ಮಾರಿಯೊ ಮಿರಾಂಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Images (9).jpg
'ಮಾರಿಯೊ ಮಿರಾಂಡ'

ಮಾರಿಯೊ ಮಿರಾಂಡ,' '(Mario de Miranda)', ರವರ ಪೂರ್ತಿ ಹೆಸರು, 'Mario JoaorlosMario Joãoarlos do Rosario de Brit denda do Rosario de Brit Miranda' (ಜ. ೧೯೨೬- ದಿಸೆಂಬರ್, ೧೧, ೨೦೧೧) ಎಂದು. 'ಮಾರಿಯೊ ಮಿರಾಂಡ,' ಅತ್ಯಂತ ಜನಪ್ರಿಯ ವ್ಯಂಗ್ಯಚಿತ್ರಕಲಾವಿದರಲ್ಲೊಬ್ಬರು. ಅವರು ರೇಖಾಚಿತ್ರಗಳನ್ನು ಬಿಡಿಸುವ ಶೈಲಿ ಅನನ್ಯ. ಅವರ ಪಳಗಿದ ಕೈನ ಕುಂಚದಲ್ಲಿ, ತಮ್ಮ ಸಂವೇದನೆಗಳನ್ನು ಅದ್ಭುತವಾಗಿ ’ಕ್ಯಾನ್ವಾಸ್ ಮೇಲೆ’ ಮೂಡಿಸಬಲ್ಲ ಸಶಕ್ತರು. ’ಆರ್. ಕೆ. ಲಕ್ಷ್ಮಣ್’ ನಂತರ, ಅಪಾರ ಪರಮ-ಪ್ರಿಯರನ್ನು ಹೊಂದಿರುವ ಕೆಲವೇ ಸುಪ್ರಸಿದ್ಧ ವ್ಯಂಗ್ಯಚಿತ್ರ ಕಲಾವಿದರಲ್ಲಿ ’ಮಾರಿಯೊ’ ಒಬ್ಬರು. ’ಮಾರಿಯೊ ಕಾರ್ಲೋಸ್ ರೊಸಾರಿಯೊ ಬ್ರಿಟೊ ಡಿ ಮಿರಾಂಡ’ಎಂಬ ಹೆಸರಿನ ಗೋವಾ ಕ್ರಿಶ್ಚಿಯನ್ ಮತದ ಅನುಯಾಯಿ, ಭಾರತವಲ್ಲದೆ ವಿಶ್ವದಲ್ಲೂ ತಮ್ಮದೇ ಆದ ’ವ್ಯಂಗ್ಯೋಕ್ತಿಗಳು’ ಅದನ್ನು ರೂಪಿಸುವ ವಿಶಿಷ್ಠ ರೀತಿಗಳಿಂದಾಗಿ ಹೆಸರುವಾಸಿಯಾಗಿದ್ದಾರೆ. ತಾಯಿತಂದೆಯವರು, ಗೋವಾ ಮೂಲದ, ಕ್ರಿಶ್ಚಿಯನ್ನರು. ಅವರು ಜನಿಸಿದ್ದು ’ದಾಮನ್’ ನಲ್ಲಿ. ಮನೆಯ ಗೋಡೆಯನ್ನೇ ’ತಮ್ಮ ಕ್ಯಾನ್ ವಾಸ್’ ಆಗಿ ರೂಪಿಸಿಕೊಂಡು ಅಭ್ಯಾಸಮಾಡಿದ ’ಮಾರಿಯೊ’ ತಮ್ಮ ತಾಯಿಯವರನ್ನು ಮೊದಲು ಆಕರ್ಷಿಸಿದರು. ತಾಯಿಯ ಹೃದಯ, ತಕ್ಷಣ ಅವರ ಪ್ರತಿಭೆಯ ಜಾಡನ್ನು ಅರಿಯಿತು. ಆಕೆ, ಬಿಳಿ-ಹಾಳೆಗಳ ಕಂತೆಯನ್ನು ತಂದು ಮಗನಿಗೆ ಕೊಟ್ಟು ಪ್ರೋತ್ಸಾಹಿಸಿದರು. ಪ್ರತಿದಿನವೂ ತಮ್ಮ ’ದಿನಚರಿ’ಯನ್ನು ಬರೆದಿಡುವ ಅಭ್ಯಾಸವನ್ನು ಬೆಳೆಸಿಕೊಂಡರು. ತಾವು ಹೊರಜಗತ್ತಿನಲ್ಲಿ ನೋಡಿದ ವಿಸ್ಮಯ ಸನ್ನಿವೇಶಗಳನ್ನು ರೇಖೆಗಳನ್ನು ಮೂಡಿಸಿ, ಅವುಗಳ ವಿವರಗಳನ್ನು ತಮ್ಮದಿನಚರಿಯಲ್ಲಿ ದಾಖಲಿಸುತ್ತಿದ್ದರು. ಆ ದಿನಚರಿಗಳು ಇಂದಿಗೂ ಲಭ್ಯ.

