ಭಾರತ ರತ್ನ
Wikipedia ಇಂದ
ಭಾರತ ರತ್ನ ಭಾರತದ ನಾಗರಿಕರಿಗೆ ದೊರೆಯಬಹುದಾದ ಅತ್ಯುಚ್ಚ ಪ್ರಶಸ್ತಿ. ಭಾರತ ರತ್ನ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಾರ್ವಜನಿಕ ಸೇವೆ ಮತ್ತಿತರ ಕ್ಷೇತ್ರಗಳಲ್ಲಿ ಅತಿ ದೊಡ್ಡ ಸಾಧನೆಗಳನ್ನು ತೋರಿದ ಗಣ್ಯರಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೫೪ ರಲ್ಲಿ ಆರಂಭಿಸಲಾಯಿತು. ಆಗ ಈ ಪ್ರಶಸ್ತಿಯನ್ನು ಯಾರಿಗೂ ಮರಣಾನಂತರ ಪ್ರದಾನ ಮಾಡುವ ಉದ್ದೇಶವಿರಲಿಲ್ಲ. ಮಹಾತ್ಮ ಗಾಂಧಿಯವರಿಗೆ ಈ ಪ್ರಶಸ್ತಿ ದೊರಕದ್ದಕ್ಕೆ ಪ್ರಮುಖ ಕಾರಣ ಇದೇ ಇದ್ದೀತು. ೧೯೫೫ ರ ನಂತರ ಮರಣಾನಂತರವೂ ಈ ಪ್ರಶಸ್ತಿಯನ್ನು ಪ್ರದಾನ ಮಾಡಲು ಅವಕಾಶ ಸೃಷ್ಟಿಯಾಯಿತು (ಇದು ವರೆಗೆ ಒಟ್ಟು ಏಳು ವ್ಯಕ್ತಿಗಳಿಗೆ ಅವರ ಮರಣಾನಂತರ ಭಾರತ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ). ಭಾರತ ರತ್ನ ಪ್ರಶಸ್ತಿಯನ್ನು ಪಡೆಯುವ ವ್ಯಕ್ತಿ ಭಾರತೀಯ ನಾಗರಿಕರಾಗಿರಬೇಕೆಂಬ ನಿಯಮವೇನಿಲ್ಲದಿದ್ದರೂ ಸಾಮಾನ್ಯವಾಗಿ ಇದನ್ನು ಪಾಲಿಸಲಾಗುತ್ತದೆ. ಭಾರತೀಯ ನಾಗರಿಕರಲ್ಲದಿದ್ದರೂ ಈ ಪ್ರಶಸ್ತಿಯನ್ನು ಪಡೆದ ಇಬ್ಬರೇ ವ್ಯಕ್ತಿಗಳೆಂದರೆ ನೆಲ್ಸನ್ ಮಂಡೇಲಾ (೧೯೯೦ ರಲ್ಲಿ) ಮತ್ತು ಖಾನ್ ಅಬ್ದುಲ್ ಗಫಾರ್ ಖಾನ್ (೧೯೮೮ ರಲ್ಲಿ).
ಪ್ರಶಸ್ತಿ ಪದಕದ ಮೊದಲ ವಿನ್ಯಾಸದಂತೆ ವೃತ್ತಾಕಾರದ ಚಿನ್ನದ ಪದಕದ ಮೇಲೆ ಸೂರ್ಯನ ಚಿತ್ರ ಮತ್ತು ದೇವನಾಗರಿ ಲಿಪಿಯಲ್ಲಿ "ಭಾರತ ರತ್ನ", ಮತ್ತು ಹಿಂಭಾಗದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ ಮತ್ತು "ಸತ್ಯಮೇವ ಜಯತೇ" ಎಂದು ಬರೆಯಬೇಕೆಂದಿದ್ದಿತು. ಈ ವಿನ್ಯಾಸದ ಯಾವುದೇ ಪದಕವನ್ನು ಉಪಯೋಗಿಸಲಾಗಿಲ್ಲ. ಮುಂದಿನ ವರ್ಷವೇ ಪದಕದ ವಿನ್ಯಾಸವನ್ನು ಈಗಿನ ವಿನ್ಯಾಸಕ್ಕೆ ಬದಲಾಯಿಸಲಾಯಿತು.
