ಮುಂಬಯಿಗೆ ತೆರಳಿತು. ಅವರು ಮತ್ತು ಅವರ ಸಹೋದರಿ ಲತಾ ಮಂಗೇಶ್ಕರ್ ತಮ್ಮ ಕುಟುಂಬದ ನೆರವಿಗಾಗಿ ಹಾಡುವುದನ್ನು ಮತ್ತು ಚಲನಚಿತ್ರಗಳಲ್ಲಿ ನಟಿಸುವುದನ್ನು ಪ್ರಾರಂಭಿಸಿದ್ದರು. ಅವರು ಮಝಾ ಬಲ್ (೧೯೪೩) ಎಂಬ ಮರಾಠಿ ಚಿತ್ರಕ್ಕಾಗಿ ತಮ್ಮ ಮೊದಲ ಚಲನಚಿತ್ರ ಗೀತೆ ಚಲಾ ಚಲಾ ನವ್ ಬಲಾ ವನ್ನು ಹಾಡಿದರು. ಈ ಚಿತ್ರಕ್ಕಾಗಿ ಸಂಗೀತ ರಚನೆಯನ್ನು ದತ್ತ ದವ್ಜೇಕರ್‌ರವರು ಮಾಡಿದ್ದರು. ಹಂಸ್ರಾಜ್ ಬೆಲ್ಹ್‌ರ ಚುನಾರಿಯಾ (೧೯೪೮) ಚಿತ್ರಕ್ಕಾಗಿ ಸಾವನ್ ಆಯಾ ಗೀತೆಯನ್ನು ಹಾಡುವುದರ ಮೂಲಕ ಅವರು ಹಿಂದಿ ಚಲನಚಿತ್ರಗೀತೆಗಳನ್ನು ಹಾಡಲು ಪ್ರಾರಂಭಿಸಿದ್ದರು.[೧೩] ಅವರ ಮೊದಲ ಹಿಂದಿ ಸೋಲೋ ಹಾಡನ್ನು ರಾತ್ ಕಿ ರಾಣಿ (೧೯೪೯) ಚಿತ್ರಕ್ಕಾಗಿ ಹಾಡಿದರು. ಅವರ ೧೬ನೆಯ ವಯಸ್ಸಿನಲ್ಲಿ, ಅವರು ೩೧-ವರ್ಷ-ವಯಸ್ಸಿನ ಗಣಪತ್‌ರಾವ್ ಭೋಂಸ್ಲೆ ಜೊತೆ ಓಡಿ ಹೋಗಿ ಅವರ ಕುಟುಂಬಕ್ಕೆ ವಿರುದ್ಧವಾಗಿ ಮದುವೆಯಾದರು. ಗಣಪತ್‌ರಾವ್, ಸಹೋದರಿ ಲತಾರ ವೈಯಕ್ತಿಕ ಕಾರ್ಯದರ್ಶಿಯಾಗಿದ್ದರು. ಮದುವೆಯು ವಿಫಲವಾಯಿತು. ಅವರ ಪತಿ ಮತ್ತು ಅತ್ತೆ-ಮಾವಂದಿರಿಂದ ಅವರನ್ನು ಕೀಳಾಗಿ ಕಾಣಲಾಗಿತ್ತು. ಮದುವೆಯಾದ ಕೆಲವು ವರ್ಷಗಳ ನಂತರ, ಭೋಂಸ್ಲೆರವರು (ಸುಮಾರು ೧೯೬೦ರಲ್ಲಿ) ಸಂಶಯ ಸ್ವಭಾವದ ಗಣಪತ್‌ರಾವ್‌ರವರಿಂದ ಹೊರಹಾಕಲ್ಪಟ್ಟರು[೧೪] ಮತ್ತು ಅವರು ತಮ್ಮ ಎರಡು ಮಕ್ಕಳೊಂದಿಗೆ ಹಾಗು ಮೂರನೆಯ ಮಗು, ಆನಂದ್‌ನನ್ನು ಹೊಟ್ಟೆಯಲ್ಲಿ ಹೊತ್ತು ತವರುಮನೆಗೆ ಹೋದರು. ಅವರು ಹಣ ಸಂಪಾಧನೆ ಮಾಡಲು ಚಲನಚಿತ್ರಗಳಲ್ಲಿ ಹಾಡುವುದನ್ನು ಮುಂದುವರೆಸಿದರು. ಆ ಸಮಯದಲ್ಲಿ, ಗೀತಾ ದತ್, ಶಂಷಾದ್ ಬೇಗಮ್ ಮತ್ತು ಲತಾ ಮಂಗೇಶ್ಕರ್ (ಅವರ ಸಹೋದರಿ)ರಂತಹ ಪ್ರಖ್ಯಾತ ಹಿನ್ನೆಲೆ ಗಾಯಕಿಯರು "ನಾಯಕಿನಟಿ" ಪಾತ್ರಗಳಿಗೆ ಮತ್ತು ದೊಡ್ಡ ಮಟ್ಟದ ಚಿತ್ರಗಳಿಗೆ ಗುತ್ತಿಗೆಯನ್ನು ಮಾಡಿಕೊಂಡು ಹಾಡುತ್ತಿದ್ದರು, ಆಗ ಅವರು ತಗೆದುಕೊಳ್ಳದೆ ಬಿಟ್ಟ ಚಿತ್ರಗಳಿಗೆ ಹಾಡುವ ಅವಕಾಶವನ್ನು ಆಶಾ ಭೋಂಸ್ಲೆ ಪಡೆಯುತ್ತಿದ್ದರು: ಅವರು ಬ್ಯಾಡ್ ಗರ್ಲ್ಸ್ ಮತ್ತು ವ್ಯಾಂಪ್ಸ್‌ಗಳಿಗೆ ಹಾಡುತ್ತಿದ್ದರು, ಅಥವಾ ಎರಡನೇ ದರ್ಜೆಯ ಚಲನಚಿತ್ರಗಳಲ್ಲಿ ಹಾಡುತ್ತಿದ್ದರು. ೧೯೫೦ರ ದಶಕದಲ್ಲಿ, ಅವರು ಬಾಲಿವುಡ್‌ನಲ್ಲಿನ ಇತರ ಎಲ್ಲಾ ಹಿನ್ನೆಲೆ ಗಾಯಕರಿಗಿಂತಲೂ ಹೆಚ್ಚಿನ ಹಾಡುಗಳನ್ನು ಹಾಡಿದ್ದರು (ಲತಾರನ್ನು ಪರಿಗಣಿಸದೆ), ಇವುಗಳಲ್ಲಿ ಬಹುತೇಕ ಕಡಿಮೆ ಬಂಡವಾಳದ ಬಿ ಅಥವಾ ಸಿ-ದರ್ಜೆಯ ಚಿತ್ರಗಳೇ ಒಳಗೊಂಡಿವೆ. ಅವರ ಆರಂಭಿಕ ಹಾಡುಗಳಿಗೆ ಸಂಗೀತ ರಚನೆಯನ್ನು ಎ ಆರ್ ಖುರೇಶಿ, ಸಜ್ಜದ್ ಹುಸೇನ್ ಮತ್ತು ಗುಲಾಮ್ ಮಹಮದ್‌ರವರಿಂದ ಮಾಡಲಾಗಿತ್ತು, ಇವುಗಳಲ್ಲಿ ಬಹುತೇಕವು ಉತ್ತಮ ಸಾಧನೆಯನ್ನು ಮಾಡುವಲ್ಲಿ ವಿಫಲವಾದವು.[೧೩] ಸಜದ್ ಹುಸ್ಸೇನ್ ಸಂಗೀತ ರಚನೆಯನ್ನು ಮಾಡಿದ, ದಿಲೀಪ್ ಕುಮಾರ್-ಅಭಿನಯಿಸಿದ ಸಂಗದಿಲ್ (೧೯೫೨) ಚಿತ್ರದಲ್ಲಿ ಹಾಡುವದರೊಂದಿಗೆ ಅವರಿಗೆ ಸಮರ್ಥನೀಯ ಮನ್ನಣೆಯು ದೊರೆಯಿತು. ಪರಿಣಾಮವಾಗಿ, ಚಿತ್ರ ನಿರ್ದೇಶಕ ಬಿಮಲ್ ರಾಯ್ ಭೋಂಸ್ಲೆರವರಿಗೆ ಪರಿಣೀತ (೧೯೫೩) ಚಿತ್ರದಲ್ಲಿ ಹಾಡುವ ಅವಕಾಶವನ್ನು ನೀಡಿದ್ದರು. ಅವರು ಬೂಟ್ ಪಾಲಿಷ್ (೧೯೫೪) ಚಿತ್ರಕ್ಕಾಗಿ ಮೊಹಮದ್ ರಫಿರ ಜೊತೆಯಲ್ಲಿ ನನ್ನೆ ಮುನ್ನೆ ಬಚ್ಚೆ ಗೀತೆಯನ್ನು ಹಾಡುವ ಒಪ್ಪಂದವನ್ನು ರಾಜ್ ಕಪೂರ್ ಮಾಡಿಕೊಂಡಿದ್ದರು, ಇದು ಅತ್ಯಂತ ಜನಾಧರಣೆಯನ್ನು ಗಳಿಸಿತ್ತು. ಒ. ಪಿ. ನಾಯರ್ ಸಿ.ಐ.ಡಿ. (೧೯೫೬) ಚಿತ್ರದಲ್ಲಿ ಹಾಡುವ ಅವಕಾಶ ನೀಡುವುದರ ಮೂಲಕ ಆಶಾ ಭೋಂಸ್ಲೆಯ ಜೀವನದಲ್ಲಿ ಮಹತ್ತರವಾದ ತಿರುವನ್ನು ನೀಡಿದ್ದರು. ಅವರು ತಮ್ಮ ಮೊದಲ ಸಾಧನೆಯನ್ನು ಗಳಿಸಿದ್ದು ಬಿ. ಆರ್. ಚೋಪ್ರರವರ, ತಾವೇ ಸಂಗೀತ ರಚನೆಯನ್ನು ಮಾಡಿದ ನಯಾ ದೌರ್ (೧೯೫೭) ಚಿತ್ರದಲ್ಲಿ. ರಫಿ ರವರ ಜೊತೆಗಿನ, ಸಹಿರ್ ಲುಧಿಯಾನ್ವಿರವರಿಂದ ಬರೆಯಲಾದ, ಮಾಂಗ್ ಕೆ ಸಾತ್ ತುಮ್ಹಾರ , ಸಾತಿ ಹಾತ್ ಬಡಾನಾ ಮತ್ತು ಉಡೆನ್ ಜಬ್ ಜಬ್ ಝುಲ್ಫೇನ್ ತೆರಿ ಗಳಂತಹ ಜೋಡಿ ಹಾಡುಗಳು ಅವರಿಗೆ ಮನ್ನಣೆಯನ್ನು ಗಳಿಸಿ ಕೊಟ್ಟವು. ಅವರು ಖ್ಯಾತ ನಟರಿಗೆ ಗೀತೆಗಳನ್ನು ಹಾಡುವ ಅವಕಾಶವನ್ನು ಪಡೆದದ್ದು ಇದೇ ಮೊದಲ ಬಾರಿಯಾಗಿತ್ತು. ನಯಾ ದೌರ್ ಚಿತ್ರದ ನಿರ್ಮಾಪಕ ಬಿ ಆರ್ ಚೋಪ್ರ, ಅವರ ಪ್ರತಿಭೆಯನ್ನು ಗುರುತಿಸಿ ತಮ್ಮ ಮುಂದಿನ ಅನೇಕ ಚಿತ್ರಗಳಿಗೆ ಹಾಡುವ ಒಪ್ಪಂದವನ್ನು ಅವರೊಂದಿಗೆ ಮಾಡಿಕೊಂಡಿದ್ದರು, ಇವುಗಳಲ್ಲಿ ವಕ್ತ್ ಮತ್ತು ಗುಮ್ರಾಹ್ , ಹಮ್ರಾಝ್, ಆದ್ಮಿ ಔರ್ ಇನ್ಸಾನ್ , ಡೂಂಡ್ ಮುಂತಾದವುಗಳು ಸೇರಿವೆ. ಭೋಂಸ್ಲೆ ಜೊತೆಗಿನ ನಯ್ಯರ್‌ರ ಸಹಭಾಗಿತ್ವವು ಸಹ ಅನೇಕ ಜನಪ್ರಿಯ ಹಾಡುಗಳನ್ನು ನಿರ್ಮಿಸಿದೆ. ಕ್ರಮೇಣವಾಗಿ, ಅವರು ತಮ್ಮ ನೆಲೆಯನ್ನು ಸ್ಥಾಪಿಸಿಕೊಂಡರು ಮತ್ತು ಸಚಿನ್ ದೇವ್ ಬರ್ಮನ್ ಮತ್ತು ರವಿ ಯಂತಹ ಸ್ವರ ಸಂಯೋಜಕರ ಪ್ರೋತ್ಸಾಹವನ್ನು ಸಹ ಗಳಿಸಿದ್ದರು. ಭೋಂಸ್ಲೆ ಮತ್ತು ನಯ್ಯರ್ ೧೯೭೦ರ ದಶಕದಲ್ಲಿ ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ದೂರವಾದರು. ೧೯೬೬ರಲ್ಲಿ, ಸಂಗೀತ ನಿರ್ದೇಶಕ ಆರ್ ಡಿ ಬರ್ಮನ್‌ರ ಮೊದಲ ಸಾಧನೆಯನ್ನು ಕಂಡ ಚಿತ್ರ, ತೀಸ್ರಿ ಮಂಝಿಲ್ ನಲ್ಲಿನ ಆಶಾರ ಸಾಧನೆಯು ಜನಪ್ರಿಯತೆಯನ್ನು ಪಡೆಯಿತು. ಆಶಾ ಮೊದಲ ಭಾರಿಗೆ ಆಜಾ ಆಜಾ ಹಾಡಿನ ರಾಗವನ್ನು ಕೇಳಿದಾಗ, ಪಾಶ್ಚಿಮಾತ್ಯ ನೃತ್ಯದ ಎಣಿಕೆಯನ್ನು ಹಾಡಲು ತಮ್ಮಿಂದ ಸಾಧ್ಯವಿಲ್ಲ ಎಂದು ಭಾವಿಸಿ ಅವರು ಅದನ್ನು ಬಿಟ್ಟುಬಿಟ್ಟಿದ್ದರು. ಆರ್ ಡಿ ಬರ್ಮನ್ ಸಂಗೀತವನ್ನು ಬದಲಿಸುವ ಪ್ರಸ್ತಾಪನೆಯನ್ನು ಮಾಡಿದ್ದರು. ಅವರಿಗೆ ಸ್ವಲ್ಪ ಮಟ್ಟಿಗೆ ಮನಸ್ಸಿಗೆ ನೋವಾಗಿತ್ತು, ಮತ್ತು ಅವರು ಆ ಹಾಡನ್ನು ಹಾಡುವುದು ಒಂದು ಸವಾಲಾಗಿ ಪರಿಗಣಿಸಿ ಕೈಗೆತ್ತಿಕೊಂಡರು. ೧೦ ದಿನಗಳ ಸತತ ಅಭ್ಯಾಸದ ನಂತರ, ಅವರು ಹಾಡನ್ನು ಅಂತಿಮವಾಗಿ ಹಾಡಿದಾಗ, ಅದರಿಂದ ಪ್ರಭಾವಗೊಂಡ ಆರ್ ಡಿ ಬರ್ಮನ್ ಅವರು ೧೦೦-ರೂಪಾಯಿಗಳ ನೋಟನ್ನು ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಆಜಾ ಆಜಾ ಮತ್ತು ಚಲನಚಿತ್ರದ ಇತರ ಹಾಡುಗಳು, ಓ ಹಸೀನಾ ಝುಲ್ಫೋನ್‌ವಾಲಿ ಮತ್ತು ಓ ಮೇರ ಸೋನಾ ರೆ (ಎಲ್ಲಾ ಮೂರು ಬಾಲಿವುಡ್‌ನ ಮತ್ತೊಂದು ಪ್ರಸಿದ್ಧ ಗಾಯಕ, ರಫಿ ಅವರೊಂದಿಗಿನ ಜೋಡಿ ಹಾಡುಗಳು), ಆ ದಿನದ ಅಬ್ಬರದ ಹಾಡಾಯಿತು. ಚಲನಚಿತ್ರ ನಟ, ಶಮ್ಮಿ ಕಪೂರ್, ಒಂದು ಸಲ ಹೇಳಿದ್ದರು - "ಒಂದು ವೇಳೆ ನನಗಾಗಿ ಹಾಡಲು ಮಹಮದ್ ರಫಿ ಇಲ್ಲದಿದ್ದರೆ, ಈ ಕೆಲಸ ಮಾಡಲು ಆಶಾ ಭೋಂಸ್ಲೆರನ್ನು ಆರಿಸಿಕೊಳ್ಳುತ್ತಿದ್ದೆ". ಆರ್ ಡಿ ಬರ್ಮನ್ ಸಹಭಾಗಿತ್ವದೊಂದಿಗಿನ ಆಶಾರ ಸಹಭಾಗಿತ್ವವು ೧೯೭೦ರ ದಶಕದಲ್ಲಿ ಅನೇಕ ಜನಪ್ರಿಯ ಹಾಡುಗಳ ನಿರ್ಮಾಣವನ್ನು ಮಾಡಿತು ಮತ್ತು ಇದು ಮುಂದೆ ಮದುವೆಗೆ ಕಾರಣವಾಯಿತು. ೧೯೬೦ರ ಮತ್ತು ೧೯೭೦ರ ದಶಕಗಳಲ್ಲಿ, ಇವರು ಬಾಲಿವುಡ್‌ನ ಅತ್ಯಂತ ಪ್ರಸಿದ್ಧ ನರ್ತಕಿ, ಹೆಲೆನ್ ಹಾಡುಗಳಿಗೆ ಧ್ವನಿಯಾದರು. ಅವರ ಧ್ವನಿ ಮುದ್ರಣ ಕಾರ್ಯಕ್ರಮಗಳಿಗೆ ಹೆಲೆನ್ ಹಾಜರಾದರೆ ಆದ್ದರಿಂದ ಅವರು ಹಾಡನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಮತ್ತು ಅದಕ್ಕೆ ತಕ್ಕಂತೆ ನೃತ್ಯದ ಹಂತಗಳನ್ನು ಯೋಜಿಸಬಹುದು ಎಂದು ಹೇಳಲಾಗಿತ್ತು.[೧೫] ಆಶಾ ಭೋಂಸ್ಲೆ-ಹೆಲೆನ್‌ರ ಕೆಲವು ಪ್ರಸಿದ್ಧ ಹಾಡುಗಳು ಪಿಯಾ ತೂ ಅಬ್ ತೊ ಆಜಾ (ಕಾರವಾನ್ ), ಓ ಹಸೀನಾ ಝುಲ್ಫೋನ್ ವಾಲಿ (ತೀಸ್ರಿ ಮಂಝಿಲ್ ), ಮತ್ತು ಏ ಮೇರಾ ದಿಲ್ (ಡಾನ್ ). ೧೯೮೦ರ ದಶಕದ ವೇಳೆಗೆ, ಆಶಾ ಭೋಂಸ್ಲೆ "ಕ್ಯಾಬರೆ ಗಾಯಕಿ" ಮತ್ತು "ಪಾಪ್ ಕ್ರೂನರ್" ಎಂದು ಸ್ಥಿರವಾದ ಗುರುತ್ವವನ್ನು ಪಡೆದರು. ರೇಖಾ-ನಟಿಸಿದ ಉಮ್ರಾವೊ ಜಾನ್ ಚಿತ್ರದಲ್ಲಿ, ದಿಲ್ ಚೀಝ್ ಕ್ಯಾ ಹೈ , ಇನ್ ಆಂಕೋ ಕಿ ಮಸ್ತಿ ಕೆ , ಎ ಕ್ಯಾ ಜಗಾ ಹೈ ದೋಸ್ತೊ ಮತ್ತು ಜುಸ್ತ್‌ಜು ಜಿಸ್ಕಿ ಥಿ ಗಳಂತಹ ಘಝಲ್‌ಗಳನ್ನು ಹಾಡುವುದರ ಮೂಲಕ ಅವರು ತನ್ನ ಬಹುಮುಖ ಸಾಮರ್ಥ್ಯವನ್ನು ದೃಢಪಡಿಸಿದ್ದಾರೆ. ಸಂಗೀತ ನಿರ್ದೇಶಕ ಖಯ್ಯಾಮ್, ಆಶಾರ ಹಾಡುವ ಫಿಚ್‌ನ್ನು ಅರ್ಧ ನೋಟ್ (ಸ್ವರಚಿಹ್ನೆ)ನಷ್ಟು ಕಡಿಮೆಮಾಡಿದ್ದಾರೆ. ಆಶಾ ತಾನು ಅಷ್ಟು ವಿಭಿನ್ನವಾಗಿ ಹಾಡಬೆಲ್ಲೆನಾ ಎಂದು ತಾನೇ ಆಶ್ಚರ್ಯಚಕಿತಳಾದಳು. ಘಝಲ್‌ಗಳು ಅವಳಿಗೆ ತನ್ನ ವೃತ್ತಿ ಜೀವನದ ಮೊದಲ ರಾಷ್ಟ್ರೀಯ ಪ್ರಶಸ್ತಿಯನ್ನು ತಂದುಕೊಟ್ಟಿವೆ. ಕೆಲವು ವರ್ಷಗಳ ನಂತರ, ಇಜಾಝತ್ (೧೯೮೭) ಚಿತ್ರದ ಮೇರಾ ಕುಚ್ ಸಮಾನ್ ಹಾಡಿಗಾಗಿ ಅವರು ಮತ್ತೊಂದು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡರು. ೧೯೯೫ರಲ್ಲಿ, ೬೨-ವರ್ಷ-ವಯಸ್ಸಿನ ಆಶಾ ಭೋಂಸ್ಲೆ ರಂಗೀಲಾ ಚಿತ್ರದಲ್ಲಿ ಕಿರಿಯ ನಟಿ ಊರ್ಮಿಳಾ ಮಾತೋಂಡ್ಕರ್ ಅವರಿಗೆ ಹಿನ್ನೆಲೆ ಗಾಯನವನ್ನು ನೀಡಿದ್ದರು. ಅವಳಿಂದ ಹಾಡಲ್ಪಟ್ಟ ತನ್ಹಾ ತನ್ಹಾ ಮತ್ತು ರಂಗೀಲಾ ರೇ ಗಳಂತಹ ಧ್ವನಿವಾಹಿನಿ ವಿಶೇಷಗುಣಲಕ್ಷಣ ಹಾಡುಗಳಿಗೆ, ಸಂಗೀತ ರಚನೆಯನ್ನು ಸಂಗೀತ ನಿರ್ದೇಶಕರಾದ ಎ. ಆರ್. ರೆಹಮಾನ್‌ರವರಿಂದ ನೀಡಲಾಗಿದ್ದು, ಅವರು ಅವಳೊಂದಿಗೆ ಇನ್ನೂ ಅನೇಕ ಹಾಡುಗಳ ರಚನೆಯನ್ನು ಮಾಡಿದ್ದಾರೆ. ತಡವಾಗಿ ೨೦೦೫ರಲ್ಲಿ, ೭೨-ವರ್ಷ-ವಯಸ್ಸಿನ ಆಶಾ ಭೋಂಸ್ಲೆ ತಮಿಳು ಚಿತ್ರ ಚಂದ್ರಮುಖಿ ಗಾಗಿ ಹಾಡಿದ ಹಾಡುಗಳು ಮತ್ತು ಸಲ್ಮಾನ್ ಖಾನ್-ಅಭಿನಯಿಸಿದ ಲಕ್ಕಿ ಚಿತ್ರಕ್ಕಾಗಿ ಹಾಡಿದ ಪಾಪ್ ಗಾಯನಗಳು ಅತ್ಯಂತ ಹೆಚ್ಚಿನ ಮಾರಾಟವನ್ನು ಕಂಡ ದ್ವನಿಮುದ್ರಣಗಳಾಗಿದ್ದವು. ಭೋಂಸ್ಲೆರವರಿಂದ ಹಾಡಾಲ್ಪಟ್ಟ ಇತರ ಕೆಲವು ತಮಿಳು ಹಾಡುಗಳೆಂದರೆ ಓಹ್! ಬಟರ್‌ಪ್ಲೈ , ಸೆಪ್ಟೆಂಬರ್ ಮಾಧಮ್ ಮತ್ತು ವೆನ್ನಿಲಾ ವೆನ್ನಿಲಾ . ಅಕ್ಟೋಬರ್ ೨೦೦೪ರಲ್ಲಿ, ೧೯೬೬-೨೦೦೩ರಲ್ಲಿ ಬಿಡುಗಡೆಯಾದ ಆಲ್ಬಂಗಳಿಗೆ ಮತ್ತು ಬಾಲಿವುಡ್ ಚಿತ್ರಗಳಿಗೆ ಭೋಂಸ್ಲೆರವರಿಂದ ಹಾಡಲ್ಪಟ್ಟ ಹಾಡುಗಳ ಸಂಕಲನ ಆಲ್ಬಂ ದಿ ವೆರೀ ಬೆಸ್ಟ್ ಆಫ್ ಆಶಾ ಭೋಂಸ್ಲೆ, ದಿ ಕ್ವೀನ್ ಆಫ್ ಬಾಲಿವುಡ್ ನ ದ್ವನಿಮುದ್ರಣವನ್ನು ಮಾಡಲಾಯಿತು.