ಬಾಲ್ಯ ಹಾಗೂ ವಿದ್ಯಾಭ್ಯಾಸ[ಬದಲಾಯಿಸಿ]

ಚಿತ್ರ:Mm.jpg
'ಮುಂಬೈನಗರದ ಸಮಾರಂಭವೊಂದರ ಚಿತ್ರಣ'

ಪ್ರೌಢಶಾಲಾಭ್ಯಾಸ ’ಬೆಂಗಳೂರಿನ ಸೇಂಟ್ ಜೋಸೆಫ್ ಪ್ರೌಢಶಾಲೆ’ಯಲ್ಲಿ ಪಡೆದು ’ಬಿ.ಎ’.(ಇತಿಹಾಸ) ಪದವಿಯನ್ನು ’ಬೊಂಬಾಯಿನ ಸೇಂಟ್ ಝೇವಿಯರ್ ಕಾಲೇಜ್’ ನಲ್ಲಿ ಗಳಿಸಿದರು. ವಾಸ್ತುಶಿಲ್ಪ, ವ್ಯಂಗ್ಯ ಚಿತ್ರ ರಚನೆ, ಅವರ ಪ್ರಿಯ ವಿಷಯ. ಮನೆಯವರ ಆಸೆಯಂತೆ ’ಐ. ಎ. ಎಸ್.’ ಪರೀಕ್ಷೆಗೆ ಕೂಡಲು ಒತ್ತಾಯಬಂತು. ಗೆಳೆಯರು ಅವರ ಪ್ರತಿಭೆಯನ್ನು ಗುರುತಿಸಿ, ’ಪೋಸ್ಟ್ ಕಾರ್ಡ್’ ನಲ್ಲಿ ಚಿತ್ರರಚಿಸಿ ’ಗ್ರೀಟಿಂಗ್ ಕಾರ್ಡ್’ ಬರೆದುಕೊಡಲು ಅಪೇಕ್ಷಿಸಿದರು. ಈ ಬೇಡಿಕೆ ಅವರಿಗೆ ಪ್ರಿಯವಾಯಿತು. ಅಲ್ಲದೆ ಸ್ವಲ್ಪ ಹಣವೂ ಬಂತು. ಹಾಗೆ ತಮ್ಮ ಚಿತ್ರರಚನೆಯನ್ನೇ ಆಧಾರಿಸಿ ’ಕರೆಂಟ್’ ಎಂಬ ಬೊಂಬಾಯಿನ ಪತ್ರಿಕೆಗೆ ಬರೆಯಲು ಆರಂಭಿಸಿದರು. 'ಆರ್ಕಿಟೆಕ್ಚರ್' ವಿಷಯದಲ್ಲಿ ಪದವಿಪಡೆಯಲು ಮನೆಯವರ ಒತ್ತಾಯವಿತ್ತು. ಆದರೆ ಚಿತ್ರಕಲೆಯಲ್ಲೇ ತಮ್ಮನ್ನು ತೊಡಗಿಸಿಕೊಂಡು ಬೇರೆ ಎಲ್ಲಾ ಮರೆತರು. ’ಟೈಮ್ಸ್ ಆಫ್ ಇಂಡಿಯಾ’ ದಿಂದ ’ಬುಲಾವ್’ ಬಂದಾಗ, ಅವರು ತಮ್ಮ ಹೊಸ ’ವ್ಯಂಗ್ಯಚಿತ್ರಾಂಕಣ’ವನ್ನು ಶುರುಮಾಡಬೇಕಾಗಿ ಬಂತು. ಅವೇ, ’ನಿಂಬುಪಾನಿ’ ಮತ್ತು ’ಮಿಸ್ ಫೋನ್ಸೆಕ, ’the Fundacao Calouste Gulbenkian Scholarship' ಎಂಬ ಸಂಸ್ಥೆಯ ವತಿಯಿಂದ, ಅವರಿಗೆ ವಿದೇಶಕ್ಕೆ ಹೋಗಲು ಸಹಾಯವಾಯಿತು.

