ಆರ್.ಕೆ.ಲಕ್ಷ್ಮಣ್
Wikipedia ಇಂದ
(ಅಕ್ಟೋಬರ್ ೧೦, ೧೯೨೪- )
ವಿಶೇಷವಾಗಿ, ಭಾರತದ 'ಖ್ಯಾತ ಆಂಗ್ಲಭಾಷಾ ವ್ಯಂಗ್ಯಚಿತ್ರಕಾರ' ರಲ್ಲೊಬ್ಬರು. ಆದರೆ, ಸಮರ್ಥ ಲೇಖಕರೂ ಹೌದು. ಅರ್ಧ ತೋಳಿನ ಅಂಗಿಯನ್ನು ಧರಿಸಿದ, ಕನ್ನಡಕವನ್ನು ಕುತ್ತಿಗೆಗೆ ನೇತುಹಾಕಿಕೊಂಡು ತಮ್ಮ ಸದಾ ಹುಡುಕುವ ಹದ್ದಿನ ಕಣ್ಣಿಗೆ ಕಪ್ಪುಕನ್ನಡಕ ಹಾಕುವ ಲಕ್ಷ್ಮಣ್, ಸಾಮಾನ್ಯರಿಗೆ ದಿಗ್ಭ್ರಮೆಹುಟ್ಟಿಸುವ ವ್ಯಕ್ತಿ.
[ಬದಲಾಯಿಸಿ] ಜನನ ಹಾಗೂ ಬಾಲ್ಯ
'ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ ಅಯ್ಯರ್' ಅವರು ಅಕ್ಟೋಬರ್ ೧೦, ೧೯೨೪ರಂದು ಮೈಸೂರಿನಲ್ಲಿ ಜನಿಸಿದರು. ಅವರ ತಂದೆಯವರು ತಮಿಳುನಾಡಿನ ಸೇಲಂನಿಂದ ಬಂದು ಮೈಸೂರಿನ ಮಹಾರಾಜಾ ಹೈಸ್ಕೂಲಿನಲ್ಲಿ ಮುಖ್ಯೋಪಾಧ್ಯರಾದರು. ಸುಪ್ರಸಿದ್ಧ ಕಾದಂಬರಿಕಾರ, ಆರ್. ಕೆ. ನಾರಾಯಣ್ ಇವರ ಅಣ್ಣಂದಿರು. ಆ ಕಾಲದಲ್ಲಿ ಶ್ರೀ ಎ.ಎನ್. ಮೂರ್ತಿರಾಯರೂ ಸ್ವಲ್ಪ ಕಾಲ ಕೃಷ್ಣಸ್ವಾಮಿ ಅಯ್ಯರ್ ರ ಕೈಕೆಳಗೆ ಕೆಲಸಮಾಡಿದ್ದರೆಂದು ರಾಯರು, ತಮ್ಮ ಲೇಖನವೊಂದರಲ್ಲಿ ನೆನೆಸಿಕೊಂಡಿದ್ದಾರೆ.
[ಬದಲಾಯಿಸಿ] ಸಾಮಾನ್ಯಓದುಗನಿಂದ ಹಿಡಿದು, ರಾಷ್ಟ್ರಪತಿಯವರೆಗೆ ಎಲ್ಲರಿಗೂ ಲಕ್ಷ್ಮಣ್ ವ್ಯಂಗ್ಯಚಿತ್ರಗಳು, ಬಹುಪ್ರಿಯ
ಲಕ್ಷೋಪಲಕ್ಷ ಓದುಗರನ್ನು ಹೊಟ್ಟೆಹುಣ್ಣಾಗುವಂತೆ ಸುಮಾರು ಅರ್ಧ ಶತಮಾನಕ್ಕೂ ಹೆಚ್ಚುಕಾಲ ನಗಿಸಿ ಮನರಂಜನೆ ಮಾಡಿದ ವಿಶಿಷ್ಟ ಚಿತ್ರಕಾರ , ಡಾ. ಆರ್.ಕೆ.ಲಕ್ಷ್ಮಣ್ ಮುಂಬೈ ನ ಒಬ್ಬ ಪ್ರಮುಖ ಮುಂಬೈಕರರು. ಅವರಿಗೆ ಸೆಪ್ಟೆಂಬರ್, ೨೦೦೩ ರಲ್ಲಿ ದೇಹದ ಎಡಭಾಗಕ್ಕೆ ಪಾರ್ಶ್ವ ವಾಯು ಹಿಡಿದಿದ್ದು, ಪುಣೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಪಡೆದು ಕ್ರಮೇಣ ಗುಣಮುಖರಾಗಿದ್ದಾರೆ. ಅವರನ್ನು ಸಂದರ್ಶಿಸಲು ರಾಷ್ಟ್ರಪತಿ ಡಾ.ಅಬ್ದುಲ್ ಕಲಾಮ್ ಮುಂಬೈ ನ ಲಕ್ಷ್ಮಣ್ ರ ಗೃಹಕ್ಕೆ ಭೇಟಿಮಾಡಿ 'ಹಸ್ತಾಕ್ಷರ' ಪಡೆದದ್ದು, ಪತ್ರಿಕೆಗಳ ಮೊದಲನೆ ಪುಟದ ಸುದ್ದಿಯಾಗಿತ್ತು !