ಸಂಗೀತ ನಿರ್ದೇಶಕರೊಂದಿಗಿನ ಸಹಭಾಗಿತ್ವ
[ಬದಲಾಯಿಸಿ]- ಒ.ಪಿ. ನಯ್ಯರ್
ಆಶಾ ಭೋಂಸ್ಲೆ ರವರೊಂದಿಗಿನ ಸಂಗೀತ ನಿರ್ದೇಶಕ ಒ. ಪಿ. ನಯ್ಯರ್ರ ಒಡನಾಟವು ಬಾಲಿವುಡ್ ವಿದ್ವತ್ತಿನ ಭಾಗವಾಗಿದೆ. ಅವರು ಒಬ್ಬ ಸ್ವರ ಸಂಯೋಜಕರಾಗಿದ್ದು ಆಶಾ ರವರಿಗೆ ತಮ್ಮದೇ ಆದ ವಿಶಿಷ್ಟ ಗುರುತನ್ನು ನೀಡಿದವರಲ್ಲಿ ಮೊದಲಿಗರಾಗಿದ್ದರು. ಅನೇಕ ಜನರು ಇವರಿಬ್ಬರ ನಡುವಿನ ಪ್ರಣಯ ಸಂಬಂಧದ ಬಗ್ಗೆ ಅನೇಕ ಊಹಾಪೋಹಗಳನ್ನು ಹೊರಡಿಸಿದ್ದರು. ನಯ್ಯರ್ ಆಶಾರನ್ನು ಮೊದಲ ಭಾರಿಗೆ ಭೇಟಿಯಾಗಿದ್ದು ೧೯೫೨ರಲ್ಲಿನ, ಚಮ್ ಚಮಾ ಚಮ್ ಹಾಡಿನ ಸಂಗೀತ ಮುದ್ರಣದ ಸಮಯದಲ್ಲಿ.[೧೬] ಮೊದಲ ಭಾರಿಗೆ ಅವರು ಅವಳನ್ನು ಮಾಂಗು (೧೯೫೪) ಚಿತ್ರಕ್ಕಾಗಿ ಕರೆದಿದ್ದರು, ಮತ್ತು ನಂತರ ಸಿಐಡಿ (೧೯೫೬) ಚಿತ್ರದ ಮೂಲಕ ಅವರ ವೃತ್ತಿಜೀವನಕ್ಕೆ ಒಂದು ಹೊಸಾ ತಿರುವನ್ನು ನೀಡಿದ್ದರು. ಅದಾಗ್ಯೂ, ಇದು ನಯಾ ದೌರ್ (೧೯೫೭) ಚಿತ್ರದ ಸಾಧನೆಯಾಗಿತ್ತು, ಅದು ಈ ಜೋಡಿಯನ್ನು ಬಹಳ ಜನಪ್ರಿಯಗೊಳಿಸಿತ್ತು. ೧೯೫೯ರ ನಂತರ, ಅವರು ಭಾವನಾತ್ಮಕವಾಗಿ ಮತ್ತು ವೃತ್ತಿಪರವಾಗಿ ನಯ್ಯರ್‌ಜೊತೆ ತಮ್ಮನ್ನು ತೊಡಗಿಸಿಕೊಂಡರು. ಒ.ಪಿ. ನಯ್ಯರ್ ಮತ್ತು ಆಶಾ ಭೋಂಸ್ಲೆಯವರ ಜೋಡಿಯು ತಂಗಾಳಿಯಂತಹ ಹಾಗೂ ಮಧುರವಾದ ಹಾಡುಗಳಿಂದ ನೆನಪಿನಲ್ಲಿ ಉಳಿಯುವಂತಹದ್ದಾಗಿದೆ ಅದಕ್ಕೆ ಉತ್ತಮ ಉದಾಹರಣೆಗಳು ಎಂದರೆ ಆಯಿಯೇ ಮೆಹರಬಾನ್ ಇದರಲ್ಲಿ ಮಧುಬಾಲಾ ಅವರು ಅಭಿನಯಿಸಿದ್ದಾರೆ (ಹೌರಾ ಬ್ರಿಡ್ಜ್ , ೧೯೫೮) ಹಾಗೂ ಮಮ್ತಾಝ್ ಅವರು ಅಭಿನಯಿಸಿರುವ ಯೇ ಹೈ ರೇಷ್ಮಿ ಝುಲ್ಫೋಂ ಕಾ ಅಂಧೇರಾ (ಮೇರೆ ಸನಂ ,೧೯೬೫). ನಯಾ ದೌರ್ (೧೯೫೭), ತುಮ್ಸಾ ನಹೀ ದೇಖಾ (೧೯೫೭), ಹೌರಾ ಬ್ರಿಡ್ಜ್ (೧೯೫೮), ಏಕ್ ಮುಸಾಫಿರ್ ಏಕ್ ಹಸೀನಾ (೧೯೬೨), ಕಾಶ್ಮೀರ್ ಕಿ ಕಲಿ (೧೯೬೪), ಮುಂತಾದವುಗಳಂತಹ ಉತ್ತಮ ಚಿತ್ರಗಳಲ್ಲಿ ಹಾಡುಗಳಿಗೆ ಧ್ವನಿ ನೀಡಿದ್ದಾರೆ. ಅವುಗಳಲ್ಲಿ ಕೆಲವು ಜನಪ್ರಿಯ ಹಾಡುಗಳೆಂದರೆ ಆವೋ ಹುಝೂರ್ ತುಮ್ಕೊ (ಕಿಸ್ಮತ್ ), ಜಾಯಿಯೇ ಆಪ್ ಕಹಾ (ಮೇರೇ ಸನಮ್ ) ಮುಂತಾದವು. ಒ.ಪಿ. ನಯ್ಯರ್ ಅವರು ತಮ್ಮ ಜನಪ್ರಿಯ ಜೋಡಿಗೀತೆಗಳಲ್ಲಿ ಆಶಾ ಭೋಂಸ್ಲೆ-ಮೊಹಮ್ಮದ್ ರಫಿಯವರಿಂದ ಹಾಡಿಸುತ್ತಿದ್ದರು. ಅದರಲ್ಲಿ ಕೆಲವು ಹೀಗಿವೆ ಉಡೇ ಜಬ್ ಜಬ್ ಝುಲ್ಫೇ ತೇರಿ (ನಯಾ ದೌರ್ ). ಮೈ ಪ್ಯಾರ್ ಕಾ ರಹೀ ಹ್ಞೂ (ಎಕ್ ಮುಸಾಫಿರ್ ಎಕ್ ಹಸೀನಾ ), ದೀವಾನಾ ಹುವಾ ಬಾದಲ್ , ಇಶಾರೋ ಹಿ ಇಶಾರೋ ಮೆ (ಕಶ್ಮೀರ್ ಕಿ ಕಲಿ ) ಇತ್ಯಾದಿ. ಆಶಾ ಪ್ರಾಣ್ ಜಾಯೇ ಪರ್ ವಚನ್ ನಾ ಜಾಯೆ (೧೯೭೪) ಚಿತ್ರದಲ್ಲಿ ಒ.ಪಿ.ನಯ್ಯರ್‌ರವರೊಂದಿಗಿನ ತಮ್ಮ ಕೊನೆಯ ಹಾಡಿನ ಮುದ್ರಣವನ್ನು ಮಾಡಿದ್ದರು. ಒಂಟಿಯಾಗಿ ಹಾಡಿದ್ದ ಚೈನ್ ಸೆ ಹಾಡು ಅನೇಕ ಪ್ರಶಸ್ತಿಗಳನ್ನು ಪಡೆಯಿತು, ಆದರೆ ಇದನ್ನು ಯಾವುದೇ ಚಿತ್ರದಲ್ಲಿ ಸೇರಿಸಿಲ್ಲ. ಅವರು ಆಗಸ್ಟ್ ೫, ೧೯೭೨ರಂದು ಬೇರೆಯಾದರು. ಅವರು ಯಾವ ಕಾರಣಕ್ಕೆ ಬೇರೆಯಾದರು ಎಂದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಅವರು ಬೇರೆಯಾಗಿದ್ದಕ್ಕೆ ಕಾರಣವನ್ನು ಕೇಳಿದಾಗ, ಒ ಪಿ ನಯ್ಯರ್ ಒಂದು ಸಲ ಹೇಳಿದ್ದು , "ನನಗೆ ಜ್ಯೋತಿಷ್ಯ ಚೆನ್ನಾಗಿ ಗೊತ್ತು. ನಾನು ಒಂದು ದಿನ ಅವಳಿಂದ ದೂರ ಸರಿಯಬೇಕೆಂದು ನನಗೆ ಗೊತ್ತಿತ್ತು. ಯಾವುದೋ ಒಂದು ಘಟನೆ ಸಹ ನಡೆಯಿತು, ಅದು ನನ್ನನ್ನು ನೋಯಿಸಿತು, ಆದ್ದರಿಂದ ನಾನು ಅವಳಿಂದ ದೂರವಾದೆ."[೧೬] ಅದಾಗ್ಯೂ, ಅವರು ಇದನ್ನು ಸಹ ಹೇಳಿದ್ದರು "...ಈಗ ನನಗೆ ಎಪ್ಪತ್ತಾರು ವರ್ಷ ವಯಸ್ಸು, ನನ್ನ ಜೀವನದಲ್ಲಿ ಅತ್ಯಂತ ಮುಖ್ಯವಾದ ವ್ಯಕ್ತಿ ಎಂದರೆ ಅದು ಆಶಾ ಭೋಂಸ್ಲೆ ಎಂದು ನಾನು ಹೇಳಬಲ್ಲೆ. ನಾನು ಇಲ್ಲಿಯವರಿಗೂ ಬೇಟಿಯಾದವರಲ್ಲಿ ಅವಳೇ ಅತ್ಯುತ್ತಮ ವ್ಯಕ್ತಿ." ಆಶಾ ಭೋಂಸ್ಲೆ ಮತ್ತು ಒ.ಪಿ.ನಯ್ಯರ್‌ರ ಅಗಲಿಕೆಯು ಕಹಿಯಿಂದ ಕೂಡಿತ್ತು, ಮತ್ತು ಬಹುಶಃ ಆದ್ದರಿಂದಲೇ ಅವರು ನಯ್ಯರ್‌ರ ಬಾಕಿಯನ್ನು ನೀಡಲು ಹಿಂಜರಿದಿರಬಹುದು. ದಿ ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಒಂದು ಸಂದರ್ಶನದಲ್ಲಿ ಒ.ಪಿ.ನಯ್ಯರ್‌ರನ್ನು ಕುರಿತು ಮಾತನಾಡುವಾಗ, ಅವರು ಒಂದು ಸಲ ಹೇಳಿದ್ದು - "ಯಾವುದೇ ಸ್ವರ ಸಂಯೋಜಕರು ನನಗೆ ಕೆಲಸ ಕೊಟ್ಟಿದ್ದರೂ, ಆ ಸಮಯದಲ್ಲಿ ನನ್ನ ಧ್ವನಿ ಅವರ ಸಂಗೀತಕ್ಕೆ ಹೊಂದುತ್ತಿದ್ದುದೇ ಅದಕ್ಕೆ ಕಾರಣ. ನನಗೆ ಅವರ ಹಾಡುಗಳಿಗೆ ಹಾಡುವ ಅವಕಾಶವನ್ನು ನೀಡುವುದರ ಮೂಲಕ ಯಾವ ಒಬ್ಬ ಸಂಗೀತಗಾರನೂ ನನಗೆ ಯಾವುದೇ ರೀತಿ ಉಪಕಾರ ಮಾಡಿಲ್ಲ ."[೧೭] ಅವರು ತನ್ನ ವೃತ್ತಿ ಜೀವನದಲ್ಲಿ ಮಹತ್ತರವಾದ ತಿರುವನ್ನು ನೀಡಿದ್ದ ಹೆಗ್ಗಳಿಕೆಯನ್ನು ನಯಾ ದೌರ್ ಚಿತ್ರದ ನಿರ್ಮಾಪಕರಾದ ಬಿ. ಆರ್. ಚೋಪ್ರಾಗೆ ನೀಡಿದ್ದರು.