[ಬದಲಾಯಿಸಿ] ಭಾರತ ರತ್ನ ಪ್ರಶಸ್ತಿಯನ್ನು ಪಡೆದವರ ಪಟ್ಟಿ
| ಭಾರತ ಪದಕಗಳು ಮತ್ತು ಪುರಸ್ಕಾರಗಳು |
| ಶೌರ್ಯ ಪರಮ ವೀರ ಚಕ್ರ |
| ಅಸಾಧಾರಣ ಸೇವೆ ಸರ್ವೋತ್ತಮ ಯುದ್ಧ ಸೇವಾ ಪದಕ |
| ನಾಗರಿಕ ರಾಷ್ಟ್ರೀಯ ಸೇವೆ |
| ಕ್ರಮಾಂಕ | ಹೆಸರು | ಜನನ - ನಿಧನ | ಪುರಸ್ಕೃತ ವರ್ಷ | ಬಗ್ಗೆ | ರಾಜ್ಯ / ರಾಷ್ಟ್ರ | |
|---|---|---|---|---|---|---|
| ೧. | ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ | ೧೮೮೮-೧೯೭೫ | ೧೯೫೪ | ಭಾರತದ ದ್ವಿತೀಯ ರಾಷ್ಟ್ರಪತಿ,ಭಾರತದ ಪ್ರಥಮ ಉಪರಾಷ್ಟ್ರಪತಿ, ತತ್ವಜ್ನಾನಿ. | ತಮಿಳು ನಾಡು | |
| ೨. | ಚಕ್ರವರ್ತಿ ರಾಜಗೋಪಾಲಾಚಾರಿ | ೧೮೭೮ - ೧೯೭೨ | ೧೯೫೪ | ಕೊನೆಯ ಗವರ್ನರ್ ಜನರಲ್,ಸ್ವಾತಂತ್ರ್ಯ ಸೇನಾನಿ | ತಮಿಳು ನಾಡು | |
| ೩. | ಡಾ. ಚಂದ್ರಶೇಖರ ವೆಂಕಟ ರಾಮನ್ | 1888–1970 | 1954 | ಭೌತ ವಿಜ್ಞಾನಿ,ನೋಬೆಲ್ ಪುರಸ್ಕೃತ | ತಮಿಳು ನಾಡು | |
| ೪. | ಡಾ. ಭಗವಾನ್ ದಾಸ್ | 1869–1958 | 1955 | ತತ್ವಜ್ಞಾನಿ,ಸ್ವಾತಂತ್ರ್ಯ ಸೇನಾನಿ | ಉತ್ತರ ಪ್ರದೇಶ | |
| ೫. | ಡಾ. ಮೋಕ್ಷಗುಂಡಂ ವಿಶ್ವೇಶ್ವರಾಯ | 1861–1962 | 1955 | ಅಭಿಯಂತರು (ಇಂಜಿನೀಯರ್) | ಕರ್ನಾಟಕ | |
| ೬. | ಜವಾಹರ್‌ಲಾಲ್ ನೆಹರು | 1889–1964 | 1955 | ಭಾರತದ ಪ್ರಥಮ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ,ಲೇಖಕ | ಉತ್ತರ ಪ್ರದೇಶ | |
| ೭. | ಗೋವಿಂದ ವಲ್ಲಭ ಪಂತ್ | 1887–1961 | 1957 | ಸ್ವಾತಂತ್ರ್ಯ ಸೇನಾನಿ,ಗೃಹ ಸಚಿವ | ಉತ್ತರ ಪ್ರದೇಶ | |
| ೮. | ಡಾ. ಧೊಂಡೊ ಕೇಶವ ಕರ್ವೆ | 1858–1962 | 1958 | ಶಿಕ್ಷಣ ತಜ್ಞ,ಸಮಾಜ ಸೇವಕ | ಮಹಾರಾಷ್ಟ್ರ | |
