ನಾನಾಜಿ ದೇಶಮುಖ್
ವಿಕಿಪೀಡಿಯ ಇಂದ
ಅಂಬಾದಾಸ್ ಅಮೃತರಾವ್ (ನಾನಾಜಿ) ದೇಶಮುಖ್ (ಅಕ್ಟೋಬರ್ ೧೧, ೧೯೧೬ - ಫೆಬ್ರುವರಿ ೨೭, ೨೦೧೦) ಇವರು ಭಾರತ ದೇಶದ ಒಬ್ಬ ಅತ್ಯುನ್ನತ ಸಮಾಜಸೇವಕರಾಗಿದ್ದರು. ಆತ್ಮೀಯತೆಯಿಂದ ನಾನಾಜಿ ಎಂದು ಕರೆಯಲಾಗುವ ಇವರು ಶಿಕ್ಷಣ, ಆರೋಗ್ಯ ಮತ್ತು ಗ್ರಾಮೀಣ ಸಬಲೀಕರಣದ ಕ್ಷೇತ್ರಗಳಲ್ಲಿ ಆದರ್ಶಪ್ರಾಯ ಕೆಲಸವನ್ನು ಮಾಡಿದ್ದಾರೆ. ಈ ಕಾರ್ಯಕ್ಕಾಗಿ ಇವರಿಗೆ ಭಾರತ ಸರಕಾರವು ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ನಾನಾಜಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕರಾಗಿದ್ದರು. ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಾಗಿದ್ದ ಇವರು ರಾಜ್ಯಸಭೆಯ ಮಾನ್ಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.[೧]
ಆಕರಗಳು[ಬದಲಾಯಿಸಿ]
- ↑ ಸಾಮಾಜಿಕ, ಆರ್ಥಿಕ ಅಭಿವೃದ್ಡಿಗೆ ಜೀವ ತೇಯ್ದ ನಾನಾಜಿ ವಿಜಯ ಕರ್ನಾಟಕ - ೨೮-೦೨-೨೦೧೦