- ಖಯ್ಯಮ್
ಭೋಂಸ್ಲೆರ ಪ್ರತಿಭೆಯನ್ನು ಆರಂಭದಲ್ಲೇ ಗುರುತಿಸಿದ ಮತ್ತೊಬ್ಬ ಸಂಗೀತ ನಿರ್ದೇಶಕ ಖಯ್ಯಮ್‌ರವರು. ಅವರು ಅವರ ಮೊದಲ ಚಿತ್ರ ಬಿವಿ (೧೯೪೮) ಯಿಂದಲೇ ಆಶಾ ಭೋಂಸ್ಲೆ ಜೊತೆ ಕಾರ್ಯನಿರ್ವಹಿಸಲು ಆರಂಭಿಸಿದ್ದರು. ೧೯೫೦ರ ದಶಕದಲ್ಲಿ ಖಯ್ಯಮ್ ಅವಳಿಗೆ ಕೆಲವು ಉತ್ತಮ ಚಿತ್ರಗಳಿಗೆ ಕೆಲಸಮಾಡುವ ಅವಕಾಶವನ್ನು ನೀಡಿದ್ದರು, ಅವುಗಳಲ್ಲಿ ದರ್ದ್ ಮತ್ತು ಫಿರ್ ಸುಬಹ ಹೋಗಿ ಸೇರಿವೆ. ಈ ಜೋಡಿಯನ್ನು ಮುಖ್ಯವಾಗಿ ಉಮ್ರಾವೊ ಜಾನ್ ಹಾಡುಗಳಿಂದಾಗಿ ನೆನೆಯಲಾಗುತ್ತಿತ್ತು
- ರವಿ
ಸ್ವರ ಸಂಯೋಜಕ ರವಿ ಆಶಾರನ್ನು ತನ್ನ ಅಚ್ಚುಮೆಚ್ಚಿನ ಗಾಯಕರಲ್ಲಿ ಒಬ್ಬರನ್ನಾಗಿ ಪರಿಗಣಿಸಿದ್ದರು. ಆಶಾ ಅವರ ಮೊದಲ ಚಿತ್ರ ವಚನ್ (೧೯೫೫)ಗಾಗಿ ಹಾಡಿದ್ದರು. ಚಂದಮಾಮ ದೂರ್ ಕೆ ಚಿತ್ರದ, ಮಧುರವಾದ ಲುಲಬಾಯ್, ಒಂದೇ ರಾತ್ರಿಯಲ್ಲಿ ಭಾರತದ ಯೌವ್ವನ ತಾಯಂದಿರ ಅತೀಮೆಚ್ಚುಗೆಯ ಹಾಡಾಯಿತು. ಅವಳಿಗೆ ಘರಾನ , ಗ್ರೀಹಸ್ತಿ , ಕಾಜಲ್ ಮತ್ತು ಫೂಲ್ ಔರ್ ಪತ್ತರ್ ಚಿತ್ರಗಳಿಗಾಗಿ ಭಜನೆಗಳನ್ನು ಹಾಡುವ ಅವಕಾಶವನ್ನು ರವಿ ನೀಡಿದ್ದರು, ಆ ಸಮಯದಲ್ಲಿ ಬಹುತೇಕ ಸ್ವರ ಸಂಯೋಜಕರು ತಾವು ವ್ಯಾಂಪ್ಸ್‌ನಲ್ಲಿ ಅಥವಾ ಸಹ ನಟಿಯಂದಿರೊಂದಿಗೆ ಬಿ-ದರ್ಜೆಯ ಹಾಡುಗಳನ್ನು ಚಿತ್ರೀಕರಿಸುವಾಗ ಮಾತ್ರ ಅವಳನ್ನು ನೆನೆಸಿಕೊಳ್ಳುತ್ತಿದ್ದರು. ರವಿ ಮತ್ತು ಆಶಾ ಭೋಂಸ್ಲೆ ಅನೇಕ ವಿಭಿನ್ನ ಹಾಡುಗಳ ಧ್ವನಿ ಮುದ್ರಣವನ್ನು ಮಾಡಿದ್ದಾರೆ, ಅವುಗಳಲ್ಲಿ ಕಿಶೋರ್ ಕುಮಾರ್ ಜೊತೆಗಿನ ಜನಪ್ರಿಯ ಹಾಸ್ಯ ಜೋಡಿಹಾಡು - ಸಿ ಎ ಟಿ... ಕ್ಯಾಟ ಮಾನೆ ಬಿಲ್ಲಿ (ದಿಲ್ಲಿ ಕಾ ಥಗ್ ) ಸೇರಿದೆ. ತೊರಾ ಮನ್ ದರ್ಪನ್ (ಕಾಜಲ್ ) ಭಜನೆಯನ್ನು ಆಶಾ ಭೋಂಸ್ಲೆರ ಅತ್ಯುತ್ತಮ ಗಾಯನಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಇವರು ಆಶಾ ಅವರ ಜೊತೆಗೆ ಹಲವಾರು ಜನಪ್ರಿಯ ಚಲನಚಿತ್ರಗಳನ್ನು ಕೂಡಾ ಧ್ವನಿಮುದ್ರಣ ಮಾಡಿದ್ದಾರೆ ಅವೆಂದರೆ ವಖ್ತ್ , ಚೌದವೀ ಕಾ ಚಾಂದ್ , ಗುಮ್ರಾಹ್ , ಬಹು ಬೇಟಿ , ಚೈನಾ ಟೌನ್ , ಆದ್ಮೀ ಔರ್ ಇನ್ಸಾನ್ , ಡೂಂಡ್ , ಹಮ್ರಾಝ್ , ಹಾಗೂ ಕಾಜಲ್ . ಚೌದವೀ ಕಾ ಚಾಂದ್ ಗಾಗಿ ರವಿಯವರು ಗೀತಾ ದತ್ (ಗುರು ದತ್‌ರ ಪತ್ನಿ ) ಅವರನ್ನು ಹಾಡಲು ಕೇಳಿಕೊಂಡಿದ್ದರು. ಆಕೆಯು ಹಾಡದಿದ್ದಾಗ, ಗುರುದತ್ ಅವರು ಆಶಾ ಭೋಂಸ್ಲೆಯವರಿಂದ ಹಾಡಿಸಲು ಸೂಚಿಸಿದ್ದರು.[೧೩]
- ಸಚಿನ್ ದೇವ್ ಬರ್ಮನ್
ಬಾಲಿವುಡ್‌ನ ಪ್ರಖ್ಯಾತ ಸಂಗೀತಕಾರರಲ್ಲೊಬ್ಬರಾದ, ಸಚಿನ್ ದೇವ್ ಬರ್ಮನ್ ಹಾಗೂ ಅವರಿಗೆ ಇಷ್ಟವಾದ ಗಾಯಕಿ, ಲತಾ ಮಂಗೇಶ್ಕರ್ ಅವರ ಜೊತೆ ೧೯೫೭ ರಿಂದ ೧೯೬೨ರ ಸಮಯದವರೆಗೆ ಯಾವುದೋ ಕಾರಣಕ್ಕೆ ಮನಸ್ತಾಪ ಉಂಟಾಗಿತ್ತು.[೧೮] ಆ ಸಮಯದಲ್ಲಿ ಎಸ್ ಡಿ ಬರ್ಮನ್ ಅವರು ಉತ್ತಮ ಗಾಯಕಿಯಾಗಿದ್ದ ಆಶಾ ಭೋಂಸ್ಲೆಯವರಿಂದ ಹಾಡುಗಳನ್ನು ಹಾಡಿಸಿದರು. ಆಕೆ ಮತ್ತು ಎಸ್ ಡಿ ಬರ್ಮನ್ ಅವರ ಜೋಡಿಯು ಕೆಲವು ಉತ್ತಮ ಚಿತ್ರಗಳಿಗೆ ಸಂಗೀತ ನೀಡಿತು ಅವೆಂದರೆ ಕಾಲಾ ಪಾನಿ , ಕಾಲಾ ಬಝಾರ್ , ಇನ್ಸಾನ್ ಜಾಗ್ ಉಠಾ , ಲಾಜವಂತಿ , ಸುಜಾತಾ ಹಾಗೂ ತೀನ್ ದೇವಿಯಾ (೧೯೬೫). ಅವರು ೧೯೬೨ರ ನಂತರವೂ ಹಲವಾರು ಹಾಡುಗಳನ್ನು ಧ್ವನಿಮುದ್ರಣ ಮಾಡಿದರು. ಇದರಲ್ಲಿ ಬಹಳಷ್ಟು ಜನಪ್ರಿಯವಾಗಿರುವ ಜೋಡಿಹಾಡುಗಳಲ್ಲಿ ಆಶಾ ಭೋಂಸ್ಲೆಯವರು ಮೊಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್ ಅವರ ಜೊತೆಯಲ್ಲಿ ಹಾಡಿದ್ದಾರೆ. ಬಿಮಲ್ ರಾಯ್ ಅವರ ಬಂದಿನಿ(೧೯೬೩) ಚಿತ್ರದ ಹಾಡು ಅಬ್ ಕೆ ಬರಸ್ ಅವರನ್ನು ಪ್ರಮುಖ ಹಾಡುಗಾರ್ತಿಯನ್ನಾಗಿ ಮಾಡಿತು. ತನುಜಾ ಅವರು ಅಭಿನಯಿಸಿದ ಜಿವೆಲ್ ಥೀಫ್ (೧೯೬೭) ಚಿತ್ರದ ಹಾಡು ರಾತ್ ಅಕೇಲಿ ಹೈ ಬಹಳಷ್ಟು ಜನಪ್ರಿಯತೆ ಗಳಿಸಿತು.
- ರಾಹುಲ್ ದೇವ್ ಬರ್ಮನ್ (ಪಂಚಮ್)
ಆಶಾ ಮೊದಲು ರಾಹುಲ್ ದೇವ್ ಬರ್ಮನ್ (ಎ.ಕೆ.ಎ. "ಪಂಚಮ್") ಅವರನ್ನು ಭೇಟಿಯಾದದ್ದು ಆಕೆ ಎರಡು ಮಕ್ಕಳ ತಾಯಿಯಾಗಿದ್ದಾಗ ಹಾಗೂ ಆತ ೧೦ನೆಯ ತರಗತಿ ಓದುವುದನ್ನು ಬಿಟ್ಟು ಸಂಗೀತದ ದಾರಿ ಹಿಡಿದಾಗ. ಅವರ ಜೋಡಿಯು ಮೊದಲು ತೀಸ್ರಿ ಮಂಝಿಲ್ (೧೯೬೬)ನಲ್ಲಿ ಗುರುತಿಸಲ್ಪಟ್ಟಿತು. ಅವರ ಜೋಡಿಯು ವೈವಿದ್ಯಮಯ ಹಾಡುಗಳನ್ನು ಧ್ವನಿಮುದ್ರಣ ಮಾಡಿತು - ಕ್ಯಾಬರೆಗಳು, ರಾಕ್, ಡಿಸ್ಕೊ, ಘಝಲ್‌ಗಳು, ಭಾರತೀಯ ಶಾಸ್ತ್ರೀಯ ಸಂಗೀತ ಇನ್ನೂ ಹಲವಾರು. ೧೯೭೦ರ, ಆಶಾ ಭೋಂಸ್ಲೆ ಹಾಗೂ ಪಂಚಮ್ ಅವರ ಯುವ, ಪಾಶ್ಚಿಮಾತ್ಯ ಹಾಡುಗಳು ಬಾಲಿವುಡ್‌ನಲ್ಲಿ ಹೊಸ ಅಲೆ ಮೂಡಿಸಿದವು - ಒರಟಾದ ಕ್ಯಾಬರೆ ಪಿಯಾ ತೂ ಅಬ್ ತೊ ಆಜಾ (ಹೆಲೆನ್ ಅಭಿನಯದ ಕಾರವಾನ್ , ೧೯೭೧), ನಿಯಂತ್ರಣವಿಲ್ಲದ ದಮ್ ಮಾರೊ ದಮ್ ( ಹರೆ ರಾಮಾ ಹರೆ ಕೃಷ್ಣಾ , ೧೯೭೧), ಶೃಂಗಾರಮಯ ದುನಿಯಾ ಮೇ (ಅಪ್ನಾ ದೇಶ್ , ೧೯೭೨), ಪ್ರಣಯ ಪೂರಿತ ಚುರಾ ಲಿಯಾ ಹೈ ತುಮ್ನೇ (ಯಾದೋಂ ಕಿ ಬಾರಾತ್ , ೧೯೭೩). ಪಂಚಮ್ ಅವರು ಆಶಾ ಭೋಂಸ್ಲೆ ಹಾಗೂ ಕಿಶೋರ್ ಕುಮಾರ್ ಜೋಡಿಯ ಹಲವಾರು ಗೀತೆಗಳನ್ನು ಧ್ವನಿ ಮುದ್ರಣ ಮಾಡಿದ್ದಾರೆ ಅವುಗಳಲ್ಲಿ ಕೆಲವು - ಜಾನೆ ಜಾನ್, ಡೂಂಡ್ತಾ ಫಿರ್ ರಹಾ (ಜವಾನಿ ದಿವಾನಿ ), ಭಲಿ ಭಲಿ ಸಿ ಎಕ್ ಸೂರತ್ (ಬುಡ್ಡಾ ಮಿಲ್ ಗಯಾ ) ಮುಂತಾದವುಗಳು. ೧೯೮೦ರ ದಶಕದಲ್ಲಿ, ಪಂಚಮ್ ಹಾಗೂ ಆಶಾ ಭೋಂಸ್ಲೆಯವರು ಕೆಲ ಚಿತ್ರಗಳಿಗೆ ಸಂಗೀತ ನೀಡಿದರು ಅವೆಂದರೆ ಇಜಾಝತ್ (೧೯೮೭)- ಮೇರಾ ಕುಚ್ ಸಾಮಾನ್ , ಖಾಲಿ ಹಾತ್ ಶಾಮ್ ಆಯಿ ಹೈ , ಕತ್ರಾ ಕತ್ರಾ . ಅವರು ಜನಪ್ರಿಯ ಜೋಡಿ ಗೀತೆ ಓ ಮರಿಯಾ (ಸಾಗರ್ ) ಕೂಡಾ ಧ್ವನಿಮುದ್ರಣ ಮಾಡಿದರು. ಆರ್.ಡಿ.ಬರ್ಮನ್ ಸಂಗೀತ ನೀಡಿದ ಗುಲ್ಜಾರ್ ಅವರ ಇಜಾಝತ್ ಚಿತ್ರದ ಹಾಡು ಮೇರಾ ಕುಚ್ ಸಾಮಾನ್ ಗೆ ಅತ್ಯುತ್ತಮ ಗಾಯಕಿಯಾಗಿ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟಿತು. ಆಶಾ ಅವರು ಆರ್.ಡಿ.ಬರ್ಮನ್ ಅವರನ್ನು "ಬಬ್ಸ್" ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಆಕೆಯು ೧೯೮೦ರಲ್ಲಿ ಅವರನ್ನು ವಿವಾಹವಾದರು. ಬರ್ಮನ್ ಅವರ ನಿಧನದವರೆಗೆ ಅವರ ಜೋಡಿ ಒಂದಾಗಿತ್ತು. ಆರ್‌ಡಿ ಬರ್ಮನ್ ಅವರು ಆಶಾ ಅವರನ್ನು ಕೆಲವು ಜನಪ್ರಿಯ ಬಂಗಾಳಿ ಹಾಡುಗಳನ್ನು ಹಾಡುವಂತೆ ಮಾಡಿದರು, ಅವೆಂದರೆ ಮೊಹುಯೇ ಜೊಮೆಛೆ ಆಜ್ ಮೌ ಗೊ ,ಚೋಕೆ ಚೋಕೆ ಕೊತಾ ಬೋಲೊ ಚೊಕೆ ನಾಮೆ ಬ್ರಿಶ್ತಿ (ಜಾನೆ ಕ್ಯಾ ಬಾತ್ ಹೈ ನ ಬಂಗಾಳಿ ಭಾಷಾಂತರ), ಬಾಂಶಿ ಸುನೆ ಕಿ ಗೋರೆ ಥಕಾ ಜಾಯೆ ,ಸೊಂಧ್ಯಾ ಬೆಲೇ ತುಮಿ ಆಮಿ ,ಆಜ್ ಗುನ್‌ಗುನ್ ಗುನ್ ಗುಂಜೆ ಅಮರ್ (ಪ್ಯಾರ್ ದೀವಾನಾ ಹೋತಾ ಹೈ ನ ಬೆಂಗಾಳಿ ಭಾಷಾಂತರ), ಮುಂತಾದವುಗಳು.
- ಇಳಯರಾಜ
ದಕ್ಷಿಣ ಭಾರತೀಯ ಚಲನಚಿತ್ರರಂಗದ ಧೀಮಂತ ಸಂಗೀತಕಾರ ಇಳಯರಾಜ ಅವರೊಂದಿಗೆ ೧೯೮೦ರ ದಶಕದಲ್ಲಿ ಮೊದಲಿಗೆ ಮೂಂಡ್ರು ಪಿರೈ ಚಿತ್ರದ ಹಾಡುಗಳನ್ನು ಹಾಡಿದರು (೧೯೮೨) (ಅಥವಾ ಸದ್ಮಾ , ಇದರ ಹಿಂದಿ ರೀಮೇಕ್ ಚಿತ್ರ ೧೯೮೩). ಅವರ ಜೋಡಿಯು ೧೯೮೦ರ ದಶಕದ ಕೊನೆಯರ್ಧದಲ್ಲಿ ಹಾಗೂ ೧೯೯೦ರ ದಶಕದ ಮೊದಲ ಭಾಗದಲ್ಲಿ ಮುಂದುವರೆಯಿತು. ಈ ಸಮಯದ ಗಮನೀಯ ಹಾಡುಗಳೆಂದರೆ ಶೆನ್ಬಾಗಮೇ (ಎಂಗ ಊರು ಪಾಟುಕ್ಕಾರನ್ , ೧೯೮೭, ತಮಿಳು). ೨೦೦೦ರಲ್ಲಿ, ಆಶಾ ಅವರು ಇಳಯರಾಜರ ಕಮಲ್ ಹಾಸನ್ ಅಭಿನಯದ ರಾಜಕೀಯ ಚಿತ್ರ ಹೇ ರಾಂ ನ ಶೀರ್ಷಿಕೆ ಹಾಡನ್ನು ಹಾಡಿದರು. ಜನ್ಮೋಂ ಕಿ ಜ್ವಾಲಾ (ಅಥವಾ ಅಪರ್ಣಾದ ವಿಷಯ)ದಲ್ಲಿ ಗಝಲ್ ಹಾಡುಗಾರ ಹರಿಹರನ್ರೊಂದಿಗೆ ಹಾಡಿದರು.
- ಎ. ಆರ್. ರೆಹಮಾನ್
ಎ. ಆರ್. ರಹಮಾನ್ ಅವರು ಆಶಾ ಭೋಂಸ್ಲೆಯವರಿಗೆ ಪುನಃ ಹಾಡುವಂತೆ ರಂಗೀಲಾ (೧೯೯೪) ಚಿತ್ರದಲ್ಲಿ ಅವಕಾಶವನ್ನು ನೀಡಿದರು. ಚಿತ್ರದ ಹಾಡುಗಳಾದ ತನ್ಹಾ ತನ್ಹಾ ಹಾಗೂ ರಂಗೀಲಾ ರೆ ಹಾಡುಗಳು ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಛಾಪನ್ನು ಮೂಡಿಸಿದವು. ಆಕೆ ಹಾಗೂ ರೆಹಮಾನರ ಜೋಡಿಯು ಹಲವು ಉತ್ತಮ ಹಾಡುಗಳಲ್ಲಿ ಕೆಲಸ ಮಾಡಿದ್ದಾರೆ ಅವೆಂದರೆ ಮುಝೆ ರಂಗ್ ದೇ (ತಕ್ಷಕ್ ), ರಾಧಾ ಕೈಸೆ ನ ಜಲೆ (ಲಗಾನ್ , ಉದಿತ್ ನಾರಾಯಣ್ ಜೊತೆ ಹಾಡಿರುವುದು), ಕಹೀ ಆಗ್ ಲಗೇ (ತಾಲ್ ), O ಭವರೆ (ದೌಡ್ , duet with ಕೆ. ಜೆ. ಯೇಸುದಾಸ್), ವೆನಿಲ್ಲಾ ವೆನಿಲ್ಲಾ (ಇರುವರ್ ,೧೯೯೯), ದುವಾನ್ ದುವಾನ್ (ಮೀನಾಕ್ಷಿ ,೨೦೦೪).[೧೩]
- ಜಯದೇವ್
ಎಸ್ ಡಿ ಬರ್ಮನ್‌ರ ಸಹಾಯಕ ಜಯದೇವ್ ಸ್ವತಂತ್ರವಾಗಿ ಸ್ವರ ಸಂಯೋಜನೆಯನ್ನು ಮಾಡುವುದನ್ನು ಪ್ರಾರಂಭಿಸಿದಾಗ, ಅವರು ತಮ್ಮ ಕೆಲವು ಹಾಡುಗಳನ್ನು ಹಾಡಲು ಆಶಾರವರಿಗೆ ನೀಡಿದ್ದರು. ಅವರಿಬ್ಬರು ಹಮ್ ದೋನೊ (೧೯೬೧), ಮುಜೆ ಜೀನೆ ದೊ (೧೯೬೩), ದೊ ಬೂಂದ್ ಪಾನಿ (೧೯೭೧) ಮತ್ತು ಇತರ ಚಿತ್ರಗಳಲ್ಲಿ ಕಾರ್ಯನಿರ್ವಹಿಸಿದ್ದರು. ೧೯೭೧ರಲ್ಲಿ, ಈ ಜೋಡಿಯು ಚಿತ್ರಗೀತೆಗಳಲ್ಲದ ಭಕ್ತಿಹಾಡುಗಳ ಎಲ್‌ಪಿ ಮತ್ತು ಯನ್ ಅನ್‌ಫರ್ಗೆಟೇಬಲ್ ಟ್ರೀಟ್ ಹೆಸರಿನ ಘಝಲ್‌ಗಳನ್ನು ಬಿದುಗಡೆಮಾಡಿದೆ . ಆಶಾ ಜಯದೇವ್‌ರನ್ನು ತಾನು ವೈಯಕ್ತಿಕವಾಗಿ ಮಾತು ವೃತ್ತಿಪರವಾಗಿ ಕಷ್ಟದಲ್ಲಿದ್ದಾಗ ತನಗೆ ನೆರವಾದ ಒಳ್ಳೆಯ ಸ್ನೇಹಿತ ಎಂದು ಪರಿಗಣಿಸಿದ್ದಾಳೆ. ೧೯೮೭ರಲ್ಲಿ ಜಯದೇವ್ ಮರಣಹೊಂದಿದ ನಂತರ, ಜಯದೇವ್ ತನಗಾಗಿ ಸ್ವರ ಸಂಯೋಜನೆ ಮಾಡಿದ್ದ ಹೆಚ್ಚು ಜನಪ್ರಿಯಗೊಳ್ಳದ ಹಾಡುಗಳ ಸಂಕಲನ ಆಲ್ಬಂನ್ನು ಅವರು ಸುರಾಂಜಲಿ ಹೆಸರಿನಲ್ಲಿ ಬಿಡುಗಡೆಮಾಡಿದ್ದರು.