[ಬದಲಾಯಿಸಿ] ವೃತ್ತಿಯಿಂದ ನಿವೃತ್ತಿಯನ್ನು ಕಾಣದ, ಸರ್ವರಿಗೂ ಮುದಕೊಡುವ ಚಿತ್ರಕಾರ, ಲಕ್ಷ್ಮಣ್
ಲಕ್ಷ್ಮಣ್ ನಿವೃತ್ತರಾಗಿ ಹಲವು ವರ್ಷಗಳೇ ಆದರೂ ಅದು ಹೆಸರಿಗೆ ಮಾತ್ರ. ಲಕ್ಷ್ಮಣ್ ಸಕ್ರಿಯವಾಗಿ ಪತ್ರಿಕೆಗೆ ಬೇಕಾದ ಪರಿಕರಗಳನ್ನೂ ಸಂಬಂಧಿಸಿದ ಕೆಲಸಗಳನ್ನೂ ಅವರ ಮನೆಯಿಂದಲೇ ಮಾಡಿ ಒದಗಿಸುತ್ತಿದ್ದಾರೆ. ಈಗ ಅವರು ಟೈಮ್ಸ್ ಆಫ್ ಇಂಡಿಯ ದೈನಿಕಕ್ಕೆ ಮೊದಲ ಪುಟದ ವ್ಯಂಗ್ಯಚಿತ್ರಾಂಕಣದಲ್ಲಿ ಬರೆಯುತ್ತಿಲ್ಲ. ಅಂದರೆ, ಅವರ ಮಾರ್ಗದರ್ಶನದಲ್ಲಿ ಯಾರೋಬರೆಯುತ್ತಿದ್ದಾರೆ. ಆದರೆ, ಪ್ರತಿರವಿವಾರದ ಪತ್ರಿಕೆಯಲ್ಲಿ 'ಪಾಸಿಂಗ್ ಥಾಟ್', ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಅದ್ಭುತಚಿತ್ರವನ್ನು ಇಂದೂ ನಾವು ಕಾಣಬಹುದು. ಲಕ್ಷ್ಮಣ್ ಅವರು ೫೬ ವರ್ಷ ಗಳಿಂದ ಟೈಮ್ಸ್ ಆಫ್ ಇಂಡಿಯ ದಿನ ಪತ್ರಿಕೆಯಲ್ಲಿ ಬರೆಯುತ್ತಿದ್ದ 'ಕಾಮನ್ ಮ್ಯಾನ್' ('ಸಾಮಾನ್ಯ ಪ್ರಜೆ'), ಅಥವ ಜನಸಾಮಾನ್ಯ, 'ವ್ಯಂಗ್ಯ ಚಿತ್ರಾಂಕಣ'ವನ್ನು ಓದಿ ಸವಿಯದವರಿಲ್ಲ. ಬೆಳಗ್ಯೆ ಎದ್ದು, ಕಾಫಿ ಕುಡಿಯುತ್ತಾ ಅದನ್ನು ಓದಿ ಸವಿಯುವುದು ಎಲ್ಲಾ ಮುಂಬೈಕರರ ದಿನಚರಿ ! ಇಂದಿಗೂ ಅಷ್ಟೆ. ಸುಮಾರು ೪೫ ವರ್ಷಗಳ ಕಾಲ ಕೆಲವರು 'ಟೈಮ್ಸ್ ಆಫ್ ಇಂಡಿಯ,' ಬಿಟ್ಟು ಬೇರೆ ದಿನ ಪತ್ರಿಕೆ ಕೊಳ್ಳದೆ ಇರುವುದಕ್ಕೆ ಕಾರಣ, ಅವರಿಗೆ ಲಕ್ಷ್ಮಣ್ ವ್ಯಂಗ್ಯಚಿತ್ರದ ಸವಿ, ಹತ್ತಿರುವುದು. ೧೯೫೧ ರಲ್ಲಿ ಲಕ್ಷ್ಮಣ್ ಪ್ರಾರಂಭಿಸಿದ 'ಕಾಮನ್ ಮ್ಯಾನ್' ಇವತ್ತಿನವರೆಗೂ ಇದ್ದು, ಅವರಿಗೆ ಪ್ರಚಂಡ ಖ್ಯಾತಿ ತಂದು ಕೊಟ್ಟಿದೆ. ಟೈಮ್ಸ್ ಪತ್ರಿಕೆಯಲ್ಲಿ ಇದನ್ನು ಓದಲೋಸುಗವೇ ಕೊಳ್ಳುವ ಸಾವಿರಾರು !