| ೯. | ಡಾ. ಬಿಧನ್ ಚಂದ್ರ ರಾಯ್ | 1882–1962 | 1961 | ವೈದ್ಯ,ರಾಜಕೀಯ ನೇತಾರ | ಪಶ್ಚಿಮ ಬಂಗಾಳ | |
| ೧೦. | ಪುರುಷೋತ್ತಮ್ ದಾಸ್ ತಂಡನ್ | 1882–1962 | 1961 | ಸ್ವಾತಂತ್ರ್ಯ ಸೇನಾನಿ,ಶಿಕ್ಷಣ ತಜ್ಞ | ಉತ್ತರ ಪ್ರದೇಶ | |
| ೧೧. | ಡಾ. ಬಾಬು ರಜೇಂದ್ರ ಪ್ರಸಾದ್ | 1884–1963 | 1962 | ಭಾರತ ಸರ್ಕಾರದ ಪ್ರಥಮ ರಾಷ್ಟ್ರಪತಿ, ಸ್ವಾತಂತ್ರ್ಯ ಸೇನಾನಿ, ಕಾನೂನು ತಜ್ಞ | ಬಿಹಾರ | |
| ೧೨. | ಡಾ. ಜಾಕಿರ್ ಹುಸೇನ್ | 1897–1969 | 1963 | ಭಾರತದ ಮಾಜಿ ರಾಷ್ಟ್ರಪತಿ,ವಿದ್ವಾಂಸ | ಆಂಧ್ರ ಪ್ರದೇಶ | |
| ೧೩. | ಡಾ. ಪಾಂಡುರಂಗ ವಾಮನ ಕಾಣೆ | 1880–1972 | 1963 | Indologist,ಸಂಸ್ಕೃತ ವಿದ್ವಾಂಸ | ಮಹಾರಾಷ್ಟ್ರ | |
| ೧೪. | ಲಾಲ್ ಬಹಾದುರ್ ಶಾಸ್ತ್ರಿ | 1904–1966 | 1966 | (ಮರಣೋತ್ತರ ಪ್ರಶಸ್ತಿ)ಭಾರತದ ದ್ವಿತೀಯ ಪ್ರಧಾನಿ,ಸ್ವಾತಂತ್ರ್ಯ ಸೇನಾನಿ | ಉತ್ತರ ಪ್ರದೇಶ | |
| ೧೫. | ಇಂದಿರಾ ಗಾಂಧಿ | 1917–1984 | 1971 | ಭಾರತದ ಮಾಜಿ ಪ್ರಧಾನಿ | ಉತ್ತರ ಪ್ರದೇಶ | |
| ೧೬. | ವಿ ವಿ ಗಿರಿ | 1894–1980 | 1975 | ಭಾರತದ ಮಾಜಿ ರಾಷ್ಟ್ರಪತಿ, ಕಾರ್ಮಿಕ ನಾಯಕ | ಆಂಧ್ರ ಪ್ರದೇಶ | |
| ೧೭. | ಕುಮಾರಸ್ವಾಮಿ ಕಾಮರಾಜ್ | 1903–1975 | 1976 | (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ. | ತಮಿಳು ನಾಡು | |
| ೧೮. | ಆಗ್ನೆಸ್ ಗೊನ್ಚ ಬೊಹಾಚ್ಯು (ಮದರ್ ತೆರೆಸಾ) | 1910–1997 | 1980 | ಮಾನವತಾವಾದಿ,ಸಾಮಾಜಿಕ ಕಾರ್ಯಕರ್ತೆ, ನೋಬೆಲ್ ಪುರಸ್ಕೃತೆ (ಶಾಂತಿಗಾಗಿ, 1979). | ಪಶ್ಚಿಮ ಬಂಗಾಳ | |
| ೧೯. | ವಿನೋಬಾ ಭಾವೆ | 1895–1982 | 1983 | (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ,ಸಮಾಜ ಸುಧಾರಕ | ಮಹಾರಾಷ್ಟ್ರ | |