ಯೂರೋಪ್ ಪ್ರವಾಸ, ಅವರಿಗೆ ಹಲವು ಹೊಸ-ವಿಚಾರಗಳನ್ನು ತೆರೆದಿಟ್ಟಿತು[ಬದಲಾಯಿಸಿ]

’ಪೋರ್ಚುಗಲ್ ದೇಶ’ಕ್ಕೆ ಹೋಗಿ ಅಲ್ಲಿ ಕಲೆಯನ್ನು ಒಂದು ವರ್ಷ ಅಭ್ಯಾಸಮಾಡಿದರು. ಮುಂದೆ, ’ಇಂಗ್ಲೆಂಡ್’ ನಗರಕ್ಕೆ ಹೋಗಿ, ಸುಮಾರು ೫ ವರ್ಷಗಳ ಕಾಲವಿದ್ದು, ಅಲ್ಲಿನ ಟೆಲೆವಿಶನ್ ಮತ್ತು ಪತ್ರಿಕೆಗಳಿಗೆ ಬರೆದರು. ಜಾಹಿರಾತು ಸ್ಟುಡಿಯೊ ತೆರೆದರು. ೪ ವರ್ಷ ಈ ವಿದೇಶಪ್ರವಾಸದಲ್ಲಿ ಅವರಿಗೆ ದೊರೆತ ತರಬೇತಿ ಅನನ್ಯ. ಮರಳಿ ತಾಯಿನಾಡಿಗೆ ಆಗಮಿಸಿ, ’ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ, ವ್ಯಂಗ್ಯಚಿತ್ರ ಮಾಂತ್ರಿಕನೆಂದು ೬ ದಶಕಕ್ಕೂ ಮಿಗಿಲಾಗಿ ಮೆರೆದಿರುವ, ಆರ್. ಕೆ. ಲಕ್ಷ್ಮಣ್ ಜೊತೆಯಲ್ಲಿ, ಬರೆಯಲು ಆರಂಭಿಸಿದರು. ’ಇಲ್ಯು ಸ್ಟ್ರೇಟೆಡ್ ವೀಕ್ಲಿ’, ’ಫೆಮಿನ’, ’ಎಕನಾಮಿಕ್ಸ್ ಟೈಮ್ಸ್’ ಪತ್ರಿಕೆಗಳಲ್ಲಿ ಪ್ರಕಟಿಸುವ ಲೇಖನಗಳಿಗೆ ಪೂರಕವಾಗಿ, ಸರಿಯಾಗಿ ಹೊಂದುವ ಚಿತ್ರಗಳನ್ನು ಬರೆದು ಪ್ರಸಿದ್ಧರಾದರು. ಕೆಲವು ’ಕ್ಯಾರಿಕೇಚರ್’ ಗಳು ಅತ್ಯಂತ ದೊಡ್ಡ ಹೆಸರುಮಾಡಿದವು. ೧೯೭೪ ರಲ್ಲಿ' 'ಅಮೆರಿಕದ ವಾರ್ತಾ ಸೇವೆ'ಯವರು ಆಯೋಜಿಸಿದ ವಿದೇಶ ಪ್ರವಾಸದವತಿಯಿಂದ ಹೋಗಿ,ಅಲ್ಲಿನ ಸುಪ್ರಸಿದ್ಧ ವ್ಯಂಗ್ಯಚಿತ್ರಕಾರ, ’ಚಾರ್ಲ್ಸ್ ಶುಲ್ಜ’ ರವರನ್ನು ಭೆಟ್ಟಿಯಾದರು.

'ಹಬೀಬಾ’ ಎಂಬಕಲಾವಿದೆಯನ್ನು ಪ್ರೀತಿಸಿ ಮದುವೆಯಾದರು[ಬದಲಾಯಿಸಿ]

'ಮರಿಯ ಮಿರಾಂಡರವರು, 'ಹಬೀಬಾ’ ಎಂಬ ಕಲಾವಿದೆಯನ್ನು ಪ್ರೀತಿಸಿ ಮದುವೆಯಾದರು. ಅವರಿಗೆ 'ರಾಹುಲ್', ಮತ್ತು 'ರಶೀದ್' ಮಕ್ಕಳು. ಹಿರಿಯ ಮಗ 'ರಾಹುಲ್', ಕೇಶಶೃಂಗಾರದಲ್ಲಿ ಪರಿಣಿತಿ ಪಡೆದ ಮಗ,ಅಮೆರಿಕನ್ ಹುಡುಗಿಯನ್ನು ಮದುವೆಯಾಗಿ, 'ನ್ಯೂಯಾರ್ಕ್ ನಗರ'ದಲ್ಲಿ ’ತಮ್ಮ ಸ್ವಂತ ಸೆಲೂನ್’ ಹೊಂದಿದ್ದಾರೆ. ಕೊನೆಯ ಮಗ, ರಶೀದ್ ಒಬ್ಬ 'ಉದಯೋನ್ಮುಖ ವ್ಯಂಗ್ಯ ಚಿತ್ರಕಾರ'ಕಲಾವಿದ. ರಿಶಾದ್ 'ಗೋವ'ದಲ್ಲೇ ನೆಲಸಿದ್ದಾರೆ. ಗೋವದ ಬಗ್ಗೆ ತಂದೆಯವರು ಬರೆದ ' Legends of Gao' ಲೇಖನಗಳಿಗೆ ಚಿತ್ರ ಸಹಾಯ ಒದಗಿಸಿದ್ದಾರೆ. ಪ್ರತಿಕಲಾಕಾರನೂ ತನ್ನದೇಅದ ವಿಶಿಷ್ಠ ಶೈಲಿಯನ್ನು ಹೊಂದಿರುವಂತೆ, 'ಮಿರಾಂಡರವರದೂ ಒಂದು ವಿಶಿಷ್ಠ ಶೈಲಿಯದಾಗಿದೆ. ಅವರ ಸುಂದರ ಚಿತ್ರಗಳು ಮರೆಯಲಾರದ ಅನುಭವವನ್ನು ಕೊಡುತ್ತವೆ.

  • ಮೀನುಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ತೊಡಗಿದವರು’,
  • ’ಬೀದಿನಾಯಿ’,
  • ’ಕರೆವೆಣ್ಣು’,
  • ’ಕ್ಯಾಬರೆ ನರ್ತಕಿ’,
  • ’ಸಂತೆಯಲ್ಲಿ ನೆರೆದವರು,
  • ’ಮೀನುಹಿಡಿಯುವ ಬೆಸ್ತರಹೆಣ್ಣು’,
  • ’ಬಾರ್ ನಲ್ಲಿ ಮೈಮರೆತವರು’,
  • ’ನೃತ್ಯದಲ್ಲಿ ತೊಡಗಿ ಮೈಮರೆತ ಜೋಡಿ’,
  • ’ತುಂಬು ನಿತಂಬಿನಿಯರು’,
  • ’ರಸ್ತೆಯ ಪಕ್ಕದಲ್ಲಿ ನಿಂತಿರುವ ಭಿಕ್ಷುಕ’, ’ವಿದೇಶಿ ಪ್ರವಾಸಿ,’
  • ’ಗಜಗಮನೆ’,
  • ’ಸಿಂಹಕಟಿಯ ಮಂದಗಮನೆ’,

ಈ ತರಹೆಯ ಚಿತ್ರಗಳನ್ನು ಅತ್ಯಂತ ಆಸ್ತೆಯಿಂದ ತಮ್ಮ ಗೆರೆಗಳಲ್ಲಿ ಇಳಿಸುವ ರೀತಿ ಅನನ್ಯ. ವ್ಯಂಗ್ಯಚಿತ್ರಗಳ ಮಾಂತ್ರಿಕ, ಆರ್. ಕೆ. ಲಕ್ಷ್ಮಣ್, 'ಬೊಂಬಾಯಿನ ಫುಟ್ಪಾತ್' ನ್ನು ಅದ್ಭುತವಾಗಿ ಚಿತ್ರಿಸುವಂತೆ ಬೇರೆ ಯಾರೂ ಚಿತ್ರಿಸಲಾರರು. ಕ್ಯಾರಿಕೇಚರ್ ಗಳಲ್ಲಿ ಒಂದುಬಗೆಯ ಉತ್ಪ್ರೇಕ್ಷೆಯನ್ನು ನಾವು ಅಲ್ಲಗಳೆಯುವಂತಿಲ್ಲ. ಇದೇ ವ್ಯಂಗ್ಯಚಿತ್ರಕಾರರನ್ನು ಬೇರೆ ಬೇರೆ ಕಲಾವಿದರಿಗೆ ವ್ಯತ್ಯಾಸವನ್ನು ಗುರುತಿಸುತ್ತದೆ. ಗೋವಾ ನಗರದ ಮಣ್ಣಿನ-ಮಗನಾದ 'ಮಿರಾಂಡ'ರವರಿಗೆ ಗೋವಾ, ಹಾಗೂ ಅಲ್ಲಿನ ಪರಿಸರ, ಜೀವನಶೈಲಿಗಳ ಬಗ್ಗೆ, ಎಲ್ಲಿಲ್ಲದ ಪ್ರೀತಿ.

  • ’ಲಾಫ್ ಇಟ್ ಆಫ್’(Laugh it Off),
  • ’ಗೋವಾ ವಿತ್ ಲವ್’(Goa with Love),
  • ’ಜರ್ಮನಿ ಇನ್ ವಿಂಟರ್ ಟೈಮ್’(Germany in Wintertime),
  • ’ಡಾಮ್ ಮೊರೆಸ್’ ರವರ, ’(A journey to Gao),'
  • ’ಮನೋಹರ್ ಮಾಲ್ ಗಾಂಕರ್’ ರವರ, ’(Inside Gao),’
  • ’ಮಾರಿಯೊ ಕಾಬ್ರಲ್’ ರ ’(Legend of Gao),’ ಪುಸ್ತಕಗಳಲ್ಲಿ ಸೇರಿಸಿರುವ ಚಿತ್ರಗಳಿಂದಾಗಿ, ಅದರ ಸೊಗಸು ಇಮ್ಮಡಿಸಿದೆ.