[ಬದಲಾಯಿಸಿ] ’ಕಾಮನ್ ಮ್ಯಾನ್” ಕಲ್ಪನೆ ಬಂದ ಬಗೆ :
'ಕಾಮನ್ ಮ್ಯಾನ್' ಉದಿಸಿದ ರೀತಿ ಬಹಳಷ್ಟು ಜನರಿಗೆ ತಿಳಿದಿರಲಿಕ್ಕಿಲ್ಲ. ಅದು ಆದದ್ದು ಹೀಗೆ ! ಅವರ ಆಪ್ತ ಟೈಪಿಸ್ಟ್, 'ಶ್ರೀ ಅಪ್ಪಾಜಿರಾಯ' ರ ಹಾವ -ಭಾವ ಗಳನ್ನು ಕಣ್ಣಿಟ್ಟು ಲಕ್ಷ್ಮಣ್ ಅವರಲ್ಲಿ ಏನೋ ವಿಶೇಷತೆಯನ್ನು ಕಂಡರು. ಅಪ್ಪಾಜಿರಾಯರು ಅವರಿಗೆ ಸ್ಪೂರ್ಥಿಯಾದರು. ತಕ್ಷಣವೇ ಅವರು ಹೇಳಬಯಸುತ್ತಿದ್ದ ಮಾತುಗಳನ್ನೆಲ್ಲಾ ತಮ್ಮ ಪುಟ್ಟ 'ವ್ಯಂಗ್ಯ ಚಿತ್ರಾಂಕಣ' ದಲ್ಲಿ ಹೇಳುತ್ತಾ ಬಂದರು. (ಅವೆಲ್ಲಾ ವಿಶ್ವದ ಒಳಿತು ಕೆಡಕುಗಳ ಇಣುಕು ನೋಟಗಳು-ಕಾಮನ್ ಮ್ಯಾನ್ ದೃಷ್ಟಿಕೋನದಿಂದ ) 'ಕಾಮನ್ ಮ್ಯಾನ್' ಉದ್ಭವಿಸಿದ್ದು ಹೀಗೆ. 'ಕಚ್ಚೆಪಂಚೆ', 'ಚೌಕಳಿ ಅಂಗಿ', 'ಪೊದೆ ಹುಬ್ಬು', 'ಚಪ್ಪಟೆ ಮೂಗು', 'ಪೊರಕೆ ಮೀಸೆ', 'ಹಳೆ ಕನ್ನಡಕ', 'ಚಪ್ಪಲಿ', ಆಗಾಗ ಕಾಲಮಾನಕ್ಕೆ ತಕ್ಕಂತೆ 'ಛತ್ರಿ', ಇತ್ಯಾದಿಗಳ ಬಳಕೆ. ಇವು ಅವನ ವೇಷ ಭೂಷಣಗಳು. ಬೆರಗು ಕಣ್ಣುಗಳನ್ನು ಅರಳಿಸಿ, ಅಂದಿನ ವಿದ್ಯಮಾನಗಳನ್ನು ದಿಟ್ಟಿಸಿ ನೋಡಿ, ಎಲ್ಲಾ ಅರ್ಥವಾದರೂ ತುಟಿ-ಪಿಟಿಕ್ಕೆನ್ನದೆ ಮುಖದ ಪ್ರತಿಕ್ರಿಯೆಯಿಂದಲೇ ಸಾವಿರಾರು ಸಾಲುಗಳನ್ನು ಹೇಳಿ ಹೊಟ್ಟೆತುಂಬ ನಗಿಸಲು, ಅನುವುಮಾಡಿಕೊಡುತ್ತಿರುವ ಅವನ ರೀತಿ -ಅನನ್ಯ !
