ಅರ್ಜುನ ಪ್ರಶಸ್ತಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಅರ್ಜುನ ಪ್ರಶಸ್ತಿ, ಇದು ಭಾರತ ಸರಕಾರದಿಂದ ೧೯೬೧ರಲ್ಲಿ ಕ್ರೀಡೆಗಳಲ್ಲಿನ ಉತ್ತಮ ಸಾಧಕರನ್ನು ಗುರುತಿಸಲು ಸ್ಥಾಪಿಸಿರುವ ಪ್ರಶಸ್ತಿ. ಈ ಪ್ರಶಸ್ತಿಯು ರೂ ೩,೦೦,೦೦೦ ನಗದು, ಒಂದು ಸನ್ನದು ಮತ್ತು ಅರ್ಜುನನ ಕಂಚಿನ ಪ್ರತಿಮೆಯನ್ನು ಒಳಗೊಂಡಿರುತ್ತದೆ.

ಈ ಪ್ರಶಸ್ತಿಯ ಗರಿಮೆಯನ್ನು ಅನೇಕ ಬಾರಿ ವಿಸ್ತರಿಸಿದ್ದಾರೆ. ಈ ಪ್ರಶಸ್ತಿಯನ್ನು ಸ್ಥಾಪಿಸುವ ಮೊದಲು ಇದ್ದ ಅನೇಕ ಕ್ರೀಡಾಪಟುಗಳನ್ನು ಗುರುತಿಸಲು ಈ ಪ್ರಶಸ್ತಿಯ ನಿಯಮಾವಳಿಗಳನ್ನು ಬದಲಿಸಲಾಯಿತು. ನಂತರ ಸಾಂಪ್ರದಾಯಿಕ ಕ್ರೀಡೆಗಳನ್ನು ಗುರುತಿಸಲು ಮತ್ತು ಉತ್ತೇಜಿಸಲು, ವಿಕಲಾಂಗ ಕ್ರೀಡಾಪಟುಗಳ ಸಾಧನೆಗಳನ್ನು ಗುರುತಿಸಲು ಸರಕಾರ ನಿರ್ಧರಿಸಿತು. ಹೀಗಾಗಿ ಅರ್ಜುನ ಪ್ರಶಸ್ತಿಯ ವ್ಯಾಪ್ತಿಯಲ್ಲಿ ಅನೇಕ ಕ್ರೀಡೆಗಳು ಬರುತ್ತವೆ.

ಭಾರತ ಸರಕಾರ ಕ್ರೀಡೆಗಾಗಿ ನೀಡುವ ಇತರ ಪ್ರಶಸ್ತಿಗಳೆಂದರೆ: ಧ್ಯಾನಚಂದ್ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ರಾಜೀವ ಗಾಂಧಿ ಖೇಲ್ ರತ್ನ ಪ್ರಶಸ್ತಿ.

೨೦೦೭ನೇಯ ಸಾಲಿನ ಅರ್ಜುನ ಪ್ರಶಸ್ತಿ ವಿಜೇತರ ಪಟ್ಟಿ.