ಪದ್ಮ ವಿಭೂಷಣ

ವಿಕಿಪೀಡಿಯ ಇಂದ
(ಪದ್ಮವಿಭೂಷಣ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಪದ್ಮ ವಿಭೂಷಣ ಭಾರತದ ಎರಡನೇ ಅತಿ ದೊಡ್ಡ ನಾಗರಿಕ ಪುರಸ್ಕಾರವಾಗಿದೆ. ಇದು ಒಂದು ಪದಕ ಮತ್ತು ಉದ್ಧರಣಗಳನ್ನೊಳಗೊಂಡಿದೆ. ಇದನ್ನು ಭಾರತದ ರಾಷ್ಟ್ರಪತಿಗಳು ಪುರಸ್ಕಾರ ಮಾಡುತ್ತಾರೆ.

ಪದ್ಮ ವಿಭೂಷಣವನ್ನು ಜನವರಿ ೨, ೧೯೫೪ ರಂದು ಸ್ಥಾಪಿಸಲಾಯಿತು. ಇದರ ಆದ್ಯತೆ ಭಾರತ ರತ್ನದ ನಂತರ ಹಾಗೂ ಪದ್ಮ ಭೂಷಣಕ್ಕಿಂತ ಮೇಲೆ. ಸರಕಾರೀ ಸೇವೆಯನ್ನೊಳಗೊಂಡು ದೇಶದ ಯಾವುದೇ ವಿಭಾಗದಲ್ಲಿ ಅಸಾಧಾರಣ ಮತ್ತು ವಿಖ್ಯಾತ ಸೇವೆಯನ್ನು ಸಲ್ಲಿಸಿದವರಿಗೆ ಈ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಈ ಪ್ರಶಸ್ತಿಯನ್ನು ಜುಲೈ ೧೩ ೧೯೭೭ ರಿಂದ ಜನವರಿ ೨೬ ೧೯೮೦ ರ ಅವಧಿಯ ನಡುವೆ ತಡೆಹಿಡಿಯಲಾಗಿತ್ತು.


೨೦೦೬ ರ ಪುರಸ್ಕೃತರು [ಬದಲಾಯಿಸಿ]

ಹೆಸರು ಕ್ಷೇತ್ರ ರಾಜ್ಯ
ಅಡೂರು ಗೋಪಾಲಕೃಷ್ಣನ್ ಕಲೆ – ಸಿನಿಮಾ ಕೇರಳ
ಸಿ ಆರ್ ಕೃಷ್ಣಸ್ವಾಮಿ ರಾವ್ ನಾಗರಿಕ ಸೇವೆ ತಮಿಳುನಾಡು
ಚಾರ್ಲ್ಸ್ ಕೊರ್ರಿಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಮಹಾರಾಷ್ಟ್ರ
ಮಹಾಶ್ವೇತಾ ದೇವಿ ಸಾಹಿತ್ಯ ಮತ್ತು ಶಿಕ್ಷಣ ಪಶ್ಚಿಮ ಬಂಗಾಳ
ನಿರ್ಮಲಾ ದೇಶಪಾಂಡೆ ಸಾಮಾಜಿಕ ಸೇವೆ ದೆಹಲಿ
ನಾರ್ಮನ್ ಬೊರ್ಲಾಗ್ ವಿಜ್ನಾನ ಮತ್ತು ಇಂಜಿನಿಯರಿಂಗ್ ಮೆಕ್ಸಿಕೊ
ಒಬೇದ್ ಸಿದ್ದಿಕಿ ವಿಜ್ನಾನ ಮತ್ತು ಇಂಜಿನಿಯರಿಂಗ್ ಕರ್ನಾಟಕ
ಪ್ರಕಾಶ ನಾರಾಯಣ ಟಂಡನ್ ವೈದ್ಯಕೀಯ ದೆಹಲಿ
ನ್ಯಾಯಮೂರ್ತಿ ವಿ ಎನ್ ಖರೆ ಸಾರ್ವಜನಿಕ ಸೇವೆ ಉತ್ತರ ಪ್ರದೇಶ