ವಿ. ಕೆ. ಆರ್. ವಿ ರಾವ್
ವಿಕಿಪೀಡಿಯ ಇಂದ
ಪ್ರೊಫೆಸರ್ ವಿ. ಕೆ. ಆರ್. ವಿ ರಾವ್(ವಿಜೇಂದ್ರ ಕಸ್ತೂರಿ ರಂಗ ವರದರಾಜ್ ರಾವ್)(೧೯೦೮-೧೯೯೧) ಇವರು ಭಾರತದ ಪ್ರಮುಖ ಅರ್ಥಶಾಸ್ತ್ರಜ್ಞರು, ರಾಜಕಾರಣಿಗಳು, ಶಿಕ್ಷಣತಜ್ಞರು ಆಗಿದ್ದರು. ೧೯೬೭ ಮತ್ತು ೧೯೭೧ರಲ್ಲಿ ಇವರು ಬಳ್ಳಾರಿಯಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಇವರು ೧೯೭೧ರಲ್ಲಿ ಭಾರತ ಸರಕಾರದ ಶಿಕ್ಷಣ ಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿಯನ್ನು ಪಡೆದಿದ್ದರು. ಇವರು ದೆಹಲಿ ಸ್ಕೂಲ್ ಆಫ್ ಎಕಾನಾಮಿಕ್ಸ್ ಇದರ 'ಸಂಸ್ಥಾಪಕ ನಿರ್ದೇಶಕ'ರಾಗಿ ಶ್ಲಾಘನೀಯ ಸೇವೆ ಸಲ್ಲಿಸಿದ್ದರು.