ಬೆಂಗಳೂರಿನಲ್ಲಿ ಆರಂಭವಾಗಿರುವ ಮಿರಾಂಡರವರ ವ್ಯಂಗ್ಯಚಿತ್ರ-ಪ್ರದರ್ಶನ-೨೦೦೯[ಬದಲಾಯಿಸಿ]

ಅಕ್ಟೋಬರ್, ೩, ೨೦೦೯ ರಂದು, 'All India Cartoonists's Association',ರವರ ಅಶ್ರಯದಿಂದ, 'ಮಿರಾಂಡಾರವರ ವ್ಯಂಗ್ಯಚಿತ್ರಪ್ರದರ್ಶನ' ಆರಂಭವಾಗಿದೆ, ಮುಗಿಯುವುದು, ಅಕ್ಟೋಬರ್, ೨೪ ಕ್ಕೆ. ಇವು ಕಲಾರಸಿಕರ ಆಸಕ್ತಿಯ ಅಭಿವ್ಯಕ್ತಿಯಾಗಿವೆ. ವ್ಯಂಗ್ಯ ಚಿತ್ರಕಾರರ ಸಂಸ್ಥೆಯ ವತಿಯಿಂದ ನಡೆಯುತ್ತವೆ. ಮಾರಿಯೊರವರ ’ಗ್ರೀಟಿಂಗ್ ಕಾರ್ಡ್ಸ್’ ನ ಪಾತ್ರ ಅತಿಮುಖ್ಯ. ಅವು ’ಬಿಸಿ-ಅಕ್ಕಿರೊಟ್ಟಿ’ಯಂತೆ ಮಾರಲ್ಪಡುತ್ತಿವೆ. ವ್ಯಂಗ್ಯಚಿತ್ರದ ಬಗೆಗೆ ಅಧ್ಯಯನ ನಡೆಸುವ ಆಸಕ್ತರಿಗೆ ಇಲ್ಲಿ ಸಿಗುವ ಗ್ರಾಸ, ಹೇರಳವಾಗಿದೆ.

ಮಾರಿಯೋ ರವರ ಕಲಾ-ಪ್ರದರ್ಶನಗಳು[ಬದಲಾಯಿಸಿ]

೧೯೯೯ ರಲ್ಲಿ ಮರಿಯೊರವರ ಚಿತ್ರರಚನೆಯ ಕಾರ್ಯವನ್ನು ಸೂಚಿಸುವ, "slide show" ಹೀಗೆ ವರ್ಣಿಸುತ್ತದೆ.(" Nobody is better equipped to capture vignettes of Goan life than Mario Miranda.") ಗೋವಾದ ಪರಿಸರ ಮತ್ತು ಅಲ್ಲಿನ ಜನಜೀವನ ಒಳನಾಡಿಗಳನ್ನು ತಟ್ಟುವ ಮತ್ತೊಬ್ಬ ಕಲಾವಿದ ಇರಲಿಕ್ಕಿಲ್ಲ. ಗೋವಾ ನಿವಾಸಿ ಪತ್ರಕರ್ತ ಮತ್ತು ಸಂಪಾದಕ, 'ಮನೋಹರ್ ಶೆಟ್ಟಿ'ಯವರು, ಮಾರಿಯೋರವರನ್ನು ಯಾವ ಪೂರ್ವಾಗ್ರಹಪೀಡಿತವಲ್ಲದ ನೈಜ-ಚಿತ್ರಣವಾಗಿವೆಯೆಂದು ಪ್ರಸಂಶಿಸಿದ್ದಾರೆ. ("his eye for detail, his skills as a draughts-man, and the total absence of malice). ತಮ್ಮ ಚಿಕ್ಕಂದಿನ ದಿನಗಳಲ್ಲಿ, ಶಾಲೆಯಲ್ಲಿ, ’ಕ್ಯಾಥೊಲಿಕ್ ಪ್ರೀಸ್ಟ್ ಗಳನ್ನು ಚಿತ್ರಿಸುತ್ತಿದ್ದರು.’ ಮೊದಲ ಚಿತ್ರಗಳು ಗೋವಾದ ಹಳ್ಳಿಯ ಪರಿಸರಗಳು.