- ಶಂಕರ್ ಜೈಕಿಶನ್
ಶಂಕರ್ ಜೈಕಿಶನ್ ಕೇವಲ ಸ್ವಲ್ಪ ಸಮಯ ಮಾತ್ರ ಆಶಾ ಜೊತೆ ಕೆಲಸಮಾಡಿದ್ದರು. ಅದಾಗ್ಯೂ, ಈ ಜೋಡಿಯು ಪರ್ದೆ ಮೆ ರೆಹ್ನೆ ದೊ (ಶಿಕಾರ್ , ೧೯೬೮) ಸೇರಿ ಕೆಲವು ಜನಪ್ರಿಯ ಹಾಡುಗಳ ನಿರ್ಮಾಣವನ್ನು ಮಾಡಿತು. ಈ ಹಾಡಿಗಾಗಿ ಆಶಾ ಅವಳ ಎರಡನೆಯ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಳು. ಆಶಾ ಶಂಕರ್ ಜೈಕಿಶನ್‌ಗಾಗಿ ಝಿಂದಗಿ ಏಕ್ ಸಪಾರ್ ಹೈ ಸುಹಾನ (ಅಂದಝ್ ) ಎಂಬ ಹಾಡನ್ನು ಸಹ ಹಾಡಿದ್ದರು, ಇದರಲ್ಲಿ ಅವರು ತಮ್ಮ ವಿಶಿಷ್ಟ ಶೈಲಿಯ ಹಾಡುಗಳಿಂದ ಅತ್ಯಂತ ಜನಪ್ರಿಯಗೊಂಡ ಕಿಶೋರ್ ಕುಮಾರ್ ಧ್ವನಿಯ ಶೈಲಿಯಲ್ಲಿ ಹಾಡಲು ಪ್ರಯತ್ನಿಸಿದ್ದರು. ರಾಜ್ ಕಪೂರ್ ಲತಾ ಮಂಗೇಶ್ಕರ್‌ರ ಸಂಪರ್ಕದಲ್ಲಿ ಇಲ್ಲದಿದ್ದಾಗ, ಶಂಕರ್-ಜೈಕಿಶನ್‌ರವರಿಂದ ಸ್ವರ ಸಂಯೋಜನೆಯನ್ನು ಮಾಡಲಾದ ಮೆರಾ ನಾಮ್ ಜೋಕರ್ (೧೯೭೦) ಚಿತ್ರದ ಹಾಡುಗಳನ್ನು ಹಾಡುವ ಅವಕಾಶ ಆಶಾಗೆ ದೊರೆಯಿತು.
- ಅನು ಮಲಿಕ್
ಸ್ವರ ಸಂಯೋಜಕ ಅನು ಮಲಿಕ್ ಆಶಾ ಜೊತೆಯಲ್ಲಿ ತನ್ನ ಮೊದಲನೆಯ ಚಿತ್ರ ಸೋನಿ ಮಹಿವಾಲ್ (೧೯೮೪)ನ ಹಾಡುಗಳನ್ನು ಸೇರಿ ಅನೇಕ ಜನಪ್ರಿಯ ಹಾಡುಗಳ ಧ್ವನಿಮುದ್ರಣವನ್ನು ಮಾಡಿದ್ದಾರೆ. ಅವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಪಿಲ್‌ಹಾಲ್ (ಪಿಲ್‌ಹಾಲ್ ), ಕಿತಾಬೆ ಬಹುತ್ ಸಿ (ಬಾಝಿಗರ್ ) ಇತ್ಯಾದಿ ಸೇರಿವೆ. ಆಶಾರಿಂದ ಹಾಡಲಾದ್ ಅನು ಮಲಿಕ್‌ರ ಜಬ್ ದಿಲ್ ಮಿಲೆ (ಯಾದ್‌ಇನ್ ) ನಾಲ್ಕು ಸಾಲುಗಳು ಸುಖ್‌ವಿಂದರ್ ಸಿಂಗ್, ಉದಿತ್ ನಾರಾಯಣ ಮತ್ತು ಸುನಿಧಿ ಚೌಹಾನ್‌ರ ದ್ವನಿಗಳಲ್ಲಿ ಅತ್ಯುತ್ತಮವಾಗಿ ಉಳಿಯಿತು. ಆಶಾ ೧೯೫೦ರ ಮತ್ತು ೧೯೬೦ರ ದಶಕಗಳಲ್ಲಿ ಮಲಿಕ್‌ರ ತಂದೆ ಸರ್ದಾರ್ ಮಲಿಕ್‌ರ ಹಾಡುಗಳಿಗೂ ಸಹ ಹಾಡಿದ್ದರು, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಸರಂಗ (೧೯೬೦) ಚಿತ್ರಕ್ಕೆ ಹಾಡಿದ್ದು.
- ಇತರೆ ಸಂಗೀತಕಾರರು
ಮದನ್ ಮೋಹನ್ ಆಶಾ ಜೊತೆಯಲ್ಲಿ ಅನೇಕ ಹಾಡುಗಳ ದ್ವನಿಮುದ್ರಣವನ್ನು ಮಾಡಿದ್ದಾರೆ, ಅವುಗಳಲ್ಲಿ ಪ್ರಸಿದ್ಧ ಜಾನಪದಗೀತೆಯಾದ ಮೆರ ಸಾಯ (೧೯೬೬)ದ ಝುಂಕಾ ಗಿರಾ ರೆ ಸಹ ಸೇರಿದೆ. ಚೋಟಿ ಸಿ ಬಾತ್ (೧೯೭೫) ಚಿತ್ರದಲ್ಲಿ, ಜಾನೆಮನ್ ಜಾನೆಮನ್ ಹಾಡನ್ನು ಆಶಾ ಎ. ಜೆ. ಯೇಸುದಾಸ್ ಜೊತೆಯಲ್ಲಿ ಸಲಿಲ್ ಚೌದರಿಗಾಗಿ ಹಾಡಿದ್ದರು. ಸಲಿಲ್‌ರ ೧೯೫೬ರ ಚಿತ್ರ ಜಾಗ್ತೆ ರಹೊ ಸಹ ಆಶಾರಿಂದ ಧ್ವನಿಮುದ್ರಣ ಮಾಡಲಾದ ಹಾಡನ್ನು ಹೊಂದಿದೆ, ಅದೇ ಥಂಡಿ ಥಂಡಿ ಸಾವನ್ ಕಿ ಫುಹಾರ್ . ಆಶಾರ ಮತ್ತೊಬ್ಬ ಬೆಂಬಲಿಗರು ಯುವ ಸ್ವರ ಸಂಯೋಜಕ ಸಂದೀಪ್ ಚೌತ, ಇವರು ಅವಳಿಗೆ ಕಂಬಕ್ತ್ ಇಷ್ಕ್ (ಸೋನು ನಿಗಮ್‌ಜೊತೆಗಿನ ಜೋಡಿಹಾಡು) (ಪ್ಯಾರ್ ತುನೆ ಕ್ಯಾ ಕಿಯಾ , ೨೦೦೧) ಹಾಡುವ ಅವಕಾಶವನ್ನು ನೀಡಿದ್ದರು. ಈ ಹಾಡು ಭಾರತೀಯ ಯುವಪೀಳಿಗೆಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿತ್ತು. ಆಶಾರವರು ಲಕ್ಷ್ಮಿಕಾಂತ್-ಪ್ಯಾರೆಲಾಲ್, ನೌಷದ್, ರವೀಂದ್ರ ಜೈನ್, ಎನ್ ದತ್ತ, ಹೇಮಂತ್ ಕುಮಾರ್‌ಗಳಂತಹ ಅನೇಕ ಲತಾ-ಪ್ರೋತ್ಸಾಕರೊಂದಿಗೆ ಸಹ ಕೆಲಸಮಾಡಿದ್ದಾರೆ. ಒಂದು ಸಲ ಆಶಾ ಮತ್ತು ಲತಾರ ನಡುವಿನ ವ್ಯತ್ಯಾಸವನ್ನು ಸೂಚಿಸುವಂತೆ ನೌಷದ್‌ರನ್ನು ಕೇಳಿದಾಗ, "ಲತಾರಲ್ಲಿ ಇರುವ ಯಾವುದೋ ಒಂದು ಆಶಾರಲ್ಲಿ ಇಲ್ಲ, ಅದು ಕೇವಲ ಲತಾರಲ್ಲಿ ಮಾತ್ರ ಇದೆ" ಎಂದು ಅವರು ಹೇಳಿದ್ದರು. "ಬಹುಶಃ ಆ ಸಮಯದಲ್ಲಿ ಆಶಾರ ಗಾಯನವನ್ನು ನಾನು ಸರಿಯಾಗಿ ಆಲಿಸಿರಲಿಲ್ಲ, ಆದ್ದರಿಂದಲೇ ಆ ರೀತಿ ಹೇಳಿದ್ದೆ" ಎಂದು ನಂತರ ಒಂದು ಸಂದರ್ಶನದಲ್ಲಿ ಅವರು ತನ್ನ ತಪ್ಪನ್ನು ಒಪ್ಪಿಕೊಂಡಿದ್ದರು.[೧೯] ನೌಷದ್, ನಂತರ ಅವರ ಜೀವನದಲ್ಲಿ, ಸಹ ತಾನು ಆಶಾ ಭೋಂಸ್ಲೆಗೆ ಪಕ್ಷಪಾತ ತೋರಿಸಿದ್ದೆ ಎಂದು ಪಶ್ಚಾತ್ತಾಪಪಟ್ಟಿದ್ದರು. ಜತಿನ್ ಲಲಿತ್, ಬಪ್ಪಿ ಲಹಿರಿ, ಕಲ್ಯಾಣ್‌ಜಿ ಆನಂದ್‌ಜಿ, ಉಷಾ ಖನ್ನ, ಚಿತ್ರಗುಪ್ತ್, ಮತ್ತು ರೋಷನ್‌ರಂತಹ ಪ್ರಖ್ಯಾತ ಬಾಲಿವುಡ್ ಸ್ವರ ಸಂಯೋಜಕರೊಂದಿಗೆ ಸಹ ಆಶಾ ಕೆಲಸಮಾಡಿದ್ದರು.
ಬಾಲಿವುಡ್‌ಯೇತರ ಸಂಗೀತ
[ಬದಲಾಯಿಸಿ]ಖಾಸಗಿ ಆಲ್ಬಂಗಳು
[ಬದಲಾಯಿಸಿ]ಗೀತಕಾರ, ಗುಲ್ಝಾರ್, ಸಂಗೀತ ನಿರ್ದೇಶಕ, ಆರ್.ಡಿ. ಬರ್ಮನ್ ಮತ್ತು ಆಶಾ ಭೋಂಸ್ಲೆ, ಮೂರುಜನ ಸೇರಿ, ೧೯೮೭ರಲ್ಲಿ ದಿಲ್ ಪಡೋಸಿ ಹೈ ಹೆಸರಿನ ಜೋಡಿ ಆಲ್ಬಂನ ರಚನೆಯನ್ನು ಆರಂಭಿಸಿದ್ದರು, ಇದು ಸೆಪ್ಟೆಂಬರ್ ೮, ೧೯೮೭, ಆಶಾ ಭೋಂಸ್ಲೆರ ಜನ್ಮದಿನದಂದು ಬಿಡುಗಡೆಯಾಗಿತ್ತು.[೨೦] ೧೯೯೫ರಲ್ಲಿ, ಆಶಾ ಮೈಹರ್ ಘರಾನ (ಭಾರತೀಯ ಶಾಸ್ತ್ರೀಯ ಸಂಗೀತದ ಶೈಲಿಯ ಶಾಲೆ) ಒಳಗೇ ಇದ್ದ ಶಾಸ್ತ್ರೀಯ ಸಂಗೀತ ಭಂಡಾರವನ್ನು ಕಲಿಯಲು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಹೆಸರಾಂತ ಗಾಯಕ ಅಲಿ ಅಕ್ಬರ್ ಖಾನ್‌ರವರೊಂದಿಗೆ ಗಥ ಬಂಧನ (ದಾರ-ಕಟ್ಟುವ) ಧರ್ಮಾಚರಣೆಗೆ ಒಳಗಾಗಿದ್ದರು, ಇದನ್ನು ಖಾನ್ ಅವರಿಗೆ ಅವರ ತಂದೆ ಅಲ್ಲಾವುದ್ದಿನ್ ಖಾನ್ (ರವಿ ಶಂಕರ್‌ರ ಗುರುಗಳು) ಇವರಿಂದ ಹಸ್ತಾಂತರಿಸಲಾಗಿತ್ತು. ನಂತರ, ಆಶಾ ಮತ್ತು ಉಸ್ತದ್ ಅಲಿ ಆಕ್ಬರ್ ಖಾನ್ ಇಬ್ಬರು ಸೇರಿ ಕಾಲಿಫೋರ್ನಿಯಾದಲ್ಲಿ ಲೆಗಸಿ ಹೆಸರಿನ ಖಾಸಗಿ ಆಲ್ಬಂಗಾಗಿ ಹನ್ನೊಂದು ಸ್ಥಿರ ಸಂಯೋಜನೆಗಳ (ಅಥವಾ ಬಂದಿಷ್ ಗಳ) ಧ್ವನಿ ಮುದ್ರಣವನ್ನು ಮಾಡಿದ್ದರು, ನಂತರ ಈ ಆಲ್ಬಂ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ೧೯೯೦ರ ದಶಕದಲ್ಲಿ, ಆಶಾರವರು ಆರ್ ಡಿ ಬರ್ಮನ್‌ರ ಮರುಮಿಶ್ರಿತ ಹಾಡುಗಳೊಂದಿಗೆ ಪ್ರಯೋಗಗಳನ್ನು ಮಾಡಿದ್ದರು. ಹಳೇ ಮಧುರ ಗೀತೆಗಳನ್ನು ಬೇಕಾದ ರೀತಿಯಲ್ಲಿ ತಿದ್ದುಪಡಿಮಾಡಿ ಬದಲಾಯಿಸಿದ್ದಕ್ಕಾಗಿ ಆಶಾ ಅನೇಕರಿಂದ ನಿಂದನೆಗೊಳಗಾಗಿದ್ದರು, ಇವರಲ್ಲಿ ಖಯ್ಯಮ್ ಸಹ ಒಬ್ಬರಾಗಿದ್ದರು. ಅದಾಗ್ಯೂ, ರಾಹುಲ್ ಆಂಡ್ ಐ ಗಳಂತಹ ಆಲ್ಬಂಗಳು ತಕ್ಕ ಮಟ್ಟಿಗೆ ಜನಪ್ರಿಯಗೊಂಡಿದ್ದವು. ೧೯೯೭ರಲ್ಲಿ, ಆಶಾ ಜಾನಮ್ ಸಂಜಾ ಕರೋ ಎಂಬ ಖಾಸಗಿ ಹಿಂದಿ ಪಾಪ್ ಆಲ್ಬಂನ್ನು ಲೆಸ್ಲೀ ಲೆವೀಸ್ ಜೊತೆಯಲ್ಲಿ ಮಾಡಿದ್ದಾರೆ. ಈ ಆಲ್ಬಂ ಅತೀ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿತ್ತು ಮತ್ತು ಅವರಿಗೆ ಅನೇಕ ಪ್ರಶಸ್ತಿಗಳನ್ನು ತಂದು ಕೊಟ್ಟಿತ್ತು, ಇವುಗಳಲ್ಲಿ ೧೯೯೭ರ ಎಮ್‌ಟಿವಿ ಪ್ರಶಸ್ತಿ ಸಹ ಒಳಗೊಂಡಿದೆ. ಒಂದು ಸಲ ನಿರ್ದೇಶಕರಾದ ಬಿ ಅರ್ ಇಶಾರರವರು ತಮ್ಮ ಒಂದು ಚಿತ್ರಕ್ಕೆ ಸ್ವರ ಸಂಯೋಜನೆಯನ್ನು ನೀಡುವಂತೆ ಆಶಾ ಭೋಂಸ್ಲೆರನ್ನು ಕೇಳಿದ್ದರು, ಆದರೆ ಅವರು ಅದನ್ನು ಸವಿನಯವಾಗಿ ನಿರಾಕರಿಸಿದರು. ೨೦೦೨ರಲ್ಲಿ, ಅವರು ಆಪ್ ಕಿ ಆಶಾ ಆಲ್ಬಂದೊಂದಿಗೆ ಸ್ವರ ಸಂಯೋಜಕರಾಗಿ ಬದಲಾದರು, ಇದು ಒಂದು ಎಂಟು-ಹಾಡುಗಳ ಸ್ವರಮಿಲನ ಮತ್ತು ಚಲನಚಿತ್ರ ಆಲ್ಬಂ ಆಗಿತ್ತು. ಇದಕ್ಕೆ ಸಾಹಿತ್ಯವನ್ನು ಬರೆದವರು ಮಜ್ರೂಹ್ ಸುಲ್ತಾನ್‌ಪುರಿ (ಇದು ಅವರ ಕೊನೆಯ ಸಾಹಿತ್ಯ) ಮತ್ತು ಸ್ವರ ಸಂಯೋಜನೆಯನ್ನು ಸ್ವತಃ ಆಶಾರವರೇ ಮಾಡಿದ್ದರು. ಈ ಆಲ್ಬಂನ್ನು ಮೇ ೨೧, ೨೦೦೧ರಂದು ಮುಂಬಯಿನಲ್ಲಿ ಲಾವಿಶ್ ಔತಣದ ಸಮಯದಲ್ಲಿ ಸಚಿನ್ ಟೆಂಡುಲ್ಕರ್‌ರವರಿಂದ ಬಿಡುಗಡೆಮಾಡಲಾಗಿತ್ತು. ಆಲ್ಬಂ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿತ್ತು. ಆಶಾ ಪಾಕಿಸ್ತಾನದ ಗಾಯಕ ಅದ್ನನ್ ಸಮಿ ೧೦ ವರ್ಷದ ವಯಸ್ಸಿನವರಿರುವಾಗಲೇ ಅವರ ಪ್ರತಿಭೆಯನ್ನು ಗುರುತಿಸಿದ್ದರು. ಅದು ಲಂಡನ್‌ನಲ್ಲಿ, ಆರ್ ಡಿ ಬರ್ಮನ್‌ರವರೊಂದಿಗೆ ಕಾರ್ಯಕ್ರಮವನ್ನು ನೀಡುತ್ತಿರುವ ಸಮಯವಾಗಿತ್ತು. ಆಗ ಸಂಗೀತದಲ್ಲಿ ಅವನ ಆಶಕ್ತಿಯನ್ನು ಗಂಭೀರವಾಗಿ ತೊಡಗಿಸಿಕೊಳ್ಳುವಂತೆ ಹೇಳಿದ್ದವರೇ ಆಶಾ. ಅದ್ನನ್ ಬೆಳೆದು ದೊಡ್ಡವನಾಗಿ ವೃತ್ತಪರ ಸಂಗೀತಗಾರನಾದಾಗ, ಅವನ ಅತ್ಯುತ್ತಮ-ಮಾರಾಟ ಕಂಡ ಆಲ್ಬಂ ಕಭೀ ತೊ ನಝರ್ ಮಿಲಾವೊ ಗಾಗಿ ಆಶಾ ಅವನೊಂದಿಗೆ ಶೀರ್ಷಿಕೆ ಜೋಡಿ ಹಾಡನ್ನು ಹಾಡಿದ್ದರು. ಮತ್ತೆ ಅವರಿಬ್ಬರು ಬರ್ಸೆ ಬದಲ್ ಆಲ್ಬಂನಲ್ಲಿ ಸಹ ಹಾಡಿದ್ದರು. ಈ ಆಲ್ಬಂ, ಭಾರತೀಯ ಶಾಸ್ತ್ರೀಯ ಸಂಗೀತ ಆಧಾರದ ಎಂಟು ಹಾಡುಗಳನ್ನು ಒಳಗೊಂಡಿದೆ. ವೊಮದ್ ಟಾಕಿಂಗ್ ಬುಕ್ ವಾಲ್ಯೂಮ್ ಫೋರ್ ಮುದ್ರಣಕ್ಕಾಗಿ ಅವರು ಯನ್ ನಾ ತಿ ಹಾಡಿನ ನೆರವನ್ನು ನೀಡಿದ್ದರು: ಇದು ವೊಮದ್ ಮುದ್ರಣದಲ್ಲಿ ಏಷಿಯಾ ೧ಗೆ ನೀಡಿದ್ದ ಒಂದು ಪರಿಚಯವಾಗಿತ್ತು . ಆಶಾ ಮೆರಜ್-ಇ-ಘಝಲ್ , ಆಬ್‌ಶರ್-ಇ-ಘಝಲ್ ಮತ್ತು ಕಾಶಿಷ್ ಗಳಂತಹ ಅನೇಕ ಅಲ್ಬಂಗಳಿಗೆ ಘಝಲ್‌ಗಳನ್ನು ಹಾಡಿದ್ದಾರೆ. ೨೦೦೫ರಲ್ಲಿ, ಆಶಾ ತನ್ನ ಸ್ವಂತ ಹೆಸರಿನ ಆಲ್ಬಂನ (ಆಶಾ ) ಬಿಡುಗಡೆಯನ್ನು ಮಾಡಿದ್ದರು, ಇದು ನಾಲ್ಕು ಹೆಸರಾಂತ ಘಝಲ್ ಹಾಡುಗಾರರಿಗೆ ನೀಡಿದ್ದ ಸ್ಲಾಘನೆಯಾಗಿತ್ತು - ಮೆಹದಿ ಹಸನ್, ಘುಲಮ್ ಅಲಿ, ಪರಿದಾ ಖನುಮ್ ಮತ್ತು ಜಗ್ಜಿತ್ ಸಿಂಗ್. ಈ ಆಲ್ಬಂ ಪರಿದಾ ಕುಮಾರ್‌ರ ಆಜ್ ಜಾನೆ ಕಿ ಝಿದ್ ನಾ ಕರೊ , ಘುಲಮ್ ಅಲಿರ ಚುಪ್ಕೆ ಚುಪ್ಕೆ , ಆವಾರ್ಗಿ ಮತ್ತು ದಿಲ್ ಮೆ ಏಕ್ ಲಹರ್ , ಜಗ್ಜಿತ್ ಸಿಂಗ್‌ರ ಆಹಿಸ್ತ ಆಹಿಸ್ತ ಮತ್ತು ಮೆಹದಿ ಹಸನ್‌ರ ರಂಜಿಶ್ ಹಿ ಸಹಿ ರಫ್ತ ರಫ್ತ ಮತ್ತು ಮುಜೆ ತುಮ್ ನಝರ್ ಸೆ ಗಳಂತಹ ಅವರ ಅಚ್ಚುಮೆಚ್ಚಿನ ಎಂಟು ಘಝಲ್‌ಗಳನ್ನು ಒಳಗೊಂಡಿದೆ. ಸಂಗೀತಗಾರ ಪಂಡಿತ್ ಸೋಮೇಶ್ ಮಾಥುರ್ ಈ ಶಾಸ್ತ್ರೀಯ ಘಝಲ್‌ಗಳನ್ನು ಆಧುನಿಕ ಧ್ವನಿಗಳ ಮೂಲಕ ಮರುರಚಿಸಿದ್ದಾರೆ. ಈ ಆಲ್ಬಂನ್ನು, ಆಶಾರ ಪ್ರಕಾರ, ಸಾಂಪ್ರದಾಯಿಕ ತಬಲ ಮತ್ತು ಸಾರಂಗಿ ಧ್ವನಿಗಳಿಂದ "ದೂರವಾಗಿದ್ದ" ಯುವ ಪೀಳಿಗೆಗಾಗಿ ಮಾಡಲಾಗಿತ್ತು. ಆಶಾರ ಹಾಡುಗಳ ಬಹುಸಂಖ್ಯಾತ ಸಂಕಲನಗಳು ಸಹ ಬಿಡುಗಡೆಯಾಗಿದ್ದವು. ಅವರ ೬೦ನೆಯ ಹುಟ್ಟುಹಬ್ಬದ ಸ್ಮಾರಕೋತ್ಸವಕ್ಕಾಗಿ, ೧೯೯೩ರಲ್ಲಿ ಇಎಮ್‌ಐ ಇಂಡಿಯಾ ಮೂರು ಕ್ಯಾಸೆಟ್‌ಗಳನ್ನು ಬಿಡುಗಡೆಮಾಡಿತ್ತು: ಬಲಾ ಮೆ ಬೈರಾಗನ್ ಹೂಂಗಿ (ಭಕ್ತಿಗೀತೆಗಳು), ದಿ ಗೋಲ್ಡನ್ ಕಲೆಕ್ಷನ್: ಮೆಮೋರೇಬಲ್ ಘಝಲ್ಸ್ (ಘುಲಾಮ್ ಅಲಿ, ಆರ್ ಡಿ ಬರ್ಮನ್ ಮತ್ತು ನಾಝರ್ ಹುಸ್ಸೇನ್‌ಗಳಂತಹ ಸ್ವರ ಸಂಯೋಜಕರಿಂದ ಸಂಯೋಜಿಸಲಾದ ಚಿತ್ರೇತರ ಘಝಲ್‌ಗಳು), ಮತ್ತು ದಿ ಗೋಲ್ಡನ್ ಕಲೆಕ್ಷನ್: ದಿ ಎವೆರ್ ವರ್ಸಾಟೈಲ್ ಆಶಾ ಭೋಂಸ್ಲೆ (೪೪ ಜನಪ್ರಿಯ ಚಲನಚಿತ್ರಗೀತೆಗಳು). ೨೦೦೬ರಲ್ಲಿ, ಅವರು ಆಶಾ ಆಂಡ್ ಫ್ರೆಂಡ್ಸ್ ಹೆಸರಿನ ಆಲ್ಬಂನ ಧ್ವನಿ ಮುದ್ರಣವನ್ನು ಮಾಡಿದ್ದರು, ಇದರಲ್ಲಿ ಅವರು, ಪ್ರಸಿದ್ಧ ಚಲನಚಿತ್ರ ನಟರೊಂದಿಗೆ ಜೋಡಿ ಹಾಡುಗಳನ್ನು ಹಾಡಿದ್ದರು, ಅವರೆಂದರೆ ಸಂಜಯ್ ದತ್ ಮತ್ತು ಊರ್ಮಿಳಾ ಮಾತೋಂಡ್ಕರ್ ಮತ್ತು ಪ್ರಸಿದ್ಧ ಕ್ರಿಕೆಟಿಗ ಬ್ರೆತ್ ಲೀ ಯೊಂದಿಗೆ ಅವರು ಯು ಆರ್ ದಿ ಒನ್ ಫರ್ ಮಿ (ಹಾನ್ ಮೆ ತುಮ್ಹಾರಾ ಹೂ )ಹಾಡಿದ್ದರು. ಈ ಎಲ್ಲಾ ಹಾಡುಗಳ ಸ್ವರ ಸಂಯೋಜನೆಯನ್ನು ಮಾಡಿದ್ದವರು ಶಮೀರ್ ತಂಡೊನ್ ಮತ್ತು ಇದರ ಚಲನಚಿತ್ರ ಚಿತ್ರೀಕರಣವನ್ನು ನಿರ್ದೇಶಕರಾಗಿ ಬದಲಾದ ಪತ್ರಿಕೋದ್ಯಮಿ ಎಸ್ ರಾಮಚಂದ್ರನ್‌ನಿಂದ ಮಾಡಲಾಯಿತು.