[ಬದಲಾಯಿಸಿ] ದೇಶದ ಅಗುಹೋಗುಗಳನ್ನು ಹಾಸ್ಯದ ಮೆರುಗಿನಿಂದ ಕಾಣಿಸಿ, ಜನರನ್ನು ರಂಜಿಸುವ ಮೋಡಿ ಅನನ್ಯ
'ಕಾಮನ್ ಮ್ಯಾನ್' ನಮ್ಮ ಮಧ್ಯೆ ಜೀವಿಸುತ್ತಿರುವುದು 'ಚಿರಸತ್ಯ' ವಾದರೂ ಅದರ 'ಜನಕ' ನಗೆಯ ಹಿನ್ನೆಲೆಯಲ್ಲಿ ಅವರು ತೋರಿಸುತ್ತಿದ್ದ ವಿಡಂಬನೆಯ ಕಟು ಸತ್ಯಗಳನ್ನು ಲಕ್ಷಾಂತರ ಜನ ನೋಡಿ ಮನಗಂಡಿದ್ದಾರೆ. 'ಟೈಮ್ಸ್ ಆಫ್ ಇಂಡಿಯ ಪತ್ರಿಕೆ', ೨.೬ ಮಿಲಿಯನ್ ಪ್ರತಿಗಳ ಪ್ರಸಾರದಿಂದ ವಿಶ್ವದ ಅತ್ಯಂತ ಅಧಿಕ ಪ್ರಸಾರದ ಆಂಗ್ಲ ಭಾಷಾ ದೈನಿಕ ವೆಂದು ಪ್ರಸಿದ್ಧಿ ಪಡೆದಿದೆ. ಲಕ್ಷ್ಮಣ್ ಅದರ ಆಧಾರಸ್ಥಂಭಗಳಲ್ಲೊಬ್ಬರೆಂದು ಹಲವು ಅಭಿಮಾನಿಗಳ ಅಭಿಪ್ರಾಯ ! ಪತ್ರಿಕೋದ್ಯಮ ಕ್ಷೇತ್ರದಲ್ಲ್ಲಿ ಇಷ್ಟು ದೀರ್ಘ ಕಾಲ 'ಅನಭಿಶಕ್ತ ದೊರೆ'ಯಂತೆ ಮೆರೆದ ವ್ಯಕ್ತಿ ಇನ್ನೊಬ್ಬನಿಲ್ಲ ! ಬಿಳಿ ಬಣ್ಣದ ಅರ್ಧ ತೋಳಿನ ಅಂಗಿ, ಕಪ್ಪು ಫ್ರೇಮಿನ ದೊಡ್ಡ ಕನ್ನಡಕದ 'ದೈತ್ಯ ಪ್ರತಿಭೆ'ಯ ಲಕ್ಷ್ಮಣ್ ಅಬಿಮಾನಿಗಳ ಸಂಖ್ಯೆ ಅಸಂಖ್ಯ. ಇದು ವರೆವಿಗೂ ಕೈಗಡಿಯಾರ ಕಟ್ಟದ, ಎಂದೂ ದಿನಚರಿ ಬರೆಯುವ ಅಭ್ಯಾಸವಿಲ್ಲದ ಕ್ಯಾಲೆಂಡರ್ ನೋಡಿಯೇ ತಮ್ಮ ಚಟುವಟಿಕೆಗಳನ್ನು ನಿಯಂತ್ರಿಸದ, ಲಕ್ಷ್ಮಣ್ ಮೇಲ್ ನೋಟಕ್ಕೆ ಒಬ್ಬ 'ವಿಚಿತ್ರವ್ಯಕ್ತಿ' ಯಂತೆ ಕಂಡರೂ ಈ ಚಿತ್ರಕಲಾವಿದನಲ್ಲಿ ಮೇಳೈಸಿರಿವ ಮೇಧಾವಿ, ಚಿಂತಕ, ಮತ್ತು ಒಬ್ಬ ಸಮರ್ಥ ಲೇಖಕನನ್ನು ನಾವು ಕಾಣುತ್ತೇವೆ ! ಅವರ ಕ್ಷೇತ್ರದಲ್ಲಿ 'ದಿಗ್ಗಜ'ರಂತೆ ಮೆರೆದ ಹೆಗ್ಗಳಿಕೆ ಅವರದು. 