’ಲಿಲಿಪುಟ್,’ ’ಪಂಚ್,’ ಮತ್ತು ’ಮ್ಯಾಡ್,’ ಪತ್ರಿಕೆಗಳಲ್ಲಿ ಅವರ ಚಿತ್ರಗಳು ಕಾಣಿಸಿಕೊಂಡವು[ಬದಲಾಯಿಸಿ]

೧ ವರ್ಷ ’ಪೋರ್ಚುಗಲ್’ ನಲ್ಲಿನ ವಾಸ ಅವರ ಕಲಾಪ್ರೌಢಿಮೆಯನ್ನು ಬಲಗೊಳಿಸಲು ಅನುಕೂಲವಾಯಿತು. ಇಂಗ್ಲೆಂಡ್ ನಲ್ಲಿ ಇದ್ದಷ್ಟು ಸಮಯ, ’ಟೆಲೆವಿಶನ್ ಆನಿಮೇಶನ್’, ಮತ್ತು ತಾವೇ ಸಿದ್ಧಪಡಿಸಿ ಪ್ರಸ್ತುತಮಾಡಿದ ’ಖಾಸಗಿ ಟೆಲೆವಿಶನ್ ಪ್ರದರ್ಶನಗಳು’ ಚಾಲನೆಯಲ್ಲಿದ್ದವು. ಅನೇಕ ಪ್ರತಿಷ್ಠಿತ ಪತ್ರಿಕೆಗಳಾದ, ’(ಲಿಲಿಪುಟ್),(ಒಂದುಬಾರಿ) 'ಪಂಚ್ನಲ್ಲಿ, (೨ ಬಾರಿ)ಅವು ಕಾಣಿಸಿಕೊಂಡವು. ಇದರಿಂದ ಅವರಿಗೆ ಹೆಚ್ಚು ಹಣ ಸಿಕ್ಕಿತು. ಯೂರೋಪ್ ನ ಹಲವು ಭಾಗಗಳಲ್ಲಿ ಸುತ್ತಲು ಅನುಕೂಲವಾಯಿತು. ಮತ್ತು ಇತರ ಸುಪ್ರಸಿದ್ಧ ವ್ಯಂಗ್ಯಚಿತ್ರಕಾರರನ್ನು ಸಂಧಿಸುವ, ಅವಕಾಶದೊರೆತು, ಸುಲಭವಾಗಿ ಎಲ್ಲರ ಕಣ್ಣಿಗೆ ಬಿದ್ದು ಪ್ರಸಿದ್ಧಿಪಡೆದರು. ತಮ್ಮ ಅಮೆರಿಕದ ಪ್ರವಾಸದ ಸಮಯದಲ್ಲಿ,’ಪೀನಟ್ಸ್ ವ್ಯಂಗ್ಯಚಿತ್ರಾಂಕಣದ ಜನಕ’ ಚಾರ್ಲ್ಸ್, ಮತ್ತು, 'ವಾಶಿಂಗ್ಟನ್ ಪೋಸ್ಟ್ ಪತ್ರಿಕೆ'ಯ ಸಂಪಾದಕೀಯ ವೃಂದದ ವ್ಯಂಗ್ಯಚಿತ್ರಕಾರ, ’ಹರ್ಬರ್ಟ್ ಬ್ಲಾಕ್’ ರವರ ಪರಿಚಯವಾಯಿತು. ೨೨ ದೇಶಗಳಲ್ಲಿ ತಮ್ಮ ಸೋಲೋ ಪ್ರದರ್ಶನಗಳನ್ನು ಕ್ರಮವಾಗಿ, ಅಮೆರಿಕ, ಜಪಾನ್, ಬ್ರೆಝಿಲ್, ಆಸ್ಟ್ರೇಲಿಯ, ಸಿಂಗಪುರ್, ಫ್ರಾನ್ಸ್ ಯುಗೋಸ್ಲಾವಿಯ, ಮತ್ತು ಪೋರ್ಚುಗಲ್ ದೇಶಗಳಲ್ಲಿ ನಡೆಸಿ, ಅನೇಕ ಹೊಸ-ಹೊಸ ಸಂಗತಿಗಳನ್ನು ಅರಿಯಲು ನೆರೆವಾಯಿತು. ವರ್ಣಚಿತ್ರ ರಚನೆಯನ್ನು ಅವರು ಕಲಿಯಲು ಸ್ವಲ್ಪ ತಡವಾಗಿ ಆರಂಭಿಸಿಯೂ, ಯಶಸ್ವಿಯಾದರು. ವ್ಯಂಗ್ಯ ಚಿತ್ರಗಳಲ್ಲದೆ,ಗೋವಾ ಮತ್ತಿತರ ನಗರಗಳಲ್ಲಿನ ಹಲವಾರು ಕಟ್ಟಡಗಳಲ್ಲಿ, ಒಳಭಾಗದಲ್ಲಿ, ಭಿತ್ತಿ-ಚಿತ್ರಗಳನ್ನೂ ರಚಿಸಿದ್ದಾರೆ.

