ಧೀರೂಭಾಯಿ ಅಂಬಾನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಧೀರೂ ಭಾಯಿ ಅಂಬಾನಿ
ಜನನ(೧೯೩೨-೧೨-೨೮)೨೮ ಡಿಸೆಂಬರ್ ೧೯೩೨
ಚೋರ್ವಡ್,ಜುನಾಘಡ, ಗುಜರಾತ್, ಭಾರತ
ಮರಣJuly 6, 2002(2002-07-06) (aged 69)
ಉದ್ಯೋಗವ್ಯಾಪಾರ
Net worth US$೬.೧೦ ಬಿಲಿಯನ್
ಜೀವನ ಸಂಗಾತಿಕೋಕಿಲಾ ಬೆನ್ ಅಂಬಾನಿ
ಮಕ್ಕಳುಮುಖೇಶ್ ಅಂಬಾನಿ
ಅನಿಲ್ ಅಂಬಾನಿ
ಮೀನಾ ಕೊಠಾರಿ
ದೀಪ್ತಿ ಸಲ್ಗಾಂವ್ಕರ್
ಜಾಲತಾಣwww.ril.com

'ಧೀರೂಭಾಯಿ 'ಹಿಂದಿ:धीरूभाई ಎಂದೂ ಹೆಸರಾದ ಧೀರಜ್‌ಲಾಲ್‌ ಹೀರಾಚಂದ್‌ ಅಂಬಾನಿ (ಹಿಂದಿ:धीरजलाल हीराचंद अंबानी), (ಜನನ: 28 ಡಿಸೆಂಬರ್‌, 1932; ಮರಣ: 6 ಜುಲೈ 2002) ತನ್ನ ಸೋದರ ಸಂಬಂಧಿಯೊಂದಿಗೆ ಮುಂಬಯಿಯಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ನ್ನು ಸ್ಥಾಪಿಸಿದ, ಒಬ್ಬ ಭಾರತೀಯ ವಾಣಿಜ್ಯ ಸಾಮ್ರಾಟ. ಬಡತನದಿಂದ ಸಿರಿತನಕ್ಕೆ ಇವರು ನಡೆದು ಬಂದ ಹಾದಿಯು ವಿಶ್ವಾದ್ಯಂತ ದಂತಕಥೆಯಾಗಿದೆ.

ಪರಿಚಯ[ಬದಲಾಯಿಸಿ]

೧೯೭೭ರಲ್ಲಿ ಧೀರೂಭಾಯಿಯವರು ತಮ್ಮ ರಿಲಾಯನ್ಸ್‌ ಸಂಸ್ಥೆಯನ್ನು ಸಾರ್ವಜನಿಕ ಉದ್ದಿಮೆಯನ್ನಾಗಿ ಮಾಡಿದರು. ೨೦೦೭ರ ವೇಳೆಗೆ, ಅಂಬಾನಿ ಕುಟುಂಬದ (ಪುತ್ರರಾದ ಮುಖೇಶ್‌ ಮತ್ತು ಅನಿಲ್‌) ಒಟ್ಟು ಸಂಪತ್ತು ೬೦ ಶತಕೋಟಿ ಡಾಲರ್‌ಗಳಾಗಿದ್ದವು, ಹಾಗಾಗಿ ಅಂಬಾನಿ ಕುಟುಂಬವು ವಿಶ್ವದಲ್ಲೇ ಅತಿ ಶ್ರೀಮಂತ ಕುಟುಂಬವಾಗಿತ್ತು.

ಆರಂಭಿಕ ಜೀವನ[ಬದಲಾಯಿಸಿ]

  • ಧೀರೂಭಾಯಿ ಅಂಬಾನಿ 1932ರ ಡಿಸೆಂಬರ್‌ 28ರಂದು ಭಾರತದ ಇಂದಿನ ಗುಜರಾತ್ ರಾಜ್ಯದಲ್ಲಿ ಜಾಮ್‌ನಗರದ ಚೋರವಾಡ್‌ ಹತ್ತಿರದ ಕುಕಸವಾಡದಲ್ಲಿ ಜನಿಸಿದರು. ಹೀರಾಚಂದ್‌ ಗೋವರ್ಧನ್‌ದಾಸ್‌ ಅಂಬಾನಿ ಇವರ ತಂದೆ ಮತ್ತು ಜಮ್‌ನಾಬೆನ್‌ ಇವರ ತಾಯಿ[೧]. ಇವರದ್ದು ಮೋಧ್‌ ಪಂಗಡಕ್ಕೆ ಸೇರಿದ ಸಾಮಾನ್ಯ ಕುಟುಂಬವಾಗಿತ್ತು. (ಪ್ರಾಸಂಗಿಕವಾಗಿ, ಗಾಂಧಿ ಮತ್ತು ಅಂಬಾನಿ ಕುಟಂಬಗಳು ಒಂದೇ ಗೋತ್ರದವರಾಗಿದ್ದು ಮೋಧ್‌ ಬನಿಯಾ ಸಮುದಾಯದವರಾಗಿದ್ದರು.[೨]).
  • ಹಳ್ಳಿಯ ಶಾಲಾ ಅಧ್ಯಾಪಕರಾಗಿದ್ದ ಹೀರಾಚಂದ್‌ ಗೋವರ್ದನ್‌ದಾಸ್‌ ಅಂಬಾನಿ ಅವರ ಗಳಿಕೆ ತೀರಾ ಕಡಿಮೆ ಇತ್ತು. ಅದರೆ, ಗಳಿಕೆಯ ಪ್ರತಿಯೊಂದು ಪೈಸೆಯನ್ನು ದೀರ್ಘಾವಧಿಯಲ್ಲಿ ಬಳಸುವುದು ಹೇಗೆಂಬುದು ಅವರ ಪತ್ನಿ ಜಮ್‌ನಾಬೆನ್‌ಗೆ ತಿಳಿದಿತ್ತು. ಹೀರಾಚಂದ್‌ ಮತ್ತು ಜಮ್‌ನಾಬೆನ್‌ರಿಗೆ ತ್ರಿಲೋಚನಾಬೆನ್‌ ಮತ್ತು ಜಸುಬೆನ್‌ ಎಂಬ ಇಬ್ಬರು ಪುತ್ರಿಯರು ಮತ್ತು ರಮಣಿಕ್‌ಭಾಯಿ, ಧೀರೂಭಾಯಿ ಮತ್ತು ನಾಥೂಭಾಯಿ ಎಂಬ ಮೂವರು ಪುತ್ರರಿದ್ದರು.
  • ತನ್ನ ಬಾಲ್ಯಾವಸ್ಥೆಯಲ್ಲಿ ಧೀರೂಭಾಯಿ ತನಗೆ ಅದು ಬೇಕು ಇದು ಬೇಕು ಎಂದು ಹಠಹಿಡಿಯುತ್ತಿದ್ದ. ಹೀಗಾಗಿ ಇವನನ್ನು ಸಂತೈಸುವುದು ಪೋಷಕರಿಗೆ ಬಹಳ ಕಷ್ಟವಾಗಿತ್ತು. ಆತನು ಬಹಳ ಆರೋಗ್ಯವಂತನಾಗಿದ್ದನು. ಚಿಕ್ಕ ಹುಡುಗನಾಗಿ ಆತನು ಅಗಾಧ ಉತ್ಸಾಹ ಮತ್ತು ಶಕ್ತಿಯನ್ನು ಹೊಂದಿದ್ದನು. ತನಗೆ ಬೇಕಾದ್ದನ್ನು ತನಗೆ ಸರಿಯೆನಿಸಿದ ರೀತಿಯಲ್ಲಿಯೇ ಮಾಡುವ ಛಲ ಈಗನಿಗಿತ್ತು.

ಶಾಲಾ ಜೀವನ[ಬದಲಾಯಿಸಿ]

  • ಬಾಲಕ ಧೀರೂಭಾಯಿ ಅಸಾಧ್ಯ ಪ್ರತಿಭಾವಂತ ಮತ್ತು ಬಹಳ ಬುದ್ಧಿವಂತನಾಗಿದ್ದ. ಉಸಿರು ಕಟ್ಟಿಸುವಂಥ ಶಾಲಾ ತರಗತಿಯ ವಾತಾವರಣದ ಬಗ್ಗೆ ಈತನಿಗೆ ತೀವ್ರ ಅಸಹನೆ ಇದ್ದು, ತಾಳ್ಮೆ ಕಳೆದುಕೊಂಡಿದ್ದ. ಬಾಯಿಪಾಠ ಮಾಡುವ ಶಾಲಾ ಪಾಠಗಳ ಬದಲಿಗೆ ಗರಿಷ್ಠ ಮಟ್ಟದ ಶಾರೀರಿಕ ಸಾಮರ್ಥ್ಯವನ್ನು ಬಳಸುವಂತಹ ಕೆಲಸ-ಕಾರ್ಯಗಳನ್ನು ಕೈಗೊಳ್ಳಲು ಬಾಲಕ ಧೀರೂಭಾಯಿ ಇಚ್ಛಿಸುತ್ತಿದ್ದನು.
  • ಹಣ ಸಂಪಾದಿಸಿ ತಮ್ಮ ತಂದೆಯವರಿಗೆ ಸಹಾಯ ಮಾಡಲು ಜಮ್‌ನಾಬೆನ್‌ ಧೀರೂಭಾಯಿ ಮತ್ತು ರಮಣಿಕ್‌ಭಾಯಿಗೆ ಒಮ್ಮೆ ಹೇಳಿದಾಗ, "ಯಾಕೆ ನೀನು ದುಡ್ಡು ದುಡ್ಡು ಎಂದು ಕಿರುಚಿಕೊಳ್ಳುತ್ತೀಯ? ನಾನೂ ಒಂದು ದಿನ ಹಣದ ರಾಶಿಯನ್ನೇ ಗಳಿಸುವೆ." ಎಂದು ಬಾಲಕ ಧೀರೂಭಾಯಿ ಸಿಟ್ಟಿನಿಂದ ಉತ್ತರಿಸಿದ್ದ. ವಾರಾಂತ್ಯಗಳಲ್ಲಿ ಆತನು ತನ್ನ ಹಳ್ಳಿ ಜಾತ್ರೆಗಳಲ್ಲಿ ಈರುಳ್ಳಿ/ಆಲೂಗಡ್ಡೆ ಕರಿಯುವ ಅಂಗಡಿಯನ್ನು ಸ್ಥಾಪಿಸಿ ಹೆಚ್ಚುವರಿ ಹಣ ಗಳಿಸಿ ಅದನ್ನು ತನ್ನ ತಾಯಿಗೆ ನೀಡುತ್ತಿದ್ದನು.
  • ತಮ್ಮ ೧೬ನೆಯ ವಯಸ್ಸಿನಲ್ಲಿ ಧೀರೂಭಾಯಿ ಅವರು ಯೆಮೆನ್ ದೇಶದ ಆಡೆನ್‌ಗೆ ಹೋದರು. ಅಲ್ಲಿ ಅವರು ೩೦೦ ರೂಪಾಯಿಗಳ ತಿಂಗಳ ಸಂಬಳಕ್ಕೆ ಎ. ಬೆಸ್ಸೀ ಅಂಡ್‌ ಕಂಪೆನಿ ಯಲ್ಲಿ ಕೆಲಸ ಮಾಡಿದರು. ಎರಡು ವರ್ಷಗಳ ನಂತರ, ಎ.ಬೆಸ್ಸೀ ಅಂಡ್‌ ಕಂಪೆನಿಯು ಷೆಲ್‌ ಉತ್ಪನ್ನಗಳ ಅಧಿಕೃತ ವಿತರಣೆಯ ಹಕ್ಕನ್ನು ಪಡೆಯಿತು.
  • ಅಲ್ಲದೆ ಧೀರೂಭಾಯಿ ಅವರನ್ನು ಆಡೆನ್‌ ಬಂದರಿನಲ್ಲಿರುವ ಸಂಸ್ಥೆಯ ಇಂಧನ ಭರ್ತಿಮಾಡುವ ಕೇಂದ್ರ (ಫಿಲಿಂಗ್‌ ಸ್ಟೇಷನ್‌)ದ ವ್ಯವಸ್ಥಾಪಕರನ್ನಾಗಿ ನೇಮಿಸಿತು. ಅವರು ಕೋಕಿಲಾಬೆ ಅವರನ್ನು ವಿವಾಹವಾಗಿ ಮುಖೇಶ್‌, ಅನಿಲ್‌ ಎಂಬ ಇಬ್ಬರು ಪುತ್ರರು ಮತ್ತು ನೀನಾ ಕೊಠಾರಿ, ದೀಪ್ತಿ ಸಲಗಾಂವ್‌ಕರ್‌ ಎಂಬ ಇಬ್ಬರು ಪುತ್ರಿಯರನ್ನು ಪಡೆದರು.

