ಖುಷ್ವಂತ್ ಸಿಂಗ್
ವಿಕಿಪೀಡಿಯ ಇಂದ
| ಖುಷ್ವಂತ್ ಸಿಂಗ್ | |
|---|---|
| ಜನನ | ಖುಷ್ವಂತ್ ಸಿಂಗ್ ಟೆಂಪ್ಲೇಟು:ಹುಟ್ಟಿದ ತಾರೀಖು ಹಾಗೂ ವಯಸ್ಸು |
| ಕಸುಬು | ಪತ್ರಕರ್ತ, ಲೇಖಕ |
| ಧಾರ್ಮಿಕ ನಂಬಿಕೆಗಳು | ಆಙ್ನೇಯವಾದಿ |
ಖುಷ್ವಂತ್ ಸಿಂಗ್ (ಪಂಜಾಬಿ:ਖ਼ੁਸ਼ਵੰਤ ਸਿੰਘ ಜನನ:ಫೆಬ್ರವರಿ ೨,೧೯೧೫) ಸ್ವತಂತ್ರ ಭಾರತದ ಅಗ್ರಗಣ್ಯ ಸಾಹಿತಿ ಹಾಗೂ ಪತ್ರಕರ್ತರಾಗಿದ್ದಾರೆ. ಪಂಜಾಬ್ನ ಹದಲಿ ಗ್ರಾಮ(ಈಗ ಪಾಕಿಸ್ತಾನದಲ್ಲಿದೆ)ದಲ್ಲಿ ಜನಿಸಿದ 'ಖುಷ್ವಂತ್ ಸಿಂಗ್', ಭಾರತದ ಬಹುತೇಕ ಪ್ರಮುಖ ಪತ್ರಿಕೆಗಳಲ್ಲಿ ಕೆಲಸ ಮಾಡಿದವರಾಗಿದ್ದಾರೆ. ಸತ್ಯ, ಸಾಮಾಜಿಕ ಕಳಕಳಿ, ಮೊನಚಾದ ಹಾಸ್ಯ, ಜೀವನಪ್ರೀತಿ ಮತ್ತು ಕಾಮ-ಇವೇ ಮುಂತಾದ ರೂಪಗಳನ್ನು ಅವರ ಬಹುತೇಕ ಬರಹಗಳಲ್ಲಿ ಕಾಣಬಹುದಾಗಿದೆ. ಇದಲ್ಲದೆ, ಭಾರತದ ಜನಪ್ರಿಯ ಹಾಗೂ, ಅತಿ ಹೆಚ್ಚು ಪ್ರಸಾರದ 'ಟೈಮ್ಸ್ ಆಫ್ ಇಂಡಿಯ' ಪತ್ರಿಕೆಯ ವಾರ ಪತ್ರಿಕೆ, 'ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ' ವಾರಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕೆಲಸಮಾಡಿದ್ದಾರೆ.
ಖುಷ್ವಂತ್ ಸಿಂಗ್ ಬರೆದ ಸುಪ್ರಸಿದ್ದ ಪುಸ್ತಕಗಳು [ಬದಲಾಯಿಸಿ]
- 'ಟ್ರೇನ್ ಟು ಪಾಕಿಸ್ತಾನ್',
- 'ದಿಲ್ಲಿ',
- 'ದಿ ಕಂಪೆನಿ ಆಫ್ ವುಮೆನ್'
ಪುರಸ್ಕಾರಗಳು [ಬದಲಾಯಿಸಿ]
- ಭಾರತ ಸರ್ಕಾರದ ಪದ್ಮಭೂಷಣ (೧೯೭೪ರಲ್ಲಿ)
- ಸುಲಭ್ ಇಂಟರ್ ನ್ಯಾಶನಲ್ ದಿಂದ 'ವರ್ಷದ ಪ್ರಾಮಾಣಿಕ ವ್ಯಕ್ತಿ' (೧೯೯೮ರಲ್ಲಿ)
- ಪಂಜಾಬ್ ಸರ್ಕಾರದ ಪಂಜಾಬ್ ರತ್ನ (೨೦೦೬ರಲ್ಲಿ)
- ಭಾರತ ಸರ್ಕಾರದ ಪದ್ಮ ವಿಭೂಷಣ (೨೦೦೭ರಲ್ಲಿ)