ಶ್ಯಾಮ್ ಬೆನೆಗಲ್ ನಿರ್ದೇಶಿತ ’ತ್ರಿಕಾಲ್ ಚಲನಚಿತ್ರ’ದ ಚಿತ್ರೀಕರಣ, ಮಿರಾಂಡರವರ ಮನೆಯಲ್ಲಿ[ಬದಲಾಯಿಸಿ]

ಗೋವಾದ ಬಳಿಯ ಹಳ್ಳಿಯಲ್ಲಿನ (Loutolim)), ಅವರ ಮನೆಯನ್ನು ೧೯೮೫ ನಲ್ಲಿ 'ಶ್ಯಾಮ್ ಬೆನೆಗಲ್' ರು ನಿರ್ಮಿಸಿದ ’ತ್ರಿಕಾಲ್ ಚಿತ್ರ’ದಲ್ಲಿ ಚಿತ್ರೀಕರಿಸಲಾಗಿದೆ.

ಮಾರಿಯೋ ಗಳಿಸಿದ ಪ್ರಶಸ್ತಿಗಳು[ಬದಲಾಯಿಸಿ]

  • ಪದ್ಮಶ್ರಿ- ೧೯೮೮,
  • ಪದ್ಮ ಭೂಷಣ್- ೨೦೦೨
  • ಎ. ಐ. ಸಿ. ಎ. ಪ್ರಶಸ್ತಿ (All India Cartoonists's Association, Bangalore, honoured him with a lifetime achievement award)

ಪರ್ಯಟನೆ,ಮತ್ತು ಸಂಗೀತ ಅವರ ಅತಿ-ಪ್ರಿಯ ಆಸಕ್ತಿಗಳು[ಬದಲಾಯಿಸಿ]

ಅತಿ ಸುತ್ತುವ ಹವ್ಯಾಸ. ಸಂಗೀತ ಪ್ರಿಯರಾದ ಮರಿಯಾರವರು, ೨೨ ದೇಶಗಳಲ್ಲಿ ತಮ್ಮ ಸೋಲೋ ಪ್ರದರ್ಶನ, ಅಮೆರಿಕ, ಜಪಾನ್, ಬ್ರೆಝಿಲ್, ಆಸ್ಟ್ರೇಲಿಯ, ಸಿಂಗಪುರ್, ಫ್ರಾನ್ಸ್ ಯುಗೋಸ್ಲಾವಿಯ, ಮತ್ತು ಪೋರ್ಚುಗಲ್ ದೇಶಗಳಲ್ಲಿ ಏರ್ಪಡಿಸಿದ್ದರು. ವ್ಯಂಗ್ಯ ಚಿತ್ರಗಳಲ್ಲೆ, ಹಲವಾರು ಕಟ್ಟಡಗಳಲ್ಲಿ ಭಿತ್ತಿ ಚಿತ್ರಗಳನ್ನೂ ರಚಿಸಿದ್ದಾರೆ. ಗೋವಾ ಮತ್ತಿತರ ನಗರಗಳಲ್ಲಿ. ವರ್ಣಚಿತ್ರ ರಚನೆಯನ್ನು ಅವರು ಕಲಿಯಲು ಸ್ವಲ್ಪ ತಡವಾಗಿ ಆರಂಭಿಸಿ ಯಶಸ್ವಿಯಾದರು. ಅವರು ಬರೆದ ಪುಸ್ತಕಗಳು ಹಲವು. ಅವರೇ ಬರೆದ ಪುಸ್ತಕಗಳಲ್ಲದೆ, ಡಾಮ್ ಮೊರೆಸ್ ರವರ ಕೃತಿಗಳಿಗೆ ಚಿತ್ರರಚಿಸಿ ಕೊಟ್ಟಿದ್ದಾರೆ.

ನಿವೃತ್ತಿ[ಬದಲಾಯಿಸಿ]

'ಮಿರಾಂಡ'ರವರು ಹೆಸರಿಗೆ ನಿವೃತ್ತಿಯಾಗಿದ್ದಾರೆ. ಈಗಲೂ ತಮ್ಮ ೮೩ ವರ್ಷದ ಹರೆಯದಲ್ಲೂ, ಮೊದಲಿನಂತೆಯೇ ಸಕ್ರಿಯರಾಗಿದ್ದಾರೆ. ಮುಂಬೈನ ಹಲವಾರು ಪತ್ರಿಕೆಗಳಲ್ಲಿ ಅವರ ಕೆಲಸ ಕಾಣಬರುತ್ತದೆ. ಮಾರಿಷಸ್, ಸ್ಪೇನ್ ಮುಂತಾದ ದೇಶಗಳಿಗೆ ಹೋಗಲು ಆಹ್ವಾನ ಬಂದಿದೆ. ಸ್ಥಾನೀಯ ಸಂಪ್ರದಾಯಿಕ ಕಲೆಗಳನ್ನು. 'ಕಿರಿಯ ಮಗ ರಿಶದ್,' ಗೋವಾದಲ್ಲಿ ಅವರ ಜೊತೆ ’ಲೆಜೆಂಡ್ಸ್ ಆಫ್ ಗೋವಾ’ ಆವೃತ್ತಿಗೆ ಸಚಿತ್ರ-ಕೆಲಸದಲ್ಲಿ ನೆರವು ನೀಡಿದ್ದಾರೆ.

