ವೀರ ಚಕ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವೀರ ಚಕ್ರವು ಭಾರತದ ಶೌರ್ಯ ಪುರಸ್ಕಾರವಾಗಿದ್ದು ಯುದ್ಧಭೂಮಿಯಲ್ಲಿ ಶೌರ್ಯ ಸಾಹಸಗಳನ್ನು ಪ್ರದರ್ಶಿಸಿದವರಿಗೆ ಪ್ರದಾನ ಮಾಡಲಾಗುವುದು. ಸೇನಾ ಪುರಸ್ಕಾರಗಳ ಪಟ್ಟಿಯಲ್ಲಿ ಇದರ ಆದ್ಯತೆ ಪರಮ ವೀರ ಚಕ್ರ ಮತ್ತು ಮಹಾ ವೀರ ಚಕ್ರಗಳ ನಂತರ ಮೂರನೆಯದ್ದಾಗಿದೆ.

ಈ ಪುರಸ್ಕಾರದ ಜೊತೆಗೆ ಧನಸಹಾಯವೂ ಸಂದಾಯವಾಗುತ್ತದೆ. ಇದು ವಿವಾದಾತ್ಮಕವಾಗಿದ್ದು ಫೆಬ್ರವರಿ ೧ ೧೯೯೯ರಂದು ಭಾರತ ಸರ್ಕಾರ ಈ ಪುರಸ್ಕಾರದ ವಿಜೇತರಿಗೆ ರೂ.೮೫೦ರ ಮಾಸಿಕ ಮಾಸಾಶನ ಘೋಷಿಸಿತು. ಬಹಳಷ್ಟು ರಾಜ್ಯಗಳು ತಮ್ಮದೇ ಮಾಸಾಶನಗಳನ್ನು ಕೊಡುತ್ತವೆ.

ಸ್ಥಾಪನೆ: ಭಾರತದ ರಾಷ್ಟ್ರಪತಿಗಳಿಂದ ೨೬ ಜನವರಿ ೧೯೫೦ ರಂದು, ಜಾರಿಗೆ ಬಂದದ್ದು ೧೫ ಆಗಸ್ಟ್ ೧೯೪೭ರಂದು.

ಮುಂಬದಿ: ಮೂರೂವರೆ ಸೆಂ.ಮಿ. ದುಂಡನೆಯ ಬೆಳ್ಳಿಯ ಪದಕ. ಐದು ಕೋನಗಳುಳ್ಳ ನಕ್ಷತ್ರ, ಇದರ ಮಧ್ಯದಲ್ಲಿ ಚಕ್ರ, ಇದರ ಮೇಲೆ ಭಾರತದ ಲಾಂಛನ. ತುದಿಯಲ್ಲಿ ಪದಕದ ಹೆಸರು.

ಹಿಂಬದಿ: ಎರಡು ಆಖ್ಯಾನಗಳು ಕಮಲದ ಹೂವುಗಳು ಇವುಗಳ ಮಧ್ಯೆ. ಇದರ ಮೇಲೆ ವೀರ ಚಕ್ರ ಎಂದು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ.

ರಿಬ್ಬನ್: ೩೨ ಮಿ.ಮಿ.

ಹೊರಗಿನ ಸಂಪರ್ಕಗಳು [ಬದಲಾಯಿಸಿ]

"http://kn.wikipedia.org/w/index.php?title=ವೀರ_ಚಕ್ರ&oldid=31666" ಇಂದ ಪಡೆಯಲ್ಪಟ್ಟಿದೆ