ಮಜೀನ್‌ ವಾಣಿಜ್ಯ ನಿಗಮ[ಬದಲಾಯಿಸಿ]

  • ಅಂತಿಮವಾಗಿ, ಧೀರೂಭಾಯಿ ಅಂಬಾನಿ ಭಾರತಕ್ಕೆ ಹಿಂದಿರುಗಿದರು. ಯೆಮೆನ್‌ ದೇಶದ ಆಡೆನ್‌ನಲ್ಲಿ ಧೀರೂಭಾಯಿಯೊಂದಿಗಿದ್ದ ಅವರ ಎರಡನೆಯ ಸೋದರಸಂಬಂಧಿ ಚಂಪಕ್‌ಲಾಲ್‌ ದಮಾನಿಯೊಂದಿಗೆ 'ಮಜಿನ್‌' ಎಂಬ ವಾಣಿಜ್ಯ ಸಂಸ್ಥೆಯನ್ನು ಸ್ಥಾಪಿಸಿದರು. ಮಜಿನ್‌ ಸಂಸ್ಥೆಯು ಪಾಲಿಯೆಸ್ಟರ್‌ ನೂಲುಹುರಿಯನ್ನು ಆಮದು ಮಾಡಿಕೊಂಡು ಮಸಾಲೆ ಪದಾರ್ಥಗಳನ್ನು ರಫ್ತು ಮಾಡುತ್ತಿತ್ತು.
  • ರಿಲಾಯನ್ಸ್‌ ವಾಣಿಜ್ಯ ನಿಗಮದ ಮೊದಲ ಕಾರ್ಯಾಲಯವನ್ನು ಮಸಜಿದ್‌ ಬಂದರ್‌ನ ನರಸೀನಾಥ ಬೀದಿಯಲ್ಲಿ ಸ್ಥಾಪಿಸಲಾಯಿತು. ಅದು ಮೂರು ಕುರ್ಚಿಗಳು, ಒಂದು ಮೇಜು ಮತ್ತು ಒಂದು ದೂರವಾಣಿಯನ್ನು ಹೊಂದಿದ್ದ ಕೊಠಡಿಯಾಗಿತ್ತು. ಮೊದಲಿಗೆ, ತಮ್ಮ ವ್ಯವಹಾರದಲ್ಲಿ ಸಹಾಯ ಮಾಡಲು ಇಬ್ಬರು ಸಹಾಯಕ ಸಿಬ್ಬಂದಿಯಿದ್ದರು. ಚಂಪಕ್‌ಲಾಲ್‌ ದಮಾನಿ ಮತ್ತು ಧೀರೂಭಾಯಿ ಅಂಬಾನಿಯವರು ತಮ್ಮ ಪಾಲುದಾರಿಕೆಯನ್ನು ೧೯೬೫ರಲ್ಲಿ ಅಂತ್ಯಗೊಳಿಸಿದ ನಂತರ, ಧೀರೂಭಾಯಿ ತಮ್ಮದೇ ಹಾದಿಯನ್ನು ಹಿಡಿದರು.
  • ಇಬ್ಬರೂ ಭಿನ್ನ ಸ್ವಭಾವದವರಾದ ಕಾರಣ ಉದ್ದಿಮೆಯನ್ನು ನಡೆಸುವುದು ಹೇಗೆ ಎಂಬುದರ ಬಗ್ಗೆ ಅವರಲ್ಲಿ ಭಿನ್ನಾಭಿಪ್ರಾಯವಿತ್ತು. ಒಂದೆಡೆ ಚಂಪಕ್‌ಲಾಲ್‌ ದಮಾನಿ ಜಾಗರೂಕ ವಹಿವಾಟುದಾರರಾಗಿದ್ದು, ನೂಲುಹುರಿಯ ತಪಶೀಲು ಕಟ್ಟುವುದರಲ್ಲಿ ನಂಬಿಕೆಯಿಟ್ಟಿರಲಿಲ್ಲ; ಇನ್ನೊಂದೆಡೆ ಧೀರೂಭಾಯಿ ಯಾವುದೇ ರೀತಿಯ ಸಾಹಸ ಮಾಡಲೂ ಸಿದ್ಧರಿದ್ದು, ಬೆಲೆಯೇರಿಕೆಯನ್ನು ಮನಗಂಡು, ತಪಶೀಲು ಕಟ್ಟಿ ಲಾಭ ಗಳಿಸುವುದರಲ್ಲಿ ನಂಬಿಕೆಯಿಟ್ಟಿದ್ದರು.[೩]
  • ೧೯೬೮ರಲ್ಲಿ ಅವರು ದಕ್ಷಿಣ ಮುಂಬಯಿಯಲ್ಲಿರುವ ಅಲ್ಟಮೌಂಟ್‌ ರಸ್ತೆಯಲ್ಲಿರುವ ದುಬಾರಿ ವಠಾರದ ಮನೆಗೆ ಸ್ಥಳಾಂತರ ಗೊಂಡರು. ೧೯೭೦ರ ದಶಕದ ಉತ್ತರಾರ್ಧದಲ್ಲಿ ಅಂಬಾನಿಯವರ ನಿವ್ವಳ ಮೌಲ್ಯವು ೧೦ ದಶಲಕ್ಷ ರೂಪಾಯಿಗಳಾಗಿದ್ದವು.

ಏಷ್ಯಾ ಟೈಮ್ಸ್‌ ಉಲ್ಲೇಖಿಸಿದ್ದು[೪] ಹೀಗೆ: "ಅವರ ಜನನಿರ್ವಹಣಾ ದಕ್ಷತೆಯು ಅಸಾಧಾರಣವಾಗಿತ್ತು.

  • ಮಾಜಿ ಕಾರ್ಯದರ್ಶಿಯೊಬ್ಬರು ಹೇಳಿದ್ದು: "ಅವರದ್ದು ಬಹಳ ಉಪಕಾರಕ ಮನೋಭಾವವಾಗಿತ್ತು. ಅವರು 'ಮುಕ್ತ-ದ್ವಾರ' ನೀತಿಯನ್ನು ಅನುಸರಿಸುತ್ತಿದ್ದರು. ಉದ್ಯೋಗಿಗಳು ಎಂದಾದರೂ ಅವರ ಕೊಠಡಿಗೆ ಹೋಗಿ ತಮ್ಮ ಸಮಸ್ಯೆಗಳ ಬಗ್ಗೆ ಚರ್ಚೆಗಳನ್ನು ನಡೆಸಬಹುದಾಗಿತ್ತು." ಉದ್ಯೋಗಿಗಳೇ ಆಗಲಿ, ಷೇರುದಾರರೇ ಆಗಲಿ, ಸುದ್ದಿಗಾರರೇ ಆಗಲಿ ಅಥವಾ ಸರ್ಕಾರೀ ಅಧಿಕಾರಿಗಳೇ ಆಗಲಿ - ವಿಭಿನ್ನ ಜನರ ಗುಂಪುಗಳೊಂದಿಗೆ ವಿಶೇಷ ರೀತಿಯಲ್ಲಿ ವ್ಯವಹರಿಸಲು ಅಧ್ಯಕ್ಷರಿಗೆ ತಿಳಿದಿತ್ತು.
  • ಧೀರೂಭಾಯಿ ಅವರು ಅಧಿಕಾರಿಗಳಿಗೆ ಹಣದಾಸೆ ತೋರಿಸಿ ತಮ್ಮ ಕಡೆ ವಾಲುವಂತೆ ಮಾಡಿ, ತಮಗೆ ಅನುಕೂಲವಾಗುವಂತೆ ಶಾಸನಗಳನ್ನು ಪುನಃ ಬರೆಸಿದರು ಎಂದು ಅವರ ಪ್ರತಿಸ್ಪರ್ಧಿಗಳು ಆರೋಪಿಸಿದ್ದರು. ಅವರು ಧೀರೂಭಾಯಿಯವರ ಆರಂಭದ ದಿನಗಳನ್ನು ನೆನಪಿಸಿಕೊಂಡು, ಭಾರತೀಯ ಅಧಿಕಾರಿ ವರ್ಗದ ನಿಯಂತ್ರಣಗಳುಳ್ಳ ಅಂದಿನ-ಬೈಜಾಂಟೀನ್‌ ವ್ಯವಸ್ಥೆಯಿಂದ ಲಾಭಬಡುಕತನವೆಂಬ ಕಲೆಯನ್ನು ಕರಗತ ಮಾಡಿಕೊಂಡದ್ದು ಹೇಗೆ ಎಂಬುದನ್ನು ತಿಳಿಸಿದ್ದಾರೆ.
  • ಅವರು ಆಗಾಗ್ಗೆ ನಷ್ಟದಲ್ಲಿ ರಫ್ತು ಮಾಡಿ, ನೂಲು ಹುರಿಯನ್ನು ಆಮದು ಮಾಡಿಕೊಳ್ಳಲು ಪುನಃಪೂರಣ ಪರವಾನಗಿಯನ್ನು ಬಳಸಿದರು. ಅನಂತರ, ಭಾರತದಲ್ಲಿ ನೂಲುಹುರಿಯ ತಯಾರಿಕೆಯು ಆರಂಭವಾದಾಗ, ಧೀರೂಭಾಯಿ ನೂಲುಹುರಿಯನ್ನು ಪುನಃ ನಷ್ಟದಲ್ಲಿಯೇ ರಫ್ತು ಮಾಡಿ, ನೈಲಾನ್‌ನ್ನು ಆಮುದು ಮಾಡಿದರು. ಧೀರೂಭಾಯಿ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಯಾವಾಗಲೂ ಒಂದು ಹೆಜ್ಜೆ ಮುಂದಿದ್ದರು. ಆಮುದಾದ ವಸ್ತುಗಳಿಗಾಗಿ ಭಾರೀ ಬೇಡಿಕೆಯಿರುವುದರಿಂದ, ಧೀರೂಭಾಯಿಯವರ ಲಾಭಾಂಶವು ಶೇಕಡಾ ೩೦೦ಕ್ಕಿಂತ ಕೆಳಗಿಳಿದದ್ದು ತೀರ ವಿರಳ.