ಗಾನಗೋಷ್ಠಿಗಳು ಮತ್ತು ವಿದೇಶಿ ಕಲಾವಿದರೊಂದಿಗಿನ ಸಹಭಾಗಿತ್ವಗಳು
[ಬದಲಾಯಿಸಿ]೧೯೮೦ರ ಮತ್ತು ೧೯೯೦ರ ದಶಕಗಳಲ್ಲಿ, ಆಶಾ ವಿಶ್ವ-ಪ್ರವಾಸವನ್ನು ಕೈಗೊಂಡು, ಕೆನಡ, ದುಬೈ, ಯುಕೆ, ಯು.ಎಸ್. ಮತ್ತು ಅನೇಕ ಇತರ ದೇಶಗಳಲ್ಲಿ ಗಾನಗೋಷ್ಠಿಗಳನ್ನು ಮಾಡಿದ್ದರು. ೧೯೮೯ರಲ್ಲಿ, ಪ್ರಪಂಚ ಪ್ರವಾಸದ ಸಮಯದಲ್ಲಿ, ಅವರು ೨೦ ದಿನಗಳಲ್ಲಿ ಯುಎಸ್‌ನ ೧೩ ನಗರಗಳಲ್ಲಿ ಕಾರ್ಯಕ್ರಮವನ್ನು ನೀಡಿದ್ದರು. ಇದಾದ ತಕ್ಷಣ, ಅವರು ಈಗಾಗಲೇ ಮಾರಾಟಗೊಂಡ ಅನುಸೂಚಿತ ಗಾನಗೋಷ್ಠಿಯನ್ನು ಸ್ವೆಡನ್‌ನ, ಸ್ಟೋಖೋಲ್ಮ್‌ನಲ್ಲಿ ಹೊಂದಿದ್ದರು. ಒತ್ತಡದ ಕಾರ್ಯಕ್ರಮಗಳಿಂದ, ಆಶಾ ಜ್ವರ, ಕೆಮ್ಮು ಮತ್ತು ಸುಸ್ತಿನ ಜೊತೆಗೆ ಅತಿಯಾದ ದೊಡ್ಡ ಕರುಳಿನ ತೊಂದರೆಗೆ ಒಳಗಾಗಿದ್ದರು. ಸ್ಟೋಖೋಲ್ಮ್‌ನಲ್ಲಿ, ಗಾನಗೋಷ್ಠಿ-ಪೂರ್ವ ಬಿಕ್ಕಟ್ಟುಗಳ ಸಮಾವೇಶವನ್ನು ಕರೆಯಲಾಗಿತ್ತು, ಇದಕ್ಕೆ ಆಶಾರ ಮಗ (ಮತ್ತು ಕಾರ್ಯ ನಿರ್ವಾಹಕ) ಆನಂದ್ ಮತ್ತು ಗಾನಗೋಷ್ಠಿಯನ್ನು ನಡೆಸುವ ಪ್ರವರ್ತಕರು ಹಾಜರಾಗಿದ್ದರು. ವಾದ್ಯವೃಂದ ಅನೇಕ ಇನ್‌ಸ್ಟ್ರುಮೆಂಟಲ್ ಟ್ರ್ಯಾಕ್‌ಗಳನ್ನು ನುಡಿಸುವುದು, ಸುರೇಶ್ ವಾದ್ಕರ್‌ರಂತಹ ಸಂಗಡಿಗ ಗಾಯಕ ಹೆಚ್ಚುವರಿ ಜವಾಬ್ದಾರಿಯನ್ನು ತೆಗೆದುಕೊಳ್ಳುವರು, ಮತ್ತು ಆಶಾ ಸ್ವಲ್ಪ ಸಮಯಕ್ಕೆ ಮಾತ್ರ ಕಾಣಿಸುಕೊಳ್ಳುವರು ಎಂಬುದಾಗಿ ನಿರ್ಧರಿಸಲಾಗಿತ್ತು. ಆದರೆ ಆಶಾ ಈ ಎಲ್ಲಾ ಸೂಚನೆಗಳನ್ನು ತಿರಸ್ಕರಿಸಿದ್ದರು, ಮತ್ತು ಗಾನಗೋಷ್ಠಿಯಲ್ಲಿ ತನ್ನ ಸರಿ ಇಲ್ಲದ ಧ್ವನಿಯಿಂದಲೇ ಕಷ್ಟಪಟ್ಟು ಹಾಡಿದ್ದರು. ಅವರ ಆರು ಬಾಲಿವುಡ್ ಹಾಡುಗಳ ಮೊದಲ ಸೆಟ್ ಪ್ರೇಕ್ಷಕರಿಂದ ಯಾವುದೇ ಪ್ರತಿಕ್ರಿಯೆಯನ್ನು ಪಡೆದುಕೊಂಡಿಲ್ಲ, ಇದು ಬಹುಶಃ ಭಾರತೀಯ ಮತ್ತು ಪಾಕಿಸ್ತಾನಿ ಒಲಸಿಗರನ್ನು ಕುರಿತದ್ದಾಗಿತ್ತು. ಎರಡನೆಯ ಸೆಟ್ ಹಾಡುಗಳನ್ನು ಹಾಡಲು ಪ್ರಾರಂಭಿಸುವ ಮೊದಲು, ಪ್ರೇಕ್ಷಕ ಗುಂಪಿನಲ್ಲಿನ ಒಬ್ಬ ಅಭಿಮಾನಿ ಅವರನ್ನು ಒಂದು ಮರಾಠಿ ಹಾಡನ್ನು ಹಾಡುವಂತೆ ಕೋರಿದ್ದರು. ಆಶಾ ಇದಕ್ಕೆ ಸಮ್ಮತಿಸಿ ನಾಚ್-ನಾಚುನಿ ಆತಿ ಮಿ ದಮಾಲೆ ("ಈ ಕೊನೆಯಿಲ್ಲದ ನೃತ್ಯದಿಂದ ನಾನು ತುಂಬಾ ಬಳಲಿದ್ದೇನೆ") ಎಂಬ ಹಾಡನ್ನು ಹಾಡಿದ್ದರು. ಹಾಡು ಮುಗಿದಾಗ, ಸಭಾಂಗಣ ಚಪ್ಪಾಳೆಗಳೊಂದಿಗೆ ಸ್ಫೋಟಿಸಿತ್ತು ಮತ್ತು ಪುನರಾವರ್ತಿಸುವಂತೆ ಕೋರುವ ಉದ್ಗಾರಗಳು ಪ್ರಾಂಭವಾಗಿದ್ದವು. ಗಾನಗೋಷ್ಠಿಯ ನಂತರ, ಈ ಅತಿಯಾದ ದಣಿವಿನಿಂದ ಚೇತರಿಸಿಕೊಳ್ಳಲು ಆಶಾ ಒಂದು ತಿಂಗಳ ಕಾಲ ಹಾಸಿಗೆಯಲ್ಲಿದ್ದರು. ಅಕ್ಟೋಬರ್ ೨೦೦೨ರಲ್ಲಿ, "ಹೆಲ್ಪ್ ದಿ ಏಜ್ಡ್ (ವೃದ್ದರಿಗೆ ಸಹಾಯಮಾಡಿ)" ಕಾರ್ಯಕ್ರಮದಿಂದ ಭಾರತದಲ್ಲಿನ ವೃದ್ದರಿಗಾಗಿ ದೇಣಿಗೆಯನ್ನು ಸಂಗ್ರಹಿಸಲು ಅವರು ಲಂಡನ್‌ನಲ್ಲಿ ಸುದೇಶ್ ಭೋಂಸ್ಲೆ ಮತ್ತು ಸಹೋದರರೊಂದಿಗೆ ಗಾನಗೋಷ್ಠಿಯನ್ನು ಮಾಡಿದ್ದರು. ೨೦೦೭ರಲ್ಲಿ ಅವರು "ದಿ ಇನ್‌ಕ್ರೆಡಿಬಲ್" ಹೆಸರಿನ ಪ್ರವಾಸದಲ್ಲಿ, ಯುಎಸ್‌ಎ, ಕೆನಡ, ಮತ್ತು ವೆಸ್ಟ್ ಇಂಡೀಸ್‌ಗಳ ಪ್ರವಾಸವನ್ನು ಮಾಡಿದ್ದರು. ಈ ಪ್ರವಾಸದಲ್ಲಿ, ಗಾಯಕರಾದ ಸೋನು ನಿಗಮ್, ಕುನಲ್ ಗಂಜಾವಾಲ ಮತ್ತು ಕೈಲಾಶ್ ಖೆರ್ ಸಹ ಅವರಜೊತೆಯಲ್ಲಿದ್ದರು. ಮೂಲತಃ ೧೨ ಗಾನಗೋಷ್ಠಿಗಳಿಗೆ ಮಾತ್ರ ನಿಶ್ಚಿತಗೊಳಿಸಲಾಗಿತ್ತು, ಆದರೆ ಈ ಪ್ರವಾಸ ೨೦ಕ್ಕೂ ಅಧಿಕ ಗಾನಗೋಷ್ಠಿಗಳನ್ನು ಮಾಡಿತ್ತು. ೧೯೮೦ರ ದಶಕದ ಮಧ್ಯದಲ್ಲಿ, ಆಶಾ ಬೋಯ್ ಜಾರ್ಜ್ (ಬೊವ್ ಡೌನ್ ಮಿಸ್ಟೆರ್ ) ಮತ್ತು ಸ್ಟೆಫೆನ್ ಲಾಸ್‌ಕೊಂಬೆ ಜೊತೆಗೆ ಹಾಡಿದ್ದರು. ೧೯೯೭ರಲ್ಲಿ, ಅವರ ೬೪ನೆಯ ವಯಸ್ಸಿನಲ್ಲಿ ಅವರು ಪ್ರೀತಿ ಹಾಡನ್ನು ಬೋಯ್ ಬ್ಯಾಂಡ್ ಕೋಡ್ ರೆಡ್ ಜೊತೆಯಲ್ಲಿ ಹಾಡಿದ್ದರು. ಮಿಶೆಲ್ ಸ್ಟಿಪ್ ಜೊತೆಗೆ ಅವರು ದಿ ವೇ ಯು ಡ್ರೀಮ್ (ಒನ್ ಜಯಂಟ್ ಲೀಪ್, [೧]) ಹಾಡಿನ ಧ್ವನಿಮುದ್ರಣವನ್ನು ಸಹ ಮಾಡಿದ್ದರು, ಇದನ್ನು ಬುಲ್ಲೆಟ್‌ಫ್ರೂಪ್ ಮಾಂಕ್ ಎಂಬ ಆಂಗ್ಲ ಚಲನಚಿತ್ರದಲ್ಲಿ ಉಪಯೋಗಿಸಲಾಗಿತ್ತು. ಈ ಹಾಡು ಬಿಡುಗಡೆಯಾಗಿದ್ದು ಸಹ ಸ್ವಹೆಸರಿನ ಆಲ್ಬಂ ೨೦೦೨ನ ೧ ಜಯಂಟ್ ಲೀಪ್‌ನಲ್ಲಿಯೇ. ೧೯೯೭ರಲ್ಲಿ, ಬ್ರಿಟೀಷ್ ಬ್ಯಾಂಡ್ ಕಾರ್ನರ್ ಶಾಪ್ ತಮ್ಮ ಬ್ರಿಂಫುಲ್ ಆಫ್ ಆಶಾ ಎನ್ನುವ ಹಾಡಿನೊಂದಿಗೆ ಆಶಾರವರನ್ನು ಪ್ರಶಂಸಿಸಿತ್ತು, ಇದು ಒಂದು ಅಂತರ್‌ರಾಷ್ಟ್ರೀಯ ಮಟ್ಟಡ ಜನಪ್ರಿಯ ಗೀತೆಯಾಗಿದ್ದು, ನಂತರ ಇದನ್ನು ಫ್ಯಾಟ್‌ಬಾಯ್ ಸ್ಲಿಮ್‌ನಿಂದ ರೀಮಿಕ್ಸ್ ಮಾಡಲಾಗಿತ್ತು. ೨೦೦೧ರಲ್ಲಿ, ನೆಲ್ಲಿ ಪರ್ಟಾಡೊರ "ಐ ಯಾಮ್ ಲೈಕ್ ಎ ಬರ್ಡ್" ಸಿಡಿಯು ಡಿಜಿಟಲ್ ಕಟ್‌ಅಪ್ ಲಾಂಜ್ ನಿಂದ ರಚಿಸಲಾದ "ನೆಲ್ಲಿ ವಿಎಸ್. ಆಶಾ ರೀಮಿಕ್ಸ್"ನ್ನು ಒಳಗೊಂಡಿದೆ. ೨೦೦೩ರಲ್ಲಿ, ಬ್ರಿಟೀಷ್ ಒಪೆರಾ ಪಾಪ್ ಗಾಯಕಿ ಸಾರಾ ಬ್ರೈಟ್‌ಮ್ಯಾನ್ ಅವರ ಆಲ್ಬಂ ಹಾರೆಮ್ ನಲ್ಲಿ ಅವರ "ದಿಲ್ ಚೀಝ್ ಕ್ಯಾ ಹೈ" ಗಾಯನವನ್ನು ಮಾದರಿಯಾಗಿ ನೀಡಿದ್ದರು. ಇದನ್ನು ಅವರ "ಯು ಟೇಕ್ ಮೈ ಬ್ರೀತ್ ಅವೇ" ಹಾಡಿಗೆ ಮುನ್ನುಡಿಯಾಗಿ ಉಪಯೋಗಿಸಲಾಗಿತ್ತು. ೨೦೦೫ರಲ್ಲಿ, ಅಮೆರಿಕಾದ ಸ್ಟ್ರಿಂಗ್ ಕ್ವಾರ್ಟೆಟ್ ಕ್ರೋನೋಸ್ ಕ್ವಾರ್ಟೆಟ್, ಆರ್ ಡಿ ಬರ್ಮನ್ ಸಂಕಲನಗಳ ಮರು ಧ್ವನಿ ಮುದ್ರಣವನ್ನು ಮಾಡಿತ್ತು, ಅವುಗಳೆಂದರೆ ಚುರಾ ಲಿಯಾ , ಪಿಯಾ ತು , ಮೇರಾ ಕುಚ್ ಸಾಮಾನ್ ಇತ್ಯಾದಿ ಮತ್ತು ಇವುಗಳನ್ನು ಹಾಡುವ ಅವಕಾಶವನ್ನು ಆಶಾರವರಿಗೆ ನೀಡಲಾಗಿತ್ತು. ಅವರ ವಯಸ್ಸನ್ನೂ ಲೆಕ್ಕಿಸದೆ (ಅವರು ೭೦ನ್ನು ದಾಟಿದ್ದರು), ಅವರು ದಿನಕ್ಕೆ ಮೂರರಿಂದ ನಾಲ್ಕು ಹಾಡುಗಳ ಧ್ವನಿ ಮುದ್ರಣ ಮಾಡುವುದರ ಮೂಲಕ, ಕ್ವಾರ್ಟೆಟ್ ಸದಸ್ಯರನ್ನು ಆಶ್ಚರ್ಯಗೊಳಿಸಿದ್ದರು. ಆಗಸ್ಟ್ ೨೩, ೨೦೦೫ರಂದು, ಯು ಹ್ಯಾವ್ ಸ್ಟೋಲೆನ್ ಮೈ ಹಾರ್ಟ್ - ಸಾಂಗ್ಸ್ ಫ್ರಮ್ ಆರ್ ಡಿ ಬರ್ಮನ್’ಸ್ ಬಾಲಿವುಡ್ ಯುಎಸ್‌ನಲ್ಲಿ ಬಿಡುಗಡೆಯಾಗಿತ್ತು, ಈ ಆಲ್ಬಂ "ಉತ್ತಮ ಸಮಕಾಲೀನ ಪ್ರಪಂಚ ಸಂಗೀತ ಆಲ್ಬಂ"ಗಳ ಶ್ರೇಣಿಯಲ್ಲಿ ೨೦೦೬ರ ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತ್ತು. ಮುಂಚೆ, ೧೯೯೦ರ ದಶಕದಲ್ಲಿ, ಕ್ರೋನೋಸ್ ಕ್ವಾರ್ಟೆಟ್‌ನ ಡೇವಿಡ್ ಹರಿಂಗ್‌ಟನ್‌ರನ್ನು ಒಬ್ಬ ಸ್ನೇಹಿತ ಆಜ್ ಕಿ ರಾತ್ ಹಾಡಿನೊಂದಿಗೆ ಪರಿಚಯಿಸಿದ್ದರು. ಹರಿಂಗ್‌ಟನ್ ತನ್ನ ಗಾಯನದಿಂದ ವಶೀಕರಿಸಿದ್ದರು, ಮತ್ತು ಹಾಡನ್ನು ಕ್ರೋನೋಸ್ ಕರಾವನ್ ಆಲ್ಬಂನಲ್ಲಿ ಸೇರಿಸಲಾಗಿತ್ತು. ಹಾಗು ೨೦೦೫ರಲ್ಲಿ, ದಿ ಬ್ಲ್ಯಾಕ್ ಐಡ್ ಫೀಸ್ ತಮ್ಮ ಜನಪ್ರಿಯ "ಡೋಂಟ್ ಪಂಕ್ ವಿತ್ ಮೈ ಹಾರ್ಟ್"ನಲ್ಲಿ ಅವರ "ಏ ನೌಜವಾನ್ ಸಬ್ ಕುಚ್ ಯಹಾ" (ಅಪರಾದ್, ೧೯೭೨) ಮತ್ತು "ಹೇ ಮೇರಾ ದಿಲ್ ಪ್ಯಾರ್ ಕಾ ದಿವಾನ" (ಡಾನ್, ೧೯೭೮) ಹಾಡುಗಳ ನಮೂನೆಯನ್ನು ಹೊಂದಿದ್ದರು. ೨೦೦೬ರ ಕೊನೆಯಲ್ಲಿ, ಆಶಾ ಆಸ್ಟ್ರೇಲಿಯಾದ ಟೆಸ್ಟ್ ಕ್ರಿಕೆಟ್ ಸ್ಟಾರ್, ಬ್ರೆತ್ ಲೀರ ಜೊತೆ ಕಾರ್ಯನಿರ್ವಹಿಸಿದ್ದರು. ಏಕ ವ್ಯಕ್ತಿ ಪ್ರದರ್ಶನ, ಯು ಆರ್ ದಿ ಫರ್ ಮಿ ಚಾರ್ಟ್ಸ್‌ನಲ್ಲಿ ೪ನೇ ಸ್ಥಾನದ ಪ್ರಥಮ ಪ್ರವೇಶವನ್ನು ಮಾಡಿ ನಂತರ ಎತ್ತರದ ೨ನೆಯ ಸ್ಥಾನವನ್ನು ತಲುಪಿತ್ತು. ೨೦೦೬ರಲ್ಲಿ ಆಶಾ ಪಾಕಿಸ್ತಾನಿ ಚಿತ್ರ ಮೆ ಏಕ್ ದಿನ್ ಲೌಟ್ ಕೇ ಆವೂಂಗಾ ಧ್ವನಿಸುರುಳಿಗಾಗಿ, ಪಾಕಿಸ್ತಾನದ ಪಾಪ್ ಗಾಯಕ ಜಾವೆದ್ ಅಹಮದ್ ಜೊತೆಯಲ್ಲಿ ದಿಲ್ ಕೆ ತಾರ್ ಬಜೆ ಹಾಡಿನ ಧ್ವನಿ ಮುದ್ರಣವನ್ನು ಮಾಡಿದ್ದರು. ಈ ಹಾಡನ್ನು ಚಲನಚಿತ್ರ ಪ್ರಚಾರ ಅಭಿಯಾನದ ಭಾಗವಾಗಿ ಪ್ರಸಾರಮಾಡಲಾಗಿತ್ತು ಮತ್ತು ಇದು ಟಾಪ್ ಮ್ಯೂಸಿಕ್ ಚಾರ್ಟ್ಸ್‌ನ ವೈಶಿಷ್ಟ್ಯತೆಯೊಂದಿಗೆ ಅತ್ಯಂತ ಜನಪ್ರಿಯಗೊಂಡಿತ್ತು.
