ಜ್ಞಾನಪೀಠ ಪ್ರಶಸ್ತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜ್ಞಾನಪೀಠ ಪ್ರಶಸ್ತಿ
ಪ್ರಶಸ್ತಿಯ ವಿವರ
ವರ್ಗ ಸಾಹಿತ್ಯ (ವೈಯುಕ್ತಿಕ)
ಪ್ರಾರಂಭವಾದದ್ದು 1961
ಮೊದಲ ಪ್ರಶಸ್ತಿ 1965
ಕಡೆಯ ಪ್ರಶಸ್ತಿ 2012
ಒಟ್ಟು ಪ್ರಶಸ್ತಿಗಳು 53
ಪ್ರಶಸ್ತಿ ನೀಡುವವರು ಭಾರತೀಯ ಜ್ಞಾನಪೀಠ
ವಿವರ ಭಾರತದ ಸಾಹಿತ್ಯ ಪುರಸ್ಕಾರ
ಮೊದಲ ಪ್ರಶಸ್ತಿ ಪುರಸ್ಕೃತರು ಜಿ. ಶಂಕರ ಕುರುಪ್
ಕೊನೆಯ ಪ್ರಶಸ್ತಿ ಪುರಸ್ಕೃತರು ರವುರಿ ಭಾರದ್ವಾಜ

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೆ ಅನುಚ್ಛೇದದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು. ಸಾಹು ಜೈನ್ ಪರಿವಾರದವರು, ಈ ಪ್ರಶಸ್ತಿಯನ್ನು ಮೇ ೨೨ ೧೯೬೧ ರಲ್ಲಿ ಸ್ಥಾಪಿಸಿದರು. ಈ ಪ್ರಶಸ್ತಿಯನ್ನು ಪ್ರಪ್ರಥಮವಾಗಿ ೧೯೬೫ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ಪ್ರದಾನ ಮಾಡಲಾಯಿತು. ವಿಜೇತರಿಗೆ ಪ್ರಶಸ್ತಿ ಫಲಕ, ೧೧ ಲಕ್ಷ ರುಪಾಯಿ ಚೆಕ್ ಹಾಗು ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಜ್ಞಾನಪೀಠದ ಹಿನ್ನೆಲೆ[ಬದಲಾಯಿಸಿ]

ಈ ಪ್ರಶಸ್ತಿಯನ್ನು ಭಾರತ ಸರಕಾರ ನೀಡುತ್ತದೆ ಎಂಬ ತಪ್ಪು ಕಲ್ಪನೆಯೂ ವ್ಯಾಪಕವಾಗಿದೆ. ವಾಸ್ತವದಲ್ಲಿ ಈ ಪ್ರಶಸ್ತಿಯನ್ನು ನೀಡುವವರು ಜ್ಞಾನಪೀಠ ಟ್ರಸ್ಟ್. ಟೈಂಸ್ ಆಫ್ ಇಂಡಿಯಾದ ಒಡೆತನವನ್ನು ಹೊಂದಿರುವ ಜೈನ್ ಕುಟುಂಬ ಜ್ಞಾನಪೀಠ ಟ್ರಸ್ಟ್ ನ ಸ್ಥಾಪಕರು. ಈಗಲೂ ಅದರ ಸದಸ್ಯರಲ್ಲಿ ಹೆಚ್ಚಿನವರು ಈ ಕುಟುಂಬಕ್ಕೆ ಸೇರಿದ್ದಾರೆ. ೧೯೮೨ ರಿಂದ, ಈ ಪ್ರಶಸ್ತಿಯನ್ನು ಭಾರತೀಯ ಸಾಹಿತ್ಯಕ್ಕೆ ಸಮಗ್ರ ಕೊಡುಗೆಯನ್ನು ನೀಡಿದ ಲೇಖಕರಿಗೆ ಸಂದಾಯವಾಗುತ್ತಿದೆ. ಈವರೆಗೆ ಹಿಂದಿ ಸಾಹಿತಿಗಳು ಒಂಬತ್ತು ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯನ್ನಾಗಿ ಮಾಡಿದ್ದಾರೆ. ಕನ್ನಡ ಭಾಷೆಯು ಎಂಟು ಪ್ರಶಸ್ತಿಯನ್ನು ಪಡೆದು ಎರಡನೆ ಸ್ಥಾನದಲ್ಲಿದೆ.