ರಿಲಾಯನ್ಸ್‌ ಜವಳಿಗಳು[ಬದಲಾಯಿಸಿ]

  • ಜವಳಿ ಉದ್ದಿಮೆಯಲ್ಲಿ ಒಳ್ಳೆಯ ಅವಕಾಶವನ್ನು ಕಂಡ ಧೀರೂಭಾಯಿ, ತಮ್ಮ ಮೊದಲ ಜವಳಿ ಗಿರಣಿಯನ್ನು ೧೯೭೭ರಲ್ಲಿ ಅಹ್ಮದಾಬಾದ್‌ನರೋಡಾದಲ್ಲಿ ಆರಂಭಿಸಿದರು. ಪಾಲಿಯೆಸ್ಟರ್‌ ನಾರಿನ ನೂಲುಹುರಿಗಳನ್ನು ಬಳಸಿ ಜವಳಿಗಳನ್ನು ತಯಾರಿಸಲಾಗುತ್ತಿತ್ತು.[೫]
  • ಅವರ ಅಣ್ಣ ರಮಣಿಕ್‌ಲಾಲ್‌ ಅಂಬಾನಿಯವರ ಪುತ್ರ ವಿಮಲ್‌ ಅಂಬಾನಿಯವರ ಹೆಸರನ್ನಾಧರಿಸಿ ಧೀರೂಭಾಯಿಯವರು 'ವಿಮಲ್'‌ ಎಂಬ ಬ್ರ್ಯಾಂಡ್‌ನ್ನು ಆರಂಭಿಸಿದರು. ಭಾರತ ದೇಶದ ಒಳವಲಯಗಳಲ್ಲಿ 'ವಿಮಲ್‌' ಬ್ರ್ಯಾಂಡ್‌ ಬೃಹತ್ಪ್ರಮಾಣದಲ್ಲಿ ಮಾರಾಟವಾಗಿ ಅದು ಮನೆಮಾತಾಯಿತು. ಅಧಿಕಾರ-ಪ್ರದಾನ ಚಿಲ್ಲರೆ ವ್ಯಾಪಾರದ ಅಂಗಡಿಗಳನ್ನು ಆರಂಭಗೊಳಿಸಿ, ಅಂಗಡಿಗಳು 'ಒನ್ಲಿ ವಿಮಲ್‌' ಬ್ರ್ಯಾಂಡ್‌ ಜವಳಿಗಳನ್ನು ಮಾರುತ್ತಿದ್ದವು.
  • ೧೯೭೫ರಲ್ಲಿ ವಿಶ್ವ ಬ್ಯಾಂಕ್‌ನ ತಾಂತ್ರಿಕ ತಂಡವೊಂದು ರಿಲಾಯನ್ಸ್‌ ಟೆಕ್ಸ್‌ಟೈಲ್ಸ್‌ನ ತಯಾರಿಕೆಯ ಘಟಕಕ್ಕೆ ಭೇಟಿ ನೀಡಿತು. ಈ ಘಟಕಕ್ಕೆ 'ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಟ್ಟಕ್ಕೂ ಅತ್ಯುತ್ತಮ ವೆಂಬ ಪ್ರಮಾಣ ಪತ್ರ ಸಂದಿರುವುದು ಆ ಕಾಲದಲ್ಲಿಯೇ ಒಂದು ಅಪರೂಪದ ಹೆಗ್ಗಳಿಕೆಯಾಗಿತ್ತು.[೬]'

ಪ್ರಾಥಮಿಕ ಷೇರು ನೀಡಿಕೆ[ಬದಲಾಯಿಸಿ]

  • ಭಾರತದಲ್ಲಿ ಇಕ್ವಿಟಿ ಕಲ್ಟ್‌ ಆರಂಭವಾಗಲು ಧೀರೂಭಾಯಿ ಅಂಬಾನಿಯವರೇ ಕಾರಣ. ಭಾರತದ ವಿವಿಧ ಭಾಗಗಳಿಂದ ೫೮,೦೦೦ಕ್ಕೂ ಅಧಿಕ ಹೂಡಿಕೆದಾರರು ೧೯೭೭ರಲ್ಲಿ ರಿಲಾಯನ್ಸ್‌ನ IPOಗೆ ಚಂದಾದಾರರಾದರು. ತಮ್ಮ ಉದ್ದಿಮೆಯ ಷೇರುದಾರರಾಗುವುದು ಲಾಭದಾಯಕವೆಂದು ಗುಜರಾತ್‌ನ ಗ್ರಾಮಾಂತರ ಪ್ರದೇಶಗಳಲ್ಲಿರುವ ಅಧಿಕ ಸಂಖ್ಯೆಯಲ್ಲಿರುವ ಸಣ್ಣ ಪ್ರಮಾಣದ ಹೂಡಿಕೆದಾರರ ಮನವೊಪ್ಪಿಸಲು ಧೀರೂಭಾಯಿಯವರಿಗೆ ಸಾಧ್ಯವಾಯಿತು.
  • ವಾರ್ಷಿಕ ಮಹಾಸಭೆಯನ್ನು ಕ್ರೀಡಾಂಗಣಗಳಲ್ಲಿ ನಡೆಸುವುದರಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ ಮೊದಲ ಖಾಸಗಿ ಕ್ಷೇತ್ರ ಉದ್ದಿಮೆಯಾಗಿತ್ತು. ೧೯೮೬ರಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ನ ವಾರ್ಷಿಕ ಮಹಾಸಭೆಯು ಮುಂಬಯಿಯ ಕ್ರಾಸ್ ಮೈದಾನದಲ್ಲಿ ನಡೆಯಿತು. ೩೫,೦೦೦ಕ್ಕೂ ಹೆಚ್ಚು ಷೇರುದಾರರು ಮತ್ತು ರಿಲಾಯನ್ಸ್‌ ಕುಟುಂಬದವರು ಇದರಲ್ಲಿ ಹಾಜರಿದ್ದರು.
  • ರಿಲಾಯನ್ಸ್‌ನಲ್ಲಿ ಹೂಡುವಂತೆ ಮೊದಲ-ಬಾರಿಯ ಚಿಲ್ಲರೆ-ವ್ಯಾಪಾರ ಹೂಡಿಕೆದಾರರ ಮನವೊಪ್ಪಿಸಲು ಧೀರೂಭಾಯಿ ಸಫಲರಾದರು. ೧೯೮೦ರ ಆರಂಭದಲ್ಲಿ ಅಂಬಾನಿಯವರ ನಿವ್ವಳ ಮೌಲ್ಯವು ಸುಮಾರು ಒಂದು ಶತಕೋಟಿ ರೂಪಾಯಿಗಳೆಂದು ಅಂದಾಜಾಗಿತ್ತು.

ಸ್ಟಾಕ್‌ ಎಕ್ಸ್‌ಚೇಂಜ್‌ಗಳ ಮೇಲೆ ಧೀರೂಭಾಯಿಯವರ ನಿಯಂತ್ರಣ[ಬದಲಾಯಿಸಿ]

  • ೧೯೮೨ರಲ್ಲಿ ಅರೆ-ಪರಿವರ್ತನೀಯ ಋಣಸಂಚಯಗಳ ವಿಚಾರವಾಗಿ ಹಕ್ಕುಗಳ ಪ್ರಕರಣಗಳನ್ನು ರಿಲಾಯನ್ಸ್‌ ಇಂಡಸ್ಟ್ರೀಸ್‌ ಎದುರಿಸಬೇಕಾಯಿತು.[೭] ತನ್ನ ಶೇರು ದರಗಳು ಎಳ್ಳಷ್ಟೂ ಇಳಿಯದಂತೆ ನೋಡಿಕೊಳ್ಳಲು ಉದ್ದಿಮೆಯು ಏನೆಲ್ಲಾ ಮಾಡುತ್ತಿತ್ತು ಎಂಬ ವದಂತಿಯೂ ಇತ್ತು.
  • ಇದರಲ್ಲಿ ಅವಕಾಶವನ್ನು ಕಂಡ, ಕೊಲ್ಕತ್ತಾ ಮೂಲದ ಸ್ಟಾಕ್‌ ಮಧ್ಯವರ್ತಿಗಳ ಗುಂಪನ್ನು ಹೊಂದಿದ ಸಟ್ಟಾ ವ್ಯಾಪಾರಿಗಳ ನಿಯಂತ್ರಣ ಕೂಟ- 'ಬೇರ್‌ ಕಾರ್ಟೆಲ್‌' ರಿಲಾಯನ್ಸ್‌ನ ಷೇರುಗಳನ್ನು ಶೀಘ್ರ ಮಾರಾಟ ಮಾಡಲಾರಂಭಿಸಿದರು. ಇದಕ್ಕೆ ಪ್ರತಿ ರೋಧವೊಡ್ಡಲು, ಇತ್ತೀಚಿನವರೆಗೂ 'ರಿಲಾಯನ್ಸ್‌ನ ಸ್ನೇಹಿತರು' ಎನ್ನಲಾದ ಸ್ಟಾಕ್‌ ಮಧ್ಯವರ್ತಿಗಳ ಗುಂಪು ಮುಂಬಯಿ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಶೀಘ್ರ ಮಾರಾಟವಾದ ಈ ರಿಲಾಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳನ್ನು ಕೊಳ್ಳಲಾರಂಭಿಸಿದರು.
  • ಹೆಚ್ಚಿನ ದರಗಳಲ್ಲಿ ಮಾರಲು ಷೇರುಗಳನ್ನು ಕೊಳ್ಳುವವರು (ಬುಲ್ಸ್‌) ಕೈಯಲ್ಲಿರುವ ಹಣದ ಕೊರತೆಯ ಕಾರಣ ವ್ಯವಹಾರವನ್ನು ಸಂಪೂರ್ಣಗೊಳಿಸಲಾಗದೆ

ಮುಂಬಯಿ ಸ್ಟಾಕ್‌ ಎಕ್ಸ್‌ಚೇಂಜ್‌ನಲ್ಲಿ ಪ್ರಚಲಿತವಾಗಿದ್ದ 'ಬದಲಾ' ವಹಿವಾಟು ವ್ಯವಸ್ಥೆಯಡಿ ವಿಲೆವಾರಿಗೆ ಸಿದ್ಧರಾಗುವರೆಂಬುದು ಸಟ್ಟಾ ವ್ಯಾಪಾರಿಗಳ ನಿಯಂತ್ರಣಾ ಕೂಟದ ಲೆಕ್ಕಾಚಾರವಾಗಿತ್ತು. 'ಗೂಳಿ'ಗಳು ಷೇರುಗಳನ್ನು ಕೊಳ್ಳುತ್ತಲೇ ಇದ್ದು, ಚುಕಾವಣೆಯ ದಿನದ ವರೆಗೂ, ಪ್ರತಿ ಷೇರುಗೂ ೧೫೨ ರೂಪಾಯಿಗಳ ಮೌಲ್ಯವನ್ನೇ ಕಾದಿರಿಸಲಾಯಿತು. ಚುಕಾವಣೆಯ ದಿನ 'ಗೂಳಿ'ಗಳು ಷೇರು ಪತ್ರಗಳನ್ನು ಭೌತಿಕವಾಗಿ ನೀಡಲು ಬೇಡಿಕೆಯಿತ್ತಾಗ 'ಕರಡಿ' ಕೂಟವು ಅವಾಕ್ಕಾಯಿತು.