ಕನ್ನಡದೊಂದಿಗಿನ ನಂಟು
[ಬದಲಾಯಿಸಿ]ಆಶಾ ಕನ್ನಡದಲ್ಲಿ ಮೊದಲು ಹಾಡಿದ ಹಾಡು "ಯಾಕೋ ಏನೋ ಸೆರಗು.." ಎಂಬ, 1967ರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ್ದು. ಈ ಚಿತ್ರದ ಸಂಗೀತ ನಿರ್ದೇಶಕರಾದ ಲಕ್ಷ್ಮಣ್ ಬರ್ಲೇಕರ್ ಅವರು ಇದೇ ಚಿತ್ರದಲ್ಲಿ ಲತಾ, ಉಷಾ ಮಂಗೇಶ್ಕರ್ ಅವರಿಂದಲೂ ಹಾಡಿಸಿದ್ದರು.
ವೈಜಯಂತಿಮಾಲಾ ಅವರ ಮೊದಲ ಕನ್ನಡ ಚಿತ್ರವಾಗಿದ್ದ "ಆಶಾ ನಿರಾಶಾ" ಚಿತ್ರದಲ್ಲೂ ಆಶಾ ಹಾಡಿದ್ದರು. ಆದರೆ ಕಾರಣಾಂತರಗಳಿಂದ ಚಿತ್ರ ಬಿಡುಗೆಡೆಯಾಗಲಿಲ್ಲ[೨೧]
ಇದಾದ ಬಳಿಕ ದೂರದ ಬೆಟ್ಟ ಚಿತ್ರದಲ್ಲಿ ಜಿ.ಕೆ.ವೆಂಕಟೇಶ್ ಅವರ ಸ್ವರಸಂಯೋಜನೆಯಲ್ಲಿ "ಸವಾಲು ಹಾಕಿ ಸೋಲಿಸಿ ಎಲ್ಲರ.." ಎಂಬ ಹಾಡನ್ನು ಹಾಡಿದ್ದಾರೆ.
ಅದಾದ ಮೇಲೆ ಆಶಾ ಮತ್ತೆ ಹಾಡಿದ್ದು 2010ರ ಮತ್ತೆ ಮುಂಗಾರು ಚಿತ್ರದ "ಹೇಳದೆ ಕಾರಣ ಹೋದೆಯಾ" ಎಂಬ, ದುಃಖ ತುಂಬಿದ ಹಾಡು.
ವೈಯಕ್ತಿಕ ಜೀವನ
[ಬದಲಾಯಿಸಿ]ಆಶಾರ ಮನೆಯು ದಕ್ಷಿಣ ಮುಂಬಯಿ ಪ್ರದೇಶದಲ್ಲಿನ ಪೆದ್ದರ್ ರಸ್ತೆರಲ್ಲಿನ ಪ್ರಭುಕುಂಜ್ ಅಪಾರ್ಟ್‌ಮೆಂಟ್‌ನಲ್ಲಿದೆ. ಅವರು ಮೂವರು ಮಕ್ಕಳನ್ನು ಮತ್ತು ಐದು ಜನ ಮಮ್ಮೊಕ್ಕಳನ್ನು ಹೊಂದಿದ್ದಾರೆ. ಹೇಮಂತ್ ಭೋಂಸ್ಲೆ ಅವರ ಹಿರಿಯ ಮಗ(ಹೇಮಂತ್ ಕುಮಾರ್ ಎಂದು ಹೆಸರಿಡಲಾಗಿದೆ), ಅವರು ತಮ್ಮ ಆರಂಭದ ಬಹುತೇಕ ವರ್ಷಗಳನ್ನು ವಿಮಾನ ಚಾಲಕನಾಗಿಯೇ ಕಳಿದಿದ್ದರು ಮತ್ತು ಸಂಗೀತ ನಿರ್ದೇಶಕನಾಗಿ ಸ್ವಲ್ಪ ಮಟ್ಟಿನ ವೃತ್ತಿ ಜೀವನವನ್ನು ಪಡೆಯಲು ಆ ಹುದ್ದೆಯನ್ನು ತೊರೆದಿದ್ದರು. ಹೇಮಂತ್‌ಗಿಂತಲೂ ಚಿಕ್ಕವಳಾದ ಆಶಾರ ಮಗಳು ವರ್ಷ, ದಿ ಸಂಡೇ ಅಬ್‌ಸೆರ್ವೆರ್ ಮತ್ತು ರೆಡಿಫ್ ಗಾಗಿ ಲೆಖಕಿಯಾಗಿ ಕಾರ್ಯನಿರ್ವಹಿಸಿದ್ದರು. ಕಿರಿಯ ಮಗ ಆನಂದ್ ಭೋಂಸ್ಲೆ, ಅವರು ವ್ಯವಹಾರ ಮತ್ತು ಚಲನಚಿತ್ರ ನಿರ್ದೇಶನವನ್ನು ಅಭ್ಯಾಸಿಸಿದ್ದರು. ಅವರು ಆಶಾರ ವೃತ್ತಿ ಜೀವನದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮೊಮ್ಮಗ, ಚೈತನ್ಯ (ಚಿಂಟು) ಭೋಂಸ್ಲೆ (ಹೇಮಂತ್ ಅವರ ಮಗ) ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾನೆ, ಯಶಸ್ವೀ ಬಾಯ್ ಬ್ಯಾಂಡ್, "ಬ್ಯಾಂಡ್ ಆಫ್ ಬಾಯ್ಸ್"ನ ಸದಸ್ಯನಾಗಿದ್ದಾನೆ. ಅವರ ಸಹೋದರಿಯರಾದ ಲತಾ ಹಾಗೂ ಉಶಾ ಮಂಗೇಶ್ಕರ್ ಹಿನ್ನೆಲೆ ಸಂಗೀತಕಾರರಾಗಿದ್ದಾರೆ. ಇನ್ನೊಬ್ಬ ಸಹೋದರಿ ಮೀನಾ ಮಂಗೇಶ್ಕರ್ ಹಾಗೂ ಸಹೋದರ ಹೃದಯನಾಥ ಮಂಗೇಶ್ಕರ್ ಅವರು ಸಂಗೀತ ನಿರ್ದೇಶಕರಾಗಿದ್ದಾರೆ. ಆಶಾ ಅವರು ಒಳ್ಳೆಯ ಪಾಕಶಾಸ್ತ್ರಜ್ಞೆಯಾಗಿದ್ದರು ಹಾಗೂ ತಮ್ಮ ಪ್ರೀತಿಯ ಗಂಡನಿಗಾಗಿ ತಾವೇ ಅಡುಗೆ ಮಾಡುತ್ತಿದ್ದರು. ಬಾಲಿವುಡ್‌ನ ಪ್ರಮುಖರು ಸದಾ ಆಕೆಯ ಬಳಿ ಕಡಾಯಿ ಘೋಸ್ಟ್ ಹಾಗೂ ಬಿರಿಯಾನಿ ಗಾಗಿ ಬೇಡಿಕೆ ಇಡುತ್ತಿದ್ದರು. ಕೇಳಿದವರನ್ನು ಹೆಚ್ಚಾಗಿ ನಿರಾಶೆ ಮಾಡುತ್ತಿರಲಿಲ್ಲ, ಅವರು ತಯಾರಿಸುವ ಪಾಯಾ ಕರಿ , ಗೋವಾದ ಫಿಶ್ ಕರಿ ಹಾಗೂ ದಾಲ್ ಗಳು ಬಾಲಿವುಡ್‌ನ ಕಪೂರ್ ಕುಟುಂಬದಲ್ಲಿ ಜನಪ್ರಿಯವಾಗಿದ್ದವು. ಒಂದು ಬಾರಿ ಟೈಮ್ಸ್ ಆಫ್ ಇಂಡಿಯಾ ದ ಒಂದು ಸಂದರ್ಶನದಲ್ಲಿ, ಅವರು ಸಂಗೀತಗಾರ್ತಿಯ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳದೆ ಇದ್ದರೆ, ಬೇರೆ ಏನನ್ನು ಆಯ್ಕೆ ಮಾಡುತ್ತಿದ್ದರೆಂದು ಕೇಳಲಾಗಿತ್ತು, ಅದಕ್ಕೆ ಆಕೆಯ ಉತ್ತರ " ನಾನು ಅಡುಗೆಯವಳಾಗುತ್ತಿದ್ದೆ. ನಾಲ್ಕು ಮನೆಗಳಲ್ಲಿ ಅಡುಗೆ ಕೆಲಸ ಮಾಡಿ ಹಣ ಸಂಪಾದಿಸುತ್ತಿದ್ದೆ. ಆಶಾ ಅವರು ಯಶಸ್ವೀ ಹೋಟೆಲ್ ಉದ್ಯಮಿಯಾಗಿದ್ದಾರೆ ಹಾಗೂ ಆಶಾಸ್ ಎಂಬ ಹೆಸರಿನ ಹೋಟೆಲುಗಳನ್ನು ದುಬೈ ಹಾಗೂ ಕುವೈತ್‌ಗಳಲ್ಲಿ ನಡೆಸುತ್ತಿದ್ದಾರೆ. ಆಶಾಸ್‌ನಲ್ಲಿ ಸಾಂಪ್ರದಾಯಿಕ ವಾಯುವ್ಯ ಭಾರತೀಯ ಅಡುಗೆಗಳು ದೊರೆಯುತ್ತವೆ. ಆಶಾಸ್ ಹೋಟೆಲ್ ದುಬೈನ ವಫಿ ಸಿಟಿ ಡೆವಲಪ್ಮೆಂಟ್‌ನಲ್ಲಿ ಇದೆ, ಹಾಗೂ ಕುವೈತ್‌ನ ಮೂರು ಹೋಟೆಲ್‌ಗಳು ದಿ ಅವೆನ್ಯೂಸ್ ಮಾಲ್, ಮರೀನಾ ಮಾಲ್ ಹಾಗೂ ಸ್ಪೂನ್ಸ್ ಕಾಂಪ್ಲೆಕ್ಸ್‌ನಲ್ಲಿ ಮೂರನೆಯ ಹೋಟೆಲ್ ಪ್ರಾರಂಭವಾಗಿದೆ. ಅವರ ಇತರೆ ಹೋಟೆಲ್ಲುಗಳು ಅಬು ಧಾಬಿಯ ಖಾಲ್ದಿಯಾ ಮಾಲ್‌ನಲ್ಲಿ, ದೋಹಾದ ವಿಲೇಜಿಯೊ ಹಾಗೂ ಬೆಹ್ರೇನ್‌ನ ಸಿಟಿ ಸೆಂಟರ್ ಮಾಲ್‌ನಲ್ಲಿ ಇವೆ, ಮುಂಬರುವ ದಿನಗಳಲ್ಲಿ ದುಬೈನ ಮಾಲ್ ಎಮಿರೇಟ್ಸ್ ಹಾಗೂ ಈಜಿಪ್ಟ್‌ನ ಕೈರೊದಲ್ಲಿ ಪ್ರಾರಂಭಿಸುವ ಯೋಜನೆ ಇದೆ. ಆಶಾ ಭೋಸ್ಲೆಯವರು ಈ ವ್ಯವಹಾರದಲ್ಲಿ ೨೦% ಪಾಲನ್ನು ಹೊಂದಿದ್ದಾರೆ. ಆಶಾ ಅವರು ದಿನನಿತ್ಯದ ವ್ಯವಹಾರಗಳನ್ನು ನೋಡಿಕೊಳ್ಳುವುದಿಲ್ಲ, ಹೋಟೆಲ್ಲುಗಳ ನಿರ್ವಹಣೆಯು ವಫಿ ಗ್ರೂಪ್‌ನಿಂದ ನಡೆಸಲ್ಪಡುತ್ತಿದೆ. ಅವರು ಅಡುಗೆ ಕೋಣೆಯ ಹಾಗೂ ಅಲಂಕಾರಗಳ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾರೆ. ವೈಯಕ್ತಿಕವಾಗಿ ಅವರೇ ಆರು ತಿಂಗಳ ಕಾಲ ಛೆಫ್ ತರಬೇತಿಯನ್ನು ಪಡೆದಿದ್ದಾರೆ. ಡಿಸೆಂಬರ್ ೨೦೦೪ರ ಮೆನು ಮ್ಯಾಗಝೀನ್ ವರದಿಯ ಪ್ರಕಾರ,[೨೨] ಹ್ಯಾರಿ ರಾಮ್ಸ್‌ದೆನ್‌ನ (ಮೀನು ಹಾಗೂ ಚಿಪ್ಸ್‌ಗಳ ಶ್ರೇಣಿ)ಯ ಮಾಜಿ ಮುಖ್ಯಸ್ಥ ರಷೆಲ್ ಸ್ಕಾಟ್ ಅವರು ಮುಂಬರುವ ಐದು ವರ್ಷಗಳಲ್ಲಿ ಯುಕೆಯಲ್ಲಿ ಆಶಾಸ್ ಬ್ರ್ಯಾಂಡ್‌ನ ೪೦ ಹೋಟೆಲುಗಳನ್ನು ಪ್ರಾರಂಭಿಸುವ ಯೋಜನೆ ಹೊಂದಿದ್ದಾರೆ. ಆಶಾಸ್‌ನ ಶ್ರೇಣಿಯ, ಆಶಾತಾಯಿ ಯುಕೆಯ ಬರ್ಮಿಂಗ್‌ಹ್ಯಾಮ್‌ನಲ್ಲಿ ಹೊಸ ಹೋಟೆಲ್ಲನ್ನು ಇತ್ತೀಚೆಗೆ ಪ್ರಾರಂಭಿಸಲಾಯಿತು. ಆಶಾ ಅವರು ಇಷ್ಟಪಡುವ ಫ್ಯಾಷನ್ ಎಂದರೆ ಹೊಳೆಯುವ ಕಸೂತಿ ಹೊಂದಿರುವ ಬಿಳಿ ಸೀರೆ, ಮುತ್ತು ಹಾಗೂ ವಜ್ರಗಳನ್ನು ಹೊಂದಿರುವ ಕುತ್ತಿಗೆ ಆಭರಣಗಳು. ಕ್ರೋನೊಸ್ ಕ್ವಾರ್ಟೆಟ್‌ನ ಹ್ಯಾರಿಂಗ್ಟನ್ ಅವರು "ಮೊದಲ ಬಾರಿಗೆ ನಾನು ಆಶಾಜಿ ಯವರನ್ನು ಭೇಟಿ ಮಾಡಿದಾಗ ಅವರು ಸುಂದರವಾದ ಸೀರೆಯನ್ನು ಉಟ್ಟು ವಜ್ರಾಭರಣ ದರಿಸಿದ್ದರು, ಹಾಗೂ ರಾಣಿಯ ಹಾಗೆ ಕಾಣಿಸುತ್ತಿದ್ದರು. ಹಾಗೇ ನಾನು ಕೆಳಗೆ ನೋಡಿದಾಗ ಕಾಲಿನಲ್ಲಿ ಟೆನ್ನಿಸ್ ಶೂಗಳನ್ನು ಧರಿಸಿದ್ದರು! ನಾನು ಈ ಹೆಂಗಸನ್ನು ಇಷ್ಟಪಡುವೆನೆಂದು ಕೊಂಡೆ." ಎಂದು ಹೇಳಿದ್ದರು ಆಶಾ ಅವರು ಒಳ್ಳೆಯ ಅಣಕು ಕಲಾವಿದರು ಕೂಡಾ ಆಗಿದ್ದಾರೆ. ಏಪ್ರಿಲ್ ೨೨, ೨೦೦೪ರಲ್ಲಿ ದುಬೈನ ವಿಶ್ವ ವಾಣಿಜ್ಯ ಕಟ್ಟಡದಲ್ಲಿ ನಡೆದ ಒಂದು ಸಮಾರಂಭದಲ್ಲಿ, ಅವರು ಕಭಿ ತೊ ನಝರ್ ಮಿಲಾವೊ ಹಾಡಿನಲ್ಲಿ ನೂರ್ ಜಹಾನ್, ಲತಾ ಮಂಗೇಶ್ಕರ್ ಹಾಗೂ ಗುಲಾಮ್ ಅಲಿಯವರ ಧ್ವನಿಗಳನ್ನು ಅಣಕ ಮಾಡಿ ಹಾಡಿದರು. ಇತ್ತೀಚಿನ ದಿನಗಳಲ್ಲಿ, ಅವರ ಹಾಡುಗಾರಿಕೆ ಮತ್ತು ಹೋಟೆಲ್ಲಿನ ನಡುವೆ ತಮ್ಮ ಜೀವನ ಚರಿತ್ರೆಯ ವಿಷಯದಲ್ಲೂ ಆಕೆ ಕಾರ್ಯನಿರ್ವಹಿಸುತ್ತಿದ್ದಾರೆ.