೧೯೮೨ರಿಂದ ಒಂದು ಕೃತಿಯ ಬದಲಿಗೆ ಸಮಗ್ರ ಸಾಹಿತ್ಯದ ಕೊಡುಗೆಯನ್ನು ಗಮನಿಸಿ ನೀಡಲಾಗುತ್ತಿದೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪಟ್ಟಿ[ಬದಲಾಯಿಸಿ]

ವರ್ಷ ಭಾಷೆ ಲೇಖಕ ಕೃತಿ
೧೯೬೫ ಮಲೆಯಾಳಂ ಜಿ. ಶಂಕರ ಕುರುಪ್ ಓಡಕ್ಕುಳಲ್
೧೯೬೬ ಬಂಗಾಳಿ ತಾರಾಶಂಕರ ಬಂದೋಪಾಧ್ಯಾಯ ಗಣದೇವತಾ
೧೯೬೭ ಗುಜರಾತಿ ಉಮಾಶಂಕರ ಜೋಷಿ ನಿಶಿತಾ
೧೯೬೭ ಕನ್ನಡ ಕುವೆಂಪು (ಕೆ.ವಿ.ಪುಟ್ಟಪ್ಪ) ಶ್ರೀ ರಾಮಾಯಣ ದರ್ಶನಂ
೧೯೬೮ ಹಿಂದಿ ಸುಮಿತ್ರನಂದನ ಪಂತ್ ಚಿದಂಬರ
೧೯೬೯ ಉರ್ದು ಫಿರಾಕ್ ಗೋರಕ್ ಪುರಿ ಗುಲ್-ಎ-ನಗ್ಮಾ
೧೯೭೦ ತೆಲುಗು ವಿಶ್ವನಾಥ ಸತ್ಯನಾರಾಯಣ ರಾಮಾಯಣ ಕಲ್ಪವೃಕ್ಷಮು
೧೯೭೧ ಬಂಗಾಳಿ ಭಿಷ್ಣು ಡೇ ಸ್ಮೃತಿ ಸತ್ತ ಭವಿಷ್ಯತ್
೧೯೭೨ ಹಿಂದಿ ರಾಮಧಾರಿಸಿಂಗ್ ದಿನಕರ ಊರ್ವಶಿ
೧೯೭೩ ಕನ್ನಡ ಅಂಬಿಕಾತನಯದತ್ತ (ದ.ರಾ.ಬೇಂದ್ರೆ) ನಾಕುತಂತಿ
೧೯೭೩ ಓರಿಯ ಗೋಪಿನಾಥ ಮೊಹಂತಿ ಮತ್ತಿಮತಾಲ್
೧೯೭೪ ಮರಾಠಿ ವಿಷ್ಣು ಸಖಾರಾಮ್ ಖಾಂಡೇಕರ್ ಯಯಾತಿ
೧೯೭೫ ತಮಿಳು ಪಿ.ವಿ.ಅಕಿಲಂದಂ ಚಿತ್ತ್ರಪ್ಪಾವೈ
೧೯೭೬ ಬಂಗಾಳಿ ಆಶಾಪೂರ್ಣದೇವಿ ಪ್ರಥಮ್ ಪ್ರತಿಸೃತಿ
೧೯೭೭ ಕನ್ನಡ ಕೋಟ ಶಿವರಾಮ ಕಾರಂತ ಮೂಕಜ್ಜಿಯ ಕನಸುಗಳು
೧೯೭೮ ಹಿಂದಿ ಎಸ್.ಎಚ್.ವಿ ಆಜ್ಞೇಯ ಕಿತ್ನಿ ನಾವೊಃ ಮೆಃ ಕಿತ್ನಿ ಬಾರ್
೧೯೭೯ ಅಸ್ಸಾಮಿ ಬಿರೇಂದ್ರ ಕುಮಾರ ಭಟ್ಟಾಚಾರ್ಯ ಮೃತ್ಯುಂಜಯ್
೧೯೮೦ ಮಲೆಯಾಳಂ ಎಸ್.ಕೆ.ಪೊಟ್ಟೆಕಾಟ್ಟ್ ಒರು ದೇಶತ್ತಿಂಡೆ ಕಥಾ
೧೯೮೧ ಪಂಜಾಬಿ ಅಮೃತಾ ಪ್ರೀತಮ್ ಕಾಗಜ್ ಕೆ ಕನ್ವಾಸ್
೧೯೮೨ ಹಿಂದಿ ಮಹಾದೇವಿ ವರ್ಮ