  • ವಹಿವಾಟನ್ನು ಸಂಪೂರ್ಣಗೊಳಿಸಲು, ರಿಲಾಯನ್ಸ್‌ ಷೇರುಗಳನ್ನು ಕೊಂಡ ಸ್ಟಾಕ್‌ ಮಧ್ಯಸ್ಥರಿಗೆ ಅತ್ಯಗತ್ಯ ನಗದು ಹಣವನ್ನು ನೀಡಿದ್ದು ಬೇರೆ ಯಾರೂ ಅಲ್ಲ, ಧೀರೂಭಾಯಿ ಅಂಬಾನಿ. ಒಂದು ವೇಳೆ ವಿಲೆವಾರಿಯಾಗದಿದ್ದಲ್ಲಿ, 'ಗೂಳಿ'ಗಳು (ಮಾರಾಟಗಾರರು) ಅನ್‌ಬದಲಾ ಗೆ ಬೇಡಿಕೆಯಿತ್ತರು. (ಅರ್ಥಾತ್‌ ಪ್ರತಿ ಷೇರಿಗೆ ೩೫ ರೂಪಾಯಿಗಳ ದಂಡ). ಇದರೊಂದಿಗೆ ಬೇಡಿಕೆಯು ಹೆಚ್ಚಾಗಿ ರಿಲಾಯನ್ಸ್‌ನ ಷೇರುಗಳ ಬೆಲೆಯು ನಿಮಿಷಗಳಲ್ಲಿಯೇ ೧೮೦ ರೂಪಾಯಿಗಳಿಗೂ ಮೀರಿಹೋಯಿತು.
  • ಈ ವಹಿವಾಟು ಮಾರುಕಟ್ಟೆಯಲ್ಲಿ ಸಾಕಷ್ಟು ಕೋಲಾಹಲವೆಬ್ಬಿಸಿತು. ಧೀರೂಭಾಯಿ ಅಂಬಾನಿ ಸ್ಟಾಕ್‌ ಮಾರುಕಟ್ಟೆಯ ನಿರ್ವಿವಾದಿ ಸಾಮ್ರಾಟರಾದರು. ರಿಲಾಯನ್ಸ್‌ನ್ನು ಹಗುರವಾಗಿ ಪರಿಗಣಿಸುವುದರ ಪರಿಣಾಮಗಳೇನಾಗಬಹುದು ಎಂಬುದನ್ನು ಧೀರೂಭಾಯಿ ಅವರ ಟೀಕಾಕಾರರಿಗೆ ಸಾಬೀತುಪಡಿಸಿದರು. ಈ ಪರಿಸ್ಥಿತಿಗೆ ಪರಿಹಾರವನ್ನು ಕಾಣಲು, ಮುಂಬಯಿ ಶೇರು ವಿನಿಮಯ ಕೇಂದ್ರವನ್ನು ಮೂರು ವ್ಯವಹಾರ-ದಿನಗಳ ಕಾಲ ಮುಚ್ಚಲಾಯಿತು.
  • ಮುಂಬಯಿ ಸ್ಟಾಕ್‌ ಎಕ್ಸ್‌ಚೇಂಜ್‌(BSE) ಅಧಿಕಾರಿಗಳು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ, 'ಅನ್‌ಬದಲಾ' ದರವನ್ನು ಎರಡು ರೂಪಾಯಿಗಳಿಗೆ ಇಳಿಸಿ, 'ವಹಿವಾಟುದಾರರ'ಕೂಟವು ಮುಂದಿನ ಎರಡು ದಿನಗಳೊಳಗೆ ಷೇರುಗಳನ್ನು ಹಸ್ತಾಂತರಿಸುವಂತೆ ಷರತ್ತು ವಿಧಿಸಿತು. 'ಕರಡಿ'ಕೂಟವು ಮಾರುಕಟ್ಟೆಯಲ್ಲಿ ರಿಲಾಯನ್ಸ್‌ನ ಷೇರುಗಳನ್ನು ಹೆಚ್ಚಿನ ಬೆಲೆಯಲ್ಲಿ ಕೊಂಡರು. 'ಕರಡಿ' ಕೂಟಕ್ಕೆ ಈ ಷೇರುಗಳನ್ನು ಸ್ವತಃ ಧೀರೂಭಾಯಿಯವರೇ ನೀಡಿದ್ದು ನಂತರ ತಿಳಿದು ಬಂದಿತು.
  • 'ಕರಡಿ' ಕೂಟದ ಈ ರೀತಿಯ ದುಸ್ಸಾಹಸದ ಫಲವಾಗಿ ಧೀರೂಭಾಯಿಯವರು ಒಳ್ಳೆಯ ಲಾಭ ಗಳಿಸಿದರು.[೮] ಈ ಘಟನೆಯ ನಂತರ ಅವರ ಟೀಕಾರರು ಮತ್ತು ಪತ್ರಿಕೋದ್ಯಮದವರು ಬಹಳಷ್ಟು ಪ್ರಶ್ನೆಗಳನ್ನು ಎತ್ತಿದರು.
  • ಕೆಲವೇ ವರ್ಷಗಳ ಹಿಂದೆ ಒಬ್ಬ ನೂಲುಹುರಿಯ ವಹಿವಾಟುದಾರರೊಬ್ಬರು ಈ ಬಿಕ್ಕಟ್ಟಿನ ಕಾಲದಲ್ಲಿ ಹೇಗೆ ಅಷ್ಟೊಂದು ಹಣದ ಹರಿವನ್ನು ಪಡೆಯಲು ಸಾಧ್ಯವಾಯಿತು ಎಂಬುದು ಬಹಳಷ್ಟು ಜನರಿಗೆ ಅರ್ಥವಾಗಲೇ ಇಲ್ಲ. ಅಂದಿನ ಹಣಕಾಸು ಮಂತ್ರಿ ಪ್ರಣಬ್‌ ಮುಖರ್ಜಿಯವರು ಸಂಸತ್ತಿನಲ್ಲಿ ಇದಕ್ಕೆ ಉತ್ತರವನ್ನು ನೀಡಿದರು. ೧೯೮೨-೮೩ರಲ್ಲಿ ಅನಿವಾಸಿ ಭಾರತೀಯರೊಬ್ಬರು ರಿಲಾಯನ್ಸ್‌ನಲ್ಲಿ ೨೨ ಕೋಟಿ ರೂಪಾಯಿಗಳನ್ನು ಹೂಡಿದರೆಂದು ಅವರು ಸಂಸತ್ತಿನಲ್ಲಿ ಹೇಳಿಕೆಯನ್ನು ನೀಡಿದರು.
  • ಈ ಹೂಡಿಕೆಗಳನ್ನು ಕ್ರೊಕೊಡೈಲ್‌, ಲೊಟಾ ಮತ್ತು ಫಿಯಾಸ್ಕೊ ಎಂಬ ಸಂಸ್ಥೆಗಳ ಮಾರ್ಗವಾಗಿ ಕಳುಹಿಸಲಾಯಿತು. ಐಲ್‌ ಆಫ್‌ ಮ್ಯಾನ್‌ನಲ್ಲಿ ಈ ಸಂಸ್ಥೆಗಳನ್ನು ಪ್ರಾಥಮಿಕವಾಗಿ ನೋಂದಾಯಿಸಲಾಯಿತು. ಈ ಸಂಸ್ಥೆಗಳ ಉತ್ತೇಜಕರು ಅಥವಾ ಮಾಲೀಕರು ಷಾ ಎಂಬ ಒಂದೇ ಕುಲನಾಮವನ್ನು ಹೊಂದಿದ್ದು ಕುತೂಹಲಕಾರಿ ಕಾರಣವಾಗಿತ್ತು.
  • ಭಾರತೀಯ ರಿಸರ್ವ್ ಬ್ಯಾಂಕ್‌ ಈ ಘಟನೆಯ ತನಿಖೆ ನಡೆಸಿದಾಗ, ರಿಲಾಯನ್ಸ್‌ನಿಂದ ಅಥವಾ ಅದರ ಉತ್ತೇಜಕರಿಂದ ಯಾವುದೇ ಅನಧಿಕ್ರುತ್ ಅಥವಾ ಕಾನೂನು ಬಾಹಿರ ಕೃತ್ಯ, ವ್ಯವಹಾರಗಳಾಗಲಿ ನಡೆಸಿದ್ದು ಕಂಡುಬರಲಿಲ್ಲ.[೯]

ಬಂಡವಾಳ ವೈವಿಧ್ಯತೆ[ಬದಲಾಯಿಸಿ]

ಟೀಕೆಗಳು[ಬದಲಾಯಿಸಿ]

  • ತನ್ನ ಸ್ವಂತ ಅಗತ್ಯಗಳಿಗೆ ಸರಿಹೊಂದುವಂತೆ ಸರ್ಕಾರಿ ನೀತಿಗಳನ್ನು ತಿರುಚುವಂತಹ ದಬ್ಬಾಳಿಕೆ ವರ್ತನೆ ಮತ್ತು ಸರ್ಕಾರೀ ಚುನಾವಣೆಗಳಲ್ಲಿ[೧೧] ರಾಜಕೀಯ ಪ್ರಭಾವವನ್ನು ಬಳಸುವ ಆಪಾದನೆಗಳು ಧೀರೂಭಾಯಿಯವರ ವಿರುದ್ಧವಿತ್ತು.
  • ಉದ್ದಿಮೆ-ರಾಜಕೀಯ ನಂಟಿನ ಬಗ್ಗೆ ಬಹಳಷ್ಟು ಮಾಧ್ಯಮ ಮೂಲಗಳು ಗುಲ್ಲೆಬ್ಬಿಸಿದರೂ, ಅಂಬಾನಿ ಮನೆತನವು ದೇಶದೆಲ್ಲಡೆ ಬೀಸಿದ ಮಾಧ್ಯಮ ಚಂಡಮಾರುತಗಳಿಂದ ಅಧಿಕ ರಕ್ಷಣೆ ಮತ್ತು ಆಸರೆಯನ್ನು ಯಾವಾಗಲೂ ಪಡೆದಿದೆ.

ನುಸ್ಲಿ ವಾಡಿಯಾರೊಂದಿಗೆ ಹಣಾಹಣಿ[ಬದಲಾಯಿಸಿ]

  • ಬಾಂಬೆ ಡೈಯಿಂಗ್‌ನ ನುಸ್ಲಿ ವಾಡಿಯಾ ಒಂದು ಕಾಲದಲ್ಲಿ ಧೀರೂಭಾಯಿ ಮತ್ತು ರಿಲಾಯನ್ಸ್‌ ಇಂಡಸ್ಟ್ರೀಸ್‌ನ ಅತಿ ದೊಡ್ಡ ಪ್ರತಿಸ್ಪರ್ಧಿಯಾಗಿದ್ದರು. ನುಸ್ಲಿ ವಾಡಿಯಾ ಮತ್ತು ಧೀರೂಭಾಯಿ ಇಬ್ಬರೂ ಸಹ ರಾಜಕೀಯ ಕ್ಷೇತ್ರಗಳಲ್ಲಿ ಪ್ರಭಾವಿ ವ್ಯಕ್ತಿಗಳಾಗಿದ್ದರು. ಸುಧಾರಣಾ-ಪೂರ್ವ ಆರ್ಥಿಕತೆಯ ಕಾಲದಲ್ಲಿ ಅತಿ ದುರ್ಲಭ ಪರವಾನಗಿಗಳನ್ನು ಮೂಂಜೂರಾಗುವಂತೆ ಮಾಡುತ್ತಿದ್ದರು.

೧೯೭೭-೧೯೭೯ ಜನತಾ ಪಕ್ಷದ ಆಳ್ವಿಕೆಯಲ್ಲಿ, ವಾರ್ಷಿಕ ೬೦,ಸಾವಿರ ಟನ್‌ ಡೈ-ಮಿಥೈಲ್‌ ಟೆರೆಫ್ಥಲೆಟ್‌ (DMT) ಉತ್ಪಾದಿಸುವ ಕಾರ್ಖಾನೆಯನ್ನು ಸ್ಥಾಪಿಸಲು ನುಸ್ಲಿ ವಾಡಿಯಾ ಅನುಮತಿ ಪಡೆದರು. ಆಶಯ ಪತ್ರವು ಪರವಾನಗಿಯಾಗಿ ಪರಿವರ್ತಿತವಾಗುವ ಮುಂಚೆ ಬಹಳಷ್ಟು ವಿಘ್ನಗಳುಂಟಾದವು.

  • ಅಂತಿಮವಾಗಿ, ೧೯೮೧ರಲ್ಲಿ ನುಸ್ಲಿ ವಾಡಿಯಾರಿಗೆ ಕಾರ್ಖಾನೆಯನ್ನು ನಿರ್ಮಿಸಲು ಪರವಾನಗಿ ದೊರೆಯಿತು. ಈ ಘಟನೆಯು ಉಭಯ ಉದ್ಯ್ಗಮಿಗಳ ನಡುವೆ ಒಂದು ರೀತಿಯ ವೇಗವರ್ಧಕವಾಗಿ, ಸ್ಪರ್ಧೆಯು ಅತಿರೇಕದೆಡೆಗೆ ತಿರುಗಿತು.