| ೨೦. | ಖಾನ್ ಅಬ್ದುಲ್ ಗಫಾರ್ ಖಾನ್ | 1890–1988 | 1987 | ಸ್ವಾತಂತ್ರ ಸೇನಾನಿ,ಭಾರತ ರತ್ನ ಪಡೆದ ಪ್ರಥಮ ಹೊರ ದೇಶದ ಪ್ರಜೆ (ಆದರೂ ವಿದೇಶಿ ಅಲ್ಲ!) | ಪಾಕಿಸ್ತಾನ್ | |
| ೨೧. | ಡಾ. ಎಮ್. ಜಿ. ರಾಮಚಂದ್ರನ್ | 1917–1987 | 1988 | (ಮರಣೋತ್ತರ ಪ್ರಶಸ್ತಿ),ತಮಿಳು ನಾಡಿನ ಮುಖ್ಯಮಂತ್ರಿ,ಚಲನಚಿತ್ರ ನಟ | ತಮಿಳು ನಾಡು | |
| ೨೨. | ಡಾ. ಬಿ.ಆರ್.ಅಂಬೇಡ್ಕರ್ | 1891–1956 | 1990 | (ಮರಣೋರತ್ತರ ಪ್ರಶಸ್ತಿ),ಭಾರತದ ಸಂವಿಧಾನಶಿಲ್ಪಿ | ಮಹಾರಾಷ್ಟ್ರ | |
| ೨೩. | ಡಾ. ನೆಲ್ಸನ್ ಮಂಡೇಲಾ | 1918- | 1990 | ವರ್ಣಭೇದ ನೀತಿ ವಿರುದ್ಧ ಹೋರಾಟ,ಭಾರತ ರತ್ನ ಪಡೆದ ಪ್ರಥಮ ವಿದೇಶಿ ಪ್ರಜೆ. | ದಕ್ಷಿಣ ಆಫ್ರಿಕ | |
| ೨೪. | ರಾಜೀವ್ ಗಾಂಧಿ | 1944–1991 | 1991 | (ಮರಣೋತ್ತರ ಪ್ರಶಸ್ತಿ),ಭಾರತದ ಮಾಜಿ ಪ್ರಧಾನಿ | ನವ ದೆಹಲಿ | |
| ೨೫. | ಸರ್ದಾರ್ ವಲ್ಲಭಭಾಯ್ ಪಟೇಲ್ | 1875–1950 | 1991 | (ಮರಣೋತ್ತರ ಪ್ರಶಸ್ತಿ)ಸ್ವಾತಂತ್ರ್ಯ ಸೇನಾನಿ, ಭಾರತ ಸರ್ಕಾರದ ಪ್ರಥಮ ಗೃಹ ಸಚಿವ | ಗುಜರಾತ್ | |
| ೨೬. | ಮೊರಾರ್ಜಿ ದೇಸಾಯಿ | 1896–1995 | 1991 | ಭಾರತದ ಮಾಜಿ ಪ್ರಧಾನಿ, ಸ್ವಾತಂತ್ರ್ಯ ಸೇನಾನಿ | ಗುಜರಾತ್ | |
| ೨೭. | ಮೌಲಾನಾ ಅಬ್ದುಲ್ ಕಲಮ್ ಆಜಾದ್ | 1888–1958 | 1992 | (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ | ಪಶ್ಚಿಮ ಬಂಗಾಳ | |
| ೨೮. | ಜೆ.ಆರ್.ಡಿ.ಟಾಟಾ | 1904–1993 | 1992 | ಭಾರತೀಯ ಕೈಗಾರಿಕೆ ಪಿತಾಮಹ,ಸಮಾಜಮುಖಿ | ಮಹಾರಾಷ್ಟ್ರ | |
| ೨೯. | ಸತ್ಯಜಿತ್ ರೇ | 1922–1992 | 1992 | ಭಾರತೀಯ ಚಲನಚಿತ್ರ ನಿರ್ದೇಶಕ | ಪಶ್ಚಿಮ ಬಂಗಾಳ | |