'ಟೈಮ್' ಮ್ಯಾಗಜೈನ್,' ಅವರನ್ನು ದೇಷದ ಅತ್ಯಂತ 'ಪ್ರತಿಭಾನ್ವಿತ ವ್ಯಂಗ್ಯ ಚಿತ್ರಕಾರ' ಪ್ರಭಾವಿ ರಾಜಕೀಯ ವಿಡಂಬನಕಾರನೆಂದು ಗುರುತಿಸಿತು !ಪುಣೆಯ 'ಸಿಂಬಯೋಸಿಸ್' ವಿದ್ಯಾಸಂಸ್ಥೆಯ ಪ್ರವೇಶ ದ್ವಾರದಲ್ಲೇ ಲಕ್ಷ್ಮಣ್ ಸೃಷ್ಟಿಸಿದ 'ಕಾಮನ್ ಮ್ಯಾನ್ ವಿಗ್ರಹ', ಎಲ್ಲರ ಗಮನ ಸೆಳೆಯುತ್ತದೆ ! ಟೈಮ್ಸ್ ಆಫ್ ಇಂಡಿಯ ಪತ್ರಿಕೆ ತನ್ನ ೧೫೦ ವರ್ಷಗಳ ಹಬ್ಬವನ್ನು ಆಚರಿಸಿದ ಸಂಧರ್ಭದಲ್ಲಿ ಲಕ್ಷ್ಮಣ್ ಅಭಿಮಾನಿ, ಪ್ರಶಂಸಕ, ಸಂಸ್ಥೆಯ ನಿರ್ದೇಶಕರಾದ ಡಾ. ಎಸ್.ಬಿ.ಮುಜುಮ್ ದಾರ್, ೮ ಅಡಿ ಎತ್ತರದ ಕಂಚಿನ ಕಾಮನ್ ಮ್ಯಾನ್ ವಿಗ್ರಹವನ್ನು ಮಾಡಿಸಿ ತಮ್ಮ ಕಾಲೇಜಿನ ಪ್ರವೇಶ ದಲ್ಲಿಸ್ಥಾಪಿಸಿದರು. ಅದನ್ನು ಆಗಿನ ರಾಷ್ಟ್ರಪತಿ ಡಾ. ನಾರಾಯಣನ್ ಉಧ್ಘಾಟಿಸಿದ್ದರು !
[ಬದಲಾಯಿಸಿ] ಕನ್ನಡದ "ಕೊರವಂಜಿ ಹಾಸ್ಯಪತ್ರಿಕೆ ”ಯಿಂದ ಲಕ್ಷ್ಮಣರ ವ್ಯಂಗ್ಯಚಿತ್ರಜೀವನ ,ಶುರುವಾಗಿ, ದೇಶದಾದ್ಯಂತ ಪಸರಿಸಿತು
ರಾಸೀಪುರಂ ಕೃಷ್ಣಸ್ವಾಮಿ ಲಕ್ಷ್ಮಣ ಐಯ್ಯರ್ ರವರ,'ಕಾಮ್ಯಾಪೊಂಗಲ್' ಸವಿದವರಿಗೆ, ಹೊಸ ತಿಂಡಿತಿನಸುಗಳು ರುಚಿಸುವುದಕ್ಕೆ ಹಲವು ವರ್ಷಗಳೇ ಬೇಕಾಗಬಹುದು ! ಮೈಸೂರಿನ ಮಣ್ಣಿನಲ್ಲಿ ಜನ್ಮ ತಳೆದ ಲಕ್ಷ್ಮಣ್, ಕನ್ನಡದ 'ಕೊರವಂಜಿ' ಪತ್ರಿಕೆಗೆ ಚಿತ್ರಗಳನ್ನು ಬರೆದು ಮುಂದೆ ನಿರಂತ ದುಡಿಮೆಯಿಂದ ತಮ್ಮ ಕ್ಷೇತ್ರದಲ್ಲಿ 'ಸಂಸಿದ್ಧಿ 'ಪಡೆದರು. ಅವರ ಆರಾಧ್ಯದೇವತೆ, 'ಡೇವಿಡ್ ಲೋ' ಇಂಗ್ಲೆಂಡಿನಲ್ಲಿ ತೀರಿಕೊಂಡಾಗ ೧೯೬೩ ರಲ್ಲಿ ಲಕ್ಷ್ಮಣರ ರನ್ನು ಆ ಜಾಗಕ್ಕೆ ತರಬೇಕೆಂದು ಬಹಳ ಬೇಡಿಕೆಗಳು ಬಂದವು. ಆದರೆ ಲಕ್ಷ್ಮಣ್ ಅದಕ್ಕೆ ಮಣಿಯಲಿಲ್ಲ. ಭಾರತದಂತಹ ವೈವಿಧ್ಯಮಯ ದೇಶದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳೊದನೆ ಬೆಳೆಯುವ ನಿರ್ಧಾರ ಕೈಗೊಂಡರು. ಮೊದಲು ಅವರು ನೌಕರಿ ಹೂಡುಕಿಕೊಂಡು, ದೆಹಲಿಗೆ ಹೋದರು. ಅಲ್ಲಿ ’ಹಿಂದುಸ್ಥಾನ್ ಟೈಮ್ಸ್' ಪತ್ರಿಕೆಗೆ ಅರ್ಜಿ ಸಲ್ಲಿಸಿದರು. ಅವರ ರೇಖಾ ಚಿತ್ರಗಳು ಊಹಿಸಿದಷ್ಟು, ಒಳ್ಳೆಯ- ಪ್ರತಿಕ್ರಿಯೆ ಗಳಿಸಲಿಲ್ಲ. ಸ್ವಲ್ಪದಿನ ಸಣ್ಣಪತ್ರಿಕೆಗಳಲ್ಲಿ ಕೆಲಸಮಾಡಲು ಸಲಹೆ ಮಾಡಿದರು. ದಿಲ್ಲಿಯಿಂದ ಅವರು ಮುಂಬೈಗೆ ಬಂದರು. ಅಲ್ಲಿ 'ಫ್ರೀಪ್ರೆಸ್ ಜರ್ನಲ್ 'ನಲ್ಲಿ ದೊರೆತ ಕೆಲಸ ೬ ತಿಂಗಳು ಕೆಲಸಕ್ಕೆ ಬಂತು. ಒಂದು ದಿನ, ಹಾರ್ನ್ ಬಿ ರಸ್ತೆಯ ಹತ್ತಿರಲ್ಲೇ ಇದ್ದ, ಟೈ,ಮ್ಸ್ ಆಫ್ ಇಂಡಿಯ ಕಛೇರಿಗೆ ನೇರವಾಗಿ ನಡೆದರು. ಒಳಗೆ, ೩ ನೆ ಅಂತಸ್ತಿನಲ್ಲಿ, 'ಎಡಿಟರ್ ವಾಲ್ಟರ್ ಲಂಘಾಮರ್', ರವರ ಕ್ಯಾಬಿನ್ ಗೆ ಅವರನ್ನು ಕಳಿಸಲಾಯಿತು. ವಾಲ್ಟರ್ ಕಲೆಯ ನಿದೇಶಕರಾಗಿದ್ದರು. ಅವರಿಗೆ ಲಕ್ಷ್ಮಣ್ ರವರ ಚಿತ್ರಕಲೆಯ ಬಗ್ಗೆ ಸ್ವಲ್ಪ ತಿಳಿದಿತ್ತು. ತಕ್ಷಣ ಅವರಿಗೆ ನೌಕರಿ ಸಿಕ್ಕಿತು. ಕೆಲಸದ ಸಮಯ ಬೆಳಿಗ್ಯೆ ೮-೩೦ ರಿಂದ ಸಾಯಂಕಾಲ ೫ ರವರೆಗೆ ಕೆಲಸ. ಒಂದು ಕುರ್ಚಿ, ಟೇಬಲ್ , ಅದರ ಮೇಲೆ ಡ್ರಾಯಿಂಗ್ ಬೊರ್ಡ್, ಟಿ -ಸ್ಕ್ವೇರ್ ನಿಂದ ಶುರುವಾದ ಅವರ ಜೀವನ ೬ ದಶಕಗಳಕಾಲ ಎಡೆಬಿಡದೆ ನಡೆದು ಅವರು ತಮ್ಮ ಛಾಪನ್ನು ಉಳಿಸಿಕೊಂಡು ಬಂದಿದ್ದಾರೆ. ಅವರ ಸಮಯದಲ್ಲಿ ವಾರದಲ್ಲಿ ಒಂದು ದಿನ ಮಾತ್ರ ಚಿತ್ರಗಳಿಗೆ ಏಡೆಮಾಡಿ ಕೊಡಲಾಗುತ್ತಿತ್ತು. ಚಿತ್ರಗಳು ಮುಖ್ಯ ಪುಟಗಳಿಗೆ ಪೂರಕವಾಗಿ ಇರುತ್ತಿದ್ದವೇ ವಿನಃ , ಅವು ಬಹಳ ಸಮಯ, ಪ್ರಮುಖ ಮುಖಪುಟದ ವಸ್ತುವಾಗಿ ಮೆರೆಯಲು ಲಕ್ಷ್ಮಣ್ ಬಹಳ ಶ್ರಮಿಸಬೇಕಾಯಿತು. ಒಬ್ಬ ಚಿತ್ರ ಕಾರ '(ಅಸಮಾನ್ಯ)' ಇಷ್ಟು ಎತ್ತರಕ್ಕೆ ಏರಬಹುದೆಂದು ಕನಸಿನಲ್ಲೂ ಊಹಿಸುವುದು ಕಷ್ಟ ! ಅವರು ತಮ್ಮ ಸ್ವಸಾಮರ್ಥ್ಯದಿಂದ ವಿಶ್ವದ ಒಬ್ಬ ಜನಪ್ರಿಯ ವ್ಯಕ್ತಿಯಾಗಿ ಬೆಳೆದು ವಿಜೃಂಭಿಸಿದ್ದಾರೆ. ಲಕ್ಷ್ಮಣ್ ಸ್ಥಾನವನ್ನು ಲಕ್ಷ್ಮಣ್, ಮಾತ್ರ ತುಂಬಲು ಸಾಧ್ಯ ! ಲಕ್ಷ್ಮಣ್, ಒಬ್ಬ 'ಪ್ರಭಾವಿಬರಹಗಾರ' ರೂ ಹೌದು.
[ಬದಲಾಯಿಸಿ] ಆರ್. ಕೆ. ಲಕ್ಷ್ಮಣ್ ರ ವ್ಯಂಗ್ಯ ಚಿತ್ರದ ಸಹಿತ ಪ್ರಕಟಿತ ಪುಸ್ತಕಗಳು
- ೧. 'ದ ಟನಲ್ ಆಫ್ ಟೈಮ್'- ಏಪ್ರಿಲ್ ೧೯೯೯.
- ೨. ಸರ್ ವೆಂಟ್ಸ್ ಆಫ್ ಇಂಡಿಯ'-ಏಪ್ರಿಲ್ ೨೦೦೨.
- ೩. ದ ಮೆಸೆಂಜರ್
- ೪. ಹೋಟೆಲ್ ರೆವ್ಯೇರಾ
- ೫. ದ ಬೆಸ್ಟ್ ಆಫ್ ಲಕ್ಷ್ಮಣ್, ಸೀರಿಸ್
- ೬. ೫೦ ಇಯರ್ಸ್ ಆಫ್ ಇಂಡಿಯ, ಥ್ರು ದ ಅಯಿಸ್ ಆಫ್, ಆರ್.ಕೆ.ಲಕ್ಷ್ಮಣ್
- ೭. ದ 'ಎಲಾಕ್ ವೆಂಟ್ ಬ್ರಷ್', ಎ ಸೆಟ್ ಆಫ್ ಕಾರ್ಟೂನ್ಸ್, ಫ್ರಂ ನೆಹರೂ ಟು- ರಾಜೀವ್.