ಲತಾ ಮಂಗೇಶ್ಕರ್ ಅವರೊಂದಿಗೆ ಸ್ಪರ್ಧೆ
[ಬದಲಾಯಿಸಿ]ಆಶಾರ ಒಡಹುಟ್ಟಿದ ಸ್ಪರ್ಧಿ ಸಹೋದರಿ ಲತಾ ಮಂಗೇಶ್ಕರ್ ಅವರು ಈ ಸ್ಪರ್ಧೆಯ ಬಗ್ಗೆ ಹೇಳುವುದೆಲ್ಲಾ ಬರೀ ಕಥೆಗಳು ಎಂದು ಯಾವಾಗಲೂ ಒತ್ತಿ ಹೇಳುತ್ತಿರುತ್ತಾರೆ.[೧೭] ಚಿಕ್ಕ ಮಕ್ಕಳಿರುವ ಹಾಗೇ ಅವರು ಬಹಳ ಆತ್ಮೀಯರು. ಲತಾ ಅವರು ಆಶಾ ಅವರನ್ನು ಮಗುವಿನ ಹಾಗೆ ಎತ್ತಿಕೊಳ್ಳುತ್ತಿದ್ದರು. ಅವರಿಬ್ಬರೂ ಚಿಕ್ಕವರಿರುವಾಗ ಬಿಟ್ಟಿರುತ್ತಿರಲಿಲ್ಲ, ಲತಾ ಶಾಲೆಗೆ ಹೋಗುವಾಗ ಆಶಾರನ್ನು ಜೊತೆಗೇ ಕರೆದು ಕೊಂಡು ಹೋಗುತ್ತಿದ್ದರು, ಶಿಕ್ಷಕಿಯು ಒಂದೇ ಶುಲ್ಕದಲ್ಲಿ ಇಬ್ಬರು ಶಾಲೆಗೆ ಬರಲು ಸಾಧ್ಯವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ಲತಾ ಅವರು ಆಶಾರನ್ನು ಬಿಟ್ಟು ಶಾಲೆಗೆ ಬರಲು ಇಷ್ಟವಿಲ್ಲದೆ ಓದನ್ನೇ ಬಿಟ್ಟುಬಿಟ್ಟರು.[೨೩] ಆಶಾ ಅವರು ತಮ್ಮ ಪ್ರೇಮಿಯ ಜೊತೆ ಪಲಾಯನ ಮಾಡಿ, ತಮ್ಮ ಮೇಲೆ ಸಂಸಾರದ ಹೊರೆ ಹೊರಿಸಿ ತಾವೊಬ್ಬರೇ ಸಂಸಾರಕ್ಕಾಗಿ ಹಾಡುವಂತೆ ಮಾಡಿದುದನ್ನು ಬೇಜವಾಬ್ದಾರಿಯುತ ವರ್ತನೆ ಎಂದು ಆಶಾ ಅಂದು ಕೊಂಡರು. ಇದು ಇಬ್ಬರನ್ನು ಚಿಂತೆಗೀಡುಮಾಡಿತು. ಆಶಾ ಅವರು ಒಂದು ಸಂದರ್ಶನದಲ್ಲಿ ತಾವೇ ಒಪ್ಪಿಕೊಂಡಿದ್ದಾರೆ[೨೩] — "ನನ್ನದು ಪ್ರೇಮ ವಿವಾಹ ಹಾಗೂ ಲತಾ ದೀದಿ (ಅಕ್ಕ) ಬಹಳಷ್ಟು ದಿನ ನನ್ನ ಜೊತೆ ಮಾತನಾಡಲಿಲ್ಲ. ನಮ್ಮ ಒಪ್ಪಂದವನ್ನು ಆಕೆ ಒಪ್ಪಿಕೊಳ್ಳಲಿಲ್ಲ." ಆ ಸಮಯದಲ್ಲಿ ಅವರ ಸಂಬಂಧವು ಬಹಳಷ್ಟು ವ್ಯತಿರಿಕ್ತವಾಗಿದ್ದು, ಬಹಳ ಸಮಯದವರೆಗೆ ಅವರಿಬ್ಬರ ನಡುವೆ ಮಾತುಕತೆ ಇರಲಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡುವ ಮೊದಲ ದಿನಗಳಲ್ಲಿ ತನ್ನ ಅಕ್ಕನಿಗೆ ತಡೆಯಾಗುವಂತೆ ಆಶಾ ಅವರು ನಡೆದುಕೊಳ್ಳುತ್ತಿದ್ದರು. ಕೆಲವರು ಹೇಳುವಂತೆ ಆಶಾ ಹಾಗೂ ಒ. ಪಿ. ನಯ್ಯರ್ ಅವರ ಸಂಬಂಧವನ್ನು ಹಿಯಾಳಿಸಿ ಆಶಾ ಅವರು ಮಾತನಾಡಿದ್ದರಂತೆ. ಈ ಇಬ್ಬರು ಸಹೋದರಿಯರ ಭಿನ್ನಾಭಿಪ್ರಾಯಗಳ ಮಧ್ಯೆ ಒ ಪಿ ನಯ್ಯರ್ ಅವರು ಎಂದಿಗೂ ಲತಾ ಅವರೊಂದಿಗೆ ಕೆಲಸ ಮಾಡದಂತೆ ನಿರ್ಧರಿಸಿದರು. ಒ.ಪಿ. ನಯ್ಯರ್ ಅವರು ಒಮ್ಮೆ ಹೀಗೆ ಹೇಳಿದ್ದಾರೆ — "ಆಶಾ ಹಾಗೂ ಲತಾ ಮುಂಬಯಿನ ಪೆಡ್ಡರ್ ರಸ್ತೆಯ ಎದುರು ಬದುರು ಮನೆಗಳಲ್ಲಿ ವಾಸಿಸುತ್ತಿದ್ದು, ಒಬ್ಬಳೇ ಮನೆಕೆಲಸದವಳನ್ನು ಹೊಂದಿದ್ದಾರೆ. ಮನೆ ಕೆಲಸದಾಕೆಯು ಅಕ್ಕ ಲತಾ ಅವರು ಏನೋ ಆಶ್ಚರ್ಯಕರವಾಗಿರುವ ಒಂದು ಹಾಡನ್ನು ಧ್ವನಿಮುದ್ರಿಸಿ ತಂಗಿಯನ್ನು ಕೆಳಮಟ್ಟಕ್ಕೆ ತರುತ್ತಿದ್ದಾರೆಂದು ಆಶಾ ಅವರ ಬಳಿ ಹೇಳಿದ್ದಾಳೆ. ಆ ರೀತಿಯಲ್ಲಿ ಲತಾ ಭಯವು ತಂಗಿಯನ್ನು ಕಾಡುತ್ತಿತ್ತು, ಆಕೆಯ ಸ್ವತಃ ಧ್ವನಿ ಹಾಗೂ ವಿಶೇಷತೆಯನ್ನು ಎತ್ತಿಹಿಡಿದು ಪ್ರೋತ್ಸಾಹಿಸುವಲ್ಲಿ ನನಗೆ ತಿಂಗಳುಗಳೇ ಬೇಕಾದವು."[೧೯] ಆಶಾ ಅವರೇ ಹೇಳುವಂತೆ ಲತಾಗಿಂತ ಭಿನ್ನವಾಗಿ ಹಾಡುವುದನ್ನು ಕಲಿಯಲು, ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸಲು ವರ್ಷಗಟ್ಟಲೆ ಕೆಲಸ ಮಾಡಿದ್ದಾರೆ, ತನ್ನದೇ ನೆಲೆಯನ್ನು ಕಂಡುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.[೨೩] ಆಶಾ ಹಾಗೂ ಲತಾ ಅವರು ಹಲವಾರು ಹಾಡುಗಳನ್ನು ಒಟ್ಟಿಗೆ ಹಾಡಿದ್ದಾರೆ. ಅವರು ಒಟ್ಟಿಗೆ ಮೊದಲಬಾರಿಗೆ ಹಾಡಿದ್ದು ದಾಮನ್ (೧೯೫೧) ಚಿತ್ರದಲ್ಲಿ.[೧೯] ಇಬ್ಬರೂ ಹಾಡಿರುವ ಇನ್ನೂ ಕೆಲವು ಹಾಡುಗಳೆಂದರೆ ಮಾನ್ ಭಾವನ್ ಕೆ ಘರ್ ಆಯೆ (ಚೋರಿ ಚೋರಿ , ೧೯೫೬), ಸಖಿ ರಿ ಸನ್ ಬೋಲೆ ಪಪಿಹಾ ಉಸ್ ಪಾರ್ (ಮಿಸ್ ಮೇರಿ , ೧೯೫೭), ಓ ಚಾಂದ್ ಜಹಾನ್ ವೋ ಜಾಯೆ (ಶಾರದಾ , ೧೯೫೭), ಮೇರೆ ಮೆಹಬೂಬ್ ಮೈ ಕ್ಯಾ ನಹಿ (ಮೇರೆ ಮೆಹಬೂಬ್ , ೧೯೬೩), ಐ ಕಾಶ್ ಕಿಸಿ ದೀವಾನೆ ಕೊ (ಆಯೆ ದಿನ್ ಬಾಹರ್ ಕೆ , ೧೯೬೬), ಮೈ ಚಲೀ ಮೈ ಚಲೀ (ಪಡೋಸನ್ , ೧೯೬೮), ಛಾಪ್ ತಿಲಕ್ ಸಬ್ (ಮೈ ತುಲ್ಸೀ ತೆರೆ ಆಂಗನ್ ಮೆ , ೧೯೭೮), ಹಾಗೂ ಮಾ ಕ್ಯೂಂ ಬೆಹಕಾ (ಉತ್ಸವ್ , ೧೯೮೪). ಹಾಡುವಾಗ ಆಶಾ ಅವರು ತಮ್ಮ ಎಡಗೈಯಲ್ಲಿ ಪುಸ್ತಕವನ್ನು ಹಿಡಿದು ಹಾಡುತ್ತಿದ್ದರೆ ಲತಾ ಅವರು ತಮ್ಮ ಬಲಗೈಯಲ್ಲಿ ಪುಸ್ತಕವನ್ನು ಹಿಡಿದಿರುತ್ತಿದ್ದರು. ಇದರರ್ಥ ಲತಾ ಅವರು ಯಾವಾಗಲೂ ಆಶಾ ಅವರ ಮುಖ ನೋಡದೆ ಒಬ್ಬರಿಗೊಬ್ಬರು ದೂರವೇ ಇರುವುದನ್ನು ನಿರೀಕ್ಷಿಸುತ್ತಿದ್ದರು.[೨೩] ಸಾಝ್ ಚಲನಚಿತ್ರದಲ್ಲಿ ಲತಾ ಮತ್ತು ಆಶಾರ ಸ್ಪರ್ಧೆಯನ್ನು ತೋರಿಸಲಾಗಿದೆ.[೨೪] ಚಲನಚಿತ್ರದ ಬಗ್ಗೆ ಆಶಾ ಹೀಗೆ ಹೇಳಿದ್ದಾರೆ — "ಎರಡು ಹೆಂಗಸರ ಉದ್ದ ಜಡೆಗಳೊಂದಿಗೆ, ಕೆಲವು ಘಟನೆಗಳನ್ನು ಹಾಗೂ ಅವನ್ನು ೩ ಘಂಟೆಗಳವರೆಗೆ ಎಳೆದು ಚಿತ್ರೀಕರಿಸುವುದು ಸಮಯವನ್ನು ಹಾಳು ಮಾಡಿದ ಹಾಗೆ."[೨೩] ಇತ್ತೀಚೆಗಿನ ಕೆಲವು ವರ್ಷಗಳಲ್ಲಿ, ಆಶಾ ಹಾಗೂ ಲತಾ ಸಾರ್ವಜನಿಕ ಸಮಾರಂಭಗಳಲ್ಲಿ ಒಟ್ಟೊಟ್ಟಿಗೆ ಸಂತೋಷವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದಿ ಟೈಮ್ಸ್ ಆಫ್ ಇಂಡಿಯಾ ದೊಂದಿಗಿನ ಒಂದು ಸಂದರ್ಶನದಲ್ಲಿ, ಆಶಾ ಹೀಗೆ ಹೇಳಿದ್ದಾರೆ - "ನನಗೆ ನೆನಪಿದೆ ಚಲನಚಿತ್ರರಂಗದ ಹಲವರು ಅವರ ನಿಷ್ಠೆಯನ್ನು ತೋರಿಸಿಕೊಳ್ಳಲು ಅಕ್ಕನೊಂದಿಗೆ ಹೆಚ್ಚು ಮಾತನಾಡಿ ನನ್ನನ್ನು ದೂರ ಇಡುತ್ತಿದ್ದರು. ನಂತರದಲ್ಲಿ, ದೀದಿ (ಅಕ್ಕ) ಮತ್ತು ನಾನು ಆ ವಿಷಯವಾಗಿ ನಗುತ್ತಿದ್ದೆವು!"
ಪ್ರಶಸ್ತಿಗಳು
[ಬದಲಾಯಿಸಿ]- ಫಿಲ್ಮ್‌ಫೇರ್ ಪ್ರಶಸ್ತಿಗಳು
ಆಶಾ ಭೋಂಸ್ಲೆಯವರು ೧೮ ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದು ಅದರಲ್ಲಿ ಏಳು ಬಾರಿ ಪ್ರಶಸ್ತಿ ಗಳಿಸಿದ್ದಾರೆ.[೨೫] ಅವರು ತಮ್ಮ ಮೊದಲ ಎರಡು ಪ್ರಶಸ್ತಿಗಳನ್ನು ೧೯೬೭ ಹಾಗೂ ೧೯೬೮ರಲ್ಲಿ ಪಡೆದುಕೊಂಡರು, ಆಗಿನ್ನೂ ಲತಾ ಮಂಗೇಶ್ಕರ್ ಅವರು ಪ್ರಶಸ್ತಿಗಳನ್ನು ಸ್ವೀಕರಿಸುತ್ತಿದ್ದರು (೧೯೬೯ರ ನಂತರ ಮಂಗೇಶ್ಕರ್ ಅವರು ಹೊಸ ಪ್ರತಿಭೆಯನ್ನು ಪ್ರೋತ್ಸಾಹಿಸುವುದಕ್ಕಾಗಿ ಅವರ ಹೆಸರನ್ನು ನಾಮನಿರ್ದೇಶಿತಗೊಳ್ಳದಂತೆ ಮನವಿ ಮಾಡಿಕೊಂಡರು). ೧೯೭೯ರಲ್ಲಿ ಪ್ರಶಸ್ತಿ ಸ್ವೀಕರಿಸಿದ ನಂತರ, ಭೋಂಸ್ಲೆಯವರು ತಮ್ಮ ಅಕ್ಕನೊಂದಿಗೆ ಸ್ಪರ್ಧಿಸಿದರು ಹಾಗೂ ಆಕೆಯ ಹೆಸರನ್ನು ನಾಮನಿರ್ದೇಶನಕ್ಕೆ ಸೂಚಿಸಬಾರದೆಂದು ವಿನಂತಿಸಿಕೊಂಡರು. ಆದಾಗ್ಯೂ, ಭೋಂಸ್ಲೆಯವರು ಇಲ್ಲಿಯವರೆಗೆ ಹಲವಾರು ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದಾರೆ, ಅಲ್ಕಾ ಯಾಗ್ನಿಕ್ ಅವರ ಸ್ಪರ್ಧಿಯಾಗಿದ್ದಾರೆ. ನಂತರದಲ್ಲಿ ಅವರಿಗೆ ೧೯೯೬ರಲ್ಲಿ ರಂಗೀಲಾ ಚಿತ್ರಕ್ಕಾಗಿ ವಿಶೇಷ ಪ್ರಶಸ್ತಿ ಲಭಿಸಿತು, ಹಾಗೂ ೨೦೦೧ರಲ್ಲಿ ಜೀವಮಾನದ ಸಾಧನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ ಲಭಿಸಿತು. ಅವರು ಗಳಿಸಿದ ಫಿಲ್ಮ್‌ಫೇರ್ ಪ್ರಶಸ್ತಿಗಳು ಕೆಳಕಂಡಂತಿವೆ: ಫಿಲ್ಮ್‌ಫೇರ್‌ನ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ:
- ೧೯೬೮: "ಗರೀಬೋಂ ಕಿ ಸುನೋ" (ದಸ್ ಲಾಕ್ , ೧೯೬೬)
- ೧೯೬೯: "ಪರ್ದೇ ಮೇ ರೆಹನೆ ದೋ" (ಶಿಕಾರ್ , ೧೯೬೮)
- ೧೯೭೨: "ಪಿಯಾ ತೂ ಅಬ್ ತೊ ಆಜಾ" (ಕಾರವಾನ್ , ೧೯೭೧)
- ೧೯೭೩: "ದಮ್ ಮಾರೊ ದಮ್" (ಹರೇ ರಾಮ ಹರೇ ಕೃಷ್ಣಾ , ೧೯೭೨)
- ೧೯೭೪: "ಹೋನೆ ಲಗೀ ಹೈ ರಾತ್" (ನೈನಾ , ೧೯೭೩)
- ೧೯೭೫: "ಚೈನ್ ಸೆ ಹಮ್ಕೋ ಕಭೀ" (ಪ್ರಾಣ್ ಜಾಯೇ ಪರ್ ವಚನ್ ನಾ ಜಾಯೆ , ೧೯೭೪)
- ೧೯೭೯: "ಯೇ ಮೇರಾ ದಿಲ್" (ಡಾನ್ , ೧೯೭೮)
ಇತರೇ ಪ್ರಶಸ್ತಿಗಳು
- ೧೯೯೬ - ವಿಶೇಷ ಪ್ರಶಸ್ತಿ (ರಂಗೀಲಾ , ೧೯೯೫)
- ೨೦೦೮ - ಫಿಲಂಫೇರ್ ಲೈಫ್‌ಟೈಮ್ ಅಚೀವ್‌ಮೆಂಟ್ ಅವಾರ್ಡ್
- ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
ಆಶಾ ಅವರು ಎರಡು ಬಾರಿ ಅತ್ಯುತ್ತಮ ಹಿನ್ನೆಲೆ ಗಾಯಕಿಯಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ:
- ೧೯೮೧: ದಿಲ್ ಚೀಝ್ ಕ್ಯಾ ಹೈ (ಉಮ್ರಾವೊ ಜಾನ್ )
- ೧೯೮೬: ಮೇರಾ ಕುಚ್ ಸಮಾನ್ (ಇಜಾಝತ್ )
- ಇತರೇ ಪ್ರಶಸ್ತಿಗಳು
ಆಶಾ ಅವರು ಇನ್ನೂ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ ಅವುಗಳಲ್ಲಿ ಕೆಲವು ಹೀಗಿವೆ:
- ೧೯೮೭: ನೈಟಿಂಗೇಲ್ ಆಫ್ ಏಷಿಯಾ ಪ್ರಶಸ್ತಿ (ಇಂಡೋ–ಪಾಕ್ ಅಸೋಸಿಯೇಶನ್, ಯುಕೆ) ಅವರಿಂದ.[೨೫]
- ೧೯೮೯: ಲತಾ ಮಂಗೇಶ್ಕರ್ ಪ್ರಶಸ್ತಿ (ಮಧ್ಯ ಪ್ರದೇಶ ಸರ್ಕಾರ).[೨೫]
- ೧೯೯೭: ಸ್ಕ್ರೀನ್ ವೀಡಿಯೋಕಾನ್ ಪ್ರಶಸ್ತಿ (ಜಾನಂ ಸಮ್ಜಾ ಕರೋ ಆಲ್ಬಂಗಾಗಿ).[೨೫]
- ೧೯೯೭: ಎಂಟಿವಿ ಪ್ರಶಸ್ತಿ (ಜಾನಂ ಸಮ್ಜಾ ಕರೊ ಆಲ್ಬಂಗಾಗಿ).[೨೫]
- ೧೯೯೭: ಚಾನಲ್ ವಿ ಪ್ರಶಸ್ತಿ (ಜಾನಂ ಸಮ್ಜಾ ಕರೋ ಆಲ್ಬಂಗಾಗಿ).[೨೫]
- ೧೯೯೮: ದಯಾವತಿ ಮೋದಿ ಪ್ರಶಸ್ತಿ.[೨೬]
- ೧೯೯೯: ಲತಾ ಮಂಗೇಶ್ಕರ್ ಪ್ರಶಸ್ತಿ (ಮಹಾರಾಷ್ಟ್ರ ಸರ್ಕಾರ)
- ೨೦೦೦: ಸಿಂಗರ್ ಆಫ್ ದಿ ಮಿಲೆನಿಯಂ (ದುಬೈ).