’ರೋನಾಲ್ಡ್ ವಿಲಿಯಮ್ ಫೊರ್ಡನ್ ಸರ್ಲ್,’ CBE, RDI; ಮಾರಿಯೋ ರವರ ಆರಾಧ್ಯದೈವವಾಗಿದ್ದರು[ಬದಲಾಯಿಸಿ]

ರೋನಾಲ್ಡ್ ವಿಲಿಯಮ್ ಫೊರ್ಡನ್ ಸರ್ಲ್,’CBE, RDI; (ಜನನ. ೩ ಮಾರ್ಚ್, ೧೯೨೦), ರವರು, 'ಮಿರಾಂಡ'ರವರ ಆದರ್ಶಗುರುಗಳಾಗಿದ್ದರು. (ಇಂಗ್ಲೆಂಡ್ ನ ಕೇಂಬ್ರಿಡ್ಜ್, ನಲ್ಲಿ ಜನಿಸಿದ ಒಬ್ಬ ಪ್ರಭಾವಶಾಲಿ, ಪ್ರತಿಭಾನ್ವಿತ-ವ್ಯಂಗ್ಯ ಚಿತ್ರಕಲಾವಿದ) ಅವರ ಕೃತಿಗಳು, 'ಸೇಂಟ್ ಟ್ರಿನಿಯನ್ಸ್ ಸ್ಕೂಲ್ ಮಾಲಿಕೆ', ಆ ಚಿತ್ರಗಳು ಹಲವಾರು ಪುಸ್ತಕಗಳಿಗೆ ಗ್ರಾಸವಾಗಿವೆ. ಮತ್ತು ಒಟ್ಟು ೭ ಪೂರ್ಣ ಚಲನಚಿತ್ರಗಳಿಗೆ ದಾರಿಯಾಗಿದೆ. ಅವರು ಮತ್ತು ’ಜಫ್ರಿ ವಿಲನ್ಸ್’ ಜೊತೆಗೂಡಿ ರಚಿಸಿದ, ’ಮೋಲ್ಸ್ ವರ್ತ್ ಟೆಟ್ರಾಲೊಜಿ’ ಎಂಬ ಮಹತ್ವದ ಕೃತಿಗೆ, ಸಹ-ಕರ್ತೃವಾಗಿ ಕೆಲಸಮಾಡಿದ್ದಾರೆ.

ನಿಧನ[ಬದಲಾಯಿಸಿ]

೮೫ ವರ್ಷ ಪ್ರಾಯದ ಮಿರಾಂಡರವರು ಸುಮಾರು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಗೋವಾ ನಿವಾಸಿಗಳಾಗಿದ್ದ ಮಿರಾಂಡರವರು ಡಿಸೆಂಬರ್, ೧೧ ನೆಯ ತಾರೀಖು ರವಿವಾರ, ೨೦೧೧ ರಂದು ಬೆಳಿಗೆ ನಿಧನರಾದರು. ಅವರು ತಮ್ಮ ಪ್ರೀತಿಯ ಪತ್ನಿ, ಮತ್ತು ಇಬ್ಬರು ಮಕ್ಕಳನ್ನು ಅಗಲಿ ತೆರಳಿದ್ದಾರೆ. ಮಾರಿಯೊ ಮಿರಾಂಡರವರ ಅಂತಿಮ ಆಶೆಯಂತೆ, ಸೋಮವಾರ, ೧೨ ನೆಯ ತಾರೀಖಿನ ಬೆಳಿಗೆ, ದಕ್ಷಿಣ ಮರ್ಗೋವದ 'ಪಾಜಿಫಾಂಡ್ ಹಿಂದು ಸ್ಮಶಾನ'ದಲ್ಲಿ ಅವರ ಚಿತೆಗೆ ಅಗ್ನಿ ಸ್ಪರ್ಷವನ್ನು ಕಿರಿಯ ಮಗ ರಿಶಾದ್ ನೆರವೇರಿಸಿದರು. ಪತ್ನಿ, ಹಬೀಬ, ಸೇರಿದಂತೆ, ಮುಖ್ಯಮಂತ್ರಿ, 'ದಿಗಂಬರ್ ಕಾಮತ್', ಪತ್ರಿಕಾಕರ್ತರು, ಪರಿವಾರದ ಸದಸ್ಯರು, ಹಾಗೂ ನೂರಾರು ಸ್ನೇಹಿತರು, ಹಾಜರಿದ್ದು ತಮ್ಮ ಅಂತಿಮ ಗೌರವವನ್ನು ಸೂಚಿಸಿದರು.