ಇಂಡಿಯನ್‌ ಎಕ್ಸ್‌ಪ್ರೆಸ್‌ ಲೇಖನಗಳು[ಬದಲಾಯಿಸಿ]

  • ಒಂದು ಕಾಲದಲ್ಲಿ ರಾಮ್‌ನಾಥ್‌ ಗೊಯೆಂಕಾ ಧೀರೂಭಾಯಿ ಅಂಬಾನಿಯವರ ಸ್ನೇಹಿತರಾಗಿದ್ದರು. ರಾಮ್‌ನಾಥ್‌ ಗೊಯೆಂಕಾ ನುಸ್ಲಿ ವಾಡಿಯಾರಿಗೂ ಸಹ ನಿಕಟವರ್ತಿಯಾಗಿದ್ದರು. ಹಣಾಹಣಿ ನಡೆಸುತ್ತಿರುವ ಉಭಯ ಪಕ್ಷಗಳ ನಡುವೆ ರಾಮ್‌ನಾಥ್‌ ಗೊಯೆಂಕಾ ಹಲವು ಬಾರಿ ಮಧ್ಯಸ್ಥಿಕೆ ವಹಿಸಿ ಶತ್ರುತ್ವವನ್ನು ಅಂತ್ಯಗೊಳಿಸಲು ಯತ್ನಿಸಿದರು.
  • ಧೀರೂಭಾಯಿಯವರ ಭ್ರಷ್ಟ ವ್ಯಾವಹಾರಿಕ ನಡವಳಿಕೆಗಳು ಮತ್ತು ರಿಲಾಯನ್ಸ್‌ ಸಂಸ್ಥೆಯಲ್ಲಿ ರಾಮ್‌ನಾಥ್‌ರಿಗೆ ನ್ಯಾಯಸಮ್ಮತ ಪಾಲು ದೊರಕದಿರಲು ಧೀರೂಭಾಯಿಯವರ ಕಾನೂನು-ಬಾಹಿರ ಕೃತ್ಯಗಳೆಂಬ ಮುಖ್ಯ ಕಾರಣವಾಗಿ ರಾಮ್‌ನಾಥ್‌ ಗೊಯೆಂಕಾ ಮತ್ತು ಧೀರೂಭಾಯಿಯವರು ಶತ್ರುಗಳಾದರು. ಅನಂತರ, ರಾಮ್‌ನಾಥ್‌ ಗೊಯೆಂಕಾ ನುಸ್ಲಿ ವಾಡಿಯಾರಿಗೆ ಬೆಂಬಲ ಸೂಚಿಸಲು ನಿರ್ಧರಿಸಿದರು.
  • ಕಾಲದ ಒಂದು ಗಳಿಗೆಯಲ್ಲಿ, ರಾಮ್‌ನಾಥ್‌ ಗೊಯೆಂಕಾ ಹೀಗೆಂದಿದ್ದರು: 'ನುಸ್ಲಿ ವಾಡಿಯಾ ಒಬ್ಬ ಇಂಗ್ಲಿಷ್‌ ವ್ಯಕ್ತಿ. ಅಂಬಾನಿಯವರೊಂದಿಗೆ ನಡೆದುಕೊಳ್ಳುವುದು ಹೇಗೆಂದು ಅವರಿಗೆ ತಿಳಿಯದು. ನಾನೊಬ್ಬ ಬನಿಯಾ. ಅವರನ್ನು ಮುಗಿಸಿಬಿಡುವುದು ಹೇಗೆಂದು ನನಗೆ ಗೊತ್ತಿದೆ".
  • ದಿನಗಳು ಕಳೆದಾಗ, ರಾಮ್‌ನಾಥ್‌ ಗೊಯೆಂಕಾರಿಂದ ಪ್ರಕಾಶಗೊಳ್ಳುತ್ತಿದ್ದ ಇಂಡಿಯನ್‌ ಎಕ್ಸ್‌ಪ್ರೆಸ್‌ ದೊಡ್ಡ ಕಾಗದದ ಹಾಳೆಗಳ ದೈನಿಕವು ರಿಲಾಯನ್ಸ್‌ ಇಂಡಸ್ಟ್ರೀಸ್‌ ಮತ್ತು ಧೀರೂಭಾಯಿಯವರ ವಿರುದ್ಧ ಲೇಖನಗಳ ಸರಣಿಯನ್ನು ಪ್ರಕಟಿಸಿತು. ಲಾಭಾಂಶಗಳನ್ನು ಗರಿಷ್ಠಗೊಳಿಸಲು ಧೀರೂಭಾಯಿ ನ್ಯಾಯಸಮ್ಮತವಲ್ಲದ ವಹಿವಾಟು ಪ್ರಕಾರವನ್ನು ಬಳಸುತ್ತಿದ್ದರು ಎಂದು ಈ ಲೇಖನಗಳಲ್ಲಿ ವಿವರಿಸಲಾಗುತ್ತಿತ್ತು. ಈ ಪ್ರಕರಣದಲ್ಲಿ ತನಿಖೆ ನಡೆಸಲು ರಾಮ್‌ನಾಥ್‌ ಗೊಯೆಂಕಾ ತಮ್ಮ ಸಿಬ್ಬಂದಿಯನ್ನು ಬಳಸಲಿಲ್ಲ.
  • ಬದಲಿಗೆ, ಈ ಕೆಲಸಕ್ಕಾಗಿ ತಮ್ಮ ನಿಕಟವರ್ತಿ, ಸಲಹೆಗಾರ ಮತ್ತು ಲೆಕ್ಕಪರಿಶೋಧಕ(ಚಾರ್ಟರ್ಡ್‌ ಅಕೌಂಟೆಂಟ್‌) ಎಸ್‌. ಗುರುಮೂರ್ತಿಯವರನ್ನು ನೇಮಿಸಿದರು. ಎಸ್‌. ಗುರುಮೂರ್ತಿಯವರಲ್ಲದೆ, ಇಂಡಿಯನ್‌ ಎಕ್ಸ್‌ಪ್ರೆಸ್‌ನ ಸಿಬ್ಬಂದಿ ಪಟ್ಟಿಯಲ್ಲಿರದ ಇನ್ನೊಬ್ಬ ಪತ್ರಕರ್ತ ಮಾನೆಕ್‌ ದಾವರ್‌ ಸಹ ಲೇಖನಗಳನ್ನು ಬರೆಯಲಾರಂಭಿಸಿದರು. ಅಂಬಾನಿ ಕುಟುಂಬದ ವಹಿವಾಟನ ವಿರುದ್ಧ ನಿಲುವು ತಳೆದಿದ್ದ ಜಮ್ನಾದಾಸ್‌ ಮೂರ್ಜಾನಿ ಎಂಬ ಉದ್ಯಮಿಯೂ ಸಹ ಈ ಚಟುವಟಿಕೆಯಲ್ಲಿ ಬಾಗವಹಿಸಿದ್ದರು.
  • ಧೀರೂಭಾಯಿ ಮತ್ತು ರಾಮ್‌ನಾಥ್‌ ಇಬ್ಬರೂ ಸಹ ಸಮಾಜದ ವಿವಿಧ ವರ್ಗಗಳಿಂದ ಪ್ರಶಂಸೆ-ಟೀಕೆಗಳಿಗೆ ಗುರಿಯಾಗಿದ್ದರು. ವೈಯಕ್ತಿಕ ಶತ್ರುತ್ವಕ್ಕಾಗಿ ಒಂದು ರಾಷ್ಟ್ರೀಯ ಪತ್ರಿಕೆಯೊಂದನ್ನು ಬಳಸುವ ರಾಮ್‌ನಾಥ್‌ ಗೊಯೆಂಕಾರನ್ನು ಜನರು ಆಗ ಟೀಕಿಸಿದರು. ದೇಶದಲ್ಲಿ ಆಗ ನ್ಯಾಯಸಮ್ಮತವಲ್ಲದ ಮತ್ತು ಕಾನೂನು ಬಾಹಿರ ವಹಿವಾಟಿನಲಿ ತೊಡಗಿರುವ ಬಹಳಷ್ಟು ಉದ್ಯಮಿಗಳಿದ್ದರೂ, ರಾಮ್‌ನಾಥ್‌ ಗೊಯೆಂಕಾ ಕೇವಲ ಧೀರೂಭಾಯಿಯವರನ್ನು ಮಾತ್ರ ಗುರಿಯಾಗಿಸಿಕೊಂಡರು.
  • ಇತರರನ್ನಲ್ಲ ಎಂದು ಟೀಕಾಕಾರರು ನಂಬಿದ್ದರು. ಅವರ ಕಾಯಂ ಸಿಬ್ಬಂದಿಯ ನೆರವು ಪಡೆಯದೆ ಈ ಲೇಖನಗಳನ್ನು ಪ್ರಕಟಿಸಿದ ರಾಮ್‌‌ನಾಥ್‌ರ ದಕ್ಷತೆಯನ್ನು ವಿಮರ್ಶಕರು ಮೆಚ್ಚಿದರು. ಇದೇ ವೇಳೆಗೆ, ಧೀರೂಭಾಯಿ ಅಂಬಾನಿಗೂ ಸಹ ಮಾನ್ಯತೆ ಮತ್ತು ಮೆಚ್ಚುಗೆ ದೊರಕಿತು. ಸಾರ್ವಜನಿಕರ ವರ್ಗವೊಂದು ಧೀರೂಭಾಯಿಯವರ ವ್ಯವಹಾರ ಜ್ಞಾನ ಮತ್ತು ವ್ಯವಸ್ಥೆಯನ್ನು ತಮ್ಮ ಇಚ್ಛೆಯಂತೆ ಪಳಗಿಸುವ ಕುಶಲತೆಯನ್ನು ಮೆಚ್ಚಲಾರಂಭಿಸಿದರು.
  • ಧೀರೂಭಾಯಿ ಅಂಬಾನಿಯವರಿಗೆ ಲಕ್ವವಾದ ಸಮಯದಲ್ಲಿ ಈ ಕೆಸರೆರೆಚಾಟ ಅಂತ್ಯಗೊಂಡಿತು. ಸ್ಯಾನ್‌ ಡೀಗೊದಲ್ಲಿ ಧೀರೂಭಾಯಿ ಅಂಬಾನಿ ಚೇತರಿಸಿಕೊಳ್ಳುತ್ತಿರುವಾಗ, ಅವರ ಪುತ್ರರಾದ ಮುಖೇಶ್‌ ಅಂಬಾನಿ ಮತ್ತು ಅನಿಲ್‌ ಅಂಬಾನಿ ಸಂಸ್ಥೆಯನ್ನು ನಿರ್ವಹಿಸಿದರು. ಇಂಡಿಯನ್‌ ಎಕ್ಸ್‌ಪ್ರೆಸ್‌ ರಿಲಾಯನ್ಸ್‌ನ ವಿರುದ್ಧ ಗುರಿಯನ್ನಿಟ್ಟು, ರಿಲಾಯನ್ಸ್‌ ಇಂಡಸ್ಟ್ರೀಸ್‌ಗೆ ದಂಡ ವಿಧಿಸಲು ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲವೆಂದು ಸರ್ಕಾರವನ್ನು ನೇರವಾಗಿ ಟೀಕಿಸುತ್ತಿತ್ತು.
  • ವಾಡಿಯಾ - ಗೊಯೆಂಕಾ - ಅಂಬಾನಿಗಳ ನಡುವಿನ ಕಿತ್ತಾಟವು ಹೊಸ ತಿರುವು ಪಡೆದು ರಾಷ್ಟ್ರೀಯ ಬಿಕ್ಕಟ್ಟಾಯಿತು. ಗುರುಮೂರ್ತಿ ಮತ್ತು ಇನ್ನೊಬ್ಬ ಪತ್ರಕರ್ತ ಮುಲಗಾಂವ್‌ಕರ್‌ ರಾಷ್ಟ್ರಪತಿ ಗಿಯಾನಿ ಜೈಲ್‌ ಸಿಂಗ್‌ರೊಂದಿಗೆ ಮಾತುಕತೆ ನಡೆಸಿ ಅವರ ಪರವಾಗಿ ಪ್ರಧಾನ ಮಂತ್ರಿಗೆ ಒಂದು ಪ್ರತಿಕೂಲ ಅನಾಮಧೇಯ ಪತ್ರಲೇಖನ ಕಳುಹಿಸಿದರು. ಇಂಡಿಯನ್‌ ಎಕ್ಸ್‌‌ಪ್ರೆಸ್‌ ರಾಷ್ಟ್ರಪತಿಯವರ ಪತ್ರದ ಕರಡು ಪ್ರತಿಯನ್ನು ರೋಮಾಂಚಕ ಸುದ್ದಿಯ ರೂಪದಲ್ಲಿ ಪ್ರಕಟಿಸಿತು.
  • ಆದರೆ, ಪತ್ರವನ್ನು ರಾಜೀವ್‌ ಗಾಂಧಿಯವರಿಗೆ ಕಳುಹಿಸುವ ಮುಂಚೆ ಗಿಯಾನಿ ಜೈಲ್ ಸಿಂಗ್‌ ಅದರಲ್ಲಿ ಬದಲಾವಣೆಗಳನ್ನು ಮಾಡಿದ್ದರೆಂಬುದು ಪತ್ರಿಕೆಯವರಿಗೆ ಅರಿವಾಗಲಿಲ್ಲ. ಆ ಗಳಿಗೆಯಲ್ಲಿ ಧೀರೂಭಾಯಿ ಹಣಾಹಣಿಯಲ್ಲಿ ಜಯಗಳಿಸಿದ್ದರು. ಈಗ, ಹಣಾಹಣಿಯು ನೇರವಾಗಿ ಪ್ರಧಾನಿ ರಾಜೀವ್‌ ಗಾಂಧಿ ಮತ್ತು ರಾಮ್‌ನಾಥ್‌ ಗೊಯೆಂಕಾರ ನಡುವೆ ಇತ್ತು.
  • ಧೀರೂಭಾಯಿ ಅಂಬಾನಿ ಸದ್ದಿಲ್ಲದೆ ನಿರ್ಗಮಿಸಿದರು. ದಿಲ್ಲಿಯ ಸುಂದರ್‌ ನಗರದಲ್ಲಿರುವ ಇಂಡಿಯನ್‌ ಎಕ್ಸ್‌ಪ್ರೆಸ್‌ ಅತಿಥಿಗೃಹದ ಮೇಲೆ ಸರ್ಕಾರವು ದಾಳಿ ನಡೆಸಿದಾಗ ಅಲ್ಲಿ ಮುಲಗಾಂವ್‌ಕರ್‌ರವರ ಕೈಬರಹದಲ್ಲಿ ತಿದ್ದಲಾದ ಮೂಲ ಕರಡು ಪ್ರತಿಯು ಲಭಿಸಿತು. ೧೯೮೮-೮೯ರಲ್ಲಿ, ರಾಜೀವ್ ಸರ್ಕಾರವು ಇಂಡಿಯನ್‌ ಎಕ್ಸ್‌ಪ್ರೆಸ್‌ ವಿರುದ್ಧ ಆಪಾದನೆ-ಆರೋಪಗಳ ಸರಣಿಯೊಂದಿಗೆ ತಿರುಗೇಟು ನೀಡಿತು. ಆಗಲೂ ಸಹ ರಾಮ್‌ನಾಥ್‌ ಗೊಯೆಂಕಾ ತಮ್ಮ ಖ್ಯಾತಿಯನ್ನು ಉಳಿಸಿಕೊಂಡರು, ಏಕೆಂದರೆ, ಹಲವರಿಗೆ ಅವರು ತುರ್ತು ಪರಿಸ್ಥಿತಿಯನ್ನು ವೀರಾವೇಶದಿಂದ ಎದುರಿಸಿದಂತೆಯೇ ಈ ಸ್ಥಿತಿಯನ್ನೂ ಎದುರಿಸುತ್ತಿರುವಂತೆ ಕಂಡುಬಂದರು.

