ವಿಶಿಷ್ಟ ಸೇವಾ ಪದಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು



ವಿಶಿಷ್ಟ ಸೇವಾ ಪದಕ ಭಾರತೀಯ ರಕ್ಷಣಾ ದಳದಲ್ಲಿ ಕೊಡಲಾಗುವ ಪದಕ. ರಕ್ಷಣಾ ದಳದ ಎಲ್ಲ ಹಂತದವರಿಗೂ ಅಸಾಮಾನ್ಯವಾದ ವಿಶಿಷ್ಟ ಸೇವೆಗೆ ಕೊಡಲಾಗುತ್ತದೆ.

ಐದು ಮೂಲೆಗಳಿರುವ ನಕ್ಷತ್ರ ಹೊಂದಿರುವ ಪದಕ ಮತ್ತು ಮಧ್ಯದಲ್ಲಿ ನೀಲಿ ಗೆರೆಯನ್ನು ಹೊಂದಿರುವ ನಾಲ್ಕು ಹಳದಿ ಪಟ್ಟಿಯನ್ನು ಹೊಂದಿರುತ್ತದೆ. ಇದನ್ನು ಎಲ್ಲ ರೀತಿಯ ಸೇವೆಗಳಿಗೂ ನೀಡಬಹುದಾದರೂ, ೧೯೮೦ರಲ್ಲಿ ಯುದ್ಧ ಸೇವಾ ಪದಕವನ್ನು ಸ್ಥಾಪಿಸಿದ ನಂತರ ಇದನ್ನು ಹೆಚ್ಚಾಗಿ ಯುದ್ಧೇತರವಾಗಿ ನೀಡಿರುವ ಸೇವೆಗಾಗಿ ಮಾತ್ರ ನೀಡಲಾಗುತ್ತಿದೆ.