- ೮. 'ಡಿಸ್ಟಾರ್ಟೆಡ್ ಮಿರರ್' - ಮಾರ್ಚ್ ೨೦೦೪
- ೯. 'ಬ್ರ ಷಿಂಗ್ ಆಫ್ ದ ಇಯರ್ಸ್', ೧೯೪೭-೨೦೦೪, (ನವೆಂಬರ್, ೨೦೦೫)
[ಬದಲಾಯಿಸಿ] ’ಕಾಗೆ”, ಅವರಿಗೆ ಸ್ಪೂರ್ತಿ ಕೊಟ್ಟ, ಅಚ್ಚು-ಮೆಚ್ಚಿನ ಪಕ್ಷಿ
ಲಕ್ಷ್ಮಣ್, ಬಹಳ 'ಸಿದ್ಧಿ' ಪಡೆದ ಚಿತ್ರ ಕಲಾವಿದರು. ಅವರ ಕುಂಚ ದಿಂದ ಹೊರ ಮೂಡಿದ ಕಪ್ಪು ಬಿಳುಪು, ಮತ್ತು ವರ್ಣರಂಜಿತ ಚಿತ್ರಗಳು, ಮುಂಬೈ ನ ಪ್ರತಿಷ್ಟಿತ 'ಜೆಹಾಂಗೀರ್ ಆರ್ಟ್ಸ್ ಗ್ಯಾಲೊರಿ' ಯಲ್ಲಿ ಹಲವುಬಾರಿ ಪ್ರದರ್ಷಿಸಲ್ಪಟ್ಟಿವೆ. ಲಕ್ಷ್ಮಣ್ ರಿಗೆ 'ಕಾಗೆ' ಬಹಳ ಅಚ್ಚು ಮೆಚ್ಚಿನ ಪಕ್ಷಿ ! ಯಾವಾಗಲೂ ಅದು ಅವರ ಪ್ರದರ್ಶನದ ಪ್ರುಮುಖ ಆಕರ್ಷಣೆಯ ಕೇಂದ್ರವಾಗಿರುತ್ತಿತ್ತು. ಆರ್.ಕೆ. ಲಕ್ಷ್ಮಣರನ್ನು ಅರಸಿ ಬಂದ ಪ್ರಷಸ್ತಿಗಳು ಹಲವು.
[ಬದಲಾಯಿಸಿ] ಲಕ್ಷ್ಮಣ್ ರವರಿಗೆ ದೊರೆತ, 'ಗೌರವ ಡಾಕ್ಟೊರೇಟ್ ' ಗಳು ಹಾಗೂ ಪ್ರಶಸ್ತಿಗಳು
- ೧. 'ಬಿ.ಡಿ.ಗೊಯೆಂಕ ಅವಾರ್ಡ್,' -ಇಂಡಿಯನ್ ಎಕ್ಸ್ ಪ್ರೆಸ್.
- ೨. ದುರ್ಗಾರತನ್ ಗೋಲ್ಡ್ ಮೆಡಲ್, -ಹಿಂದೂಸ್ತಾನ್ ಟೈಮ್ಸ್.
- ೩. 'ಪದ್ಮ ಭೂಷಣ' , 'ಪದ್ಮ ವಿಭೂಷಣ' - ಭಾರತ ಸರ್ಕಾರ.
- ೪. 'ರೇಮನ್ ಮ್ಯಾಗ್ ಸೆ ಸೆ ಅವಾರ್ಡ್', 'ಶ್ರೇಷ್ಟ ಪತ್ರಿಕೋದ್ಯಮ, ಸಾಹಿತ್ಯ, ಕಲೆ ಅಭಿವ್ಯಕ್ತಿ' ಗಾಗಿ (೧೯೮೪ ರಲ್ಲಿ)
- ೫. ಮಹಾರಾಷ್ಟ್ರದ ಮರಾಠವಾಡ ವಿಶ್ವ ವಿದ್ಯಾಲಯ, ಮತ್ತು ದೆಹಲಿ ವಿಶ್ವವಿದ್ಯಾಲಯಗಳ, 'ಗೌರವ ಡಾಕ್ಟರೇಟ್ ' ಗಳು.
- ೬. ಕರ್ಣಾಟಕ ಸರ್ಕಾರ, ಶ್ರೀ. ಜಿ.ಎಸ್.ಎಸ್, ಹಾಗೂ ಲಕ್ಷ್ಮಣ್ ರವರಿಗೆ 'ಗೌರವ ಡಾಕ್ಟರೇಟ್' ನೀಡಿ, ಸನ್ಮಾನಿಸಿದೆ..