ಧೀರೂಭಾಯಿ ಮತ್ತು ವಿ. ಪಿ. ಸಿಂಗ್‌[ಬದಲಾಯಿಸಿ]

  • ರಾಜೀವ್‌ ಗಾಂಧಿಯವರ ನಂತರ ಭಾರತದ ಪ್ರಧಾನಿಯಾದ ವಿಶ್ವನಾಥ್‌ ಪ್ರತಾಪ್‌ ಸಿಂಗ್‌ರೊಂದಿಗೆ ಧೀರೂಭಾಯಿಯವರ ಸಂಬಂಧ ಆತ್ಮೀಯವಾಗದಿರುವುದು ಹಲವರಿಗೆ ಗೊತ್ತಿರುವ ವಿಚಾರ. ಮುಕ್ತ ಸಾಮಾನ್ಯ ಪರವಾನಗಿಯಡಿ ಮೇ ೧೯೮೫ರಲ್ಲಿ ವಿ. ಪಿ. ಸಿಂಗ್‌ ಶುದ್ಧೀಕರಿಸಿದ ಟೆರೆಫ್ಥಲಿಕ್‌ ಆಮ್ಲದ ಆಮದನ್ನು ಹಠಾತ್ತನೆ ರದ್ದುಪಡಿಸಿದರು. ಇದು ಮೂಲಸಾಮಗ್ರಿಯಾಗಿ ಪಾಲಿಯೆಸ್ಟರ್‌ ನಾರು ನೂಲು ಹುರಿಯ ತಯಾರಿಕೆಯಲ್ಲಿ ಬಹಳ ಮುಖ್ಯವಾಗಿತ್ತು.
  • ಇದರಿಂದ ರಿಲಾಯನ್ಸ್‌ಗೆ ತಮ್ಮ ವ್ಯಾವಹಾರಿಕ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಬಹಳ ಕಷ್ಟವಾಯಿತು. ಹಲವಾರು ಹಣಕಾಸು ಸಂಸ್ಥೆಗಳಿಂದ ಖಾತರಿ ಪತ್ರಗಳನ್ನು ಸಂಪಾದಿಸಿಕೊಂಡಿತು. ತನ್ಮೂಲಕ, ಸರ್ಕಾರವು ಸೂಚನೆಯನ್ನು ಜಾರಿಗೊಳಿಸುವ ಮುಂಚೆಯೇ, ಆಮದು ಮಾಡಬಹುದಾದ ವರ್ಗವನ್ನು ಬದಲಾಯಿಸಿ PTAದ ಇಡೀ ವರ್ಷದ ದಾಸ್ತಾನನ್ನು ಆಮದು ಮಾಡಿಕೊಳ್ಳಲು ಶಕ್ಯವಾಯಿತು.
  • ೧೯೯೦ರಲ್ಲಿ, ಭಾರತೀಯ ಜೀವ ವಿಮಾ ನಿಗಮ ಮತ್ತು ಭಾರತೀಯ ಸಾಮಾನ್ಯ ವಿಮಾ ನಿಗಮದಂತಹ ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳು, ಲಾರ್ಸೆನ್‌ ಅಂಡ್‌ ಟೂಬ್ರೊ ಸಂಸ್ಥೆಯ ವ್ಯವಸ್ಥಾಪನಾ ನಿಯಂತ್ರಣಗಳನ್ನು ತಮ್ಮದಾಗಿಸಿಕೊಳ್ಳುವ ರಿಲಾಯನ್ಸ್‌ ಸಂಸ್ಥೆಯ ಹುನ್ನಾರಗಳನ್ನು ತಡೆಯುವುದರಲ್ಲಿ ಯಶಸ್ವಿಯಾದವು. ಸೋಲು ಸನ್ನಿಹಿತವಾಗುವುದನ್ನು ಕಂಡ ಅಂಬಾನಿಯವರು ಎಲ್‌ ಅಂಡ್‌ ಟಿ ಸಂಸ್ಥೆಯ ವ್ಯವಸ್ಥಾಪಕ ಮಂಡಳಿಗೆ ರಾಜೀನಾಮೆಯಿತ್ತರು.
  • ಏಪ್ರಿಲ್‌ ೧೯೮೯ರಲ್ಲಿ L&Tಯ ಅಧ್ಯಕ್ಷರಾದ ಧೀರೂಭಾಯಿ, ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಡಿ. ಎನ್‌. ಘೋಷ್‌ರವರಿಗಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಿತ್ತು. ಧೀರೂಭಾಯಿ ತೆರಿಗೆ ತಪ್ಪಿಸುತ್ತಿರುವುದನ್ನು ವಿ. ಪಿ. ಸಿಂಗ್‌ ಹಿಡಿದಿದ್ದರ ನೇರ ಪರಿಣಾಮವೇ ಅವರನ್ನು ರಕ್ಷಣಾ ಖಾತೆ ಮಂತ್ರಿಯನ್ನಾಗಿ ನೇಮಿಸಿದ್ದು ಎಂದು ನಂಬಲಾಗಿದೆ.

ಮರಣ[ಬದಲಾಯಿಸಿ]

ಚಿತ್ರ:Dhirubhai-Final Journey.jpg
ಅಂತಿಮ ಯಾತ್ರೆ: ಧೀರೂಭಾಯಿ ಅಂಬಾನಿಯವರ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನರು ಭಾಗವಹಿಸಿದರು.ಹಿಂದೂ ಸಂಪ್ರದಾಯದಂತೆ, ಅವರ ತಂದೆಯ ಪಾರ್ಥಿವ ಶರೀರವನ್ನು ಮುಖೇಶ್‌ ಅಂಬಾನಿ ಮತ್ತು ಅನಿಲ್‌ ಅಂಬಾನಿ ಹೊತ್ತಿರುವುದನ್ನು ಕಾಣಬಹುದು.
  • ತೀವ್ರ ಲಕ್ವದ ಪರಿಣಾಮವಾಗಿ 2002ರ ಜೂನ್‌ 24ರಂದು ಧೀರೂಭಾಯಿ ಅಂಬಾನಿಯವರನ್ನು
  • ಮುಂಬಯಿಯ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದು ಅವರಿಗೆ ಎರಡನೆಯ ಲಕ್ವವಾಗಿತ್ತು. ಮೊದಲ ಬಾರಿ ೧೯೮೬ರಲ್ಲಿ ಲಕ್ವ ಸಂಭವಿಸಿದಾಗ ಅವರ ಬಲಗೈ ನಿಷ್ಕ್ರಿಯವಾಗಿತ್ತು. ಒಂದು ವಾರಕ್ಕಿಂತಲೂ ಹೆಚ್ಚು ಸಮಯ ಅವರು ಕೊಮಾ ಸ್ಥಿತಿಯಲ್ಲಿದ್ದರು. ವೈದ್ಯರ ತಂಡ ಅವರ ಜೀವ ರಕ್ಷಿಸಲು ವಿಫಲವಾಯಿತು.
  • 2002ರ ಜುಲೈ 6ರಂದು ರಾತ್ರಿ (ಭಾರತೀಯ ಸಮಯ) ೧೧.೫೦ರ ಸುಮಾರಿಗೆ ನಿಧನರಾದರು. ಅವರ ಅಂತಿಮ ಯಾತ್ರೆಗೆ ಹಾಜರಾದವರು ಉದ್ಯಮಿಗಳು, ರಾಜಕಾರಣಿಗಳು, ಪ್ರಸಿದ್ಧರು ಮಾತ್ರವಲ್ಲ, ಸಾವಿರಾರು ಜನಸಾಮಾನ್ಯರೂ ಸಹ ಹಾಜರಿದ್ದರು. ಹಿಂದೂ ಸಂಪ್ರದಾಯದ ಪ್ರಕಾರ, ಅವರ ಹಿರಿಯ ಪುತ್ರ ಮುಖೇಶ್‌ ಅಂಬಾನಿ ಅಂತ್ಯಕ್ರಿಯೆಗಳನ್ನು ಮಾಡಿದರು.
  • 2002ರ ಜುಲೈ 7ರಂದು ಮುಂಬಯಿಯ ಚಂದನವಾಡಿ ಚಿತಾಗಾರದಲ್ಲಿ (ಭಾರತೀಯ ಸಮಯ) ಸಂಜೆ ೪.೩೦ ಸುಮಾರಿಗೆ ಅವರ ಅಂತ್ಯಕ್ರಿಯೆ ನಡೆಯಿತು.ಅವರು ಪತ್ನಿ ಕೋಕಿಲಾಬೆನ್‌ ಅಂಬಾನಿ, ಇಬ್ಬರು ಪುತ್ರರಾದ ಮುಖೇಶ್‌ ಅಂಬಾನಿ ಮತ್ತು ಅನಿಲ್‌ ಅಂಬಾನಿ ಮತ್ತು ಇಬ್ಬರು ಪುತ್ರಿಯರಾದ ನೀನಾ ಕೊಠಾರಿ ಮತ್ತು ದೀಪ್ತಿ ಸಲಗಾಂವ್‌ಕರ್‌ ಅವರನ್ನು ಅಗಲಿದ್ದಾರೆ.
  • ಧೀರೂಭಾಯಿ ಅಂಬಾನಿಯವರು ಮುಂಬಯಿಯ ಮುಲ್‌ಜಿ-ಜೇಠಾ ಜವಳಿ ಮಾರುಕಟ್ಟೆಯಲ್ಲಿ ಒಬ್ಬ ಸಣ್ಣ ವ್ಯಾಪಾರಿಯಾಗಿ ತಮ್ಮ ಸುದೀರ್ಘ ಜೀವನಪಯಣವನ್ನು ಆರಂಭಿಸಿದರು. ಈ ಮಹಾನ್‌ ಉದ್ಯಮಿಯ ನೆನಪಿಗಾಗಿ ಮುಂಬಯಿ ಜವಳಿ ವರ್ತಕರು 2002ಜುಲೈ 8ರಂದು ಮಾರುಕಟ್ಟೆಯನ್ನು ಮುಚ್ಚಿರಲು ನಿಶ್ಚಯಿಸಿದರು. ಧೀರೂಭಾಯಿಯವರ ಸಾವಿನ ಸಮಯದಲ್ಲಿ ರಿಲಾಯನ್ಸ್‌ ಸಂಸ್ಥೆಯ ಸಮಗ್ರ ವಹಿವಾಟಿನ ಮೊತ್ತವು ೭೫ ಸಾವಿರ ಕೋಟಿ ರೂಪಾಯಿಗಳಾಗಿತ್ತು.
  • (USD $ ೧೫ ಶತಕೋಟಿ). ೧೯೭೬-೭೭ರಲ್ಲಿ ರಿಲಾಯನ್ಸ್‌ ಸಂಸ್ಥೆಯ ವಾರ್ಷಿಕ ವಹಿವಾಟಿನ ಮೊತ್ತವು ೭೦ ಕೋಟಿ ರೂಪಾಯಿಗಳಾಗಿತ್ತು. ಧೀರೂಭಾಯಿಯವರು ತಮ್ಮ ಉದ್ದಿಮೆಯನ್ನು ಆರಂಭಿಸಿದ್ದು ಕೇವಲ ೧೫,೦೦೦ ರೂಪಾಯಿಗಳೊಂದಿಗೆ (US$೩೫೦) ಎಂದು ನೆನಪಿಡಬೇಕಾಗಿದೆ.