೧೯೮೩ ಕನ್ನಡ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಚಿಕವೀರರಾಜೇಂದ್ರ
೧೯೮೪ ಮಲೆಯಾಳಂ ತಕಳಿ ಶಿವಶಂಕರ ಪಿಳ್ಳೈ
೧೯೮೫ ಗುಜರಾತಿ ಪನ್ನಾಲಾಲ್ ಪಟೇಲ್
೧೯೮೬ ಓರಿಯ ಸಚ್ಚಿದಾನಂದ ರಾವುತ ರಾಯ್
೧೯೮೭ ಮರಾಠಿ ವಿಷ್ಣು ವಾಮನ ಶಿರ್ವಾಡ್ಕರ್ ಕುಸುಮಾಗ್ರಜ
೧೯೮೮ ತೆಲುಗು ಡಾ.ಸಿ.ನಾರಾಯಣನ್ ರೆಡ್ಡಿ
೧೯೮೯ ಉರ್ದು ಖುರ್ರತುಲೈನ್ ಹೈದರ್
೧೯೯೦ ಕನ್ನಡ ವಿನಾಯಕ ಕೃಷ್ಣ ಗೋಕಾಕ್ ಭಾರತದ ಸಿಂಧುರಶ್ಮಿ
೧೯೯೧ ಬಂಗಾಳಿ ಸುಭಾಷ್ ಮುಖೋಪಾಧ್ಯಾಯ
೧೯೯೨ ಹಿಂದಿ ನರೇಶ್ ಮೆಹತಾ
೧೯೯೩ ಓರಿಯ ಸೀತಾಕಾಂತ ಮಹಾಪಾತ್ರ
೧೯೯೪ ಕನ್ನಡ ಯು. ಆರ್. ಅನಂತಮೂರ್ತಿ ಸಮಗ್ರ ಸಾಹಿತ್ಯ
೧೯೯೫ ಮಲೆಯಾಳಂ ಎಮ್. ಟಿ ವಾಸುದೇವನ್ ನಾಯರ್
೧೯೯೬ ಬಂಗಾಳಿ ಮಹಾಶ್ವೇತಾದೇವಿ
೧೯೯೭ ಊರ್ದು ಅಲಿ ಸರ್ದಾರ್ ಜಾಫ್ರಿ
೧೯೯೮ ಕನ್ನಡ ಗಿರೀಶ್ ಕಾರ್ನಾಡ್ ಸಮಗ್ರ ಸಾಹಿತ್ಯ
೧೯೯೯ ಹಿಂದಿ ನಿರ್ಮಲ್ ವರ್ಮ
೧೯೯೯ ಪಂಜಾಬಿ ಗುರುದಯಾಳ್ ಸಿಂಗ್
೨೦೦೦ ಅಸ್ಸಾಮಿ ಇಂದಿರಾ ಗೋಸ್ವಾಮಿ
೨೦೦೧ ಗುಜರಾತಿ ರಾಜೇಂದ್ರ ಕೇಶವಲಾಲ್ ಷಾ
೨೦೦೨ ತಮಿಳು ಡಿ.ಜಯಕಾಂತನ್
೨೦೦೩ ಮರಾಠಿ ವಿಂದಾ ಕರಂದೀಕರ್
೨೦೦೪ ಕಾಶ್ಮೀರಿ ರಹಮಾನ್ ರಾಹಿ
೨೦೦೫ ಹಿಂದಿ ಕುಂವರ್ ನಾರಾಯಣ್
೨೦೦೬ ಕೊಂಕಣಿ ರವೀಂದ್ರ ಕೇಳೆಕರ್
೨೦೦೭ ಮಲಯಾಳಂ ಓ. ಎನ್. ವಿ. ಕುರುಪ್
೨೦೦೮ ಉರ್ದು ಅಖಲಾಖ್ ಮೊಹಮ್ಮದ್ ಖಾನ್
೨೦೦೯ ಹಿಂದೀ ಅಮರ್ ಕಾಂತ್ ಮತ್ತು ಶ್ರೀಲಾಲ್ ಶುಕ್ಲ
೨೦೧೦ ಕನ್ನಡ ಚಂದ್ರಶೇಖರ_ಕಂಬಾರ ಸಮಗ್ರ ಸಾಹಿತ್ಯ
೨೦೧೧ ಒಡಿಯಾ ಪ್ರತಿಭಾ ರೇ
೨೦೧೨ ತೆಲುಗು ರಾವೂರಿ ಭರದ್ವಾಜ
೨೦೧೩ ಹಿಂದೀ ಕೇದಾರನಾಥ್ ಸಿಂಗ್

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು

ಕನ್ನಡ: ಕುವೆಂಪು | ದ.ರಾ.ಬೇಂದ್ರೆ | ವಿ.ಕೃ.ಗೋಕಾಕ | ಶಿವರಾಮ ಕಾರಂತ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಯು.ಆರ್.ಅನಂತಮೂರ್ತಿ | ಗಿರೀಶ್ ಕಾರ್ನಾಡ್ | ಚಂದ್ರಶೇಖರ ಕಂಬಾರ
ಹಿಂದಿ: ಸುಮಿತ್ರಾ ನಂದನ್ ಪಂತ್ | ರಾಮ್‍ಧಾರಿ ಸಿಂಘ್ ದಿನಕರ್ | ಸಚ್ಚಿದಾನಂದ ವಾತ್ಸಾಯನ | ಮಹಾದೇವಿ ವರ್ಮ | ನರೇಶ್ ಮೆಹ್ತಾ | ನಿರ್ಮಲಾ ವರ್ಮ | ಕುವಂರ ನಾರಾಯಣ | ಅಮರ ಕಾಂತ | ಶ್ರೀ ಲಾಲ್ ಶುಕ್ಲ
ಬೆಂಗಾಲಿ: ತಾರಾಶಂಕರ ಬಂದೋಪಾಧ್ಯಾಯ | ಬಿಷ್ಣು ಡೆ | ಆಶಾಪೂರ್ಣ ದೇವಿ | ಸುಭಾಷ್ ಮುಖ್ಯೋಪಾಧ್ಯಾಯ | ಮಹಾಶ್ವೇತಾದೇವಿ
ಮಲಯಾಳಂ: ಎಂ.ಟಿ.ವಾಸುದೇವನ್ ನಾಯರ್ | ಜಿ. ಶಂಕರ ಕುರುಪ್ | ಎಸ್.ಕೆ.ಪೊಟ್ಟೆಕ್ಕಾಟ್ | ಟಿ. ಶಿವಶಂಕರ ಪಿಳ್ಳೈ
ಗುಜರಾತಿ: ಉಮಾಶಂಕರ್ ಜೋಶಿ | ಪನ್ನಾಲಾಲ್ ಪಟೇಲ್ | ರಾಜೇಂದ್ರ ಕೇಶವ್‌ಲಾಲ್ ಷಾ
ಒರಿಯಾ: ಗೋಪಿನಾಥ್ ಮೊಹಾಂತಿ | ಎಸ್. ರೌತ್ ರಾಯ್ | ಸೀತಾಕಾಂತ್ ಮಹಾಪಾತ್ರ|ಪ್ರತಿಭಾ ರೇ
ಉರ್ದು: ಫಿರಾಕ್ ಗೋರಕ್ ಪುರಿ | ಕುರ್ರಾತುಲೈನ್ ಹೈದರ್ | ಅಲಿ ಸರ್ದಾರ್ ಜಾಫ್ರಿ
ತೆಲುಗು: ವಿಶ್ವನಾಥ ಸತ್ಯನಾರಾಯಣ | ಸಿ. ನಾರಾಯಣ ರೆಡ್ಡಿ | ರಾವುರಿ ಭಾರದ್ವಾಜ
ತಮಿಳು: ಪಿ.ವಿ. ಅಕಿಲಾಂಡಮ್ | ಡಿ. ಜಯಕಾಂತನ್
ಪಂಜಾಬಿ: ಅಮೃತ ಪ್ರೀತಮ್ | ಗುರ್ದಿಯಲ್ ಸಿಂಘ್
ಅಸ್ಸಾಮೀಸ್ ಬಿ.ಕೆ. ಭಟ್ಟಾಚಾರ್ಯ | ಇಂದಿರಾ ಗೋಸ್ವಾಮಿ
ಮರಾಠಿ: ವಿಷ್ಣು ಸಖಾರಾಮ್ ಖಾಂಡೇಕರ್ | ವಿಂದಾ ಕರಂದೀಕರ್ | ಕುಸುಮಾಗ್ರಜ್


ಈ ಪುಟಗಳನ್ನೂ ನೋಡಿ[ಬದಲಾಯಿಸಿ]