- ೨೦೦೦: ಝೀ ಗೋಲ್ಡ್ ಬಾಲಿವುಡ್ ಅವಾರ್ಡ್ (ತಕ್ಷಕ್ ಚಿತ್ರದಮುಝೆ ರಂಗ್ ದೆ ಹಾಡಿಗಾಗಿ).
- ೨೦೦೧: ಎಂಟಿವಿ ಪ್ರಶಸ್ತಿ ( ಕಂಬಕ್ತ್ ಇಷ್ಕ್ ಚಿತ್ರಕ್ಕಾಗಿ).
- ೨೦೦೨: ಬಿಬಿಸಿ ಲೈಫ್ ಟೈಮ್ ಅಚೀವ್‌ಮೆಂಟ್ ಪ್ರಶಸ್ತಿ (ಯುಕೆಯ ಪ್ರಧಾನ ಮಂತ್ರಿ ಟೋನಿ ಬ್ಲೇರ್ ಅವರಿಂದ ಸ್ವೀಕರಿಸಿದ್ದು).
- ೨೦೦೨: ಝೀ ಸಿನೆ ಅವಾರ್ಡ್ ಫಾರ್ ಬೆಸ್ಟ್ ಪ್ಲೇಬ್ಯಾಕ್ ಸಿಂಗರ್ - ಗಾಯಕಿ (ಲಗಾನ್ ಚಿತ್ರದ ರಾಧಾ ಕೈಸೆ ನ ಜಲೆ ಹಾಡಿಗಾಗಿ).
- ೨೦೦೨: ಝೀ ಸಿನಿ ಸ್ಪೆಷಲ್ ಅವಾರ್ಡ್ ಫಾರ್ ಹಾಲ್ ಆಫ್ ಫೇಮ್.
- ೨೦೦೨: ಸ್ಕ್ರೀನ್ ವೀಡಿಯೋಕಾನ್ ಪ್ರಶಸ್ತಿ (ಲಗಾನ್ ಚಿತ್ರದ ರಾಧಾ ಕೈಸೇ ನ ಜಲೆ ಹಾಡಿಗಾಗಿ).
- ೨೦೦೨: ಸ್ಯಾನ್ಸೂಯಿ ಮೂವೀ ಪ್ರಶಸ್ತಿ (ಲಗಾನ್ ಚಿತ್ರದ ರಾಧಾ ಕೈಸೆ ನ ಜಲೆ ಹಾಡಿಗಾಗಿ).
- ೨೦೦೩: ಭಾರತೀಯ ಚಲನಚಿತ್ರಕ್ಕೆ ನೀಡಿರುವ ಅದ್ಭುತ ಕೊಡುಗೆಗಾಗಿ ಸ್ವರಾಲಯ ಯೇಸುದಾಸ್ ಪ್ರಶಸ್ತಿ.[೨೫]
- ೨೦೦೪:ಫೆಡರೇಶನ್ ಆಫ್ ಇಂಡಿಯನ್ ಛೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯಿಂದ ಲಿವಿಂಗ್ ಲಿಜೆಂಡ್ ಪ್ರಶಸ್ತಿ .[೨೭]
- ೨೦೦೫: ಎಂಟಿವಿ ಇಮ್ಮೀಸ್, ಆಜ್ ಜಾನೆ ಕಿ ಜಿದ್ ನಾ ಕರೋ ಗಾಗಿ ಅತ್ಯುತ್ತಮ ಪಾಪ್ ಗಾಯಕಿ.[೨೮]
- ೨೦೦೫: ಸಂಗೀತದ ಅತ್ಯಂತ ಸೊಗಸುಗಾರ ಜನರು.[೨೯]
- ಗೌರವಗಳು ಹಾಗೂ ಮನ್ನಣೆಗಳು
- ೧೯೯೭ರಲ್ಲಿ, ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ಜೊತೆ ಲಿಗೆಸಿ ಆಲ್ಬಂನಲ್ಲಿ ಹಾಡಿದ್ದಕ್ಕಾಗಿ ಆಶಾ ಅವರು ಗ್ರ್ಯಾಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು, ಈ ಪುರಸ್ಕಾರಕ್ಕೆ ಪಾತ್ರರಾದ ಭಾರತ ದೇಶದ ಮೊದಲ ಗಾಯಕರಾದರು.
- ಅವರು ಹದಿನೇಳನೆಯ ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ ಗಳಿಸಿದರು.
- ಭಾರತೀಯ ಚಲನಚಿತ್ರ ರಂಗಕ್ಕೆ ನೀಡಿದ ಅದ್ಭುತ ಕೊಡುಗೆಗಳಿಗಾಗಿ ಅವರು ೨೦೦೦ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗಳಿಸಿದರು.[೨೫]
- ಅಮರಾವತಿ ಹಾಗೂ ಜಲಗಾಂವ್ ವಿಶ್ವವಿದ್ಯಾನಿಲಯಗಳಿಂದ ಸಾಹಿತ್ಯದಲ್ಲಿ ಗೌರವ ಡಾಕ್ಟರೇಟ್‌ಗಳನ್ನು ಪಡೆದುಕೊಂಡರು.
- ಕಲೆಯಲ್ಲಿ ಅತಿ ಹೆಚ್ಚಿನ ಸಾಧನೆಗಾಗಿ ಅವರು ದಿ ಫ್ರಿಡೀ ಮರ್ಕ್ಯುರಿ ಪ್ರಶಸ್ತಿ ಪಡೆದುಕೊಂಡರು.
- ಬರ್ಮಿಂಗ್‌ಹ್ಯಾಂ ಫಿಲ್ಮ್ ಫೆಸ್ಟಿವಲ್ ನವೆಂಬರ್ ೨೦೦೨ರಲ್ಲಿ ಅವರಿಗಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
- ಅವರು ಭಾರತ ಸರ್ಕಾರದಿಂದ ಪದ್ಮ ವಿಭೂಷಣ ಗೌರವವನ್ನು ಸ್ವೀಕರಿಸಿದರು.[೨] Archived 2008-12-21 ವೇಬ್ಯಾಕ್ ಮೆಷಿನ್ ನಲ್ಲಿ.
- ಕಳೆದ ೫೦ ವರ್ಷಗಳಲ್ಲಿ ಸಿಎನ್‌ಎನ್‌ನ ೨೦ ಉತ್ತಮ ಗಾಯಕರಲ್ಲಿ ಒಬ್ಬರಾಗಿದ್ದಾರೆ. [೩][೪] [೫] Archived 2011-05-14 ವೇಬ್ಯಾಕ್ ಮೆಷಿನ್ ನಲ್ಲಿ.
ಅಡಿಟಿಪ್ಪಣಿಗಳು ಹಾಗೂ ಉಲ್ಲೇಖಗಳು
[ಬದಲಾಯಿಸಿ]- ↑ ಆಶಾ ಭೋಂಸ್ಲೆಯವರನ್ನು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ ಆಶಾ, ಆಶಾ ಬೋಸ್ಲೆ, ಆಶಾ ಭೋನ್ಸಲೆ, ಆಶಾ ಭೋಂಸ್ಲೆ, ಆಶಾ ಭೋಂಸ್ಲೇ (ಹೆಚ್ಚಿನ ವಿವರಗಳಿಗಾಗಿ ಅವರ ಐಎಂಡಿಬಿ ಎಂಟ್ರಿ ನೋಡಿ). ಆವರನ್ನು ಯಾವಾಗಲೂ ಆಶಾಜಿ ಎಂದು ಕರೆಯಲಾಗುತ್ತದೆ — ಹಿಂದಿಯಲ್ಲಿ ಜಿ ಸೇರಿಸುವುದು ಅವರಿಗೆ ನೀಡುವ ಗೌರವವನ್ನು ಸೂಚಿಸುತ್ತದೆ.
- ↑ ೨.೦ ೨.೧ Gulzar; Nihalani, Govind; Chatterji, Saibal (2003). Encyclopaedia of Hindi Cinema. Popular Prakashan. pp. 532–533. ISBN 8179910660.
{{cite book}}
: CS1 maint: multiple names: authors list (link) - ↑ Gangadhar, v. (18 May 2001). "Only the best preferred". ದಿ ಹಿಂದೂ. Archived from the original on 2003-08-23. Retrieved 2009-07-22.
{{cite web}}
: Italic or bold markup not allowed in:|publisher=
(help) - ↑ Arnold, Alison (2000). The Garland Encyclopedia of World Music. Taylor & Francis. pp. 420–421. ISBN 0824049462.
- ↑ "IMDB entry". IMDB. Retrieved 2009-03-28.
- ↑ "An evergreen voice". ದಿ ಹಿಂದೂ. September 26, 2003. Archived from the original on 2003-10-02. Retrieved 2010-08-12.
{{cite web}}
: Italic or bold markup not allowed in:|publisher=
(help) - ↑ V.L (June 7, 2008). "Chords & Notes". ದಿ ಹಿಂದೂ. Archived from the original on 2012-11-07. Retrieved 2010-08-11.
{{cite web}}
: Italic or bold markup not allowed in:|publisher=
(help) - ↑ ವಿಶ್ವ ಸಂಗೀತ: ಲ್ಯಾಟಿನ್ ಅಂಡ್ ನಾರ್ತ್ ಅಮೇರಿಕಾ, ಕೆರೆಬಿಯನ್, ಇಂಡಿಯಾ, ಏಷಿಯಾ ಅಂಡ್ ಪೆಸಿಫಿಕ್; ಸಿಮನ್ ಬ್ರಾಟನ್ , ಮಾರ್ಕ್ ಎಲಿಂಗ್ಟನ್, ರಿಚರ್ಡ್ ಟ್ರಿಲೋ ಅವರು ರಚಿಸಿದ್ದು; ರಫ್ ಗೈಡ್ಸ್, ೨೦೦೦
- ↑ ೯.೦ ೯.೧ ದಿ ಇಂಟರ್ನ್ಯಾಷನಲ್ ವ್ಹೂಸ್ ವ್ಹು. ೨೦೦೪. ಯೂರೋಪಾ ಪಬ್ಲಿಕೇಶನ್ಸ್. ರೌಟ್‌ಲೆಜ್.
- ↑ (Jyothi Venkatesh. "Asha Bhosle: Sa Re Ga Ma…". Vashi2Panvel.com. Archived from the original on 2012-08-01. Retrieved 2006-05-03.
I would like to state humbly that I am the only singer who has sung the maximum number of songs — 12,000. If you sing one song a day, you can humanly sing 365 songs a year and 3650 songs in ten years. In around 60 years of my career I could sing 12,000 songs because there were times I had sung even four songs a day.
- ↑ Raju Bharatan (2006-08-23). "How fair were they to Mohammed Rafi?: Page 7". Rediff.com. Retrieved 2007-04-28.
Asha Bhosle it is, in fact, who occupies pride of place --- she is all set to complete 13,000 songs. And that must rate as the highest in Indian cinema -- Guinness or no Guinness.
- ↑ "Most Recorded Artist-world record set by Asha Bhonsle". 3 September 2009. Archived from the original on 15 ಮೇ 2012. Retrieved 4 January 2010.
- ↑ ೧೩.೦ ೧೩.೧ ೧೩.೨ ೧೩.೩ "Asha, 70 years, 70 landmarks". 2003-09-08. Retrieved 2006-11-11.
- ↑ "Only Asha: Asha Bhosle". Archived from the original on 2010-12-15. Retrieved 2011-01-10.
- ↑ Malani, Gaurav (September 8, 2008). "Asha Unplugged over the years". Indiatimes. Archived from the original on 2008-09-12. Retrieved 2009-07-22.
- ↑ ೧೬.೦ ೧೬.೧ "Asha Bhosle was the best person I ever met, An interview with O.P. Nayyar". Indya.com. Archived from the original on 2005-03-05. Retrieved 2005-11-11.
- ↑ ೧೭.೦ ೧೭.೧ Jitesh Pillaai (2005-07-31). "Notes to Myself (An interview with Asha Bhosle)". Times Life, ದಿ ಟೈಮ್ಸ್ ಆಫ್ ಇಂಡಿಯಾ, ಮುಂಬೈ. The Times Group. p. 43. Archived from the original on 2008-02-16. Retrieved 2007-09-08.
- ↑ Khubchandani, Lata (2003). Gulzar, Govind Nihalani, Saibal Chatterjee (ed.). Encyclopaedia of Hindi Cinema. Popular Prakashan. pp. 486–487. ISBN 8179910660.
{{cite book}}
: CS1 maint: multiple names: editors list (link) - ↑ ೧೯.೦ ೧೯.೧ ೧೯.೨ "Articles on Asha Bhosle — A voice for all seasons: Taken from Girija Rajendran's article for the Hindu". Archived from the original on 2006-11-16. Retrieved 2006-05-03.
- ↑ ದಿಲ್ ಪಡೋಸಿ ಹೈ , ಬಿಡುಗಡೆ
- ↑ "ಆಶಾ ಕನ್ನಡ ಹಾಡುಗಳು". Bangalore Mirror.com.
- ↑ "Yet Another 'First' National Chain Planned". Menu magazine. Archived from the original on 2005-10-23. Retrieved 2005-11-11.
- ↑ ೨೩.೦ ೨೩.೧ ೨೩.೨ ೨೩.೩ ೨೩.೪ Chhibber, Kavita. "Kavita Chhibber's interview with Asha Bhosle". Archived from the original on 2005-12-27. Retrieved 2006-05-03.
- ↑ ಅರ್ಚನಾ ಮಸಿಹ್. ವುಮೆನ್ ಆಫ್ ಸಬ್‌ಸ್ಟ್ಯಾನ್ಸ್
- ↑ ೨೫.೦ ೨೫.೧ ೨೫.೨ ೨೫.೩ ೨೫.೪ ೨೫.೫ ೨೫.೬ ೨೫.೭ ಆಶಾ ಭೋಂಸ್ಲೆ ಪ್ರಶಸ್ತಿಗಳು. Asha-Bhosle.com. ಅಕ್ಟೋಬರ್ ೧೮, ೨೦೦೭ರಲ್ಲಿ ಮರುಸಂಪಾದಿಸಲಾಗಿದೆ.
- ↑ ಅಬ್ದುಲ್ ವಹೀದ್ ಖಾನ್ ಅವರು ದಯಾವತಿ ಮೋದಿ ಪ್ರಶಸ್ತಿ ಸ್ವೀಕರಿಸಿದರು. portal.unesco.org. ನವೆಂಬರ್ ೧೭, ೨೦೦೬. ಅಕ್ಟೋಬರ್ ೧೮, ೨೦೦೭ರಲ್ಲಿ ಮರುಸಂಪಾದಿಸಲಾಗಿದೆ.
- ↑ ಭಯಾನಿ, ವಿರಾಲ್. ಬಚ್ಚನ್, ಹೇಮಾ ಅವರನ್ನು ಬದುಕಿರುವ ದಂತಕಥೆಗಳೆಂದು ಗೌರವಿಸಲಾಯಿತು Archived 2011-09-28 ವೇಬ್ಯಾಕ್ ಮೆಷಿನ್ ನಲ್ಲಿ.. redhotcurry.com. ಮಾರ್ಚ್ ೧೬, ೨೦೦೪ ಅಕ್ಟೋಬರ್ ೧೮, ೨೦೦೭ರಲ್ಲಿ ಮರುಸಂಪಾದಿಸಲಾಗಿದೆ.
- ↑ 2005 ವಿಜೇತರು Archived 2007-09-05 ವೇಬ್ಯಾಕ್ ಮೆಷಿನ್ ನಲ್ಲಿ.. ಎಂಟಿವಿ ಇಂಡಿಯಾ. ಅಕ್ಟೋಬರ್ ೧೮, ೨೦೦೭ರಲ್ಲಿ ಮರುಸಂಪಾದಿಸಲಾಗಿದೆ.
- ↑ ಇತಿಹಾಸ: ಮೋಸ್ಟ್ ಸ್ಟೈಲಿಶ್ ಪೀಪಲ್ ಇನ್ ಮ್ಯೂಸಿಕ್ Archived 2008-02-16 ವೇಬ್ಯಾಕ್ ಮೆಷಿನ್ ನಲ್ಲಿ.. ಎಂಟಿವಿ ಇಂಡಿಯಾ. ಅಕ್ಟೋಬರ್ ೧೮, ೨೦೦೭ರಲ್ಲಿ ಮರುಸಂಪಾದಿಸಲಾಗಿದೆ.
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- Cakrabarti, Atanu (1999). Āśā Bhom̐śale, jībana o gāna (in Bengali). ಕೊಲ್ಕತ್ತ: Madela Publishing House. ISBN 978-8176160407. OCLC 42764343.
- Ciṭakārā, Mukeśa (2006). Āśā Bhoṃsale : gāne, kôrḍsa, aura svaralipi (in Hindi). Delhi: Music Books. ISBN 978-8189511005. OCLC 71351425.
{{cite book}}
: CS1 maint: unrecognized language (link)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ಭೋಂಸ್ಲೆ
- ಆಶಾ ಭೋಂಸ್ಲೆ: ದಿ ವಾಯ್ಸ್ ಆಫ್ ಬಾಲಿವುಡ್ ಅಂಡ್ ಮೋರ್ - ಎನ್ಪಿಆರ್ ನ ಧ್ವನಿ ವರದಿ
- Pages using the JsonConfig extension
- CS1 maint: multiple names: authors list
- CS1 errors: markup
- CS1 maint: multiple names: editors list
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hCards
- CS1 Bengali-language sources (bn)
- CS1 maint: unrecognized language
- ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು
- Articles with FAST identifiers
- Pages with authority control identifiers needing attention
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with BIBSYS identifiers
- Articles with BNF identifiers
- Articles with BNFdata identifiers
- Articles with CANTICN identifiers
- Articles with GND identifiers
- Articles with J9U identifiers
- Articles with LCCN identifiers
- Articles with LNB identifiers
- Articles with NCL identifiers
- Articles with NKC identifiers
- Articles with NLA identifiers
- Articles with NLK identifiers
- Articles with PLWABN identifiers
- Articles with Grammy identifiers
- Articles with MusicBrainz identifiers
- Articles with Trove identifiers
- Articles with SUDOC identifiers
- 1933ರ ಜನನಗಳು
- ಬದುಕಿರುವ ವ್ಯಕ್ತಿಗಳು
- ಬೆಂಗಾಳಿ-ಭಾಷೆಯ ಗಾಯಕರು
- ಬಾಲಿವುಡ್ ಹಿನ್ನೆಲೆ ಗಾಯಕರು
- ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು
- ಇಂಗ್ಲಿಷ್-ಭಾಷೆಯ ಗಾಯಕರು
- ಮಹಿಳಾ ಗಿಟಾರ್ ವಾದಕರು
- ಗುಜರಾತಿ-ಭಾಷೆಯ ಗಾಯಕರು
- ಹಿಂದಿ-ಭಾಷೆಯ ಗಾಯಕರು
- ಭಾರತೀಯ ಮಹಿಳಾ ಗಾಯಕಿಯರು
- ಭಾರತದ ಚಲನಚಿತ್ರ ಗಾಯಕರು
- ಭಾರತೀಯ ಗಿಟಾರ್ ವಾದಕರು
- ಕಾಲಿವುಡ್ ಹಿನ್ನೆಲೆ ಗಾಯಕರು
- ಮರಾಠಿ-ಭಾಷೆಯ ಗಾಯಕರು
- ಮರಾಠಿ ಹಿನ್ನೆಲೆ ಗಾಯಕರು
- ನೇಪಾಳಿ-ಭಾಷೆಯ ಗಾಯಕರು
- ಮಹಾರಾಷ್ಟ್ರದ ಜನರು
- ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
- ರಷಿಯನ್-ಭಾಷೆಯ ಗಾಯಕರು
- ತಮಿಳು-ಭಾಷೆಯ ಗಾಯಕರು
- ಹಿನ್ನೆಲೆ ಗಾಯಕಿಯರು