The country has lost iconic proof of what an ordinary Indian fired by the spirit of enterprise and driven by determination can achieve in his own lifetime.[೧೨].

Atal Bihari Vajpayee, Former Prime Minister of India

The nation had lost one of the doyens of the modern Indian corporate community, a philanthropist and above all a great human being endowed with great compassion and concern for the underprivileged sections of the society...

This new star, which rose on the horizon of the Indian industry three decades ago, remained on the top till the end by virtue of his ability to dream big and translate it into reality through the strength of his tenacity and perseverance His legacy will remain shrouded in the fact that his practices have brought bribery and corruption to indian business for years to come. I join the people of Maharashtra in paying my tribute to the memory of Ambani and convey my heartfelt condolences to the bereaved family.[೧೩].

— P C Alexander, Governor of Maharastra

ಧೀರೂಭಾಯಿ ನಂತರದ ರಿಲಾಯನ್ಸ್‌[ಬದಲಾಯಿಸಿ]

  • ನವೆಂಬರ್‌ ೨೦೦೪ರಲ್ಲಿ, ತಮ್ಮ ಸಹೋದರ ಅನಿಲ್‌ರೊಂದಿಗೆ 'ಮಾಲೀಕತ್ವದ ಪ್ರಕರಣ'ಗಳ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿರುವುದನ್ನು ಮುಖೇಶ್‌ ಅಂಬಾನಿ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದರು. 'ಭಿನ್ನಾಭಿಪ್ರಾಯಗಳು ಖಾಸಗಿ ವ್ಯಾಪ್ತಿಯಲ್ಲಿವೆ'ಯೆಂದೂ ಸಹ ತಿಳಿಸಿದರು. ಇದು ಸಂಸ್ಥೆಯ ಚಟುವಟಿಕೆಗಳ ಮೇಲೆ ಯಾವುದೇ ರೀತಿಯ ಪ್ರಭಾವ ಬೀರದು ಎಂದು ಅಭಿಪ್ರಾಯಪಟ್ಟು, ಅತ್ಯಂತ ಪ್ರಬಲ ಸಂಸ್ಥೆಗಳಲ್ಲಿ ರಿಲಾಯನ್ಸ್‌ ಕೂಡ ಒಂದು ಎಂದೂ ಹೇಳಿದರು.
  • ಭಾರತೀಯ ಆರ್ಥಿಕ ವ್ಯವಸ್ಥೆಯಲ್ಲಿ ರಿಲಾಯನ್ಸ್‌ ಇಂಡಸ್ಟ್ರೀಸ್‌ನ ಪ್ರಾಮುಖ್ಯತೆಯನ್ನು ಪರಿಗಣಿಸಿದರೆ, ಈ ಪ್ರಕರಣಕ್ಕೆ ಮಾಧ್ಯಮದಲ್ಲಿ ವಿಸ್ತಾರವಾದ ಪ್ರಚಾರ ದೊರಕಿತು.[೧೪]
  • ಅಂಬಾನಿ ಕುಟುಂಬದ ಅಪ್ತ ಸ್ನೇಹಿತರಾದ, ICICI Bank[೧೫]ನ ವ್ಯವಸ್ಥಾಪಕ ನಿರ್ದೇಶಕರಾದ ಕುಂದಾಪುರ ವಾಮನ ಕಾಮತ್‌ ಮಾಧ್ಯಮದಲ್ಲಿ ಗೋಚರಿಸಿಕೊಂಡು, ಪ್ರಕರಣವನ್ನು ಇತ್ಯರ್ಥಗೊಳಿಸಲು ನೆರವಾದರು.
  • ಈ ಪ್ರಕರಣವನ್ನು ಬಗೆಹರಿಸುವ ಜವಾಬ್ದಾರಿಯನ್ನು ಸಹೋದರರು ತಮ್ಮ ತಾಯಿ ಕೋಕಿಲಾಬೆನ್‌ ಅಂಬಾನಿಯವರಿಗೆ ವಹಿಸಿದರು. 2005ರ ಜೂನ್‌ 18ರಂದು ಕೋಕಿಲಾಬೆನ್‌ ಅಂಬಾನಿಯವರು ಅಧಿಕೃತ ಪತ್ರಿಕಾ ಪ್ರಕಟಣೆಯ ಮೂಲಕ ಇತ್ಯರ್ಥವನ್ನು ಘೋಷಿಸಿದರು.

With the blessings of Srinathji, I have today amicably resolved the issues between my two sons, Mukesh and Anil, keeping in mind the proud legacy of my husband, Dhirubhai Ambani.

I am confident that both Mukesh and Anil, will resolutely uphold the values of their father and work towards protecting and enhancing value for over three million shareholders of the Reliance Group, which has been the foundational principle on which my husband built India's largest private sector enterprise.

Mukesh will have the responsibility for Reliance Industries and IPCL while Anil will have responsibility for Reliance Infocomm, Reliance Energy and Reliance Capital.

My husband's foresight and vision and the values he stood for combined with my blessings will guide them to scale new heights.[೧೬].

— Kokilaben Ambani

  • ರಿಲಾಯನ್ಸ್‌ ಸಾಮ್ರಾಜ್ಯವನ್ನು ಅಂಬಾನಿ ಸೋದರರ ನಡುವೆ ಇಬ್ಭಾಗಿಸಲಾಯಿತು. ಇದರಲ್ಲಿ ಮುಖೇಶ್‌ ಅಂಬಾನಿ ಅವರಿಗೆ RIL ಮತ್ತು IPCL ಹಾಗೂ ಅವರ ತಮ್ಮ ಅನಿಲ್‌ ಅಂಬಾನಿಯವರಿಗೆ ರಿಲಾಯನ್ಸ್‌ ಕ್ಯಾಪಿಟಲ್‌, ರಿಲಾಯನ್ಸ್‌ ಎನರ್ಜಿ ಮತ್ತು ರಿಲಾಯನ್ಸ್‌ ಇನ್ಫೊಕಾಮ್‌ ದಕ್ಕಿದವು. ಮುಖೇಶ್‌ ಅಂಬಾನಿ ನಿರ್ವಹಿಸುವ ಸಂಸ್ಥೆಯ ಹೆಸರು ರಿಲಾಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಆಗಿ, ಅನಿಲ್‌ರ ಸಂಸ್ಥೆಯ ಹೆಸರು ಅನಿಲ್‌ ಧೀರೂಬಾಯಿ ಅಂಬಾನಿ ಗ್ರೂಪ್‌ (ADAG) ಆಯಿತು.

ಚಲನಚಿತ್ರ[ಬದಲಾಯಿಸಿ]

  • ಧೀರೂಭಾಯಿ ಅಂಬಾನಿಯವರ ಜೀವನದಿಂದ ಪ್ರೇರಿತವಾಯಿತೆಂಬ ಚಲನಚಿತ್ರವೊಂದು ೨೦೦೭ರ ಜನವರಿ ೧೨ರಂದು ಬಿಡುಗಡೆಯಾಯಿತು. ಗುರು (2007) ಮಣಿ ರತ್ನಮ್‌ ನಿರ್ದೇಶಿಸಿದ, ರಾಜೀವ್‌ ಮೆನನ್‌ರವರ ಚಲನಚಿತ್ರ-ಛಾಯಾಗ್ರಹಣ ಮತ್ತು ಎ. ಆರ್‌. ರಹಮಾನ್‌ರವರ ಸಂಗೀತವನ್ನು ಒಳಗೊಂಡ ಹಿಂದಿ ಚಲನಚಿತ್ರವಾಗಿತ್ತು.
  • ಕಾಲ್ಪನಿಕ ಶಕ್ತಿ ಗ್ರೂಪ್‌ ಆಫ್‌ ಇಂಡಸ್ಟ್ರೀಸ್‌ ಎಂಬ ಸಂಸ್ಥೆಯ ಸ್ಥಾಪನೆಯ ಮೂಲಕ ಭಾರತೀಯ ಉದ್ಯಮಲೋಕದಲ್ಲಿ ತನ್ನ ಛಾಪು ಹಾಕಲು ಒಬ್ಬ ಮನುಷ್ಯನ ಹೋರಾಟದ ಬಗೆಗಿನ ಕಥಾವಸ್ತುವನ್ನು ಈ ಚಲನಚಿತ್ರವು ಹೊಂದಿತ್ತು. ಈ ಚಲನಚಿತ್ರದಲ್ಲಿ ಅಭಿಷೇಕ್‌ ಬಚ್ಚನ್‌, ಮಿಥುನ್‌ ಚಕ್ರವರ್ತಿ, ಐಶ್ವರ್ಯಾ ರೈ, ಮಾಧವನ್‌ ಮತ್ತು ವಿದ್ಯಾ ಬಾಲನ್‌ ನಟಿಸಿದ್ದಾರೆ.
  • ಈ ಚಲನಚಿತ್ರದಲ್ಲಿ, ಧೀರೂಭಾಯಿ ಅಂಬಾನಿಯವರ ನಿಜ ಜೀವನವನ್ನು ಆಧರಿಸಿದ 'ಗುರುಕಾಂತ್‌ ದೇಸಾಯಿ' ಪಾತ್ರವನ್ನು ಅಭಿಷೇಕ್‌ ಬಚ್ಚನ್‌ ನಿರ್ವಹಿಸಿದರು. ನೈಜ ಜೀವನದ ರಾಮ್‌ನಾಥ್ ಗೊಯೆಂಕಾರವರನ್ನು ಹೋಲುವಂತಹ ಮಾಣಿಕ್‌ದಾ ಪಾತ್ರವನ್ನು ಮಿಥುನ್‌ ಚಕ್ರವರ್ತಿ ನಿರ್ವಹಿಸಿದರು.
  • ಇಪ್ಪತ್ತು ವರ್ಷಗಳ ಹಿಂದೆ ಸಂಭವಿಸಿದ ಭಾರತದ ಅತ್ಯಂತ ಘೋರವಾದ ಸಾಂಸ್ಥಿಕ ಸಮರದಲ್ಲಿ ರಿಲಾಯನ್ಸ್‌ ಸಂಸ್ಥೆಯ ವಿರುದ್ಧದ ಟೀಕೆಯಲ್ಲಿ ಮುಂಚೂಣಿಯಾಗಿದ್ದ ಎಸ್‌ ಗುರುಮೂರ್ತಿಯವರ ಪಾತ್ರವನ್ನು ಮಾಧವನ್‌ ನಿರ್ವಹಿಸಿದರು.

