ಅಮ್ಜದ್ ಅಲಿ ಖಾನ್
Wikipedia ಇಂದ
ಅಮ್ಜದ್ ಅಲಿ ಖಾನ್ ಪ್ರಸಿದ್ಧ ಸರೋದ್ ವಾದಕರು.೧೯೪೬ ರಲ್ಲಿ ಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು.ಸರೋದ್ ವಾದನದಲ್ಲಿ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡ ಇವರು ದೇಶ ವಿದೇಶಗಳಲ್ಲಿ ಕಛೇರಿ ನಡೆಸಿ ಪ್ರಸಿದ್ಧರಾಗಿದ್ದಾರೆ.ಇವರಿಗೆ ೨೦೦೧ ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ದೊರೆತಿದೆ. ಇವರು ಪ್ರಸಿದ್ಧ ಸೇನಿಯಾ-ಬಂಗಾಶ್ ಘರಾಣೆಯ ಏಳನೇಯ ತಲೆಮಾರಿನ ಸರೋದ್ ವಾದಕರು. ಇವರು ತಮ್ಮ ತಂದೆ ಮತ್ತು ಪ್ರಸಿದ್ಧ ಸರೋದ್ ವಾದಕರಾಗಿದ್ದ ಉಸ್ತಾದ್ ಹಫೀಜ್ ಅಲಿ ಖಾನ್ ಅವರಿಂದ ಸರೋದ್ ವಾದನದ ಶಿಕ್ಷಣವನ್ನು ಪಡೆದರು.
[ಬದಲಾಯಿಸಿ] ಸಾಂಸಾರಿಕ ಜೀವನ
ಇವರು ಸುಬ್ಬುಲಕ್ಶ್ಮಿಯವರನ್ನು ಮದುವೆಯಾಗಿದ್ದು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅವರ ಹೆಸರು ಅಮಾನ್ ಅಲಿ ಮತ್ತು ಅಯಾನ್ ಅಲಿ, ಇವರಿಬ್ಬರೂ ಕೂಡ ಸರೋದ್ ವಾದಕರು. ಅಮ್ಜದ್ ಅಲಿಯವರು ತಮ್ಮ ಹೆಂಡತಿಯ ಹೆಸರಿನಲ್ಲಿ ಒಂದು ರಾಗವನ್ನೂ ಸೃಷ್ಟಿಸಿದ್ದಾರೆ.
[ಬದಲಾಯಿಸಿ] ಬಾಹ್ಯಸಂಪರ್ಕಗಳು
- Strumming sarod storm, The Hindu, Apr 28, 2006
- Interview: Commitment to tradition, The Hindu, Jan 08, 2006
- Ustad Amjad Ali Khan's homepage
ಹಿಂದುಸ್ತಾನಿ ಸಂಗೀತ
ಭೀಮಸೇನ್ ಜೋಷಿ | ಪಂಡಿತ್ ಜಸರಾಜ್ | ಮಲ್ಲಿಕಾರ್ಜುನ ಮನ್ಸೂರ್ | ಗಂಗೂಬಾಯಿ ಹಾನಗಲ್ | ಬಸವರಾಜ ರಾಜಗುರು | ನಸ್ರತ್ ಫತೇ ಅಲಿ ಖಾನ್ | ಪಂಡಿತ್ ರವಿಶಂಕರ್ | ಶಿವಕುಮಾರ್ ಶರ್ಮಾ | ಹರಿಪ್ರಸಾದ್ ಚೌರಾಸಿಯಾ | ಅಲ್ಲಾ ರಖಾ ಮತ್ತು ಜಾಕಿರ್ ಹುಸೇನ್ | ಅಲಿ ಅಕ್ಬರ್ ಖಾನ್ ಮತ್ತು ಅಮ್ಜದ್ ಅಲಿ ಖಾನ್