| ೩೦. | ಎಪಿಜೆ ಅಬ್ದುಲ್ ಕಲಮ್ | 1931- | 1997 | ಭಾರತದ ರಾಷ್ಟ್ರಪತಿ,ವಿಜ್ನಾನಿ | ತಮಿಳು ನಾಡು | |
| ೩೧. | ಗುಲ್ಜಾರಿಲಾಲ್ ನಂದಾ | 1898–1998 | 1997 | ಸ್ವಾತಂತ್ರ್ಯ ಸೇನಾನಿ,ಭಾರತದ ಪ್ರಧಾನಿ. | ಪಂಜಾಬ | |
| ೩೨. | ಅರುಣಾ ಅಸಫ್ ಅಲಿ | 1908–1996 | 1997 | (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ. | ಪಶ್ಚಿಮ ಬಂಗಾಳ | |
| ೩೩. | ಎಮ್ ಎಸ್ ಸುಬ್ಬುಲಕ್ಷ್ಮಿ | 1916–2004 | 1998 | ಶಾಸ್ತ್ರೀಯ ಸಂಗೀತಗಾರ್ತಿ. | ತಮಿಳು ನಾಡು | |
| ೩೪. | ಸಿ. ಸುಬ್ರಮಣ್ಯಮ್ | 1910–2000 | 1998 | ಸ್ವಾತಂತ್ರ್ಯ ಸೇನಾನಿ, ಕೃಷಿ ಇಲಾಖೆಯ ಸಚಿವ(ಕೃಷಿ ಕ್ರಾಂತಿಯ ಹರಿಕಾರ). | ತಮಿಳು ನಾಡು | |
| ೩೫. | ಜಯಪ್ರಕಾಶ್ ನಾರಾಯಣ್ | 1902–1979 | 1998 | (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ, ನವಸಮಾಜದ ಹರಿಕಾರ. | ಉತ್ತರ ಪ್ರದೇಶ | |
| ೩೬. | ಪಂಡಿತ್ ರವಿಶಂಕರ್ | 1920- | 1999 | ಸಿತಾರ್ ವಾದಕರು. | ಉತ್ತರ ಪ್ರದೇಶ | |
| ೩೭. | ಡಾ. ಅಮರ್ತ್ಯ ಸೇನ್ | 1933- | 1999 | ನೋಬೆಲ್ ಪುರಸ್ಕೃತ (1998), ಅರ್ಥಶಾಸ್ತ್ರಜ್ಞ | ಪಶ್ಚಿಮ ಬಂಗಾಳ | |
| ೩೮. | ಗೋಪಿನಾಥ್ ಬೋರ್ಡೊಲೋಯಿ | 1890–1950 | 1999 | (ಮರಣೋತ್ತರ ಪ್ರಶಸ್ತಿ),ಸ್ವಾತಂತ್ರ್ಯ ಸೇನಾನಿ. | ಆಸ್ಸಾಮ್ | |
| ೩೯. | ಲತಾ ಮಂಗೇಶ್ಕರ್ | 1929- | 2001 | ಹಿನ್ನಲೆ ಗಾಯಕಿ. | ಮಹಾರಾಷ್ಟ್ರ | |
| ೪೦. | ಉಸ್ತಾದ್ ಬಿಸ್ಮಿಲ್ಲಾ ಖಾನ್ | 1916-2006 | 2001 | ಶೆಹನಾಯ್ ವಾದಕ. | ಉತ್ತರ ಪ್ರದೇಶ | |
| ೪೧. | ಭೀಮ್‍ಸೇನ್_ಜೋಷಿ | 1922- | 2008 | ಶಾಸ್ತ್ರೀಯ ಸಂಗೀತಗಾರ. | ಕರ್ನಾಟಕ |