ಗುರುಕಾಂತ್‌ ದೇಸಾಯಿಯ ಪಾತ್ರದ ಮೂಲಕ ಧೀರೂಭಾಯಿ ಅಂಬಾನಿಯವರ ಸಾಮರ್ಥ್ಯವನ್ನೂ ಸಹ ನಿರೂಪಿಸುತ್ತದೆ. ಮೂಲ ಹೆಸರು 'ಧೀರೂಭಾಯಿ'ಯಂತಿರುವ 'ಗುರುಭಾಯಿ' ಹೆಸರನ್ನು ಅಭಿಷೇಕ್‌ ಬಚ್ಚನ್‌ರಿಗೆ ನೀಡಲಾಗಿತ್ತು.

ಪ್ರಶಸ್ತಿಗಳು ಮತ್ತು ಮಾನ್ಯತೆಗಳು[ಬದಲಾಯಿಸಿ]

ಅತ್ಯಂತ ಮಹಾನ್‌ ಬಂಡವಾಳ ಹೂಡಿಕೆದಾರ' ಎಂದು ಆಯ್ಕೆಯಾದರು. ಭಾರತದ ನೈಜ ಪುತ್ರ.

ಗಮನಾರ್ಹ ಹೇಳಿಕೆಗಳು[ಬದಲಾಯಿಸಿ]

ಆರಂಭದಿಂದಲೂ ಧೀರೂಭಾಯಿಯವರ ಬಗ್ಗೆ ಬಹಳ ಗೌರವವಿತ್ತು. ಪೆಟ್ರೊರಾಸಾಯನಿಕ ಉದ್ಯಮದಲ್ಲಿ ಅವರು ಕಂಡ ಯಶಸ್ಸು ಮತ್ತು ಬಡತನದಿಂದ ಸಿರಿತನಕ್ಕೆ ಮುನ್ನಡೆದ ಅವರ ದಂತಕಥೆಯು ಭಾರತೀಯರ ಮನದಲ್ಲಿ ಒಬ್ಬ ಅದ್ವಿತೀಯ ವ್ಯಕ್ತಿಯನ್ನಾಗಿ ಮಾಡಿತು. ಉತ್ತಮ ಉದ್ದಿಮೆಯ ಉತ್ತಮ ಮುಂದಾಳಾಗಿ, ಅವರು ಒಬ್ಬ ಪ್ರೇರಕರೂ ಆಗಿದ್ದರು. ಅವರು ಸಾರ್ವಜನಿಕ ಭಾಷಣಗಳನ್ನು ನೀಡಿದ್ದು ವಿರಳ.

ಗ್ರಂಥವಿಜ್ಞಾನ[ಬದಲಾಯಿಸಿ]

ಅನಧಿಕೃತ ಜೀವನಚರಿತ್ರೆ[ಬದಲಾಯಿಸಿ]

ಹಲವು ವರ್ಷಗಳ ಕಾಲ ಫಾರ್‌ ಈಸ್ಟರ್ನ್‌ ಎಕನಾಮಿಕ್‌ ರಿವ್ಯೂ ದ ದಿಲ್ಲಿ ಕಾರ್ಯಾಲಯದ ಮುಖ್ಯಸ್ಥರಾಗಿದ್ದ ಹಮಿಷ್‌ ಮೆಕ್ಟೊನಾಲ್ಡ್‌, 'ದಿ ಪಾಲಿಯೆಸ್ಟರ್‌ ಪ್ರಿನ್ಸ್‌ ' ಎಂಬ ಧೀರೂಭಾಯಿ ಅಂಬಾನಿಯವರ ಬಗೆಗಿನ ಪರವಾನಿಗೆ ರಹಿತ ಜೀವನಚರಿತ್ರೆ ೧೯೯೮ರಲ್ಲಿ ಪ್ರಕಟಿಸಿದರು. ಇದರಲ್ಲಿ ಅವರ ಗಳಿಕೆ-ನ್ಯೂನತೆಗಳೆರಡನ್ನೂ ಉಲ್ಲೇಖಿಸಲಾದವು. ಆದರೆ, ಭಾರತದಲ್ಲಿ ಈ ಗ್ರಂಥವನ್ನು ಪ್ರಕಟಿಸಿದಲ್ಲಿ ಅಂಬಾನಿ ಕುಟುಂಬವು ಕಾನೂನಿನಡಿ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿತು.[೧೮]

ಆಕರಗಳು ಮತ್ತು ಟಿಪ್ಪಣಿಗಳು[ಬದಲಾಯಿಸಿ]

  1. ಬೀನಾ ಉದೇಶಿಯವರ 'ಇಂಪ್ರಿಂಟ್ಸ್‌ ಆಫ್‌ ಎ ಡೆಮಿಗಾಡ್‌, ಧೀರೂಭಾಯಿ ಅಂಬಾನಿ'
    • ಫ್ರೀ ಪ್ರೆಸ್‌ ಜರ್ನಲ್‌, ಜುಲೈ ೨೪, ೨೦೦೨
  2. http://www.dhirubhai.net/dhapp/VirtualPageView.jsp?page_id=322 ಧೀರೂಭಾಯಿ ಅಂಬಾನಿ - ದಿ ಮ್ಯಾನ್‌
  3. 2003/521/ 521% 20paranjoy% 20 guha%20thakurta.htm#top ಪರಂಜಯ್‌ ಗುಹಾ ಠಾಕೂರ್ತಾ ದಿ ಟೂ ಫೇಸಸ್‌ ಆಫ್‌ ಧೀರೂಭಾಯಿ ಅಂಬಾನಿ
  4. http://www.atimes.com/atimes/south_asia/DG೦೯Df೦೧.html[ಶಾಶ್ವತವಾಗಿ ಮಡಿದ ಕೊಂಡಿ]
  5. ಇಂಡಿಯನ್‌ ಲೆಜೆಂಡ್ಸ್‌, ಧೀರೂಭಾಯಿ ಅಂಬಾನಿ. ಸಂದರ್ಶಿತವಾದದ್ದು: ಅಕ್ಟೋಬರ್‌, 28. 2006ರಂದು
  6. ಎ ಷಾರ್ಟ್‌ ಬಯೊಗ್ರಫಿ ಆಫ್‌ ಧೀರೂಭಾಯಿ ಅಂಬಾನಿ ಆನ್‌ ರಿಲಾಯನ್ಸ್‌ ಕಮ್ಯೂನಿಕೇಷನ್ಸ್‌ ಲಿಮಿಟೆಡ್‌ (PDF ಕಡತ) http://www.reliance‌communications.co.in/Communications/Aboutus/pdf/ShortBiography.pdf Archived 2007-10-31 ವೇಬ್ಯಾಕ್ ಮೆಷಿನ್ ನಲ್ಲಿ.
  7. ಪರಂಜಯ್‌ ಗುಹ ಠಾಕೂರ್ತಾರವರ ದಿ ಟೂ ಫೇಸಸ್‌ ಆಫ್‌ ಧೀರೂಭಾಯಿ ಅಂಬಾನಿ
  8. ದಿ ಗ್ರೇಟ್‌ ಇಂಡಿಯನ್‌ ಸ್ಕ್ಯಾಮ್‌, ಸ್ಟೋರಿ ಆಫ್‌ ದಿ ಮಿಸ್ಸಿಂಗ್‌ ರುಪೀಸ್‌೪೦೦೦ ಕರೋಡ್‌ (S.K. ಬರುವಾ ಅಂಡ್‌ J.S. ವರ್ಮಾ) (ISBN ೮೧-೭೦೯೪ -೧೨೮-೮) P ೧೬ & ೧೭
  9. ಈ ಹೋರಟಗಾರನಿಗೆ ಜೀವನವೇ ಒಂದು ದೊಡ್ಡ ಸಮರವಾಗಿತ್ತು - Rediff.com ನಲ್ಲಿ ಮಾನಸ್‌ ಚಕ್ರವರ್ತಿ [೧] 'ಧೀರೂಭಾಯಿ ಭಾರತವನ್ನು ಬಡತನಕ್ಕೆ ಮಾರಿ, ತಮ್ಮ ಜೇಬುಗಳನ್ನು ಸದಾ ತುಂಬಿಸಿಡಲು ಈ ರೀತಿಯ ಅಭ್ಯಾಸಗಳು' ಎಂದು ಅನಂತರ ಹೇಳಲಾಯಿತು.
  10. BBC NEWS | ವರ್ಲ್ಡ್‌ | ಸೌತ್‌ ಏಷ್ಯಾ | ಟಾಪ್‌ ಇಂಡಿಯನ್‌ ಬ್ಯುಸಿನೆಸ್‌ಮನ್‌ ಡೈಸ್‌
  11. "ರಿಮೆಂಬರಿಂಗ್‌ ದಿ ಪ್ರಿನ್ಸ್‌ ಆಫ್‌ ಪಾಲಿಯೆಸ್ಟರ್". Archived from the original on 2008-11-23. Retrieved 2009-11-13.
  12. BBC News UK
  13. Politicians, celebrities pay homage to Ambani - Rediff News
  14. ಅನಿಲ್‌ರೊಂದಿಗೆ ಭಿನ್ನಾಭಿಪ್ರಾಯಗಳಿರುವ ಬಗ್ಗೆ ಮುಖೇಶ್‌ ಅಂಬಾನಿ ಒಪ್ಪಿಗೆ -
  15. ರಿಲಾಯನ್ಸ್‌ ಬೆಳವಣಿಗೆಗಳಲ್ಲಿ ಪ್ರಮುಖ ಪಾತ್ರ: ಕೆ.ವಿ.ಕಾಮತ್
  16. Ambanis resolve ownership battle - Rediff News
  17. ವಾರ್ಟನ್‌ ಶಾಲೆಯ ಡೀನ್ಸ್‌ ಪದಕವನ್ನು ಗಳಿಸಲು ಧೀರೂಭಾಯಿ ಅಂಬಾನಿ ಮೊದಲ ಭಾರತೀಯರು. [www.rediff.com ರೆಡಿಫ್‌ ಆನ್‌ ದಿ ನೆಟ್‌] http://www.rediff.com/business/1998/jun/16amba1.htm- ಸಂದರ್ಶಿತ: ಜನವರಿ ೨೧, ೨೦೦೭
  18. "ಅಂಬಾನಿ: ಎ ಟೈಕೂನ್‌ ಫಾರ್‌ ಆಲ್‌ ಸೀಸನ್ಸ್‌". Archived from the original on 2009-07-15. Retrieved 2009-11-13.

ಹೊರಗಿನ ಕೊಂಡಿಗಳು[ಬದಲಾಯಿಸಿ]